Sunday, 5 June 2011

ಮಹಾ ಮಂಥನ-1 (bhgte ರವರ ರಂಗ ಪ್ರವೇಶ)

ಪೇಜಾವರ ಶ್ರೀ ವಿಶ್ವೇಶ್ವತೀರ್ಥರು ದಲಿತ ಕೇರಿಗೆ ಭೇಟಿ ಕೊಟ್ಟು, ಅಸ್ಪೃಶ್ಯತೆ ಮತ್ತು ಮತಾಂತರವನ್ನ ವಿರೋಧಿಸಿ, ಹಿಂದೂ ಐಕ್ಯತೆಯನ್ನ ಸಾಧಿಸುವ ಸಲುವಾಗಿ ದಲಿತರಿಗೆ ವೈಷ್ಣವ ದೀಕ್ಷೆ ಕೊಡಲು ಮುಂದಾದಾಗ, ಅವರ ಮಠಕ್ಕೆ ದಲಿತನೊಬ್ಬನ್ನನ್ನು ಪೀಠಾಧಿಪತಿಯಾಗಿಸುವಂತೆ ಕೆಲವು ಅಧಿಕಪ್ರಸಂಗಿಗಳು ಒತ್ತಾಯಿಸಿದ್ದರು. ಅದಕ್ಕೆ ಶ್ರೀಗಳು "ದಲಿತ ಕ್ರಿಶ್ಚಿಯನ್‌ರನ್ನು ಪೋಪ್ ಮಾಡ್ತೀರಾ?" ಎಂದು ಮಾರುತ್ತರ ನೀಡಿ ಮಠದ ಪೀಠಾಧಿಪತಿಗೂ, ವೈಷ್ಣವ ದೀಕ್ಷೆಗೂ ಇರುವ ವ್ಯತ್ಯಾಸವನ್ನು ತಿಳಿಸಿದರು. ಆ ಸಂಬಂಧಿತ ಅಂತರಜಾಲದ ಸುದ್ದಿಯೆಳೆಯಲ್ಲಿ (News Thread) ನಾನೂ ನನ್ನ proxy ಹೆಸರಿನಿಂದ (pkbys) ಭಾಗವಹಿಸಿದ್ದ ಸಂವಾದದ ನಿರೂಪಣೆಯ ಮೊದಲ ಕಂತು ಇದು. ಈ ಮೊದಲ ಭಾಗದಲ್ಲಿ ಕೇವಲ ಮುಂದೆ ನಡೆದ ಮಹಾ ಸಂವಾದದ ವೇದಿಕೆ ಮಾತ್ರವಿದೆ. ಒಂದು ರೀತಿ ಪಾತ್ರ ಪರಿಚಯವೆನ್ನಿ. ನಾಟಕದ ಸಂಭಾಷಣೆಯಂತೆ ಭಾಸವಾದರೆ ಓದಲು ಮತ್ತೂ ಚಂದ.. ಮುಂದಿನ ಕಂತುಗಳು ಬಹಳ ಕುತೂಹಲಕಾರಿ ಚರ್ಚೆಗಳನ್ನ ಒಳಗೊಂಡಿರುತ್ತವೆ.  ನನ್ನ ಹಿಂದಿನ ಬ್ಲಾಗ್ ಪೋಸ್ಟ್‌ನಲ್ಲಿ ಬರೆದ  bhgte ರವರು ಇದರಲ್ಲೂ ಪಾಲ್ಗೊಂಡರು. ಅವರ ಸಂವಾದ ಪ್ರವೇಶದೊಡನೆ ಈ ಕಂತು ಮುಗಿಯುತ್ತದೆ.. ಮುಂದಿನ ಕಂತಿನಲ್ಲಿ crusade ಮತ್ತು Manju ಬರುವುದರೊಂದಿಗೆ  ಸಂವಾದದ ವೇಗ ಮತ್ತು ಮೊನಚು ಹೆಚ್ಚಲಿದೆ.. crusade ರಿಂದ ಜ್ಞಾನ ಗಂಗೆ ಹರಿಯಲಿದೆ.

(ಅನವಶ್ಯಕ ಭಾಗಗಳನ್ನು ತೆಗೆದು ಪ್ರೂಫ್ ರೀಡ್ ಮಾಡಿರುವುದರಿಂದ, ಅಲ್ಪ ಸ್ವಲ್ಪ ಬದಲಾವಣೆಗೊಳಪಟ್ಟಿದ್ದರೂ ಸಂವಾದದ ಓಘ ಮತ್ತು ಭಾಗವಹಿಸಿದವರ ನೈಸರ್ಗಿಕ ನ್ಯಾಯಕ್ಕೆ ಧಕ್ಕೆಯಾಗದ ರೀತಿ ಇಲ್ಲಿ ನಿರೂಪಿಸಲಾಗಿದೆ. ಸಂವಾದ ಬೇರೆ ಬೇರೆ ವಿಷಯಗಳಿಗೆ ಹೊರಳಿದ್ದರಿಂದ ಚದುರಿದ್ದ   ಸಂಬಂಧಿತ ವಿಷಯಗಳನ್ನು ಒಂದೇ ಕಡೆ ಕೂಡಿಸುವ ಸಲುವಾಗಿ ಹಿಂದೆ ಮುಂದೆ ಮಾಡಲ್ಪಟ್ಟಿದೆ. ಆಯಾ ವಿಷಯಗಳಿಗೆ ಸಂಬಂಧಿಸಿದ ನಡೆದ ಸಂವಾದಗಳನ್ನ ಬಣ್ಣದ ಪಟ್ಟಿಕೆಗಳಿಂದ ಬೇರ್ಪಡಿಸಲಾಗಿದೆ.)17-09-10 (07:51 PM)[-]  milton
ಕಡೆಗೂ ತೋರಿಸಿದನಲ್ಲಪ್ಪಾ ತನ್ನ ಹುಟ್ಟುಗುಣವನ್ನ ಈ ಕೋಮುವಾದಿ ಸಾಮಿ. ಯಪ್ಪಾ ಸಾಮಿಗಳಾ, ನೀವೆಲ್ಲ ಸಾಮಾನ್ಯ ಜನರನ್ನು ಶೋಷಣೆ ಮಾಡಿ ಜೀವಿಸಿಯೇ ಅಭ್ಯಾಸ. ಆ ಕುಬುದ್ದಿ ಇಲ್ಲಿ ಕೂಡ ತೋರಿಸಿದ್ದೀರಾ. ಯಾವನೇ ಕ್ರಿಶ್ಚಿಯನ್ಗೂ ಅವನು ಧರ್ಮದಲ್ಲಿ ಅಪಾರ ಪಾಂಡಿತ್ಯ ಹೊಂದಿದರೆ ಅವನು ಪೋಪ್‌ ಆಗಲು ಸಾಧ್ಯವಿದೆ. ಹಾಗಾದರೆ ಅಪಾರ ಪಾಂಡಿತ್ಯ ಹೊಂದಿದ ದಲಿತನನ್ನು ಪೀಠಾಧಿಪತಿ ಮಾಡ್ತೀನಿ ಅನ್ನಿ. ಅದು ಸಾಧ್ಯವಾ ಸಾಮಿಗಳಾ? ಅದು ಬೇಡ ದಲಿತರಿಗೆ ಪ್ರವೇಶ ನಿಷೇಧಿಸುವ ದೇವಸ್ಥಾನಗಳೇ 95% ಕೂಡ. ಅಯ್ಯಪ್ಪ ಸಾಮಿಗಳಾ ಮೊದಲು ಮಾನವನಾಗೆ ಚಿಂತಿಸು ಎಲ್ಲಾ ಸರಿಯಾಗುತ್ತದೆ.
  
17-09-10 (08:09 PM)[-] girish
ಇಲ್ಲಿ ಸಮಾನತೆ ಮುಖ್ಯ. ಪೀಠಾಧಿಪತಿಯನ್ನ ಮಾಡುವುದು, ಮದುವೆ ಆಗುವುದು ಅವರವರ ವೈಯಕ್ತಿಕ ವಿಚಾರ. ಅದಕ್ಕೂ ಸಮಾನತೆಗೂ ಸಂಬಂಧವಿರುವುದಿಲ್ಲ. ‌ಮುಖ್ಯವಾಗಿ ಜಾತಿಗಳಿಂದ ಮೇಲು ಕೀಳು ಎನ್ನುವುದು ಇರಬಾರದೆಂಬುವುದು. ಅದೇ ಸಮಾನತೆ.
 
