Thursday, 9 June 2011

ಮಹಾ ಮಂಥನ-2 (crusade ಮತ್ತು Manju ತರ್ಕಗಳು)

ಅಂತರಜಾಲದ ಸುದ್ದಿಯೆಳೆಯಲ್ಲಿ (News Thread) ನಾನೂ ನನ್ನ proxy ಹೆಸರಿನಿಂದ (pkbys) ಭಾಗವಹಿಸಿದ್ದ ಸಂವಾದದ ನಿರೂಪಣೆಯ ಎರಡನೇ ಕಂತು ಇದು.
ಮೊದಲ ಕಂತಿಗೆ ಮುಂದೆ ಕ್ಲಿಕ್ ಮಾಡಿ ==> ಮಹಾ ಮಂಥನ-1 (bhgte ರವರ ರಂಗ ಪ್ರವೇಶ)

ಈ ಭಾಗದಲ್ಲಿ ಮರುಭೂಮಿ ಧರ್ಮಗಳು (Semitic) ಮತ್ತು ಪೌರಾತ್ಯ(Oriental) ನಂಬಿಕೆಗಳ ಗ್ರಂಥಗಳ ಬಗ್ಗೆ, ಹಿಂದೂ (ಪೌರಾತ್ಯ) ನಂಬಿಕೆಯಾದ, ಮರಭೂಮಿ ಧರ್ಮಗಳು ಒಪ್ಪದ ಪುನರ್ಜನ್ಮ ಸಿದ್ದಾಂತದ, ಅದ್ವೈತದ, ಚರ್ಚೆ ಇದೆ. ಧರ್ಮ, ಸಂಸ್ಕೃತಿ, ಸಂಪ್ರದಾಯಗಳ ಹುಟ್ಟಿನ ಬಗ್ಗೆ ವಿಶ್ಲೇಷಣೆ ಇದೆ. ಈ ಕಂತಿನಲ್ಲಿ crusade ಮತ್ತು Manju ರಿಂದ, ಚರ್ಚೆ ಮೊದಲ ಕಂತಿಗಿಂತ ಹೆಚ್ಚು ಸುಸಂಬದ್ದ(coherence)ವಾಗಿದೆ .. crusade ರ ಪ್ರಶ್ನೆಗಳಿಗೆ ಉತ್ತರಿಸಲು ಶುರುವಾದ ಸಂವಾದ ಮುಂದೆ ಹಲವು ಹೊಳಹು ಕಾಣಲಿದೆ. ಇದು ಮುಗಿದ ಸಂವಾದವಾದರೂ ದಯವಿಟ್ಟು ಬ್ಲಾಗ್‌ನಲ್ಲಿ ನಿಮ್ಮ ಅನಿಸಿಕೆಗಳನ್ನು ಬರೆಯಿರಿ. ನನ್ನ ತರ್ಕವೇನಾದರೂ ತಪ್ಪಿದ್ದರೆ ತಿದ್ದಿಕೊಳ್ಳುವ ಪ್ರಯತ್ನಮಾಡುತ್ತೇನೆ..

ಮುಂದಿನ ಕಂತಿನಲ್ಲಿ crusade ಸೆಮೆಟಿಕ್ ಧರ್ಮಗಳ ಕುರಿತಾದ (ಭಾರತದ ಮೇಲೆ ಇಸ್ಲಾಂನ ಆಕ್ರಮಣ ಮತ್ತು ವಿಜಯ, ಅಮುಸ್ಲಿಮರ ಮೇಲೆ ಹೇರಲ್ಪಟ್ಟ ಜೆಝಿಯಾ, ಬಗ್ಗೆ ಒಬ್ಬ ಮಹಮದೀಯರಾಗಿ ವಿಶ್ಲೇಷಣೆ) ನಮ್ಮ ಪ್ರಶ್ನೆಗಳಿಗೂ ವಾದಗಳನ್ನ ಮಂಡಿಸುತ್ತಾರೆ.. ಚರ್ಚೆ ಇನ್ನೂ ಗಂಭೀರವಾಗಲಿದೆ.. 

(ಅನವಶ್ಯಕ ಭಾಗಗಳನ್ನು ತೆಗೆದು ಪ್ರೂಫ್ ರೀಡ್ ಮಾಡಿರುವುದರಿಂದ, ಅಲ್ಪ ಸ್ವಲ್ಪ ಬದಲಾವಣೆಗೊಳಪಟ್ಟಿದ್ದರೂ ಸಂವಾದದ ಓಘ ಮತ್ತು ಭಾಗವಹಿಸಿದವರ ನೈಸರ್ಗಿಕ ನ್ಯಾಯಕ್ಕೆ ಧಕ್ಕೆಯಾಗದ ರೀತಿ ನಿರೂಪಿಸಲಾಗಿದೆ.)18-09-10 (08:13 PM)[-] crusade
mr. bhgte, ಮುಸ್ಲಿಮರಲ್ಲಿ Shiya, Sunni, Bohra, Byaari, Maple, Sufi, Ahammadiya, mahammadiyya, Kurdish, Sunni Hanafi, Mahdavism, Din-i-Ilahi, Zaidiyyah, Alawi, Alevi, Kharijite Islam, Ibadi, Qadiri, Bektashi, Chishti, etc..ಇವರೆಲ್ಲರ ನಂಬಿಕೆ ಒಂದೇ ಧರ್ಮ ಗ್ರಂಥಗಳ ಮೇಲೆ ಇದೆ. ಮತ್ತು ಕ್ರೈಸ್ತರಲ್ಲಿ Orthodox, Eastern Orthodox , the Oriental Orthodox, the Roman Catholic,Protestant, church of England, Church of Scotland, Calvinist,etc.. ಇವರೆಲ್ಲರ ನಂಬಿಕೆ ಒಂದೇ ಧರ್ಮ ಗ್ರಂಥಗಳ ಮೇಲೆ ಇದೆ. ಅದರೆ ಹಿಂದು ಧರ್ಮದ ಉಪಜಾತಿಗಳು ಬೇರೆ ಬೇರೆ ದೇವರು ಮತ್ತು ಬೇರೆ ಬೇರೆ ಪುಸ್ತಕಗಳ ಮೇಲೆ ನಂಬಿಕೆ ಇದೆ ಇಲ್ಲಿ ಸಮಾನತೆ ಎಲ್ಲಿದೆ.

18-09-10 (08:57 PM)[-] pkbys
mr.crusade ಒಂದೇ ಧರ್ಮಗ್ರಂಥದ ಮೇಲೆ ನಂಬಿಕೆ ಇಡಲು ಹಿಂದು ಧರ್ಮ ಸೆಮೆಟಿಕ್ ಧರ್ಮವಲ್ಲ.. ಇಲ್ಯಾವ ಪ್ರವಾದಿಯೂ ಇಲ್ಲ... ಯಾವ ಉದ್ಘೋಷಿತ ಧರ್ಮಗ್ರಂಥವೂ ಇಲ್ಲ... ಸೆಮೆಟೀಕ್ ಧರ್ಮಗಳು ಹಾರ್ಡ್‌ ಕೋಡ್ ಧರ್ಮಗಳು... ಬಂಧಿತ ಧರ್ಮಗಳು... ನಮ್ಮಲ್ಲಿ ವೇದಗಳಿವೆ.. ಅದನ್ನು ಮಾನ್ಯ ಮಾಡಬೇಕೆಂಬ ವಿಧಿನಿಷೇದವಿಲ್ಲ... ಹಲವು ಮಹಾತ್ಮರು ಅವತಾರಿಗಳೂ ಆಗಿ ಹೋಗಿದ್ದಾರೆ... ಆದರೆ ಅವರನ್ನೇ ಮತ್ತು ‌ಅವರನ್ನು ಮಾತ್ರವೇ ಅನುಸರಿಸಬೇಕೆಂಬ ನಿಯಮವಿಲ್ಲ... ಪ್ರತಿಯೊಬ್ಬ ಹಿಂದೂವು ಮಹಾತ್ಮನಾಗಬಲ್ಲ... ದೇವರಂಥಾ ಪದವಿಗೆ ಏರಬಲ್ಲ.. ದೇವರೆಂದೇ ಕರೆಸಿಕೊಳ್ಳಬಲ್ಲ... ನಮ್ಮಲ್ಲಿ ದೇವರಿಗಿಂತಲೂ ದೇವರನ್ನು ದೇವರೆಂದು ತೋರಿಸಿದ ಗುರುವಿಗೆ (ಮಾನವನಾದರೂ) ಹೆಚ್ಚು ಬೆಲೆ.. ನಾಸ್ತಿಕರಾಗಿಯೂ ನೀವು ಹಿಂದೂವಾಗಬಲ್ಲಿರಿ.. ನಾಸ್ತಿಕ ಯೋಚನೆ ಮಾಡುವವರನ್ನೂ ಹಿಂದು ಧರ್ಮ ಸಲಹುತ್ತದೆಯೇ ಹೊರತು ಧರ್ಮಭ್ರಷ್ಟನಾಗಿಸುವುದಿಲ್ಲ.. ಎಲ್ಲ ಜಾತಿ ಉಪಜಾತಿಗಳೂ ಬೇರೆ ಬೇರೆ ದೇವರ ಹೆಸರನ್ನು ಹೇಳಿದರು ದೈವನೊಬ್ಬ ನಾಮ ಹಲವು ಎಂಬ ಸಿದ್ದಾಂತವನ್ನು ನಂಬುತ್ತವೆ... ಹಿಂದು ಧರ್ಮವನ್ನ ಸೆಮೆಟಿಕ್ ಧರ್ಮಗಳಂತೆ ಬಂಧಿತ ಹಾರ್ಡ್ ಕೋಡ್ ಧರ್ಮವಾಗಿಸುವುದು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ.. ನಮಗಿರುವ ಸ್ವಾತಂತ್ರ್ಯವನ್ನ ನಾವು ಪ್ರೀತಿಸುತ್ತೇವೆ...  ಸ್ವಘೋಷಿತ ಪ್ರವಾದಿಯನ್ನೋ, ಮಾನವರೊಡನೆ ಒಡಂಬಡಿಕೆ ಮಾಡಿಕೊಳ್ಳುವ ಅಗತ್ಯವಿರುವ ದೇವರನ್ನೋ ನೀವು ಅನುಸರಿಸುವುದಾದರೆ ಅದಕ್ಕೆ ಯಾವ ಹಿಂದೂವೂ ಅಭ್ಯಂತರ ವ್ಯಕ್ತಪಡಿಸುವುದಿಲ್ಲ.. ನಿಮ್ಮ ಹಾರ್ಡ್‌ ಕೋಡ್ ಮನಃಸ್ಥಿತಿ ಸತ್ಯವನ್ನ ಅರಗಿಸಿಕೊಳ್ಳಲು ಬಿಡುವುದೂ ಇಲ್ಲ..

