Monday, 13 June 2011

ಮಹಾ ಮಂಥನ-3 (ಭಾರತದ ಮೇಲೆ ಮಹಮದೀಯರ ಆಕ್ರಮಣ, ಬುರ್ಖಾ, ಜೆಸಿಯಾ; crusade ವಿಚಾರಗಳು)

ಈ ಕಂತಿನಲ್ಲಿ crusade ಸೆಮೆಟಿಕ್ ಧರ್ಮಗಳ ಕುರಿತಾದ (ಭಾರತದ ಮೇಲೆ ಇಸ್ಲಾಂನ ಆಕ್ರಮಣ, ಅಮುಸ್ಲಿಮರ ಮೇಲೆ ಹೇರಲ್ಪಟ್ಟ ಜೆಝಿಯಾ ತಲೆಕಂದಾಯ, ಬುರ್ಖಾ ಮೊದಲಾದವುಗಳ ಬಗ್ಗೆ) ನನ್ನ (pkbys) ಮತ್ತು Manju ಪ್ರಶ್ನೆಗಳಿಗೆ ವಾದಗಳನ್ನ ಮಂಡಿಸಿದ್ದಾರೆ.. 

ಮೊದಲ ಕಂತಿಗೆ ಮುಂದೆ ಕ್ಲಿಕ್ ಮಾಡಿ ==> ಮಹಾ ಮಂಥನ - 1 (bhgte ರವರ ರಂಗ ಪ್ರವೇಶ)
ಎರಡನೆ ಕಂತಿಗೆ ಮುಂದೆ ಕ್ಲಿಕ್ ಮಾಡಿ ==> ಮಹಾ ಮಂಥನ - 2 (crusade ಮತ್ತು Manju ತರ್ಕಗಳು)

ಮುಂದಿನ ಕಂತಿನಲ್ಲಿ ಮತ್ತಷ್ಟು ಕಟು ಸತ್ಯಗಳೊಡನ bhgte ಮತ್ತೆ ಬರಲಿದ್ದಾರೆ

(ಅನವಶ್ಯಕ ಭಾಗಗಳನ್ನು ತೆಗೆದು ಪ್ರೂಫ್ ರೀಡ್ ಮಾಡಿರುವುದರಿಂದ, ಅಲ್ಪ ಸ್ವಲ್ಪ ಬದಲಾವಣೆಗೊಳಪಟ್ಟಿದ್ದರೂ ಸಂವಾದದ ಓಘ ಮತ್ತು ಭಾಗವಹಿಸಿದವರ ನೈಸರ್ಗಿಕ ನ್ಯಾಯಕ್ಕೆ ಧಕ್ಕೆಯಾಗದ ರೀತಿ ನಿರೂಪಿಸಲಾಗಿದೆ.)


20-09-10 (03:58 PM)[-]  crusade
ಜಗತ್ತಿನಲ್ಲಿರುವ ಧರ್ಮಗಳಲ್ಲಿ ಅತಿ ಹೆಚ್ಚು ತಪ್ಪು ಕಲ್ಪನೆಗೆ ಒಳಪಟ್ಟಿರುವ ಧರ್ಮ ಇಸ್ಲಾಮ್, ಜಗತ್ತಿನ ರೂಪುರೇಷೆಯನ್ನೇ ಬದಲಾಯಿಸಿದ, ಮರ್ದಿತರನ್ನು ಮೇಲೆತ್ತಿದ, ಮೇಲು-ಕೀಳೆಂಬ ಭಾವನೆಯನ್ನು ಹೋಗಲಾಡಿಸಿ ಎಲ್ಲರೂ ಸಮಾನರೆಂದು ಘೋಷಿಸಿದಂತಹ, ಹೆಣ್ಣು ಮಕ್ಕಳನ್ನು ಜೀವಂತ ಹೂಳಲ್ಪಡುತ್ತಿದ್ದ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಷ್ಟೇ ಪ್ರೀತಿ ಗೌರವ ಕೊಡಬೇಕೆಂದು ಹೇಳಿ ಇಂಥಾ ದುಷ್ಟ ಸಂಪ್ರದಾಯವನ್ನು ಅಳಿಸಿಹಾಕಿದಂತಹ ಧರ್ಮವಾಗಿದೆ, ಇಸ್ಲಾಮ್ ಖಡ್ಗದಿಂದ ಪಸರಿಸಿದ ಧರ್ಮ ವೆಂಬುದು ಒಂದು ಗೌರಾ ಸುಳ್ಳಾಗಿದೆ. ಮುಹಮ್ಮದ್(ಸ) ರ ಹಾಗೂ ಖಲೀಫರ ಕಾಲದಲ್ಲಿ ಯುದ್ಧಗಳು ನಡೆದಿರುವುದು ನಿಜವೇ ಆಗಿದೆ, ಆದರೆ ಆ ಯುದ್ಧಗಳು ಧರ್ಮವನ್ನೂ ಪಸರಿಸಲು ಮಾಡಿದಂತಹ ಯುದ್ಧಗಳಾಗಿರಲ್ಲಿಲ್ಲ. ಬದಲಾಗಿ, ಅವು ಸ್ವರಕ್ಷಣೆಗಾಗಿ ಮತ್ತು ಶತ್ರುಗಳ ಉಪಟಳವನ್ನು ಆಣಗಿಸಲಿಕ್ಕಾಗಿ ಮತ್ತು ಅಧರ್ಮದ ವಿರುದ್ಧ ಹೋರಾಡಲು ಮಾಡಿದ ಯುದ್ಧಗಳಾಗಿವೆ. 
ಕುರಾನ್ ಹೇಳುತ್ತದೆ, "ಧರ್ಮದ ವಿಷಯದಲ್ಲಿ ಯಾವುದೇ ಒತ್ತಾಯ ಬಲಾತ್ಕಾರಗಳಿಲ್ಲ. ಸನ್ಮಾರ್ಗವು ದುರ್ಮಾಗದಿಂದ ಬೇರ್ಪಟ್ಟಿದೆ.." (ಕುರಾನ್ 2:256).

1400 ವರ್ಷಗಳಿಂದ ಮುಸ್ಲಿಮರು ಅರೇಬಿಯಾದ ಒಡೆಯರಾಗಿದ್ದಾರೆ, ಆದರೆ ಇಂದಿಗೂ ಜನ್ಮತಃ ಕ್ರೈಸ್ತರು 1 ಕೋಟಿ 40 ಲಕ್ಷ ಅರಬ್ ಕ್ರೈಸ್ತರಿದ್ದಾರೆ, ಮೊಘಲರು 1000 ವರ್ಷಗಳ ತನಕ ಭಾರತವನ್ನು ಆಳಿದರು ಅವರಿಚ್ಚಿಸುತ್ತಿದ್ದರೆ ಬಲ ಪ್ರಯೋಗಿಸಿ ಭಾರತದ ಪ್ರತಿಯೊಬ್ಬನನ್ನೂ ಮುಸ್ಲಿಮನನ್ನಾಗಿ ಮಾಡಬಹುದಿತ್ತು, ಆದರೆ ಇಂದು ಭಾರತದ ಜನಸಂಖ್ಯೆಯಲ್ಲಿ 80%ಗಿಂತಾ ಜಾಸ್ತಿ ಇರುವವರು ಮುಸ್ಲಿಮೇತರರಾಗಿದ್ದಾರೆ. ಇಸ್ಲಾಮ್ ಖಡ್ಗದ ಮೂಲಕ ಹಬ್ಬಲಿಲ್ಲವೆನ್ನುವುದಕ್ಕೆ ಇದೇ ಜ್ವಲಂತ ಸಾಕ್ಷಿಯಾಗಿದೆ.

