Sunday, 27 September 2026

ನಿನಗೆ ಸಾಟಿ ಏನಿದೆ, ನನ್ನನ್ನೇ ನಾನು ಕೊಟ್ಟಿಹೆ…!

ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. 

ಚಿತ್ರ:  ಜಾನ್‌ವರ್ (1965)
ಸಾಹಿತ್ಯ: ಹಸರತ್ ಜೈಪುರಿ
ಸಂಗೀತ: ಶಂಕರ್ ಜೈಕಿಷನ್
ಗಾಯನ: ಮಹಮದ್ ರಫಿ
ಚಿತ್ರಿಕೆಯಲ್ಲಿ: ರಾಜಶ್ರೀ, ಶಮ್ಮಿ ಕಪೂರ್
ಮೂಲ ಚಿತ್ರಿಕೆ (Video) 

ಕನ್ನಡ ಭಾವಾನುವಾದ
ಹಿಂದಿ ಮೂಲ



ಓ! ನಿನಗೆ ಸಾಟಿ ಏನಿದೆ
ಓ ತುಮ್‌ಸೇ ಅಚ್ಛಾ ಕೌನ್ ಹೈ
ನನ್ನನ್ನೇ ನಾನು ಕೊಟ್ಟಿಹೆ…!
ದಿಲ್ ಲೋ, ಜಿಗರ್ ಲೋ, ಜಾನ್ ಲೋ
ನಾನು ನಿನ್ನವನೆಂದಿಗೂ
ಹಮ್ ತುಮ್ಹಾರೇ ಹೈ ಸನಮ್
ನನ್ನ ಹಂಬಲವರಿತುಕೋ
ತುಮ್ ಹಮೇ ಪಹಚಾನ್ ಲೋ
ಓ! ನಿನಗೆ ಸಾಟಿ ಏನಿದೆ
ಓ ತುಮ್‌ಸೇ ಅಚ್ಛಾ ಕೌನ್ ಹೈ
ನನ್ನನ್ನೇ ನಾನು ಕೊಟ್ಟಿಹೆ…!
ದಿಲ್ ಲೋ, ಜಿಗರ್ ಲೋ, ಜಾನ್ ಲೋ
ನಾನು ನಿನ್ನವನೆಂದಿಗೂ
ಹಮ್ ತುಮ್ಹಾರೇ ಹೈ ಸನಮ್
ನನ್ನ ಹಂಬಲವರಿತುಕೋ
ತುಮ್ ಹಮೇ ಪಹಚಾನ್ ಲೋ



ನಾ ತಂಗಾಳಿಯ ತುಂಟ ಅಲೆಯು
ಮೈಂ ಹೂಂ ವೋ ಝೋಂಕಾ ಮಸ್ತ್ ಹವಾ ಕಾ
ನಿನ್ನ ಮುತ್ತಿ ಸುಳಿಯುತಿರುವೆ
ಸಂಗ್ ತುಮ್ಹಾರೇ ಚಲತಾ ರಹೂಂಗಾ
ನಿನ್ನ ಪ್ರೇಮಕೆ ಸಿಲುಕಿದಂದಲೇ
ಜಬ್ ಸೇ ಹುಯೀ ಹೈ ತುಮ್ ಸೇ ಮೋಹಬ್ಬತ್
ನಿನ್ನ ಬಳಿಯೇ ನಲಿಯುತಿರುವೆ
ಮಿಲ್‌ತಾ ರಹಾ ಹೂಂ ಮಿಲ್‌ತಾ ರಹೂಂಗಾ
ನಾ ತಂಗಾಳಿಯ ತುಂಟ ಅಲೆಯು
ಮೈಂ ಹೂಂ ವೋ ಝೋಂಕಾ ಮಸ್ತ್ ಹವಾ ಕಾ
ನಿನ್ನ ಮುತ್ತಿ ಸುಳಿಯುತಿರುವೆ
ಸಂಗ್ ತುಮ್ಹಾರೇ ಚಲತಾ ರಹೂಂಗಾ
ನಿನ್ನ ಪ್ರೇಮಕೆ ಸಿಲುಕಿದಂದಲೇ
ಜಬ್ ಸೇ ಹುಯೀ ಹೈ ತುಮ್ ಸೇ ಮೋಹಬ್ಬತ್
ನಿನ್ನ ಬಳಿಯೇ ನಲಿಯುತಿರುವೆ
ಮಿಲ್‌ತಾ ರಹಾ ಹೂಂ ಮಿಲ್‌ತಾ ರಹೂಂಗಾ
ಓ! ನಿನಗೆ ಸಾಟಿ ಏನಿದೆ
ಓ ತುಮ್‌ಸೇ ಅಚ್ಛಾ ಕೌನ್ ಹೈ
ನನ್ನನ್ನೇ ನಾನು ಕೊಟ್ಟಿಹೆ…!
ದಿಲ್ ಲೋ, ಜಿಗರ್ ಲೋ, ಜಾನ್ ಲೋ
ನಾನು ನಿನ್ನವನೆಂದಿಗೂ
ಹಮ್ ತುಮ್ಹಾರೇ ಹೈ ಸನಮ್
ನನ್ನ ಹಂಬಲವರಿತುಕೋ
ತುಮ್ ಹಮೇ ಪಹಚಾನ್ ಲೋ
ಓ! ನಿನಗೆ ಸಾಟಿ ಏನಿದೆ
ಓ ತುಮ್‌ಸೇ ಅಚ್ಛಾ ಕೌನ್ ಹೈ
ನನ್ನನ್ನೇ ನಾನು ಕೊಟ್ಟಿಹೆ…!
ದಿಲ್ ಲೋ, ಜಿಗರ್ ಲೋ, ಜಾನ್ ಲೋ
ನಾನು ನಿನ್ನವನೆಂದಿಗೂ
ಹಮ್ ತುಮ್ಹಾರೇ ಹೈ ಸನಮ್
ನನ್ನ ಹಂಬಲವರಿತುಕೋ
ತುಮ್ ಹಮೇ ಪಹಚಾನ್ ಲೋ



ಎದೆಯಲಿ ಗೂಡು, ಗೂಡಲಿ ನೀನು,
ಸೀನೇ ಮೇಂ ದಿಲ್ ಹೈ, ದಿಲ್ ಮೇಂ ತುಮ್‌ಹೀ ಹೋ
ನಿನ್ನಲ್ಲಿ ಎನ್ನಯ ಪುಟ್ಟಜೀವ
ತುಮ್ ಮೇಂ ಹಮಾರೀ ಛೋಟೀಸೀ ಜಾನ್ ಹೈ
ನಿನ್ನ ಸೌಖ್ಯವೇ ನನ್ನ ಭಾಗ್ಯ
ತುಮ್ ಹೋ ಸಲಾಮತ್, ಹಮ್ ಕೋ ನಹೀಂ ಗ಼ಮ್
ನಿನ್ನ ಉಸಿರೇ, ನನ್ನ ಪಸುರು
ತುಮ್ ಸೇ ಹಮಾರೀ ದುನಿಯಾ ಜವಾಂ ಹೈ
ಎದೆಯಲಿ ಗೂಡು, ಗೂಡಲಿ ನೀನು,
ಸೀನೇ ಮೇಂ ದಿಲ್ ಹೈ, ದಿಲ್ ಮೇಂ ತುಮ್‌ಹೀ ಹೋ
ನಿನ್ನಲ್ಲಿ ಎನ್ನಯ ಪುಟ್ಟಜೀವ
ತುಮ್ ಮೇಂ ಹಮಾರೀ ಛೋಟೀಸೀ ಜಾನ್ ಹೈ
ನಿನ್ನ ಸೌಖ್ಯವೇ ನನ್ನ ಭಾಗ್ಯ
ತುಮ್ ಹೋ ಸಲಾಮತ್, ಹಮ್ ಕೋ ನಹೀಂ ಗ಼ಮ್
ನಿನ್ನ ಉಸಿರೇ, ನನ್ನ ಪಸುರು
ತುಮ್ ಸೇ ಹಮಾರೀ ದುನಿಯಾ ಜವಾಂ ಹೈ
ಓ! ನಿನಗೆ ಸಾಟಿ ಏನಿದೆ
ಓ ತುಮ್‌ಸೇ ಅಚ್ಛಾ ಕೌನ್ ಹೈ
ನನ್ನನ್ನೇ ನಾನು ಕೊಟ್ಟಿಹೆ…!
ದಿಲ್ ಲೋ, ಜಿಗರ್ ಲೋ, ಜಾನ್ ಲೋ
ನಾನು ನಿನ್ನವನೆಂದಿಗೂ
ಹಮ್ ತುಮ್ಹಾರೇ ಹೈ ಸನಮ್
ನನ್ನ ಹಂಬಲವರಿತುಕೋ
ತುಮ್ ಹಮೇ ಪಹಚಾನ್ ಲೋ
ಓ! ನಿನಗೆ ಸಾಟಿ ಏನಿದೆ
ಓ ತುಮ್‌ಸೇ ಅಚ್ಛಾ ಕೌನ್ ಹೈ
ನನ್ನನ್ನೇ ನಾನು ಕೊಟ್ಟಿಹೆ…!
ದಿಲ್ ಲೋ, ಜಿಗರ್ ಲೋ, ಜಾನ್ ಲೋ
ನಾನು ನಿನ್ನವನೆಂದಿಗೂ
ಹಮ್ ತುಮ್ಹಾರೇ ಹೈ ಸನಮ್
ನನ್ನ ಹಂಬಲವರಿತುಕೋ
ತುಮ್ ಹಮೇ ಪಹಚಾನ್ ಲೋ