 18-09-10 (09:10 PM)crusade
mr.pkbys, ಎಂಥಾ ಮಿಥ್ಯ ಮಾತನ್ನು ಅಡಿದಿರಿ, ಹಾಗಾದ್ರೆ ನಿಮಗೆ ದೇವಸ್ಥಾನ, ಮಂದಿರಗಳು ಯಾಕೆ ಬೇಕು? ನೀವೇ ದೇವರುಗಳಾದಾಗ ನಿಮಗೆ ಊಟ ಬಟ್ಟೆ ಯಾಕೆ? ಮದುವೆ ಮುಂಜಿಗಳು ಯಾಕೆ ? ಮತ್ತು ನಿಮಗೆ ಸರ್ಕಾರಿ ಸವಲತ್ತುಗಳು ಯಾಕೆ ? ನೀವೇ ಎಲ್ಲವನ್ನು ಸೃಷ್ಟಿಸಿಕೊಳ್ಳಬಹುದು.

18-09-10 (11:02 PM)[-] pkbys
ದಯವಿಟ್ಟು ಅರ್ಥ ಮಾಡಿಕೊಳ್ಳಿ.. ಅವತಾರ ಪುರುಷರಿಗೂ ಮಾನವರಿಗೂ ನಾವು ವ್ಯತ್ಯಾಸ ತೋರುವುದಿಲ್ಲ.. ದೇವರಾಗುವುದೆಂದರೆ ಸರ್ವಶಕ್ತ ಭಗವಂತನಾಗುವುದೆಂದಲ್ಲ... ಅವನಂತೆ ದೈವಿಕ ಗುಣ ಪಡೆಯುವುದು.. ರಾಮ, ಕೃಷ್ಣರನ್ನು ನಾವು ದೇವರೆಂದೇ ಕರೆಯುತ್ತೇವೆ.. ಅವರು ಮಾನವರಾಗೆ ಹುಟ್ಟಿದರು, ಮತ್ತು ಮೃತ್ಯುವನ್ನು ಹೊಂದಿದರು.. ಆದರೆ ಅವರು ಅವತಾರ ಪುರುಷರು.. ಅವರು ಮಾಡಿದ ಪಾಪಕ್ಕೆ ಮಾನವರಂತೆಯೆ ಕಷ್ಟ ನಷ್ಟಗಳನ್ನು ಅನುಭವಿಸಿದರು, ದೇವರೆ ಮಾನವನಾಗಿ ಕಷ್ಟಗಳನ್ನು ಹೇಗೆ ಎದುರಿಸಬೇಕು ಎಂದು ತೋರಿಸಲು ಅವತಾರ ಎತ್ತಿ ಬಂದ... ಮಾನವ ದೇಹದ ಮಿತಿಗಳು ನಮಗ್ಗಿದ್ದೇ ಇವೆ.. ಅಧ್ಯಾತ್ಮಿಕವಾದ ಮುನ್ನಡೆ ಮಾನವ ದೇವರಾಗುವುದನ್ನು ಹೇಳುತ್ತದೆ.. ಅದ್ವೈತ ಸಿದ್ದಾಂತ ಹೇಳುತ್ತದೆ.. ನಾವೆಲ್ಲಾ ಆ ಸಿಂಧು(ದೇವರು)ವಿನ ಒಂದು ಬಿಂದು. ಮತ್ತೆ ಆ ಸಿಂಧುವಿಗೇ ಹೋಗುತ್ತೇವೆ...

ಪೂರ್ಣಮದಂ ಪೂರ್ಣಮಿದಂ ಪೂರ್ಣತ್ ಪೂರ್ಣಮುದಚ್ಯತೆ |
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಶ್ಯತೆ ||

 
(ಅದೂ[ಜಗನ್ನಿಯಾಮಕ ಶಕ್ತಿ] ಪೂರ್ಣ, ಇದೂ[ಜಗತ್ತು] ಪೂರ್ಣ, [ಆ] ಪೂರ್ಣದಿಂದಲೇ [ಈ] ಪೂರ್ಣವು ಬಂದಿದೆ, ಪೂರ್ಣದಿಂದ[ಜಗನ್ನಿಯಾಮಕ ಶಕ್ತಿ] ಪೂರ್ಣವು[ಜಗತ್ತು] ಬಂದ ನಂತರವೂ ಪೂರ್ಣವೇ [ಜಗನ್ನಿಯಾಮಕ ಶಕ್ತಿ ಪೂರ್ಣವಾಗಿಯೇ] ಉಳಿಯುತ್ತದೆ)

ಹಿಂದುಗಳು ನಮ್ಮನ್ನು ನಾವು ಅಮೃತಸ್ಯ ಪುತ್ರಾಃ (ಸಾವಿಲ್ಲದ ಮಕ್ಕಳು.), ನಮ್ಮ.ದೇಹಕ್ಕೆ ಸಾವು, ನಮಗಲ್ಲ ಎನ್ನುವವರು... ಆ ಸರ್ವಶಕ್ತ, ಅನಾದಿ, ಅನಂತನ, ಭಾಗವೆಂದು ನಂಬುವವರು... ನಾವು ದೇವರಲ್ಲವೇನು.. ನಾವು ಮಾನವ ಮಿತಿಯ ದೇವರ ಅಂಶ. ಊಟ ಬಟ್ಟೆ ಬೇಕು... ಹಿಂದು ತತ್ವಶಾಸ್ತ್ರವನ್ನು ಅಭ್ಯಸಿಸಿ ನಂತರ ಬನ್ನಿ.. ಸೆಮೆಟಿಕ್ ಧರ್ಮಗಳೊಡನೆ ಹೊಲಿಸಲು ನಮ್ಮದು ಅವರ ಧರ್ಮದಂತಹ ಧರ್ಮವಲ್ಲವೇ ಅಲ್ಲ. ಹಿಂದು ಒಂದು ಜೀವನ ವಿಧಾನ. ಇದು ಸುಪ್ರೀಂಕೋರ್ಟ್‌ನ ಹೇಳಿಕೆ.
 
19-09-10 (12:07 AM)Manju
ದೈವಂ ಮಾನುಷ ರೂಪೇಣ ಎನ್ನುತ್ತಾರೆ... ಮನುಷ್ಯನಾಗಿ ಜನಿಸಿದ ಮೇಲೆ ಲೌಕಿಕದ ಸುಖ-ದುಃಖಗಳನ್ನು ಅನುಭವಿಸಿಯೇ ತೀರಬೇಕು. ದೈವತ್ವ ಪ್ರಾಪ್ತಿ ಮಾಡಿಕೊಳ್ಳದ ಆತ್ಮಕ್ಕೆ ಮುಕ್ತಿ ಸಿಗಲಾರದು. ಮೇಲಾಗಿ, ನಿಮ್ಮದು ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳು. ಇಲ್ಲಿ ಜನಿಸಿದೆವೆಂದ ಮೇಲೆ ಅವನಿಂದ ಬೇರಾಗಿದ್ದೇವೆ ಎಂಬ ಮನಸ್ತತ್ವ ಯಾಕೆ? ಆತನೊಳವಲಯದಲ್ಲೇ ನಾವಿರುವಾಗ, ಆತನೇ ನಾವು ತಾನೇ? ನಾವು ಆತನೇ ತಾನೇ? ದೈವತ್ವ ಎಲ್ಲರಲ್ಲೂ ಇದೆ. ಎಲ್ಲರಿಗೂ ಅದು ಗೊತ್ತಿಲ್ಲ. ಹಲವರಿಗೆ ಗೊತ್ತಿಲ್ಲವೆಂಬುದೂ ಗೊತ್ತಿಲ್ಲ. ಗೊತ್ತಿರುವವರು ಗೊತ್ತು ಎಂದು ಹೇಳಲಾರರು. ಗೊತ್ತಿಲ್ಲದವರದೇ ವರಾತ.. ವಿವೇಕ ಹೆಚ್ಚಿಸಿಕೊಳ್ಳಿ.. ಅರಿವು ಹೆಚ್ಚಾಗುತ್ತದೆ. ಒಳ್ಳೆಯದಾಗಲಿ...

