Saturday, 2 July 2011

ಮಹಾ ಮಂಥನ-5 (ಔರಂಗಜೇಬ್, ಝಕಾತ್ - crusade ಸ್ಪಷ್ಟೀಕರಣಗಳು)

ಈ ಕಂತಿನಲ್ಲಿ crusade ಮತ್ತು ನನ್ನ (pkbys) ನಡುವೆ ಝಕಾತ್. ಔರಂಗಾಜೇಬ್ ಆಡಳಿತದ ಬಗ್ಗೆ ಸಂವಾದ ಇದೆ.

ಮೊದಲ ಕಂತು  ==> ಮಹಾ ಮಂಥನ-1 (bhgte ರವರ ರಂಗ ಪ್ರವೇಶ)
ಎರಡನೇ ಕಂತು  ==> ಮಹಾ ಮಂಥನ-2 (crusade ಮತ್ತು Manju ತರ್ಕಗಳು)
ಮೂರನೇ ಕಂತು ==> ಮಹಾ ಮಂಥನ-3 (ಭಾರತದ ಮೇಲೆ ಮಹಮದೀಯರ ವಿಜಯ, ಬುರ್ಖಾ, ಜೆಸಿಯಾ; crusade ವಿಚಾರಗಳು)
ನಾಲ್ಕನೇ ಕಂತು  ==> ಮಹಾ ಮಂಥನ-4 (bhgte ರವರಿಂದ ಮತ್ತಷ್ಟು ಕಟುಸತ್ಯಗಳ ಅನಾವರಣ)

(ಅನವಶ್ಯಕ ಭಾಗಗಳನ್ನು ತೆಗೆದು ಪ್ರೂಫ್ ರೀಡ್ ಮಾಡಿರುವುದರಿಂದ, ಅಲ್ಪ ಸ್ವಲ್ಪ ಬದಲಾವಣೆಗೊಳಪಟ್ಟಿದ್ದರೂ ಸಂವಾದದ ಓಘ ಮತ್ತು ಭಾಗವಹಿಸಿದವರ ನೈಸರ್ಗಿಕ ನ್ಯಾಯಕ್ಕೆ ಧಕ್ಕೆಯಾಗದ ರೀತಿ ನಿರೂಪಿಸಲಾಗಿದೆ.)22-09-10 (12:03 AM)[-] crusade
ಔರಂಗಜೇಬ್ ನಮ್ಮ ಧಾರ್ಮಿಕ ನಾಯಕನಲ್ಲ, ಅವನು ಒಬ್ಬ ಆಡಳಿತಗಾರ ಅವನ ಆಡಳಿತದಲ್ಲಿ ಕೆಟ್ಟ ಕೆಲಸಗಳು ಅಗಿರಲೂಬಹುದು...! ಇದು ನಮಗೆ ಸಂಬಂಧವಿಲ್ಲ.

22-09-10 (08:46 AM)[-] Manju
ಇದು ಪಲಾಯನವಾದ.. crusade...

22-09-10 (11:26 AM)[-] crusade
ನಾವು ಇಲ್ಲ ಸಂವಾದ ನಡೆಸಿತ್ತಿರುವುದು ಇಸ್ಲಾಮ್ ಮತ್ತು ಹಿಂದು ಧರ್ಮಗಳ ಬಗ್ಗೆ, ರಾಜ ಮಹಾರಾಜರ ಆಡಳಿತದ ಬಗ್ಗೆ ಅಲ್ಲ..

22-09-10 (12:00 PM)pkbys
ಮೊಘಲರು 1000 ವರ್ಷ ಆಳಿದರು, ಖಡ್ಗದ ತುದಿಯಿಂದ ಮತಾಂತರ ಮಾಡಬಹುದಿತ್ತು. ಆದರೆ ಮಾಡಲಿಲ್ಲ, ಇಸ್ಲಾಂಗೆ ಖಡ್ಗದ ತುದಿಯ ಮತಾಂತರದಲ್ಲಿ ನಂಬಿಕೆಯಿಲ್ಲ ಎಂದು ಬರೆದವರು ನೀವೇ... ಔರಂಗಜೇಬ್ ನಿಮ್ಮ ವಾದದ ಮೊಘಲರ ಮತಾಂಧ ದೊರೆ ಎಂಬ ಸತ್ಯವನ್ನು ಒಪ್ಪಲೇಕೆ ಹಿಂಜರಿಕೆ... ಮೊಘಲರು ಮುಸ್ಲೀಮೇತರರನ್ನು ಕ್ರೂರವಾಗಿ ನಡೆಸಿಕೊಂಡರು ಎಂಬುದು ಐತಿಹಾಸಿಕ ಸತ್ಯ.. ಇಂದಿನ ಭಾರತದ 80% ಜನ ಮುಸ್ಲೀಮೇತರೇ ಆಗಿದ್ದಾರೆ ಅದಕ್ಕೆ ಕಾರಣ ಮೊಘಲರು ಹಾಗೆ ಬಲವಂತ ಮಾಡದಿದ್ದದ್ದು ಎಂದು ವಾದಿಸಿದವರೂ ನೀವೇ. ..