ಸ್ವಾಮಿ ವಿವೇಕಾನಂದರು ಹೇಳುತ್ತಾರೆ, "ಭಾರತಖಂಡದಲ್ಲಿ ಮಹಮ್ಮದಿಯರ ವಿಜಯ ದೀನರಿಗೆ ದುರ್ಬಲರಿಗೆ ಮುಕ್ತಿಯಂತೆ ಬಂತು ಆದ ಕಾರಣ ದೇಶದಲ್ಲಿ ಐದನೇ ಒಂದು ಪಾಲು ಮಹಮ್ಮದಿಯರಾದರು...." (ಜ.ಹೋ.ನಾರಾಯಣ ಸ್ವಾಮಿಯವರ ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು ಪುಟ 62)

20-09-10 (05:52 PM)Manju
ಜೆಸ್ಸಿಯಾ ತಲೆಗಂದಾಯ ಮುಸ್ಲಿಮೇತರರಿಗೆ ಯಾಕಿತ್ತು.? ಛತ್ರಪತಿ ಶಿವಾಜೀ, ರಾಣಾ ಪ್ರತಾಪರ ವಿರೋಧ ಎದುರಿಸದೆ ಹೋಗಿದ್ದಿದ್ದರೆ ಹಾಗೆ ಮತಾಂತರ ಮಾಡಲಿಕ್ಕೂ ಹೇಸುತ್ತಿರಲಿಲ್ಲ.. ಅನ್ನಿ... ಮೊಘಲರಿಗೆ ಅಖಂಡ ಭಾರತವನ್ನು ಗೆಲ್ಲಲಾಗಲಿಲ್ಲ.. ಅವರ ವ್ಯಾಪ್ತಿ ಉತ್ತರಕ್ಕಷ್ಟೇ ಸೀಮಿತಗೊಂಡಿತ್ತು.. ಮತಾಂತರದ ಬಗ್ಗೆ ಸ್ವಾಮಿ ವಿವೇಕಾನಂದರು ಉಲ್ಲೇಖಿಸಿರುವುದು ಕ್ರೈಸ್ತರ ಬಗ್ಗೆ, ಅದೂ ಷಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ.. ಅವರ ಹೇಳಿಕೆಗಳನ್ನು ಒಪ್ಪೋಣ... ಇನ್ನು ಹೆಣ್ಣುಮಕ್ಕಳಿಗೆ ಸಮಾನತೆಯ ಬಗ್ಗೆ ಮಾತನಾಡಿದಿರಿ.. ಅದರ ಬಗ್ಗೆ ನೀವು ಮಾತನಾಡದಿರುವುದು ಲೇಸು... ಬೂಟಾಟಿಕೆಯ ಮಾತುಗಳವು..

20-09-10 (07:48 PM)[-] pkbys
ಇಸ್ಲಾಂ ಖಡ್ಗದಿಂದ ಪಸರಿಸದಿದ್ದರೆ ಪಾರ್ಸಿಗಳು ಇರಾನಿನಲೇಕಿಲ್ಲ... ಭಾರತದಲೇಕಿದ್ದಾರೆ..  ಮಾತೃಭೂಮಿ ಅವರಿಗೆ ಬೇಡವೋ? ಭಾರತ ಪಾಕಿಸ್ತಾನದಷ್ಟು ದೊಡ್ಡ ಭೂಭಾಗವನ್ನು ಯಾವ ಜನಾಂಗಕ್ಕಾಗಿ ಕಳೆದುಕೊಳ್ಳಬೇಕಾಯಿತು? ಬಾಬ್ರಿಯಿಂದ ಹಿಡಿದು ಶ್ರೀರಂಗಪಟ್ಟಣದ ಮಸೀದಿಯ ತನಕ ಹಿಂದು ದೇವಾಲಯಗಳ ಮೇಲೆ ನಡೆದ ಆಕ್ರಮಣ ಅತೀರೇಕಗಳು ಖಡ್ಗದ ತುದಿಯಿಂದಾಗಲಿಲ್ಲವೇ.. ಸಿಖ್ ಗುರು ಗೋವಿಂದ ಸಿಂಗ್‌ ರು ಪ್ರಾಣ ಕಳೆದು ಕೊಂಡದ್ದು ಯಾಕೆ, ಯಾರಿಂದ, ಹೇಗೆ, ಯಾವ ಕಾರಣಕ್ಕೆ ಎಂಬುದು ಖಡ್ಗದ ತುದಿಯನ್ನು ತೋರಿಸದೇ, ಕಾಶ್ಮೀರಿ ಪಂಡಿತರು ಮೊಘಲರ ಕಾಲದಲ್ಲಿ ಖಡ್ಗದ ತುದಿಯಲ್ಲಿ ಮತಾಂತರ ಹೊಂದಿ ಇಂದಿಗೂ ಮುಸಲ್ಮಾನರಾಗಿ ಮುಂದುವರಿದಿಲ್ಲವೇ. ಮೂಲದಲ್ಲಿ ಅವರು ಕಾಶ್ಮೀರಿ ಪಂಡಿತರೇ ಆಗಿದ್ದರು ಎಂಬುದನ್ನು ಇಂದಿಗೂ ಅವರ ಹೆಸರಿನಲ್ಲಿರುವ ಅವರ ಸರ್ನೇಮ್ ಗಳು ಹೇಳುತ್ತವೆ. ಮಲಬಾರ್‌ಲ್ಲಿ ಟಿಪ್ಪು ನಡೆಸಿದ ಮತಾಂತರದ ಕೃತ್ಯಗಳು ಖಡ್ಗದ ತುದಿಯಲ್ಲಲ್ಲದೇ ಹೂವಿನಿಂದ ಮಾಡಿದನೆ... ನೀವು ಹೇಳಿದ ಅರೇಬಿಯಾದಲ್ಲಿ ಬದುಕುತ್ತಿರುವ ಆ ಮುಸ್ಲಿಮೇತರರು ನಮಾಝಿನ ಸಮಯದಲ್ಲಿ ಬೀದಿಯಲ್ಲಿ ತಿರುಗಾಡಲು ಸ್ವತಂತ್ರರೇ? ಹಿಂದು ದೇವಾಲಯ ಯಾವುದಾದರು ಇದೆಯೇ? ಶಾಂತಿ ಹೆಸರಿಟ್ಟುಕೊಂಡ ಧರ್ಮ ಅರಬ್ ನಾಡಿನಲ್ಲಿ ಹಂದಿ ಜಾತಿಯನ್ನು ಬದುಕಲು ಬಿಟ್ಟಿದೆಯೆ? ಹೆಣ್ಣುಮಕ್ಕಳ ಸಮಾನತೆಯ ಬಗ್ಗೆ ಮಾತೇ ಬೇಡ.. ಗಂಡಿಗೂ ಬುರ್ಖಾ ಹಾಕಿ, ಆಮೇಲೆ ಸ್ವಾತಂತ್ರ್ಯದ ಸಮಾನತೆಯ ಮಾತಾಡಿ...

20-09-10 (09:07 PM)[-]  pkbys
ಮೊಘಲರು 1000 ವರ್ಷದಷ್ಟು ಭಾರತವನ್ನು ಆಳಲಿಲ್ಲ.. ಮತ್ತು ಅವರೆಲ್ಲರು ಧರ್ಮಪ್ರಸಾರಕ್ಕಾಗಿ ಮುಡಿಪಾಗಿರಲಿಲ್ಲ... ಬಾಬರ್ ಹೆಚ್ಚು ಆಳಲಾಗಲಿಲ್ಲ. ಹುಮಾಯೂನ್ ಅಂತು ಯುದ್ದದಲೇ ಕಳೆದ.. ಸಾಕಷ್ಟು ಕಾಲ ಅವನು ದೇಶ ಭ್ರಷ್ಟನಾಗಿದ್ದ. ಅಕ್ಬರನಿಗೆ ರಜಪೂತರ ಸಹಾಯ ಬೇಕಿತ್ತು, ಅವನು ರಿಸ್ಕ್‌ ತಗೆದುಕೊಳ್ಳಲಿಲ್ಲ.... ಅವನ ನಂತರದ ಜಹಾಂಗೀರ್ ಒಬ್ಬ ಸ್ತ್ರೀಲೋಲುಪ, ಮದ್ಯವ್ಯಸನಿ, ಅವನಿಗೆ ಇಸ್ಲಾಂ ಅಲ್ಲ. ಯಾವುದರ ಮೇಲೂ ಆಸಕ್ತಿಯಾಗಲಿ, ಹತೋಟಿಯಾಗಲಿ ಇರಲಿಲ್ಲ.. ಅವನ ರಾಣಿ ನೂರ್ ಜಹಾನ್ ಬೇಗಂ (ಮೆಹರುನ್ನಿಸಾ) ಆಡಳಿತ ನಡೆಸಿದಳು... ಅವಳ ಕೊಬ್ಬಿನ ಕಥೆಯೇ ಬೇರೆ ಇದೆ.. ಇನ್ನು ಅವನ ನಂತರ ಅಧಿಕಾರಕ್ಕೆ ಬಂದ ಶಹಜಹನ್ ಬಹಳ ಕಿರುಕುಳ ನೀಡಿದವನು... ಔರಂಗಾಜೇಬನ ಬಗ್ಗೆ ಏನು ಹೇಳಲಿ.. ಕಾಶಿ ನಗರದ ಜಾಮಾ ಮಸೀದಿ ಕೂಗಿ ಹೇಳುತ್ತಿದೆ.. ಅವನು ಒಡೆದು ನಿರ್ಮಿಸಿದ ದೇವಾಲಯದ ಬಗ್ಗೆ... ಕಾಂಗ್ರೆಸ್ ಸರ್ಕಾರ ಎಷ್ಟು ಮುಚ್ಚಿಟ್ಟರೂ ಇತಿಹಾಸ ಎಲ್ಲರೆದುರು ನಗ್ನವಾಗಿ ನಿಂತಿದೆ. ಶಿವಾಜಿ ಇಲ್ಲದಿದ್ದರೆ ಅದೇನಾಗುತ್ತಿತ್ತೋ..

