Saturday, 20 April 2013

ಪೂರ್ಣಿಮಾ (ಕವಿತೆ)ಕೋರಿಕೆ ದೇವರಲಿ
ಇರದಿರಲಿ ಮೋಡ,
ಹಿಡಿಯದಿರಲಿ ಆ
ಕ್ರೂರ ಗ್ರಹಣಗಳು,
ಮೈ ಮರೆಯದಿರಲಿ
ಹೆಣ್ಗಳಾ ಸಂಗದಲಿ
ಚಂದುಳ್ಳಿ ಚಂದ್ರಮನು,
ಬರಲಿ ಮರೆಯದೆ
ಚಂದ್ರಿಕೆಯುಣಿಸಲು
ಚಕೋರ ಚಕೋರಿಗೆ,
ನಲಿಯಲಿ ನವಿಲು
ಚಂದ್ರ ದರ್ಶನದಿಂದ.
ಪ್ರಾರ್ಥಿಸುವಳು ಹೀಗೆ
ದಿನರಾಣಿ ಪೂರ್ಣಿಮಾ

 (೯-೫-೨೦೦೨)

1 comment: