Wednesday, 31 August 2011

ಮಹಾ ಮಂಥನ-8 (ವಿಗ್ರಹಾರಾಧನೆ, ದುಷ್ಟಶಕ್ತಿ ವಿಚಾರ-ವಿಮರ್ಶೆ)

ಈ ಕಂತಿನಲ್ಲಿ alif ಪ್ರವೇಶ ಆಗಿದೆ, ಬರುತ್ತಿದ್ದಂತೆಯೇ ತಮ್ಮ ಹರಿತ ಪ್ರಶ್ನೆಗಳನ್ನೆಸಿದ್ದಾರೆ..  ಆ ಹರಿತ ಪ್ರಶ್ನೆಗಳಿಗೆ ನಾನು ನನ್ನ ಪ್ರಾಕ್ಸಿ ಹೆಸರಿನಿಂದ(pkbys)  ಉತ್ತರಿಸಲು ಪ್ರಯತ್ನಿಸಿದ್ದೇನೆ...

ಹಿಂದೂಗಳ ವಿಗ್ರಹಾರಾಧನೆ, ಮತ್ತು ದುಷ್ಟ ಶಕ್ತಿಗಳ ಬಗ್ಗೆ ಪ್ರಶ್ನೆಗಳಿವೆ...  ಅದಕ್ಕೆ ನನ್ನ ಉತ್ತರಗಳಿವೆ.. ನಿಮ್ಮ ಅಭಿಪ್ರಾಯಗಳನ್ನ ತಿಳಿಸಿ, ನನ್ನ ಜ್ಞಾನ ಪರಿಧಿಯನ್ನ ವಿಸ್ತರಿಸಲು ನೆರವಾಗಿ... ತಪ್ಪುಗಳಿದ್ದರೆ ತಿದ್ದಿ...

ಆರನೇ ಕಂತು ==>ಮಹಾ ಮಂಥನ-6 (crusade ರ ನಿಷ್ಪಕ್ಷಪಾತತೆ ಮತ್ತು ಸೌಹಾರ್ದ ನೀತಿ) 
ಏಳನೇ ಕಂತು ==>ಮಹಾ ಮಂಥನ-7 (ತಪ್ಪಿಗೆ ಶಿಕ್ಷೆ ಮತ್ತದರ ಸ್ವರೂಪ)

    


27-09-10 (11:10 AM)[-] rafi
pkbys ದಯವಿಟ್ಟು ಇದು ವಿಮರ್ಶೆಯಲ್ಲ. ಒಂದು ಪ್ರಶ್ನೆ ಮಾತ್ರ. ಏನೆಂದರೆ ಬೌದ್ಧ, ಜೈನ್‌, ಸಿಖ್, ಇವುಗಳೆಲ್ಲಾ ಹಿಂದೂ ಧರ್ಮದ ಸಂಕೋಲೆಯನ್ನು ಕಳೆದುಕೊಂಡು ಅದರಿಂದ ಪ್ರತ್ಯೇಕ ಆಚಾರ ವಿಚಾರಗಳನ್ನು ಸ್ಥಾಪಿಸಿಕೊಂಡವರಲ್ಲವೇ. ಮತ್ತೆ ಚೈನಾದಲ್ಲಿ ಬಹುಸಂಖ್ಯಾತರು ಇಂದು ಯಾವುದೇ ಧರ್ಮದ ಕಟ್ಟುಪಾಡುಗಳನ್ನು ತಿರಸ್ಕರಿಸಿದವರು. ಅಂದರೆ 85% ನಾಸ್ತಿಕರು.ಇಲ್ಲಿ ನಮಗೆ ಬೇಕಾಗಿರುವುದು ಅಂಖ್ಯೆ ಸಂಖ್ಯೆಗಳಲ್ಲ. ನಾವು ಯಾವ ರೀತಿ ಜೀವಿಸಿ ಸಮೂಹಕ್ಕೆ, ಸಮಾಜಕ್ಕೆ ಮಾದರಿಯಾಗ್ತೀವಿ ಅನ್ನುವುದು ಮುಖ್ಯ.

27-09-10 (12:57 PM)[-] pkbys
rafi, ಖಂಡಿತವಾಗಿ ಅಂಕಿ ಸಂಖ್ಯೆಗಳು ಮುಖ್ಯವಲ್ಲವೇ ಅಲ್ಲ. ಪಾರ್ಸಿಗಳು, ಯಹೂದ್ಯರು ಬೆರಳೆಣಿಕೆಯಷ್ಟು. ಆದರೆ ಅವರು ಬಹಳ ಉನ್ನತ ಸ್ಥಾನಗಳಲ್ಲಿದ್ದಾರೆ.. ಮಾದರಿಯಾಗಿದ್ದಾರೆ. ಟಾಟಾಗಿಂತ ಬೇರೆ ಉದಾಹರಣೆ ಬೇಕೆ. ಇನ್ನು ಬೌದ್ದ, ಜೈನ, ಸಿಖ್ ಹಿಂದು ಧರ್ಮದ ಸಂಕೋಲೆ ಕಳೆದುಕೊಂಡವು ಎಂದಿರಿ. ಹಿಂದು ಧರ್ಮ ಸಂಕೋಲೆಯೇ ಅಲ್ಲ.. ಇಲ್ಲಿ ಬೆಳವಣಿಗೆಗೆ ಅವಕಾಶ ಇದೆ... ಈ ಆಚರಣೆಗಳು ವೈದಿಕ ಆಚರಣೆಗಳಲ್ಲ ಅಷ್ಟೇ. ಇನ್ನು ವೈದಿಕ ನಂಬಿಕೆಗಳು ಹಿಂದು ಜೀವನ ವಿಧಾನದ ಭಾಗವಷ್ಟೇ, ವೈದಿಕ ನಂಬಿಕೆಗಳೇ ಹಿಂದು ಧರ್ಮವಲ್ಲ. ವೈದಿಕ ನಂಬಿಕೆಗಳ ಮಟ್ಟಕ್ಕೆ ಹಿಂದೂ ಪದವನ್ನು ಸೀಮಿತಗೊಳಿಸುವುದು ಸರಿಯಲ್ಲವೆಂದು ನನ್ನ ಅನಿಸಿಕೆ. ಹಿಂದು ಧರ್ಮದಲ್ಲಿ ನಾಸ್ತಿಕರೂ ಇದ್ದಾರೆ.. ವೇದಾಧ್ಯಯನವನ್ನು ಎಂದೂ ಮಾಡದ ಜನರು ಇದ್ದಾರೆ (ಉದಾಹರಣೆಗೆ ಬುಡಕಟ್ಟು ಜನ).. ಆದರೂ ಅವರು ಹಿಂದುವಾಗಿರುವುದು ಆ ಜೀವನ ವಿಧಾನದ ಮೂಲಕವಷ್ಟೇ... ಹಿಂದು ಪದಕ್ಕಿಂತ ಸನಾತನ ಅಥವಾ ಪೌರಾತ್ಯ (Oriental) ಪದ ಇನ್ನೂ ಚೆನ್ನಾಗಿ ಒಪ್ಪುತ್ತದೆ.. ಹಿಂದು ಪದ ಸಿಂಧು ನದಿಯ ಪೂರ್ವಕ್ಕಿರುವ ಪ್ರದೇಶದ ಆಚರಣೆ ಮತ್ತು ಸಂಸ್ಕೃತಿಯ ಬಗ್ಗೆ ಹುಟ್ಟಿದ ಪಾರ್ಸಿ ಪದವಾಗಿದೆ... ಇನ್ನೂ ಚೈನಾ ಜನರ ವಿಷಯ... ಅವರು ಪೇಪರ್ ಮೇಲಷ್ಟೇ ನಾಸ್ತಿಕರು.. ಏಕೆಂದರೆ ಅದು ಕಮ್ಯುನಿಸ್ಟ್ ಚೈನಾ.. ಆದರೆ ಸಂಸ್ಕೃತಿ ಮತ್ತು ಆಚರಣೆಗಳ ವಿಷಯದಲ್ಲಿ ಅವರು ಕೂಡ ಪೌರಾತ್ಯ ಸಂಪ್ರದಾಯಗಳನ್ನೇ ಆಚರಿಸುತ್ತಾರೆ... ಅಲ್ಲಿಯೂ ಪುನರ್ಜನ್ಮವಿದೆ.. ಭೂತಾರಾಧನೆ ಇದೆ.. ಸ್ವರ್ಗವಿದೆ... ಜೀವಾತ್ಮನಿದ್ದಾನೆ..