17-09-10 (09:15 PM) [-] santro
ಸರಿಯಾಗಿ ಹೇಳ್ದೆ ಗೆಳೆಯ.. ಪೀಠಾಧಿಪತಿ ಆದ್ರೇನೇ ದಲಿತರು ಶ್ರೇಷ್ಠರಾಗ್ತಾರೆ ಅನ್ನೋದು ಮೂರ್ಖತನ. ಈಗ ಪೀಠಾಧಿಪತಿಗಳಾಗಿರೊ ಬ್ರಾಹ್ಮಣರು ಕೂಡ ಶ್ರೇಷ್ಠರನ್ನೋದೂ ಕೂಡ ಅದಕ್ಕಿಂತಲೂ ದೊಡ್ಡ ಮೂರ್ಖತನ!!

17-09-10 (09:17 PM)[-] pkbys
ಪೇಜಾವರ ಶ್ರೀ ವಿಶ್ವೇಶ್ವತೀರ್ಥ ಸ್ವಾಮಿಗಳು
 ಚಿತ್ರಕೃಪೆ:http://shivallibrahmins.com/
ದಲಿತನನ್ನು ಸ್ವಾಮಿಯಾಗಿಸುವುದು (ಸನ್ಯಾಂಸ ದೀಕ್ಷೆ) ಮತ್ತು ಮಠವೊಂದರ ಪೀಠಾಧಿಪತಿಯಾಗುವುದಕ್ಕೂ ವ್ಯತ್ಯಾಸವಿದೆ... ದಲಿತ ಸಂನ್ಯಾಸಿಯಾಗುವುದು ಸಾಧ್ಯವಿದೆ... ಮತ್ತು ತನ್ನ ಜಾತಿಯ ಮಠದ ಪೀಠಾಧಿಪತಿಯಾಗಲೂ ಸಾಧ್ಯವಿದೆ... ಆದರೆ ಬ್ರಾಹ್ಮಣರ ಮಠದ ಪೀಠಾಧಿಪತಿಯಲ್ಲ.. ಸನ್ಯಾಸ ದೀಕ್ಷೆಗೂ, ಮಠದ ಪೀಠಾಧಿಪತಿಯಾಗುವುದಕ್ಕೂ ವ್ಯತ್ಯಾಸ ಅರಿತು ಮಾತಾಡಿ.. ಹಾಗೇ ದಲಿತರನ್ನು ಬಿಡಿ ನಿಮ್ಮವರೆ ಆದ ಯಾವುದಾದರೂ ಪ್ರೋಟೆಸ್ಟೆಂಟ್ ಪೋಪ್‌ ಆಗಿದ್ದಾರೆ ತಿಳಿಸಿ... ಪ್ರೊಟೆಸ್ಟೆಂಟ್ಸ್ ಗೆ ಏಕೆ ಅವರದೇ ಆದ ಚರ್ಚ್ಗಳಿವೆ.. ಮತ್ತು ಅವರೇಕೆ ರೋಮನ್ ಕ್ಯಾಥೋಲಿಕ್ ಪೋಪ್‌ ಆಗಲಾರರು... ಅವರಲ್ಲಿ ಪಾಂಡಿತ್ಯವಿರುವುದಿಲ್ಲವೇ...
17-09-10 (09:44 PM)[-] Hindoo
ಮತಾಂತರ
ಚಿತ್ರಕೃಪೆ: http://www.campusghanta.com/
ಆಹಾ milton, ಗೋಣಿಚೀಲ ಅಕ್ಕಿಗೆ ಪರಿವರ್ತಿತನಾದವನೇ.. ಬಿಳಿ ಜಿರಳೆಗಳು ಎಸೆದ ಎಂಜಲಿಗೆ ತೋರಿಸುತ್ತಿರುವ ನಿನ್ನ ಬೀದಿನಾಯಿ ನಿಯತ್ತಿಗೆ ವಾಕರಿಗೆ ಬರುತ್ತಿದೆ.. ಏನಂದೆ? ಯಾವನೇ ಕ್ರಿಶ್ಚಿಯನ್ಗೂ ಅವನು ಧರ್ಮದಲ್ಲಿ ಅಪಾರ ಪಾಂಡಿತ್ಯ ಹೊಂದಿದರೆ ಅವನು ಪೋಪ್‌ ಆಗಲು ಸಾಧ್ಯವಿದೆ ಅಂತ.. ಪೋಪ್‌ ಆಗೋದು ಬಿಡು, ಬಿಳಿಯರ ನಾಡಿನಲ್ಲಿ ನಿಮ್ಮನ್ನು ಅವರ ಚರ್ಚ್‌ಗೇ ಸೇರಿಸಲ್ಲ.. ಯಾಕೆಂದರೆ ಅವರ ದೃಷ್ಟಿಯಲ್ಲಿ ನೀವೆಲ್ಲರೂ ನಿಕೃಷ್ಟರು.. ಒಂದು ರೀತಿಯಲ್ಲಿ ಇದು ನಿಜ.. ಶತ ಶತಮಾನಗಳಿಂದ ಆಚರಿಸಿಕೊಂಡು ಬಂದ ನಿಮ್ಮ ಮಾತೃ ಧರ್ಮಕ್ಕೆ ಕಿಲುಬು ಕಾಸಿಗೋಸ್ಕರ ಕೃತಘ್ನತೆ ಬಗೆದವರು ನೀವು.. 5 ಕೊಟ್ಟರೆ ಆ ಕಡೆ 10 ಕೊಟ್ಟರೆ ಈ ಕಡೆ.. ಅವರಿಗೂ ಗೊತ್ತು ನಿಮ್ಮ ನಿಯತ್ತೇನಿದ್ದರೂ ಕವಡೆ ಕಾಸು ಎಸೆದವನ ಕಾಲು ನೆಕ್ಕುವುದೆಂದು.. ಭಾರತದಲ್ಲಿ ಸ್ವಾತಂತ್ರ್ಯ ದೊರಕಿರುವುದು ಹಿಂದೂ ಮತ್ತು ಮುಸ್ಲಿಮರಿಗೆ.. ಬಿಳಿಯರ ವಂಚನೆ, ದರ್ಪಕ್ಕೆ ತಲೆಬಾಗದ ಕೆಚ್ಚೆದೆಯ ದೇಶಪ್ರೇಮಿಗಳಿಂದ... ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಒಬ್ಬನೇ ಒಬ್ಬ ಕ್ರಿಶ್ಚಿಯನನ್ನು ಹೆಸರಿಸು.. ಅವರೆಲ್ಲಿದ್ದರು? ಬ್ರಿಟಿಷರ ಕಾಲು ನೆಕ್ಕುತ್ತಾ, ತಮ್ಮವರ ವಿರುದ್ಧವೇ ಹೋರಾಡುತ್ತಿದ್ದರು.. !!! ನಿಮ್ಮ ನಿಯತ್ತೇನಿದ್ದರೂ ಬಿಳಿಯರಿಗೆ.. ವಾಸ್ತವದಲ್ಲಿ ನೀವಿಂದೂ ಗುಲಾಮರೆ.. ಬಿಳಿಯರ ಅಣತಿಯಂತೆ ಇಂದಿಗೂ ವರ್ತಿಸುತ್ತೀರಾ..!! ಯಾವನಾದರೂ ಬಿಳಿಯೇತರ ಈವರೆಗೆ ಪೋಪ್ ಆದದ್ದಿದೆಯೇ ಬಾವಿಯೊಳಗಿನ ಕಪ್ಪೆಗಳಾ.. ಸ್ವಾಭಿಮಾನವೆನ್ನುವುದು ನಿಮ್ಮಲ್ಲಿ ನರಸತ್ತಿದೆ.. ನಿಮಗೆ ನಿಮ್ಮದೇ ಆದ ನೆಲೆಗಟ್ಟಿಲ್ಲದೆ, ಅತ್ತವೂ ಅಲ್ಲ, ಇತ್ತವೂ ಅಲ್ಲದ ಅಂತರ ಪಿಶಾಚಿಗಳ ತರ ಒಲಾಡುತ್ತಿದ್ದೀರಾ.... ಹಿಂದೂಗಳಾದ ನಮಗೆ ಯಾವನೇ ಹೊರಗಿನಿಂದ ಆಜ್ಞೆ ಕೊಡಬೇಕಾಗಿಲ್ಲ ನಿಮ್ಮ ಥರ.. ಯಾವನೇ ಬಿಳಿಯನೂ ನಮ್ಮಿಂದ ಏನನ್ನೂ ಕಿಸಿಯೋಕ್ಕಗಲ್ಲ... ಯಾಕೆಂದರೆ ನಮಗೆ ನಮ್ಮದೇ ಸ್ವಂತ ನೆಲೆಗಟ್ಟಿದೆ, ಸ್ವಾಭಿಮಾನವಿದೆ.. ದೇಶ ಕಟ್ಟಲು ನಮ್ಮನ್ನು ನಾವು ಬಲಿದಾನ ನೀಡಿದ್ದೇವೆ.. ನೀವೇನು ಮಾಡಿದ್ದೀರಾ? ಮೋಸ, ವಂಚನೆ, ದಗಾ, ಅಭಿವೃದ್ದಿಯ ಸೋಗಾಲಾಡಿ ತನದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ತೀರಾ... ನಿಮ್ಮನ್ನು ನೀವು ಶಾಂತಿಯ ಪ್ರತಿರೂಪವೆಂದು ಕರೆದು ಕೊಳ್ತೀರ....!! ನಿಮ್ಮದೇ ಆಜ್ಞಕರು ಇರಾಕ್, ವಿಯೆಟ್ನಾಂಗಳಲ್ಲಿ ಹರಿಸಿದ ರಕ್ತದ ಕೊಡಿ ಶಾಂತಿಯ ಪ್ರತಿರೂಪವೇ ಇನ್ನೊಬ್ಬರ ದುಖದಲ್ಲಿ ನೀವು ಸುಖ ಕಾಣುವ ಗೋಸುಂಬೆಗಳು .. ನಿನಗಿನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಕೆಳಗಿನ ಲಿಂಕ್ ನೋಡು...
ಬ್ರಿಟನ್ ಚರ್ಚುಗಳಲ್ಲಿ ಭಾರತೀಯ ಕ್ರೈಸ್ತರಿಗೆ ಸ್ವಾಗತವಿಲ್ಲ 
ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟ ಆದೀತು.. ಆದರೂ ಇದು ಕಹಿ ಸತ್ಯ..
ನಿನ್ನ ಪೂರ್ವಜರು ಯಾಕೆ ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸಿದರು ಅಂತ ತಿಳಿಯಬೇಕಿದ್ದರೆ ಕೆಳಗಿನ ಲಿಂಕ್ ನೋಡು : 
ಗೋವಾ ಇಂಕ್ವಿಸಿಷನ್