19-09-10 (02:03 PM)crusade
mr.pkbys, ಒಂದೇ ಧರ್ಮಗ್ರಂಥದ ಮೇಲೆ ನಂಬಿಕೆ ಇಡಲು ಹಿಂದು ಧರ್ಮ ಸೆಮೆಟಿಕ್ ಧರ್ಮವಲ್ಲ.. ಇಲ್ಯಾವ ಪ್ರವಾದಿಯೂ ಇಲ್ಲ... ಯಾವ ಉದ್ಘೋಷಿತ ಧರ್ಮಗ್ರಂಥವೂ ಇಲ್ಲ... ಸೆಮೆಟೀಕ್ ಧರ್ಮಗಳು ಹಾರ್ಡ್‌ಕೋಡ್ ಧರ್ಮಗಳು... ಬಂಧಿತ ಧರ್ಮಗಳು... ನಮ್ಮಲ್ಲಿ ವೇದಗಳಿವೆ.. ಅದನ್ನು ಮಾನ್ಯ ಮಾಡಬೇಕೆಂಬ ವಿಧಿನಿಷೇದವಿಲ್ಲ... ಎಂದು ಪ್ರತಿಪಾದಿಸಿ, ಈಗ ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸುತಿದ್ದೀರಿ. ನೀವು ಯಾವುದಾದರೂ ಒಂದು ನಿರ್ಣಯಕ್ಕೆ ಬನ್ನಿ ಅದರ ಮೇಲೆ ಸಂವಾದ ನಡೆಸೋಣ. ನಾವು ವೇದ ಗ್ರಂಥದ ಹೇಳಿಗೆ ನೀಡಿದಾಗ ಅದಕ್ಕೆ ನಂಬಬೇಕೆಂಬ ಹಿಂದೂಗಳಲ್ಲಿ ಕಟ್ಟಪ್ಪಣೆ ಇಲ್ಲವೆನ್ನುತ್ತಿರಿ. ಹಾಗೆ ಸಂವಾದ ಮಾಡಿದಾಗ ಗ್ರಂಥಗಳಲ್ಲಿ ಹೀಗಿದೆ ಎಂದು ಬರೆಯುತ್ತೀರ.. ನಿಮ್ಮ ಯೋಚನಾ ಲಹರಿ ಗೊಂದಲಮಯವಾಗಿದೆ. ನಿಮ್ಮ ಸಂವಾದ ಯಾವ ರೀತಿ ಇದೆ ಎಂದರೆ, 2+2=3 ಅಂದರೂ ನಾವು ನಂಬಬೇಕು, 2+2=4 ಅಂದರೂ ನಂಬಬೇಕು. ಆಗ ಹೌದು ಎಲ್ಲವೂ ಸರಿ, ಎಲ್ಲಾನೂ ಗಣಿತವಲ್ಲವೇ ? ಅಲ್ಲದೆ ಎಲ್ಲದಕ್ಕೂ ಕೂಡಿಸುವ ಸಿದ್ಧಾಂತದ ಮೂಲಕ ಉತ್ತರ ನೀಡಲಾಗಿದೆ ಎನ್ನುತ್ತೀರಾ...

19-09-10 (03:58 PM)[-] pkbys
ಉದ್ಘೋಷಿತ ಧರ್ಮಗ್ರಂಥ ಇಲ್ಲ.. ಹಿಂದುಗಳು ಯಾವುದೇ ವಿಚಾರವನ್ನ ನಂಬುವ ಮತ್ತು ನಂಬದಿರುವ ಸ್ವಾತಂತ್ರ್ಯ ಹೊಂದಿದ್ದಾರೆ..

ಅದ್ವೈತ ಸಿದ್ದಾಂತ ಹೇಳಿದ್ದು ನೀವು ಭಗವಂತ ನೀವೇ ಆದರೆ ಊಟ ಬಟ್ಟೆ ಏಕೆ ಎಂಬ ಪ್ರಶ್ನೆಗೆ ಉತ್ತರವಾಗಿ... ನಿಮ್ಮ ಭಾಷೆಯಲ್ಲಿ ಹೇಳುವುದಾದರೆ ನಮ್ಮ ಸಿದ್ದಾಂತಗಳು ಕೂಡುವ ಲೆಕ್ಕದ ತತ್ವವನ್ನ ಮಾತ್ರ ಹೇಳುತ್ತದೆ... ಆದರೆ ನಾವೇ ಕೂಡಬೇಕು, ನಾವೇ ಮ್ಮ ಉತ್ತರ ಕಂಡುಕೊಳ್ಳಬೇಕು, ಮ್ಮ ಉತ್ತರವನ್ನು ನಾವೇ ಕಂಡು ಕೊಳ್ಳುವ ಹಾದಿ ಆಧ್ಯಾತ್ಮ.  ಮಗೆ ಯಾವುದೇ ಒಡಬಂಡಿಕೆಯ ಮೂಲಕವೋ ದೈವವಾಣಿಯ ಮೂಲಕವೋ ಉತ್ತರಗಳನ್ನು ಹೇಳಲಾಗಿಲ್ಲ.... ಉತ್ತರ ಕಂಡುಕೊಳ್ಳುವ, ಹಾಗೆಯೇ ಕಂಡುಕೊಳ್ಳದಿರುವ ಸ್ವಾತಂತ್ರ್ಯವೂ ಮಗಿದೆ..

ಆದರೆ ಸೆಮೆಟಿಕ್ ಧರ್ಮಗಳು ಲೆಕ್ಕವನ್ನು ತಮ್ಮದೇ ಮಾಡಿ ಉತ್ತರಗಳನ್ನು ಕೊಡುತ್ತವೆ. ಮತ್ತು ಆ ಉತ್ತರಗಳನ್ನೇ ನೀವು ನಂಬಬೇಕು.. ನಿಮಗೆ ಬೇರೆ ದಾರಿ ಇಲ್ಲ.... ನೀವು ಕೂಡುವುದು ಕಲಿತು ನೀವೇ ಉತ್ತರ ಕಂಡುಕೊಳ್ಳುತ್ತಿರೋ, ಕೂಡಿಸಲಾಗಿದೆ ಎಂದು ಹೇಳಿ ನೀಡಲಾದ ಉತ್ತರಗಳನ್ನ ಸುಮ್ಮನೆ ಒಪ್ಪಿ ನಿಲ್ಲುತ್ತಿರೋ ಅದು ನಿಮಗೆ ಬಿಟ್ಟದ್ದು.... ಖುರಾನ್ ಒಪ್ಪಿದರೆ ಮುಸಲ್ಮಾನ, ಒಪ್ಪದಿರೆ ಕಾಫಿರ.. ಆದರೆ ಅದ್ವೈತ, ದ್ವೈತ ಅಥಾವಾ ಎರಡು ಅಲ್ಲದ ಇನ್ಯಾವುದೋ ಒಂದನ್ನು ಒಪ್ಪುವ, ಅಥವಾ ಯಾವುದನ್ನೂ ಒಪ್ಪದಿದ್ದರೂ ನೀವು ಹಿಂದು....

19-09-10 (05:13 PM)Manju
ಅದ್ವೈತ ಎಂದರೆ ಏಕ ಎಂದೂ, ಎರಡಿಲ್ಲದ್ದು ಎಂದರ್ಥ ಮಹರಾಯರೇ... ನಾಸ್ತಿಕನಾಗಿರುವುದಕ್ಕೂ ಆಸ್ತಿಕನಾಗಿರುವುದಕ್ಕೂ ಸ್ವಾತಂತ್ರ್ಯವುಳ್ಳ ಸನಾತನ ಧರ್ಮ, ಹಿಂದೂ ಧರ್ಮ. ಹಿಂದೂ ಎಂದು ಹೆಸರಿಟ್ಟವರು ಪಾರ್ಸಿಗಳು. ಸನಾತನ ಧರ್ಮದಲ್ಲಿರುವಂತೆ, ಅಂತರ್ಯದ ಆಳಕ್ಕಿಳಿದು ಸಾಕ್ಷಾತ್ಕಾರ ಪಡೆದುಕೊಳ್ಳುವ ವಿಷಯ ಇತರ ಧರ್ಮಗಳಲ್ಲಿ (ಪೌರ್ವಾತ್ಯ ಧರ್ಮಗಳನ್ನು ಹೊರತುಪಡಿಸಿ) ಇಲ್ಲ. ಅವು ಹೆಚ್ಚಾಗಿ ಬಾಹ್ಯ ಜಗತ್ತನ್ನು ಆಧರಿಸಿ ಬರೆದಂತಹ ತತ್ವಸಿದ್ಧಾಂತಗಳು.