ಬದುಕಿನಾಚೆಗೂ ನಡೆದು ನೋಡಿದೆ
ಮರ್ ಕೇ ಭೀ ದೇಖಾ, ಮರ್ ನಾ ಸಕೇ ಹಮ್
ನಿನ್ನ ಒಲವೇ ಉಳಿಸಿತೆನ್ನ
ದಿಲ್ ಕೀ ಲಗೀ ನೇ ಹಮ್‌ಕೋ ಬಚಾಯಾ
ನಿನ್ನ ನೋಟದ ಮಾಯೆಯೇನೋ
ತೇರೀ ನಜ಼ರ್ ಕಾ ಜಾದೂ ಹೈ ಶಾಯದ್
ಬಾಳಿನೆಡೆಗೆ ಸೆಳೆದಿತೆನ್ನ
ಜಿಸ್‌ನೇ ಹಮೇ ಫಿರ್ ಜಿಂದಾ ಬನಾಯಾ
ಬದುಕಿನಾಚೆಗೂ ನಡೆದು ನೋಡಿದೆ
ಮರ್ ಕೇ ಭೀ ದೇಖಾ, ಮರ್ ನಾ ಸಕೇ ಹಮ್
ನಿನ್ನ ಒಲವೇ ಉಳಿಸಿತೆನ್ನ
ದಿಲ್ ಕೀ ಲಗೀ ನೇ ಹಮ್‌ಕೋ ಬಚಾಯಾ
ನಿನ್ನ ನೋಟದ ಮಾಯೆಯೇನೋ
ತೇರೀ ನಜ಼ರ್ ಕಾ ಜಾದೂ ಹೈ ಶಾಯದ್
ಬಾಳಿನೆಡೆಗೆ ಸೆಳೆದಿತೆನ್ನ
ಜಿಸ್‌ನೇ ಹಮೇ ಫಿರ್ ಜಿಂದಾ ಬನಾಯಾ
ಓ! ನಿನಗೆ ಸಾಟಿ ಏನಿದೆ
ಓ ತುಮ್‌ಸೇ ಅಚ್ಛಾ ಕೌನ್ ಹೈ
ನನ್ನನ್ನೇ ನಾನು ಕೊಟ್ಟಿಹೆ…!
ದಿಲ್ ಲೋ, ಜಿಗರ್ ಲೋ, ಜಾನ್ ಲೋ
ನಾನು ನಿನ್ನವನೆಂದಿಗೂ
ಹಮ್ ತುಮ್ಹಾರೇ ಹೈ ಸನಮ್
ನನ್ನ ಹಂಬಲವರಿತುಕೋ
ತುಮ್ ಹಮೇ ಪಹಚಾನ್ ಲೋ
ಓ! ನಿನಗೆ ಸಾಟಿ ಏನಿದೆ
ಓ ತುಮ್‌ಸೇ ಅಚ್ಛಾ ಕೌನ್ ಹೈ
ನನ್ನನ್ನೇ ನಾನು ಕೊಟ್ಟಿಹೆ…!
ದಿಲ್ ಲೋ, ಜಿಗರ್ ಲೋ, ಜಾನ್ ಲೋ
ನಾನು ನಿನ್ನವನೆಂದಿಗೂ
ಹಮ್ ತುಮ್ಹಾರೇ ಹೈ ಸನಮ್
ನನ್ನ ಹಂಬಲವರಿತುಕೋ
ತುಮ್ ಹಮೇ ಪಹಚಾನ್ ಲೋ

 

Sunday, 22 October 2023

ಪೊಱೆಯೆನ್ನ ನೀನೆಂದು ಪೊಡಮಡುವೆನು (ಭಾವಾನುವಾದ)

 ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. 

ಚಿತ್ರ:  ಆಯೀ ಮಿಲನ್ ಕೀ ಬೇಲಾ (1964)
ಸಾಹಿತ್ಯ: ಹಸರತ್ ಜೈಪುರಿ
ಸಂಗೀತ: ಶಂಕರ್ ಜೈಕಿಷನ್
ಗಾಯನ: ಲತಾ ಮಂಗೇಶ್ಕರ್
ಚಿತ್ರಿಕೆಯಲ್ಲಿ: ಸಾಯಿರಾ ಬಾನು, ರಾಜೇಂದ್ರ ಕುಮಾರ್
ಮೂಲ ಚಿತ್ರಿಕೆ (Video) 


ಕನ್ನಡ ಭಾವಾನುವಾದ
ಹಿಂದಿ ಮೂಲ



ನಾ ಎಳೆಬಾಲೆ, ಅನಭಿಜ್ಞೆ,
ಮೈಂ ಕಮಸಿನ್ ಹೂಂ, ನಾದಾನ್ ಹೂಂ
ಕೋಮಲೆಯೂ, ಅಮಾಯಕಿಯೂ
ನಾಜುಕ್ ಹೂಂ, ಭೋಲೀ ಹೂಂ
ನಾ ಎಳೆಬಾಲೆ, ಅನಭಿಜ್ಞೆ,
ಮೈಂ ಕಮಸಿನ್ ಹೂಂ, ನಾದಾನ್ ಹೂಂ
ಕೋಮಲೆಯೂ, ಅಮಾಯಕಿಯೂ
ನಾಜುಕ್ ಹೂಂ, ಭೋಲೀ ಹೂಂ
ಪೊಱೆಯೆನ್ನ ನೀನೆಂದು
ಥಾಮಲೋ ಮುಝೇ ಮೈಂ ಯಹೀ
ಮೊಱೆಯಿಡುವೆನು
ಇಲ್ತಿಜ಼ಾ ಕರೂಂ
ನಾನು ಪೊಡಮಡುವೆನು
ಮೈಂ ಯಹೀ ಇಲ್ತಿಜ಼ಾ ಕರೂಂ

 
ನಾ ಎಳೆಬಾಲೆ, ಅನಭಿಜ್ಞೆ,
ಮೈಂ ಕಮಸಿನ್ ಹೂಂ, ನಾದಾನ್ ಹೂಂ
ಕೋಮಲೆಯೂ, ಅಮಾಯಕಿಯೂ
ನಾಜುಕ್ ಹೂಂ, ಭೋಲೀ ಹೂಂ
ಪೊಱೆಯೆನ್ನ ನೀನೆಂದು
ಥಾಮಲೋ ಮುಝೇ ಮೈಂ ಯಹೀ
ಮೊಱೆಯಿಡುವೆನು 
ಇಲ್ತಿಜ಼ಾ ಕರೂಂ
ನಾನು ಪೊಡಮಡುವೆನು
ಮೈಂ ಯಹೀ ಇಲ್ತಿಜ಼ಾ ಕರೂಂ

 
ಹೂವಾಗುವಾ ಆಸೆ ಮನದಲ್ಲಿ
ಹೈ ದಿಲ್ ಕೀ ಲಗನ್ ಮೈಂ ಫೂಲ್ ಬನೂಂ
ನಿನ್ನೆದೆಯಲಿ ನಾನು ನೆಲೆಸುವೆನು
ಔರ್ ಹಂಸ್ ಕೇ ತೇರೇ ಪಹಲೂ ಮೇಂ ರಹೂಂ
ನಮ್ಮಯ ಕಙ್ಗಳು ಬೆರೆತಿರಲು
ತೂ ದೇಖೇ ಮುಝೇ, ಮೈಂ ದೇಖೂಂ ತುಝೇ
ನಿನ್ನೊಲುಮೆಗೆ ನಾನು ಕರಗುವೆನು
ಔರ್ ಪ್ಯಾರ್ ಮೇಂ ತೇರೇ ಖೋ ಜಾವೂಂ
ನಮ್ಮಯ ಕಙ್ಗಳು ಬೆರೆತಿರಲು
ತೂ ದೇಖೇ ಮುಝೇ, ಮೈಂ ದೇಖೂಂ ತುಝೇ
ನಿನ್ನೊಲುಮೆಗೆ ನಾನು ಕರಗುವೆನು
ಔರ್ ಪ್ಯಾರ್ ಮೇಂ ತೇರೇ ಖೋ ಜಾವೂಂ

 
ನಾ ಎಳೆಬಾಲೆ, ಅನಭಿಜ್ಞೆ,
ಮೈಂ ಕಮಸಿನ್ ಹೂಂ, ನಾದಾನ್ ಹೂಂ
ಕೋಮಲೆಯೂ, ಅಮಾಯಕಿಯೂ
ನಾಜುಕ್ ಹೂಂ, ಭೋಲೀ ಹೂಂ
ಪೊಱೆಯೆನ್ನ ನೀನೆಂದು
ಥಾಮಲೋ ಮುಝೇ ಮೈಂ ಯಹೀ
ಮೊಱೆಯಿಡುವೆನು
ಇಲ್ತಿಜ಼ಾ ಕರೂಂ
ನಾನು ಪೊಡಮಡುವೆನು
ಮೈಂ ಯಹೀ ಇಲ್ತಿಜ಼ಾ ಕರೂಂ