27-09-10 (01:36 PM)[-] crusade
mr.rafi ರವರೇ, ಮನುಷ್ಯನಿಗೆ ಯಾವ ಯಾವ ವಸ್ತುಗಳ ಅವಶ್ಯಕತೆ ಇದೆಯೋ ಅಲ್ಲಾಹನು ಅವೆಲ್ಲವುಗಳ ವ್ಯವಸ್ಥೆ ಸ್ವಯಂ ಮಾಡಿರುವನೆಂಬುದನ್ನು ನೀವು ನೋಡುತ್ತೀರಿ. ಒಂದು ಮಗು ಹುಟ್ಟುವಾಗ ಅದಕ್ಕೆ ಎಷ್ಟೆಲ್ಲಾ ವಸ್ತುಗಳನ್ನು ಕೊಟ್ಟು ಭೂಮಿಗೆ ಕಳುಹಿಸಲಾಗುತ್ತದೆ ಎಂಬುದನ್ನು ನೋಡಿರಿ. ಕಣ್ಣು, ಕಿವಿ, ಮೂಗು, ಅನುಭವಿಸಲು ಇಡೀ ದೇಹದ ಚರ್ಮದಲ್ಲಿ ಸ್ಪರ್ಶ ಜ್ಞಾನ, ಮೆದುಳು, ಇತ್ಯಾದಿ, ಇಂತಹದೇ ಅಸಂಖ್ಯ ಇತರ ವಸ್ತುಗಳನ್ನು ಅದರ ಎಲ್ಲ ಅವಶ್ಯಕತೆಗಳನ್ನು ಪರಿಗಣಿಸಿ ಮೊದಲೇ ಅದರ ಸಣ್ಣ ದೇಹದಲ್ಲಿ ಒಟ್ಟುಗೂಡಿಸಿ ಇಡಲಾಗಿದೆ. ಆ ಬಳಿಕ ಅದು ಭೂಮಿಗೆ ಕಾಲಿಡುತ್ತಲೆ ಅದಕ್ಕೆ ಜೀವನ ಸಾಗಿಸಲು ಬೇಕಾದ ಲೆಕ್ಕವಿಲ್ಲದಷ್ಟು ವಸ್ತುಗಳು ನೀಡಲ್ಪಡುತ್ತವೆ. ಮತ್ತು ಲೋಕದಲ್ಲಿ ಕೆಲಸ ಮಾಡಲು ಎಷ್ಟು ಸಾಮರ್ಥ್ಯಗಳ ಅಗತ್ಯ ಮನುಷ್ಯನಿಗಿದೆಯೋ ಅವೆಲ್ಲವನ್ನು ಆತನಿಗೆ ನೀಡಲಾಗಿದೆ. ದೈಹಿಕ, ಗ್ರಹಣ ಮತ್ತು ಇಂತಹುದೇ ಅನೇಕ ಸಾಮರ್ಥ್ಯಗಳನ್ನು ಹೆಚ್ಚು ಕಡಿಮೆ ಎಲ್ಲ ಮನುಷ್ಯರಿಗೆ ನೀಡಲಾಗಿದೆ. ಅದರೆ ಎಲ್ಲ ಸಾಮರ್ಥ್ಯಗಳನ್ನು ಎಲ್ಲ ಮನುಷ್ಯರಿಗೂ ಸಮಾನವಾಗಿ ನೀಡಲಾಗಿಲ್ಲ. ಹಾಗೆ ನೀಡುತಿದ್ದರೆ ಯಾರು ಯಾರನ್ನು ಅವಲಂಬಿಸಿರುತ್ತಿರಲಿಲ್ಲ. ಯಾರು ಯಾರನ್ನೂ ಲೆಕ್ಕಿಸುತ್ತಿರಲಿಲ್ಲ. ಆದ್ದರಿಂದ ಅಲ್ಲಾಹನು ಎಲ್ಲ ಮನುಷ್ಯರ ಒಟ್ಟು ಅವಶ್ಯಕತೆಗಳನ್ನು ಪರಿಗಣಿಸಿ ಎಲ್ಲ ಸಾಮರ್ಥ್ಯಗಳನ್ನು ಮನುಷ್ಯರಲ್ಲೇ ಸೃಷ್ಠಿಸಿರುವನು. ಅದರಲ್ಲಿ ಕೆಲವರಿಗೆ ಕೆಲವು ಅಧಿಕ ಮತ್ತು ಕೆಲವರಿಗೆ ಸ್ವಲ್ಪ ಕಡಿಮೆಯಾಗಿ ಹಂಚಲಾಗಿದೆ. ಲೋಕದಲ್ಲಿ ಮನುಷ್ಯ ಜೀವನವನ್ನು ಸಫಲಗೊಳಿಸಲು ಮನುಷ್ಯರಲ್ಲಿ ಕೇವಲ ಇಂಜಿನಿಯರ್‌ಗಳು, ವಿಜ್ಞಾನಿಗಳು, ಕಾನೂನು ಪಟುಗಳು, ರಾಜಕಾರಣದ ಪ್ರವೀಣರು, ಮತ್ತು ಇತರ ವೃತ್ತಿಯ ಪರಿಣತಿ ಹೊಂದಿದವರು ಮಾತ್ರ ಹುಟ್ಟಿದರೆ ಶಕೆ ಎಂದು ಈಗ ಯೋಚಿಸಬೇಕಾಗಿದೆ. ಈ ಎಲ್ಲಾ ಅವಶ್ಯಕತೆಗಳಿಗಿಂತಲೂ ಮಿಗಿಲಾದ ಒಂದು ಅಗತ್ಯವಿದೆ, ಅದು ಮನುಷ್ಯರಿಗೆ ಅಲ್ಲಾಹನ ದಾರಿ ತೋರಿಸಿಕೊಡುವುದಾಗಿದೆ. ಈ ಲೋಕದಲ್ಲಿ ಮನುಷ್ಯನಿಗಾಗಿ ಯಾವ ಯಾವ ವಸ್ತುಗಳಿಗೆ ಅವುಗಳನ್ನು ಹೇಗೆ ಬಳಸಬಹುದು ಎಂಬುದನ್ನು ಮಾತ್ರ ತಿಳಿಸುತ್ತಾರೆ. ಅದರೆ ಸ್ವಯಂ ಮನುಷ್ಯನು ಯಾವುದಕ್ಕಾಗಿ ಸೃಷ್ಟಿಸಲ್ಪಟ್ಟಿದ್ದಾನೆ ? ಆ ಸೃಷ್ಠಿಯ ಇಚ್ಚೆಯಾದರೂ ಏನು ? ಸೃಷ್ಠಿಕರ್ತನ ಇಷ್ಟಾನಿಷ್ಟಗಳನ್ನರಿತು ಅವುಗಳಿಗೆ ಬದ್ಧವಾಗಿ ಜೀವನ ಸಾಗಿಸಲು ಸಿದ್ಧನಾಗುತ್ತಾನೋ ಅಥವಾ ಮಾನವ ನಿರ್ಮಿತ ಸಿದ್ಧಾಂತಗಳಿಗೆ ಮರುಳಾಗುತ್ತಾನೋ ಎಂಬುದನ್ನು ಇಲ್ಲಿ ಪರಿಕ್ಷಿಸಲಾಗುತ್ತದೆ. ಪರಸ್ಪರ ವಿರುದ್ಧವಾದ ಈ ಎರಡು ಮಾರ್ಗ ಗಳನ್ನು ಅಲ್ಲಾಹನು ಮನುಷ್ಯನ ಮುಂದೆತೆರೆದಿಟ್ಟಿರುವನು. ಅವುಗಳ ಪೈಕಿ ಪನುಷ್ಯನು ಯಾವ ಮಾರ್ಗವನ್ನು ಆರಿಸಿಕೊಳ್ಳುವನೋ ಅದರಲ್ಲಿ ನಡೆಯಲು ಬೇಕಾದ ಎಲ್ಲ ಅನುಕೂಲತೆಯನ್ನು ಒದಗಿಸಿ ಕೊಡಲಾಗುತ್ತದೆ.

ಕುರಾನ್ ಹೇಳುತ್ತದೆ,
"ಆತನೇ ಜೀವನ ಮರಣಗಳನ್ನು ಸೃಷ್ಠಿಸಿದನು, ನಿಮ್ಮಲ್ಲಿ ಯಾರು ಅತ್ಯುತ್ತಮ ಕರ್ಮಗಳನ್ನು ಮಾಡುತ್ತಾರೆ ಎಂಬುದನ್ನು ಪರೀಕ್ಷಿಸುವ ಸಲುವಾಗಿ"  (ಕುರಾನ್ 67:2)
ಇಲ್ಲಿ ಅಂಕಿ ಸಂಖ್ಯೆಯಲ್ಲಿ ನಾಸ್ತಿಕರು ಅಸ್ತಿಕರ ಸಂಖ್ಯೆಗಳಲ್ಲ, ನಾವು ನೋಡಬೇಕಾದುದು ನಮ್ಮ ಕರ್ಮಗಳ ಅಂಕಿ ಸಂಖ್ಯೆ.

27-09-10 (01:24 PM)[-] alif
pkbys, ಇಲ್ಲಿ ನಿಮ್ಮ ವಿವಿಧ ಅಭಿಪ್ರಾಯಗಳಿವೆ. ಅದೆಲ್ಲ ಅಲ್ಲಿರಲಿ ಇಸ್ಲಾಮಿನ ಬಗ್ಗೆ ನೀವು ತಿಳಿದಿರುವಿರ? 
ಅಥವಾ ಮುಸ್ಲಿಮ್ ಹೆಸರಲ್ಲಿ ಬರುವ ಜನಗಳನ್ನು ನೋಡಿ ತಿಳಿದುಕೊಂಡಿರ? 
ನಿಮ್ಮ ಪ್ರಕಾರ ಧರ್ಮ ಅಂದ್ರೆ ಏನು
ಯಾವ ಆಧಾರದಲ್ಲಿ ನೀವು ನಿಮ್ಮ ಧರ್ಮ(ಯಾವುದೂ?) ಪಾಲಿಸುತ್ತಿದ್ದಿರಾ?

27-09-10 (02:18 PM)pkbys
dear alif, ಇಸ್ಲಾಮಿನ ಬಗ್ಗೆ ನಾನು ನಿಮ್ಮಂತಹ ಮಹಮದೀಯ ಗೆಳೆಯರಿಂದ, ಜಾಕಿರ್ ಹುಸೇನ್ ಪ್ರವಚನಗಳಿಂದ, ಸುದ್ದಿ ಸಮಾಚಾರಗಳಿಂದ ತಿಳಿದಿರುವೆ... ಮುಸ್ಲಿಂ ಹೆಸರಿನಿಂದ ಬರೆವ ಹಿಂದುಗಳು, crusade ಹೇಳುವ ಮುಸ್ಲಿಂ ನಾಮಧಾರಿ ಕೆಟ್ಟ ಜನರೂ ಮತ್ತು ನಿಜವಾದ ಮುಸಲ್ಮಾನರ ನಡುವಿನ ಕಾಮೆಂಟ್ಗಳನ್ನು ನಾನು ವಿಭಾಗಿಸಬಲ್ಲೆ.. ಅಷ್ಟು ವಿವೇಕ ನನಗಿದೆ ಎಂಬ ಆತ್ಮವಿಶ್ವಾಸ ನನಗಿದೆ. 

ಧರ್ಮ ಯಾವುದು ಎಂಬ ಪ್ರಶ್ನೆ ಕೇಳಿದ್ದೀರಿ... ನಾನು ಇನ್ನೊಬ್ಬರಿಗೆ ತೊಂದರೆ ಕೊಡದ, ನಿಯಮಗಳನ್ನು ಕಡ್ಡಾಯ ಮಾಡದ, ನಂಬುವ ಮತ್ತು ನಂಬದಿರುವ ಮತ್ತು ಸ್ವಲ್ಪ ಮಾತ್ರ ನಂಬಿ ಸ್ವಲ್ಪ ನಂಬದಿರುವ ಸ್ವಾತಂತ್ರ್ಯ ನೀಡುವುದನ್ನು ಧರ್ಮ ಎನ್ನುತ್ತೇನೆ.. ಎಲ್ಲರೂ ಹುಡುಕುವ ಪರಮ ಸತ್ಯವನ್ನು ನಾವೇ ಹುಡುಕಲು ಪ್ರಚೋದಿಸುವ, ಆಚರಣೆ ಸಂಪ್ರದಾಯಗಳಲ್ಲಿ ಕರುಣೆಯನ್ನು ಹೊಂದಿದ, ನೀತಿಯನ್ನು ಧರ್ಮ ಎನ್ನುವೆ.. ನಾನು ಒಬ್ಬ ಅದ್ವೈತ ಸಿದ್ದಾಂತವನ್ನು ನಂಬುವವನು.... ಆದರೆ ದೇವರು ಹಲವಾರು ರೂಪಗಳ ಮೂಲಕ ಪೂಜಿಸಲ್ಪಡಬಹುದು ಮತ್ತು ಆ ಎಲ್ಲ ಪೂಜೆಗಳೂ ಆ ಏಕೈಕ ಪರಮಾತ್ಮನಿಗೇ ಸಲ್ಲುತ್ತದೆ ಎಂದು ನಂಬುವವನು..

