Saturday, 16 July 2011

ಮಹಾ ಮಂಥನ-6 (crusade ರ ನಿಷ್ಪಕ್ಷಪಾತತೆ ಮತ್ತು ಸೌಹಾರ್ದ ನೀತಿ)

ಈ ಕಂತಿನಲ್ಲಿ crusade ರ ಮಾತುಗಳ ಓಘಕ್ಕೆ ನಾನಂತೂ ಮನಸೋತೆ... 

ಮೊದಲ ಕಂತು  ==> ಮಹಾ ಮಂಥನ-1 (bhgte ರವರ ರಂಗ ಪ್ರವೇಶ)
ಎರಡನೇ ಕಂತು  ==> ಮಹಾ ಮಂಥನ-2 (crusade ಮತ್ತು Manju ತರ್ಕಗಳು)
ಮೂರನೇ ಕಂತು ==> ಮಹಾ ಮಂಥನ-3 (ಭಾರತದ ಮೇಲೆ ಮಹಮದೀಯರ ವಿಜಯ, ಬುರ್ಖಾ, ಜೆಸಿಯಾ; crusade ವಿಚಾರಗಳು)
ನಾಲ್ಕನೇ ಕಂತು  ==> ಮಹಾ ಮಂಥನ-4 (bhgte ರವರಿಂದ ಮತ್ತಷ್ಟು ಕಟುಸತ್ಯಗಳ ಅನಾವರಣ)

ಐದನೇ ಕಂತು ==> ಮಹಾ ಮಂಥನ-5 (ಔರಂಗಜೇಬ್, ಝಕಾತ್ - crusade ಸ್ಪಷ್ಟೀಕರಣಗಳು)22-09-10 (11:19 PM)[-]  pkbys
ಇಸ್ಲಾಮಿನ ವಿಸ್ತರಣೆಯನ್ನು ಖಡ್ಗದ ತುದಿಯಿಂದ ಮಾಡಬಾರದೆಂದು ಕುರಾನ್ ಮೂಲಕ ಅಲ್ಲಾಹನು ಹೇಳಿದ್ದರೆ, ಪ್ರವಾದಿಗಳ ನಿರ್ದೇಶನವೂ ಹಾಗೇ ಇದ್ದರೆ ಇರಾನಿನಿಂದ ದೇಶಭ್ರಷ್ಟರಾದ ಪಾರ್ಸಿಗಳಿಗೆ ಆ ಗತಿ ತಂದವರು ಇಸ್ಲಾಮಿನ ವಿರೋಧಿಗಳು. ಪಾಪಿಗಳು, ಅವರು ಹಾಗೆ ಮಾಡಬಾರದಿತ್ತು ಎಂದು ಒಪ್ಪುವಿರಾ. ನೀವು ಹೇಳಿದ ಪರಮತ ಸಹಿಷ್ಣು, ಐಡಿಯಲ್ ಔರಂಗಜೇಬ್ ಧರ್ಮದ ಹೆಸರಿನಲ್ಲಿ ವಿಗ್ರಹಭಂಜನ ಮಾಡಿಸಿದ್ದರೆ, ಗುರು ತೇಜ್ ಬಹಾದುರ್, ಗುರು ಗೋವಿಂದ ಸಿಂಗ್‌ ಹೀಗೆ ಹಲವರ ರಕ್ತ ಚೆಲ್ಲಿದ್ದರೆ ಅದು ಅನಾಚಾರ, ಇಸ್ಲಾಂನ ತತ್ವ ನಿರ್ದೇಶಗಳಿಗೆ ವಿರುದ್ದವಾದುದು ಎಂದು ಒಪ್ಪುವೀರಾ.. ಟಿಪ್ಪು ಮಲಬಾರ್ಲಿ ಮಾಡಿದ್ದು ಇಸ್ಲಾಂನ ತತ್ವಗಳಿಗೆ ಬಗೆದ ದ್ರೋಹ ಎನ್ನಲ್ಲು ತಯಾರಿರುವಿರಾ. ಬಾಬರ್ ಅಗಲಿ ಸೋಮನಾಥನನ್ನು ಲೂಟಿ ಹೊಡೆದ ಘಸ್ನಿ ಘೋರಿಯರಾಗಲಿ ಮಾಡಿದ್ದು ಇಸ್ಲಾಂನ ದೃಷ್ಟಿಯಿಂದ ಮಹಾಪಾಪ ಎಂದು ಒಪ್ಪುವಿರಾ... ಇವರೆಲ್ಲ ಕಟ್ಟರ್ ಮುಸ್ಲಿಮರೆಂದು ಹೆಸರಾದವರು. ಇವರನ್ನ ಒಬ್ಬ ಮುಸಲ್ಮಾನನಾಗಿ ಇಸ್ಲಾಂನ ತತ್ವ ನಿರ್ದೇಶಗಳಿಗನುಸಾರವಾಗೇ ನಿಮ್ಮ ಅಭಿಪ್ರಾಯ ತಿಳಿಸಿ.. ನೀವು ಮುಲ್ಲಾ ಮೌಲ್ವಿಯಲ್ಲದಿರಬಹುದು... ಒಬ್ಬ ಇಸ್ಲಾಂನ ಪ್ರತಿನಿಧಿಯಾಗಿ ನಿಮ್ಮ ಅಭಿಪ್ರಾಯ ತಿಳಿಸಿ.      

[ನಡುವೆ Shri Ram ಮತ್ತು bhgte ರವರು ಟಿಪ್ಪು ಅನಾಚಾರಗಳ ಬಗ್ಗೆ ಬರೆದರು, ಅವರು ಬರೆದ ಬಹಳಷ್ಟು ವಿಷಯಗಳು ಇಂಗ್ಲೀಷ್ನಲ್ಲಿದ್ದು, ಉಲ್ಲೇಖಗಳಾದ್ದರಿಂದ ಇಲ್ಲಿ ಅವುಗಳ ಮತ್ತೆ ತರುತ್ತಿಲ್ಲ. ಅವುಗಳ ಬಗ್ಗೆ ಆಸಕ್ತರು ಮುಂದಿನ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ ಪಡೆಯಬಹುದು.
 1. TIPU SULTAN VILLAIN OR HERO?
 2. Mysorean invasion of Kerala - Wikipedia, the free encyclopedia
ಕೆಲವು ಭಾಗಗಳನ್ನಾದರೂ ಕನ್ನಡಕ್ಕೆ ತರಬೇಕೆಂಬ ಹಂಬಲವಿದೆ. ಮುಂದೆಂದಾದರೂ ನೋಡೋಣ.]

bhgte ಬರೆದಿರುವುದು ಪೂರ್ವಾಗ್ರಹ ಪೀಡಿತವೆಂದಿದ್ದೀರಿ.. ಸೌದಿಯ ಆ ಕಠಿಣ ಕಾನೂನುಗಳೇನು? ಹೆಣ್ಣುಮಕ್ಕಳು ಗಂಡ ಅಥವ ತಂದೆಯ written permission ಇಟ್ಟುಕೊಂಡು ಓಡಾಬೇಕು ಎನ್ನುವುದೇ.. ರಕ್ತ ಸಂಬಂಧಿಗಳಲ್ಲದೇ ಬೇರೆಯವರೊಡನೆ ಮಾತಾಡಬಾರದೆಂಬುದೇ.. .ಬುರ್ಕಾ ಒಗೇ ಮುಳುಗಿರಬೇಕೆನ್ನುವುದೇ? ಕಡ್ಡಾಯವಾಗಿ ನಮಾಝ್ ಮಾಡಲೇಬೇಕೆನ್ನುವುದೇ.. ಈ ಎಲ್ಲಾ ಕಾನೂನುಗಳ ಬದಲು ನೈತಿಕ ಶಿಕ್ಷಣ ಕೊಡಬಹುದಲ್ಲ... ಕಡ್ಡಾಯ ಮಾಡುವುದು ಬರಗೆಟ್ಟ ಸ್ಥಿತಿ ತರುತ್ತದೆ.. ಬರಗೆಟ್ಟ ಜನ ಏನು ಮಾಡಲೂ ಹೇಸುವುದಿಲ್ಲ ಎಂಬುದು ಮನಃಶಾಸ್ತ್ರದ ಸಿದ್ದಾಂತ.. ಹಾಗೆಯೇ ಒಂದು ಮಾತು ನಿಮ್ಮ ಅವಗಾಹನೆಗಾಗಿ ತಿಳಿಸುವೆ.. ಕುರಾನ್ ಅನ್ನು ಸಂವಿಧಾನವಾಗಿ ಅಳವಡಿಸಿಕೊಂಡ ಸೌದಿ ಮತ್ತು ಇತರ ಅರಬ್ ದೇಶಗಳು Porn Moviesಗೆ ದೊಡ್ಡ ಮಾರುಕಟ್ಟೆ.. ಪಾಶ್ಚತ್ಯರಿಗಿಂತಲೂ ಹೆಚ್ಚಿನ Porn ಆ ಮರುಭೂಮಿ ದೇಶಗಳಲ್ಲಿ ಖರ್ಚಾಗುತ್ತದೆ. ವೇಶ್ಯಾವಾಟಿಕೆಯ ಕೇಂದ್ರವೆಂದೇ ಹೆಸರಾದ ಸ್ವಿಸ್ಗಿಂತ ಹೆಚ್ಚಿನ ನಮೂನೆಯ ತಳಿಯ ಹೆಣ್ಣುಗಳು ಅರಬ್ನಲ್ಲಿ ದೊರೆಯುತ್ತದೆ ಎಂಬುದೂ ಸತ್ಯವೇ.. ಅದರಲ್ಲಿ ಪೂರ್ವಾಗ್ರಹವೇನಿಲ್ಲ..

23-09-10 (07:17 AM)Manju
ನನ್ನ ಕಿರಿಯ ಸಹೋದರ ಸೌದಿಯಲ್ಲೇ ಇದ್ದಾನೆ.. ಅಲ್ಲಿನ ಕಾನೂನು ಕಟ್ಟಳೆಗಳನ್ನು ವಿಶದವಾಗಿ ವಿವರಿಸಿದ್ದಾನೆ. ಅದು ಸ್ವಾತಂತ್ರ್ಯದ ಹರಣ ಅನ್ನಿಸಿಕೊಳ್ಳುತ್ತದೆ. ಮನುಷ್ಯ ಉಸಿರುಕಟ್ಟಿ ಬದುಕುವಂತಹ ಕಾನೂನದು. ಅಲ್ಲಿ ಸೂಡಾನಿ ಮುಸ್ಲಿಮರು ದರೋಡೆ, ದೋಚುವಿಕೆ ಮಾಡುತ್ತಿರುವುದನ್ನು ಕೂಡ ವಿವರಿಸಿದ್ದಾನೆ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಅಲ್ಲವೇ Crusade.. ಇನ್ನೂ ಒಂದು ಉದಾ ಕೊಡುತ್ತೇನೆ. ಈಗ್ಯೆ 2 ವರ್ಷದ ಹಿಂದೆ ನನ್ನ ಸಹೋದ್ಯೋಗಿ ಗೆಳೆಯ Mohammed Hayath ಸಕುಟುಂಬ ಸಮೇತನಾಗಿ ಹಜ್‍ಗೆ ಹೋಗಿ ಬಂದ.. ಮರಳಿ ಬಂದವನೇ ನೆಮ್ಮದಿಯ ಉಸಿರು ಬಿಟ್ಟಿದ್ದ. ಮೇರಾ ಭಾರತ್ ಮಹಾನ್ ಕಣೋ ಮಂಜು ಎಂದಿದ್ದ. ಅಲ್ಲಿ ‌ಅವರನ್ನು ನಡೆಸಿಕೊಂಡ ಪರಿ ಅದು. ಯಾಕೆ ಹೀಗೆ crusade..? ನಮ್ಮದು Global Religion ಎನ್ನುವಿರಿ. ಜಾಗತಿಕ ಮುಸ್ಲಿಮರೆಲ್ಲರೂ ಸೋದರರಂತೆ ಎನ್ನುವಿರಿ. ಆದರೂ ಯಾಕೆ ಹೀಗೆ?