ದಯವಿಟ್ಟು ಗಮನಿಸಿ, ಭಾರತದ ಇಂದಿನ ಜನಸಂಖ್ಯೆಯಲ್ಲಿ ಹಾಗಿದ್ದರೂ, ಪಾಕಿಸ್ತಾನ, ಬಾಂಗ್ಲಾಗಳನ್ನು ಸೇರಿಸಿ ನಂತರ % ಬಗ್ಗೆ ಮಾತಾಡಿ.. ಏಕೆಂಡರೆ ಅವು ಕೂಡ ಮೊಘಲರ ಆಳ್ವಿಕೆ ಒಳಪಟ್ಟವು. ಈಗ ಬೇರೆ ದೇಶಗಳಾಗುವ ಮಟ್ಟಕ್ಕೆ ಮತಾಂತರವಾಗಿ ಹೋದ ಭಾರತದ್ದೇ ಭೂಭಾಗಗಳು... ಔರಂಗಜೇಬನ ಕಾಲಕ್ಕೆ ಶಿವಾಜಿ ಇರದಿದ್ದಲ್ಲಿ... ಟಿಪ್ಪುವನ್ನು ಬ್ರಿಟಿಷರು ಬಡಿದು ಹಾಕದಿದ್ದಲ್ಲಿ, ನಿಜಾಮನ ರಜಾಕಾರರ ಕಾಲಕ್ಕೆ ವಲ್ಲಭಭಾಯ್ ಪಟೇಲ್ ಇರದಿದ್ದಲ್ಲಿ ಹಿಂದುಗಳ ಸ್ಥಿತಿ ಹೀನಾಯವಾಗಿರುತ್ತಿತ್ತು ಎಂಬುದರಲ್ಲಿ ಸಂಶಯವಿಲ್ಲ... ಪುರಾವೆ ಬೇಕಿದ್ದರೆ ಇಳಿಮುಖವಾಗುತ್ತಿರುವ ಬಾಂಗ್ಲಾದೇಶಿ ಪಾಕಿಸ್ತಾನಿ ಹಿಂದುಗಳ ಜನಸಂಖ್ಯೆ ನೋಡಿ.. ಕಾರಣ ದೌರ್ಜನ್ಯವಲ್ಲವೇ... ಮೊಘಲರನ್ನು ನೀವೇ ಎಳೆದು ಔರಂಗಜೇಬ್ ನಮಗೆ ಸಂಬಂಧವಿಲ್ಲ ಎನ್ನುವುದು ಸರಿಯೇ...

22-09-10 (12:55 PM)[-] crusade
ನಾವು ಇಲ್ಲ ಸಂವಾದ ನಡೆಸಿತ್ತಿರುವುದು ಇಸ್ಲಾಮ್ ಮತ್ತು ಹಿಂದು ಧರ್ಮಗಳ ಬಗ್ಗೆ, ರಾಜ ಮಹಾರಾಜರ ಆಡಳಿತದ ಬಗ್ಗೆ ಅಲ್ಲ..? ಔರಂಗಝೆಬ್, ಭಾರತೀಯ ಇತಿಹಾಸದಲ್ಲಿ ಅತ್ಯಧಿಕ ತಪ್ಪು ತಿಳುವಳಿಕೆಗೀಡಾದ ವ್ಯಕ್ತಿಯಾಗಿದ್ದಾನೆ, ಅವನಿಗೆ ಪರಮತ ವಿರೋಧಿ ಮತ್ತು ಕೋಮುವಾದಿಯೆಂಬ ಹಣೆ ಪಟ್ಟಿ ಹಚ್ಚಲಾಗಿದೆ. ಬ್ರಿಟಿಷರ ಸುಳ್ಳು ಪ್ರಚಾರವು ಇದಕ್ಕೆ ಪ್ರೇರಕವಾಗಿದೆ. ವಸ್ತುತಃ ಅವನು ಸಹೋದರ ಸಮುದಾಯದ ಧಾರ್ಮಿಕ ವ್ಯವಹಾರಗಳಲ್ಲಿ ಯಾವುದೇ ಹಸ್ತಕ್ಷೇಪ ನಡೆಸಿರಲಿಲ್ಲ.