27-09-10 (03:41 PM)[-] alif
ಪರಮ ಸತ್ಯ ಹುಡುಕ ಬೇಕಿಲ್ಲ! ನಮಗೆಲ್ಲರಿಗೂ ತಿಳಿದಿದೆ! ನಮ್ಮ ಮುಂದೆಯೆ ಇದೆ! ಒಬ್ಬನೆ ಸೃಷ್ಠಿಕರ್ತ, ಅವನಿಗೆ ನಾವು ತಲೆ ಬಾಗಬೇಕು (ಕೃತಜ್ಞತೆ), ಒಳ್ಳೆಯದನ್ನು ಮಾಡುತ್ತಾ ಒಳ್ಳೆಯವರಾಗಿ ಜೀವಿಸಬೇಕು. ಧರ್ಮ ಎಂದರೆ ಈ ಒಳ್ಳೆಯದನ್ನು ಆಚರಣೆಗಳಾಗಿ ಹೇಳಿ ಅದರ ಮೂಲಕ ಜನರ ದಾರಿ ತಪ್ಪುವಿಕೆಯನ್ನು ತಡೆಯುವುದು. ಇದು ಸ್ವಂತಕ್ಕೆ ಇರುವುದು, ನೀವು ಕಂಡ ಒಳಿತನ್ನ ಇತರರಿಗೆ ಹೇಳಬಹುದು, ಆದರೆ ಇದನ್ನ ನಿರ್ಬಂಧಿಸಲು ಸಾದ್ಯವಿಲ್ಲ. ಧರ್ಮ ವಿಶ್ವಾಸಿಯಾಗಿ ತಪ್ಪೆಸಗುವವನು ಯಾವುದೇ ಧರ್ಮವಿಲ್ಲದೆ ಸರಿಯಾಗುವನೆ? ನಾವು ಒಂದು ವಿಷಯ ಹೇಳಬೇಕಾದರೆ ಅದರ ಬಗ್ಗೆ ತಿಳಿದಿರಬೆಕು (ನೀವು ಇಸ್ಲಾಮಿನ ಕ್ರೂರತೆ ಎಂದು ಕೆಲವು ವಿಷಯ ಹೇಳಿದಿರಿ), ಹಿಂದೆ ಭೂಮಿ ಸಮತಟ್ಟು ಎಂದು ಹೇಳಿದ್ದರು ಅದು ನೋಡಲು ಹಾಗೆಯೇ ಇದೆ ಆದರೆ ಅದರ ಬಗ್ಗೆ ತಿಳಿದಾಗ ಅದು ಗೋಳ ಅನ್ನುವುದು ತಿಳಿಯಿತು. ಹೀಗೆ ಪ್ರಥಮ ನೋಟಕ್ಕೆ ಅಥವಾ ಕೇಳಿದ್ದನ್ನು ನಂಬಿ ಆಕ್ಷೇಪಿಸಬೇಡಿ ಅದನ್ನ ಅದ್ಯಯನ ಮಾಡಿ. ಭಾರತದಲ್ಲಿ ಧರ್ಮ ಭೇದ ಇರಬಾರದು, ಆದರೆ ರಾಜಕೀಯಕ್ಕೆ ಅದು ಬೇಕು, ಆದರಿಂದ ಧರ್ಮ ಮನೆಯೊಳಗಿಟ್ಟು (ಸ್ವಂತ ಮನಸ್ಸಿಗಾಗಿ) ಹೊರಬಂದು ದೇಶದಲ್ಲಿ ಎಲ್ಲರು ಒಂದಾಗಿ, ತಮ್ಮ ತಮ್ಮಲ್ಲಿ ಸಹಾಯ ಹಸ್ತ ಚಾಚುತ್ತಾ ಭಾರತದ ಅಭಿವೃದ್ದಿಗೆ ಶ್ರಮಿಸೊಣ.

27-09-10 (05:07 PM)[-] pkbys
'ಒಬ್ಬನೇ ಸೃಷ್ಠಿಕರ್ತ'- ಸರಿ...... ನಾನಾಗಲೇ ಅದ್ವೈತಿ ಎಂದು ಹೇಳಿದೆ... ಯಾವ ಆಸ್ತಿಕ ಹಿಂದುವೂ ನಿಮ್ಮ ಈ ಮಾತಿಗೆ ಎದುರಾಡುವುದಿಲ್ಲ... 

'ಅವನಿಗೆ ನಾವು ತಲೆ ಬಾಗಬೇಕು' - ಹಾಗೇನೂ ಇಲ್ಲ. ಹಿಂದುಗಳು ದೇವರಿಗೆ ತಲೆ ಬಾಗಲೇಬೇಕೆಂಬ ನಿಯಮವಿಲ್ಲ. ದೇವರು ಹಾಗೆ ನಿರೀಕ್ಷಿಸುವುದೂ ಇಲ್ಲ.. 

ಒಳ್ಳೆಯದು ಮಾಡುತ್ತಾ ಒಳ್ಳೆಯವರಾಗಿ ಜೀವಿಸಬೇಕು.. ಎಲ್ಲರೂ ಒಪ್ಪುವ ಮಾತು.. 

ಧರ್ಮವನ್ನ ನಿರ್ಭಂಧಿಸಲು ಸಾಧ್ಯವಿಲ್ಲ.... ಸಹೃದಯ ನಿಮ್ಮ ಮಾತು ಒಪ್ಪುವೆ... 

ಭೂಮಿ ಸಮತಟ್ಟು ಎಂದು ಮಾನವ ತಿಳಿದಿದ್ದಾಗ ಮೆಕ್ಕಾವನ್ನ ಕೇಂದ್ರ ಎಂದು ತಿಳಿದುಕೊಂಡಿದ್ದ... ಆ ಮಾನವನ ಬಗ್ಗೆ ನನಗೆ ವಾದವಿಲ್ಲ.. ಏನೋ ಅವನ ಅರಿವಿನ ಸೀಮೆ ಅದು.. ಆದರೆ ಗೋಳವೆಂದು ತಿಳಿದ ಮೇಲೂ ಕೇಂದ್ರವೆಂದು ವಾದಮಾಡುವ ಜಾಕಿರ್ ನಾಯಕ್ ರಂತಹವರ ಬಗ್ಗೆ ನನ್ನ ವಾದ ಅಷ್ಟೇ.. ಧರ್ಮವನ್ನ ಮನೆಯೊಳಗಿಟ್ಟು ದೇಶದ ಅಭಿವೃದ್ದಿಗಾಗಿ ಹಸ್ತ ಚಾಚೋಣ ಎಂದೆರಲ್ಲ, ಸಂತೋಷವಾಯಿತು.. 

ಇಸ್ಲಾಮಿನ ಕ್ರೂರತೆಯ ಬಗ್ಗೆ ಹೇಳಿದೆ.. ಏನೇ ಹೇಳಿದರು ಶರಿಯತ್ ಕ್ರೌರ್ಯ ಎಂಬುದರಲ್ಲಿ ಮಾತಿಲ್ಲ.. ತಾಯಿ ತಂಗಿಯರ ಮೇಲೆ ಅತ್ಯಾಚಾರ ನಡೆಸಿದವರ ಮೇಲೆ ಮಾನವೀಯತೆ ತೋರುವಿರಾ ಎಂದು ಕೇಳಿದಿರಿ.. ಖಂಡಿತಾ ಇಲ್ಲ.. ಆದರೆ ಶರಿಯತ್ ನಷ್ಟು ಕ್ರೌರ್ಯವನ್ನೂ ತೋರುವುದಿಲ್ಲ.. ಮರಣ ದಂಡನೆಯೂ ಸರಿಯೇ...ಆದರೆ ನಾಗರಿಕ ರೀತಿಯಲ್ಲಿ...

27-09-10 (07:11 PM)alif
ಇದು ನಿಮ್ಮ ಅಜ್ಞಾನ ನೀಗಿಸಲು: ಭೂಮಿ ಸಮತಟ್ಟು ಎಂದು ಮಾನವ ತಿಳಿದಿದ್ದಾಗ ಮೆಕ್ಕಾವನ್ನ ಕೇಂದ್ರ ಎಂದು ತಿಳಿದುಕೊಂಡಿದ್ದ: ಇದು ನಿಮ್ಮ ಸಂಶೋಧನೆಯೆ? ಇದು ನಿಮ್ಮ ಕೊಂಕು ಬುದ್ಧಿ ಅಂತ ತಿಳಿದಿದ್ದೇನೆ!
ಕುರಾನ್ ಭೂಮಿ, ಸೂರ್ಯ .. ಹೀಗೆ ಇಡೀ ವಿಶ್ವದ ಬಗ್ಗೆ 1400 ವರ್ಷಗಳ ಹಿಂದೆ ಅತಿ ಸಮರ್ಥವಾಗಿ ಹೇಳಿದೆ.
ನಿಮ್ಮ "ಆ ಮಾನವನ ಬಗ್ಗೆ ನನಗೆ ವಾದವಿಲ್ಲ.. ಏನೋ ಅವನ ಅರಿವಿನ ಸೀಮೆ ಅದು.." ಈ ವಾಕ್ಯ ನಿಮ್ಮ ಕೂಪ ಮಂಡೂಕತನ ತೋರುತ್ತದೆ. ಅಲ್ಲದೆ ಈ ಶತಮಾನದಲ್ಲಿ ವಿಜ್ಞಾನಿಗಜ್ಞಾ ಕಂಡು ಹಿಡಿದ ಅನೇಕಾನೀಕ ವಿಜ್ಞಾನ 1400 ವರ್ಷಗಳ ಹಿಂದೆ ಕುರಾನ್‌ನಲ್ಲಿ ಹೇಳಲಾಗಿದೆ. ಕುರಾನ್ ಬಗ್ಗೆ ಸ್ವಲ್ಪವಾದರೂ ತಿಳಿದಿರಲಿ.