 
ನೆಮ್ಮದಿ ನೀಡದ ನೆಲವದುವೆ
ಜಿಸ್ ಮಂಜ಼ಿಲ್ ಕಾ ರಾಹೀ ನ ಕೋಯೀ
ಬೆಂಗಾಡಲ್ಲದೇ ನೆಲೆಯಹುದೇ
ವೋ ಸೇಹರಾ ಹೈ ಮಂಜ಼ಿಲ ತೋ ನಹೀಂ
ಒಲುಮೆಗೆ ಮಿಡಿಯದ ಎದೆಯದುವೆ
ಜಿಸ್ ದಿಲ್ ಮೇಂ ಕೋಯೀ ಧಡ಼ಕನ್ ಹೀ ನಹೋ
ಶಿಲೆಯಲ್ಲದೆ ಅದು ಎದೆಯಹುದೇ
ವೋ ಪತ್ಥರ್ ಹೈ ಕೋಯೀ ದಿಲ್ ತೋ ನಹೀಂ
ಒಲುಮೆಗೆ ಮಿಡಿಯದ ಎದೆಯದುವೆ
ಜಿಸ್ ದಿಲ್ ಮೇಂ ಕೋಯೀ ಧಡ಼ಕನ್ ಹೀ ನಹೋ
ಶಿಲೆಯಲ್ಲದೆ ಅದು ಎದೆಯಹುದೇ
ವೋ ಪತ್ಥರ್ ಹೈ ಕೋಯೀ ದಿಲ್ ತೋ ನಹೀಂ

 
ನಾ ಎಳೆಬಾಲೆ, ಅನಭಿಜ್ಞೆ,
ಮೈಂ ಕಮಸಿನ್ ಹೂಂ, ನಾದಾನ್ ಹೂಂ
ಕೋಮಲೆಯೂ, ಅಮಾಯಕಿಯೂ
ನಾಜುಕ್ ಹೂಂ, ಭೋಲೀ ಹೂಂ
ಪೊಱೆಯೆನ್ನ ನೀನೆಂದು
ಥಾಮಲೋ ಮುಝೇ ಮೈಂ ಯಹೀ
ಮೊಱೆಯಿಡುವೆನು
ಇಲ್ತಿಜ಼ಾ ಕರೂಂ
ನಾನು ಪೊಡಮಡುವೆನು
ಮೈಂ ಯಹೀ ಇಲ್ತಿಜ಼ಾ ಕರೂಂ

Sunday, 9 July 2023

ಮುಡಿಸುವೆ ನನ್ನಿಯ ಅಲರನ್ನು (ಭಾವಾನುವಾದ)

 ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. 

ಚಿತ್ರ:  ಪ್ಯಾಸಾ (1957)
ಸಾಹಿತ್ಯ: ಸಾಹಿರ್ ಲುಧಿಯಾನವೀ
ಸಂಗೀತ: ಸಚಿನ್ ದೇವ್ ಬರ್ಮನ್
ಗಾಯನ: ಮಹಮದ್ ರಫಿ಼, ಗೀತಾ ದತ್ತ್
ಚಿತ್ರಿಕೆಯಲ್ಲಿ: ಮಾಲಾ ಸಿನ್ಹಾ, ಗುರುದತ್
ಮೂಲ ಚಿತ್ರಿಕೆ (Video)
 

ಬಣ್ಣದ ಚಿತ್ರಿಕೆ (Colour)

ಕನ್ನಡ ಭಾವಾನುವಾದ
ಹಿಂದಿ ಮೂಲ



ನಾ ನಿಮ್ಮಯ ಕಙ್ಗಳಲಿ
ಹಮ್ ಆಪಕೀ ಆಂಖೋ ಮೇಂ
ಈ ಮನಸಾ ನೆಲೆಸಿದೊಡೆ
ಇಸ್ ದಿಲ್ ಕೋ ಬಸಾ ದೇ ತೋ
ನಾ ಱಪ್ಪೆಯ ಮುಚ್ಚುತಲಿ
ಹಮ್ ಮೂಂದ್ ಕೇ ಪಲ್‌ಕೋಂ ಕೋ
ಆ ಮನಸಾ ಕಾಡಿದೊಡೆ
ಇಸ್ ದಿಲ್ ಕೋ ಸಜ಼ಾ ದೇ ತೋ



ನಾ ನಿಮ್ಮಯ ಕಙ್ಗಳಲಿ
ಹಮ್ ಆಪಕೀ ಆಂಖೋ ಮೇಂ
ಈ ಮನಸಾ ನೆಲೆಸಿದೊಡೆ
ಇಸ್ ದಿಲ್ ಕೋ ಬಸಾ ದೇ ತೋ
ನಾ ಱಪ್ಪೆಯ ಮುಚ್ಚುತಲಿ
ಹಮ್ ಮೂಂದ್ ಕೇ ಪಲ್‌ಕೋಂ ಕೋ
ಆ ಮನಸಾ ಕಾಡಿದೊಡೆ
ಇಸ್ ದಿಲ್ ಕೋ ಸಜ಼ಾ ದೇ ತೋ



ನಾ ನಿಮ್ಮಯ ಕಙ್ಗಳಲಿ
ಹಮ್ ಆಪಕೀ ಆಂಖೋ ಮೇಂ
ಈ ಮನಸಾ ನೆಲೆಸಿದೊಡೆ
ಇಸ್ ದಿಲ್ ಕೋ ಬಸಾ ದೇ ತೋ



ಮುಡಿಸುವೆ ಈ ಹೆರಳಲ್ಲೇ
ಇನ್ ಜ಼ುಲ್‌ಫೋಂ ಮೇಂ ಗೂಂಧೇಂಗೇ
ನನ್ನಯ ನನ್ನಿಯಲರನ್ನೇ
ಹಮ್ ಫೂಲ್ ಮೋಹಬ್ಬತ್ ಕೇ
ಮುಡಿಕೊಡವಿ ನಾನಿಲ್ಲೇ
ಜ಼ುಲ್‌ಫೋಂ ಕೋ ಝಟಕ್ ಕರ್ ಹಮ್
ಅ ಹೂವಾ ಕೆಡವಿದೊಡೆ
ಯೇ ಫೂಲ್ ಗಿರಾ ದೇ ತೋ



ಮುಡಿಸುವೆ ಈ ಹೆರಳಲ್ಲೇ
ಇನ್ ಜ಼ುಲ್‌ಫೋಂ ಮೇಂ ಗೂಂಧೇಂಗೇ
ನನ್ನಯ ನನ್ನಿಯಲರನ್ನೇ
ಹಮ್ ಫೂಲ್ ಮೋಹಬ್ಬತ್ ಕೇ
ಮುಡಿಕೊಡವಿ ನಾನಿಲ್ಲೇ
ಜ಼ುಲ್‌ಫೋಂ ಕೋ ಝಟಕ್ ಕರ್ ಹಮ್
ಅ ಹೂವಾ ಕೆಡವಿದೊಡೆ
ಯೇ ಫೂಲ್ ಗಿರಾ ದೇ ತೋ



ನಾ ನಿಮ್ಮಯ ಕಙ್ಗಳಲಿ
ಹಮ್ ಆಪಕೀ ಆಂಖೋ ಮೇಂ
ಈ ಮನಸಾ ನೆಲೆಸಿದೊಡೆ
ಇಸ್ ದಿಲ್ ಕೋ ಬಸಾ ದೇ ತೋ



ನಾ ನಿಮ್ಮನು ಕನಸಿನಲಿ
ಹಮ್ ಆಪಕೋ ಖ್ವಾಬೋಂ ಮೇಂ
ಕರೆತಂದು ಕಾಡಿಸುವೆ
ಲಾ ಲಾ ಕೇ ಸತಾಯೇಂಗೇ
ನಾ ನಿಮ್ಮಯ ನಯನದಲಿ
ಹಮ್ ಆಪಕೀ ಆಂಖೋಂ ಸೇ
ನಿದಿರೆಯನೇ ಹಾರಿಸುವೆ 
ನೀಂದೇ ಹೀ ಉಡಾ ದೇ ತೋ



ನಾ ನಿಮ್ಮನು ಕನಸಿನಲಿ
ಹಮ್ ಆಪಕೋ ಖ್ವಾಬೋಂ ಮೇಂ
ಕರೆತಂದು ಕಾಡಿಸುವೆ
ಲಾ ಲಾ ಕೇ ಸತಾಯೇಂಗೇ
ನಾ ನಿಮ್ಮಯ ನಯನದಲಿ
ಹಮ್ ಆಪಕೀ ಆಂಖೋಂ ಸೇ
ನಿದಿರೆಯನೇ ಹಾರಿಸುವೆ 
ನೀಂದೇ ಹೀ ಉಡಾ ದೇ ತೋ



ನಾ ನಿಮ್ಮಯ ಕಙ್ಗಳಲಿ
ಹಮ್ ಆಪಕೀ ಆಂಖೋ ಮೇಂ
ಈ ಮನಸಾ ನೆಲೆಸಿದೊಡೆ
ಇಸ್ ದಿಲ್ ಕೋ ಬಸಾ ದೇ ತೋ



ನಾ ನಿಮ್ಮಯ ಅಡಿಗಳಿಗೆ
ಹಮ್ ಆಪಕೇ ಕದಮೋಂ ಪರ್
ಬೀೞುವೆನು ಬಸವೞಿಯೆ
ಗಿರ್ ಜಾಯೇಂಗೇ ಗಶ್ ಖಾ ಕರ್
ಬೞಲಿಕೆಯಾ ಕಡೆಗಣಿಸಿ
ಇಸ್‌ಪರ್ ಭೀ ನಾ ಹಮ್ ಅಪನೇ
ಸೆಱಗಿನಲೂ ಬೀಸದೊಡೆ
ಆಂಚಲ್ ಕೀ ಹವಾ ದೇ ತೋ



ನಾ ನಿಮ್ಮಯ ಅಡಿಗಳಿಗೆ
ಹಮ್ ಆಪಕೇ ಕದಮೋಂ ಪರ್
ಬೀೞುವೆನು ಬಸವೞಿಯೆ
ಗಿರ್ ಜಾಯೇಂಗೇ ಗಶ್ ಖಾ ಕರ್
ಬೞಲಿಕೆಯ ಕಡೆಗಣಿಸಿ
ಇಸ್‌ಪರ್ ಭೀ ನಾ ಹಮ್ ಅಪನೇ
ಸೆಱಗಿನಲೂ ಬೀಸದೊಡೆ
ಆಂಚಲ್ ಕೀ ಹವಾ ದೇ ತೋ