23-09-10 (07:51 AM)[-]  crusade
ಇಸ್ಲಾಮಿನ ವಿಸ್ತರಣೆಯನ್ನು ಖಡ್ಗ ತುದಿಯಿಂದ.....ರಕ್ಕೆ,
"ನಿಮ್ಮೊಡನೆ ಯುದ್ಧ ಮಾಡುವವರೊಂದಿಗೆ ನೀವೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಅದರೆ ಅತಿಕ್ರಮಿಸಬೇಡಿರಿ. ಅಲ್ಲಾಹ್ ಅತಿಕ್ರಮಿಸುವವರನ್ನು ಮೆಚ್ಚುವುದಿಲ್ಲ"(ಕುರಾನ್ 2:190)

ಕುರಾನಿನ ಪ್ರಸ್ತುತ ವಚನದಲ್ಲಿ ಯುದ್ಧಕ್ಕೆ ಸಂಬಂಧಿದಂತೆ ನಿರಾಕರಿಸಲಾಗದಂತಹ ಅಮೂಲ್ಯ, ಉಪಯೋಗಿ ಮತ್ತು ಕಲ್ಯಾಣಕಾರಿ ಸಿದ್ಧಾಂತ ಉಲ್ಲೇಖಿಸಲ್ಪಟ್ಟಿದೆ. ಯುದ್ಧವು ಕೇವಲ ಅಲ್ಲಾಹನ ಮಾರ್ಗದಲ್ಲಿಯೇ ಆಗಬೇಕೆಂದು ಇಸ್ಲಾಮಿ ರಾಷ್ಟ್ರಕ್ಕೆ ತಾಕೀತು ಮಾಡಲಾಗಿದೆ. ಅರ್ಥಾತ್: ನಿಮ್ಮ ಭೌತಿಕ ಉದ್ದೇಶ ಮತ್ತು ಹಿತಾಸಕ್ತಿಯ ಪೂರ್ತೀಕರಣಕ್ಕಾಗಿ ಆಗಿರಬಾರದು. ನಿಮ್ಮ ಪ್ರಭುತ್ವ ಸ್ಥಾಪಿಸುವುದಕ್ಕೂ ಆಗಿರಬಾರದು. ಅಲ್ಲಾಹನಾ ಮಾರ್ಗವೆಂದರೆ ಸತ್ಯ-ನ್ಯಾಯದ ಮಾರ್ಗ, ತಮ್ಮ ನೈಜ ಪ್ರಭುವಿನ ಇಚ್ಚೆ ಮತ್ತು ಅವನು ಹೇಳಿದ ಅವಶ್ಯಕತೆಗಳಿಗಾಗಿರುವ ಮಾರ್ಗ. ನಿಮ್ಮೊಡನೆ ಯುದ್ಧಕ್ಕೆ ಮುಂದಾದವರೊಡನೆ ಅಥವಾ ನಿಮ್ಮ ಮೇಲೆ ಯುದ್ಧ ಹೇರಿದವರೊಡೆನೆ ಮಾತ್ರ ಯುದ್ಧ ಮಾಡುವ ಅನುಮತಿ ನಿಮಗೆ ನೀಡಲಾಗಿದೆ. ಕೆಲವೊಮ್ಮೆ ಯುದ್ಧ ಅನಿವಾರ್ಯವಾದಾಗಲೂ ಯುದ್ಧಕ್ಕೆ ಕೆಲವು ಮೇರೆಗಳನ್ನ್ನು ನಿಶ್ಚಯಿಸಲಾಗಿರುತ್ತದೆ. ಅವುಗಳನ್ನು ಅನುಸರಿಸುವುದು ಅನಿವಾರ್ಯವೆನ್ನಲಾಗಿದೆ. ಅವುಗಳನ್ನು ಉಲ್ಲಂಘಿಸುವವರ ಬಗ್ಗೆ, ಅಲ್ಲಾಹನು ಅವರನ್ನು ಮೆಚ್ಚುವುದಿಲ್ಲ ಮತ್ತು ಅಲ್ಲಾಹನು ಮೆಚ್ಚದಂತಹವರಿಗೆ ವೇದನಾಯುಕ್ತ ಶಿಕ್ಷೆ ಮತ್ತು ನರಕದ ಯಾತನೆ ನೀಡಲಾಗುವುದೆನ್ನಲಾಗಿದೆ. ಇದನ್ನು ಪವಿತ್ರ ಕುರಾನ್ ಅನೇಕ ಕಡೆ ಸೂಚಿಸಲಾಗಿದೆ. ಶತ್ರುಗಳ ಸ್ತ್ರೀಯರು, ಮಕ್ಕಳು, ವೄದ್ಧರು ಹಾಗೂ ಗಾಯಾಳುಗಳ ಮೇಲೆ ಕೈಯೆತ್ತಬಾರದು. ಪೂಜೆ, ಉಪಾಸನೆಯಲ್ಲಿ ನಿರತರಾಗಿರುವವರಿಗೆ ಯಾವುದೆ ರೀತಿಯ ಹಾನಿಯುಂಟಾಗಬಾರದು. ಬೆಳೆ ಮತ್ತು ಗಿಡಮರಗಳನ್ನು ನಾಶಪಡಿಸಬಾರದು ಹಾಗೂ ಜಾನುವಾರುಗಳನ್ನು ಕೊಲ್ಲಬಾರದು. ಶತ್ರುಗಳ ಮೃತ ದೇಹಗಳನ್ನು ಅಂಗಚ್ಛೇದನ ಮಾಡಬಾರದು ಇತ್ಯಾದಿ. ಯುದ್ಧದ ವೇಳೆ ಈ ಮೇರೆ ಮತ್ತು ಆದೇಶಗಳನ್ನು ಮೀರುವವರ ಬಗ್ಗೆ ಅಲ್ಲಾಹನು ನಿಮ್ಮ ಸರ್ವ ಪರಿಶ್ರಮವೂ ಸರ್ವ ಬಲಿದಾನವೂ ವ್ಯರ್ಥವಾಗುವುದು ಮಾತ್ರವಲ್ಲ, ನೀನು ಅಪರಾಧಿಯೆಂದು ಪರಿಗಣಿಸಲ್ಪಟ್ಟು ದೇವಕ್ರೋಧಕ್ಕೆ ಪಾತ್ರರಾಗಿ ಬಿಡುವಿರಿ ಎಂದು ಎಚ್ಚರಿಸುತ್ತಾನೆ, ಇಂಥಾ ಎಚ್ಚರಿಕೆಗಳು ಇರುವಾಗ, ನೀವು ಹೇಳಿದ ರೀತಿ ಇರಾನಿನಿಂದ ದೇಶಭ್ರಷ್ಟರಾದ ಪಾರ್ಸಿಗಳಿಗೆ ಆ ಗತಿ ತಂದವರು ಇಸ್ಲಾಮಿನ ವಿರೋಧಿಗಳು ಎನ್ನುವುದರಲ್ಲಿ ತಪ್ಪಿಲ್ಲ.

23-09-10 (11:00 AM)[-] pkbys
crusade ಅದ್ಬುತ, ನೀವು ಸಹನಶೀಲರಷ್ಟೇ ಅಲ್ಲ. ನಿಷ್ಪಕ್ಷಪಾತಿ, ನೀವು ಹೇಳುತ್ತಿರುವ ಇಸ್ಲಾಂನ ಬಗ್ಗೆ ನನಗೆ ಹೃದಯಪೂರ್ವಕ ಗೌರವವಿದೆ... ನನ್ನ ಮುಸ್ಲಿಂ ಸ್ನೇಹಿತ ಮುಯೀನ್ ಒಮ್ಮೆ ಹೇಳಿದ ಮಾತು ನೆನಪಾಗುತ್ತಿದೆ... "Isalam is the best Religion but We the Muslims are Worst people. ಇಸ್ಲಾಂನ ಮಾನ ಮರ್ಯಾದೆ ಹರಾಜ್ ಮಾಡ್ತಾ ಇದೀವಿ, ಕಾರಣ ಶಿಕ್ಷಣದ ಕೊರತೆ" ಎಂದಿದ್ದ.. ದುಃಖದ ವಿಷಯವೆಂದರೆ, ನೀವು ಹೇಳುತ್ತಿರುವ ಇಸ್ಲಾಂಗೂ, ನಾವು ದಿನನಿತ್ಯ ನೋಡುವ ಆಚರಣೆಯಲ್ಲಿರುವ ಇಸ್ಲಾಂಗೂ ವ್ಯತ್ಯಾಸವಿದೆ..

ಮಲ್ಲಿಕಾಫರನ ದಾಳಿಯಾಗಲಿ, ಘಶನಿ ಘೋರಿಯರು ಮಾಡಿದ ಯುದ್ದಗಳು ಲೂಟಿಯನ್ನು ಉದ್ಡೇಶವಾಗಿರಿಸಿತ್ತು. ಅವರು ಆಕ್ರಮಣ ಮಾಡಿದರೆ ಹೊರತು ಅವರ ಮೇಲಾರೂ ಆಕ್ರಮಣ ಮಾಡಿರಲಿಲ್ಲ.. ದೆಹಲಿಯ ಮೇಲೆ ದಾಳಿ ಮಾಡಿದ ನಾದಿರ್ ಶಾ ಮಾಡಿದ್ದು ಇಸ್ಲಾಂ ರಾಜ್ಯವೊಂದರ ಮೇಲೇ..(ದೆಹಲಿ ಆಗ ಇಸ್ಲಾಂ ರಾಜ್ಯವಾಗೇ ಇತ್ತು) ಅದು ಕೂಡ ಅತಿರೇಕ ಮತ್ತು ಲೂಟಿಯೇ ಆಗಿತ್ತು.. ಮಲಬಾರ್ ಮೇಲಿನ ಯುದ್ದ, ಟಿಪ್ಪುವಿನ ಭೌತಿಕ ಉದ್ದೇಶ ಮತ್ತು ಹಿತಾಸಕ್ತಿಯ ಪೂರ್ತೀಕರಣಕ್ಕಾಗಿ ಮತ್ತು ಪ್ರಭುತ್ವ ಸ್ಥಾಪಿಸುವುದೇ ಆಗಿತ್ತು.. ಇವರಾರು ನಿಮ್ಮ ಮುಸ್ಲಿಂರಲ್ಲ.. ಇವರೆಲ್ಲಾ ನನ್ನ ಮುಸ್ಲಿಂ ಗೆಳೆಯ ಹೇಳಿದ worst people ಆಗಿದ್ದರು. ಆದರೂ ಇಸ್ಲಾಂ ಬದಲಾವಣೆಗೆ ತೆರೆದುಕೊಳ್ಳಬೇಕೆನಿಸುತ್ತದೆಯಲ್ಲವೆ.. ಬುರ್ಖಾದ ಬಗ್ಗೆ ಮತ್ತು ಜಝಿಯಾದ ಬಗ್ಗೆ ಬರೆದಿದ್ದೇನೆ..  ಇವೆಲ್ಲಾ ಇಸ್ಲಾಂನ ಅತಿರೇಕಗಳೇ ಅಲ್ಲವೇ..

23-09-10 (08:19 PM)[-]  crusade
mr.Shri Ram..., ಕೆಲವರು, ಟಿಪ್ಪುಸುಲ್ತಾನನನ್ನು ಮತಾಂಧ ಮತ್ತು ದೇವಾಲಯ ಧ್ವಂಸಕನೆಂದು ಚಿತ್ರೀಕರಿಸಲು, ಮತ್ತು ಕೆಲವರು ಅವನು ಪರಧರ್ಮ ಸಹಿಷ್ಣುತೆ ಎಂದು ಚಿತ್ರಿಕರಿಸಲು, ಮತಾಂಧವೆನ್ನಲು ಕಮ್ಮಾರನ್ ನಂಬಿಯಾರ್ ಎಂಬ ಚಿರ್ಕಲ್ ರಾಜಮನೆತನದವನನ್ನು ಬಲತ್ಕಾರದಿಂದ ಮುಸ್ಲಿಮನಾಗಿ ಮಾಡಿ ಅಯ್ಯಾಜ್ ಖಾನ್ ಆಗಿ ಮಾಡಿ ಅವನಿಗೆ ಬಿದನೂರಿನ ರಾಜ್ಯಪಾಲನ್ನನಾಗಿ ಮಾಡಿದನು ಎಂದು ಗೋಪಾಲ್ ರಾವ್ರವರು ಬರೆದಿದ್ದಾರೆ...., ಮತ್ತು ವತಕನಕೂರಿನ ರಾಜ ರಾಜ ವರ್ಮನು ಟಿಪ್ಪು ಮಂದಿರಗಳನ್ನು ಮತ್ತು ವಿಗ್ರಹಗಳನ್ನು ಸುಟ್ಟುಹಾಕಿದನು..., ಎಲ್ ಬಿ ಬೌರಿಯು ಅವನು ಮಕ್ಕಳು ಮತ್ತು ಹೆಂಗಸರನ್ನು ಕ್ಷಮಿಸಲಿಲ್ಲವೆಂದು.., ಆದೇ ರೀತಿ ಅವನು ಪರಧರ್ಮಸಹಿಷ್ಣುತೆವೆಂದು ಚಿತ್ರಿಕರಿಸಲು ಟಿಪ್ಪುಸುಲ್ತಾನನು ಸಹೋದರ ಸಮುದಾಯಗಳ ಧಾರ್ಮಿಕ ವಿಶ್ವಾಸಗಳನ್ನೂ ಆಚಾರಗಳನ್ನೂ ಆರಾಧನಾ ಕ್ರಮಗಳನ್ನು ಸಂಪೂರ್ಣವಾಗಿ ಗೌರವಿಸುವ ಆಡಳಿತಗಾರರಾಗಿದ್ದನು, ಅವನು ಆನೇಕ ದೇವಾಲಯಗಳ ನಿರ್ಮಾಣಕ್ಕೆ ನೆರವು ನೀಡಿದ್ದಾನೆ.