19-09-10 (06:12 PM)crusade
ಖಂಡಿವಾಗಿಯು ನಮ್ಮ ಧರ್ಮದಲ್ಲಿ ಉತ್ತರಗಳನ್ನು ದೈವ ವಾಣಿಗಳ ಮೂಲಕ ತಿಳಿಸಲಾಗಿದೆ. ಅದರಂತೆ ನಾವು ನಮ್ಮ ತಪ್ಪು ಮತ್ತು ಸರಿ ಗಳನ್ನು ಗಮನಿಸುತ್ತೇವೆ.ಅದರೆ ಉತ್ತರಗಳನ್ನು ನಮ್ಮನ್ನೆ ಹುಡುಕಿಕೊಳ್ಳಿ ಎಂದು ಹೇಳುತ್ತಿದ್ದರೆ, ನಾವು ಕೂಡ 3ನ್ನು 4ಕೆಂದು ಹೇಳಬೇಕಾಗುತ್ತಿತ್ತು.

ಕುರಾನ್ ಹೇಳುತ್ತದೆ,  "ಸತ್ಯ ನಿಷೇಧಿಗಳ ಪ್ರಾಣಾಹರಣ ಮಾಡಲು ತಲಪುವ ಕ್ಷಣದವರೆಗೂ ವಿಧಿ ಲಿಖಿತದಂತೆ ತಮ್ಮ ಪಾಲನ್ನು ಪಡೆಯುತ್ತಲೇ ಇರುವರು.." (ಕುರಾನ್ 7:37)

ಹಾಗೆ ಭಗವದ್ಗೀತೆ 7:22-23 ರಲ್ಲಿ
ಸ ತಯಾ ಶ್ರದ್ಧಯಾ ಯುಕ್ತಸ್ತಸ್ಯಾರಾಧನಮೀಹತೇ |
ಲಭತೇ ಚ ತತಃ ಕಾಮಾನ್ ಮಯೈವ ವಿಹಿತಾನ್ ಹಿ ತಾನ್ ||

ಅಂತವತ್ತು ಫಲಂ ತೇಷಾಂ ತದ್ಭವತ್ಯಲ್ಪಮೇಧಸಾಮ್ |
ದೇವಾನ್ ದೇವಯಜೋ ಯಾಂತಿ, ಮದ್ಭಕ್ತಾ ಯಾಂತಿ ಮಾಮಪಿ ||

ಅಂದರೆ, ಅವನು ಆ ನಂಬಿಕೆಯಿಂದ ಕೂಡಿ ಆ ದೇವತೆಯ ಪೂಜೆಯನ್ನು ಮಾಡುತ್ತಾನೆ, ನಾನೇ ಗೊತ್ತು ಮಾಡಿರುವಂತೆ ಆ ದೇವತೆಯಿಂದ ಫಲಗಳನ್ನು ಪಡೆಯುತ್ತಾನೆ. ದಡ್ಡರಾದ ಅವರಿಗೆ ದೊರೆಯುವ ಫಲ ಮಾತ್ರ ಕ್ಷಣಿಕವಾದದ್ದು, ದೇವತೆಗಳನ್ನು ಪೂಜಿಸುವವರು ದೇವತೆಗಳನ್ನು ಪಡೆಯುತ್ತಾರೆ, ನನ್ನ ಭಕ್ತರು ನನ್ನನ್ನು ಪಡೆಯುತ್ತಾರೆ

19-09-10 (09:07 PM)[-] pkbys
ಹೌದು. ಧನ್ಯವಾದ, ಕುರಾನ್ ಸಹ ವಿಧಿ ಲಿಖಿತವನ್ನು ಹೇಳುತ್ತದೆ, ಆದರೆ ವಿಧಿ ಲಿಖಿತದ ಆಧಾರದ ಬಗ್ಗೆ ಏನಾದರೂ ಹೇಳುವುದೇ ತಿಳಿಸಿ...

ಗೀತೆ ವಿಧಿ ಲಿಖಿತಕ್ಕೆ ಕರ್ಮಸಿದ್ದಾಂತವನ್ನು ಆಧಾರವಾಗಿ ಕೊಡುತ್ತದೆ.. ಹಾಗೆಯೇ... ಭಗವದ್ಗೀತೆಯಲ್ಲಿ ನೀವು ಕೊಟ್ಟ ಗೀತೆಯ ಶ್ಲೋಕಕ್ಕೆ ತಕ್ಕಂತಹುದೇ ಮಾತು ಬೈಬಲ್ನಲ್ಲೂ ಬರುತ್ತದೆ... seek, you will find. (ಹುಡುಕು, ನೀನು [ನನ್ನನ್ನು {ಅಥವಾ ಹುಡುಕಿದ್ದನ್ನು}] ಪಡೆಯುವೆ) ಎಂದು ದೇವರು ಹೇಳುತ್ತಾನೆ... ಧರ್ಮಗ್ರಂಥಗಳನ್ನು ಹಿಂದು ಧರ್ಮದಲ್ಲಿ ಅನುಸರಿಸುವ ವಿಧಿ ನಿಷೇದವಿಲ್ಲ.. ನೀವೇ ತಿಳಿಸಿರುವ ಭಗವದ್ಗೀತೆಯ ಶ್ಲೋಕ ಯಾವನು ಏನನ್ನು ಬಯಸುತ್ತಾನೋ ಅದಕ್ಕಾಗಿ ಮನಃಪೂರ್ವಕವಾಗಿ ಪ್ರಯತ್ನಿಸುತ್ತಾನೋ, ದೇವಲೋಕವಾದರೆ ದೇವಲೋಕ, ಪಿತೃಲೋಕವಾದರೆ ಪಿತೃಲೋಕ, ಮೋಕ್ಷವಾದರೆ ಮೋಕ್ಷ, ಹೀಗೆ ಅದನ್ನೇ ಪಡೆಯುತ್ತಾನೆ, ಮತ್ತು ಆ ಫಲದ ಅವಧಿ ಅವರ ಕರ್ಮಸಂಚಯದ ಮೇಲಿರುತ್ತದೆ.. ಭಗವದ್ಗೀತೆಯಂತೆಯೇ ದೇವಲೋಕ, ಪಿತೃಲೋಕ ಯಾವುದನ್ನೂ ಬಯಸದ ಜೀವಾತ್ಮವು, ಮರಳಿ ಇಲ್ಲೇ ಬರುತ್ತದೆ..

ನಿಮಗೆ ಅಂಕಿಗಳು ಮತ್ತು ಕೂಡುವ ಚಿಹ್ನೆ ಕೊಡಲಾಗಿದೆ.. ಯಾವ ಅಂಕಿಗಳನ್ನು ಕೂಡಿ ನಿಮ್ಮ ಆಸೆಯ ಅಂಕಿಯನ್ನು ಪಡೆಯುವಿರೋ ನಿಮಗೆ ಬಿಟ್ಟದ್ದು... ಸೆಮೆಟಿಕ್ ಧರ್ಮಗಳಲ್ಲಿ ಅಂಕಿಗಳನ್ನು ಕೂಡಿ ಇಡಲಾಗಿದೆ. ಮೊದಲೇ ಆರಿಸಿಟ್ಟ ಅಂಕಿಯನ್ನು ನೀವು ಕೂಡಿ ಮೊದಲೇ ತೀರ್ಮಾನಿಸಿದ ಅಂಕಿಯನ್ನೇ ನೀವು ಪಡೆಯಬೇಕು, ಕೂಡದಿದ್ದರೂ ಚಿಂತೆ ಇಲ್ಲ ಉತ್ತರವನ್ನೂ ನೀಡಲಾಗಿರುವುದರಿಂದ ನೀವದನ್ನೇ ಪಡೆಯುವಿರಿ. You dont have freedom choose, and not to choose also.

19-09-10 (10:44 PM)[-] Manju
ಪುನರ್ಜನ್ಮ ತತ್ತ್ವದ ಮೇಲೆ ನಂಬಿಕೆಯಿಲ್ಲದ ಧರ್ಮಗಳಿಗೆ... ತತ್ವೋಪದೇಶವೇ shri.pkbys, ಅದನ್ನು ಜೀರ್ಣಿಸಿಕೊಳ್ಳಬಲ್ಲರೇ. ಜೀವಾತ್ಮಗಳ ಜಾಡು ಹಿಡಿದು ಹೋಗುವ ಒಳತುಡಿತ ಕಾಣಬಲ್ಲೇವೇನು... ಈ ಸೆಮೆಟಿಕ್ ಧರ್ಮಗಳಲ್ಲಿ...