ಇದಕ್ಕೆ ಒಂದು ನಿದರ್ಶನ ಅವನ ಕಾಲದ ಒಬ್ಬ ಬನಾರಸನ ರಾಜ್ಯಪಾಲರಾಗಿದ್ದ ಅಬುಲ್ ಹಸನರಿಗೆ ಅವನು ಕಳುಹಿಸಿದ ಆಜ್ಞೆಯಲ್ಲಿ ಹೀಗಿದೆ,
"ನಮ್ಮ ಈ ನ್ಯಾಯನಿಷ್ಠ ಅಡಳಿತಕಾಲದಲ್ಲಿಯೂ ಬನಾರಸ್ ಮತ್ತಿತರೆಡೆಗಳಲ್ಲಿ ವಾಸವಾಗಿರುವ ಹಿಂದು ಪ್ರಜೆಗಳನ್ನು ಕೆಲವರು ತಾತ್ಸಾರ ಮತ್ತು ದ್ವೇಷದಿಂದ ಹಿಂಸಿಸುತ್ತಿರುವರೆಂಬ ಸುದ್ಧಿ ದೊರೆತಿದೆ. ಅಲ್ಲಿನ ಆರಾಧನಾಲಯ ಸಂರಕ್ಷಕರಾದ ಬ್ರಾಹ್ಮಣರನ್ನು ಬೆದರಿಸಿ ಅವರ ಕೆಲಸ ಕಾರ್ಯಗಳನ್ನು ಅಡ್ಡಿಪಡಿಸಲು ಪ್ರಯತ್ನಿಸುತ್ತಿರುವರೆಂದೂ ತಿಳಿದು ಬಂದಿದೆ. ಪ್ರಾಮಾಣಿಕ ಮತ್ತು ನಿಷ್ಠಾವಂತರಾಗಿರುವ ಅಬುಲ್ ಹಸನರಿಗೆ ನಾವು ಹೀಗೆ ಆಜ್ಞಾಪಿಸುತ್ತಿದ್ದೇವೆ: ಈ ಆಜ್ಞೆ ತಲುಪಿದ ಕೂಡಲೇ ಅಂಥ ಕುಕೃತ್ಯಗಳನ್ನು ತಡೆಯಬೇಕು. ಬ್ರಾಹ್ಮಣರ ಕರ್ತವ್ಯ ನಿರ್ವಹಣೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಅನಂತಕಾಲ ಉಳಿಯಬೇಕಾದ ಮತ್ತು ದೇವದತ್ತವಾಗಿರುವ ನಮ್ಮ ಸಾಮ್ರಾಜ್ಯದ ಉನ್ನತಿ ಮತ್ತು ಮಾನವಕೋಟಿಯ ಸಮಗ್ರ ಹಿತಕ್ಕಾಗಿ ಅವರು ನಡೆಸುವ ಪ್ರಾರ್ಥನೆಗಳು ನಿರ್ವಿಘ್ನವಾಗಿ ಸಾಗುವ ಅವಕಾಶ ಒದಗಿಸಬೇಕು. ಇದನ್ನು ಬಹಳ ಜರೂರು ಕೆಲಸವೆಂದುಪರಿಗಣಿಸಿ ಕೂಡಲೇ ಸೂಕ್ತಕ್ರಮ ಕೈಗೊಳ್ಳಬೇಕು" ಹಿಜರಿ1090 ರಬಿವುಲ್ ಅಕಿರಾ 17ರ ಉಲ್ಲೇಖ (ಸಿ.ಕೆ.ಕರಿಮ್ರವರ ಇತಿಹಾಸ ಪಠಾಣ್ ಪುಟ:327)