ನಿಮ್ಮ ಒಂದು ಮಾತು ಸತ್ಯ ಇಸ್ಲಾಂನ ವಿಜಯ, ದೀನ ದುರ್ಬಲರಿಗೆ ಮುಕ್ತಿಯಂತೆ ಬಂತು... ಎಲ್ಲಿಯೂ ಸಲ್ಲದವರು ಖಡ್ಗದ ಮೊನೆಯಿಲ್ಲದೆ ಸ್ವಯಂ ಇಚ್ಚೆಯಿಂದ ಇಸ್ಲಾಂ ಸೇರಿದರು.. ಅವರು ಕಂಡು ಕೇಳರಿಯದನ್ನ ಇಸ್ಲಾಂ ನೀಡಿತು... ‌ಅವರನ್ನು ತುಚ್ಚರೆಂದು ಪರಿಗಣಿಸಿದ್ದ ಜನರು ಅವರ ಪದಾಘಾತಕ್ಕೆ ಸಿಲುಕುವಂತಾಯಿತು.. ಆದರೆ ಯೋಗ್ಯತೆ ಎಂಬುದೂ ಒಂದಿದೆಯಲ್ಲವೇ. ಅವರು ತುಚ್ಚರೆನಿಸಿಕೊಂಡಿದ್ದು ಅವರ ಬೌದ್ದಿಕ ನಗಣ್ಯತೆಯಿಂದಾಗಿ... ಅವರು ಹಿಂದುಳಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ.. ಆದರೆ ಇಸ್ಲಾಂನಿದಾದರೂ ಅವರು ಯೋಗ್ಯರಾದರೆ....??? ಇಂದಿಗೂ ಎಷ್ಟು ಪ್ರತಿಶತ ಮುಸಲ್ಮಾನರು ವಿದ್ಯಾವಂತರು ಎಂದು ನೋಡಿ... ಏಕೆ ಅವರಿಗೆ ವಿದ್ಯಾದೇವಿ ಒಲಿಯಲ್ಲಿಲ್ಲ.. ಕೆಲವೇ ಕೆಲವು ವಿದ್ಯಾವಂತರು ಇರುವುದು ನಿಜವಾದರೂ ಅವರೆಲ್ಲ royal blood ನವಾಬ್ಗಿರಿ ಮಾಡಿದ ಮುಸ್ಲಿಂರಾಗಿರಬಹುದು(ಯುಪಿ, ಬಿಹಾರ‌ಗಳಲ್ಲಿ ಅಂತಹವರು ಸಿಗುತ್ತಾರೆ), ಅಥವಾ ಮೇಲ್ಜಾತಿಯಿಂದ ಖಡ್ಗಕ್ಕೆ ಸಿಲುಕಿ ಮತಾಂತರ ಹೊಂದಿದ ಉತ್ತಮ ತಳಿಯವರಾಗಿರಬಹುದು (ಉದಾಹರಣೆಗೆ ಕಾಶ್ಮೀರದ ಮುಸ್ಲಿಮರು), ಉಳಿದವರೆಲ್ಲಾ ಏಕೆ ಹಿಂದುಳಿದಿದ್ದಾರೆ... ಉತ್ತರ ಯಾವ ತಳಿಯ ರಕ್ತವೆಂಬುದು ಅಲ್ಲವೇ..

ಅರಬೀ ಮತ್ತು ಭಾರತೀಯ ಮಿಶ್ರ ತಳಿ ನಿಮಗೆ ಸಿಗುವುದು ಕೇರಳ ಮತ್ತು ತಮಿಳುನಾಡಿನ ಕರಾವಳಿಯಲ್ಲಿ... ಅಲ್ಲಿನ ಮುಸ್ಲಿಂ ವಣಿಕ ಸಮುದಾಯ... ಬಹಳ ನಾಗರೀಕವಾಗೇ ಇದೆ... ತಳಿಯ ಬಗ್ಗೆ ಜಾಸ್ತಿಯೇ ಬರೆದೆ.. ಆದರೆ ನೀವೂ ಯೋಚಿಸಬೇಕಾದ ಸಂಗತಿಯಲ್ಲವೇ, ಏಕೆ ಕುತುಬುದ್ದೀನ್ ಐಬಕ್ನಿಂದ ಮಹಮದೀಯರು ಆಳಿದರೂ, ಅದೇಕೆ ಹಿಂದುಳಿದ ಜನಾಂಗವಾಯಿತು... ಮೀಸಲಾತಿಯಲ್ಲಿ ಬರೆಬೇಕಾಯಿತು ಎಂದು.. ಬ್ರಾಹ್ಮಣರು ಯುದ್ದ ಮಾಡದಿದ್ದರೂ, ಯೋಧ ಜನಾಂಗ (‍warrior race) ಅಲ್ಲದಿದ್ದರೂ ಆಡಳಿತ ಮತ್ತು ಶೈಕ್ಷಣಿಕವಾಗಿ ಮುಂದುವರಿದರು.. ಆಮೇಲೆ ಹಿನ್ನಲೆಗೆ ಹೋದರೂ ಅವರ ತಳಿಗುಣ ‌ಅವರನ್ನು ಮೇಲೆಯೇ ಇರಿಸಿದೆ.. ಬೌದ್ದಿಕ ಕ್ಷೇತ್ರದಲ್ಲಿ ಇಂದಿಗೂ ಅವರದೇ ಮೇಲುಗೈ, ನೂರಾರು ವರ್ಷ ಅಧಿಕಾರದಲ್ಲಿದ್ದರೂ ಮಹಮದೀಯರು ಏಕೆ ಹಿಂದುಳಿದಿದ್ದಾರೆ.. 

20-09-10 (08:37 PM)crusade
ಜಿಝಿಯಾ (ರಕ್ಷಣೆ ತೆರಿಗೆ) ಇದು ಜಗತ್ತಿನಲ್ಲಿ ಅತ್ಯಧಿಕ ತಪ್ಪು ತಿಳಿಯಲ್ಪಟ್ಟ ಇಸ್ಲಾಮಿ ಪಾರಿಭಾಷಿಕ ಪದವಾಗಿದೆ. ಅದನ್ನು ಇಸ್ಲಾಮಿ ರಾಷ್ಟ್ರ ‌ಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರೊಂದಿಗಿರುವ ಪಕ್ಷಪಾತ ಮತ್ತು ‌ಅವರನ್ನು ದ್ವಿತೀಯ ದರ್ಜೆಯ ಪೌರರೆಂದು ಪರಿಗಣಿಸುವ ಮನೋಭಾವದ ಸಂಕೇತವೆಂದೂ ಆಕ್ಷೇಪಿಸಲಾಗುತ್ತದೆ. ಮುಸ್ಲಿಮೇತರ ಪ್ರಜೆಗಳಿಗೆ ವಿಧಿಸುಲಾಗುವ ಈ ತೆರಿಗೆಯ ಹಿನ್ನಲೆಯನ್ನು ಸರಿಯಾಗಿ ಗ್ರಹಿಸದಿರುವುದೇ ಈ ತಪ್ಪು ತಿಳುವಳಿಕೆಗೆ ಮತ್ತು ಟೀಕೆಗಳಿಗೆ ಕಾರಣವಾಗಿದೆ. ಮುಸ್ಲಿಮರು ತಮ್ಮ ಕೃಷಿ ಆದಾಯಗಳ 10% ಮತ್ತು ಇತರ ಆದಾಯಗಳ 2.5% ಝಕಾತಿನ ಬಾಬ್ತಿನಲ್ಲಿ ಸಾರ್ವಜನಿಕ ಬೊಕ್ಕಸಕ್ಕೆ (ಬೈತುಲ್ ಮಾಲ್) ಕಡ್ಡಾಯವಾಗಿ ನೀಡಬೇಕು. ಇದು ಕೇವಲ ಆರ್ಥಿಕ ಹೊಣೆ ಮಾತ್ರವಲ್ಲ ಧಾರ್ಮಿಕ ಆರಾಧನಾ ಕರ್ಮವೂ ಆಗಿದೆ. ಅದ್ದರಿಂದ ಅದನ್ನು ಮುಸ್ಲಿಮೇತರರಿಗೆ ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ನಿಷೇಧಿಸಿದಂತಾಗುವುದು. ಈ ಹಿನ್ನಲೆಯಲ್ಲಿ ಸಮಾಜದ ಆರ್ಥಿಕ ಸಂತುಲನೆಗಾಗಿ ಮುಸ್ಲಿಮೇತರ ಪೌರರಿಗೆ ಬೇರೊಂದು ತೆರಿಗೆ (ಜಿಝಿಯಾ) ವಿಧಿಸಲಾಯಿತು.