ನಿಮ್ಮ ವಿಗ್ರಹಗಳು ಯಾವುದರ ಪ್ರತೀಕ? ಬುದ್ದಿವಂತರದ್ದೊ? ನಿಮ್ಮ ದೇವರ ಹೆಸರುಗಳು?
ನಾಯಕ್ ಅವರ ವಾದ ನೀವು ಅವರೊಂದಿಗೆ ಚರ್ಚಿಸಬಹುದು. ತಲೆ ಬಾಗುವುದು ಕೃತಜ್ಞತೆಯ ಲಕ್ಷಣ ಅದಿಲ್ಲ ಅಂದರೆ ಅದು ನಿಮ್ಮ ಅಜ್ಞಾನ! ಶರಿಯತ್ ನಿಯಮ ಕ್ರೌರ್ಯ ಅಂದಾದರೆ ಅದಕ್ಕಿಂತ ಕ್ರೌರ್ಯ ವಿವಾಹಿತ ಮಾಡುವ ಅತ್ಯಾಚಾರ! ಅವನಿಗೆ ಆ ಶಿಕ್ಷೆ ಅವಶ್ಯ! ಆದರೆ ಇನ್ನೊಂದು ಭಾಗ ಅತ್ಯಾಚಾರಿ ಅವಿವಾಹಿತನಾದಲ್ಲಿ 80 ಏಟು ! ಇಲ್ಲಿ ನಿಮ್ಮ ಮರಣದಂಡನೆ ಏನಾದರೂ ಮಾನವೀಯತೆ ಕಂಡಿದೆಯೆ? ಇದು ಜೀವನ ನಿಯಮದ ಭಂಢಾರ! ಒಂದು ವಾಕ್ಯದಿಂದ ಅಳೆಯಬಹುದೇ?

27-09-10 (08:58 PM)[-] pkbys
alif, ಮಕ್ಕ ಪ್ರಪಂಚದ ಕೇಂದ್ರವೆಂದು ನನ್ನ ಸಂಶೋಧನೆ ಅಲ್ಲ, ಜಾಕಿರ್ ನಾಯಕ್ ಹಾಗೆ ಹೇಳುವುದನ್ನು ಕೇಳಿದ್ದೇನೆ, ನನ್ನದು ಕೊಂಕು ಬುದ್ದಿ ಅಂದಿದ್ದೀರಿ.. ಕುರಾನ್ ಭೂಮಿ ಸೂರ್ಯನ ಬಗೆಗೆ ಏನು ಹೇಳಿದೆಯೋ ಬಿಡಿಸಿ ಹೇಳಿದರೆ ನಾನು ಉಪಕೃತನೆಂದು ಭಾವಿಸುವೆ... ಆದರೆ ಅದೇ ಕುರಾನ್ ಮಕ್ಕಾವನ್ನು ಪ್ರಪಂಚದ ಕೇಂದ್ರ ಎಂದು ಹೇಳಿದೆಯಲ್ಲವೇ? ಹಾಗೆ ಹೇಳಿರದಿದ್ದರೆ, ನನ್ನ ವಾದವನ್ನ ನಾನು ಖಂಡಿತ ಹಿಂತೆಗೆದುಕೊಳ್ಳುವೆ... ಮತ್ತು ನನ್ನ ತಪ್ಪು ಅಭಿಪ್ರಾಯಕ್ಕೆ ಕ್ಷಮೆ ಬೇಡುವೆ.. ಕುರಾನ್ ಹಾಗೆ ಹೇಳಿದ್ದರೆ ಅದು ಸುಳ್ಳು ಎಂದು ಮಾತ್ರ ನಿಮ್ಮ ಗಮನಕ್ಕೆ ತರಬಯಸುವೆ..

ನೀವು 1400 ವರ್ಷಗಳ ಕುರಾನ್ ತಂದರೆ ನಾನು. 5000 ವರ್ಷಗಳ ಹಿಂದಿನ ವೇದಗಳ ಮಾತೂ ತರಬಲ್ಲೆ.. ಅಲ್ಲಿ ಖಗೋಳ ಶಾಸ್ತ್ರವಿದೆ, ರಸವಿದ್ಯೆ ಇದೆ.. ಅರಬ್ ನಲ್ಲಿ ಕುರಾನ್ ಅವತೀರ್ಣವಾಗುವ ಸಾವಿರಾರು ವರ್ಷಗಳ ಮೊದಲೇ ಭಾರತದಲ್ಲಿ ವೈದ್ಯಕೀಯ, ರಾಸಯನಿಕ, ಖಗೋಳ, ಗಣಿತ, ಜ್ಯೋತಿಷ್ಯ, ಸಾಹಿತ್ಯ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿದ್ದರು..ವೇದಗಳಲ್ಲಿ ವಿಮಾನದ ಉಲ್ಲೇಖ ಬರುತ್ತದೆ.. ಆದರೆ ಯಾವ ಮನುಷ್ಯ ಆ ವೇದಗಳ ಜ್ಞಾನ ಬಳಸಿ ವಿಮಾನ ಮಾಡಿ ಹಾರಲಿಲ್ಲ.. ಅಂದ ಮೇಲೆ ಆ ಬಗ್ಗೆ ಮಾತಾಡಿ ಪ್ರಯೋಜನವೇನು..

ವಿಗ್ರಹಗಳು ಯಾವುದರ ಪ್ರತೀಕವೆಂದಿದ್ದೀರಿ.. ವಿಗ್ರಹಗಳು ಕಲ್ಲು ಮಾತ್ರವೇ... ಆದರೆ ಅದಕ್ಕೊಂದು ರೂಪಾ ಕೊಟ್ಟು,, ಆ ಸರ್ವಶಕ್ತ ಭಗವಂತನನ್ನು ಆ ಕಲ್ಲಿಗೆ ನಾವು ಕರೆದು ಕೂರಿಸುತ್ತೇವೆ.. (ನಮ್ಮ ಭಾವನೆ ಅದು, ಹಾಗೆ ನೋಡಿದರೆ ಪ್ರತಿಯೊಂದರಲ್ಲೂ ದೇವನಿದ್ದಾನೆ ಜಗತ್ತಿನ ಪ್ರತಿಕಣವೂ ದೇವನ ಭಾಗ ಎಂದು ನಂಬುತ್ತೇವೆ...) ಅದಕ್ಕೆ ನಾವು ಆವಾಹನೆ ಎಂದು ಕರೆಯುತ್ತೇವೆ.. ಆ ವಿಗ್ರಹ ಕೇವಲ ದೈವದ ಪ್ರತಿನಿಧಿಯಾಗಿರುತ್ತದೆಯೇ ಹೊರತು ದೈವವಲ್ಲ.. ಇದು ಪ್ರತಿ ಹಿಂದೂವಿಗೂ ಗೊತ್ತಿರುವ ಸತ್ಯ.... ಆ ಕಾರಣದಿಂದಲೇ ಭಿನ್ನವಾದ ವಿಗ್ರಹಗಳನ್ನು ನಾವು ದೈವದ ಪ್ರತಿನಿಧಿಯಾಗಿಸುವುದಿಲ್ಲ.. ಹಾಗೇಯೇ ದೈವದ ಪೂರ್ಣ ರೂಪವನ್ನು ನಾವು ವಿಗ್ರಹಕ್ಕೆ ಕರೆಯುವುದಿಲ್ಲ.. ಆ ಸರ್ವಶಕ್ತ ದೈವದ ಒಂದು ಶಕ್ತಿ ರೂಪವನ್ನು ನಾವು ಕರೆಯುತ್ತೇವೆ... ನಿಮ್ಮ ಪ್ರಶ್ನೆಗಳೇನಾದರು ನನ್ನ ಉತ್ತರದಿಂದ ಬಗೆಹರಿಯದಿದ್ದರೆ ಅವಶ್ಯವಾಗಿ ಕೇಳಿ, ಖಂಡಿತಾ ಯಾವುದೇ ಕೊಂಕಿಲ್ಲದೇ ಉತ್ತರಿಸುವೆ...

ಇನ್ನು ಶರಿಯತ್ ವಿಚಾರ, ವಿವಾಹಿತನ ಅತ್ಯಾಚಾರ ಅವಿವಾಹಿತನ ಅತ್ಯಾಚಾರ ಎಂಬ ಭೇದವಿರಬೇಕು ಎಂದು ಅನಿಸುವುದಿಲ್ಲ.. ಯಾವುದೋ ನ್ಯಾಯಲಯ ಅತ್ಯಾಚಾರ ಮಾಡುವಾಗ ಕಾಂಡೋಮ್ ಬಳಸಿದ್ದ ಎಂದು ಕಡಿಮೆ ಶಿಕ್ಷೆ ಕೊಟ್ಟಿತಂತೆ.... ಬಹಳ ಹಿಂದೆ ಓದಿದ ನೆನಪು.... ಹಾಸ್ಯಾಸ್ಪದ ವಿಚಾರ ಅದು... ಅತ್ಯಾಚಾರಿ ಅತ್ಯಾಚಾರಿಯೇ... 80 ಏಟು ಹೊಡೆಯುವ ಬದಲು ನಪುಂಸಕನಾಗಿ ಮಾಡಿಬಿಡಿ.. ಅಥವಾ ಬೇರೆನಾದರೂ ಶಿಕ್ಷೆ ಕೊಡಿ. ನಾಗರಿಕ ಎಂದು ಕರೆಯಲ್ಪಡುವ ಶಿಕ್ಷೆ ಕೊಡಿ... ಅವನು ಮಾಡಿದ್ದು ಅಪರಾಧ ಸರಿ.. ಅದಕ್ಕಾಗಿ ನೀವು ನಾಗರೀಕತೆ ಕಳೆದುಕೊಳ್ಳಬೇಕೆ... ಕ್ರೌರ್ಯ ಬರ್ಬರತೆಯಿಂದ ಭಯ ಹುಟ್ಟಿಸಬಹುದು, ಆದರೆ ಮಾನವನ ಸಹಜ ಮಾನವೀಯತೆ ಮರೆಯಾಗುತ್ತದೆ.. ಹಿಂಸೆ ಕಾನೂನಿನ ರೂಪದಲ್ಲಿರಲಿ, ಕಾನೂನು ಮುರಿಯುವ ರೂಪದಲ್ಲಿರಲಿ, ಅದು ತಪ್ಪೇ...