ಮೈಸೂರಿನ ಪ್ರಾಚ್ಯವಸ್ತು ಇಲಾಖೆಯ ವರದಿಯನ್ವಯ ಅವರು ನಂಜನಗೂಡು ತಾಲ್ಲೂಕಿನ ಲಕ್ಷ್ಮೀಕಾಂತ ದೇವಾಯ ಮತ್ತು ಮೇಲುಕೋಟೆ ನಾರಾಯಣ ಸ್ವಾಮಿ ದೇವಾಲಯಗಳಿಗೆ ಆನೆಗಳನ್ನು ಚಿನ್ನ-ಬೆಳ್ಳಿಯ ಹರಿವಾಣಗಳನ್ನು ಜಮೀನು ಮತ್ತಿತರ ಸೊತ್ತುಗಳನ್ನು ನೀಡಿದ್ದನು ಎಂದು (ಮೈಸೂರ್ ಆರ್ಕಿಯಲಾಜಿಕಲ್ ರಿಪೋರ್ಟ್, 1917 ಪುಟ 60) ಈ ದೇವಾಲಗಳ ಆನೇಕ ಚಿನ್ನದ ಹರಿವಾಣ ಮತ್ತು ದೀಪಗಳಲ್ಲಿ "ಪಾದುಶಾ ಟಿಪ್ಪುಸುಲ್ತಾನರ ಕೊಡುಗೆ" ಎಂದು ಬರೆದಿರುವುದನ್ನು ಇಂದಿಗೂ ನೋಡಬಹುದು ಇದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಪುಷ್ಪಗಿರಿ ದೇವಾಲಯದ ಪರಿಪಾಲನೆಗಾಗಿ ತುಂಗಹಳ್ಳಿ ಮತ್ತು ಗೊಲ್ಲಹಳ್ಳಿ ಎಂಬ ಗ್ರಾಮಗಳನ್ನು ಟಿಪ್ಪುಸುಲ್ತಾನ್ ಉಂಬಳಿಯಾಗಿ ನೀಡಿದ್ದನು. ಶಾರದಾ ಪೀಠದ ಜಗದ್ಗುರುಗಳು, ಅಲಿ ಸಹೋದರರ ದಾವೆಯ ವಿಚಾರಣೆಯ ವೇಳೆ ನ್ಯಾಯಾಲಯದಲ್ಲಿ ನೀಡಿದ ಸಾಕ್ಷ್ಯದಲ್ಲಿ ಹೀಗಿದೆ, "ಶೄಂಗೇರಿ ಮಠಾಧೀಶರದ ಶಂಕರಾಚಾರ್ಯರನ್ನು ಬಹಳವಾಗಿ ಗೌರವಿಸುತ್ತಿದ್ದ ಟಿಪ್ಪುಸುಲ್ತಾನರು ನೂರಾರು ದೇವಾಲಯಗಳ ಜೀರ್ಣೋದ್ಧಾರ ಇತ್ಯಾದಿಗಳಿಗಾಗಿ ನೆರವು ನೀಡಿದ್ದಾನೆ, ಮಾತ್ರವಲ್ಲ ಅವರ ಶ್ರಮ ಫಲದಿಂದ ಹಲವು ಹೊಸ ದೇವಾಲಯಗಳೂ ನಿರ್ಮಿಸಲ್ಪಟ್ಟಿವೆ." (trail of ali brothers, indian express dt.25.03.1973)

ರಂಗನಾಥ ದೇವಾಲಯವು ಟಿಪ್ಪುವಿನ ಶ್ರೀರಂಗಪಟ್ಟಣದ ಕೋಟೆಯೊಳಗಿದೆ. ಅದು ಅವನ ಅರಮನೆಯಿಂದ ಕೇವಲ 100 ಗಜ ದೂರದಲ್ಲಿದೆ, ನರಸಿಂಹರ ಕ್ಷೇತ್ರ ಮತ್ತು ಗಂಗಾಧರೇಶ್ವರ ಕ್ಷೇತ್ರವು ಅವನ ಕೋಟೆಯ ಒಳಗಿದೆ. ಅವುಗಳ ಆಡಳಿತ ಮತ್ತು ಉತ್ಸವಗಳಿಗಾಗಿ ಟಿಪ್ಪು ಉದಾರ ಆರ್ಥಿಕ ನೆರವು ನೀಡಿದ್ದನು (ಇತಿಹಾಸ ಅಧ್ಯಯನಗಳು ಪುಟ 433-438) ಅವನ ಕುರಿತು ಮಹಾತ್ಮಾ ಗಾಂಧಿ ಹೀಗೆ ಬರೆದಿದ್ದಾರೆ "ವಿದೇಶಿ ಇತಿಹಾಸಗಾರರು ಟಿಪ್ಪುಸುಲ್ತಾನನು ಮತಾಂಧ, ಇಸ್ಲಾಮ್ ಸ್ವೀಕರಿಸುವಂತೆ ಹಿಂದೂ ಪ್ರಜೆಗಳನ್ನು ಬಲಾತ್ಕರಿಸಿದವನೆಂದು ಆದರೆ ಅವನು ಅಂತಹವರಾಗಿರಲಿಲ್ಲ. ಬದಲಾಗಿ ಹಿಂದು ಪ್ರಜೆಗಳೊಂದಿಗೆ ಅವರ ಸಂಬಂಧವು ಸಂಪೂರ್ಣ ಸೌಹಾರ್ದಮಯವಾಗಿತ್ತು ಎಂದು (ಯಂಗ್ ಇಂಡಿಯಾ.23.01.1930, ಪುಟ-31) ಮೈಸೂರು ಪ್ರಾಚ್ಯವಸ್ತು ವಿಭಾಗದಲ್ಲಿ ಟಿಪ್ಪುಸುಲ್ತಾನರು ಶೄಂಗೇರಿ ಮಠದ ಶಂಕರಾಚಾರ್ಯರಿಗೆ ಬರೆದ ಸುಮಾರು 30 ಪತ್ರಗಳಿವೆ.. ಹಿಂದು ದೇವಾಲಯಗಳಿಗೆ ಅವನು ಧಾರಾಳ ಜಮೀನುಗಳನ್ನು ದಾನಮಾಡಿದ್ದಾನೆ. ಟಿಪ್ಪುವಿನ ಅರಮನೆಯ ಮುಂಭಾಗದಲ್ಲಿರುವ ವೆಂಕಟರಮಣ, ಶ್ರೀನಿವಾಸ, ಶ್ರೀರಂಗನಾಥ ಇತ್ಯಾದಿ ಕ್ಷೇತ್ರಗಳು ಇವೆ,ಇದು ಅವನು ಮಹಾನುಭಾವನ ಸಹಿಷ್ಣುತೆ ಮತ್ತು ವಿಶಾಲ ಮನೋಭಾವದ ಅಮರ ಸ್ಮಾರಕಗಳಾಗಿವೆ, ಮುಸ್ಲಿಮರು ಹಲವು ಶತಮಾನಗಳ ಕಾಲ ರಾಜ್ಯಭಾರ ನಡೆಸಿದ್ದರು ಅವರು ಇಲ್ಲಿ ಅಲ್ಪಸಂಖ್ಯಾತರಗಿಯೇ ಉಳಿದಿದ್ದಾರೆ. ಇದರಿಂದ ಭಾರತದಲ್ಲಿ ಬಲಾತ್ಕಾರದ ಮತಾಂತರ ನಡೆದಿಲ್ಲ ಮತ್ತು ವಿಶ್ವಾಸ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಅನುಮತಿಸಲಾಗಿತ್ತೆಂದು ನಿಸ್ಸಂದೇಹವಾಗಿ ಗ್ರಹಿಸಬಹುದು. ಮುಸ್ಲಿಮ್ ಆಡಳಿತಗಾರರ ರಾಜಧಾನಿಯಾಗಿದ್ದ ಉತ್ತರ ಪ್ರದೇಶದಲ್ಲಿ ಈಗಲೂ 11% ಮತ್ತು ಮೈಸೂರಿನಲ್ಲಿ 5% ಮುಸ್ಲಿಮರಿದ್ದಾರೆ, ಭಾರತದ ಇತರೆಡೆಗಳಲ್ಲಿಯೂ ಮುಸ್ಲಿಮ್ ಆಡಳಿತಗಾರರ ಕಾಲ ದಲ್ಲಿ ಇಸ್ಲಾಮ್ ವ್ಯಾಪಿಸಿಲ್ಲವೆಂಬುದು ಗಮನಾರ್ಹವಾಗಿದೆ.

ಬಂಗಾಳದ ಮತಾಂತರದ ಕುರಿತು ದೊರೆತ ದಾಖಲೆಯು ಈ ವಾಸ್ತವಿಕತೆಯನ್ನು ಸ್ಪಷ್ಟ ಪಡಿಸುತ್ತದೆ. ಬ್ರಿಟಿಷರ ಆಡಳಿತ ಕಾಲದಲ್ಲಿ ನಡೆಕ ನಿರಂತರ ಮತಾಂತರಗಳಿಂದ ಒಂದು  ಬ್ರಿಟಿಷರ ಆಡಳಿತ ಕಾಲದಲ್ಲಿ ನಡೆ ನಿರಂತರ ಮತಾಂತರಗಳಿಂದ ಒಂದು ವಿಷಯವು ನಿಚ್ಚಳಗೊಂದಿತು. ರಾಜಕೀಯ ಅಧಿಕಾರವಿದ್ದರೂ ಇಲ್ಲದಿದ್ದರೂ ಬಂಗಾಳದಲ್ಲಿ ಇಸ್ಲಾಮ್ ನಿರಂತರ ವಿಕಾಸವಾಗುತ್ತಿದೆಯೆಂದು 1891ರ ಜನಗಣತಿ ಸೂಚಿಸುತ್ತದೆ. 1872ರ ಬಳಿಕ ಉತ್ತರ ಬಂಗಾಳದಲ್ಲಿ 10,000ಕ್ಕೆ 100ರಂತೆ, ಪೂರ್ವ ಬಂಗಾಳದಲ್ಲಿ 262ರಂತೆ, ಪಶ್ಚಿಮ ಬಂಗಾಳದಲ್ಲಿ 110ರಂತೆ ಮತ್ತು ಇಡೀ ಬಂಗಾಳ ಪ್ರಾಂತ್ಯದಲ್ಲಿ ಸರಾಸರಿ 159 ರಂತೆ ಹೆಚ್ಚಳವುಂಟಾಗೆದೆ. ಎಂದು (census of india 1891 vol: 3) ನಾನು ಇದೆಲ್ಲ ಬರೆಯಲು ಇವರು ಮಾಡಿದ ತಪ್ಪು ಕೆಲಸಕ್ಕೆ ವಕಾಲತ್ತು ವಹಿಸಲು ಅಲ್ಲ ಇಸ್ಲಾಮ್ ಎಂದಿಗೂ ಬಲ ಪ್ರಯೋಗದಿಂದ ವ್ಯಾಪಿಸಿಲ್ಲವೆಂದು ಹೇಳಲು ಬರೆದಿರುತ್ತೇನೆ.