20-09-10 (09:31 PM)[-] pkbys
ಜೆಝಿಯಾ ಹಿನ್ನಲೆ ಬಗ್ಗೆ ಸ್ವಲ್ಪ ಬೆಳಕು ಹರಿಸಿದ್ದಕ್ಕೆ ನನ್ನ ಧನ್ಯವಾದಗಳು... ಆದರೆ ಪ್ರಶ್ನೆಯೊಂದು ಉಳಿಯುತ್ತದೆ.. ಸರ್ಕಾರಕ್ಕೆ ತೆರಿಗೆ ಕಟ್ಟಬೇಕು ಸರಿ... 10% ಮತ್ತು 2.5% ತೆರಿಗೆಗಳನ್ನು ಯಾವುದೇ ಮತ, ಧರ್ಮಗಳಿಗೆ ಸೇರಿದ ಆ ದೇಶದ ನಾಗರೀಕನಿಗೆ ಸರಕಾರ ವಿಧಿಸಿದರೆ ಬೊಕ್ಕಸ ಅಷ್ಟನ್ನು ಪಡೆಯುತ್ತದೆ.. ಮತಗಳ ಆಧಾರದ ಮೇಲೆ ಬೇರೆ ಬೇರೆ ಹೆಸರಿಟ್ಟರೆ ಅದು ಸರಕಾರ ಎನಿಸುತ್ತದೆಯೆ, ಆಡಳಿತ ಎನಿಸುತ್ತದೆಯೇ.. ಇಂದಿನ ಸರ್ಕಾರವು ನೀವು ಯಾವ ಮತದವರು ಎಂದು ಕೇಳಿ ನಿಮ್ಮ ತೆರಿಗೆ ನಿರ್ಧರಿಸುವುದಿಲ್ಲ ಅಲ್ಲವೇ.. ನೀವು ದೇಶದ ನಾಗರಿಕರಾಗಿದ್ದಾರೆ. ಯಾವುದೇ ಮತದವರಾಗಿದ್ದರೂ ನಿಗದಿ ಪಡಿಸಿದ ತೆರಿಗೆ ಕಟ್ಟಬೇಕು.. ತೆರಿಗೆ ಕಾನೂನಾತ್ಮಕವಾದ ಆಡಳಿತ ವಿಚಾರ. ನೀವು ಹೇಳಿದಂತೆ, ಆರ್ಥಿಕ ಸಂತುಲನೆಗಾಗಿ ಜೆಝಿಯಾ ವಿಧಿಸಿದ್ದರೆ ಅದು ಸರಿ, ಆದರೆ ಹೀಗೆ ಆರ್ಥಿಕ ಸಂತುಲನೆ ಮಾಡಬೇಕಾದ ಸಂಧರ್ಭವನ್ನು ಸೃಷ್ಟಿಸಿಕೊಂಡಿದ್ದೇ ಅಪರಾಧ...

20-09-10 (09:25 PM)[-]  crusade
ಸ್ತ್ರೀ-ಪುರುಷರ ಮಧ್ಯೆ ಇಸ್ಲಾಮ್ ತೋರುವ ವ್ಯತ್ಯಾಸವನ್ನು ಚರ್ಚಿಸುವುದಕ್ಕಿಂತ ಮುಂಚಿತವಾಗಿ ಈ ಬಗ್ಗೆ ದೇಹಶಾಸ್ತ್ರ, ಜೀವಶಾಸ್ತ್ರ ಮತ್ತು ಮನಃಶಾಸ್ತ್ರಗಳಲ್ಲಿರುವ ಮೂಲಭೂತ ಸಿದ್ಧಾಂತವನ್ನು ನಾವು ಪರಿಶೀಲಿಸೋಣ, ತರುವಾಯ ಇಸ್ಲಾಮಿ ದೃಷ್ಟಿಕೋನವನ್ನು ತಿಳಿಯೋಣ, ಸ್ತ್ರೀ-ಪುರುಷರ ಮಧ್ಯೆ ದೇಹ ರಚನೆ, ಮಾನಸಿಕ ಸ್ಥಿತ್ಯಂತರ ಮತ್ತು ಜೈವಿಕ ನೀತಿಗಳಲ್ಲಿ ಯಾವುದೆ ವ್ಯತ್ಯಾಸವಿಲ್ಲವೆಂದು ಸ್ತ್ರೀ ಸ್ವಾತಂತ್ರ್ಯವಾದಿಗಳು ಹೇಳುವುದಿದ್ದರೆ, ನನಗೇನೂ ಹೇಳಲಿಕ್ಕಿಲ್ಲ. ಹಾಗಲ್ಲ ಎಂದಾದರೆ ಅಥವಾ ಆ ವ್ಯತ್ಯಾಸಗಳನ್ನು ಅಂಗೀಕರಿಸುವುದಿದ್ದರೆ ಆ ಬಗ್ಗೆ ಅವರೊಂದಿಗೆ ಚರ್ಚೆ ನಡೆಸುವುದಕ್ಕೆ ಅರ್ಥವಿದೆ. ಮಾನಸಿಕ ಮತ್ತು ದೈಹಿಕವಾದ ವಿಶಿಷ್ಟ ವ್ಯವಸ್ಥೆಯ ಹೊರತು ಜೈವಿಕ ಪ್ರತಿಕ್ರಿಯೆಗಳನ್ನು ನಿರ್ವಹಿಸಲಾದೀತೇ? ಗರ್ಭಧಾರಣೆ ಮತ್ತು ಸ್ತನ ಪಾನ ಒಂದು ಪ್ರತ್ಯೇಕ ವರ್ಗವನ್ನು ನಿರ್ಧರಿಸುವಾಗ ಅವರ ಮನೋಭಾವನೆ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಆ ಘನ ಕರ್ತವ್ಯದ ಪೂರೈಕೆಗೆ ಅನುಗುಣವಾದ ರೀತಿಯಲ್ಲಿ ಸಿದ್ಧಪಡಿಸಬೇಕಾಗಿಲ್ಲವೇ ? ಕೋಮಲ ಭಾವನೆ, ಮೃದು ಮನಸ್ಸು, ಕರುಣಾಮಯ ಹೃದಯ, ಫಕ್ಕನೆ ಪ್ರತಿಕ್ರಿಯಿಸುವ ಸ್ವಭಾವ. ಇತ್ಯಾದಿ ಅಂಥಾ ಹೆಣ್ಣನ್ನು ಯಾಂತ್ರಿಕ ಸಮಾನತೆಯನ್ನು ಅಪೇಕ್ಷಿಸುವ ಬೂಟಾಟಿಕೆಯ ಮಾತಿನ ಅರ್ಥ ಗ್ರಹಿಸಲು ಸಾಧ್ಯವಿಲ್ಲ. ಅವಳಿಗೆ ಸಮಾನತೆಯ ಹೆಸರಿನಲ್ಲಿ ಅವಳಿಗೆ ದೌರ್ಜನ್ಯವೆಸಗಲಾಗುತ್ತಿದೆ. ಗಂಡನ ಜೊತೆ ಕೆಲಸಕ್ಕೂ ಬರಬೇಕು ಮನೆಗೆ ಬಂದು ಮಕ್ಕಳ ಮತ್ತು ಮನೆ ಕೆಲಸವನ್ನು ಮಾಡಬೇಕು.

pkbysರವರೇ.., ಶಿವಾಜಿ ಇಲ್ಲದಿದ್ದರೆ ಏನಾಗುತ್ತಿತ್ತೊ ಎಂದು ಉಲ್ಲೇಖಿಸಿದ್ದೀರ.. ಶಿವಾಜಿ ಹುಟ್ಟಿದ್ದು 1627ರಲ್ಲಿ ಭಾರತಕ್ಕೆ ಮುಸ್ಲಿಮರು ದಾಳಿ ಮಾಡಿದ್ದು, 700ರ ಕ್ರಿ. ಶದಲ್ಲಿ ತಾವು ದಯಮಾಡಿ ಇತಿಹಾಸವನ್ನು ಓದಿ.

20-09-10 (10:10 PM)[-]  pkbys
ಇಲ್ಲ ನಾನು ದೇಹ ರಚನೆ, ಮಾನಸಿಕ ಸ್ಧಿತ್ಯಂತರ, ಜೈವಿಕನೀತಿ, ಗರ್ಭಧಾರಣೆ, ಸ್ತನಪಾನ ಮೊದಲಾದ ನೈಸರ್ಗಿಕವಾಗೇ ಪ್ರತ್ಯೇಕ ವರ್ಗವಾಗುವ ಹೆಣ್ಣನ್ನು ಗಂಡಿಗೆ ಬೂಟಾಟಿಕೆಯ ಸ್ತ್ರೀವಾದಿಗಳಂತೆ ಸಮೀಕರಿಸಿ ಎಂದು ಹೇಳುತ್ತಿಲ್ಲ.. ಆದರೆ ‌ಅವರನ್ನು ಮೇಲಿನ ಕಾರಣಗಳಿಗಾಗಿ ಅಗತ್ಯಕ್ಕಿಂತ ಹೆಚ್ಚು ತುಳಿಯಲಾಗಿದೆ ಎಂದಷ್ಟೆ ಹೇಳುತ್ತಿದ್ದೇನೆ...