ನಮ್ಮ ದೇವರ ಹೆಸರುಗಳ ಬಗ್ಗೆ ಕೇಳಿದ್ದೀರಿ.. ಆದರೆ ನನಗೆ ಪ್ರಶ್ನೆ ಸ್ಪಷ್ಟವಾಗಿ ಅರ್ಥವಾಗಲಿಲ್ಲ.. ಸ್ವಲ್ಪ ಬಿಡಿಸಿ ಕೇಳಿದರೆ, ಉತ್ತರಿಸಲು ಅನುಕೂಲವಾಗುತ್ತದೆ.. ಇನ್ನು ತಲೆ ಬಾಗುವ ವಿಚಾರ, ತಲೆ ಬಗ್ಗಿಸೇ ಕೃತಜ್ಞತೆ ಸಲ್ಲಿಸಬೇಕಿಲ್ಲ... ನಿಮಗೆ ಕಲಿಸಿಕೊಟ್ಟಿರುವುದು ಅದೊಂದು ದಾರಿಯಾಗಿದ್ದರೆ ಸರಿಯೇ, ಆದರೆ ನೀವು ನೀಡುವ ಫಿತ್ರ ಕೂಡ ನೀವು ಭಗವಂತನಿಗೆ ಸಲ್ಲಿಸುವ ಕೃತಜ್ಞತೆ... ನಿಮ್ಮ ಸಭ್ಯ ಭಾಷೆ ನೀವು ಭಗವಂತನಿಗೆ ಸಲ್ಲಿಸುವ ಕೃತಜ್ಞತೆ... ಹೇಗೆ ಕೃತಜ್ಞತೆ ಸಲ್ಲಿಸಬೇಕೆನ್ನುವುದು ವೈಯಕ್ತಿಕ ವಿಚಾರವಲ್ಲವೇ alif.. ಅದು ಆ ವ್ಯಕ್ತಿಯ ಮತ್ತು ಭಗವಂತನ ನಡುವಿನ ವಿಚಾರ, ಮಧ್ಯ ತಲೆ ಹಾಕಲು ನಾವು ಯಾರು?? ನಮಗೆ ದೇವರನ್ನು ನಮ್ಮ ಮನೆಯ ಸದಸ್ಯ, ನಮ್ಮ ಗೆಳೆಯ, ಬಂಧು ಎಂದು ನೋಡುವಷ್ಟು ಹತ್ತಿರದವನು.. ದೇವರನ್ನು ಕಂಡರೆ ನಮಗೆ ಭಯವಂತೂ ಖಂಡಿತಾ ಇಲ್ಲ..

28-09-10 (06:40 AM)alif
ದುಷ್ಟ ಶಕ್ತಿ ಇದೆಯೋ ಇಲ್ಲವೊ?
ಇದ್ದರೆ ಅದು ಜಗತ್ತಿನ ಭಾಗ ಅಲ್ಲವೆ?
ಅದರಲ್ಲೂ ದೇವನಿದ್ದಾನೆಯೆ?
ಧರ್ಮ ವಿಶ್ವಾಸಿ ಆಗುವುದು ತಪ್ಪಿನಿಂದ ದೂರ ಇರಲು. ಇದು ಪೂರ್ಣ ಒಪ್ಪುವವನಿಗೆ ತಪ್ಪಿನ ಶಿಕ್ಷೆ ಅಳೆಯುವ ಅವಶ್ಯಕತೆ ಬರಲಾರದು. ವಿವಾಹಿತ ಮಾಡುವ ಅತ್ಯಾಚಾರ ಆತನ ಕ್ರೂರತೆ, ಆದರೆ ಅವಿವಾಹಿತ ಅವನ ಸಿಗದ ಬಯಕೆಗಾಗಿ ಮಾಡಿರುತ್ತಾನೆ. ಇಲ್ಲಿ ನೀವು ಇದು ಮಾತ್ರ ನೋಡಿದ್ರೆ ಸಾಲದು, ಇಸ್ಲಾಮಿನ ಪ್ರಕಾರ ಹರೆಯ (ಲೈಂಗಿಕತೆಗೆ ಅರ್ಹರಾಗುವುದು) ಬಂದರೆ ಮದುವೆ ಆಗಬೇಕು (ನೀವು ಹೇಳಬಹುದು ಅಪ್ರಾಪ್ತ ಅಂತ, ಆದರೆ ಈಗ ವಿಶ್ವದೆಲ್ಲೆದೆ ಹರೆಯ ಬಂದರೆ ಲೈಂಗಿಕ ಸುಖ ಪಡೆಯುತಿರುವ ಯುವಕ ಯುವತಿಯರ ಬಗ್ಗೆ ಗೊತ್ತಿರಬಹುದು, ಅವರಿಗೆ ಏನು ಪ್ರೊಬ್ಲೆಮ್ ಇಲ್ಲ ಆದರೆ ಕಾನೂನು ಬದ್ದವಾಗಿ ವಿವಾಹ ಮಾತ್ರ ತಪ್ಪು!!!). ಅವನು ಅವಿವಾಹಿತನಾಗಿರಲು ಕಾರಣಗಳು ಇರಬೇಕಲ್ಲವೆ ಅಲ್ಲದಿದ್ದರೆ ಖಂಡಿತ ಅವನು ವಿವಾಹಿತನಾಗಬೇಕಲ್ಲವೆ? (ಚೆನ್ನಾಗಿ ಯೋಚಿಸಿ) ಹೀಗೆ ಒಂದು ಕಾನೂನು ವಿಮರ್ಶೆಯ ಮೊದಲು ಅದರೊಂದಿಗಿನ ಹಲವು ನಿಯಮ ಅರಿತಿರಬೇಕು ಸಹೋದರ. ಒಳ್ಳೆಯದು ತಿಳಿಯುವ ಶಕ್ತಿ ನಿಮ್ಮದಾಗಲಿ......

28-09-10 (09:42 PM)[-] Manju
Alif... ನ್ಯಾಯ-ಅನ್ಯಾಯ, ಧರ್ಮ-ಅಧರ್ಮ, ನೈತಿಕ-ಅನೈತಿಕ ಎಂಬುದೆಲ್ಲ ನಮ್ಮ ಅಹಂ ತಣಿಸಲು ಹುಟ್ಟಿಕೊಂಡ ಪದಗಳಷ್ಟೇ.. ಎಲ್ಲವನ್ನೂ ವಿಭಜಿಸಿ ನೋಡುವ, ತದ್ವಿರುದ್ಧಗಳನ್ನು ಕಂಡುಕೊಳ್ಳುವ ಚಪಲ ಮನುಷ್ಯನಿಗೆ. ಕಾಲಾಯ ತಸ್ಮಯೇ ನಮಃ, ಅಷ್ಟೇ.. ಯಾವುದೂ ಪ್ರಸ್ತುತವೋ ಅದನ್ನು ಅಳವಡಿಸಿಕೊಳ್ಳುವುದು, ಅಪ್ರಸ್ತುತವೋ ಅದನ್ನು ಸಾರಾಸಗಟಾಗಿ ತಿರಸ್ಕರಿಸುವುದೂ ಮಾನವ ಸ್ವಾತಂತ್ರ್ಯದ ಮೊದಲ ಅವಕಾಶವಾಗಿರಬೇಕೆಂಬುದು ನಮ್ಮ ಆಶಯ. ಬೇಕಾಬಿಟ್ಟಿ ಚರ್ಚೆ ಇಲ್ಲಿ ನಡೆದಿಲ್ಲ.. ಆ ಮನಸ್ತತ್ತ್ವ ಕೂಡ ನಮ್ಮದಲ್ಲ.. ಇಷ್ಟು ದಿನಗಳ ಸಂವಾದದಲ್ಲಿ ಇಲ್ಲಾರೂ ಖಾರವಾದದ್ದರ ಸಂದರ್ಭವಿಲ್ಲ.
ಮನೋ ಮಾತ್ರಂ ಜಗತ್, ಮನೋ ನಿರ್ಮಿತಂ ಜಗತ್..

28-09-10 (09:07 PM)[-] pkbys
alif ನಿಮಗೇನು ಬೇಕು? ದುಷ್ಟ ಶಕ್ತಿಯ ಇರುವಿಕೆ ಇಲ್ಲದಿರುವೆಕೆಯ ಬಗ್ಗೆ ಬೇಕಾ.. ಹಾಗಿದ್ದರೆ ಕೇಳಿ..
ಶಕ್ತಿ ಶಕ್ತಿ ಅಷ್ಟೇ, ದುಷ್ಟ ಶಿಷ್ಟ ವಿಷಯ ಬರುವುದು ನಿಮ್ಮ ನೆಲೆಯ ಮೇಲೆ... ಅದು relative... ವಿದ್ಯುತ್, ಬೆಂಕಿ‌, ಮೊದಲಾದವಂತೆ..ನಿಮ್ಮನ್ನು ಸುಡಲೂ ಬಹುದು, ಶಾಖವನ್ನೂ ಕೊಟ್ಟು ರಕ್ಷಿಸಲೂಬಹುದು.. ಇನ್ನೂ ಸರಳವಾಗಿ ಹೇಳುವುದಾದರೆ. ದುಷ್ಟ ಶಕ್ತಿಯೂ ಇದೆ ಮತ್ತು ಅದು ಆ ಮಹಾಶಕ್ತಿಯ ಒಂದು ಭಾಗ...ಅದ್ವೈತ ಅದನ್ನು ಪರಬ್ರಹ್ಮ ವಸ್ತು ಎಂದು ಹೇಳುತ್ತದೆ... ದಯವಿಟ್ಟು ಹಿಂದು ಪುರಾಣಗಳಲ್ಲಿ ಬರುವ ನಾಲ್ಕು ತಲೆಗಳ ಕಮಲದ ಮೇಲೆ ಕೂತ ಸೃಷ್ಠಿಕಾರ್ಯದ department head ಎಂದು confuse ಮಾಡಿಕೊಳ್ಳಬೇಡಿ... Manju ಹೇಳಿದ ಪರ್ವತ ಮತ್ತು ಪ್ರಪಾತದ ತುದಿ.. ನೀವು ಎಲ್ಲಿದ್ದೀರೆಂಬುದರ (level of ego) ಮೇಲೆ ನಿಮಗೆ ಯಾವ Division ಹೇಗೆ ಮತ್ತು ಎಷ್ಟು ಕಾಣಬೇಕು ಎಂದು ತೀರ್ಮಾನಿಸುತ್ತದೆ.. ಇಡಿಯಾಗಿ(Whole) ಆಗಿ ನೋಡಲು ನಿಮಗೆ ಅದಕ್ಕೆ ತಕ್ಕ ಮನಃಸ್ಥಿತಿ ಬೇಕು..