18-09-10 (10:06 AM)[-] das
ಶಭಾಸ್,  ಸಹನೆಯಿಂದ ಇದ್ದರೆ ಅವರಾಡಿದ್ದೆ ಆಟ.ಗೋಣಿಚೀಲ ಅಕ್ಕಿಗೆ ಪರಿವರ್ತಿತನಾದವನೇ-------ಸಾಕು, ಈ ಮಾತು, ನಿನ್ನ ಸಹನೆ ಕಟ್ಟೆ ಒಡೆದಿರುವುದ್ದಕ್ಕೆ. ಬಿಡಬೇಡ, ಸಿಕ್ಕಲ್ಲಿ ಈ ಪ್ರಗತಿಪುಂಗವರಿಗೆ ಇಡು ಪದಗಳ ಸುರಿಮಳೆ. ಸಾಕು. ಎಗ್ಗಿಲ್ಲದೆ, ಸಭ್ಯತೆ ಮೀರದೇ, ನಡಿ ಮುಂದೆ.

17-09-10 (09:19 PM)[-]  pkbys
ಮಿಲ್ಟನ್, ಸ್ಯಾಂಟ್ರೋ, ನಿಮ್ಮ ಪೂರ್ವಜರು ರೋಮ್ನ ರೋಮನ್ ಕ್ಯಾಥೊಲಿಕ್ರಲ್ಲ.. ಇಲ್ಲಿನವರೇ... ದಲಿತನನ್ನು ಸ್ವಾಮಿಯಾಗಿಸುವುದು (ಸನ್ಯಾಂಸ ದೀಕ್ಷೆ) ಮತ್ತು ಮಠವೊಂದರ ಪೀಠಾಧಿಪತಿಯಾಗುವುದಕ್ಕೂ ವ್ಯತ್ಯಾಸವಿದೆ... ದಲಿತ ಸಂನ್ಯಾಸಿಯಾಗುವುದು ಸಾಧ್ಯವಿದೆ... ಮತ್ತು ತನ್ನ ಜಾತಿಯ ಮಠದ ಪೀಠಾಧಿಪತಿಯಾಗಲೂ ಸಾಧ್ಯವಿದೆ... ಆದರೆ ಬ್ರಾಹ್ಮಣರ ಮಠದ ಪೀಠಾಧಿಪತಿಯಲ್ಲ..ಸನ್ಯಾಸ ದೀಕ್ಷೇಗೂ, ಮಠದ ಪೀಠಾಧಿಪತಿಯಾಗುವುದಕ್ಕೂ ವ್ಯತ್ಯಾಸ ಅರಿತು ಮಾತಾಡಿ.. ಹಾಗೇ ದಲಿತರನ್ನು ಬಿಡಿ ನಿಮ್ಮವರೆ ಆದ ಯಾವುದಾದರೂ ಪ್ರೋಟೆಸ್ಟೆಂಟ್ ಪೋಪ್‌ ಆಗಿದ್ದಾರೆ ತಿಳಿಸಿ.?? ಪ್ರೊಟೆಸ್ಟೆಂಟ್ಸ್ಗೆ ಏಕೆ ಅವರದೇ ಆದ ಚರ್ಚ್ಗಳಿವೆ ?? ಮತ್ತು ಅವರೇಕೆ, ರೋಮನ್ ಕ್ಯಾಥೋಲಿಕ್ ಪೋಪ್‌ ಆಗಲಾರರೇ.?? ಅವರಲ್ಲಿ ಪಾಂಡಿತ್ಯವಿರುವುದಿಲ್ಲವೇ.??

(ಈ ಪ್ರಶ್ನೆಗೆ ಮುಂದೆ bhgte ಉತ್ತರ ನೀಡುತ್ತಾರೆ)


17-09-10 (10:16 PM)[-] santro
ನೀವ್ ಅನ್ಕೊಡಂಗೆ ನಾನು ಕ್ರಿಶ್ಚಿಯನ್ ಅಲ್ಲ.. ಪಕ್ಕಾ ಬ್ರಾಹ್ಮಣ. ಆದ್ರೆ ನನ್ ಮನಸ್ಸಿಗಷ್ಟೇ! ಜಗತ್ತಿಗೆ ನಾನು ಒಬ್ಬ ಮನುಷ್ಯ ಅಷ್ಟೇ! ಜಾತಿ ಬೇಡ.. ಪ್ರೀತಿ ಬೇಕು!!

17-09-10 (10:44 PM)[-] pkbys
santro, ತಪ್ಪು ತಿಳುವಳಿಕೆಗೆ ವಿಷಾದಿಸುವೆ... ಜಾತಿ ಬೇಡ, ಪ್ರೀತಿ ಬೇಕು, ಆದರ್ಶ ಚೆನ್ನಾಗಿದೆ ಮಗು... ಆದರೆ ಜಾತಿ ಹೋದೊಡನೆ ಹಲವು ಸಂಸ್ಕೃತಿ, ಪರಂಪರೆ, ಆಚರಣೆಗಳು, ವೈವಿಧ್ಯತೆಗಳು ಹೋಗಿಬಿಡುತ್ತವೆ... ಜಾತಿ ಬೇಕು. ಆದರೆ ಜಾತಿಯ ಭೇಧ ಭಾವನೆ ಬೇಡ..  ಜಾತಿಯ ಪಕ್ಷಪಾತ, ಮೇಲರಿಮೆ, ಕೀಳರಿಮೆಗಳು ಬೇಡ... ಆದರೆ ನಮ್ಮ ಜಾತಿಯೊಡೆನೆ ಹೆಮ್ಮೆಯ ನಂಟು ನಮಗಿರಬೇಕು... ಬ್ರಾಹ್ಮಣರಿಗಷ್ಟೇ ಅಲ್ಲ... ಎಲ್ಲರಿಗೂ ಅದನ್ನೇ ಪೇಜಾವರರು ಹೇಳಿದ್ದು. ಸಮಾನತೆ ಬೇಕು... ಜೊತೆಗೆ ಜಾತಿಯೂ ಇರಬೇಕು.. ಅದು ನಮ್ಮ ಜಾತಿ ಎಂಬ ಹೆಮ್ಮೆಯೊಂದಿಗೆ, ಕೀಳರಿಮೆಯೊಂದಿಗಲ್ಲ...18-09-10 (11:24 AM)[-]  Raj BGM
pkbys ಯವರಿಗೆ, ನಾನು ನಿಮ್ಮಷ್ಟು ಜಾಣನಲ್ಲ ಆದರೂ ಒಂದು ಪ್ರಶ್ನೆ. ಪ್ರಶ್ನೆಗೂ ಮೊದಲು ನನ್ನ ಬಗ್ಗೆ ನಾನು ದಲಿತನಲ್ಲ ಅಲ್ಲದೆ ನಾನು ಕ್ರಿಶ್ಚಿಯನ್ನೂ ಅಲ್ಲ. ಬ್ರಾಹ್ಮಣರ ಮಠ ಕೇವಲ ಬ್ರಾಹ್ಮಣರ ಉದ್ದಾರಕ್ಕೆ ಇರುತಾವೊ ಅಥವಾ ಜಗತ್ತ ಉದಾರಕ್ಕೊ?.