24-09-10 (05:29 AM)[-]  pkbys
ನೀವು ಹೇಳಿದ ಮಾತು ಒಪ್ಪುವೆ crusade. ಖಂಡಿತವಾಗಿಯೂ ರಂಗನಾಥ ದೇವಾಲಯವು ಶ್ರೀರಂಗಟ್ಟಣದ
ಟಿಪ್ಪುವಿನ ಅರಮನೆಯಾಗಿದ್ದ ಲಾಲ್ ಮಹಲ್ ನಿಂದ 100 ಗಜ ದೂರದಲ್ಲಿದೆ. ಮತ್ತು ಹಾನಿಯಾಗಿಲ್ಲ. ನಮ್ಮ ತಂದೆ ಅವನು ರಂಗನಾಧನ ಪರಮ ಭಕ್ತನಾಗಿದ್ದನು, ರಂಗನಾಥ ಅವನೊಡನೆ ಮಾತನಾಡುತ್ತಿದ್ದನು ಎಂಬ ಅವರು ಯಾವಗಲೋ ಕೇಳಿದ್ದ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಿದ್ದರು. ನಮ್ಮ ಮನೆಯಲ್ಲಿ ಅವನು ಹುಲಿಯನ್ನು ಎದುರಿಸುತ್ತಿರುವ ಕ್ಯಾಲೆಂಡರ್ ಸಹ ಇತ್ತು.. ಅವನ ಕಥೆಗಳನ್ನ ಕೇಳಿ ಬಹಳ ಪ್ರಭಾವಿತನಾಗಿದ್ದೆ. ಆ ಚಿಕ್ಕ ವಯಸ್ಸಿನಲ್ಲೇ ಸಂಜಯ್ ಖಾನ್ ಧಾರವಾಹಿ ಸಹ ಬಂದಿತ್ತು... ಆ ವಯಸ್ಸಿನಲ್ಲಿ ಹಿಂದಿ ಬರದಿದ್ದರೂ ಟಿಪ್ಪುವಿನ ಅಭಿಮಾನಿಯಾಗ್ದಿದ್ದೆ. ಅವನು ಮುಸ್ಲಿಂ, ಅವನು ನಮ್ಮಂತಲ್ಲ ಎಂಬುದು ಗೊತ್ತಾದಾಗ, ಅವನೇಕೆ ಮುಸ್ಲಿಂ ಆದ ಎಂದು ಬೇಸರಗೊಂಡಿದ್ದೆ.. (ನನ್ನ ನೆಚ್ಚಿನ ಹೀರೋ ನನ್ನವನಾಗಿರಬೇಕೆಂಬ ಬಾಲ್ಯದ ಬಯಕೆ ಸಹಜ ತಾನೆ), ಆದರೆ ಆತ ಮುಸ್ಲಿಂ ಆದರೂ ಎಲ್ಲರನ್ನೂ ಗೌರವವಾಗಿ ಕಂಡವನು, ಹೀಗೆಲ್ಲಾ ನಂಜನಗೂಡು, ಮೇಲುಕೋಟೆ ಶೃಂಗೇರಿಗಳಿಗೆ ಅಪಾರ ದಾನ ದತ್ತಿ ಕೊಟ್ಟು ನಡೆದುಕೊಂಡವನು ಎಂದಾದಾಗ.. ಅವನೇನಾನದ್ರೂ ಆಗಿರಲಿ ಅವನು ನಮ್ಮವನೇ ಎನಿಸ್ಸಿದ್ದು ನಿಜ. ...........
ಆದರೆ...............................................................
ಸತ್ಯ ಬೇರೆಯೇ ಇದೆ ಎಂದು ಬಾಲ್ಯ ಮುಗಿಯುತ್ತಿದ್ದಂತೇ ನನಗೆ ತಿಳಿಯಿತು

crusade ನಾನು ನಿಮಗೆ ಬರೆಯಬೇಕಿದ್ದ, 10ಪಟ್ಟು ವಿವರಗಳನ್ನ, bhgte ಒದಗಿಸಿದ್ದಾರೆ..
ನನ್ನ ಬಾಲ್ಯದ ಹೀರೊ ಟಿಪ್ಪು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ನೀಡಿರುವ ಪಚ್ಚೆ ಲಿಂಗ ನಾನು ನೋಡಿದ್ದೇನೆ..
ಶೃಂಗೇರಿ ಮಠಕ್ಕೆ ಬರೆದ ಪತ್ರಗಳ ಬಗ್ಗೆಯೂ ನಾ ಬಲ್ಲೆ. ಮೇಲುಕೋಟೆಯ ಬಗ್ಗೆ ನೀವು ಹೇಳಿದ್ದು ನಿಜವೆಂದು ಗೊತ್ತು...
ಶಂಕರನಾರಾಯಣ ದೇವಾಲಯಕ್ಕೆ ಅವನೊಂದು ದೊಡ್ಡ ದಾಖಲೆ ಗಾತ್ರದ ಗಂಟೆ ದಾನ ನೀಡಿದ್ದಾನೆ.. ಅದೊಂದು ಕ್ರೈಸ್ತ ಪ್ರಾರ್ಥನಾ ಮಂದಿರಲ್ಲಿ ಬಳಸುವಂಥ ಗಂಟೆ...ಅದರ ಮೇಲೆ ರೋಮನ್ ಲಿಪಿ ಕೂಡ ಇದೆ... ಅದನ್ನು ಅವನು ಗೋವಾ ಲೂಟಿಮಾಡಿದಾಗ ಸಿಕ್ಕ ಶ್ರೀರಂಗಪಟ್ಟಣಕ್ಕೆ ಸಾಗಿಸಲು ಸೈನಿಕರು ಕಷ್ಟವೆಂದಾಗ ದಾರಿಯಲ್ಲಿ ಸಿಕ್ಕ ಅಲ್ಲಿನ ದೇವಾಲಯಕ್ಕೆ ಕೊಡುವಂತೆ ಹೇಳಿದ್ದ.. ಅಲ್ಯಾವ ಧರ್ಮ ಸಹಿಷ್ಣುತೆಯೂ ಇರಲ್ಲಿಲ್ಲ.

ನನ್ನ ಬಾಲ್ಯದ ನೆಚ್ಚಿನ ಗುರು ಶಿವರಾಮ ಕಾರಂತರು.. ತರಂಗದಲ್ಲಿನ ಅವರ ಬಾಲವನದಲ್ಲಿ ಕಾರಂತಜ್ಜ ಕಾಲಂ ನನ್ನ ನೆಚ್ಚಿನ ಕಾಲಂ ಆಗಿತ್ತು...ಅವರ ಸಂಶೋಧನೆಗಳು ಹೇಳುತ್ತವೆ ಅವನೆಂಥಾ ಬರ್ಬರ ನೆಂದು.. ನೀವು ರಾಜ ಮಹಾರಾಜರ ಬಗ್ಗೆ ಬರೆಯಲು ಇಚ್ಚಿಸುವುದಿಲ್ಲ ಧರ್ಮದ ಬಗ್ಗೆ ನಿಮ್ಮ ಆಸಕ್ತಿ ಎಂದು ಬಲ್ಲೆ... ಆದರೆ ಟಿಪ್ಪುವನ್ನು 'ಹಝರತ್ ಟಿಪ್ಪು ಸುಲ್ತಾನ್' ಎಂಬುದು ಇಸ್ಲಾಂ ನಂಬುವವರು ಹೇಳುತ್ತಾರೆ...ಅವನ ಉರುಸ್ ಸಹ ನಡೆಯುತ್ತದೆ..

ಉರುಸನ ಸರಿಯಾದ ಅರ್ಥ ನನಗೆ ತಿಳಿದಿರದಿದ್ದರೂ ಅದು ನಮ್ಮ ಉತ್ಸವಕ್ಕೆ ಸಂವಾದಿ ಪದವೆಂದು ಕೊಂಡಿದ್ದೇನೆ.. ಟಿಪ್ಪುವನ್ನ ಹಝರತ್ (ದೇವರಂಥ ಮನುಷ್ಯ, ದೈವಿಕ ಗುಣವುಳ ಮನುಷ್ಯ, ಸಾತ್ವಿಕ್, ಸಜ್ಜನ) ಎಂಬ ನಿಲುವನ್ನು ಇಸ್ಲಾಂ ಪ್ರತಿಪಾದಿಸಿದರೆ ಅದು ಬರ್ಬರ ಧರ್ಮವಾಗುತ್ತದೆ ಎಂಬುದಕ್ಕಾಗಿ ಟಿಪ್ಪುವಿನ ಬಗ್ಗೆ ಬರೆಯಬೇಕಾಯಿತು... ರಂಗನಾಥನ ಗುಡಿಯ ಬಗ್ಗೆ ಬರೆದಿದ್ದೀರಿ... ಅವನ ಲಾಲ್‌ ಮಹಲ್ನಿಂದ ನೂರು ಗಜ ಪಶ್ಚಿಮಕ್ಕೆ ರಂಗನಾಥನಿದ್ದಾನೆ.. ಅದು ನಾ ಬಲ್ಲೆ.. ಹಾಗೇ ಅದೇ ಲಾಲ್‌ ಮಹಲ್ನಿಂದ 100 ಗಜ ಪೂರ್ವಕ್ಕೆ ಹೋಗಿ, ನಿಮಗೆ ಎರಡು ಮಿನಾರ್ ಕಾಣುತ್ತದೆ... ಶ್ರೀರಂಗಪಟ್ಟಣ ಪ್ರವೇಶಿಸುವಾಗಲೇ ಈ ಎರಡು ಮಿನಾರ್ ಕಾಣುತ್ತದೆ.. ಅಲ್ಲಿನ ಬಸ್‌ ಸ್ಟಾಂಡ್ ನಿಂದ ಸುಮಾರು ಆರೇಳು ನಿಮಿಷಗಳ ನಡಿಗೆ.. ರೈಲು ನಿಲ್ದಾಣದಿಂದ ಸುಮಾರು 10ನಿಮಿಷ ನಡಿಗೆ. ಪ್ರಾಚ್ಯವಸ್ತು ಇಲಾಖೆಗೆ ಸೇರಿದ ಮಸೀದಿ ಅದು... ಅಲ್ಲಿಗೆ ಹೆಂಗಸರು, ಮಕ್ಕಳು, ಮುಸ್ಲೀಮೇತರರು ಎಲ್ಲರಿಗೂ ಉಚಿತ ಪ್ರವೇಶವಿದೆ.. ಅದೊಂದು ಪ್ರೇಕ್ಷಣಿಯ ಸ್ಚಳ.. ಅಲ್ಲಿನ ಡಂಜನ್, ಸಂಗಮ್, ಗೋಸಾಯಿ ಘಾಟ್ ಮೊದಲಾದ ಜಾಗಗಳಂತೆ ಪ್ರವಾಸಿಗರು ಸಂದರ್ಶಿಸಬಹುದಾದ ಜಾಗ.. ಸುಮ್ಮನೆ ಅಲ್ಲಿ ಹೋಗಿ ಒಂದು ಸುತ್ತು ಬನ್ನಿ.. ಅದು ಹಿಂದು  ದೇವಾಲಯ ಎಂದು ಒಳ ಪ್ರವೇಶಿಸುವ ಮೊದಲೇ ನೀವೇ ಹೇಳುತ್ತೀರಾ. ಒಳ ಹೋದರೆ, ಪ್ರದಕ್ಷಿಣಾ ಪಥ, ನವರಂಗ, ದೇವರ ವಿಗ್ರಹವನ್ನು ತೊಳೆಯುವ ಕೊಳ ಎಲ್ಲವೂ ಇವೆ.. ಆದರೆ ಮುಸಲ್ಮಾನರು ನಮಾಝ್ ಮಾಡಲು ಬೇಕಾದ ವಿಶಾಲ ಜಾಗವಿಲ್ಲ... ಅಲ್ಲಿನ ಒಳಾಂಗಣ ಕಟ್ಟೆಯಲ್ಲಿ ಮಹಮದೀಯ ಮಕ್ಕಳು ಕುರಾನ್ ಓದುತ್ತಿರುತ್ತಾರೆ.. ಆಟ ಆಡುತ್ತಿರುತ್ತಾರೆ.. ಅವರ ಅಮ್ಮಂದಿರು ‌ಅವರನ್ನು ಹುಡುಕಿ ಆಟ ಸಾಕು ಊಟ ಮಾಡು ಬಾ ಎಂದು ಕರೆಯಲು ಬರುತ್ತಿರುತ್ತಾರೆ.. ಆದರೆ ದೇವಾಲಯದ ಗೋಪುರದ ಬದಲು ಈ ಮಿನಾರ್ ಏಕೆ ಬಂತು ಎಂದು ಅರ್ಥವಾಗುವುದಿಲ್ಲ ಎಂದರೆ ಅವರಿಗೆ ಸತ್ಯ ಒಪ್ಪಲ್ಲು ಮನಸ್ಸಿಲ್ಲ ಎಂದೇ ಅರ್ಥ....... ಆ ದೇವಾಲಯದ ಕಂಭಗಳ ಉಬ್ಬು ಶಿಲ್ಪಗಳು ಕಾಣದಿರಲೆಂದು ಅವುಗಳನ್ನು ಕಿತ್ತು ತೆಗೆಯಲಾಗಿದೆ.. stone cutting machine (ಈಚಿನ ದಿನಗಳಲ್ಲಿ ಹಾಗೆ ಮಾಡಿರಬಹುದು ಮುಂಚೆ ಆ ಯಂತ್ರ ಇರಲಿಲ್ಲ ಎಂದು ನಾನು ಬಲ್ಲೆ. ) ಕೂಡ ಬಳಸಿದ್ದಾರೆ, ಎಂದು ಹೇಳಬಹುದು.. ಆದರೆ ಆ ಎಲ್ಲ ಪ್ರಯತ್ನಗಳ ನಂತರವೂ ಅಲ್ಲಿದ್ದ ಉಬ್ಬುಶಿಲ್ಪಗಳ ಪಳೆಯುಳಿಕೆಗಳು ಅಲ್ಲಿನ ದೇವಾಲಯದ ಮೇಲಾದ ಅತಿಕ್ರಮಣವನ್ನು ಸಾರಿ ಹೇಳುತ್ತವೆ.. ಅದು ಕೂಡ ಕೋಟೆಯೊಳಗೇ ಇದೆ... ಹೈದರ್ ಕಟ್ಟಿದ ಎಂದು ಕೆಲವು ಕಥೆಗಳು ಹೇಳಿದರೆ, ತಂದೆ ಹೈದರನ ಹೆಸರಿನಲ್ಲಿ ಟಿಪ್ಪು ಕಟ್ಟಿದ ಎಂದು ಇನ್ನು ಕೆಲವು ಕಥೆಗಳು ಹೇಳುತ್ತದೆ. ಯಾರೇ ಕಟ್ಟಿಸಿದರೂ ಅದು ದೇವಾಲಯವನ್ನು ಕೆಡವಿ ಕಟ್ಟಿದ್ದಲ್ಲ.. ದೇವಾಲಯದ ಗೋಪುರತೆಗೆದು ಮಿನಾರ್ ಹಾಕಿರುವುದಷ್ಟೇ.. ಸಾಮೂಹಿಕ ನಮಾಜ್ ಮಾಡಲಾಗಾ ಮಸೀದಿ ಅಲ್ಲೇಕೆ ಕಟ್ಟಿದರು.. ಕೇವಲ ಹಿಂದೂಗಳನ್ನು ಅಪಮಾನಿಸಲು...      