ನಿಮ್ಮ ಧರ್ಮ ಏನೆಂದು ತಿಳಿಯಿರಿ ಎಂದು ಹೇಳಿದ್ದೀರಿ.. ನಮ್ಮ ಧರ್ಮ ಸತ್ಯಾನ್ವೇಷಣೆ.. ಜನ ಅದಕ್ಕೆ ಹಿಂದೂ ಎಂದೂ, ಸನಾತನ ಎಂದೂ, ಇನ್ನೂ ಏನೇನೋ ಲೇಬಲ್ ಕೊಟ್ಟಿದ್ದಾರೆ ಅಷ್ಟೆ....

ಕೆಲವು ಪಾಶ್ಚಿಮಾತ್ಯ ಪಂಡಿತರು, ಜಾಕಿರ್ ನಂತಹವರು ಈ ಹಿಂದು ಜೀವನ ವಿಧಾನವನ್ನ ತಮ್ಮ ಧರ್ಮದ ಚೌಕಟ್ಟಿನಂತೇ ನೋಡಲು ಪ್ರಯತ್ನಿಸಿದರು.. ಧರ್ಮವೆಂದ ಮೇಲೆ ಒಂದು ಪರಮೋನ್ನತ ಗ್ರಂಥ ಬೇಕೆನ್ನುವುದು ಸೆಮೆಟಿಕ್ ಧರ್ಮಗಳ ದೃಷ್ಠಿಕೋನ.. ವೇದಗಳನ್ನು ಆ ಪಂಡಿತರು ಹಿಂದು ಧರ್ಮಗ್ರಂಥವಾಗಿ ಆರೋಪಿಸಿದರು.. ಅವತಾರಗಳನ್ನು ಬಹುಶಃ ಅಲ್ಲಾಹನು ಕುರಾನ್ ನಲ್ಲಿ ಹೇಳಿರುವ ಸಾವಿರಾರು ಪ್ರವಾದಿಗಳಲ್ಲಿ ಒಬ್ಬರಾಗಿರಬಹುದು ಎಂದರು. ಹೇಗಿದ್ದರೂ ಅವರೆಲ್ಲರ ಬಗ್ಗೆ ಅವರ ಹೆಸರುಗಳ ಬಗ್ಗೆ ಕುರಾನ್‌ನಲ್ಲಿ ಉಲ್ಲೇಖವಿಲ್ಲ.. ಎಷ್ಟೋ ಸಾವಿರ ಪ್ರವಾದಿಗಳನ್ನು ಅಲ್ಲಾಹನು ಜನರ ಉದ್ದಾರಕ್ಕೆ ಭೂಮಿಗೆ ಕಳುಹಿಸಿದನಂತೆ.. ಆದ್ದರಿಂದ ರಾಮ ಕೃಷ್ಣ ಅವರೆಲ್ಲಾ ಮಹಾಮಹಿಮರೂ ಆಗಿದ್ದಿರಬಹುದು, ಮತ್ತು ಜನರ ಉದ್ದಾರಕ್ಕೆ ಅಲ್ಲಾಹನು ಕಳುಹಿಸಿದ ಪ್ರವಾದಿಗಳೂ ಆಗಿರಬಹುದು.. ಮತ್ತು ಮಹಮ್ಮದ್ (ಸ.ಆ.) ಆ ಪ್ರವಾದಿಗಳ ಶ್ರೇಣಿಯಲ್ಲಿ ಕೊನೆಯವರು, ಮತ್ತು ಅಂತಿಮ ದೇವವಾಣಿ ಕುರಾನ್ ಎಂದು ಹೇಳಲಾಯಿತು... . ಏಕೆಂದರೆ ಅವರ ಕಣ್ಣಿನಲ್ಲಿ ಕುರಾನ್ ಪರಮೋಚ್ಚ... ಅದರ ಆಚೆ ಅವರು ಚಿಂತಿಸಲಾರರು.. (ಚಿಂತಿಸಬಾರದೂ ಕೂಡ)..

ಆದರೆ ಸೆಮೆಟಿಕ್ ಧರ್ಮಗಳ ದೃಷ್ಟಿಕೋನದಲ್ಲೇ ಓರಿಯಂಟಲ್ ಧರ್ಮಗಳನ್ನ ನೋಡುವ approach ತಪ್ಪು.. ನೀವು ಹೇಳಿದಿರಿ.. ಸತ್ಯವನ್ನು ಹುಡುಕಬೇಕೇಕೆ.., ಅದು ಕಣ್ಣ ಮುಂದೆಯೇ ಇದೆ.. ಒಬ್ಬನೇ ಪರಮಾತ್ಮ ಎಂದು... ಸರಿಯೇ.. .ಆದರೆ ಅಲ್ಲಿಗೆ ತೃಪ್ತಿ ಹೊಂದಬೇಕೆ.. ನಿಮಗಲ್ಲಿಗೇ ತೃಪ್ತಿಯಾದರೆ ಸಂತೋಷ...ಆ ಸರಳ ಸತ್ಯವನ್ನ ಭಾರತೀಯರು ವೇದಗಳ ಕಾಲದಲ್ಲಿಯೇ ಕಂಡುಕೊಂಡಿದ್ದೆವು.. ಕುರಾನ್ ನ ವರೆಗೆ ಕಾಯಬೇಕಾದ ದುರ್ಬರ ಅರಬರ ಸ್ಥಿತಿಯಲ್ಲಿ ಭಾರತೀಯರಿರಲ್ಲಿಲ್ಲ..

ನೀವು ಹೇಳಿದಿರಿ ಆರಾಧಿಸಬೇಕಾದದ್ದು ಮೂಲ ಪರಮಾತ್ಮನನ್ನು.. ಎಲ್ಲವನ್ನೂ ಪರಮಾತ್ಮ ಎಂದು ನೋಡುವುದು ಯಾವ ನ್ಯಾಯ ಎಂದು.. ನಿಮಗೆ ಒಂದು ಸರಳ ಸತ್ಯವನ್ನು ತಿಳಿಸಬಯಸುತ್ತೇನೆ.. ಎಲ್ಲವೂ ಪರಮಾತ್ಮನ ಸ್ವರೂಪ ಎಂದು ನಂಬುವ ಹಿಂದು ಸಂಸ್ಕೃತಿ ಎಲ್ಲವನ್ನೂ ಆರಾಧಿಸುವುದಿಲ್ಲ.. ಕಲ್ಲು ಕೂಡ ಒಂದು ಧಾತುವಷ್ಟೆ... ದೇವಾಲಯದ ಮೆಟ್ಟಿಲ ಕಲ್ಲಿಗೂ, ಒಳಗೆ ಆರಾಧಿಸಲ್ಪಡುವ ಕಲ್ಲಿಗೂ ಧಾತುವಿನಲ್ಲಿ ಯಾವ ವ್ಯತ್ಯಾಸವೂ ಇಲ್ಲ ಎಂದು ಪ್ರತಿ ಹಿಂದೂವೂ ಬಲ್ಲ.. ಖಂಡಿತವಾಗಿಯೂ ಒಳಗಿರುವ ಕಲ್ಲಿನಲ್ಲಿ ಹೇಗೆ ದೇವರಿರುವನೋ, ಮೆಟ್ಟಿಲ ಕಲ್ಲಿನಲ್ಲು ದೇವರಿದ್ದಾನೆ... ಆದರೆ ಆ ಕಲ್ಲಿಗೆ ದೈವಿಕ ನೆಲೆ ಒದಗುವುದು ನಾವು ಮಾಡುವ ಆವಾಹನೆ, ಪ್ರತಿಷ್ಠಾನಗಳೆಂಬ ಕ್ರಿಯೆಗಳಿಂದ.. ಆಗಮ ಶಾಸ್ತ್ರವೆಂಬ ಒಂದು ವಿದ್ಯಾ ಶಾಖೆಯೇ ಅದರ ಬಗೆಗೆ ಇದೆ...

ಹೀಗೆ ವಿಗ್ರಹರೂಪಿಯಾದ ಕಲ್ಲಿಗೆ ನಾವು ಆರಾಧನೆಯ ಉದ್ದೇಶಕ್ಕಾಗಿ ಬಂದು ನೆಲೆಸು ಎಂದು ದೈವವನ್ನು ಆಹ್ವಾನಿಸುತ್ತೇವೆ... ಅವನು ಬಂದು ನೆಲೆಸಬೇಕಿಲ್ಲ.. ಆ ಕಲ್ಲಿನಲ್ಲೆ ಸುಪ್ತವಾಗಿರುವ ದೈವಿ ಶಕ್ತಿ ಜಾಗೃತವಾಗಿದೆಯೆಂಬ ಭಾವನೆ ನಮ್ಮ ಮನಸ್ಸಿಗೆ ಬರಲಿ ಎಂದು. ಅದು ನಮ್ಮ ಭಾವನೆಗಾಗಿ.. ಮನಸ್ಸಿನ ತೃಪ್ತಿಗಾಗಿ..

ಪ್ರತಿ ಹಿಂದೂವಿಗೂ ಗೊತ್ತು, ದೈವಕ್ಕೆ ನಾವು ಆಹಾರ ಕೊಡಬೇಕಿಲ್ಲವೆಂದು.. ನಾವೇನೂ ಮೂರ್ಖರಲ್ಲ.. ಆದರೂ ನೈವೇದ್ಯವಿಡುತ್ತೆವೆ... ನಮ್ಮ ಮನೆಗೆ ಗಣೇಶನ ಚೌತಿಯಂದು ಗಣೇಶನನ್ನು ಆಹ್ವಾನಿಸುತ್ತೇವೆ.. ಕಡುಬು ಕೊಡುತ್ತೇವೆ.. ಸಂಜೆ ನೀರಿಗೆ ಹಾಕುತ್ತೇವೆ.. ನಮಗೆ ಗೊತ್ತು.. ಅದು ಮಣ್ಣಿನ ವಿಗ್ರಹವೆಂದು.. ನಮಗೆ ಗೊತ್ತು ಅದು ಕಡುಬು ತಿನ್ನುವುದಿಲ್ಲವೆಂದು.. ನಮಗೆ ಗೊತ್ತು ಆ ಮಣ್ಣಿನ ವಿಗ್ರಹ ನೀರಿಗೆ ಹಾಕಿದ ಮೇಲೆ ಕರಗಿ ಹೋಗುತ್ತದೆ ಎಂದು.. ಆದರೆ ನಮ್ಮ ಭಾವನೆಯಲ್ಲಿ, ಆ ದೈವ ಗಣೇಶನ ರೂಪದಲ್ಲಿ (ಮಣ್ಣಿನ ವಿಗ್ರಹವಾಗಿ) ನಮ್ಮ ಮನೆಗೆ ಬಂದ, ನಮ್ಮ ಆತಿಥ್ಯ ಸ್ವೀಕರಿಸಿದ.. ಮತ್ತು ನಾವು ಕಳಿಸಿದ ಮೇಲೆ ಹೋದ.(ವಿಸರ್ಜನೆ ಮಾಡಿದಾಗ ನೀರಿನಲ್ಲಿ ಕರಗಿಹೋದ).. ನಾವ್ಯಾರೂ ಹುಚ್ಚರಲ್ಲ.. ಪೆದ್ದರೂ ಅಲ್ಲ... ಆದರೆ ದೈವಕ್ಕೆ ಆತಿಥ್ಯ ನೀಡಿದ ಧನ್ಯರು... ಆ ತೃಪ್ತಿಗೆ ಸಾಟಿಯೇ ಇಲ್ಲ...