ನಾ ನಿಮ್ಮಯ ಕಙ್ಗಳಲಿ
ಹಮ್ ಆಪಕೀ ಆಂಖೋ ಮೇಂ
ಈ ಮನಸಾ ನೆಲೆಸಿದೊಡೆ
ಇಸ್ ದಿಲ್ ಕೋ ಬಸಾ ದೇ ತೋ
ನಾ ಱಪ್ಪೆಯ ಮುಚ್ಚುತಲಿ
ಹಮ್ ಮೂಂದ್ ಕೇ ಪಲ್‌ಕೋಂ ಕೋ
ಆ ಮನಸಾ ಕಾಡಿದೊಡೆ
ಇಸ್ ದಿಲ್ ಕೋ ಸಜ಼ಾ ದೇ ತೋ



ನಾ ನಿಮ್ಮಯ ಕಙ್ಗಳಲಿ
ಹಮ್ ಆಪಕೀ ಆಂಖೋ ಮೇಂ
ಈ ಮನಸಾ ನೆಲೆಸಿದೊಡೆ
ಇಸ್ ದಿಲ್ ಕೋ ಬಸಾ ದೇ ತೋ

Friday, 17 April 2020

ಒಡತಿ (ಭಾವಾನುವಾದ)

ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. 

ಗೀತಚಿತ್ರ: ಏಕ್ ಜಿ಼ಂದಗಿ ಖುದ್ ಕೇ ನಾಮ್ (2019)
ಸಾಹಿತ್ಯ: ಸಂಜನಾ ಸಿಂಗ್
ಸಂಗೀತ: ಅರ್ಜುನ್ ಅಯ್ಯರ್
ದನಿ: ವಿಜಯ್ ವಿಕ್ರಮ್ ಸಿಂಗ್
ಚಿತ್ರಿಕೆಯಲ್ಲಿ: ದೇವಾಂಶಿ ದವೆ, ಲವೀನಾ ಕ್ಷತ್ರಾನಿ, ಗರಿಮಾ ಚೌಹಾನ್, ಇತರರು

ಮೂಲಗೀತೆಯ ಇಳಿಕೊಂಡಿ (Download Link)

ಕನ್ನಡ ಭಾವಾನುವಾದ

ಹಿಂದಿ ಮೂಲ

ಭಾವಾಂತರಾಳದಿ ಮೂಡುವುದೀ ಜಿಜ್ಞಾಸೆ ಕಭೀ ಕಭೀ ಮೇರೇ ದಿಲ್ ಮೇಂ ಖ್ಯಾಲ್ ಆತಾ ಹೈಂ
ಒಲವಿನೊಡನಾಡಿಯಾಗುವೆ ನೀ ಕಿ ಜೈಸೇ ತುಝಕೋ ಬನಾಯಾ ಗಯಾ ಹೈ
ಯಾರಿಗೆಂದು?! ಕಿಸ್ ಕೇ ಲಿಯೇ?!
ಭುವಿಗಿಳಿದುಬಂದಿಹೆ ನೀ ಜ಼ಮೀಂ ಪೇ ಬುಲಾಯಾ ಗಯಾ ಹೈ
ಯಾರಿಗೆಂದು?! ಕಿಸ್ ಕೇ ಲಿಯೇ?!
ಕನಸಹೊಸೆಯುವೀ ನಿನ್ನ ಕಂಗಳು ಕಿ ಯೇ ಆಂಖೇ ಜೋ ಸಪನೇ ಬುನ್ ರಹೀ ಹೈಂ
ಅದಾರ ಚಿತ್ರ ಬಿಡಿಸುತಿವೆ?! ಕಿಸ್ ಕೀ ತಸ್ವೀರ್ ಬನಾ ರಹೀ ಹೈಂ?!
ನಿನ್ನ ಈ ಕೈರುಚಿ ಕಿ ಯೇ ಹಾಥೋಂ ಕಾ ಜಾದೂ
ಅದಾರ ಮನ ಗೆಲ್ಲುವುದೋ?! ಕಿಸ್ ಕೀ ದಿಲ್ ಕೀ ರಾಸ್ತೇ ಖೋಲೇಗಾ?!
ಕುಣಿಕುಣಿದರೂ ದಣಿಯದೀ ಪಾದಗಳು ಯೇ ಜೋ ಕದಮ್ ಥಿರಕನೇ ಸೇ ಥಕತೇ ನಹೀಂ
ಯಾರೊಡಗೂಡಿ ನಡೆಯುವವೋ?! ಕಭೀ ತೋ ಕಿಸೀ ಕೇ ಸಾಥ ಚಲೇಂಗೇ
ಯಾರಿಗೆ ಕಾದು ನಿಲ್ಲುವವೋ?! ಕಿಸೀ ಕೇ ಲಿಯೇ ತೋ ರುಕೇಂಗೇ
ಅನುರಾಗ ಪಲ್ಲವಿಯೊಂದ ನೀ ಬರೆದಾಗ ತೂ ಅಬ್ ಸೇ ಪಹಲೇ ಜೋ ಧುನ್ ಲಿಖ್ ರಹೀ ಥೀ ಕಹೀ
ಅದಾರ ಮನದೇ ಜಪಿಸಿದೆಯೋ?! ಕಿಸ್ ಕೀ ಖ಼ಯಾಲೋಂಮೇ ಖೋಯೀ ರಹೀ ಹೋಗೀ?!
ಈ ಪಾಗಾರ ದಾರಂದಗಳನಾರೋ ಕಿ ಯೇ ಜೋ ದೀವಾರ್ ಔರ್ ದರವಾಜ಼ೇ ಹೈಂ
ಸಾಂಗತ್ಯದಲೇ ಸೂರಾಗಿಸುವರಲ್ಲ ಕೋಯೀ ತೋ ಆ ಕರ್ ಇನ್ಹೇ ಘರ್ ಬನಾಯೇಗಾ
ಭಾವಾಂತರಾಳದಿ ಮೂಡುವುದೀ ಜಿಜ್ಞಾಸೆ ಕಭೀ ಕಭೀ ಮೇರೇ ದಿಲ್ ಮೇಂ ಖ್ಯಾಲ್ ಆತಾ ಹೈಂ
ನೀನಾರಿಗಾಗಿಯೋ ಕಾಯಲದೇಕೆ? ಕಿ ತುಜೇ ಕಿಸೀ ಕಾ ಇಂತಜ಼ಾರ ಕ್ಯೋಂ ಹೋ?
ನಿನ್ನೀಪ್ಸೆಗಳೊಡತಿ ನೀನೇಕಲ್ಲ? ಕ್ಯೋಂ ತೇರೀ ಸಪನೇ ತೇರೇ ಹೀ ನ ಹೋ?
ಭಾವಾಂತರಾಳದಿ ಮೂಡುವುದೀ ಜಿಜ್ಞಾಸೆ ಕಭೀ ಕಭೀ ಮೇರೇ ದಿಲ್ ಮೇಂ ಖ್ಯಾಲ್ ಆತಾ ಹೈಂ
ನಿನ್ನಯ ಅವತಾರವಾಗಿಹುದು ಜೈಸೇ ತುಜಕೋ ಬನಾಯಾ ಗಯಾ ಹೈಂ 
ನಿನಗಾಗಿಯೇ ಎಂದು ಸಿರ್ಫ಼್ ಔರ್ ಸಿರ್ಫ಼್ ತೇರೇ ಲಿಯೇ


Sunday, 19 November 2017

ನಾ ತೆರೆಯ ಸರಿಸೆನು: ಜೈಬ್-ಉನ್-ನಿಸಾ


"ನನ್ನ ನೀನು ಗೆಲ್ಲಲಾರೆ.... ತಿಳಿದೂ.... ತಿಳಿದೂ.... ಛಲವೇತಕೇ............?"

ಹೀಗೆ ಹೇಳುತ್ತಾ ಉಡುಪು ತೆಗೆದು, ಹುಡುಗಿ ನಾಚಿದ ಕಾರಣಕ್ಕೆ ಅವಳನ್ನು ಸೋಲಿಸಿದನೆಂದು ಬೀಗಿದ ಗಂಡಿನ ನಾಚಿಕೆಗೇಡಿನ ಕಥೆ ಗೊತ್ತಿರಬೇಕು... ಅಂಥದ್ದೇ ಕಥೆ ಇದು
ಮೊಘಲ್ ಚಕ್ರವರ್ತಿಯಾಗಿದ್ದ ಮತಾಂಧ ಔರಂಗಜೇಬನ ಮಗಳಾದರೂ ಸ್ವತಂತ್ರ ಮನೋಭಾವದ ಜೈಬುನ್ನಿಸಾಳ ಅರಮನೆಯಲ್ಲಿ ಹಲವು ಕಾವ್ಯಸ್ಪರ್ಧೆಗಳು ನಡೆಯುತ್ತಿದ್ದವು... ಅವಳ ಹಲವು ಪ್ರತಿಸ್ಪರ್ಧಿಗಳಲ್ಲಿ ನಾಸಿರ್ ಅಲಿಯೂ ಒಬ್ಬ. ನಾಸಿರ್ ಒಬ್ಬ ಸ್ವಾಭಿಮಾನಿ, ಬಡವ... 
ನಾಸಿರ್ ಅಲಿ ಒಮ್ಮೆ ಅವಳ ವಿರುದ್ದದ ಕಾವ್ಯಸ್ಪರ್ಧೆಯಲ್ಲಿ ಕಾವ್ಯಾತ್ಮಕವಾಗಿ ಹೇಳಿದ..