ಮಗಧದಲ್ಲಿ ದುಷ್ಟ ನವನಂದರ ಅಮಾತ್ಯನಾಗಿದ್ದ ರಾಕ್ಷಸನ ಹಾಗೆ ಮೈಸೂರು ರಾಜ್ಯಕ್ಕೆ ಪೂರ್ಣಯ್ಯ ಇದ್ದರು.. ‌ಅವರನ್ನು ತೆಗೆದರೆ ರಾಜ್ಯದ ಆಡಳಿತ ಯಂತ್ರ ಪೂರ್ಣಕುಸಿಯುವುದೆಂಬ ಭಯಕ್ಕೆ ಟಿಪ್ಪು ಅವರನ್ನ ಉಳಿಸಿದ್ದ.. ಒಡೆಯರ್‌ ರಾಜ ಪರಿವಾರವನ್ನ ಗೃಹಬಂಧನದಲ್ಲಿರಿಸಿ ತನ್ನನ್ನೇ ತಾನೆ ಸುಲ್ತಾನ್ ಎಂದು ಘೋಷಿಸಿಕೊಂಡ.. ಅವರಪ್ಪ ಹೈದರ್ ಕೂಡ ಸುಲ್ತಾನ್ ಎಂದು ಹೇಳಿಕೊಳ್ಳಲಿಲ್ಲ.. ಒಡೆಯರ್ ಹೆಸರಿನಲ್ಲಿ ತಾನು ರಾಜ್ಯ ನಡೆಸುತ್ತಿದ್ದ.. ಆದರೆ ಟಿಪ್ಪು ಅಪ್ಪನನ್ನ ಮೀರಿಸಿದ ರಾಜ ದ್ರೋಹಿ, ಮತ್ತು ತನ್ಮೂಲಕ ರಾಜ್ಯದ್ರೋಹಿ... ಅವನು ಹಿಂದು ದೇವಾಲಯಗಳಿಗೆ ನೀಡಿದ ನೆರವು, ದಾನ ದತ್ತಿಗಳು 1790ರ ನಂತರವಾಗಿದ್ದವು.. ಏಕೆಂದರೆ ಅವೆಲ್ಲ ಅವನ ಸಡಿಲಾಗುತ್ತಿರುವ ರಾಜ್ಯದ ಮೇಲಿನ ಹಿಡಿತವನ್ನ ಬಲಪಡಿಸಿಕೊಳ್ಳಲ್ಲು ಹಿಂದುಗಳನ್ನ ತನ್ನ ಪರವಾಗಿಸಿಕೊಳ್ಳಲು ಮಾಡಿದ್ದಾಗಿತ್ತು.. ಏಕೆಂದರೆ ಆ ಹೊತ್ತಿಗೆ ಅವನ ಯೋಜನೆಗಳೆಲ್ಲಾ ತಲೆಕೆಳಕಾಗಿತ್ತು.. ಫ್ರೆಂಚರು ತಮ್ಮ ಆತಂರಿಕ ಸಮಸ್ಯೆಗಳಿಂದ ಟಿಪ್ಪುವಿನ ಸಹಾಯಕ್ಕೆ ಬರಲಿಲ್ಲ.. ಮುಸಲ್ಮಾನ ರಾಜರು ಅವನ ವಿರುದ್ದ ತಿರುಗಿ ಬಿದ್ದರು.. ಅವನಿಗೆ ಹಿಂದುಗಳು ಬೇಕಾದರು.. ಆಗ ಮಾಡಿದ ಕೆಲವು ರಾಜತಾಂತ್ರಿಕ ನಿರ್ಣಯಗಳಲ್ಲಿ ಈ ದಾನ ದತ್ತಿಗಳು ಕೂಡ ಸೇರಿವೆ.. ಆದರೂ ಅವನು ಉಳಿಯಲ್ಲಿಲ್ಲ.. ನೀವು ನಂಬುವ ಅಲ್ಲಾಹ್ (ನಾನು ನೋಡುವ worst people ಎಂದು ನನ್ನ ಮುಸ್ಲಿಂ ಗೆಳೆಯನಿಂದಲೇ ಕರೆಸಿಕೊಂಡ ಜನರ ದೈವ ಅಲ್ಲಾಹನಲ್ಲ.. ನೀವು ಬರೆದ ನೀವು ನಂಬುವ ಅಲ್ಲಾಹ ) ಆ ಟಿಪ್ಪುವಿಗೆ ಸರಿಯಾದ ಗತಿ ತೋರಿಸಿದ.... ನೀವು ನಂಬಿದ ಅಲ್ಲಾಹ್ ದೈವವೇ ಸರಿ.. ಪಾಪದ ಕೊಡ ತುಂಬುವವರೆಗೂ ಕಾದು ಅವನ ತಲೆ ತೆಗೆದ.. ಅವನು ಹಜರತ್ ಎಂದೂ ಆಗಲಾರ ಅಲ್ಲವೇ... ನನ್ನ ಬಾಲ್ಯದ ಹೀರೊ ಒಬ್ಬ ನೀಚ ಎಂದು ತಿಳಿದಾಗ ಬೇಸರವಾಗಿದ್ದು ನಿಜ.....ಅವನ ಬಗ್ಗೆ ಇನ್ನೂ ಬರೆಯಬಹುದು.. ಆದರೆ ನನಗೇ ಅವನ ಬಗ್ಗೆ ಬರೆದು ಸಾಕಾಗಿದೆ... ಅವನು ಕೊಟ್ಟ ದಾನ ದತ್ತಿಗಳೂ ನಿಜ. ಆದರೆ ಅವು ಅತಿರಂಜಿತವಾಗಿ ಮೂಡಿಬಂದು ಅದರ ಹಿಂದಿನ ಕಾರಣಗಳು ಮರೆಯಾಗಿ ಅವನು ಒಬ್ಬ ಹುಲಿ ಎಂಬ ಕಾಗಕ್ಕ ಗುಬ್ಬಕ್ಕ ಕಥೆಯನ್ನು ನಮಗೆ ಹೇಳಲಾಗಿದೆ ಎಂಬುದು ನಿಜ..
  
24-09-10 (10:34 AM)[-]  crusade
ಕಳೆದ 14 ಶತಮಾನಗಳ ಇತಿಹಾಸವನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುವವರಿಗೆ, ಇಸ್ಲಾಮಿ ಸರ್ಕಾರಗಳು, ಮತಾಂತರಕ್ಕಾಗಿ ಯಾರನ್ನೂ ಬಲಾತ್ಕರಿಸಿಲ್ಲ, ರಾಷ್ಟ್ರದ ಎಲ್ಲ ಪ್ರಜೆಗಳಿಗೂ ಸಂಪೂರ್ಣ ವಿಶ್ವಾಸ ಸ್ವಾತಂತ್ರ್ಯವಿದ್ದಿತೆಂದು ಸ್ಪಷ್ಟವಾಗಿ ಮನವರಿಕೆಯಾದೀತು. ಕೆಲವು ದುಷ್ಟ ಮುಸ್ಲಿಂ ಆಡಳಿತಗಾರರ ಆಶ್ರಯದಲ್ಲಿ ಮುಸ್ಲಿಮರಂತೆಯೇ ಮುಸ್ಲೀಮೇತರ ಪ್ರಜೆಗಳೂ ಬಹಳ ಕಷ್ಟಗಳನ್ನು ಅನುಭವಿಸಿದ್ದರೆಂಬ ವಾಸ್ತವಿಕತೆಯನ್ನು ಇಲ್ಲಿ ನಿರ್ಲಕ್ಷಿಸುವಂತಿಲ್ಲ. ಅದರೆ ಅವುಗಳಿಗೆ ಧಾರ್ಮಿಕ ಹಿನ್ನಲೆಗಳಿರಲಿಲ್ಲ. ಬದಲಾಗಿ ಅವೆಲ್ಲವೂ ಎಲ್ಲ ಕಾಲಗಳ ಮರ್ದಕ ರಾಜಂದಿರ ಸಾಮಾನ್ಯ ಧೋರಣೆಯಾಗಿತ್ತು. ಸಿಂಧನ್ನು ಸ್ವಾಧೀನ ಪಡಿಸಿದ ಮುಹಮ್ಮದ್ ಬಿನ್‌ ಕಾಸಿಂರ ಕುರಿತು ಈಶ್ವರಿ ಪ್ರಸಾದ್‌ ಹೀಗಿಂದಿದ್ದಾರೆ. "ಅವರು ಬ್ರಾಹ್ಮಣರೊಂದಿಗೆ ಅವರ ಘನತೆಗೆ ತಕ್ಕಂತೆ ಗೌರವದಿಂದ ವರ್ತಿಸುತ್ತಿದ್ದರು... ಧಾರ್ಮಿಕ ಸ್ವಾತಂತ್ರ್ಯವನ್ನು ಅನುಮತಿಸಲಾಗಿತ್ತು. ಆರಾಧನೆಗೆ ಸಂಬಂಧಿಸಿ ಬ್ರಾಹ್ಮಣರ ಅಭೀಷ್ಟಗಳಿಗೆ ಮನ್ನಣೆ ನೀಡಲಾಗಿತ್ತು. ಅವರು ಅಧೀನಪಡಿಸಿದ ಜನರಿಗೆ ಆರಾಧನಾ ಸ್ವಾತಂತ್ರ್ಯವನ್ನು ನೀಡಿ ಅವರೊಂದಿಗೆ ಸಹಿಷ್ಣುತೆಯಿಂದ ವರ್ತಿಸಿದ್ದರು."

ಮಹಮ್ಮದ್‌ ಗಜನಿ ಹಲವು ಕ್ಷೇತ್ರಗಳನ್ನು ಕೊಳ್ಳೆ ಹೊಡೆದ ವಾಸ್ತವಿಕತೆಯನ್ನು ಇಲ್ಲಿ ನಿರಾಕರಿಸುವಂತಿಲ್ಲ. ಆತನ ಈ ಕೃತ್ಯಗಳಿಗೆ ಧನಮೋಹ ಪ್ರೇರಕವಾಗಿತ್ತೇ ವಿನಃ ಧರ್ಮ ಸರ್ವಥಾ ಅಲ್ಲ. ಅವನು ಕೇವಲ ಆರ್ಥಿಕ ಉದ್ದೇಶದಿಂದ ಧಾರ್ಮಿಕ ಆಕ್ರಮಿಸಿ ದೋಚಿದ್ದನು. ಖ್ಯಾತ ಇತಿಹಾಸಗಾರ ಪಿ.ಥಾಮಸ್ ಹೀಗೆ ಬರೆದಿದ್ದಾರೆ, ಭಾರತದ ಎಲ್ಲ ರಾಜ್ಯಗಳಲ್ಲಿಯೂ ಆಯಾ ಪ್ರದೇಶಗಳ ಸೊತ್ತು ಸಂಪತ್ತುಗಳನ್ನು ಅಲ್ಲಿನ ದೇವಾಲಯಗಳಲ್ಲಿ ಶೇಖರಿಸಿಡಲಾಗುತ್ತಿತ್ತು ಎಂಬ ಒಂದೇ ಅಂಶದಿಂದ, ರಾಜಂದಿರ ಖಜಾನೆಗಳನ್ನು ಈ ದೇವಾಲಯಗಳ ಸಂಪತ್ತಿಗೆ ಹೋಲೆಸಿದರೆ ಅವು ನಗಣ್ಯವಾಗಿದ್ದವು. ಆ ಕಾರಣದಿಂದಲೇ ಅರಮನೆಗಳ ಬದಲಾಗಿ ದೇವಾಲಯಗಳೇ ಗಜನಿ ಆಕ್ರಮಣದ ಪ್ರಧಾನ ಗುರಿಯಾಗಿತ್ತು. ಘಜ್ನಿಯು ಧರ್ಮಭಕ್ತ ಅಥವ ಧರ್ಮ ಪ್ರಚಾರಕನಾಗಿರಲಿಲ್ಲ. ಸ್ವೇಚ್ಛಾಧಿಪತಿ ಮತ್ತು ಮರ್ದಕ ಆಡಳಿತಗರನೂ ತೀವ್ರ ಧನಮೋಹಿಯೂ ಆಗಿದ್ದ. ವೈಯಕ್ತಿಕ ಜೀವನದಲ್ಲಿ ಆತ ಇಸ್ಲಾಮಿನ ಆರಾಧನಾಕರ್ಮಗಳನ್ನಾಗಲಿ ಆಚಾರ ರೀತಿಗಳನ್ನಾಗಲಿ ಪಾಲಿಸುತ್ತಿರಲಿಲ್ಲ. ಹೀಗಿರುವಾಗ ಆಡಳಿತ ವ್ಯವಹಾರಗಳ ಸ್ಥಿತಿಯನ್ನು ಹೇಳಬೇಕಾಗಿಲ್ಲ. ಘಜ್ನಿಯ ಸೈನಿಕರಲ್ಲಿ ಅನೇಕ ಹಿಂದುಗಳಿದ್ದರು. ಕೆಲವು ಉನ್ನತ ಹುದ್ದೆಗಳಲ್ಲಿಯೂ ಅವರು ನೇಮಕಗೊಂಡಿದ್ದರು. ಅವನ ಸೇನೆಯಲ್ಲಿ ಹಿಂದು ತುಕಡಿಯಿತ್ತು, ಅವನ ಲಾಹೋರಿನ ರಾಜ್ಯಪಾಲನೂ ಒರ್ವ ಹಿಂದುವಾಗಿದ್ದ (muslim rule in india - ishwari prasad)