20-09-10 (12:33 AM)[-]  crusade
ನಿಮ್ಮ ಗ್ರಂಥಗಳನ್ನು ಕಾಲ ಕ್ರಮೇಣ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಾಟು ಮಾಡಿಕೊಂಡು ನಿಮ್ಮನ್ನು ಮೂಲ ಕರ್ತವ್ಯದಿಂದ ದೂರ ಮಾಡಲಾಗಿದೆ, ಜಗತ್ತಿನಲ್ಲಿರುವ ಪ್ರತಿ ಯೊಂದು ವಸ್ತುವಿಗೂ ಒಂದೊಂದು ಉದ್ದೇಶವಿದೆ. ಉದ್ದೇಶವಿಲ್ಲದ ಯಾವೊಂದು ವಸ್ತುವೂ ಈ ಜಗತ್ತಿನಲ್ಲಿಲ್ಲ. ನಮಗೆ ಶಾಖ, ಬೆಳಕು ಇತ್ಯಾದಿಗಳನ್ನು ಕೊಡುವಂತಹ ಉದ್ದೇಶ ಸೂರ್ಯನದ್ದಾಗಿದ್ದರೆ, ಪ್ರತಿಯೊಂದು ಕ್ರಿಯೆಗೂ ಒಂದೊಂದು ಉದ್ದೇಶವಿದೆ. ಹೀಗಿರುವಾಗ ಮಾನವನ ಜೀವನಕ್ಕೊಂದು ಉದ್ದೇಶವಿಲ್ಲವೇ ?

ಕುರಾನ್ ಹೇಳುತ್ತದೆ, "ನಿಮ್ಮನ್ನು ಪರೀಕ್ಷಿಸಿ ನಿಮ್ಮ ಪೈಕಿ ಯಾರು ಸತ್ಕರ್ಮವೆಸಗುವವನೆಂದು ನೋಡಲಿಕ್ಕಾಗಿ ಅವನು (ಅಲ್ಲಾಹನು) ಜೀವನವನ್ನು ಮರಣವನ್ನು ಆವಿಷ್ಕರಿಸಿದನು."(ಕುರಾನ್ 67:2)

ಗೀತೆಯಲ್ಲಿ "ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಮ್ ! ( ಗೀತೆ 2:37) ಅಂದರೆ ಸತ್ತರೆ ಸ್ವರ್ಗವನ್ನು ಪಡೆಯುತ್ತಿ,ಗೆದ್ದರೆ ಭೂಮಿಯನ್ನು ಅನುಭವಿಸುತ್ತಿ.."

ಮಾಜಿ ರಾಷ್ಟ್ರಪತಿ ಹಾಗೂ ಹಿಂದು ಧರ್ಮದ ಮಹಾನ್‌ ಚಿಂತಕರಾಗಿದ್ದ ಡಾ ! ರಾಧಾಕೃಷ್ಣನ್ " ಬಹು ಜನ್ಮಗಳ ಪುನರ್ಜನ್ಮ ಸಿದ್ಧಾಂತ ವೇದಗಳಲ್ಲಿ ಇಲ್ಲ" ವೆಂದು ಹೇಳುತ್ತಾರೆ,(indian philosophy, vol.1 page 112-116) ಯಾರು ಪುನರ್ಜನ್ಮದ ಬಗ್ಗೆ ಹೇಳುವುದಿಲ್ಲ.
      
20-09-10 (07:59 AM)Manju
ಕಾಲಾಯ ತಸ್ಮಯೇ ನಮಃ ಎಂಬುದು ಪ್ರಸ್ತುತವಾಗಿರಬೇಕೆಂಬುದು ಸನಾತನ ಧರ್ಮದ ಆಶಯ.. ಪೂರ್ವಿಕರು ನೆಟ್ಟಂತಹ ಆಲದ ಮರಕ್ಕೆ ನೇತುಕೊಳ್ಳುವುದು ಎಷ್ಟು ಸಮಂಜಸವಾಗುತ್ತದೆ? ಕೆಲವೇ ಜನರ ಅಭಿಪ್ರಾಯ ಸರ್ವಸಮ್ಮತ ಹೇಗಾಗುತ್ತದೆ? ಯದ್ಭಾವಂ ತದ್ಭವತಿ.. ಮನಸ್ಸಿನಂತೆ ಮಹದೇವ? ಅಲ್ಲವೇ ಮಹಾಶಯರೇ?
      
20-09-10 (09:48 AM)[-] pkbys
ನೀವು ಗೀತೆಯಲ್ಲಿ ಹೇಳುವ ಸ್ವರ್ಗ ಪಡೆಯುವ ವಿಚಾರ ಕೇವಲ ಕರ್ಮಸಂಚಯನ ಮುಗಿಯುವವರೆಗಿನದಾಗಿದ್ದು, ನಂತರ ಜೀವಾತ್ಮವು ಮರಳಿ ಮರ್ತ್ಯ ಲೋಕಕ್ಕೆ ಬರುತ್ತದೆ... ಪುನರ್ಜನ್ಮವಿಲ್ಲವೆನ್ನುವುದುಕ್ಕೆ ಗೀತೆಯ ಆ ಶ್ಲೋಕ ಸಾಕ್ಷ್ಯವಲ್ಲ... ವೇದಗಳಲ್ಲಿ ಪುನರ್ಜನ್ಮದ ಬಗ್ಗೆ ಇಲ್ಲವೆನ್ನುವುದು ಪುನರ್ಜನ್ಮದ ಅಸ್ತಿತ್ವದ ನಿರಾಕರಣೆಗೆ ಪುರಾವೆಯಲ್ಲ.. ವೇದಗಳಾಚೆ ಬೆಳೆಯದಿರಲು ನಾವು ಪಾಶ್ಚಿಮಾತ್ಯ, ಅಥವಾ ಮರುಭೂಮಿ ಧರ್ಮಗಳಂತೆ ಹಾರ್ಡ್ ಕೋಡ್ ಅಲ್ಲದಿರುವುದು.. ವೇದವನ್ನಾಗಲಿ ಮತೇನನ್ನಾಗಲಿ ಪಾಲಿಸಲೇ ಬೇಕು ಎಂದು ಹೇಳುವವರು ಯಾರು?? ಆ ಅಧಿಕಾರ ಯಾರಿಗೂ ಇಲ್ಲ.. ಸ್ವಯಂ ವೇದಕ್ಕೂ ಇಲ್ಲ. "ಆ ನೋ ಭದ್ರಾಃ ಕೃತವೋ ಯಂತು ವಿಶ್ವತಃ" ಎನ್ನುತ್ತದೆ ಋಗ್ವೇದ.... (Rigveda, I - 89 - i) ಅಂದರೆ ಉನ್ನತವಾದ ವಿಚಾರಗಳು ಜಗತ್ತಿನ ಎಲ್ಲ ಮೂಲೆಯಿಂದಲು ಬರಲಿ ಎಂದು . ಯಾವಾಗ ಬೇಕಾದರು ಕಾಲಕ್ಕೆ ಅನುಗುಣವಾಗಿ ಬದಲಾಗುವ, ಕಂಡು ಕೊಂಡ ಹೊಸ ಸತ್ಯಗಳನ್ನು ಅನುಸರಿಸುವ ಸ್ವಾತಂತ್ರ್ಯ ಮೂಲತಃ ವೇದಗಳ ಕಾಲದಿಂದಲೇ  ನಮಗೆ ಬಂದಿದೆ. .. ಯಾವುದೇ ಹೊಸ ಸತ್ಯಗಳನ್ನು ಆವಿಷ್ಕರಿಸುವ ಸ್ವತಂತ್ರ್ಯವನ್ನು ಸೆಮೆಟಿಕ್ ಧರ್ಮಗಳು ನಿರ್ಬಂಧಿಸುತ್ತವೆ.... ಒಪ್ಪುವ ಮಾತಂತೂ ದೂರವೇ ಉಳಿಯಿತು... ಅದಕ್ಕೆ ಮಕ್ಕಾವನ್ನು ಗೋಳಾಕಾರದ ಭೂಮಿಯ ಕೇಂದ್ರವೆಂದು ನಂಬುವುದು. ವಿದ್ಯಾವಂತ ಮುಸಲ್ಮಾನರೂ ಕೇವಲ ಹಾಗೆ ವಾದಿಸದಿದ್ದರೆ ಧರ್ಮಭ್ರಷ್ಟರಾಗುತ್ತೆವೆ ಎಂಬ ಭಯಕ್ಕೆ ವಾದಿಸುತ್ತಾರೆ.. ಕಿ.ಶ.622 ಭೂಮಿ ಚಪ್ಪಟ್ಟೆ ಸಿದ್ದಾಂತಕ್ಕೂ ಮೆಗಲನ್ನಿಂದ ಸಾಬೀತು ಪಡಿಸಲಾದ ಭೂಮಿಯ ಗೋಳ ಸಿದ್ದಾಂತಕ್ಕೂ ಕಾಲಮಾನದ ಬದಲಾವಣೆ ಇದೆ.. ನಾವು ಮುಕ್ತ ಮನಸ್ಸಿನ ಜನ ಒಪ್ಪಬಲ್ಲೆವು... ವೇದಗಳು ನಮ್ಮ ಧರ್ಮಗ್ರಂಥಗಳೇ ಅಲ್ಲ.. ಆ ಕಾಲದಲ್ಲಿ ಕಂಡು ಕೊಂಡ ಸಿದ್ದಾಂತಗಳಷ್ಟೇ.. ಸೆಮೆಟಿಕ್ ಧರ್ಮಗಳ ದೃಷ್ಟಿಕೋನದಲ್ಲೇ ಸನಾತನ ಧರ್ಮಗಳನ್ನು ನೋಡುವ aproach ಸರಿಯಲ್ಲ... ಸ್ವತಂತ್ರ್ಯ ನೀಡುವ ವೇದಗಳನ್ನು ಗೊತ್ತಿದ್ದೋ ಗೊತ್ತಿಲ್ಲದೋ ಅನುಸರಿಸು, ಜನಕ್ಕೂ.. ಇದೇ ಅಂತಿಮ ಸತ್ಯ, ಇದೇ ನೀವು ಪಾಲಿಸಬೇಕಾದದ್ದು ಇದರಾಚೆಗೆ ಏನೂ ಮಾಡಕೂಡದು ಎಂದು ಭೋದಿಸುವುದನ್ನು ಪಾಲಿಸುವ ಜನರ ಬೌದ್ದಿಕ ಬೆಳವಣಿಗೆಗೂ ವ್ಯತ್ಯಾಸವಿದೆಯಲ್ಲವೇ.. ಮುಂದುವರಿಯೋಣ, ನೀವು ಕ್ರಿ.ಶ. 622 ರಿಂದ ಮುಂದೆ ಬನ್ನಿ..