"ಓ ಚಂದ್ರನಿಗೂ ಅಸೂಯೆ ಮೂಡಿಸುವ ಹೆಣ್ಣೇ,
ಮೊಗದೆರೆಯನ್ನೊಮ್ಮೆ ಸರಿಸು,
ನಿನ್ನ ವದನಾರವಿಂದದ ಚೆಲುವ ಸವಿವಕಾಶವನು ನೀಡು..."


ಅವಳಿಗಾಗದ ಕೆಲಸವನ್ನು ಹೇಳಿ ಅವಳನ್ನು ಸೋಲಿಸಿ ಬೀಗುವ ಗಂಡಿನ ಮಾಮೂಲಿ ಆಟ....

ಇದಕ್ಕೆ ಕಾವ್ಯಾತ್ಮಕವಾಗಿಯೇ ಉತ್ತರಿಸಬೇಕಾದುದು ಜೈಬುನ್ನಿಸಾಳ ಸರದಿ... ಇಲ್ಲದಿದ್ದರವಳು ಸೋತಳು..
ಜೈಬುನಿಸಾ ಒಬ್ಬ ಮುಸಲರ ಹೆಣ್ಣುಮಗಳು, ಮತಾಂಧ ತಂದೆಯ ನೆರಳಡಿ ಬೆಳೆದವಳು... ಅವಳು ಬೆಳೆದು ಬಂದ ಸಂಸ್ಕೃತಿಯಲ್ಲಿ ಎಲ್ಲರಿಗೂ ಮೊಗದೆರೆ ಸರಿಸುವಂಥಹುದು ಅಲ್ಲ.. ಹಾಗೆಂದು ಅವಳು ಉತ್ತರಿಸದೆ ಸೋಲುವಂತೆಯೂ ಇರಲಿಲ್ಲ... ಅವಳಿಗಿದು ದೊಡ್ಡ ಪಂಥಾಹ್ವಾನ.

ಜೈಬುನ್ನಿಸಾಳ ಉತ್ತರ ಹೀಗಿತ್ತು........

"ನಾ ತೆರೆಯ ಸರಿಸೆನು
ತೆರೆ ಸರಿದರೇನು ಗತಿ ಗೊತ್ತೇನು?
.
ಪಿಕಳಾರ ತನ್ನ ಗುಲಾಬಿಯಿಂದ ದೂರಾಗಬಹುದು, 
ಲೌಕಿಕಾನಂದಕ್ಕಾಗಿಯೇ ದೇವಿ ಲಕುಮಿಯನು
ಆದರಿಸಿ ಪೂಜಿಸುವ
ಗುಡಿಯ ಹಾರವನೂ
ತಿರುಗಬಹುದೆನ್ನೆಡೆಗೆ 
ಎನ್ಮೊಗದ ಕಾಣ್ಕೆಗೆ.
 
 
ಎನ್ನಯ ಚೆಲುವೇ ಗೆಲ್ಲಬಹುದು...
 
ಆದರೆ........
 
ಬಳ್ಳಿಚಪ್ಪರದ ಪೊದರಿನಲಿ ಮರೆಯಾಗಿ ಕುಳಿತ ಚೆಲುವಿನ ಪೂ
ನಱುಗಂಪಿನಿಂದಲೇ ತನ್ನಿರುವ ಸಾರುವಂತೆ

ನಾ ಬರೆವ ಸಾಲುಗಳಲ್ಲಿ ಮಾತ್ರ ನಾ ಉಳಿಯಬಯಸುವೆ....
ನಾ ತೆರೆಯ ಸರಿಸೆನು..
."


ಅಂದ ಹಾಗೆ ಜೈಬುನ್ನಿಸಾಳ ಕಾವ್ಯನಾಮ ಮಕ್ಫಿ... ಅಂದರೆ "ಗುಪ್ತವಾಗಿರುವಾಕೆ" ಅಂತ....
ಜೈಬುನ್ನಿಸಾಳ ಸಂಕಲನ, ದಿವಾನ್-ಎ-ಮಕ್ಫಿಯಿಂದ ಆಯ್ದ ಕೆಲವು ಸಾಲುಗಳು ಇವು

ಸಾರ್ವಭೌಮನ ಮಗಳು ನಾ, 
ಆದರೆ ವೈರಾಗ್ಯದಲ್ಲಿ ವೈಭವವನ್ನು ಕಾಣುವವಳು...
ನನ್ನ ಹೆಸರು ಜೈಬ್-ಉನ್-ನಿಸಾ, 
ಹೇಳುವರು ಅದರರ್ಥ ಸ್ತ್ರೀತ್ವದ ಮುಕುಟಮಣಿ...

ಪ್ರೇಮದ ಪುತ್ಥಳಿಯನು ಪೂಜಿಸುವೆ. ಮುಸಲ ನಾನಲ್ಲ.
ಅವಳ ವೇಣಿಯನು ಕೊರಳ ಸುತ್ತಿಸಿಕೊಳಲೆಂದು
ಇದ್ದ ಜನಿವಾರ ಕಿತ್ತೆಸೆದಿರುವ ನಾನು ಹಾರವನೂ ಅಲ್ಲ
 
ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ
 
ಯೇಽಪ್ಯನ್ಯದೇವತಾಭಕ್ತಾ ಯಜನ್ತೇ ಶ್ರದ್ಧಯಾನ್ವಿತಾಃ ।
ತೇಽಪಿ ಮಾಮೇವ ಕೌನ್ತೇಯ ಯಜನ್ತ್ಯವಿಧಿಪೂರ್ವಕಮ್

ಯಾರು ಇತರ ದೇವರನ್ನು ಪೂಜಿಸುವರೋ ಅವರು ನನ್ನನ್ನೇ ಬೇರೆ ಬಗೆಯಲ್ಲಿ ಪೂಜಿಸುತ್ತಿರುವರು ಅಷ್ಟೇ ಎಂದ ಕೃಷ್ಣನಂತೆಯೇ ಯಮುನೆಯ ನೀರು ಕುಡಿದು ಬೆಳೆದವಳು ಜೈಬುನ್ನಿಸಾ... ಅರಾಬಿಕ್ ಮತ್ತು ಪರ್ಶಿಯನ್ ಪಂಡಿತೆ...ವಿದ್ಯೆಯ ಪೂಜಕಿ ಬರೆದಳು.
ಮಕ್ಕಾದ ಪವಿತ್ರ ಪ್ರಾರ್ಥನಾ ಗೃಹವೇ ಇರಲಿ... 
ಭಗವಂತನ ಹೆಜ್ಜೆ ಗುರುತುಗಳುಳ್ಳ ದೇವಾಲಯವೇ ಇರಲಿ.
ಅವ ರಚಿಸಿದ ಚಿತ್ರಿಕೆ ನಾನು...
ದೇವನು ಎಲ್ಲಿ ಹೇಗೇ ಅರ್ಚಿಸಿಕೊಳ್ಳಲಿ...
ಅರ್ಚನೆ ಸಲ್ಲುವುದು ನನ್ನ ದೈವಕ್ಕೇ...

ಯಮುನಾತೀರದಲ್ಲಿ ಬೆಳೆದ ಮಾತ್ರಕ್ಕೆ ಇವಳೇನೂ ಕೃಷ್ಣಭಕ್ತೆಯಲ್ಲ. ಅದರೂ ಸರ್ವ ದೇವ ನಮಸ್ಕಾರಂ ಕೇಶವಂ ಪ್ರತಿ ಗಚ್ಚತಿ, ಯಾವ ಹೆಸರಿನ ದೈವಕ್ಕೆ ಮಣಿದರೂ ಕೇಶವನಿಗೇ ಅದು ಸಲ್ಲುವುದು ಅಂದಳು ಅನಿಸಿತಲ್ವೇ.

ಏಳನೇ ವಯಸ್ಸಿನಲ್ಲೇ ಕುರಾನ್ ಬಾಯಿಪಾಠ ಮಾಡಿದ ಹುಡುಗಿ, ಆ ಪುಸ್ತಕಕ್ಕೆ ತನ್ನದೇ ಭಾಷ್ಯ ಬರೆಯ ಹೊರಟವಳು. ಮೂಲಭೂತವಾದಿ ಅಪ್ಪ ಅದಕ್ಕೆ  ಬಿಡಲಿಲ್ಲ. ಮತಾಂಧ ಅಪ್ಪ ಔರಂಗಜೇಬನಿಗಿಂತ, ದೊಡ್ಡಪ್ಪ ದಾರಾಶಿಕೋವಿನ ಹೃದಯವೈಶಾಲ್ಯದ ಮನಸ್ಥಿತಿಯವಳು ಜೈಬುನ್ನಿಸಾ... ಒಬ್ಬಳು ಸೂಫಿ಼...
 