ಮಹಮ್ಮದ್‌ ಘಜ್ನಿಯಂತೆಯೇ ಹಲವು ಹಿಂದು ರಾಜರು ಧನಮೋಹ ಮತ್ತು ರಾಜಕೀಯ ಹಿತಾಸಕ್ತಿಗಳಿಗಾಗಿ ದೇವಾಲಯಗಳನ್ನು ದೋಚಿ ನಾಶ ಪಡಿಸಿದ್ದಾರೆ. ಮರಾಠರು ಮತ್ತು ರಜಪೂತರು ಅನ್ಯರಾಜ್ಯಗಳ ಅನೇಕ ದೇವಾಲಯಗಳನ್ನು ದೋಚಿದ್ದರು. 1791ರಲ್ಲಿ ರಘುನಾಥರಾವ್ ಪಟವರ್ಧನರ ನಾಯಕತ್ವದಲ್ಲಿ ಮರಾಠಾ ಸೇನೆಯು ಪ್ರಖ್ಯಾತ ಶೃಂಗೇರಿ ಮಠವನ್ನು ದೋಚಿ ಅನೇಕ ಬ್ರಾಹ್ಮಣರನ್ನು ಕೊಂ಼ದಿತ್ತು. ಹೇರಳ ಸಂಪತ್ತನ್ನು ಅಪಹರಿಸಿತ್ತು. ಮಠಾಧಿಪತಿಗಳು ಪ್ರಾಣರಕ್ಷಣೆಗಾಗಿ ಪಲಾಯನ ಮಾಡಬೇಕಾಯಿತು. ಅಂದು 
ಶೃಂಗೇರಿ ಪೀಠಾಧಿಪತಿಗಳ ವಿನಂತಿಯನ್ನು ಮನ್ನಿಸಿ ಸಂರಕ್ಷಣೆಗಾಗಿ ಟಿಪ್ಪು ಸುಲ್ತಾನರು ಸೇನೆಯನ್ನು ಕಳುಹಿಸಿ ಅಕ್ರಮಿಗಳನ್ನು ಹೊಡೆದೋಡಿಸಿದ್ದರು. 12 ಶತಮಾನದಲ್ಲಿ ಕಾಶ್ಮೀರವನ್ನು ಆಳಿದ ಹರ್ಷನ ಉದಾಹರಣೆ ನಮ್ಮ ಮುಂದಿದೆ. ಆತನ ಮಟ್ಟಿಗೆ ಪೂಜಾಸ್ಥಳದ ಧ್ವಂಸವು ಯೋಜಿತ ಕೄತ್ಯವಾಗಿತ್ತು. ಅದಕ್ಕಾಗಿ ಆಡಳಿತಾತ್ಮಕ ವ್ಯವಸ್ಥೆಯನ್ನು ಮಾಡಲಾಗಿತ್ತು. ಹರ್ಷನು ದೇವೋತ್ಪತನ ನಾಯಕನೆಂಬ (ದೇವಂದಿರನ್ನು ನಾಶಪಡಿಸುವ ಅಧಿಕಾರಿ) ಒರ್ವ ಅಧಿಕಾರಿಯನ್ನೇ ಅದಕ್ಕಾಗಿ ನೇಮಿಸಿದ್ದನೆಂದು ಕಲ್ಹಣನು ತನ್ನ ರಾಜತರಂಗಿಣಿಯಲ್ಲಿ ಸ್ಪಷ್ಟಪಡಿಸಿದ್ದಾನೆ, ಪೂಜಾಲಯಗಳನ್ನು ದೋಚುವುದೇ ಆತನ ಪ್ರಧಾನ ಕೆಲಸವಾಗಿತ್ತು. ಈ ಕೃತ್ಯಕ್ಕಾಗಿ ಹರ್ಷನನ್ನು ಮತಾಂಧನೆಂದು ಹೆಸರಿಸುವಂತಿಲ್ಲ. ಆತನು ಸಂಪತ್ತಿಗಾಗಿ ಪೂಜಾಲಯಗಳನ್ನು ದೋಚಿ ಆ ಸಂಪತ್ತನ್ನು ಆತ ಬೇರೆ ಕಾರ್ಯಗಳಿಗಾಗಿ ಬಳಸುತ್ತಿದ್ದ. ಮುಸ್ಲಿಮರು ರಾಜಕೀಯ ಪ್ರತಿಸ್ಪರ್ಧಿಗಳಾಗಿ ರಂಗ ಪ್ರವೇಶಿಸುವುದಕ್ಕಿಂತ ಎಷ್ಟೋ ಮುಂಚೆಯೇ ಶತ್ರುಗಳ ಪೂಜಾಲಯಗಳೊಂದಿಗೆ ಅನೇಕ ಹಿಂದು ರಾಜರು ಇದೇ ರೀತಿ ವರ್ತಿಸಿದ್ದರೆಂಬ ವಾಸ್ತವಿಕತೆಯನ್ನು ಇಲ್ಲಿ ಸಾಂದರ್ಭಿಕವಾಗಿ ಜ್ಞಾಪಿಸುತ್ತಿದ್ದೇನೆ, ಪರ್ಮಾರ ವಂಶದ ಆಡಳಿತಾಧಿಕಾರಿಯಾಗಿದ್ದ ಸುಭತ ವರ್ಮನು (1193-1210) ಗುಜರಾತನ್ನು ಆಕ್ರಮಿಸಿ ದಾಭೋಯಿ ಮತ್ತು ಕಾಂಬೋಯಿಗಳ ಜೈನ್ ಬಸದಿಗಳನ್ನು ದೋಚಿದ್ದನು. ಹರ್ಷನು ತನ್ನ ಸಾಮ್ರಾಜ್ಯದಲ್ಲಿ 4 ದೇವಾಲಯಗಳನ್ನು ಬಿಟ್ಟು ಇತರೆಲ್ಲ ದೇವಾಲಯಗಳನ್ನು ದೋಚಿ ತನ್ನ ಖಜಾನೆ ತುಂಬಿಸಿದ್ದನು. ಪವಿತ್ರ ಕುರಾನ್ ಮತ್ತು ಪ್ರವಾದಿ ಚರ್ಯೆಯನ್ನು ಅನುಸರಿಸಲು ಪ್ರತಿಜ್ಞಾಬದ್ಧನಾಗಿರುವ ಓರ್ವ ಸತ್ಯವಿಶ್ವಾಸಿಯು ಪರಧರ್ಮಿಯರ ಆರಾಧನಾಲಯಗಳಿಗೆ ಹಾನಿಯುಂಟು ಮಾಡಲಾರನು. ಇತಿಹಾಸದ ಕರಾಳ ಹಂತಗಳಲ್ಲಿ ಯಾರಿಂದಲಾದರೂ ಅಕ್ರಮಗಳು ನಡೆದಿದ್ದರೆ, ಅದಕ್ಕೆ ದೇವವಿಶ್ವಾಸ ಮತ್ತು ಪರಲೋಕ ಪ್ರಜ್ಞೆಯಿಲ್ಲದ ಮುಸ್ಲಿಮ್ ನಾಮಧಾರಿಗಳೇ ಕಾರಣರಾಗಿದ್ದಾರೆ. ಸ್ವಾರ್ಥಿಗಳಾದ ದುಷ್ಟ ಅಡಳಿತಗಾರರಿಗೆ ಧರ್ಮ ಮತ್ತು ವಿಶ್ವಾಸಗಳೆಲ್ಲವೂ ಅಧಿಕಾರಗಳಿಸಿ ಅದನ್ನು ಸುದೄಢಗೊಳಿಸುವ ಪರದೆಯಾಗಿದೆಯಷ್ಟೆ.
 
24-09-10 (11:42 AM)[-]  pkbys
crusade 1791ರಲ್ಲಿ ರಘುನಾಥರಾವ್ ಪಟವರ್ಧನರ ನಾಯಕತ್ವದಲ್ಲಿ ಮರಾಠಾ ಸೇನೆಯು ಪ್ರಖ್ಯಾತ ಶೃಂಗೇರಿ ಮಠವನ್ನು ದೋಚಿ ಅನೇಕ ಬ್ರಾಹ್ಮಣರನ್ನು ಕೊಂದಿತ್ತು. ಹೇರಳ ಸಂಪತ್ತನ್ನು ಅಪಹರಿಸಿತ್ತು. ಎಂಬ ಮಾತನ್ನು ಒಪ್ಪುವೆ.. ನಿಮ್ಮ ಮಾತು ಸತ್ಯದಿಂದ ಕೂಡಿದೆ. ಹಿಂದುಗಳು ಕೂಡ ದೇವಾಲಯದ ದುಡ್ಡು ಅಪಹರಿಸುವುದರಲ್ಲಿ ಇದ್ದರು. ಎಂದು ಒಪ್ಪುವೆ.. "ಇತಿಹಾಸದ ಕರಾಳ ಹಂತಗಳಲ್ಲಿ ಯಾರಿಂದಲಾದರೂ ಅಕ್ರಮಗಳು ನಡೆದಿದ್ದರೆ, ಅದಕ್ಕೆ ದೇವವಿಶ್ವಾಸ ಮತ್ತು ಪರಲೋಕ ಪ್ರಜ್ಞೆಯಿಲ್ಲದ ಮುಸ್ಲಿಮ್ ನಾಮಧಾರಿಗಳೇ ಕಾರಣರಾಗಿದ್ದಾರೆ. ಸ್ವಾರ್ಥಿಗಳಾದ ದುಷ್ಟ ಅಡಳಿತಗಾರರಿಗೆ ಧರ್ಮ ಮತ್ತು ವಿಶ್ವಾಸಗಳೆಲ್ಲವೂ ಅಧಿಕಾರಗಳಿಸಿ ಅದನ್ನು ಸದೃಢಗೊಳಿಸುವ ಪರದೆಯಾಗಿದೆಯಷ್ಟೆ" ಎಂಬ ನಿಮ್ಮ ಮಾತು ನನ್ನ ಮನಸೂರೆಗೊಂಡಿತು.. ಆದರೆ ಹಾಗೆ ನಾಮಧಾರಿಯೊಬ್ಬನಿಗೆ ಹಜರತ್ ಪಟ್ಟ ಕಟ್ಟುವುದು ತಪ್ಪು ಎಂಬುದೇ ನನ್ನ ಅಭಿಮತ..