20-09-10 (12:16 PM)[-]  crusade
ಮನುಷ್ಯ ಮೂಲತಃ ಜ್ಞಾನದಾಹಿ, ಪ್ರಶ್ನಾಜೀವಿ ಮತ್ತು ವಿಚಾರವಾದಿ, ಅಲ್ಲದೆ, ನಾವಿಂದು ವೈಜ್ಞಾನಿಕ ಯುಗದಲ್ಲಿ ಜೀವಿಸುವವರಾಗಿದ್ದೇವೆ. ಹೀಗಿರುವಾಗ, ಯಾವುದೇ ಆಧಾರಗಳಿಲ್ಲದ ಕೇವಲ ಹೇಳಿಗೆ ಮೇಲೆ ನಂಬಿಕೆಯಿಡಲು ನಾವೇನು ಬುದ್ಧಿಹೀನರಲ್ಲ. ಪ್ರತಿಯೊಬ್ಬನಿಗೂ ವಿಚಾರಶಕ್ತಿಯಿದೆ, ಆಲೋಚಿಸುವ ತಾಕತ್ತಿದೆ, ಸರಿ ಯಾವುದು ತಪ್ಪು ಯಾವುದು ಎಂದು ನಿರ್ಧರಿಸುವ ಶಕ್ತಿ ಇದೆ. ಹೀಗಿರುವಾಗ ವಾದಕ್ಕೆ ಪೂರಕವಾದ ಆಧಾರ ತರಲು ಹೇಳುವ ನೈತಿಕ ಹಕ್ಕು ಸಹ ಮಾನವನಿಗಿದೆ.

ಕುರಾನ್ ಹೇಳುತ್ತದೆ, "ನೀವು ನಿಮ್ಮ ವಾದದಲ್ಲಿ ಸತ್ಯವಂತರಾಗಿದ್ದರೆ ನಿಮ್ಮ ಆಧಾರ ಪ್ರಮಾಣಗಳನ್ನು ಮುಂದೆ ತನ್ನಿರಿ ಎಂದು ಅವರೊಡನೆ ಹೇಳಿರಿ" ( ಕುರಾನ್ 2:111)
ಆದುದರಿಂದ ಯಾವುದೆ ವಾದವನ್ನು ಮುಂದಿಡುವುದಾದರೂ ಆಧಾರ ಪ್ರಮಾಣಗಳೊಂದಿಗೆ ಮಾತ್ರ ಮುಂದಿಡಬೇಕು. ಆಧಾರ ರಹಿತವಾದ ವಾದವು ಮಿಥ್ಯ ವಾದವೇ ಸರಿ. ಮಿಥ್ಯವಾದ ಮನುಷ್ಯನನ್ನು ಸತ್ಯ ಪಥದಲ್ಲಿ ಕೊಂಡೊಯ್ಯಲಾರದು. ಮಾತ್ರವಲ್ಲ ಅದು ಮನುಷ್ಯ ಸಂಕುಲವನ್ನು ವಿನಾಶದಂಚಿಗೆ ತಲುಪಿಸಿತು.
      
20-09-10 (12:48 PM)[-] pkbys
ಕುರಾನ್ ಹಾಗೆ ಹೇಳಿದ್ದರೆ, ಕುರಾನ್ ಅಂತಿಮ ಸತ್ಯವಲ್ಲ ಎಂದು ಸ್ವತಃ ಘೋಷಿಸಿಕೊಂಡಂತೆ, ಹಾಗೇ ಅದರಲ್ಲಿ ಬದಲಾವಣೆ ಮಾಡಲು ತನ್ನನ್ನು ತಾನು ತೆರೆದುಕೊಂಡಂತೆ. ತನ್ನನ್ನು ತಾನು ಅಂತಿಮ ಎಂದು ಹೇರುತ್ತಿಲ್ಲ ಎಂದು ಘೋಷಿಸಿಕೊಂಡತೆ. ಆದರೆ ಅದೇ ಅಂತಿಮ ಸತ್ಯವೆಂದು ವಾದಿಸುವ ವಿದ್ಯಾವಂತ ಮುಸಲ್ಮಾನರ ಬಗ್ಗೆ ಮಾತ್ರ ನಾನು ಹೇಳುತ್ತಿರುವುದು.. ನಿಜವಾಗಿಯೂ ಇಸ್ಲಾಂ ಅಷ್ಟು ತೆರೆದುಕೊಂಡ ಧರ್ಮವಾಗಿದ್ದರೆ ಗೌರವಾರ್ಹವೇ ಸರಿ.
      
20-09-10 (01:17 PM)crusade
ಮಾನವನ ಉಗಮದ ಆರಂಭದಲ್ಲಿ ಮಾನವರೆಲ್ಲರೂ ಒಂದೇ ಧರ್ಮ, ಒಂದೇ ದೇವರು ಒಂದೇ ಸಿದ್ಧಾಂತದಲ್ಲಿ ನೆಲೆಸಿದ್ದರೂ. ಅವರಿಗೆ ಹೆಚ್ಚೆಚ್ಚು ಜ್ಞಾನ ಕೊಡುತ್ತಾ ಹೋದ ಹಾಗೆ ಪರಸ್ಪರ ಅತಿರೇಕವೆಸಗುವಂತಾಗಲು ತಮ್ಮದೇ ಬೇರೆ ಬೇರೆ ತತ್ವಾದರ್ಶಗಳನ್ನುಂಟು ಮಾಡಿ ಅದನ್ನೇ ಆಚರಿಸಲು, ಅನುಸರಿಸಲು ಪ್ರಾರಂಭಿಸಿರು.

ಕುರಾನ್ ಹೇಳುತ್ತದೆ, " ಆರಂಭದಲ್ಲಿ ಮಾನವರೆಲ್ಲರೂ ಒಂದೇ ಸಮುದಾಯವಾಗಿದ್ದರು.ಅನಂತರ ಅವರು ವಿವಿಧ ತತ್ವಾದರ್ಶಗಳನ್ನುಂಟು ಮಾಡಿಕೊಂಡರು." (ಕುರಾನ್ 10:19)  ಮತ್ತು " ಅವರು ಜ್ಞಾನ ಬಂದ ಅನಂತರ ಒಬ್ಬರು ಇನ್ನೊಬ್ಬರ ಮೇಲೆ ಅತಿರೇಕವೆಸಗ ಬಯಸಿದರೆಂದಲ್ಲದೆ ಹೀಗೆ ಮಾಡಲು ಬೇರಾವ ಕಾರಣವೂ ಇರಲಿಲ್ಲ.." ( ಕುರಾನ್ 3:19).

ಹೀಗೆ ತಮ್ಮದೇ ತತ್ವಾದರ್ಶಗಳನ್ನುಂಟುಮಾಡಿಕೊಂಡು ನೈಜ ಧರ್ಮದಿಂದ ವ್ಯತಿ ಚಲಿಸಿ ಪರಸ್ಪರ ಕಚ್ಚಾಡ ತೊಡಗಿದರು.