18-09-10 (11:33 AM)[-] punda
ಬ್ರಾಹ್ಮಣರು ಮಾಂತಿಂದು ಹೆಂಡ ಕುಡಿದರೆ ಜಗತ್ತು ಉದ್ದಾರ ಆಗುತ್ತಾ? ನಿನ್ನ ಪ್ರಶ್ನೆಗೂ ಇದಕ್ಕೂ ಸಂಬಂಧ ಇಲ್ಲ ಅಂತ ಹೇಳಬೇಡ. ನಿಮ್ಮ ಉದ್ದೇಶ ಏನು ಅನ್ನೂದು ಮುಖ್ಯ. ನೀವುಗಳು ಹೇಳುವ ರೀತಿಯಲ್ಲೇ ಪ್ರಪಂಚ ಇರಬೇಕು ಅನ್ನೋದು ತಪ್ಪು.

18-09-10 (11:59 AM)[-] tana
ಎಲ್ಲಾ ಮಠಗಳು, ಮತಗಳು, ಪಂಗಡಗಳೂ ಸಂಬಂದ ಪಟ್ಟ ಜನಗಳ ಉದ್ದಾರಕ್ಕಾಗಿನೇ ಕೆಲಸಮಾಡುವುದು ಅದರಲ್ಲಿ ತಪ್ಪೇನಿದೆ???? ಬೇರೆಯವರಿಗೆ ತೊಂದರೆ ಕೊಟ್ಟಿಲ್ಲಂದ್ರೆ ಅಷ್ಟೇ ಸಾಕು.....

18-09-10 (02:34 PM)[-] pkbys
ಉತ್ತರ ತಡವಾದುದಕ್ಕೆ ಕ್ಷಮೆ ಇರಲಿ... Raj BGMರವರೆ.. ಸಂಬಂಧಪಟ್ಟ ಜನಕ್ಕೆ ಮಾತ್ರ ಉದ್ದಾರ ಮಾಡುವವರಾಗಿದ್ದರೆ. ಪೇಜಾವರರು ದಲಿತ ಕೇರಿಗೆ ಹೋಗಬೇಕಿತ್ತೇಕೆ... ಮಠಗಳು ನಡೆಸುವ ಶಾಲೆಗಳು, ವಿದ್ಯಾಸಂಸ್ಥೆಗಳು, .ಅವು ಯಾವ ಜಾತಿಯ ಮಠವೇ ಆಗಿರಲಿ.. ಎಲ್ಲರ ಒಳಿತಿಗಾಗೇ ನಡೆಸಲ್ಪಡುತ್ತವೆ.. ಆದರೆ ಆಡಳಿತ ಮಾತ್ರ ಆ ಜಾತಿಯ ಜನರಿಂದಲೇ ನಡೆಯುತ್ತದೆ... ಮಠ ಅಥವಾ ಯಾವುದೇ ಸಂಸ್ಥೆಯ ಸಮಾಜಮುಖಿ ಕಾರ್ಯಗಳು ಮತ್ತು ಅದರ ಆತಂರಿಕ ಆಡಳಿತ ವ್ಯವಸ್ಥೆಯನ್ನು ನೀವು ಬೆರೆಸಹೊರಟ್ಟಿದ್ದೀರಿ.

18-09-10 (12:11 PM)[-] SUDHAKAR
ಜಾತಿಗಳನ್ನು ಸೃಷ್ಠಿಸಿದವರು ನಾವು ಮಾನವರು. ಲ್ಲ ಜಾತಿಗಳಲ್ಲಿ ಅವರವರು ತಮ್ಮದೇ ಆದಂಥಹ ನೀತಿ ನಿಯಮಗಳನ್ನು ಮಾಡಿಕೊಂಡು ಅವುಗಳನ್ನು ಪಾಲನೆ ಮಾಡುತ್ತಾರೆ. ಇತರೆ ಯಾವುದೆ ಜಾತಿಯವರನ್ನು ತಂದು ಮುಖ್ಯಸ್ಥರನ್ನಾಗಿ ಮಾಡಿದಲ್ಲಿ ಅವರಲ್ಲಿ ಜಾತೀಯತೆ, ಕಚ್ಚಾಟ ವಗೈರ ಲ್ಲವೂ ಪ್ರಾರಂಭವಾಗಿ ಆಯಾ ಸಮಾಜದಲ್ಲಿ ನಂಬಿಕೆ, ವಿಶ್ವಾಸ ಪ್ರೀತಿ ವಗೈರೆ ಲ್ಲವೂ ಹಾಳಾಗಿ ಹೋಗುತ್ತೆ. ಅದು ಹೋಗಲಿ ನಿಮಗೆ ಕೆ ಬೇಕು ಇನ್ನೊಂದು ಜಾತಿಯ ಹಿರೇತನ ?!

18-09-10 (07:48 PM)[-] tanaa
ದೇಶಪ್ರೇಮ, ನಾವೆಲ್ಲರೂ ಒಂದು ಅಂತ ಕನ್ನಡ ಸಂಘಕ್ಕೆ ತಮಿಳ್ರನ್ನು ತಂದು ಅಧ್ಯಕ್ಷ ಮಾಡಕಾಗುತ್ತಾ??? ಹಾಗೇನೆ ಗೌಡರ ಸಂಘಕ್ಕೆ ಬ್ರಾಹ್ಮಣನನ್ನಾಗಲೀ , ಕುರುಬರನಾಗಲಿ ಅದ್ಯಕ್ಷ ಮಾಡುತ್ತಾರಾ????? ಆಯಾ ಸಂಸ್ಥೆಗಳು ಅವರವರ ಪದ್ದತಿಯಂತೆ ಕಾರ್ಯ ನಿರ್ವಹಿಸ ಬೇಕು. ಆದರೆ ಅವರ ಕಾರ್ಯ ಮಾತ್ರ ಸಮಾಜಮುಖಿಯಾಗಿರಬೇಕು.

18-09-10 (08:00 PM)[-] anu
ಬ್ರಾಹ್ಮಣ ಮಠಗಳಂತೆಯೇ ಬೇರೆ ಬೇರೆ ಮಠಗಳಿವೆ, ಅವನು ಯಾವುದೇ ಪಂಗಡದವನಿರಬಹುದು, ದಲಿತರಿಗೂ ಅವರದೇ ಆದ ಸ್ವಾಮಿಗಳೂ, ಅವರಿಗೊಂದು ಮಠಗಳೂ ಇವೆ. ಬ್ರಾಹ್ಮಣ ಮಠಗಳು ವೀರಶ್ಯೆವ ಮಠಗಳಂತೆಯೇ ಜಾಸ್ತಿ Organized. ಯಾವುದೇ ಮಠಗಳೂ ಕೂಡ Organize ಆದಾಗ ಸಮಾಜವನ್ನು ಜಾಸ್ತಿ ಪ್ರತಿನಿದಿಸಬಹುದು.18-09-10 (10:07 AM)[-] sumsumne
ದಲಿತರು ಮೆಲ್ಜಾತಿಗೆ ಅಥವಾ ಬೇರೆ ಧರ್ಮವನ್ನು ಸೇರಿದರೊ ಅವರು ಹೊರಗಿನವರಂತೆ ನೋಡಲಾಗುವುದು. ಮೇಲ್ಜಾತಿಗೆ ಸೇರಿದ ದಲಿ ಸರಕಾರ ನೀಡುವ ಸವಲತ್ತನ್ನು ಬಿಡುವನೆ? ಇತ್ತಿಚೆಗೆ ದಲಿತರು ಬೌದ್ದ ರ್ಮಕ್ಕೆ ಸೇರುತ್ತಿದ್ದಾರೆ ಆದರೆ ಹಿಂದುಳಿದವರಿಗೆ ನೀಡುವ ಎಲ್ಲ ಸವಲತ್ತನು ಬಿಡುವುದಕ್ಕೆ ಇವರಿಂಸಾಧ್ಯವೇ? ಇನ್ನು ಬೌದ್ಧ ಧರ್ಮದ ತಿರುಳು ಆಹಿಂಸೆ, ಸಸ್ಯಾಹಾರಿಗಳಾಗಲು ಇವರಿಂಸಾಧ್ಯವೇ?