ಒಂದು ವಿಷಯ ಗಮನಿಸಿ... ಕಾಶಿಯ ಔರಂಗಜೇಬ್ ಮಸೀದಿ ಪೂರ್ಣ ದೇವಾಲಯವನ್ನು ನಿರ್ನಾಮ ಮಾಡಿ ಕಟ್ಟಲಾಗಿತ್ತು.. ಅವನು ಅವನ ಪೂರ್ವಜ ಬಾಬರ್‌ನ ಸೇನಾಪತಿ ಮೀರ್ ಬಾಕಿ ದೇವಲಯವನ್ನು ನಾಶಗೊಳಿಸದೇ ಗೋಪುರ ಮಾತ್ರ ತೆಗೆದು ಗುಮ್ಮಟ ಹಾಕಿ ಮಸೀದಿ ಮಾಡಿದ್ದು, ಧಾರ್ಮಿಕ ಅತಿಕ್ರಮಣವೇ ಸರಿ, ಅದಕ್ಕಾಗಿ ಇನ್ನೂ ಭಾರತದಲ್ಲಿ ಬಡಿದಾಡಲಾಗುತ್ತಿದೆ.. ಅಂತಹ ದೇವಾಲಯವನ್ನು ಮಸೀದಿ ಮಾಡಿಕೊಂಡ ಉದಾಹರಣೆಯನ್ನೇ ನಾನು ಶ್ರೀರಂಗಪಟ್ಟಣ್ಣದ್ದು ಕೊಟ್ಟೆ.. ಗೋಪುರ ತೆಗೆದು ಮಿನಾರ್ ಹಾಕಿ ಸ್ವಾಧೀನ ಪಡಿಸಿಕೊಂಡಿದ್ದು ಅತಿಕ್ರಮಣವೇ ಸರಿ.. ಅಲ್ಲಿ ಮಸೀದಿಗಾಗೆ ಕಟ್ಟಲ್ಪಡುವ ಯಾವ ವಿಶೇಷ ನಿರ್ಮಾಣವನ್ನು ಹೊಂದಿರದ ಕೇವಲ ಹಿಂದೂಗಳನ್ನು ಅಪಮಾನಿಸಲು ಮಾಡಿದ ಕಾರ್ಯವೊಂದರ ಪುರಾವೆಯಾಗಿ, ಇತಿಹಾಸದ ತುಣುಕಾಗಿ ಅದು ಮತ್ತು ಅಂಥ ಎಷ್ಟೋ ಕಟ್ಟಡ್ಡಗಳು ನಿಂತಿವೆ.. ನಾಮಧಾರಿ ಮುಸ್ಲಿಮರು (ಟಿಪ್ಪು, ಔರಂಗಜೇಬ್ನಂಥವರು) ಮತಾಂತರವನ್ನು ಖಡ್ಗದ ಮೊನೆಯಲ್ಲಿ ಮಾಡಿದರು ಎಂಬುದು ಸತ್ಯಸ್ಯ ಸತ್ಯ... ಘಸ್ನಿ, ಘೋರಿ, ನಾದಿರ್ ಶಾಗಳು ಲೂಟಿಕೋರರಷ್ಟೇ ಆಗಿದ್ದರು, ಅವರು ಮುಸ್ಲಿಂ ನಾಮಧಾರಿಗಳಷ್ಟೇ ಎಂದು ಒಪ್ಪಿದಿರಲ್ಲಾ ಸಂತೋಷವಾಗುತ್ತದೆ... ಲೂಟಿಯಷ್ಟೇ ಆದರೆ ಅದರಿಂದ ಮಾಡುವ ಅವರ ಹಿಂಸೆ ರಾಕ್ಷಸರೆನಿಸಿಕೊಳ್ಳುತ್ತಾರೆ ಮತ್ತು ಅವರು ಅಲ್ಲಾಹನ ಕರುಣೆಗೆ ಪಾತ್ರರಾಗುವುದಿಲ್ಲ ಎಂಬ ನಿಮ್ಮ ಮಾತುಗಳನ್ನು ಸ್ವೀಕರಿಸುವೆ.. ಆದರೆ ಇಸ್ಲಾಂನ ಹೆಸರಿನಲ್ಲಿ ಬೇರೆ ಧರ್ಮದ ಪ್ರಾರ್ಥನಾ ಸ್ಛಳಗಳನ್ನು ಪರಿವರ್ತಿಸಿದ ಜನರ ಬಗ್ಗೆ ಏನು ಹೇಳುವಿರಿ...

ದೇವಾಲಯದ ಗೋಡೆ ಮಸೀದಿಯ ಗುಮ್ಮಟ ಹೊಂದಿದ್ದ ಬಾಬರಿ ಮಸೀದಿ ಮತ್ತು ದೇವಾಲಯದ ಗೋಡೆ ಮಸೀದಿಯ ಮಿನಾರ್ ಹೊಂದಿರುವ ಶ್ರೀರಂಗಪಟ್ಟಣದ ಮಸೀದಿ ಏನನ್ನು ಸೂಚಿಸುತ್ತದೆ ಹೇಳುವಿರಾ.

ನನ್ನ ಪ್ರಕಾರ ಅವು ದುರಾಕ್ರಮಣವನ್ನೇ ಸೂಚಿಸುತ್ತದೆ.... ಹಜರತ್ ಟಿಪ್ಪುವನ್ನೋ, ಐಡಿಯಲ್ ಔರಂಗಜೇಬನನ್ನೋ ಅಥವಾ ಅವರು ಹಾಗಾಗಲು ಕಾರಣವಾದ ಇಸ್ಲಾಂ ಅನ್ನೋ... ಮತಾಂತರಕ್ಕಾಗಿ ಬಲಾತ್ಕರಿಸಿಯೇ ಇಲ್ಲ, ಅತಿಕ್ರಮಣ ನಡೆಸಿಲ್ಲ ಎಂಬುದು ಸುಳ್ಳಲ್ಲವೇ...

24-09-10 (03:34 PM)[-]  crusade
pkbys... .ರವರೇ, ಭಾರತದ ವಿವಿಧ ಧಾರ್ಮಿಕ ಸಮುದಾಯಗಳಲ್ಲಿರುವ ಪರಸ್ಪರ ಅನೈಕ್ಯ , ಅಸಹಿಷ್ಣುತೆ ಮತ್ತು ಅಪನಂಬಿಕೆಯ ಕಾರಣಗಳನ್ನು ನಾವು ಪರಿಶೀಲಿಸಬೇಕಾಗಿದೆ. ಈ ತಪ್ಪು ತಿಳುವಳಿಕೆಯು ನಾನಾ ರೂಪದಲ್ಲಿ ಹುಟ್ಟಿ ಹಲವು ಭಾವಗಳನ್ನು ಪ್ರದರ್ಶಿಸುತ್ತದೆ.ಉಭಯ ವರ್ಗದ ಸಂಪ್ರದಾಯವಾದಿಗಳು ಭಾರತೀಯ ಇತಿಹಾಸದ ವಾಸ್ತವಿಕಾಂಶಗಳನ್ನು ದುರ್ವ್ಯಾಖ್ಯಾನಿಸಿ ಇತಿಹಾಸದ ಘಟನೆಗಳನ್ನು ತಮ್ಮ ವಿಚಾರಧಾರೆಗೆ ಅನುಕೂಲವಾಗುವ ರೀತಿಯಲ್ಲಿ ಮಂಡಿಸಲು ಪ್ರಯತ್ನಿಸಿರುವುದು ಕಂಡು ಬರುತ್ತದೆ. ಜನಸಮುದಾಯ ಮತ್ತು ಅವರ ಧ್ಯೇಯಗಳ ಬಗ್ಗೆ ನಮ್ಮ ನಿರ್ಣಯವು ಅತಿರಂಜಿತವಾಗಿರುವುದೇ ಎಲ್ಲ ಗೊಂದಲಗಳಿಗೆ ಕಾರಣ. ಕ್ಷುಲ್ಲಕ ಘಟನೆಗಳನ್ನು ಎತ್ತಿಹಿಡಿದು - ಧರ್ಮ, ಸಣ್ಣ ಕಲಹ, ಕಾನೂನು ಮತ್ತು ಶಿಸ್ತು ಪಾಲನೆಯ ಕ್ರಮ-ಅವುಗಳನ್ನು ಉದ್ದೇಶಪೂರ್ವಕ, ಏಕಪಕ್ಷೀಯ ಅಥವಾ ಯೋಜಿತವೆಂದು ಪ್ರತಿಬಿಂಬಿಸಲು ಪ್ರಯತ್ನಿಸಲಾಗುತ್ತದೆ. ಈ ಸಂಶಯವು ಜೀವನದ ದೃಷ್ಟಿಕೋನಗಳನ್ನು ಸಂಪೂರ್ಣ ಅಡಿಮೇಲುಗೊಳಿಸುವ ಆಚಾರ, ವರ್ತನೆ,ವಸ್ತ್ರಧಾರಣೆ ಅಥವಾ ಭಾಷೆಯಲ್ಲಿರುವ ಸಹಜ ಭಿನ್ನತೆಗಳನ್ನು ವೈಭವೀಕರಿಸಿ ಸಾಂಸ್ಕೃತಿಕ ರಂಗಗಳಲ್ಲಿಯೂ ಆರ್ಥಿಕ ಸಾಮಾಜಿಕ ರಾಜಕೀಯ ಆಧ್ಯಾತ್ಮಿಕ ರಂಗಗಳಲ್ಲಿಯೂ ಅಪಾರ ಭಿನ್ನತೆಗಳಿವೆಯೆಂದು ಚಿತ್ರೀಕರಿಸಲಾಗುತ್ತದೆ.

ಈ ಹಿನ್ನಲೆಯಲ್ಲಿ ಯಾವನಾದರೂ ವ್ಯಕ್ತಿ ಅಥವಾ ಕೆಲವಾರು ಜನರು ಸ್ವಂತ ಸಮಸ್ಯೆಗಳಿಂದಾಗುವ ಜಗಳಗಳು ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಮುದಾಯಿಕ ಅಸಹಿಷ್ಣುತೆಗೆ ಪ್ರೇರಕವಾಗುವುದರಲ್ಲಿ ಅಚ್ಚರಿಯಿಲ್ಲ. ಇದು ಗಂಭೀರ ಸಮಸ್ಯೆಯಾಗಿದೆ. ಏಕೆಂದರೆ, ನಮ್ಮ ಶಾಲಾ ಕಾಲೇಜುಗಳಲ್ಲಿ ತಲೆತಲಾಂತರಗಳಿಂದ ಕಲಿಸಲಾಗುತ್ತಿರುವ ಭಾರತೀಯರ ಇತಿಹಾಸಗಳು ಐರೋಪ್ಯ ಬರೆಹಗಾರರು ಕ್ರೋಢೀಕರಿಸಿದ್ದಾಗಿದೆ. ತಮ್ಮ ಐರೋಪ್ಯ ಗುರುಗಳು ತುರುಕಿಸಿದ ಪಕ್ಷಪಾತಿ ಕೃತಿಗಳನ್ನು ಕಿತ್ತೊಗೆಯುವ ಭಾರತೀಯರ ಪ್ರಯತ್ನ ಈ ತನಕ ಯಶಸ್ವಿಯಾಗಿಲ್ಲ. ಅದೇ ವೇಳೆ ಈ ಸ್ವಯಂ ಘೋಷಿತ ಇತಿಹಾಸಗಾರರು ರಾಷ್ಟ್ರೀಯ ಜೀವನವನ್ನು ಮಲಿನಗೊಳಿಸುವಂತಹ, ಅಳಿಸಲಾಗದ ಕಲೆಗಳನ್ನು ತಮ್ಮ ವಾಚಕರ ಮನದಲ್ಲಿ ಮೂಡಿಸುತ್ತಾರೆ. ಇವರು ಮುಖ್ಯವಾಗಿ, ಹಿಂದುಗಳ ಮತ್ತು ಮುಸ್ಲಿಮರ ಮಧ್ಯೆ ನಡೆದ ಆಕ್ರಮಣ, ಯುದ್ಧ, ಗಲಭೆ,  ಬಲಾತ್ಕಾರ, ಮತಭ್ರಾಂತಿಗಳನ್ನು ಚಿತ್ರಿಸಿ ತೋರಿಸುತ್ತಾರೆ, ಇವರು ಮುಸ್ಲಿಮರನ್ನು ಹಿಂದು ಸಂಸ್ಕೄತಿ ಮತ್ತು ಅಚಾರವನ್ನು ನಾಶಪಡಿಸಿದವರು, ದುಷ್ಟ ವಿಗ್ರಹ ಭಂಜಕರು, ಹಿಂದೂಗಳನ್ನು ಬಲಾತ್ಕಾರವಾಗಿ ಮತಾಂತರಗೊಳಿಸಿದವರು, ನಿರಾಕರಿಸಿದವರನ್ನು ಖಡ್ಗದಿಂದ ಕೊಂದವರೆಂದು ಮುಂತಾಗಿ ಪ್ರಸ್ತುತ ಪಡಿಸುತ್ತಾರೆ. ಭಾರತದ ವಿಧ್ಯಾವಂತ ಜನರೂ ಈ ವಿಷಲಿಪ್ತ ಪ್ರಚಾರವನ್ನು ನಂಬಿ ಜೀವನದ ಪುರಾ ಪರಸ್ಪರ ವೈರ - ವಿದ್ವೇಷದಿಂದ ವೀಕ್ಷಿಸುತ್ತಿರುವುದು ಅಚ್ಚರಿದಾಯಕವಾಗಿದೆ, 1000 ವರ್ಷದ ಮೇಲ್ಪಟ್ಟು ಸುಧೀರ್ಘವಾದ ಭಾರತದ ಇತಿಹಾಸದ ಮುಸ್ಲಿಮ್ ಕಾಲಘಟ್ಟವು ಒಂದು ಕರಾಳ ರಾತ್ರಿಯೆಂದು ಹಿಂದೂಗಳನ್ನು ನಂಬಿಸಲಾಗಿದೆ. ಈ ಕಾಲಾವಧಿಯಲ್ಲಿ ಅಭಿಮಾನಪಡುವಂಥ ಯಾವುದೂ ಅವರಿಗೆ ಕಣ್ಣಿಗೆ ಕಾಣಿಸುವುದಿಲ್ಲ,