ಅಂದಿನ ಮೊಘಲ್ ರಾಜಕಾರಣದ ಪರಂಪರೆಯೇ ಆದ ವಿದ್ರೋಹದಿಂದ ಪಟ್ಟಕ್ಕೆ ಬರುವ ಸಂಪ್ರದಾಯಕ್ಕೆ ಇಂಬು ಕೊಟ್ಟಳು... ಅವಳಪ್ಪ ಔರಂಗಜೇಬ ಮಾಡಿದ್ದೂ ಅದೇ, ತನ್ನ ಅಣ್ಣ  ಇಮ್ಮಡಿ ಅಕ್ಬರ, ಅಪ್ಪ ಔರಂಗಜೇಬನ ಮೇಲೆ ನಡೆಸಿದ ವಿಫಲ ವಿದ್ರೋಹವನ್ನು ಬೆಂಬಲಿಸಿದವಳು. ವಿದ್ರೋಹವನ್ನೇನೋ ಅಪ್ಪ ಹೊಸಕಿ ಹಾಕಿದ... ಅಕ್ಬರ್ ದ್ವಿತೀಯ ಇರಾನಿಗೆ ಓಡಿ ಹೋಗಿ ಆಶ್ರಯ ಪಡೆದ... ಆದರೆ ಜೈಬುನ್ನಿಸಾ ಅಪ್ಪ ಔರಂಗಜೇಬನ ಅವಕೃಪೆಗೆ ತುತ್ತಾಗಿ ಇಪ್ಪತ್ತು ವರ್ಷ ಸೆರೆಯಲ್ಲಿ ಕಳೆದು ಸೆರೆಯಲ್ಲೇ ಸತ್ತ ರಾಜಕುಮಾರಿ...

Sunday, 11 June 2017

ಚಿತ್ರಾಂಗದೆಯ ಸ್ವಗತ.



(ಗಂಭೀರ ದನಿಯಲ್ಲಿ)

ಬರುತ್ತಿದ್ದಾನಂತೆ ಅರ್ಜುನ....!
ನನ್ನನ್ನು ಸರಿಗಟ್ಟಿದ ಒಬ್ಬನೇ ಗಂಡು... ಅಶ್ವಮೇಧದ ಕುದುರೆಯ ಹಿಂದೆ ಬರುತ್ತಿದ್ದಾನಂತೆ... ಬರಲಿ... ನನ್ನ ವರ್ಷಗಳ ಕಾಯುವಿಕೆಗೆ ತಣಿವ ಕಾಲ ಬಂತು.

ನಾನು.. ಮಣಿಪುರದ ರಾಜಕುವರಿ... ಚಿತ್ರಾಂಗದೆ.. ನನ್ನಪ್ಪ ನನ್ನಲ್ಲಿ ವೀರನನ್ನು ಕಾಣಲಿಚ್ಚಿಸಿದರು.. ನಾನೆಂದೂ ಅವರಿಗೆ ನಿರಾಸೆ ಮಾಡಲಿಲ್ಲ. ಹೆಣ್ಣಾಗಿ ಹುಟ್ಟಿದರೂ ರಾಜಕುಮಾರನಂತೆ ಬೆಳೆದೆ. ಭೂಮಂಡಲದಲ್ಲೇ ನನ್ನ ಶೌರ್ಯವನ್ನು ಮೀರಿಸುವವರು ಯಾರೂ ಇರಲಿಲ್ಲ.... ಸುಕೋಮಲ ರಾಜಕುಮಾರಿಯರಂತೆ ಪಲ್ಲಕ್ಕಿಯಲ್ಲಿ ನಾ ಕೂತಿದ್ದೇ ಇಲ್ಲ.. ಗಂಡುಭೀರಿಯಂತೆ ಒಬ್ಬಳೇ ಕುದುರೆ ಹತ್ತಿ ಹೊರಡುತ್ತಿದ್ದೆ.

ಸಶಸ್ತ್ರ ಹೋರಾಟದಲ್ಲಿ ಎಂದಿಗೂ ಅಜೇಯಳು ನಾನು...


( ಕ್ಷಣಮೌನ... ಮೆಲುವಾದ ದನಿಯಲ್ಲಿ... ನೆನಪುಗಳಲ್ಲಿ ಜಾರುತ್ತಾ.....)

ಈ ಅಜೇಯ ರಾಜಕುವರಿಯ ಮನವನ್ನು ಜಯಿಸಿಬಿಟ್ಟ ಅವನು..... ಅರ್ಜುನ.
ಹೀಗೇ ಊರೂರು ಅಲೆಯುತ್ತಾ ಮಣಿಪುರಕ್ಕೆ ಬಂದ ಕುರುಕುಲದ ರಾಜಪುತ್ರ.. ಏನು ಮೋಹಕ ಮಾತು... ಎಂಥಹಾ ಮೋಡಿಯ ಮಾಟಗಾರ... ಸಾಮು ಮಾಡಿದ ದೇಹ... ಅಪ್ಪ ಸುರೇಂದ್ರನದೇ ನಿಲುಮೆ.

ನಾ ಮೃದುವಾದೆ... ಕೋಮಲವಾದೆ. ಅವನಿಗಾಗಿ.... ಎಂದೂ ಕಾಣದ ಸ್ತ್ರೀತ್ವದ ಸೋಪಾನವೇರಿದೆ...
ನನ್ನನ್ನೇ ನಾ ಅವನಿಗೆ ಕೊಟ್ಟುಕೊಂಡೆ... ಗಾಂಧರ್ವ ವಿವಾಹ ನಮ್ಮದು.  ನನ್ನನ್ನು ತನ್ನ ಪ್ರೇಮದಿಂದ ಗೆದ್ದುಬಿಟ್ಟ ಅವನು... ಸವ್ಯಸಾಚಿ ಅರ್ಜುನ.


( ಕ್ಷಣ ಮೌನ... ಆಮೇಲೊಂದು ನಿಟ್ಟುಸಿರು... ನೋವಿನ ದನಿಯಲ್ಲಿ ಮುಂದುವರಿಸುತ್ತಾಳೆ..)

ಹೇಗೆ ಬಂದನೋ ಹಾಗೇ ಕಣ್ಮರೆಯಾಗಿ ಹೋದ. ಮತ್ತೆಂದೂ ಬಾರದ ಹಾಗೆ... 
ನನ್ನ ಮೇಲೆ ಆರೋಪಗಳನ್ನು ಹೊರಿಸಿದನಂತೆ... 
ನನ್ನ ಮಗುವಿನ ತಂದೆ ಅವನಲ್ಲವಂತೆ...
ಎಂಥಾ ನೀಚ ಆರೋಪ ನನ್ನ ಮೇಲೆ.... ಮಣಿಪುರದ ಈ ಅರಸು ಕುಮಾರಿ ಪರಿತ್ಯಕ್ತಳಾಗಿ ಹೋದಳು..

ಅಮ್ಮನಿಗೆ ಕೊಡುವಷ್ಟೇ ಗೌರವವನ್ನು ಹೆಂಡತಿಗೂ ನೀಡಬೇಕು...  
ಹೆಂಡತಿಗೆ "ಜಾಯಾ" ಅಂದರೆ ಜನ್ಮದಾತೆ ಎಂದೂ ಹೆಸರು... 
ಹೆಂಡತಿ ಗಂಡನನ್ನು ಗಂಡ ಮತ್ತು ಮಗು ಎಂದು ಎರಡಾಗಿ ಸೀಳುವವಳು... ಗಂಡನಿಗೆ ಮಕ್ಕಳ ಮೂಲಕ ಮರುಹುಟ್ಟು ನೀಡುವ ತಾಯಿ...  ಆ ಗೌರವ ಅವನು ಕೊಡಲಿಲ್ಲ... ಈಗ ನನ್ನ ಮಗ ಬಭ್ರುವಾಹನ ನನಗೆ ಆ ಗೌರವವನ್ನು ತಂದುಕೊಡಬೇಕು.


(ಕ್ಷಣಮೌನ.. ಗಂಭೀರವಾದ ಧೃಢ ಸಂಕಲ್ಪದ ದನಿಯಲ್ಲಿ ಮುಂದುವರಿಯುತ್ತಾಳೆ...)

ಅಂದೇ ನಿರ್ಧರಿಸಿದೆ...  ಅರ್ಜುನನನ್ನು ಅರ್ಜುನನಲ್ಲದೇ ಇನ್ನಾರು ಸೋಲಿಸುವರು? ಅವನ ಮಗ.. ನನ್ನ ಬಭ್ರುವಾಹನ... ಅರ್ಜುನನದೇ ಪ್ರತಿರೂಪ. ಅವನದೇ ಶೌರ್ಯ... ಅವನಮ್ಮದೇ ಕೆಚ್ಚು,

ಅವನು ಬಭ್ರುವಾಹನನಿಗೆ ಸೋತ ದಿನ ಅವನು ಒಪ್ಪುತ್ತಾನೆ... ಅವನು ಒಪ್ಪಿದ ದಿನ ನನಗೆ ಅಪಮಾನದಿಂದ ಮುಕ್ತಿ.  ನನ್ನ ಮೇಲಿನ ಕಳಂಕ ಅಂದು ತೊಲಗುತ್ತದೆ... ತಯಾರು ಮಾಡಿದ್ದೇನೆ ಮಗನನ್ನು...

ಬರಲಿ...

ಬಭ್ರುವಾಹನನ ತಾಯಿಯಷ್ಟೇ ಅಲ್ಲ... ನಾ ಅವನ ಗುರುವೂ ಹೌದು... ಅವನಿಂದ ನಾ ಗುರುದಕ್ಷಿಣೆಯಲ್ಲಿ ಕೇಳಿದ್ದು ಅರ್ಜುನನ ಸೋಲು...

ಅರ್ಜುನನನ್ನು ಸಶಸ್ತ್ರ ಸಮರದಲ್ಲಿ ಹೆಡೆಮುರಿ ಕಟ್ಟಿ ತಂದೊಪ್ಪಿಸಬೇಕೆಂದು...

ತನ್ನ ತಂದೆ ಯಾರೆಂದು ಕೇಳುತ್ತಲೇ ಇದ್ದಾನೆ ಮಗ.... ಎಂದು ನನಗೆ ಅರ್ಜುನನ್ನು ಸೋಲಿಸಿ ತಂದೊಪ್ಪಿಸುವೆಯೋ ಅಂದೇ ನಿನ್ನ ತಂದೆಯ ಬಗ್ಗೆ ಹೇಳುವೆ ಎಂದು ಮಾತು ಕೊಟ್ಟಿದ್ದೇನೆ...