ನೀವು ನನ್ನ ಮಾತುಗಳನ್ನು ಸ್ವಂತಿಕೆ ಎಂದಿರಿ... ಆದರೆ ಪ್ರತಿ ಆಸ್ತಿಕ (ದೈವದಲ್ಲಿ ನಂಬಿಕೆ ಇರಿಸಿದ) ಹಿಂದೂವೂ ನಾನು ಹೇಳಿದ್ದನ್ನು ಒಪ್ಪುವ.. ಇದು ನನ್ನ ಸ್ವಂತಿಕೆ ಏನಲ್ಲ.. ಪ್ರತಿಯೊಬ್ಬ ಆಸ್ತಿಕನ ನಂಬಿಕೆ.. ನಾವು ಹಾಗೆ ಭಾವಿಸಿದ ವಸ್ತುಗಳನ್ನು ಮಾತ್ರ, ಅವುಗಳು ಯಾವ ಧಾತು (ಮರ, ಕಲ್ಲು, ಅಥವಾ ಲೋಹ ಇನ್ಯಾವುದೇ ಧಾತುವಾಗಿರಲಿ) ಎಂದು ನೋಡದೆ ಅದರಲ್ಲಿರುವ ದೈವೀ ಶಕ್ತಿಗೆ ಪೂಜಿಸುತ್ತೇವೆ.. 

ಪ್ರತಿ ರಸ್ತೆಬದಿಯ ಕಲ್ಲು ಪೂಜಾರ್ಹವಲ್ಲ.. ಹಾಗೆಂದು ಅದರಲ್ಲಿ ದೈವವಿಲ್ಲ ಎಂದು ಹಿಂದೂ ಹೇಳುವುದಿಲ್ಲ.. ಆದರೆ ಪೂಜಿಸಿಕೊಳ್ಳಬಲ್ಲ ಹಾಗೆ ಮನ್ನಸ್ಸಿಗೆ ಅನ್ನಿಸಬಲ್ಲ ಶಕ್ತಿ ಆ ಕಲ್ಲಿನಲ್ಲಿರುವ ದೈವಕ್ಕೆ ಪ್ರಾಪ್ತವಾಗಿಲ್ಲ ಅಷ್ಟೇ.. ಪೂಜಿಸಲ್ಪಡುತ್ತಿದ್ದು ಅನಂತರ ಭಗ್ನಗೊಂಡ ವಿಗ್ರಹಗಳನ್ನು ನಾವು ಪೂಜಿಸುವುದಿಲ್ಲ.. ಅದರ ಅರ್ಥ ಅದರಲ್ಲಿ ದೈವವಿಲ್ಲವೆಂದಲ್ಲ.. ಆದರೆ ಮನಸ್ಸಿಗೆ ಆ ಭಾವನೆ ತರಬಲ್ಲ ಶಕ್ತಿಯನ್ನು ಅದು ಕಳೆದು ಕೊಂಡಿದೆಯೆಂದು ಅರ್ಥ.. ದೇವಾಲಯದ ಹೊರಗಿನ ಭಿತ್ತಿಯಲ್ಲಿ ಕಾಮವನ್ನು ಸೂಸುವ ಶೃಂಗಾರ ಶಿಲ್ಪಗಳನ್ನು, ಮಿಥುನ ಶಿಲ್ಪಗಳನ್ನು ನೀವು ನೋಡಿರಬಹುದು.. ಅವು ವಿಗ್ರಹಗಳೇ.. ಅವನ್ನು ನಾವು ಪೂಜಿಸುವುದಿಲ್ಲ... ಆ ಭಾವನೆ ಮನಸ್ಸಿಗೆ ಬರುವುದಿಲ್ಲ ಎಂಬ ಕಾರಣಕ್ಕೆ....

ಚಿಕ್ಕ ವಯಸ್ಸಿನಲ್ಲಿ ಓದಿದ್ದ ಗುರು ನಾನಕದೇವರ ಕಥೆ ನೆನಪಿಗೆ ಬರುತ್ತದೆ.. ಗುರು ನಾನಕರು ಪಶ್ಚಿಮಕ್ಕೆ ಕಾಲು ಚಾಚಿ ಕುಳಿತಿದ್ದರಂತೆ.. ಆಗ ಅಲ್ಲಿಗೆ ಬಂದ ಮುಸಲ್ಮಾನನೊಬ್ಬ.. ಮಕ್ಕಾದ ಕಡೆ ಕಾಲು ಚಾಚಿ ಕೂರಬೇಡವೆಂದನಂತೆ.. ನಾನಕದೇವ್ ಹೇಳಿದರು, ದೇವರಿಲ್ಲದ ಕಡೆ ನನ್ನ ಕಾಲನ್ನು ನೀನೇ ಎತ್ತಿ ಇಡು ಎಂದು... ಒಬ್ಬ ಶಾಯರ್ (ಗಾಲಿಬ್ ಇರಬಹುದು) ಹೇಳಿದ ಶಾಯರಿ ನೀವು ಕೇಳಿರಬಹುದು.. ಮಸೀದಿಯಲ್ಲಿ ನನ್ನ ಕುಡಿಯಲು ಬಿಡು ಇಲ್ಲಾಂದ್ರೆ ದೇವನಿಲ್ಲದ ಜಾಗವಾದರೂ ತೋರಿಸು ಅಲ್ಲಿ ಹೋಗಿ ಕುಡಿಯುತ್ತೇನೆ. ಎಂದು.. ದೇವನೆಲ್ಲೆಲ್ಲೂ ಇರುವನು ಎಂಬ ಸತ್ಯವನ್ನ ಮತ್ತು ಎಲ್ಲಾ ಕಲ್ಲು ಪೂಜಾರ್ಹವಲ್ಲ ಎಂಬ ಸತ್ಯವನ್ನು ಪ್ರತಿ ಹಿಂದೂವೂ ಅರಿತಿದ್ದಾನೆ.

ಧರ್ಮದಲ್ಲಿ ನಿಯಮವಿರಬೇಕು ಎಂದಿದ್ದೀರಿ.. ಒಪ್ಪಿದೆ.. ನಮ್ಮ ಧರ್ಮದಲ್ಲಿಯೂ ನಿಯಮವಿದೆ.. ನಿನ್ನ ನಡವಳಿಕೆಗಳು, ಆಚರಣೆಗಳು ಬೇರೆಯವರ ಮೇಲೆ ಹೇರಕೂಡದು, ತೊಂದರೆ ತರಬಾರದು ಎಂದು.. ಅಷ್ಟೇ ನಿಯಮ.. ಬೇರಿಲ್ಲ.. ನಾನು ಭಗ್ನ ವಿಗ್ರಹಕ್ಕೆ ಪೂಜೆ ಮಾಡಬಹುದು.. ಆದರೆ ಆ ಭಗ್ನ ವಿಗ್ರಹ ನನ್ನಲ್ಲಿ ಭಕ್ತಿ ಭಾವನೆಯನ್ನು ಹೊಮ್ಮಿಸಲಾರದೇ ಹೋದಲ್ಲಿ, ನಾನೇಕೆ ಮಾಡಲಿ, ಭಕ್ತಿ ಭಾವ ಹೊಮ್ಮಿಸಿದರೆ ಯಾವ ಹಿಂದೂವು ನನ್ನನ್ನು ತಡೆಯುವುದಿಲ್ಲ.. ಆದರೆ ಅದು ವಿಕೃತಿ ಎಂದು ಖಂಡಿತ ಹೇಳಿ ಮನವರಿಕೆ ಮಾಡಲು ಸ್ವತಂತ್ರ, ಆದರೆ ನನ್ನನ್ನು ನಿರ್ಭಂಧಿಸಲು ಅಲ್ಲ.. ನಮ್ಮದು ಸೆಮೆಟಿಕ್ ಧರ್ಮಗಳಂತೆ ಹಾರ್ಡ್‌ಕೋಡೆಡ್ ಅಲ್ಲ..

ನೀವು ಶಿಕ್ಷೆಯ ಬಗ್ಗೆ ಕೇಳಿದ್ದೀರಿ.. ನಾನು ಸಾಲು ಸಾಲು ಮನುಸ್ಮೃತಿಯ ಶ್ಲೋಕಗಳನ್ನು quote ಮಾಡಬಲ್ಲೆ.. ಆದರೆ, ಆ ಕಾಲವನ್ನು ನಾವು ಬಿಟ್ಟು ಬಂದಾಗಿದೆ.. ನಾಗರಿಕತೆಯ ಒಂದು ಮಜಲು ಮನುಸ್ಮೃತಿಯೇ ಹೊರತು ಅಂತಿಮವಲ್ಲ... ಅತ್ಯಾಚಾರಿಯ ಶಿಕ್ಷೆಯ ಬಗ್ಗೆ ಕೇಳಿದ್ದೀರಿ.. ಕ್ರೌರ್ಯವಲ್ಲದ ಉಗ್ರ ಶಿಕ್ಷೆ ಇರಬೇಕು.. ಮರಣ ದಂಡನೆಯಾದರೂ ಸರಿಯೇ... ನನ್ನ ಸ್ವಂತ ಅಭಿಪ್ರಾಯ ಎಂದಿರಿ.. (ನನ್ನಂತೆಯೇ ನಡೆಯಬೇಕೆಂದು ಹೇಳಲು ನಾನೇನು ಸ್ವಘೋಷಿತ ಅಂತಿಮ ಪ್ರವಾದಿಯಲ್ಲ, ಹಾಗಾಗುವ ಆಸೆಯೂ ನನಗಿಲ್ಲ..) ಯಾವುದೇ ಅಪರಾಧಕ್ಕೆ.. ಕ್ರೌರ್ಯವಿಲ್ಲದ ಶಿಕ್ಷೆ ಇರಬೇಕು.. ಇದು ಒಬ್ಬ ನಾಗರಿಕನಾಗಿ, ಹಿಂದು ಧರ್ಮ ನನಗೆ ನೀಡಿದ ಸ್ವಾತಂತ್ರ್ಯವನ್ನು ಬಳಸಿ ಹೇಳುತ್ತಿದ್ದೇನೆ.