ಪಾಶ್ಚಾತ್ಯ ಕ್ರೈಸ್ತ ರಾಷ್ರ್ಟದ ಹಸ್ತಗಳಿಂದ ಅಧಿಕಾರ ಕಳೆದುಕೊಂಡ ಮುಸ್ಲೀಮರಾದರೋ ತಮ್ಮನ್ನು ಕೇವಲ ಆಕ್ರಮಣಕಾರಿಗಳೆಂದು ಹಿಂದುಗಳು ಚಿತ್ರಿಸುತ್ತಿರುವುದನ್ನು ಸಹಿಸಬೇಕಾಗುತ್ತದೆ. ನಾನು illiotರವರ history of india as told by its own historians ಎಂಬ ಗ್ರಂಥವನ್ನು ಓಡಿದೆ ಅದರ ಮುನ್ನುಡಿಯು ಹೀಗಿದೆ, "ನಾವು ರಾಜಂದಿರನ್ನು ನೋಡಿದೆವು.. ಅವರು ಅಕ್ರಮಗಳಲ್ಲಿ ಮುಳುಗಿ ಹೋಗಿದ್ದಾರೆ, ಅಂಥ ಆಡಳಿತಗಾರರ ಅಧೀನದಲ್ಲಿ ನ್ಯಾಯದ ಬುನಾದಿಯೇ ಕುಸಿದು ಬಿದ್ದುದರಲ್ಲಿ ಅಚ್ಚರಿಯಿಲ್ಲ. ಭ್ರಷ್ಟಾಚಾರ ಎಲ್ಲೆಡೆ ವ್ಯಾಪಿಸಿತ್ತು. ಬಲಪ್ರಯೋಗಿಸದೆ ಕರ ವಸೂಲು ಮಾಡಲು ಸಾಧ್ಯವಿರಲಿಲ್ಲ. ಅಕ್ರಮಗಳು ತಾಂಡವಾಡಿದ್ದವು" ಬ್ರಿಟಿಷರು ಒಡೆದು ಆಳುವ ತಂತ್ರವನ್ನು ಹೇಗೆ ರೂಪಿಸಿದರೆಂದು ಅವರ ಅಧಿಕೃತ ದಾಖಲೆಗಳಿಂದಲೇ ಗ್ರಹಿಸಬಹುದು.

ಭಾರತದ ಕಾರ್ಯದರ್ಶಿ ಜಾರ್ಜ್‌ ಪ್ರಾನ್ಸಿಸ್ ಹೆಮಿಲ್ಟನ್, ಕರ್ಝನ್ಗೆ ಹೀಗೆ ಬರೆದನು..
"ನನ್ನ ಅಭಿಪ್ರಾಯದಲ್ಲಿ ಭಾರತದಲ್ಲಿ ನಮ್ಮ ಆಡಳಿತಕ್ಕೆ ಈಗ ಬೆದರಿಕೆಯಿಲ್ಲ 50 ವರ್ಷಗಳ ಬಳಿಕ ಅದು ತೀವ್ರವಾಗಬಹುದು, ಅಷ್ಟರಲ್ಲಿ ಪಾಶ್ಚಾತ್ಯ ತತ್ವಸಿದ್ಧಾಂತ ಮತ್ತು ಹೋರಾಟಗಳು ಪ್ರಬಲವಾಗಬಹುದು. ಅದ್ದರಿಂದ ತೀರಾ ಭಿನ್ನವಾದ ವಿಚಾರ ಧಾರೆಗಳಲ್ಲಿ ಭಾರತದ ಬುದ್ಧಿಜೀವಿಗಳನ್ನು ನಾವು ಎರಡು ವಿಭಾಗಗಳಾಗಿ ಒಡೆಯಬೇಕು. ಹಾಗೆ ಮಾಡಿದರೆ ಮಾತ್ರ ನಮ್ಮ ಸ್ಥಾನವನ್ನು ಬಲಪಡಿಸಬಹುದು. ಶೈಕ್ಷಣಿಕ ಪ್ರಚಾರ ಮಾಧ್ಯಮಗಳಿಂದ ಹಾಗೆ ಮಾಡುವುದು ನಮ್ಮ ಆಡಳಿತ ನೀತಿಯಾಗಿರಬೇಕು. ಶೈಕ್ಷಣಿಕ ರಂಗದಲ್ಲಿ ಪಾಠ ಪುಸ್ತಕಗಳ ಮೂಲಕ ಸಮುದಾಯಗಳನ್ನು ಒಡೆಯುವ ಯೋಜನೆಗಳನ್ನು ನಾವು ಸಮರ್ಥವಾಗಿ ಜಾರಿಗೊಳಿಸಬೇಕಾಗಿದೆ." (hemilton to curzon 26.03.1888), ಕ್ರಾಸ್, ರಾಜ್ಯಪಾಲ ಡೆಫ್ರಿನಿನಿಗೆ ಹೀಗೆ ತಿಳಿಸಿದ, ಧಾರ್ಮಿಕ ಭಾವನೆಗಳನ್ನು ನೋಯಿಸುವ ನೀತಿಯು ನಮಗೆ ಬಹಳ ಉಪಯುಕ್ತವಾಗಿದೆ. ಭಾರತದ ಶಿಕ್ಷಣ ಮತ್ತು ಅಧ್ಯಯನ ವಿಷಯಗಳಿಗೆ ಸಂಬಂಧಪಟ್ಟ ನಿಮ್ಮ ತನಿಖಾ ಮಂಡಳಿಯಿಂದಲೂ ಕೆಲವು ಅಂಶಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ" (14.01.1887)

ಹೀಗೆ ನಮ್ಮಲ್ಲಿ ಮನೋಭಾವ ಬೆಳೆಸಿದ್ದರಿಂದ ಈಗ ನಾವುಗಳು,,  ಹಜರತ್ ಟಿಪ್ಪುವನ್ನೋ, ಐಡಿಯಲ್ ಔರಂಗಜೇಬನನ್ನೋ ಅಥವಾ ಅವರು ಹಾಗಾಗಲು ಕಾರಣವಾದ ಇಸ್ಲಾಂ ಅನ್ನೋ... ಎಂದು ವಾದವಿವಾದದಲ್ಲಿ ಮುಳುಗಿದ್ದೇವೆ.


ಹಿಂದಿನ ಕಂತುಗಳು:
ಮೊದಲ ಕಂತು  ==> ಮಹಾ ಮಂಥನ-1 (bhgte ರವರ ರಂಗ ಪ್ರವೇಶ)
ಎರಡನೇ ಕಂತು  ==> ಮಹಾ ಮಂಥನ-2 (crusade ಮತ್ತು Manju ತರ್ಕಗಳು)
ಮೂರನೇ ಕಂತು ==> ಮಹಾ ಮಂಥನ-3 (ಭಾರತದ ಮೇಲೆ ಮಹಮದೀಯರ ವಿಜಯ, ಬುರ್ಖಾ, ಜೆಸಿಯಾ; crusade ವಿಚಾರಗಳು)
ನಾಲ್ಕನೇ ಕಂತು  ==> ಮಹಾ ಮಂಥನ-4 (bhgte ರವರಿಂದ ಮತ್ತಷ್ಟು ಕಟುಸತ್ಯಗಳ ಅನಾವರಣ)

ಐದನೇ ಕಂತು ==> ಮಹಾ ಮಂಥನ-5 (ಔರಂಗಜೇಬ್, ಝಕಾತ್ - crusade ಸ್ಪಷ್ಟೀಕರಣಗಳು)

(bhgte ರವರ ಮೊದಲ ಬರವಣಿಗೆ, ಅಲ್ಲಿನ ಚರ್ಚೆಗೆ ಕ್ಲಿಕ್ ಮಾಡಿ ಕಟು ಸತ್ಯದೆಡೆಗೊಂದು ವಿಡಂಬನೆಯ ನೋಟ!!)

4 comments:

 1. ನಿಮ್ಮ ವಿಚಾರಗಳು...ನಿಮ್ಮ ಬರಹಗಳು..ಬರೆಯುವ ರೀತಿ ಇಷ್ಟವಾಯಿತು..

  ನಿಮ್ಮವ,
  ರಾಘು.

  ReplyDelete
 2. ಧನ್ಯವಾದಗಳು ರಾಘು, ಅನಘಮಾನಸಕ್ಕೆ ಬರುತ್ತಿರಿ.. ಇದು ಹೊಸ ಬ್ಲಾಗ್, ಹೆಚ್ಚಿನ ಆಸಕ್ತರು ಇಲ್ಲ... ನಿಮ್ಮ ಗೆಳೆಯ ಗೆಳತಿಯರನ್ನೂ ಕರೆತನ್ನಿ... ಪ್ರೋತ್ಸಾಹ ಬೇಕಿದೆ. ಬರಹಗಳು ಇಷ್ಟವಾದರೆ ನಾನು ಧನ್ಯ.. ವಿಮರ್ಶಿಸಿ ತಿದ್ದಿದರೆ ನಾನು ಕೃತಜ್ಞ..

  ReplyDelete
 3. ತುಂಬಾ ಚನ್ನಾಗಿ ಬರೆದಿದ್ದೀರಿ....
  ಬರಹ ಇಷ್ಟವಾಯಿತು.....
  ತಿಳುವಳಿಕೆಗೆ ಬೇಕಷ್ಟು ವಿಷಯಗಳಿವೆ ನಿಮ್ಮ ಬರಹದಲ್ಲಿ.....
  ಹೀಗೇ ಮತ್ತೂ ಬರುತ್ತಿರಲಿ ಲೇಖನ........

  ಗೆಳೆಯರ ಗುಂಪು ಬರಹ ಬಂದಂತೆಲ್ಲಾ ಕೂಡುತ್ತಲೇ ಇರುತ್ತದೆ. ಹನಿ ಹನಿ ಗೂಡಿ ಹಳ್ಳ.............

  ReplyDelete
 4. ಧನ್ಯವಾದಗಳು ಕನಸು ಕಂಗಳ ಹುಡುಗ,
  ಇಲ್ಲಿನ ಬರವಣಿಗೆಗಳ ಲೇಖಕ ನಾನು ಮಾತ್ರವಲ್ಲ.. crusade, bhgte, Manju ರವರ ಶ್ರಮವೂ ಬಹಳ... ಇವುಗಳನ್ನ ಬ್ಲಾಗಿಗೆ ಹಾಕಿಬಿಟ್ಟೆ... ಆದರೆ crusade, bhgte ಯಾರೆಂಬ ಪರಿಚಯವೂ ನನಗಿಲ್ಲ. ನನ್ನ ಈ ಅಧಿಕಪ್ರಸಂಗದ ಧೈರ್ಯಕ್ಕೆ ಕಾರಣ ಅವರು ಹೇಳಿದ ಮಾತುಗಳು ಪ್ರತಿಯೊಬ್ಬ ಜ್ಞಾನದಾಹಿಗೆ ಆಗಿತ್ತು. ಮತ್ತು ಅದು ಅಲ್ಲೆಲ್ಲೋ ಯಾವುದೋ ಸುದ್ದಿಯೆಳೆಯಲ್ಲಿ ಕಳೆದು ಹೋಗಬಾರದು ಎಂಬುದಷ್ಟೇ.. ಪ್ರಖರ ರಾಷ್ಟ್ರೀಯವಾದಿಗಳಾದ ಇವರು ಮತ್ತು ಮುಂದಿನ ಕಂತುಗಳಲ್ಲಿ ಬರುವ Alif ಮಾತುಗಳು ಮತ್ತು ಶುದ್ದ ಮೋಹಕ ಭಾಷೆ, ಅವರ ಶಬ್ದ ಭಂಢಾರ, ಬರವಣಿಗೆಯ ಶೈಲಿ, ಯಾವ ಸಾಹಿತಿಗೂ ಕಡಿಮೆ ಇಲ್ಲ... ಅನಾಮಧೇಯರಾಗೇ, ಬಹಳ ಜನ ಉಳಿದುಬಿಟ್ಟರಲ್ಲ ಎಂಬ ನೋವು ನನಗಿದೆ.

  ReplyDelete