ಇನ್ನು ಶಿವಾಜಿಯ ಕಾಲದ ಬಗ್ಗೆ. ಕ್ರಿ ಶ. 800 ರಲ್ಲಿ ಅರಬರ ದಾಳಿ ನಡೆದಿದ್ದು ಎಂದು ನಾನು ಬಲ್ಲೆ.. 11ನೇ ಶತಮಾನದಲ್ಲಿ. ಮಹಮದ್ ಘಸ್ನಿಯ ಕಾಲದಲ್ಲಿ ಭಾರತ ಸೋಮನಾಥದಲ್ಲಿ ಖಡ್ಗದ ತುದಿ ಏನು ಮಾಡಿತೆಂದೂ ಬಲ್ಲೆ... ಎಷ್ಟು ಲೂಟಿಯಾಯಿತು ಎಂದು ಬಲ್ಲೆ.... ಶಿವಾಜಿಯ ಕಾಲ 1627 ಎಂದು ಬಲ್ಲೆ. ಶಿವಾಜಿಯ ಬಗ್ಗೆ ನಾನು ಬರೆದದ್ದು ಔರಂಗಾಜೇಬ್ ನ ಮತಾಂಧತೆ ಮತ್ತು ಖಡ್ಗದ ತುದಿಯ ಮತಾಂತರವನ್ನು ದೃಷ್ಟಿಯಲ್ಲಿರಿಸಿ.......... ನೀವು ಹೇಳಿದಂತೆ ಮೊಘಲರೇನು ಸುಮ್ಮನೆ ಬಿಟ್ಟವರಲ್ಲ.. ಔರಂಗಜೇಬ್ ಗುರು ಗೋವಿಂದ ಸಿಂಗ್‌ರನ್ನು ನಡೆಸಿಕೊಂಡ ಬಗ್ಗೆ ಸ್ವಲ್ಪ ನೀವು ಇತಿಹಾಸದಲ್ಲಿ ಓದಿದರೆ ಮೊಘಲರ ಪರವಾಗಿ ವಾದ ಮಾಡುವುದನ್ನು ಬಿಡುತ್ತಿರೇನೋ...

20-09-10 (11:16 PM)[-]  crusade
ಇನ್ನೂ ಬುರ್ಖಾದ ವಿಷಯಕ್ಕೆ ಬಂದಾಗ, ಭಾರತವು ಒಂದು ಧಾರ್ಮಿಕ ದೇಶವೆಂದು ಪರಿಗಣಿಸಲ್ಪಡುತ್ತದೆ. ಇಲ್ಲಿಯೂ ಮಹಿಳೆಗೆ ದಾಸ್ಯ ಮತ್ತು ಪರಾಧೀನತೆಯ ಜೀವನದಿಂದ ಮುಕ್ತಿ ದೊರೆಯಲ್ಲಿಲ್ಲ.

ಭಾರತದ ಪ್ರಖ್ಯಾತ ಧರ್ಮಶಾಸ್ತ್ರಜ್ಞನೆನಿಸಿದ "ಮನು" ಮಹಿಳೆಯ ಕುರಿತು ಹೀಗೆ ಹೇಳಿರುವನು. "ಪತಿಯನ್ನು ಬಿಟ್ಟು ಸ್ತ್ರೀಗೆ ಇನ್ನಾವ ಬೇರೆ ಯಜ್ಞವೇ ಇಲ್ಲ. ಪತಿಸೇವೆಯನ್ನು ಬಿಟ್ಟು ಇನ್ನಾವ ವ್ರತವೂ ಇಲ್ಲ. ಉಪವಾಸವೂ ಇಲ್ಲ. ಪತಿವ್ರತಾಭಾವದಿಂದ ಪತಿಸೇವೆ ಮಾಡುವುದರಿಂದಲೇ ಸ್ತ್ರೀಯು ಸ್ವರ್ಗ ಲೋಕದಲ್ಲಿ ಗೌರವ ಪಡೆಯುತ್ತಾಳೆ. ಪತಿಯು ಮೃನಾದಾಗ ಸಾಧ್ವಿಯಾದ ಸತಿಯು ಹೂವು-ಗಡ್ಡೆ-ಗೆಣಸು ಹಣ್ಣುಹಂಪಲು‌ಗಳಿಂದ ದೇಹದ ಅಭಿಲಾಷೆಯನ್ನು ಕಡಿಮೆ ಮಾಡಿಕೊಳ್ಳ ರೀತಿಯಲ್ಲಿ ಆಹಾರ ವಿಹಾರಗಳಲ್ಲಿ ವರ್ತಿಸಬೇಕು. ಪರಪುರುಷನ ಹೆಸರನ್ನು ಕೂಡ ನುಡಿಯಬಾರದು" ( ಮನು ಸ್ಮೃತಿ 5:155,157) ಮತ್ತು

"ಸುಳ್ಳು ಹೇಳುವುದು, ಯೋಚಿಸದೆ ಕೆಲಸ ಮಾಡುವುದು, ವಂಚನೆ, ಮೂರ್ಖತನ, ದುರಾಸೆ, ಅಶುದ್ಧತೆ, ನಿಷ್ಕರುಣೆ, ಇವು ಸ್ತ್ರೀಯ ಹುಟ್ಟುಗುಣಗಳು"( ಚಾಣಕ್ಯ ನೀತಿ ಭಾಗ-2)

ಈ ರೀತಿ ಮಹಿಳೆಯನ್ನು ಇತಿಹಾಸದುದ್ದಕ್ಕೂ ಮಹಿಳೆ ಶೋಷಣೆಗೆ ಒಳಗಾಗುತ್ತ ಬಂದಿದ್ದಾಳೆ. ಇಸ್ಲಾಮ್ ಬಂದು ಈ ಮಹಿಳೆಯನ್ನು ಸ್ವಾತಂತ್ರ್ಯಗೊಳಿಸಿದೆ ಅವಳ ನೈಜ ಕರ್ತವ್ಯವನ್ನು ಮಾನ್ಯಮಾಡಿದೆ. ಕೃಷಿ ಕಾರ್ಯದಲ್ಲಿ ಮಹಿಳೆ, ಹ.ಜಾಬಿರ್ (ರ) ರವರ ಚಿಕ್ಕಮ್ಮರವರು ಖರ್ಜೂರದ ಮರಗಳನ್ನು ಕಡಿದು ಮಾರಾಟ ಮಾಡಬಯಿಸಿದರುಅದಕ್ಕೆ "ನೀವು ಹೊಲಕ್ಕೆ ಹೋಗಿ ನಿಮ್ಮ ಖರ್ಜೂರದ ಮರನನ್ನು ಕಡಿದು ಮಾರಾಟ ಮಾಡಬಹುದೆಂದು ತಿಳಿಸಿದರು" (ಅಬುದಾವುದ್). ಹೆಣ್ಣು ಬುರ್ಖಾಹಾಕಿ ಕೊಂಡು ರಸ್ತೆಯಲ್ಲಿ ಹೋದರೆ ಕೆಟ್ಟಪುರುಷರ ಕಣ್ಣು ಅವಳ ಮೇಲೆ ಬೀಳುವುದಿಲ್ಲ. ಬುರ್ಖಾದಿಂದ ನಮ್ಮ ಹೆಣ್ಣು ಮಕ್ಕಳು ಸುರಕ್ಷಿತರು. ಆದರೆ ಅವಳಿಗೆ ಸ್ವಾತಂತ್ರ್ಯವನ್ನು ನೀಡಲಾಗಿದೆಯೆಂದು ಬೊಬ್ಬೆಹಾಕುವ, ಅವಳ ದೇಹಸಿರಿಯನ್ನು ನೋಡಿ ಆನಂದಿಸುವ ಪುರುಷ ಪ್ರಧಾನ ಸಮಾಜಕ್ಕೆ ಖಂಡಿತಾವಾಗಿಯು ತೊಂದರೆಯಾಗಿದೆ.