20-09-10 (02:17 PM)Manju
ಖುರಾನ್ ಹಾಗೆ ಉಲ್ಲೇಖಿಸಿದ್ದರೆ ಅದು ಸರಿಯೇ ಮಹನೀಯರೆ... ಒಂದೇ ಸಮುದಾಯವಾಗಿರಲು ಹೇಗೆ ಸಾಧ್ಯ? ಆರಂಭದಲ್ಲಿ ಯಾವ ಸಮುದಾಯವೂ ಇರಲಿಲ್ಲವೆಂಬುದೂ, ನಂತರದಲ್ಲಿ ಸಮುದಾಯಗಳು ಏರ್ಪಟ್ಟವೆಂದೂ ಇದ್ದಿದ್ದಲ್ಲಿ ಅದು ಸ್ವಾಗತಾರ್ಹ.. ಮಾನವ ಮಾನವನಾಗಿ ವರ್ತಿಸುತ್ತಿಲ್ಲ ಕ್ರುಸೇಡ್.. ಆತನಲ್ಲಿ
ಜನ್ಮಜನ್ಮಾಂತರಗಳ ಮೃಗೀಯ ಗುಣಗಳು ಇನ್ನೂ ಹೋಗಿಲ್ಲವೆಂಬುದಕ್ಕೆ ಅವನ ವರ್ತನೆಯೇ ಸಾಕ್ಷಿ. ಪುನರ್ಜನ್ಮಗಳು ಇಲ್ಲವೆಂದಾದಲ್ಲಿ, ಆತನಲ್ಲಿ ಮೃಗೀಯತ್ವ ಹೇಗೆ ಬರಲು ಸಾಧ್ಯ? ಜನ್ಮಾಂತರದಿಂದ ಸುಪ್ತಮನಸಿನಲ್ಲಿ ಕೊಂಡುಬಂದರಷ್ಟೇ ಅದು ಸಾಧ್ಯ... ನೂರಕ್ಕೆ 95ರಷ್ಟು ಜನ ಅಪ್ರಾಜ್ಞರು.. ಆಚಾರ ವಿಚಾರದ ಗೋಜಿಗೆ ಹೋಗದೆ ಬದುಕು ಸವೆಸುವವರು.. ಅವರಿಗಿದೆಲ್ಲಾ ಬೇಕಿಲ್ಲ.. ಕತ್ತಲಿನಿಂದ ಬೆಳಕಿನೆಡೆಗೆ ನಡೆದವರು ವಿರಳಾತಿವಿರಳ..

20-09-10 (02:08 PM)[-] pkbys
ಮಾನವ ಉಗಮದಲ್ಲಿಯೂ ಒಂದೇ ಧರ್ಮ, ಒಂದೇ ದೇವರು, ಎಂಬುದು ಇರಲ್ಲಿಲ್ಲ. ವಾಸ್ತವವೆಂದರೆ, ಆಗ ಧರ್ಮವಾಗಲಿ ದೇವರಾಗಲಿ ಇರಲೇ ಇಲ್ಲ. ಇದ್ದದ್ದು ವನ್ಯಧರ್ಮ, ಕಿತ್ತು ತಿನ್ನುವುದು..... ಆಹಾರ, ಬಡಿದಾಟ ಮೊದಲಾದ ಕಾರಣಗಳಿಂದ ವಲಸೆ ಹೋಗಿ ಬೇರೆ ಬೇರೆ ಪಂಗಡಗಳಾದಾಗ, ವಿಭಜಿತ ಮಾನವ ಸಮೂಹ, ತನ್ನ ಆತಂರಿಕ ವ್ಯವಸ್ಥೆಯನ್ನು ನಿರ್ವಹಿಸುವ ಸಲುವಾಗಿ ಧರ್ಮ ಅಧರ್ಮಗಳನ್ನು ಮಾಡಿಕೊಂಡಿತು.. ಅವು ಸಂಸ್ಕೃತಿಯಾಯಿತು.

ಹೆಣ್ಣು ಹೆಚ್ಚಿದ ಪಂಗಡ ಬಹುಪತ್ನಿತ್ವವನ್ನು ಅನುಮೋದಿಸಿದರೆ, ಇಲ್ಲೇ ದಕ್ಷಿಣ ಭಾರತದ ಒಂದು ಬುಡಕಟ್ಟು ಜನಾಂಗ ತನ್ನ ಪಂಗಡದ ಹೆಣ್ಣುಗಳು ತನ್ನ ಪಂಗಡದವರೆಲ್ಲ ಪುರುಷರಿಗೆಲ್ಲ ಏಕಕಾಲದಲ್ಲಿ ಪತ್ನಿಯೆನಿಸುವ, ಹುಟ್ಟುವ ಮಕ್ಕಳನ್ನು ಇವನ ಮಗ, ಅವನ ಮಗ ಎಂದು ಗುರುತಿಸದೆ, ಪಂಗಡದ ಮಗು ಎಂದು ಗುರುತಿಸುವ ಮತ್ತು ಅದು ಧರ್ಮವೇ ಸರಿ ಎಂದು ಒಪ್ಪಿದವು. ಅದು ಹೊರಗಿನ ನಮಗೆ ಅಧರ್ಮ ಅನಾಗರೀಕತೆ ಎನಿಸಬಹುದು. ಹೆಣ್ಣನ್ನು ಬುರ್ಖಾದೊಳಗೆ ಮುಚ್ಚಿಹಾಕುವುದು ಒಬ್ಬ ಹಿಂದುವಾಗಿ ನನಗೆ ಅಧರ್ಮ, ಅನಾಗರೀಕತೆ, ಶೋಷಣೆಯಾದರೆ ಒಬ್ಬ ಮುಸ್ಲಿಂ ಆಗಿ ನಿಮಗದು ಸಭ್ಯತೆಯ ಚಿಹ್ನೆ. ಇರಲಿ... ಹೀಗೆ ಬೇರೆ ಬೇರೆ ನಡಾವಳಿಗಳನ್ನು ಹೊಂದಿದ ಮಾನವ ಪಂಗಡಗಳು ತನಗಿಂತಲೂ ಹೆಚ್ಚಿನ, ಸರ್ವಶಕ್ತ, ಪರಮದಯಾಳು ಶಕ್ತಿಯೊಂದರ ಬಗ್ಗೆ ಚಿಂತಿಸಿತು.. ತನಗೆ ಸರಿ ತೋರಿದ್ದನ್ನು ಸತ್ಯವೆಂದು ನಂಬಿತು..ಕಂಡು ಕೊಂಡ ಆ ಸತ್ಯ ಸುಳ್ಳಾದರೆ ಅಥವಾ ಬೇರೊಂದು ಬಲಿಷ್ಠ ಪಂಗಡ ಯುದ್ದದಲ್ಲಿ ಸೋಲಿಸಿದಾಗ ಆ ಪಂಗಡ ಹೇರಿದ ಆ ಪಂಗಡದ ಸತ್ಯವನ್ನು ತನ್ನದೆಂದು ಒಪ್ಪಿಕೊಂಡಿತು.

ನೀವು ಕುರಾನ್ Quote ಮೂಲಕ ಹೇಳಿರುವ ಇನ್ನೊಬ್ಬರ ಮೇಲೆ ಅತಿರೇಕವೆಸಗುವ ಸಂಸ್ಕೃತಿ ಕೆಲವು ಪಂಗಡಗಳಲ್ಲಿ ಮೈದಳೆಯಿತು. ಕೆಲವು ಪಂಗಡಗಳಲ್ಲಿ, ಸ್ವತಃ ಸತ್ಯಾನ್ವೇಷಣೆಯ ಮಾಡಲು ಪ್ರೋತ್ಸಾಹಿಸಿದರೆ ಕೆಲವು ನೈಜ ಧರ್ಮ ನಮ್ಮದೇ, ಇದನ್ನೇ ನೀವು ಆಚರಿಸಬೇಕು, ತಪ್ಪಿದರೆ ನೀವು ಕಾಫಿರನೋ, ತುಚ್ಚನೋ, ನೀಚನೋ, ಅಥವಾ ಇನ್ನೇನೋ ಎಂದು ಹೇಳಿದವು. ಸ್ವರ್ಗದ ಹಕ್ಕಿಲ್ಲ ಎಂದವು.

ಧರ್ಮವನ್ನು ಹೇರದಿದ್ದರೂ ಸನಾತನ ಧರ್ಮ ಕೂಡ ತುಚ್ಚ ನೀಚರ ಬಗ್ಗೆ ಮಾತನಾಡುತ್ತದೆ. ಆದರೆ ಸಮಯ ಕಳೆದಂತೆ ಸನಾತನ ಧರ್ಮ ಬದಲಾಗುತ್ತಾ ಬಂತು... ಹೆಚ್ಚು ಹೆಚ್ಚು ಜನ ಸತ್ಯಾನ್ವೇಷಣೆಗೆ ಹೊರಟರು.. ಕೆಲವರಿಗೆ ಅದ್ವೈತ ಪ್ರಿಯವಾದರೆ, ಕೆಲವರಿಗೆ ದ್ವೈತ ಸರಿ ಎನಿಸಿತು. ಶಾಕ್ತ, ಗಾಣಪತ್ಯ, ಶೈವ, ವೈಷ್ಣವ, ಜೈನ, ಬೌದ್ದ, ಚಾರ್ವಾಕ(ನಾಸ್ತಿಕ) ನಂಬಿಕೆಗಳು ಬಹಳ ಜನರ ಸತ್ಯಾನ್ವೇಷಣೆ ಮತ್ತು ಅದರ ಫಲಗಳಾಗಿ ಹೊರಹೊಮ್ಮಿದವು...