ಇನ್ನು ವಿಗ್ರಹಾರಾಧನೆ.. ನಿಮಗೆ ನಾವು ಕಲ್ಲು ಪೂಜಿಸುತ್ತೇವೆಂದು ಅನ್ನಿಸುತ್ತದೆ ಎಂದು ಬಲ್ಲೆ.. ನಿಮಗೆ ಕಾಣುವುದು ಧಾತು, ನಮಗೆ ಕಾಣುವುದು ದೈವ... ನೀವು ಹಾಗೆ ಅಂದು ಕೊಂಡಾಗ ನಿಮಗೆ ನಮ್ಮ ಅಜ್ಞಾನಕ್ಕೆ ಮರುಕ ಬರುತ್ತೆ.. ಹಾಗೇಯೆ ನಮಗೂ ಕೂಡ ನಮ್ಮನ್ನು ಅಜ್ಞಾನಿಗಳೆಂದುಕೊಂಡ ನಿಮ್ಮ ಬಗ್ಗೆ ಮರುಕ ಹುಟ್ಟುತ್ತೆ... ಹೇಗೆ ಗೊತ್ತೇ.. ನೀವು ಗೋಡೆಯ ಮುಂದೆ ಮಂಡಿಯೂರಿ ನಮಾಜ್ ಮಾಡುತ್ತೀರಲ್ಲ.. ಆಗ ಯಾರದರೂ ಒಬ್ಬ ಹಿಂದೂ ನೀವು ಗೋಡೆಗೆ ಪೂಜೆ ಮಾಡುತ್ತೀರಿ ಎಂದರೆ ನಿಮಗೆ ಹೇಗೆ ಅವನ ಅಜ್ಞಾನದ ಬಗ್ಗೆ ನಗು, ಕನಿಕರ ಬರುವುದೋ ಹಾಗೇ ಹಿಂದೂಗಳಿಗೂ ಅವರ ವಿಗ್ರಹರಾಧನೆಯನ್ನು ನೀವು ಕಲ್ಲನ್ನು ದೈವವೆಂದು ಕರೆಯುತ್ತಾರೆಂದು ಹೇಳಿದಾಗ ನಗು, ಕನಿಕರ ಬರುತ್ತದೆ.. ಆ ವಿಗ್ರಹ ದೈವವಲ್ಲ, ದೈವದ ಪ್ರತಿನಿಧಿ ಅಷ್ಟೇ... (Gate way ಅನ್ನಬಹುದು.)

ಇನ್ನು ಜಾಕಿರ್ ನಾಯಕ್‌ನ ವಿಷಯ.. ಅವನ ವಿಷಯ ಬಿಡಿ.. ಅವನು ಸಾವಿರ ಹೇಳಲಿ, ಅವನು quote ಮಾಡುವುದು ಕುರಾನ್ ಆದ್ದರಿಂದ, ಮತ್ತು ನೀವು ಮಹಮದೀಯರಾದ್ದರಿಂದ ಆ ಕುರಾನಿನ ಬಗ್ಗೆ ಗೊತ್ತಿರುವ ಸಾಧ್ಯತೆ ಇರುವುದರಿಂದ ಆ ಜಾಕಿರ್ ಹೇಳುವ ಕುರಾನ್‌ನ ಆ ಮಕ್ಕಾ ಜಗತ್ತಿನ ಕೇಂದ್ರವೆಂಬುದರ ಬಗ್ಗೆ ನಿಮಗೆ ಗೊತ್ತಿದ್ದರೆ ಮೆಕ್ಕಾ ಜಗತ್ತಿನ ಕೇಂದ್ರವಾಗುವುದು ಹೇಗೆ ಸಾಧ್ಯ ಎಂದು ತಿಳಿಸಿ.. ಇಲ್ಲದಿದ್ದರೆ, ನಾನು ಅದನ್ನು ಸಮರ್ಥಿಸುವುದಿಲ್ಲ ಎಂದು ಹೇಳಿದರೆ ಸಾಕು.. ಮುಂದೆ ನಿಮ್ಮನ್ನು ಆ ಪ್ರಶ್ನೆ ಕೇಳುವುದಿಲ್ಲ.. ಬೇರೆ ಯಾರಾದರೂ ತಿಳಿದ ಮಹಮದೀಯರು ಉತ್ತರಿಸಬಹುದು... ಕಾಯುತ್ತೇನೆ..

ಒಬ್ಬ ಹಿಂದುವಾಗಿ ನನ್ನ ಧರ್ಮದ ಪುರಾತನ ಪವಿತ್ರ ಗ್ರಂಥಗಳು ಸತ್ಯದ ಪರಿಧಿಯಾಚೆ ನನ್ನನ್ನು ಮನವರಿಕೆ ಮಾಡಲಾರದ ವಿಷಯವನ್ನು ಹೇಳಿದರೆ ಅದನ್ನು ನಿರಾಕರಿಸುವ ಸ್ವಾತಂತ್ರ್ಯ ನನಗೆ ಜನ್ಮತಃ ದಕ್ಕಿದೆ.. ನನ್ನ ಗೆಳೆಯನೊಬ್ಬ ಇದ್ದಾನೆ.. ಕಲೀಂಮುಲ್ಲಾ ಎಂದು ಹೆಸರು.. MBA ಪದವೀಧರ, ನಾವಿಬ್ಬರು twins ಎಂದು ಹೇಳಬಲ್ಲಷ್ಟು ಅನ್ಯೋನ್ಯ.. ಅವನು ಕೂಡ ನನ್ನ ಇನ್ನೊಬ್ಬ ಗೆಳೆಯನಿಗೆ ಅವನ ಮನೆಯಲ್ಲಿದ್ದ ತಲೆಕೆಳಗಾದ map ತೋರಿಸಿ "ಮೆಕ್ಕಾ ಜಗತ್ತಿನ ಕೇಂದ್ರ ಅಂದ.." ( ಆ ಜಾಗತಿಕ ನಕ್ಷೆಯಲ್ಲಿ ಮೆಕ್ಕಾ ಕೇಂದ್ರದಲ್ಲಿರುವಂತೆ ತೋರಿಸಲಾಗಿದೆ. ಅದನ್ನು ಅರೇಬಿಕ್ map ಅನ್ನುತ್ತಾರಂತೆ. ಎಷ್ಟೇ ಆದರೂ ಬಲದಿಂದ ಎಡಕ್ಕೆ ಬರೆಯುವ ಸಂಸ್ಕೃತಿ ಇರುವ ನಾಡು, ನಕ್ಷೆಯಲ್ಲಿ ಉತ್ತರ ಕೆಳಗೆ, ದಕ್ಷಿಣ ಮೇಲೆ ಇದ್ದರೆ ಆಶ್ಚರ್ಯ ಪಡಬೇಕಿಲ್ಲವಲ್ಲ... ) ಅದರಲ್ಲಿ ಮೆಕ್ಕಾ ಮಧ್ಯದಲ್ಲಿ ಇರುವಂತೆ ತೋರಿಸಲಾಗಿದೆ..

ನನಗೆ ವಿಷಯ ತಿಳಿದು ಕಲೀಂ ಬಳಿ ಅದರ ಬಗ್ಗೆ ವಿಚಾರಿಸಿದೆ. ಅದು ಹೇಗೆ ಸಾಧ್ಯ, ಭೂಮಿ ವೃತ್ತವಲ್ಲ, ಗೋಳ.. ಮೆಕ್ಕಾ ಸಮಭಾಜಕ ವೃತ್ತದ ಮೇಲೂ ಇಲ್ಲಾ.. ನಕ್ಷೆಯಲ್ಲಿ ಹೇಗೆ ಮಧ್ಯ ಬಂತು.. ಅವನೆಂದ ಪರವಾಗಿಲ್ಲ ಕುರಾನ್ ನಲ್ಲಿ ಇದೆ ಮತ್ತು ನಾನು ಅದನ್ನು ಒಪ್ಪುವೆ.. ಅಸತ್ಯವನ್ನು ಅಸತ್ಯವಾದರು ಧರ್ಮಗ್ರಂಥದಲ್ಲಿ ಇದೆ ಎಂದು ಒಪ್ಪುವೆ ಎಂಬುವವರನ್ನು ಯಾವ ತರ್ಕವೂ ಒಪ್ಪಿಸಲಾರದು.

ಅದಕ್ಕೆ ಹೇಳುವುದು ಹಾರ್ಡ್ ಕೋಡ್‌ ಧರ್ಮ ಎಂದು... ಅವನು ಭೂಮಿ ಗೋಳವೆಂಬ ಸತ್ಯವನ್ನು dispute ಮಾಡಲಿಲ್ಲ. ಅಂತೆಯೇ, ಕುರಾನ್ ಅನ್ನು ಒಪ್ಪುತ್ತೇನೆ ಎಂದು ಘೋಷಿಸಿದ.. ಒಬ್ಬ ಹಿಂದುವಿನ ಸಂಸ್ಕೃತಿಯಂತೆ ನಾನು ಅವನನ್ನು ಅವನಿಚ್ಚೆಗೆ ಬಿಟ್ಟೆ.. ಮುಂದುವರೆದಿದೆ.................. ಮಹಾ ಮಂಥನ-9 (ಕೃಷ್ಣ ಅರ್ಜುನನಿಗೆ ಗೀತೋಪದೇಶ ಮುಗಿಸುವವರೆಗೂ ಎರಡೂ ಸೈನ್ಯ ಸುಮ್ಮನೇ ನಿಂತಿದ್ದವೇಕೆ !?)
ನಿಮ್ಮ ಅನಿಸಿಕೆಗಳನ್ನ ಅಭಿಪ್ರಾಯಗಳನ್ನು ತಿಳಿಸಿ...........

ಹಿಂದಿನ ಕಂತುಗಳು:
ಆರನೇ ಕಂತು ==>ಮಹಾ ಮಂಥನ-6 (crusade ರ ನಿಷ್ಪಕ್ಷಪಾತತೆ ಮತ್ತು ಸೌಹಾರ್ದ ನೀತಿ) 
ಏಳನೇ ಕಂತು ==>ಮಹಾ ಮಂಥನ-7 (ತಪ್ಪಿಗೆ ಶಿಕ್ಷೆ ಮತ್ತದರ ಸ್ವರೂಪ)

No comments:

Post a Comment