18-09-10 (02:39 PM)[-] pkbys
sumsumne ರವರೆ, ದಲಿತ ಬೌದ್ದನಾಗಲು ಕಾರಣ, ಮತಾಂತರದ ನಂತರವೂ ಅವನಿಗೆ ಸಿಗುವ ಸೌಲಭ್ಯಗಳು ಮುಂದುವರಿಯುತ್ತದೆ... ಸರ್ಕಾರಿ ಲೆಕ್ಕದ್ದಲ್ಲಿ ಆತ ಎಂದೆಂದಿಗೂ ದಲಿತನೇ... ಅಷ್ಟೇ ಏಕೆ, ನಿಜವಾಗಲೂ ಅವರೇನು ಮದ್ಯ ಮಾಂಸ ಬಿಡುವುದಿಲ್ಲ. ಹೇಳಿಕೊಳ್ಳಲ್ಲು ನಾವು ನವಬೌದ್ದರೆನ್ನುತ್ತಾರೆ... ಮನೆಯಲ್ಲೊಂದು ಬುದ್ದನ ಪೋಟೋ, ಅಂಬೇಡ್ಕರ್ ಫೋಟೋ ಬರುತ್ತದೆ... ಅಷ್ಟೇ.. ಅದೇ ಕ್ರೈಸ್ತನಾದರೆ ಇಲ್ಲ... ಈಗ ದಲಿತ ಕ್ರೈಸ್ತರಿಗೂ ಅದನ್ನು ವಿಸ್ತರಿಸಲು ಕೋರಿದ್ದಾರೆ...ನೀಡಿಬಿಟ್ಟರೆ... ಎಲ್ಲೆಲ್ಲೂ ಚರ್ಚ್ನ ಆಟಾಟೋಪವೇ...

 18-09-10 (05:07 PM)[-]  muthalik
ಹಿಂದು ಧರ್ಮದಲ್ಲಿರುವಷ್ಟು ಜಾತಿ ಭೇದ ಬೇರೆ ಯಾವ ಧರ್ಮದಲ್ಲಿಯು ಇಲ್ಲ ಅಸ್ಪೃಶ್ಯತೆ ಹಿಂದಿನ ಕಾಲದಲ್ಲಿಯೂ ಇತ್ತು ಇಂದಿನ ಕಾಲದಲ್ಲಿಯೂ ಇದೆ, ಏಕಲವ್ಯನಿಂದ ಹಿಡಿದು ಅಂಬೇಡ್ಕರ್ವರೆಗೂ ಇತ್ತು ಅಸ್ಪೃಶ್ಯತೆ ಹಿಂದು ಧರ್ಮದಲ್ಲಿರುವ ಕಪ್ಪು ಚುಕ್ಕೆ

18-09-10 (05:42 PM)[-] pkbys
ಏಕಲವ್ಯ, ಅರ್ಜುನ ಮತ್ತು ದ್ರೋಣಾಚಾರ್ಯರು
ಚಿತ್ರಕೃಪೆ: http://media.radiosai.org
muthalik ಅಂಬೇಡ್ಕರ್ ಗೆ ಓದಿಸಿದ್ದು,  ಅಂಬೇಡ್ಕರ್ ಎಂಬ ಬ್ರಾಹ್ಮಣ ಶಿಕ್ಷಕರುಅವರ ಗೌರವಾರ್ಥ ತನ್ನ ಸರ್ ನೇಮ್ ಆಗಿದ್ದ ಅಂಬಾವಾಡೇಕರ್ ಅನ್ನು, ಅಂಬೇಡ್ಕರ್ ಎಂದು ಬದಲಿಸಿಕೊಂಡರು. ಅಂದು ಆ ಬ್ರಾಹ್ಮಣ ಓದಿಸದೇ ಇದ್ದಿದರೆ ಇಂದು ಬ್ರಾಹ್ಮಣರು ಪ್ರತಿಭೆ ಇದ್ದರೂ ಮೀಸಲಾತಿಯಿಂದ ತುಳಿಯಲ್ಪಡುತ್ತಿರಲಿಲ್ಲ..

ಏಕಲವ್ಯ ಅಸ್ಪೃಶ್ಯ ಜಾತಿಗೆ ಸೇರಿದವನಾಗಿರಲಿಲ್ಲ. ಆತ ಒಬ್ಬ ಬೇಡ, ಅರಮನೆಯೊಡನೆ ಮಾಡಿಕೊಂಡ ಒಪ್ಪಂದದಂತೆ ದ್ರೋಣ ಕೇವಲ ರಾಜಕುಮಾರರಿಗೆ ಮಾತ್ರ ಪಾಠ ಮಾಡಬೇಕಿತ್ತು... 

22-09-10 (01:00 AM)[-] Hindoo
ಮುತಾಲಿಕ್, ಗುಲಾಮರು ಎಂಬ ಪದವನ್ನು ಹುಟ್ಟುಹಾಕಿದವರು ಕ್ರೈಸ್ತರೇ. ಆಫ್ರಿಕಾ ಕ್ರೈಸ್ತೀಕರಣಕ್ಕೆ ಮುಂಚೆ ವ್ಯವಸಾಯ ಮಾಡಿ ಬದುಕುವ ಜನರ ನೆಮ್ಮದಿಯ ಬೀಡಾಗಿತ್ತು. ಪಾದ್ರಿಗಳು ಬಂದರು, ಮಂಡಿಯೂರಿ ಕಣ್ಣು ಮುಚ್ಚಲು ಹೇಳಿದರು... ಕಣ್ಣು ತೆರೆಯಬೇಕಾದರೆ ಇವರ ಕೈಲಿ ಅವರ ಬೈಬಲ್ ಇತ್ತು, ಅವರ ಕೈಲಿ ಇವರ ಭೂಮಿ ಇತ್ತು.. ಮುಂದಿನದು ಕರಿಯರ ನರಕ ಸದೃಶ ಬದುಕು... ಗುಲಾಮರನ್ನಾಗಿಸಿ ಅವರಿಗೆ ಸ್ವಂತ ನೆಲೆಗಟ್ಟೇ ಇಲ್ಲದಂತೆ ಮಾಡಿದರು.18-09-10 (02:47 PM)[-]  bhgte
pkbys ರವರೇ, Orthodox, Eastern Orthodox, the Oriental Orthodox, the Roman Catholic, Protestant, church of England, Church of Scotland, Calvinist, Assyrian Christians, Anglicans, Ebionites, Arians, Nestorianists, Adventists, Anabaptists, Baptists, Congregationalists, Lutherans, Methodists, Presbyterians, Reformed, and Pentecostals ಇತ್ಯಾದಿ ಇತ್ಯಾದಿ ಇವರೆಲ್ಲರಿಗೂ ಬೇರೆ ಬೇರೆ ಚರ್ಚುಗಳಿವೆ.ಇರೆಲ್ಲರೂ ಹಿಂದೂಗಳಲ್ಲಿರುವ ಜಾತೀಯತೆಯನ್ನು ಮತಾಂತರ ಮಾಡುವಾಗ ಎತ್ತಿ ತೋರಿಸುತ್ತಾರೆ.ತಮ್ಮಲ್ಲೂ ಈ ರೀತಿ ಡಿವಿಜನ್ಸ್ ಇದೆ ಎನ್ನುವುದನ್ನು ಹೇಳುವುದಿಲ್ಲ.

ಪೋಪ್‌ ಆಗುವವನು CAUCASIAN WHITE MAN ಆಗಿರಲೇ ಬೇಕು.ಆಫ್ರಿಕದ ಕರಿಯರು, ಬಡ ಇಂಡಿಯನ್ಸ್, ಇವರಿಗೆಲ್ಲಾ ಕೊಡಲು ಸಾಧ್ಯವೇ ಇಲ್ಲ. ಬಿಳಿಯ ಬಣ್ಣ, ಕಾಕೇಷಿಯನ್ ಬುಡಕಟ್ಟು, ಕೆಂಚು ಕೂದಲು, ಹಸಿರು ಅಥವಾ ಬಿಳಿಯ ಬೆಕ್ಕಿನ ಕಣ್ಣು ಇವೆಲ್ಲಾ ಕಡ್ಡಾಯವಾಗಿ ಇರಲೇಬೇಕು.ಯೂರೋಪ್ ಅಥವಾ ಅಮೇರಿಕದಲ್ಲಿ ಹುಟ್ಟಿರಬೇಕು.

Mr.Milton, ದುಬೈ, ಬಹರೀನ್, ಒಮಾನ್, ಕುವೈಟ್ ಇಲ್ಲೆಲ್ಲಾ ಬಿಳಿಯರಿಗೆ ಬೇರೆ ಚರ್ಚ್, ಇಂಡಿಯನ್ಸ್ ಗೆ ಬೇರೆ ಚರ್ಚ್ ಇದೆ. ಇವತ್ತಿಗೂ ಇಂಡಿಯನ್ಸ್ ಎಲ್ಲಾದರೂ ಬಿಳಿಯರ ಚರ್ಚ್ಗೆ ಹೋದರೆ ಗೇಟ್‌ನಲ್ಲೇ ಕತ್ತು ಹಿಡಿದು ಆಚೆ ತಳ್ಳುತ್ತಾರೆ. ಇದನ್ನ ನಾವು ಸ್ವತಃ ನೋಡಿದ್ದೇವೆ.

ಪ್ರಮುಖ ಕ್ರೈಸ್ತ ಪಂಗಡ(ಜಾತಿ)ಗಳು
ಚಿತ್ರಕೃಪೆ: http://www.jesuit.org.sg18-09-10 (03:01 PM)[-] pkbys
ನಿಮ್ಮನ್ನೇ ಕಾಯುತ್ತಿದ್ದೆ bhgte. ಇನ್ನೂ ನಿಮ್ಮ ರಂಗಪ್ರವೇಶವೇಕೆ ಆಗಿಲ್ಲ ಎಂದು... ಇನ್ನು ಹರಿಯುವಳು ಅರಿವಿನ ಗಂಗೆ...

18-09-10 (03:58 PM)[-]  bhgte
ಮುಸ್ಲಿಮರಲ್ಲೂ ಪಂಗಡಗಳಿವೆ.ಅವನ್ನು ಗುಂಪು ಎನ್ನಿ, ಪಂಗಡ ಎನ್ನಿ, ಜಾತಿ ಎನ್ನಿ, ಕ್ಯಾಸ್ಟ್ ಅನ್ನಿ, Sect ಅನ್ನಿ, ಅಂತೂ ಡಿವಿಜನ್ಸ್ ಇವೆ. ಹಿಂದೂಗಳನ್ನು ಮಾತ್ರ ಅನೇಕ ಜಾತಿ ಉಪಜಾತಿಗಳನ್ನು ಹೊಂದಿರುವುದಕ್ಕೆ ವಿಶ್ವಾದ್ಯಂತ ತೆಗಳಲಾಗುತ್ತದೆ. ಉದಾಹರಣೆಗೆ ಮುಸ್ಲಿಮರಲ್ಲಿ Shiya, Sunni, Bohra, Byaari, Maple, Sufi, Ahammadiya, mahammadiyya, Kurdish, Sunni Hanafi, Mahdavism,Din-i-Ilahi, Zaidiyyah, Alawi, Alevi, Kharijite Islam, Ibadi, Qadiri, Bektashi, Chishti, Naqshbandi, Oveysi, Suhrawardiyya, Salafi, Liberals, Quraniyoon, Moorish, Druze, Ahl-e Haqq, Bábism, Bahá'í Faith, Nuwaubu ಇತ್ಯಾದಿ 200 ಕ್ಕೂ ಹೆಚ್ಚು Sect ಗಳಿವೆ. 

 ಹಿಂದೂ ಅಥವಾ ಸನಾತನ ಧರ್ಮ ಹತ್ತು ಸಾವಿರ+ ವರ್ಷ ಹಳೆಯ ದಾದ್ದರಿಂದ ನಮ್ಮಲ್ಲಿ ಜಾತಿಗಳು ಅಥವಾ Sect ಗಳು ಸ್ವಲ್ಪ ಜಾಸ್ತಿ ಇರಬಹುದು. ಈಚೆಗೆ ಹುಟ್ಟಿದ ಧರ್ಮಗಳಲ್ಲಿ ಸ್ವಲ್ಪ ಕಡಿಮೆ ಇರಬಹುದು.                  

ಇಸ್ಲಾಮಿಕ್ ಪಂಗಡಗಳು ಮತ್ತವುಗಳ ವಿಂಗಡಣೆ, ಹೆಚ್ಚಿನ ಮಾಹಿತಿಗೆ ನೋಡಿ
http://www.oprev.org/2010/01/landscape-of-islam/

18-09-10 (04:10 PM)pkbys
ನಾಳೆ ಹೊಸ ಮತ ಸ್ಥಾಪಿಸಿದರೂ ಹಾಗೇ ಆಗುತ್ತದೆ... ಭಿನ್ನತೆಯನ್ನು ಹುಡುಕುವುದು ಮಾನವ ಧರ್ಮ... ಇಲ್ಲದಿದ್ದರೆ ನಾವು ಕುರಿಗಳೇ ಆಗುತ್ತಿದ್ದೆವು. ಹಿಂದು ಪಂಗಡಗಳೇಕೆ ಹೆಚ್ಚು ಎಂದು ವಿವರಿಸಿರುವುದೇ ನಿಮ್ಮ ಅರಿವಿನ ಆಳ, ವಿಶ್ಲೇಷಣೆಯ ಮಟ್ಟ ತೋರಿಸುತ್ತದೆ...

21-09-10 (10:29 PM)[-] Hindoo
ಒಬ್ಬ ಶಿಯಾ ಇನ್ನೊಬ್ಬ ಸುನ್ನಿಯ ಯಾವುದೇ ಧಾರ್ಮಿಕ ಆಚಾರ ವಿಚಾರಗಳಲ್ಲಿ ಪಾಲ್ಗೊಳ್ಳೋಲ್ಲ. ಅಹಮದೀಯ ಮುಸ್ಲಿಮನೇ ಅಲ್ಲ ಎನ್ನುತ್ತಾರೆ ಇವರಿಬ್ಬರು.... ಇರಾಕಲ್ಲಿ ನಡೆಯುತ್ತಿರುವುದೇನು? ಶಿಯಾ ಸುನ್ನಿಗಳ ಮಾರಾಮಾರಿ. ಒಬ್ಬರ ಪ್ರಾರ್ಥನಾ ಸ್ಥಳಕ್ಕೆ ಇನ್ನೊಬ್ಬರ ದಾಳಿ. ಅದೂ ಧರ್ಮದ ಹೆಸರಲ್ಲಿ..!!! ಒಬ್ಬ ಪ್ರೋಟೆಸ್ಟಂಟ್ ಇನ್ನೊಬ್ಬ ಕ್ಯಾಥೋಲಿಕ್ಕನ ಚರ್ಚ್ ಗೆ ಹೋಗಲ್ಲ. ಇವರಿಬ್ಬರು ಆರ್ತೊಡಾಕ್ಸನ್ನು ಅಲ್ಲಗಳೆಯುತಾರೆ..!!! ಒಂದೇ ಬೈಬಲ್..!! ಒಬ್ಬನದ್ದು ಸರಿ ಇಲ್ಲ ಅನ್ನುತ್ತಾರೆ ಇನ್ನೊಬ್ಬರು...!! ಇದು ತಾನೇ ಸಮಾನತೆ? ಹಿಂದೂಗಳಲ್ಲಿ ನೂರಾರು ಧರ್ಮಗ್ರಂಥಗಳು, ಸಾವಿರಾರು ಕಟ್ಟುಕಟ್ಟಳೆಗಳು. ಆದರೆ ಒಂದೇ ಭಗವದ್ಗೀತೆ, ಒಂದೇ ವೇದಗಳು. ಒಬ್ಬ ಶಿವಭಕ್ತನ ಮನೆಯಲ್ಲಿ ನಡೆವ ಪೂಜೆಗೆ, ವಿಷ್ಣು ಭಕ್ತ ಪ್ರೀತಿಯಿಂದ ಪಾಲ್ಗೊಳ್ಳುತ್ತಾನೆ.. ಒಬ್ಬ ಇನ್ನೊಬ್ಬನ ಆಚಾರವನ್ನು ಗೌರವಿಸುತ್ತಾನೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ವಿಶಾಲ ಮನೋಭಾವ ಹಿಂದೂಗಳದ್ದು. ದೇವನೊಬ್ಬ ನಾಮ ಹಲವು ಎಂಬುದನ್ನು ಸಾರುತ್ತವೆ ಹಿಂದೂ ಧರ್ಮಗ್ರಂಥಗಳು. ಒಂದು ವೃತ್ತಕ್ಕೆ ಒಂದೇ ಕೇಂದ್ರಬಿಂದು. ಆದ್ರೆ ಅದನ್ನು ತಲುಪಲು ಪರಿಧಿಯಿಂದ ಅನಂತ ಬಿಂದುಗಳಿವೆ. ಇದೇ ಹಿಂದೂ ಧರ್ಮದ ಸಾರ. ಬೈಬಲ್, ಕುರಾನ್ ಗಳು ನಾನು ಮಾತ್ರ ಸರಿ, ಉಳಿದದ್ದು ತಪ್ಪು ಎನ್ನುವುದನ್ನು ಬಿಂಬಿಸುತ್ತದೆ. ಯೇಸು ಇಲ್ಲದಿದ್ದರೆ ಕ್ರೈಸ್ತ ಧರ್ಮವೇ ಇಲ್ಲ, ಮುಹಮ್ಮದ್ ಇಲ್ಲದಿದ್ದರೆ ಇಸ್ಲಾಂ ಧರ್ಮವೇ ಇಲ್ಲ.. ಆದರೆ ಹಿಂದುತ್ವ ಹಾಗಲ್ಲ.. ರಾಮ ಇಲ್ಲಾಂದ್ರೂ ಹಿಂದುತ್ವ ಮುಂದುವರಿಯುತ್ತದೆ, ಕೃಷ್ಣಾ ಇಲ್ಲಾಂದ್ರೂ ಹಿಂದುತ್ವ ಮುಂದುವರಿಯುತ್ತದೆ... ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಕೇಂದ್ರಿಕೃತವಾಗಿಲ್ಲ ಹಿಂದುತ್ವ, ಬದಲಾಗಿ ಸಾವಿರಾರು ದಾರ್ಶನಿಕರ ಜ್ಞಾನ ದೀವಿಗೆಯಿಂದ ಜ್ವಾಜಲ್ಯಮಾನವಾದ ಧರ್ಮ. ಇದು ನಿತ್ಯ ಸತ್ಯ. ನಿರಂತರ. 
 