21-09-10 (10:01 AM)[-]  pkbys
crusadeರವರೇ, ಚಾಣಕ್ಯನ ಮಾತು ನಾನು ಒಪ್ಪುವೆ. ಅಲ್ಲಿ ಮಹಿಳೆಯ ಬಗ್ಗೆ ಕಹಿ ಸತ್ಯವನ್ನು ಚಾಣಕ್ಯ ಬಿಚ್ಚಿಟ್ಟನೇ ಹೊರತು ಶೋಷಣೆಯ ಮಾತೆಲ್ಲಿ... ಹಾಗಿಲ್ಲದ ಮಹಿಳೆಯರು ಇದ್ದರೂ ಬಹಳಾ ಕಡಿಮೆ. ಮಹಿಳೆಯರೇ ಈ ಸತ್ಯವನ್ನು ಒಪ್ಪುತ್ತಾರೆ.. ಮನುವಿನ ಮಾತು ಹೇಳಿದ್ದೀರಿ.. ಅವನ ಮಾತು "ಪತಿಯನ್ನು ಬಿಟ್ಟು ಸ್ತ್ರೀಗೆ ಇನ್ನಾವ ಬೇರೆ ಯಜ್ಞವೇ ಇಲ್ಲ. ಪತಿಸೇವೆಯನ್ನು ಬಿಟ್ಟು ಇನ್ನಾವ ವ್ರತವೂ ಇಲ್ಲ. ಉಪವಾಸವೂ ಇಲ್ಲ. ಪತಿವ್ರತಾಭಾವದಿಂದ ಪತಿಸೇವೆ ಮಾಡುವುದ ರಿಂದಲೇ ಸ್ತ್ರೀಯು ಸ್ವರ್ಗ ಲೋಕದಲ್ಲಿ ಗೌರವ ಪಡೆಯುತ್ತಾಳೆ" ಇಲ್ಲಿಯವರೆಗೆ ಖಂಡಿತಾ ಒಪ್ಪಬಹುದು, ಆದರೆ, ಗಂಡ ಸತ್ತ ನಂತರದ ಆಸೆ-ಅಭಿಲಾಷೆಯ ಬಗ್ಗೆ ಅತಿಯಾಯಿತು. ಅಂದಿನ ಸಮಾಜಕ್ಕೆ ಅದು ಅಗತ್ಯವಿದ್ದಿರಬಹುದೇನೋ, ಸರಿ ಎನಿಸಿರಬಹುದು. ಆದರೆ ಅದು ಸರಿಯೋ ತಪ್ಪೋ ಎಂಬುದು ಆ ಪತಿ ಮೃತನಾದ ಹೆಣ್ಣು ಹೊಂದಿರುವ ಜವಾಬ್ದಾರಿ ಮತ್ತವಳ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಸ್ಮೃತಿಗಳ ಕಾಲಕ್ಕೆ ಹೆಣ್ಣು ಹಿಂದೆ ಸರಿದುದು ನಿಜ. ಆದರೆ ಅದರ ಅರ್ಥ ಅದನ್ನು ನಾವು ಇಂದಿನ ಹಿಂದುಗಳು ಸಮರ್ಥಿಸುತ್ತಾ ಕೂರಬೇಕು ಎಂದರ್ಥವಲ್ಲ.

ಅಂದು ಮರಳಿನಲ್ಲಿ ಹೆಣ್ಣು ಮಕ್ಕಳನ್ನು ಹೂಳುತಿದ್ದ ಅರೇಬಿಯಾ ಜನಾಂಗ ಇಂದು ಬುರ್ಖಾದೊಳಗೆ ಹೂಳುತ್ತಿದೆ ಅಂದಿಗಿಂತ ಇಂದು ಪರವಾಗಿಲ್ಲ ಎಂಬತಾಯಿತು.. ಬುರ್ಖಾ ಇಲ್ಲದೆಯೂ ಮರ್ಯಾದಸ್ತ ಬಟ್ಟೆ ತೊಟ್ಟರೆ ಸಾಕು ಎಂಬ ನೈತಿಕ ಸಂಸ್ಕಾರ ಹೆಣ್ಣುಮಕ್ಕಳಿಗೆ ಕೊಡಿ.. ಕೆಟ್ಟ ದೃಷ್ಟಿಯಲ್ಲಿ ಪುರುಷ ನೋಡುತ್ತಾನೆಂದರೆ ಅವನಿಗೆ ಅವನ ತಾಯಿ ಒಳ್ಳೆಯ ಸಂಸ್ಕಾರ ನೀಡಿಲ್ಲವೆಂದರ್ಥ... ಪುರುಷನಿಗೆ ನೈತಿಕ ಶಿಕ್ಷಣ ನೀಡುವುದು ಬಿಟ್ಟು ಸ್ತ್ರೀಗೇಕೆ ಶಿಕ್ಷೆ ನೀಡುತ್ತೀರಾ...


21-09-10 (11:57 PM)[-]  crusade
ಒಂದು ಜೀವನ ವ್ಯವಸ್ಥೆಯನ್ನು ತಿಳಿಯಬೇಕಾದರೆ ಅದನ್ನು ಅಸ್ತಿತ್ವಕ್ಕೆ ತಂದ ಸಿದ್ಧಾಂತಗಳನ್ನು ಅರಿಯಬೇಕು. ಏಕೆಂದರೆ ಆ ಜೀವನ ವ್ಯವಸ್ಥೆಯ ರೂಪರೇಖೆ ಮತ್ತು ಅದರ ಸ್ವಭಾವವನ್ನು ಆ ಸಿದ್ಧಾಂತಗಳೇ ನಿರ್ಧರಿಸುತ್ತವೆ. ಅದರಿಂದಲೇ ಸಾಮಾಜಿಕ, ಸಾಂಸ್ಕೃತಿಕ ಮತ್ತು ನಾಗರಿಕ ಹಕ್ಕುಗಳು ನಿರ್ಣಯಿಸಲ್ಪಡುತ್ತವೆ. ಒಟ್ಟಿನಲ್ಲಿ ಅವುಗಳ ಬುನಾದಿಯಲ್ಲೇ ಜೀವನದ ಸಂಪೂರ್ಣ ಚೌಕಟ್ಟಿನ ನಿರ್ಮಾಣವಾಗುತ್ತದೆ ಮತ್ತು ವ್ಯಕ್ತಿಗಳೊಂದಿಗೆ ವರ್ತಿಸಲಾಗುತ್ತದೆ. ಈ ಕಲ್ಪನೆಯನ್ನು ಒಪ್ಪಿಕೊಂಡರೆ ಮನುಷ್ಯನ (ಸ್ತ್ರೀಯಾಗಲಿ, ಪುರುಷನಾಗಲಿ) ಗೌರವವು ಭೂಮಿಯ ಮಣ್ಣಿನಿಂದ ಉನ್ನತವಾಗಿ ಸೂರ್ಯ,  ಚಂದ್ರ, ನಕ್ಷತ್ರಗಳಿಗಿಂತಲೂ ಮುಂದೆ ಸಾಗುತ್ತದೆ. ಮನುಷ್ಯ ಅವನ ಊಹೆಗೆ ನಿಲುಕುವಂತಹ ಅತ್ಯುನ್ನತವಾದ ಸ್ಥಾನಮಾನವನ್ನು ಪಡೆಯುತ್ತಾನೆ. ಒಂದು ವೇಳೆ ಅವನು ತನ್ನ ವಿಚಾರ ಆಚಾರಗಳಿಂದಾಗಿ ತನ್ನನ್ನು ಆ ಉನ್ನತಿಗೆ ಅನರ್ಹಗೊಳಿಸಿದರೆ ಜಗತ್ತಿನ ಯಾವ ಶಕ್ತಿಯಿಂದಲೂ ಅವನಿಗೆ ಉನ್ನತಿ ಮತ್ತು ಗೌರವವನ್ನು ತಂದುಕೊಡಲಾಗದು.

22-09-10 (12:03 PM)pkbys
ನಿಮ್ಮ ಈ ಮಾತಿಗೆ ಪ್ರತಿಯೊಬ್ಬ ಹಿಂದುವೂ ಒಪ್ಪುತ್ತಾನೆ... ಅದನ್ನೇ ನಾವು ಕರ್ಮ ಸಿದ್ದಾಂತ ಎಂದು ಕರೆಯುತ್ತೇವೆ...