ಖಾಲ್ಸಾ ಪಂಥವು ಮುಸ್ಲಿಂ ದಾಳಿಕೋರರ ವಿರುದ್ದವಾಗಿ ಹುಟ್ಟುಕೊಂಡ ಪಂಥವಾದರೂ, ಹಿಂದೂ ಮತ್ತು ಮುಸ್ಲಿಂ ಎರಡೂ ಪಂಗಡಗಳ ಉತ್ತಮವೆನಿಸಿದ್ದನ್ನು ಆಯ್ದುಕೊಳ್ಳಲ್ಲು ಹಿಂಜರಿಯಲ್ಲಿಲ್ಲ. ಹೀಗೆ ಬಹಳಷ್ಟು ನಂಬಿಕೆ ಆಚರಣೆಗಳನ್ನು ಹೊಂದಿದರೂ, ಈ ಸನಾತನ ಧರ್ಮ ಶಾಖೆಗಳು ಇನ್ನೊಂದರ ಮೇಲೆ ಅತಿಕ್ರಮಣ ನಡೆಸಲಿಲ್ಲ.. ಯಾರು ಯಾವುದನ್ನು ಮೆಚ್ಚುವರೋ ಅದರ ಹಿಂದೆ ಹೋಗಬಹುದಿತ್ತು. ಧರ್ಮಪ್ರಚಾರಗಳೂ ಹೆಚ್ಚಾಗಿ ನಡೆದರೂ, ಸೈದ್ದಾಂತಿಕ ವಾದಗಳ ಮೂಲಕ ನಡೆದವೆ ಹೊರತು, ಕತ್ತಿಯ ಮೊನೆಯಿಂದ ನಡೆಯಲ್ಲಿಲ್ಲ.

"ನೈಜ ಧರ್ಮದಿಂದ ಚಲಿಸಿ ಕಚ್ಚಾಡತೊಡಗಿದವು" ಎಂದು ಬರೆದಿದ್ದೀರಿ. ನೈಜಧರ್ಮ ಯಾವುದು ಎಂಬುದು ಎಂದಿಗೂ ತೀರ್ಮಾನವಾಗದ ವಿಷಯ..

ಮನಸ್ಸು ಹೇಳುವುದೇ ಧರ್ಮ ಎಂದು ಕೃಷ್ಣ ಹೇಳುತ್ತಾನೆ. ಯಾವುದು ಬೇರೆಯವರಿಗೆ ಹಾನಿಯಾಗದಂತೆ ಆಚರಿಸಲ್ಪಡುವುದೋ ಅದು ಧರ್ಮ, ಯಾವುದು ಹೇರಲ್ಪಡುವುದಿಲ್ಲವೋ, ಯಾವುದು ತನ್ನನ್ನು ತಾನು ತಪ್ಪಾದಾಗ ತಪ್ಪು ಎಂದು ಗುರುತಿಸಿ ಒಪ್ಪಿಕೊಳ್ಳಲ್ಲು ,ತನ್ನ ಸಿದ್ದಾಂತವನ್ನು ಬದಲಿಸಿಕೊಳ್ಳಲು ತಯಾರಿದೆಯೋ ಅದು ಧರ್ಮ. ಕ್ರಿ.ಶ. 622ರಲ್ಲಿ ಮಕ್ಕ ಕೇಂದ್ರವೆಂದು ಹೇಳಿದೆಯೆಂದು ಇಂದೂ ವಾದಿಸುವ, ವಿದ್ಯಾವಂತ ಜನರ ಬಗ್ಗೆ ಏನು ಹೇಳಬಹುದು.

20-09-10 (02:23 PM)[-] Manju
pkbys ಅವರೇ... ದೇವರಿರಲಿಲ್ಲವೆಂದಲ್ಲ... ಅಸ್ತಿತ್ವದ ಅರಿವಿರಲಿಲ್ಲ ಎಂದಲ್ಲವೇ???


20-09-10 (02:43 PM)pkbys
ಹೌದು, Manju ರವರೆ ನಿಮ್ಮ ಮಾತೇ ಸರಿ... Truth is the Truth which gives the feeling of the Truth, not the Truth which is Truly Truth. ಯಾವ ಸತ್ಯ ತನ್ನ ಅಸ್ತಿತ್ವದ ಬಗ್ಗೆ ಸಾಬೀತು ಪಡಿಸಿಕೊಳ್ಳಲಾರದೋ ಅದು ಸತ್ಯವಾದರೂ ಅದಕ್ಯಾವ ಬೆಲೆಯೂ ಇಲ್ಲ. ಅಂದಿನ ಅರಿವಿಲ್ಲದ ಮಾನವನಿಗೆ ದೇವರ ಅಸ್ತಿತ್ವದ ಬಗ್ಗೆ ಗೊತ್ತಿಲ್ಲದಿದ್ದರಿಂದ ಅವನ ಪಾಲಿಗೆ ದೇವರಿಲ್ಲ.. ನಾನು ಆ ಮಾನವನ ದೃಷ್ಟಿಕೋನದಿಂದ ಬರೆದದ್ದು,


5 comments:

  1. ರಿ pkbys ನಿವು ಯಾವನೂ ಕೆಲಸಕ್ಕೆ ಬರ್ದ್ವಾನ್ ಜೊತೆ ಇಸ್ಲಮ್ ಬಗ್ಗೆ ಚೆರ್ಚೆ ಮಾಡುವುಕ್ಕಿ0ತ ನಿಮಗೆ ಸ್ವಲ್ಪ ನಾದರು ತಿಳುವಳಿಕೆ ಇದ್ದಾರೆ ಜಾಕಿರ್ ನಾಯಕ್ (peace TV) ಸ0ಸ್ಥಾಪಕ ನ ಜೋತೆ ಸಾರ್ವಜನಿಕವಾಗಿ ಚರ್ಚೆ ಮಾಡಿ ನ0ತಾರಾ ನೀವು ಹೇಳುತ್ತಿರುವ ಸುಳ್ಳನ್ನು ಸರಿಪಡಿಸಿಕೊಳೀ ನೀವು ಎಶ್ಟೇ ಸುಳ್ಳನ್ನು ಹೇಳಿದರು ಅದು ವೇಸ್ಟ್...

    ReplyDelete
  2. ಖಂಡಿತಾ crusade ಕೆಲಸಕ್ಕೆ ಬಾರದವರಲ್ಲ raza ಅವರೇ, ಮುಂದಿನ ಕಂತುಗಳಲ್ಲಿ ಅವರ ಪಾಂಡಿತ್ಯಕ್ಕೆ ನೀವು ಬೆರಗಾಗುವಿರಿ... ಭೂಮಿಯನ್ನ ಗೋಳ ಎಂದು ಗೊತ್ತಿದ್ದರೂ ಮಕ್ಕಾವನ್ನ ಜಗತ್ತಿನ ಕೇಂದ್ರ ಎಂದು ಹೇಳುವ, ಆ ಜಾಕಿರ್ ನಾಯಕ್‌ಗಿಂತಲೂ ಹೆಚ್ಚಿನ ತಿಳುವಳಿಕೆ ಉಳ್ಳವರು. ಒಂದು ವಿಚಾರದಲ್ಲಿ ಜಾಕಿರ್‌ರಿಂದ ನಾನು ಕಲಿತಿದ್ದೇನೆ... ವಾದಗಳನ್ನು ಮಂಡಿಸುವಾಗ ಬಹಳ graceful ಆಗಿ ಮಂಡಿಸಬೇಕು, ಸೌಹಾರ್ಧಪೂರ್ಣವಾಗಿರಬೇಕು ಎಂದು. ಜಾಕಿರ್‌ಗಿಂತಲೂ ಹೆಚ್ಚಿನ gracefullness ನಾನು crusade ರಲ್ಲಿ ಕಂಡೆ. ದಯವಿಟ್ಟು ನನ್ನ ಸುಳ್ಳುಗಳು ಯಾವುವು ಎಂದು ನೀವು ಹೇಳಿದರೆ, ನನ್ನನ್ನು ನಾನು ತಿದ್ದಿಕೊಳ್ಳಲು ಸಹಾಯವಾಗುವುದು.... ವೇಸ್ಟ್ ಸುಳ್ಳು ಹೇಳಲು ನನಗೂ ಇಷ್ಟವಿಲ್ಲ. ನನಗೆ ಅರಿವಿಲ್ಲದೇ ಯಾವುದಾದರೂ ಸುಳ್ಳು ಹೇಳುತ್ತಿದ್ದರೆ ದಯಮಾಡಿ ತಿಳಿಸಿ..

    ReplyDelete
  3. ಉತ್ತಮವಾದ ಚರ್ಚೆ..

    ReplyDelete