--------> ಮುಂದುವರಿದಿದೆ,,, ಮಹಾ ಮಂಥನ-2 (crusade ಮತ್ತು Manju ತರ್ಕಗಳು)

6 comments:

 1. ನೀವೆಲ್ಲ ಏನು ಮಾತನಾಡುತ್ತಿದ್ದಿರ,...? ಬುದ್ದಿವಂತರಾದವರು ಯಾರು ಧರ್ಮದ ಬಗ್ಗೆ ಮಾತಡಲ್ಲ,..ಆದರೆ ಒಗಳೊದು -ತೆಗಳೊದು ತಪ್ಪು,...ಯಾರೊ ಏನ ಮಾಡಿದ್ದಾರೆ ಅಂತ ನಮ್ಮ "ತನವನ್ನ ಹರಾಜಿನಲ್ಲಿ" ಹಿಡೊದಾ,..?

  ReplyDelete
 2. ಪ್ರಿಯ ಚೇತನ್, ಇಲ್ಲಿ ತೆಗಳಿಕೆ ಏನು ಬಂತು, ಇಲ್ಲೊಂದು ಚರ್ಚೆ ಇತ್ತು.. ಸತ್ಯವಿತ್ತು. ಅಸಭ್ಯ ಮಾತುಗಳಿಲ್ಲದ ಚರ್ಚೆ, ಬುದ್ದಿವಂತರಾದವರು ಧರ್ಮದ ಬಗ್ಗೆ ಏಕೆ ಮಾತನಾಡಬಾರದು ನನಗೆ ಗೊತ್ತಾಗುತ್ತಿಲ್ಲ.. ದಡ್ಡರು ಮಾತನಾಡಬೇಕೆಂದೇ? ಮಾತನಾಡಿ ಕೆಲವಾದರೂ ತಪ್ಪು ತಿಳುವಳಿಕೆಗಳು ನಿವಾರಿಸಲ್ಪಟ್ಟರೆ ಒಳ್ಳೆಯದಲ್ಲವೆ.. "ನಮ್ಮತನದ ಹರಾಜು" ಎಂದು ಯಾವುದರ ಬಗ್ಗೆ ಹೇಳುತ್ತಿರುವಿರಿ, ಅದೂ ನನಗರ್ಥವಾಗುತ್ತಿಲ್ಲ..(ನಾನು ದಡ್ಡ ಬಿಡಿ) ಮುಂದಿನ ಕಂತುಗಳನ್ನ ನಿರೀಕ್ಷಿಸಿ.. ನಿಮಗೆ ತೃಪ್ತಿಯಾಗಬಹುದು. ನೀವು ಮತ್ತು ಪುಂಡ ಇದರಲ್ಲಿ ಭಾಗವಹಿಸಿರಲಿಲ್ಲ.. ಪುಂಡ ಅವರದು ಇಲ್ಲಿ ಬರುವ ಒಂದೇ ಕಾಮೆಂಟ್ ಮೊದಲ ಮತ್ತು ಕೊನೆಯದು.

  ReplyDelete
 3. ರಾಜಿಯವರೆ..
  ಹೌದು ದಲಿತ ಕ್ರಿಶ್ಚಿಯನ್‌ರನ್ನು ಪೋಪ್ ಮಾಡೊದಿಕ್ಕೆ ಆಗೋದಿಲ್ಲ.. ಸರಿ...!
  ನಮ್ಮ ಬ್ರಾಹ್ಮಣ ಮತ್ತು ಲಿ0ಗಾಯತ ಮಠಗಳಲ್ಲಿ ಸಹ ಪ0ಕ್ತಿ ಭೊಜನ ( ಶ್ರೀ ಗಳನ್ನು ಹೊರತುಪಡಿಸಿ - ಜನ ಸಾಮನ್ಯರಿಗೆ) ವ್ಯವಸ್ತೆ ಇಲ್ಲ ಯಾಕೆ..?

  ReplyDelete
 4. ಗೋಣಿಚೀಲ ಅಕ್ಕಿಗೆ ಪರಿವರ್ತಿತನಾದವನೇ ............ ಎಂಥ ಮಾತು, ಇಂಥ ಅಭಿಮಾನ್ಯ ಶೂನ್ಯ ಸಂತತಿಯರೀರುವುದರಿಂದಲೇ ನಾವೀಗ ನಮ್ಮದೇ ನೆಲದಲ್ಲಿ ಪರಕೀಯರಾಗ ಹೊರಟಿದ್ದೇವೆ. ಆ ದಿನಗಳು ದೂರವಿಲ್ಲವೇನೋ, ಇತಿಹಾಸ ಮರುಕಳಿಸಬಹುದು. ಒಂದು ವರ್ಗಗದ ಜನರ ಸಂತುಷ್ಟಿಗೊಳಿಸಲು ಒದ್ದಾಡುವ, ಸ್ವಂತ ವ್ಯಕ್ತಿತ್ವವಿಲ್ಲದ, ಜಿಹುಜೂರ್ ರಾಜಕಾರಣಿಗಳು, ಕಣ್ಣುಮುಚ್ಚಿ ಹಿಂಬಾಲಿಸುವ ಹಿಂಬಾಲಕರು. ಎತ್ತ ಸಾಗುತ್ತಿದೆಯೋ ಭಾರತ.