ಬಭ್ರುವಾಹನನಿಗೆ ಅವನ ತಂದೆಯ ಬಗ್ಗೆ ಕುತೂಹಲ... ಅರ್ಜುನನನ್ನು ತಂದೊಪ್ಪಿಸಿ ತಂದೆಯ ವಿವರ ತಿಳಿಯಲು ಅವನಿಗೂ ಕಾತರ...



(ಆತ್ಮವಿಶ್ವಾಸದ ದನಿಯಲ್ಲಿ....)

ರಹಸ್ಯೋಧ್ಘಾಟನೆಯ ಸಮಯ ಹತ್ತಿರ ಬರುತ್ತಿದೆ. ನನಗೆ ಅನುಮಾನವೇ ಇಲ್ಲ.... ಅರ್ಜುನನ ಮಗ, ಅರ್ಜುನನ ಮಗನೆಂಬುದನ್ನು ಶ್ರುತಪಡಿಸುತ್ತಾನೆ... ನನ್ನ ಕಾಲಡಿ ಅರ್ಜುನನನ್ನು ತಂದು ಕೆಡವುತ್ತಾನೆ...
ಅವನನ್ನು ಎತ್ತಿ ಉಪಚರಿಸಲು ಸಿದ್ದಳಾಗಬೇಕಷ್ಟೇ....
ಹೇಳುತ್ತೇನೆ ಅವನಿಗೆ... "ಮಣಿಪುರಕ್ಕೆ ಸಪ್ರೇಮ ಸ್ವಾಗತ ಅರ್ಜುನ..., ಕುಶಲವೇ...! ಕ್ಷೇಮವೇ....!"
ಕೇಳುತ್ತೇನೆ...... "ನಿನ್ನ ಮಗನ ಬಗ್ಗೆ ಹೆಮ್ಮೆಯಿಲ್ಲವೇ...!"

Wednesday, 2 November 2016

ಸ್ವಾನುಕಂಪದ ರೊಚ್ಚು!

ಕರ್ಣ ಕೃಷ್ಣರ ಸಂಭಾಷಣೆಯೊಂದು ಹೀಗಿದೆ.

ಕರ್ಣ ಮತ್ತು ಕೃಷ್ಣ 
ಚಿತ್ರಕೃಪೆ: ರಾಮಾನಂದ ಸಾಗರರ ಶ್ರೀಕೃಷ್ಣ ಧಾರವಾಹಿಯಿಂದ
 ಕರ್ಣ ಹೇಳುತ್ತಾನೆ.
"ನನಗೆ ಬಹಳ ಅನ್ಯಾಯವಾಗಿದೆ.
ನಾನು ಕಾನೀನನಾದದ್ದು  ನನ್ನ ತಪ್ಪೇ? 
(ಕಾನೀನ-ಮದುವೆಯಾಗದ ಕನ್ಯೆಗೆ ಹುಟ್ಟಿದವ)
ಹುಟ್ಟುತ್ತಲೇ ತಾಯಿ ತ್ಯಜಿಸಿದಳು.
ರಾಜಪರಿವಾರದಲ್ಲಿ ಬೆಳೆಯಬೇಕಾದವನು ಸೂತನ ಮನೆಯಲ್ಲಿ ಬೆಳೆದೆ.

ಸೂತಪುತ್ರನಾದ ಕಾರಣ ದ್ರೋಣರ ಬಳಿ ಪೂರ್ಣವಿದ್ಯೆ ದೊರೆಯಲಿಲ್ಲ.

ಪರಶುರಾಮರು ವಿದ್ಯೆಯೇನೋ ಕೊಟ್ಟರು. ಆದರೆ ಕೊನೆಯಲ್ಲಿ ನಾನು ಕ್ಷತ್ರಿಯನೆಂಬ ಕಾರಣಕ್ಕೆ ಕಲಿತ ವಿದ್ಯೆ ಸರಿಯಾದ ಸಮಯದಲ್ಲಿ ಮರೆತುಹೋಗಲಿ ಎಂದು ಶಾಪ ಕೊಟ್ಟುಬಿಟ್ಟರು. ಅದರಲ್ಲಿ ನನ್ನ ತಪ್ಪೇನು? ನಾನು ಕ್ಷತ್ರಿಯ ಎಂದು ನನಗೇ ಗೊತ್ತಿರಲಿಲ್ಲವಲ್ಲ.

ಅಲ್ಲೆಲ್ಲೋ ಹುಡುಗನೊಬ್ಬ ಓಡಿ ಬಂದು ನನ್ನ ರಥಕ್ಕೆ ಸಿಲುಕಿದ. ನನ್ನ ತಪ್ಪೇನೂ ಇಲ್ಲ. ಅದು ಅಪಘಾತವಷ್ಟೇ. ಆದರೆ ಅವರಪ್ಪ ನನಗೆ ಶಾಪಕೊಟ್ಟ.

ದ್ರೌಪದಿ ಸ್ವಯಂವರದಲ್ಲೂ ಸೂರ್ಯಪುತ್ರನಾದರೂ ನನಗೆ ಸೂತಪುತ್ರನೆಂಬ ಅಪಮಾನವಾಯಿತು. 

ಕುಂತಿಗೂ ಇತರ ಮಕ್ಕಳ ಬಗ್ಗೆಯೇ ಒಲವು.
ಅವರಿಗೆ ಸತ್ಯ ಹೇಳುವುದರ ಬದಲು ನನ್ನ ಬಳಿ ಬಂದು ವರ ಕೇಳಿದಳು.
ಆಯುಧಗಳ ಮರುಬಳಕೆಯನ್ನು ನಿಷೇಧಿಸಿಬಿಟ್ಟಳು.
ಎಂದೂ ತಾಯಿಯಂತೆ ನಡೆಯದವಳಿಗೂ ನಾನು ಕೇಳಿದ್ದು ಕೊಟ್ಟೆ.

ಕುರುಕುಲ ಸಿಂಹಾಸನವೇರಬೇಕಾದವನು ದುರ್ಯೋಧನನ ಔದಾರ್ಯದ ರಾಜ್ಯ ಆಳುತ್ತಿದ್ದೇನೆ.

ಭೀಷ್ಮರೆಂದಿಗೂ ನನ್ನನ್ನು ನನ್ನ ಯೋಗ್ಯತೆಗೆ ತಕ್ಕಂತೆ ನಡೆಸಿಕೊಳ್ಳಲಿಲ್ಲ.
ಯುದ್ದದ ಸಿದ್ದತೆಯಲ್ಲಿದಾಗಲೇ ನನಗೆ ಅಪಮಾನ ಮಾಡಿ ಅವರ ಸೇನಾಪತ್ಯದಲ್ಲಿ ಯುದ್ದ ಮಾಡಲು ಮನಸ್ಸಿಲ್ಲದಂತೆ ಮಾಡಿ ಹಿಂದೆ ಸರಿಸಿಬಿಟ್ಟರು. 
ದುರ್ಯೋಧನನ ಸ್ನೇಹಕ್ಕೆ ಇದೆಲ್ಲಾ ಸಹಿಸಿಕೊಂಡಿದ್ದೇನೆ. ಜೀವನ ಪೂರ್ತಿ ನನಗಾಗಿದ್ದು ಅನ್ಯಾಯ.

ಈಗ ದುರ್ಯೋಧನ ಕೆಟ್ಟವನು ಎಂದರೆ ಅದು ನಿಮಗಿರಬಹುದು. ನನಗಂತೂ ಅವನು ಎಂದಿಗೂ ಒಳ್ಳೆಯದೇ ಮಾಡಿದ್ದಾನೆ. ದೇವರು ನನ್ನ ಪಾಲಿಗಿಲ್ಲ. ಆದರೆ ದುರ್ಯೋಧನ ನನ್ನನೆಂದಿಗೂ ಕೈಬಿಟ್ಟಿಲ್ಲ. ನಾನು ಅವನ ಪರವಾಗಿರುವುದರಲ್ಲಿ ತಪ್ಪೇನಿದೆ?!".


ಕೃಷ್ಣ ಹೇಳುತ್ತಾನೆ.
"ಅಯ್ಯಾ ಕರ್ಣ, ನಾನು ಹುಟ್ಟಿದ್ದೂ ಸೆರೆಮನೆಯಲ್ಲಿ,
ಹುಟ್ಟುವ ಮೊದಲಿನಿಂದಲೂ ನನ್ನ ಸಾವು ಕಾದುಕುಳಿತಿತ್ತು.
ಹುಟ್ಟಿದ ರಾತ್ರಿಯೇ ತಾಯಿಯಿಂದ ನಾನೂ ಸಹ ದೂರವಾದೆ.

ನಿನಗಾದರೂ ಸೂತನ ಮನೆಯಲ್ಲಿದ್ದ ಕಾರಣ ಶಿಕ್ಷಣ ದೊರೆಯಿತು. ಬಾಲ್ಯದಿಂದಲೇ ಖಡ್ಗಗಳ ಕಿಂಕಿಣಿ, ರಥಚಕ್ರಗಳ ಕಟಕಟ ಶಬ್ಧ, ಕುದುರೆಗಳ ಕೆನೆಯುವಿಕೆ, ಧನುಷ್ಠೇಂಕಾರ, ಬಾಣ ಮಸೆಯುವ ಸದ್ದು  ಇವುಗಳನ್ನು ಕೇಳಿಯೇ ನೀನು ಬೆಳೆದೆ. 