21-09-10 (07:50 PM)crusade
pkbysರವರೇ, ಬುರ್ಖಾದೊಳಗೆ ಹೂಳುತ್ತಿದೆಯಂದು ಬರೆದಿದ್ದೀರ. ಈ ಬುರ್ಖಾದಿಂದ ಆಗುವ ಪ್ರಯೋಜನ ನಿಮಗೆ ತಿಳಿಸ ಬಯಸುತ್ತೇನೆ, ಅಮೇರಿಕದಲ್ಲಿ ಪ್ರತಿ ವರ್ಷ ಸುಮಾರು 30 ಲಕ್ಷ ಸ್ತ್ರೀಯರು ಲೈಂಗಿಕ ಮತ್ತು ದೈಹಿಕ ಹಲ್ಲೆಗೆ ಗುರಿಯಾಗುತ್ತಿದ್ದಾರೆ. ಅಮೇರಿಕದ 75% ವಿವಾಹಿತ ಸ್ತ್ರೀ-ಪುರುಷರು ತಮ್ಮ ಜೀವನ ಸಂಗಾತಿಯನ್ನು ವಂಚಿಸುತ್ತಾರೆ, ಅವರು ಇತರರೊಂದಿಗೆ ಅನೈತಿಕ ಸಂಪರ್ಕವಿಟ್ಟುಕೊಳ್ಳುತ್ತಾರೆ. ಆ ದೇಶದಲ್ಲಿ ಹುಟ್ಟುವ ಮಕ್ಕಳ ಪೈಕಿ 65% ಜಾರ ಸಂತಾನವಾಗಿದ್ದಾರೆ.

ನಮ್ಮ ದೇಶದಲ್ಲಿ 20737ರ ಹೆಣ್ಣುಗಳನ್ನು ತಾಯಿಯಿಂದ ಒಳ್ಳೆಯ ಸಂಸ್ಕಾರವನ್ನು ಪಡೆದ ನಾಡಿನ ಪುರುಷರ ಕಾಮ ತೃಷೆಗೆ ಬಲಿಯಾಗಿದ್ದಾರೆ,

ಆದರೆ ಆದೇ ಮರುಭೂಮಿ ನಾಡಿನ ಬುರ್ಖಾದಲ್ಲಿ ಹೂಳುತ್ತಿರುವ ಅನಾಗರೀಕರಲ್ಲಿ ಕೇವಲ 59 ಜನ ಹೆಣ್ಣುಗಳು ಕಾಮ ಪಿಪಾಸುಗಳಿಗೆ ಬಲಿಯಾಗಿದ್ದಾರೆ, ಇದು ನನ್ನ ಕಲ್ಪಿತ ಉತ್ತರವಲ್ಲ uno ದ ರಿಪೋರ್ಟ್ ಪ್ರಕಾರ ತಿಳಿಸುತ್ತಿದ್ದೇನೆ. ಸ್ತ್ರೀ ಸ್ವಾತಂತ್ರ್ಯ ಚಳವಳಿಯು ಸ್ತ್ರೀಯನ್ನು ಪುರುಷನ ಗುಲಾಮಗಿರಿಯಿಂದ ವಿಮೋಚಿಸಲು ಮತ್ತು ಸಮಾಜದಲ್ಲಿ ಆಕೆಗೆ ಉನ್ನತ ಸ್ಥಾನಮಾನ ನೀಡಲಿಕ್ಕಾಗಿರುವುದೆಂದು ವಾದಿಸಲಾಗುತ್ತದೆ. ಈಗ ಹೇಳಿ ಬುರ್ಖಾದಲ್ಲಿ ಹೆಣ್ಣು ಸುರಕ್ಷಿತಳೊ ಮಹಿಳಾ ಸ್ವಾತಂತ್ರ್ಯವೆಂಬ ಬೊಗಳೆ ಮಾತುಗಳಲ್ಲಿ ಸುರಕ್ಷಿತಳೊ..!

22-09-10 (12:31 PM)[-]  pkbys
crusade ರವರೇ "ನಮ್ಮ ದೇಶದಲ್ಲಿ 20737ರ ಹೆಣ್ಣುಗಳನ್ನು ತಾಯಿಯಿಂದ ಒಳ್ಳೆಯ ಸಂಸ್ಕಾರವನ್ನು ಪಡೆದ ನಾಡಿನ ಪುರುಷರ ಕಾಮ ತೃಷೆಗೆ ಬಲಿಯಾಗಿದ್ದಾರೆ, ಆದರೆ ಆದೇ ಮರುಭೂಮಿ ನಾಡಿನ ಬುರ್ಖಾದಲ್ಲಿ ಹೂಳುತ್ತಿರುವ ಅನಾಗರೀಕರಲ್ಲಿ ಕೇವಲ 59 ಜನ ಹೆಣ್ಣುಗಳು ಕಾಮ ಪಿಪಾಸುಗಳಿಗೆ ಬಲಿಯಾಗಿದ್ದಾರೆ, ಇದು ನನ್ನ ಕಲ್ಪಿತ ಉತ್ತರವಲ್ಲ uno ದ ರಿಪೋರ್ಟ್ ಪ್ರಕಾರ ತಿಳಿಸುತ್ತಿದ್ದೇನೆ " ಎಂದಿದ್ದೀರಿ.. ನಿಮ್ಮ ಮಾತು ನಿಜವಿರಬಹುದು.. ಹಾಗೆ 20737 ಹೆಣ್ಣುಗಳು ಕಾಮತೃಷೆಗೆ ಬಲಿಯಾಗಲು ಹಲವು ಕಾರಣಗಳಿರುತ್ತವೆ... ಆ ಗಂಡುಗಳ ಪರವಾಗಿ ನಾನು ವಕಾಲತ್ತು ವಹಿಸುವುದಿಲ್ಲ.. ಅವರು ಶಿಕ್ಷಾರ್ಹರು... ನನ್ನ ಪ್ರಕಾರ ‌ಅವರನ್ನು ನಪುಂಸಕರಾಗಿ ಮಾಡಬೇಕು... ಆದರೆ ಹೆಣ್ಣು ಬುರ್ಖಾದೊಳಗೆ ಹೂಳಿಯಷ್ಟೇ ಅಲ್ಲ, ಮನೆಯಿಂದ ಹೊರಗೆ ಬರಲು ಗಂಡ ಅಥವ ತಂದೆಯಿಂದ ಬರಹದಲ್ಲಿ ಅನುಮತಿ ಹೊಂದಿರಬೇಕಾದ, ರಕ್ತಸಂಭಂಧಿಯಲ್ಲದೇ ಬೇರೊಬ್ಬರೊಡನೆ ಮಾತಾಡಲಾರದ ಸ್ಥಿತಿಯನ್ನು ಸಮಾನತೆ ಎನ್ನುವಿರಾ..... 20737 ಹೆಣ್ಣುಗಳು ಭಾರತದ ಜನಸಂಖ್ಯೆಯ ಎಷ್ಟು % ಎಂದು ಲೆಕ್ಕ ಹಾಕಿ, ಮತ್ತು ಅರೇಬಿಯಾದ ಹೆಣ್ಣುಗಳಲ್ಲಿ ಎಲ್ಲ ಬಂಧನದ ಮಧ್ಯ ಬದುಕುತ್ತಿರುವ ಹೆಣ್ಣುಗಳು ಎಷ್ಟು % ನೋಡಿ.. ಒಟ್ಟು ಭಾರತೀಯ ಹೆಣ್ಣುಗಳಿಗಿಂತ ಭಾರತೀಯ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಗಳು 1%ಗಿಂತ ಕಡಿಮೆ ಮತ್ತು, ಬುರ್ಖಾದೊಳಗೆ ಹೂತ, ಸ್ವಾತಂತ್ರ್ಯವೇ ಇಲ್ಲದ, ಶಾಂತಿಯಿಲ್ಲದ ಆದರೆ ಶಾಂತಿಯ ಹೆಸರಿನ, ಸಮಾನತೆ ಇಲ್ಲದ ಸಮಾನತೆಯ ಹೆಸರಿಲ್ಲಿ ಬಂನಕ್ಕೊಳಗಾದ ಅರಬೀ ಹೆಣ್ಣುಮಕ್ಕಳು 99 % ಗಿಂತ ಹೆಚ್ಚಾಗುತ್ತಾರೆ. ಅಪರಾಧ ಮಾಡಿದ ಗಂಡಿಗೆ ಉಗ್ರ ಶಿಕ್ಷೆ ಕೊಟ್ಟು, ಮಕ್ಕಳಾಗಿರುವಾಗಲೇ ಉತ್ತಮ ನೈತಿಕ ಶಿಕ್ಷಣ ಕೊಟ್ಟು ಸಮಸ್ಯೆ ನಿವಾರಿಸುವುದು ಬಿಟ್ಟು 1% ಗಿಂತ ಕಡಿಮೆ ಸಂಖ್ಯೆಯಲ್ಲಿ ದೌರ್ಜನ್ಯಕೊಳಗಾಗಬಹುದಾದ ಹೆಣ್ಣನ್ನು ಆ ಕಾರಣಕ್ಕಾಗಿ 99% ಗಿಂತ ಹೆಚ್ಚು ಜನಸಂಖ್ಯೆಯಲ್ಲಿ ಬಂಧನಕೊಳಪಡಿಸುವುದು ಮೃಗೀಯ.. ಇದನ್ನೇ ಇಸ್ಲಾಂ ಭೋಧಿಸಿದರೆ ಅದು ಮೃಗೀಯ ಧರ್ಮವಲ್ಲವೇ.. 