  ReplyDelete
 5. ವೀರೇಂದ್ರರವರೆ ಮಠಗಳಲ್ಲಿ ಸಹಪಂಕ್ತಿ ಭೋಜನ ಇದೆ. ಹಾಗೆಯೇ ಪ್ರತ್ಯೇಕ ಭೋಜನವೂ ಇದೆ. ಉಡುಪಿ ಕೃಷ್ಣಮಠ, ಧರ್ಮಸ್ಥಳ, ಮೊದಲಾದೆಡೆಯಲ್ಲೆಲ್ಲ ಎರಡೂ ಇದೆ. ನಾನೂ ಸಹಪಂಕ್ತಿ ಭೋಜನಕ್ಕೆ ಹೋಗುತ್ತೇನೆ. ಪ್ರತಿಯೊಂದು ಕಡೆಯೂ ಆಯಾ ಸ್ಥಳಗಳ ಸಂಪ್ರದಾಯಗಳಿರುತ್ತವೆ. ಕೆಲವು ಕಡೆ ಬ್ರಾಹ್ಮಣ ವಟುಗಳ ಪ್ರತ್ಯೇಕ ಪಂಕ್ತಿಭೋಜನಕ್ಕೆ ಹೋಗಬೇಕೆಂದರೆ ಸಂಪ್ರದಾಯಗಳನ್ನ ಪಾಲಿಸಬೇಕಾಗುತ್ತದೆ. ಎಲ್ಲರಿಗೂ (ಸಂಪ್ರದಾಯಗಳನ್ನ ಪಾಲಿಸಲು ಬಾರದ, ಅಥವಾ ಇಚ್ಚಿಸದ ಬ್ರಾಹ್ಮಣರಿಗೂ ಕೂಡ) ಪ್ರವೇಶವಿಲ್ಲ. ಸಂಪ್ರದಾಯಗಳಲ್ಲಿ ಕೆಲವು (ಮೇಲುವಸ್ತ್ರ ಕಳಚುವುದು, ಊಟವೆಲ್ಲ ಬಡಿಸುವವರೆಗೆ ಕಾದು ನಂತರ ಆಪೋಷನ ತೆಗೆದುಕೊಂಡು ಊಟ ಮಾಡುವುದು)ಎಲ್ಲರೂ ಮಾಡಲಾರರು, ಮಾಡಲು ಬರುವುದೂ ಇಲ್ಲ, ಅನವಶ್ಯಕ ಅಥವಾ ಹಾಸ್ಯಸ್ಪದ ಎನಿಸಲೂ ಬಹುದು. ಆದರೆ ಸಂಪ್ರದಾಯಗಳನ್ನ (ಅದನ್ನ ನಮ್ಮ ಆಹಾರಪದ್ದತಿಯ table manners ಎನ್ನಬಹುದು) ಗೌರವಿಸುವ, ಪಾಲಿಸುವ ಜನರು, ಪಾಲಿಸದ ಜನರಿಗೆ ಹಾಸ್ಯಾಸ್ಪದವೆಂದೋ, ಅತಿ ಆಚಾರಿಗಳೆಂದೋ [ಅತ್ಯಾಚಾರಿಗಳಲ್ಲ :)] ಎನಿಸಬಹುದು, ಅಂತೆಯೆ, ಪಾಲಿಸದ ಜನರು ಸಂಪ್ರಾದಯಸ್ಥರಿಗೆ ಅನಾಗರಿಕ, ಅಸಭ್ಯರೆನಿಸಿ ಅವರೊಡನೆ ಊಟ ಮಾಡುವುದು ವಾಕರಿಕೆ ತರಿಸಬಹುದು. ಬೆಳೆದು ಬಂದ ವಾತಾವರಣದ ಆಧಾರದ ಮೇಲೆ ಮನಸ್ಸು ಮಧುಮಾಂಸ ಭಕ್ಷಣೆ ಮಾಡುವವರೊಂದಿಗೆ ಭೋಜನ ಮಾಡಲು ನಿರಾಕರಿಸಬಹುದು. ನನ್ನಂಥವರು ಕಚೇರಿಯಲ್ಲಿ ಊಟಮಾಡುವಾಗ ಮಾಂಸಾಹಾರಿಗಳು ಮಾಂಸದ ಪದಾರ್ಥಗಳನ್ನ ತಂದಿದ್ದರೆ ಅವರೊಡನೆ ನಾನು ಕೂರುವುದಿಲ್ಲ.. ನಾನೇನೂ ತಿನ್ನುವುದಿಲ್ಲವಲ್ಲ, ಅವರು ತಿಂದರೇನು, ಅವರ ಊಟ ಅವರ ಬಾಯಿ, ನನ್ನ ಊಟ ನನ್ನ ಬಾಯಿ ಎಂದರೆ ಮನಸ್ಸು ಕೇಳುವುದಿಲ್ಲ.. ಏನೋ ಹಿಂಸೆ.. ಅವರು ಸಸ್ಯಾಹಾರ ತಂದ ದಿನ ಅವರೊಡನೆ ಅದೇ ಮೇಜಿನಲ್ಲಿ ಊಟಮಾಡುವ ನನಗೆ ಅವರು ಮಾಂಸಾಹಾರ ತಂದ ದಿನ ಆಗುವಂತೆ, ಸಂಪ್ರದಾಯಸ್ಥರಿಗೆ ಮಾಂಸಾಹಾರಿಗಳು, ಆ ಸಮಯದಲ್ಲಿ ಮಾಂಸಾಹಾರ ಮಾಡದಿದ್ದರೂ ಮಾಂಸಾಹಾರಿ ಎಂಬ ವಿಷಯವೇ ಹಿಂಸೆ ತರುತ್ತದೆ.
  ನಾವು ಊಟ ಹಾಕುವುದೇ ಹೀಗೆ, ಬೇಕಾದರೆ ಉಣ್ಣಿ, ಇಲ್ಲದ್ದಿದ್ದರೆ ಎದ್ದು ಹೊರಡಿ ಎಂದು ಅವರಿಗೆ ಊಟ ಹಾಕದೆ ಕಳಿಸುವುದು ಮಠ, ಮಾನ್ಯಗಳಿಗೆ ಶೋಭೆಯಲ್ಲ.. ಬಾಲ್ಯದಿಂದಲೇ ಹಿಂದೂ ಸಂಸ್ಕಾರ ಎಲ್ಲರ ಸಂಪ್ರದಾಯಗಳನ್ನ ಗೌರವಿಸುವದನ್ನ ಕಲಿಸಿಕೊಡುತ್ತದೆ.. ಯಾರ ಮನಸಿಗೂ ಹಿಂಸೆಯಾಗದಂತೆ ನಡೆದುಕೊಳ್ಳಬೇಕೆಂದು ತಿಳಿಸುತ್ತದೆ. ಸಂಪ್ರದಾಯಸ್ಥರ ನಡವಳಿಕೆಗಳು ಅವರ ವೈಯಕ್ತಿಕ ವಿಚಾರ, ಅವುಗಳಿಂದ ಬೇರೆಯವರಿಗೆ ತೊಂದರೆಯಂತೂ ಇಲ್ಲ. ಅವರ ಸಂಪ್ರದಾಯ, ಆಚಾರ-ವಿಚಾರಗಳನ್ನು ಗೌರವಿಸಿ ಅವರಿಗೆ ಪ್ರತ್ಯೇಕ ಪಂಕ್ತಿ ನೀಡಿದ್ದರೆ ತಪ್ಪೇನೂ ಇಲ್ಲ.
  ಖಂಡಿತ ಕೆಲವರಿಗೆ ಮೇಲರಿಮೆಗಳೂ ಇರುತ್ತವೆ.. ಇಲ್ಲವೆಂದಿಲ್ಲ. ಆದರೆ ನಂಬಿ, ಮೇಲರಿಮೆ ಹೊಂದಿದ ಮೂರ್ಖರಿಗಿಂತಲೂ, ಮೇಲಿನ ಕಾರಣಗಳಿಂದ ಪ್ರತ್ಯೇಕ ಪಂಕ್ತಿಯನ್ನ ಆ ಸಮಾಜದ ಜನ ಬಯಸುತ್ತಾರೆ. ಮತ್ತು ಇದು genuine reason ಸಹ. ಮತ್ತು ಮೇಲರಿಮೆ-ಮೂರ್ಖರಿಗಿಂತ ಈ ಕಾರಣಗಳ ಜನರೇ ಬಹಳ ಹೆಚ್ಚಿದ್ದಾರೆ.
  ಆದರೆ ಆ ಪ್ರತ್ಯೇಕ ಪಂಕ್ತಿಗೆ ಹೋಗಲಾರದ ಜನ, "ಅವರಿಗ್ಯಾಕೆ special treatment, ಅವರೇನು ಹೆಚ್ಚಾ!!" ಎಂದು ಮೇಲರಿಮೆ ಹೊಂದಿದ್ದ ಮೂರ್ಖರನ್ನ ತೋರಿಸಿ ಕಿತ್ತಾಡುತ್ತಾರೆ.
  ಪ್ರತ್ಯೇಕ ಪಂಕ್ತಿ ನಾವು ಸಂಸ್ಕೃತಿಗೆ, ಸಂಪ್ರದಾಯಕ್ಕೆ ನೀಡುವ ಗೌರವವೆನ್ನೋಣ. ಅವರು ಮಧುಮಾಂಸ ಭಕ್ಷಣೆಯನ್ನ ಮಾಡುವವರಿಗೆ ತಿನ್ನಬೇಡಿ ಎಂದು ಹೇಳುವುದಿಲ್ಲ ಅಲ್ಲವೇ? ಸಂಪ್ರದಾಯಸ್ಥರ ಆತ್ಮಾಭಿಮಾನ, ಆಚರಣೆಗಳನ್ನ, ಬೇರೆಯವರಿಗೆ ತೊಂದರೆ ಇಲ್ಲದಿರುವಾಗ ಒಪ್ಪಲು ಅಡ್ಡಿ ಏನು?

  ReplyDelete
 6. ಸರೋಜಾರವರೆ, ನಿಜ "ಗೋಣಿಚೀಲ ಅಕ್ಕಿಗೆ ಪರಿವರ್ತಿತನಾದವನೇ ......." ಎಂಬುದು ಮನಸ್ಸು ಬುದ್ದಿಗಳನ್ನ ಅಲುಗಾಡಿಸುವಂತಹಾ ಮಾತು. Hindoo ರವರು ಅತ್ಯುಚ್ಚ ಭಾವೋದ್ರೇಕದಲ್ಲಿ ಈ ಮಾತು ಆಡಿದ್ದರೂ, ಬಹಳ ದಿನಗಳವರೆಗೆ (ನನಗಂತೂ ೮ ತಿಂಗಳ ನಂತರವೂ ಮರೆಯಲು ಆಗಿಲ್ಲ) ಮನದಲ್ಲಿ ಪ್ರತಿಧ್ವನಿಸುವ ಮಾತು. ನನಗನಿಸುವುದೇನೆಂದರೆ, ಭಾರತ ಬಹಳ ದಿನ ಈ ಅಭಿಮಾನ್ಯಶೂನ್ಯರ ಕೈಯಲ್ಲಿ ನರಳುವುದಿಲ್ಲ.. ಹೇಗೆ ಬಿಡಿಸಿಕೊಳ್ಳುವುದೇ ನನಗೆ ಗೊತ್ತಿಲ್ಲ.. ಆದರೆ ಭವ್ಯ ದಿನಗಳೇ ಮುಂದಿವೆ. ಕಾದು ನೋಡೋಣ..

  ReplyDelete