ನನಗೆ ಸಿಕ್ಕಿದ್ದು ಗೊಲ್ಲರ ಹಟ್ಟಿ.
 ಖಡ್ಗವೂ ಇಲ್ಲ, ರಥವೂ ಇಲ್ಲ.
ಸಿಕ್ಕಿದ್ದು ಸಗಣಿ, ಗಂಜಲ, ಹಸುಕರುಗಳು, ಗೊಲ್ಲ ಹುಡುಗಿಯರು,
ಮತ್ತು ಬೆನ್ನತ್ತಿ ಬರುತ್ತಿದ್ದ ಕಂಸನ ಕೊಲೆ ಪ್ರಯತ್ನಗಳು.
ಸೈನ್ಯವನ್ನೂ ಕಾಣೆ. ಶಿಕ್ಷಣವೂ ಇಲ್ಲ. 

ಹದಿವಯಸ್ಸಿನಲ್ಲೇ ಮಾವನನ್ನು ಕೊಂದ ಕೊಲೆಗಾರ ಎನಿಸಿಕೊಂಡೆ.

ಊರಿನ ಜನರೆಲ್ಲಾ ಜರಾಸಂಧನ ಆಕ್ರಮಣಕ್ಕೆ ಹೆದರಿ ಫಲವತ್ತಾದ ಯಮುನಾ ತೀರದ ಊರು ಬಿಟ್ಟು ಕಂಡರಿಯದ ಸಮುದ್ರತೀರ ತಲುಪಬೇಕಾಯ್ತು. ಎಲ್ಲದಕ್ಕೂ ನಾನೇ ಕಾರಣ ಎಂದು ಊರಿನವರು ಗೊಣಗಿಕೊಂಡದ್ದೂ ನನಗೆ ಗೊತ್ತು. ಇದೇ ಕಾರಣಕ್ಕೆ ರಣಹೇಡಿಯೆಂಬ ಅಪವಾದವೂ ನನ್ನ ಮೇಲೆ. 

ನೀವೆಲ್ಲಾ ನಿಮ್ಮ ಗುರುಗಳಿಂದ ಸ್ನಾತಕರೆಂದು ಗುರುತಿಸಿಕೊಳ್ಳುವಾಗ ನಾನಿನ್ನೂ ಗುರುಕುಲಕ್ಕೂ ಸೇರಿರಲಿಲ್ಲ. ನಾನು ಸಾಂದೀಪನಿಗಳ ಗುರುಕುಲ ಸೇರಿದ್ದೇ ಹದಿನೆಂಟನೇ ವಯಸ್ಸಿಗೆ.

ನಿನಗೆ ರಾಜ್ಯವಾದರೂ ಇದೆ. 
ರಾಜ ನೀನು. 
ನಾನೇನು? ಯಾವೂರ ಸಿಂಹಾಸನಾಧೀಶ? 

ರುಕ್ಮಿಣಿ, ಮಿತ್ರವಿಂದೆ, ಹೀಗೇ ಪರಿಚಯವೇ ಇಲ್ಲದ ಹುಡುಗಿಯರು ನನ್ನನ್ನು ರಕ್ಷಿಸು, ನೀನೇ ಮದುವೆಯಾಗು ಎಂದರೆ ಮಾಡುವ ಕೆಲಸ ಬಿಟ್ಟು ಅಲ್ಲಿಗೆ ಓಡಿದ್ದೇನೆ.  ಎಲ್ಲವೂ ಅಯೋಜಿತ. (unplanned) 

ನಾನು ಪ್ರೇಮಿಸಿದವಳು ದಕ್ಕಲಿಲ್ಲ. ಅದರೆ ನಾನು ಮಾತ್ರ ಬಯಸಿದವರಿಗೆಲ್ಲಾ ಸಿಕ್ಕೆ. 

ಅಪಹೃತನಾಗಿದ್ದ ಗುರು ಸಾಂದೀಪನಿಯ ಮಗನನ್ನು ಹುಡುಕಿ ನಾನು ಕರೆತಂದೆ.... 
ಆದರೆ ನನ್ನದೇ ಮಗ ಪ್ರದ್ಯುಮ್ನ ಅಪಹರಣಕ್ಕೊಳಗಾದಾಗ ನನಗೇನೂ ಮಾಡಲಾಗಲಿಲ್ಲ.  
ಮೊಮ್ಮಗ ಅನಿರುದ್ಧನನ್ನು, ಅವನ ಪ್ರೇಯಸಿ ಉಷೆಗಾಗಿ, ಅವಳ ಗೆಳತಿ ಚಿತ್ರಲೇಖೆ ನಮ್ಮ ಮೂಗಿನಡಿಯಲ್ಲೇ ಅಪಹರಿಸಿದಾಗ ಗೊತ್ತಾಗಲೇ ಇಲ್ಲ. 

ಈಗ ದುರ್ಯೋಧನ ಗೆದ್ದರೆ ಅದರ ಸಂಭ್ರಮಕ್ಕೆ ನಿನಗಿನ್ನೂ ದೊಡ್ಡ ರಾಜ್ಯ ಕೊಡಬಹುದು. 
ನಿನ್ನ ಕೀರ್ತಿ ಇನ್ನೂ ಉತ್ತಂಗಕ್ಕೇರಬಹುದು. 

ನಾನು ಕೇವಲ ಸಾರಥಿ, 
ಯುದ್ದದಲ್ಲಿ ಶಸ್ತ್ರ ಎತ್ತುವವನಲ್ಲ. ಕೀರ್ತಿಯೂ ಇಲ್ಲ, ಮತ್ತೊಂದೂ ಇಲ್ಲ. 
ಧರ್ಮರಾಜನ ಗೆಲುವಲ್ಲಿ ನನಗ್ಯಾವ ಲಾಭವಿದೆ ಹೇಳು. 
ಈಗಾಗಲೇ ಇದೆಲ್ಲಾ ಯುದ್ದಕ್ಕೂ ರಾದ್ಧಾಂತಕ್ಕೂ ನಾನೇ ಕಾರಣ ಎಂಬ ಅಪವಾದ ನನ್ನ ತಲೆ ಮೇಲಿದೆ. 
ಧರ್ಮಜ ಗೆದ್ದರೂ ಸೋತರೂ ಇದು ಹೋಗದು. 

ಆದರೆ ಒಂದು ಮಾತು ನೆನಪಿನಲ್ಲಿಡು ಕರ್ಣ.
ಎಲ್ಲರಿಗೂ ಜೀವನ ಸವಾಲೆಸೆಯುತ್ತದೆ.
ಅನ್ಯಾಯ ಮಾಡುತ್ತದೆ. Life isn't fair to anybody.
ದುರ್ಯೋಧನನ ಬಾಳಿನಲ್ಲಿ ಅನ್ಯಾಯಗಳು ಸಾಲು ಸಾಲು ಜರುಗಿವೆ. 
ಯುದಿಷ್ಠಿರನ ಬಾಳಿನಲ್ಲೂ ಸಹ.

ಆದರೆ ಧರ್ಮ ಯಾವುದೆಂದು ನಿನ್ನ ಮನಸ್ಸಿಗೆ ಗೊತ್ತಿರುತ್ತೆ. ವಿವೇಚನೆ ಹೇಳುತ್ತೆ. 
ನಾವೇನೇನು ಎದುರಿಸಿದಿವಿ. ಎಷ್ಟು ಅಪಮಾನಗಳನ್ನ ಸಹಿಸಿದಿವಿ. 
ಎಷ್ಟು ಅನ್ಯಾಯಗಳು ನಮ್ಮ ಮೇಲಾಯ್ತು ಎಂಬುದಲ್ಲ ಮುಖ್ಯ. 
ಆ ಸಮಯದಲ್ಲಿ ನಾವೇನು ಮಾಡಿದೆವು ಎಂಬುದಷ್ಟೇ ನಮ್ಮ ವ್ಯಕ್ತಿತ್ವದ ಅಳತೆಗೋಲು. 
ಗೋಳಾಡುವುದನ್ನು ನಿಲ್ಲಿಸು. 
(Self Pity) ಸ್ವಾನುಕಂಪದ  ರೊಚ್ಚಿನಲ್ಲಿ ಮಾಡಿದ್ದೆಲ್ಲವನ್ನೂ, ಮಾಡುವುದೆಲ್ಲವನ್ನೂ ಸಮರ್ಥಿಸಿಕೊಳ್ಳಬೇಡ . 
ವಿವೇಕ ತೋರಿದ ದಾರಿಯಲ್ಲಿ ನಡೆವುದನ್ನ ಕಲಿ. 

ಜೀವನದಲ್ಲಿ ಅನ್ಯಾಯವಾಗಿದೆಯೆಂಬುದು ಧರ್ಮದ ಹಾದಿ ಬಿಟ್ಟು ನಡೆವುದಕ್ಕೆ ಸಿಕ್ಕ ಅನುಮತಿಯೆನ್ನಬೇಡ."


(ಇದು ವ್ಯಾಸ ಭಾರತದಲ್ಲಿ ಕಂಡಿಲ್ಲ. ನೆನಪಿನಾಳದಿಂದ ತೆಗೆದದ್ದು, ಯಾರೋ ಬರೆದಿದ್ದ, ಎಂದೋ ಓದಿದ್ದ ಸಂಭಾಷಣೆಯ ಮರುಸೃಷ್ಠಿ. ಮೂಲ ಬರಹಕ್ಕಿಂತ ಭಿನ್ನವಾಗಿರಬಹುದು. ಮೂಲ ಬರಹ ಬರೆದವರಿಗೆ ನನ್ನ ನಮನಗಳು. ಈ ಕೃಷ್ಣನ ನುಡಿಗಳು ನಮ್ಮ ದಾರಿದೀಪವಾಗಲಿ.)