----> ಮುಂದುವರಿದಿದೆ........ ಮಹಾ ಮಂಥನ-4 (bhgte ರವರಿಂದ ಮತ್ತಷ್ಟು ಕಟುಸತ್ಯಗಳ ಅನಾವರಣ)(bhgte ರವರಿಂದ ಮತ್ತಷ್ಟು ಕಟು ಸತ್ಯಗಳ ಅನಾವರಣ ಮುಂದಿನ ಕಂತಿನಲ್ಲಿ)


ಹಿಂದಿನ ಕಂತುಗಳು:

ಮೊದಲ ಕಂತಿಗೆ ಮುಂದೆ ಕ್ಲಿಕ್ ಮಾಡಿ ==> ಮಹಾ ಮಂಥನ - 1 (bhgte ರವರ ರಂಗ ಪ್ರವೇಶ)
ಎರಡನೆ ಕಂತಿಗೆ ಮುಂದೆ ಕ್ಲಿಕ್ ಮಾಡಿ ==> ಮಹಾ ಮಂಥನ - 2 (crusade ಮತ್ತು Manju ತರ್ಕಗಳು)

4 comments:

 1. ರಿ pkbys ನಿವು ಯಾವನೂ ಕೆಲಸಕ್ಕೆ ಬರ್ದ್ವಾನ್ ಜೊತೆ ಇಸ್ಲಮ್ ಬಗ್ಗೆ ಚೆರ್ಚೆ ಮಾಡುವುಕ್ಕಿ0ತ ನಿಮಗೆ ಸ್ವಲ್ಪ ನಾದರು ತಿಳುವಳಿಕೆ ಇದ್ದಾರೆ ಜಾಕಿರ್ ನಾಯಕ್ (peace TV) ಸ0ಸ್ಥಾಪಕ ನ ಜೋತೆ ಸಾರ್ವಜನಿಕವಾಗಿ ಚರ್ಚೆ ಮಾಡಿ ನ0ತಾರಾ ನೀವು ಹೇಳುತ್ತಿರುವ ಸುಳ್ಳನ್ನು ಸರಿಪಡಿಸಿಕೊಳೀ ನೀವು ಎಶ್ಟೇ ಸುಳ್ಳನ್ನು ಹೇಳಿದರು ಅದು ವೇಸ್ಟ್...

  ReplyDelete
 2. ಬುರ್ಖಾ ಇಲ್ಲದೆಯೂ ಮರ್ಯಾದಸ್ತ ಬಟ್ಟೆ ತೊಟ್ಟರೆ ಸಾಕು ಎಂಬ ನೈತಿಕ ಸಂಸ್ಕಾರ ಹೆಣ್ಣುಮಕ್ಕಳಿಗೆ ಕೊಡಿ ....ಸರಿಯಾದ ಮಾತು. ಎಲ್ಲೋ ಕೆಲವು ಹೆಣ್ಣುಮಕ್ಕಳು ಕೊಟ್ಟ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡಿರಬಹುದು. ಅದಕ್ಕೆ ಹೆಣ್ಣುಮಕ್ಕಳನ್ನೆಲ್ಲ ಮನೆಯಲ್ಲೇ ಕೂರಿ ಎನ್ನುವುದು ಸರಿಯಲ್ಲ. ಸ್ತ್ರೀ ಸ್ವಾವಲಂಬಿಯಾಗುವುದು ಈಗಿನ ಕಾಲಕ್ಕೆ ಅತ್ಯವಶ್ಯಕ. ಎಲ್ಲ ಸರಿಯಿದ್ದಾಗ ಮನೆಯಲ್ಲೇ ಇರುವುದು ಸರಿ, ಅನಿವಾರ್ಯ ಕಾರಣಗಳಿಂದ ದುಡಿಯಬೇಕಾಗಿ ಬಂದಾಗ, ಮನೆಯಿಂದ ಹೊರ ಬರಬೇಕಾಗುತ್ತೆ. ಹೊರಜಗತ್ತಿನೊಡನೆ ಬೇರೆಯಲೆಬೇಕಾಗುತ್ತೆ.

  ReplyDelete
 3. ಖಂಡಿತಾ crusade ಕೆಲಸಕ್ಕೆ ಬಾರದವರಲ್ಲ raza ಅವರೇ, ಮುಂದಿನ ಕಂತುಗಳಲ್ಲಿ ಅವರ ಪಾಂಡಿತ್ಯಕ್ಕೆ ನೀವು ಬೆರಗಾಗುವಿರಿ... ಭೂಮಿಯನ್ನ ಗೋಳ ಎಂದು ಗೊತ್ತಿದ್ದರೂ ಮಕ್ಕಾವನ್ನ ಜಗತ್ತಿನ ಕೇಂದ್ರ ಎಂದು ಹೇಳುವ, ಆ ಜಾಕಿರ್ ನಾಯಕ್‌ಗಿಂತಲೂ ಹೆಚ್ಚಿನ ತಿಳುವಳಿಕೆ ಉಳ್ಳವರು. ಒಂದು ವಿಚಾರದಲ್ಲಿ ಜಾಕಿರ್‌ರಿಂದ ನಾನು ಕಲಿತಿದ್ದೇನೆ... ವಾದಗಳನ್ನು ಮಂಡಿಸುವಾಗ ಬಹಳ graceful ಆಗಿ ಮಂಡಿಸಬೇಕು, ಸೌಹಾರ್ಧಪೂರ್ಣವಾಗಿರಬೇಕು ಎಂದು. ಜಾಕಿರ್‌ಗಿಂತಲೂ ಹೆಚ್ಚಿನ gracefullness ನಾನು crusade ರಲ್ಲಿ ಕಂಡೆ. ದಯವಿಟ್ಟು ನನ್ನ ಸುಳ್ಳುಗಳು ಯಾವುವು ಎಂದು ನೀವು ಹೇಳಿದರೆ, ನನ್ನನ್ನು ನಾನು ತಿದ್ದಿಕೊಳ್ಳಲು ಸಹಾಯವಾಗುವುದು.... ವೇಸ್ಟ್ ಸುಳ್ಳು ಹೇಳಲು ನನಗೂ ಇಷ್ಟವಿಲ್ಲ. ನನಗೆ ಅರಿವಿಲ್ಲದೇ ಯಾವುದಾದರೂ ಸುಳ್ಳು ಹೇಳುತ್ತಿದ್ದರೆ ದಯಮಾಡಿ ತಿಳಿಸಿ..

  ReplyDelete
 4. ಖಂಡಿತಾ ಸರೋಜಾರವರೆ, ಬೀದಿಯಲ್ಲಿ ನಾನು ಬುರ್ಖಾ ತೊಟ್ಟ ಮುಸ್ಲಿಂ ಹೆಣ್ಣು ಮಕ್ಕಳನ್ನ ಕಂಡಾಗ ಸದ್ಯ ನಾನು ಹಾಗಿಲ್ಲವಲ್ಲ ಎಂದು ನೆಮ್ಮದಿಯೆನಿಸಿದರೂ ಅವರ ಬಗ್ಗೆ ಮರುಕ ಬರುತ್ತದೆ (ಅವರಿಗದು ಅಭ್ಯಾಸವಾಗಿರಬಹುದು. ಅವರದನ್ನ ಸಂತೋಷದಿಂದಲೇ ಧರಿಸುತ್ತಿರಬಹುದು, ಆದರೂ ನೋಡಲೇ ಮನಸ್ಸಿಗೆ ಹಿಂಸೆ.) ಇನ್ನು ಕೆಲಸಕ್ಕೆ ಹೋಗುವ ಮುಸ್ಲಿಂ ಹೆಣ್ಣುಮಕ್ಕಳು, ಅದನ್ನ ತೊಟ್ಟು, ಕಾರ್ಯಸ್ಥಳ ತಲುಪಿ, ತೆಗೆದು, ಕೆಲಸ ಮುಗಿಸಿ, ಮತ್ತೆ ಹೊರಡುವಾಗ ಧರಿಸಿ, ಹೊರಡುವುದನ್ನ ಗಮನಿಸಿದರೆ, ಇದ್ಯಾವ ನರಕವಪ್ಪ ಎನಿಸಿಬಿಡುತ್ತದೆ. ಅತಿ ಸರ್ವತ್ರ ವರ್ಜಯೇತ್ (ಅತಿಯಾದರೆ ಅಮೃತವೂ ವಿಷವಲ್ಲವೇ.) ಸುರಕ್ಷತೆಯ ಹೆಸರಿನ ಹಿಂಸೆ ಎನಿಸಿಬಿಡುತ್ತದೆ.

  ReplyDelete