ಔರಂಗಝೇಬನ ಧಾರ್ಮಿಕ ಧೋರಣೆಯನ್ನು ಅಲೆಗ್ಸಾಂಡರ್ ಹ್ಯಾಮಿಲ್ಟನ್ ಹೀಗೆ ವಿಶ್ಲೇಷಿಸುತ್ತಾರೆ "ಹಿಂದುಗಳಿಗೆ ಪರಿಪೂರ್ಣ ಧಾರ್ಮಿಕ ಸ್ವಾತಂತ್ರ್ಯ ಲಭಿಸುತ್ತಿದೆ ಮಾತ್ರವಲ್ಲ, ಹಿಂದು ರಾಜಂದಿರ ಆಶ್ರಯದಲ್ಲಿ ಅವರು ನಿರ್ವಹಿಸುತ್ತಿದ್ದ ವ್ರತಾನುಷ್ಠಾನ ಉತ್ಸವಾದಿಗಳ ಆಚರಣೆಯ ಸೌಲಭ್ಯಗಳಿವೆ. ಕೇವಲ ಮೀರತ್ ನಗರವೊಂದರಲ್ಲಿಯೇ ಹಿಂದೂಗಳಲ್ಲಿ ನೂರಾರು ವಿಭಿನ್ನ ಗುಂಪುಗಳಿದ್ದರೂ ಪ್ರಾರ್ಥನೆ ಮತ್ತು ತತ್ವಸಿದ್ಧಾಂತಗಳ ಬಗ್ಗೆ ಅವರಲ್ಲಿ ಯಾವುದೇ ವಿವಾದವಿಲ್ಲ. ಪ್ರತಿಯೊಬ್ಬರಿಗೂ ತಾವು ಬಯಸಿದಂತೆ ದೇವಾರ್ಚನೆ ನಡೆಸುವ ಮತ್ತು ಆರಾಧಿಸುವ ಸ್ವಾತಂತ್ರ್ಯವಿತ್ತು. ಧರ್ಮ ಸಂಘರ್ಷಗಳು ಅಪರಿಚಿತವಾಗಿದೆ." (a new account of the east indies) ನಾನು ಇದೆಲ್ಲಾ ಬರೆಯುತ್ತಿರುವುದು ಔರಂಗಝೇಬ್ನನ್ನು ಐಡಿಯಲಾಗಿ ಮಾಡಲು ಅಲ್ಲಾ ನಮ್ಮ ಐಡಿಯಲ್ ಮತ್ತು ಮಾಡಲ್ ಮೊಹಮ್ಮದ್‌ (ಸ) ಅವರ ನಿರ್ದೇಶನವೇ ನಮಗೂ ಮತ್ತು ಆ ಸತ್ತು ಹೋದ ಔರಂಗಝೇಬನಿಗೂ ಇರುತ್ತದೆ.

22-09-10 (01:54 PM)pkbys
ಔರಂಗಜೇಬ್ ಐಡಿಯಲ್ ಆದರೆ bhgte ಬರೆದ ಗುರು ತೇಜ್ ಬಹಾದುರ್ ಸಿಂಗ್‌ಗಾಗಲಿ ಗುರು ಗೋವಿಂದ ಸಿಂಗ್‌ಗಾಗಲಿ ಅನ್ಯಾಯವಾಗುವುದಿಲ್ಲವೇ... ಕಾಶಿಯಲ್ಲಿ ಔರಂಗಾಜೇಬ್ ದೇವಾಲಯ ಒಡೆದು ನಿರ್ಮಿಸಿದ ಮಸೀದಿಯನ್ನು ಸಮರ್ಥಿಸಿದಂತಾಗಲಿಲ್ಲವೇ... ಅವನು ಹೇರಿದ್ದು ಜೆಜಿಯಾ ಎಂಬುದು ತಲೆಗಂದಾಯವೆಂದು ಮರೆಯಬೇಡಿ.. ತಲೆಗಂದಾಯ ಎಂದರೆ ಎಷ್ಟು ಜನ ಕುಟುಂಬದಲ್ಲಿರುವರೋ ಅದರ ಮೇಲೆ ಅದರ ಪ್ರಮಾಣ ನಿರ್ಧಾರವಾಗುತ್ತದೆ.. ಅದು ಆರ್ಥಿಕ ಸಂತುಲನೆ ತರಲು ಅಲ್ಲ, ಅದು ಹಿಂದುಗಳ ಜನಸಂಖ್ಯೆ ಬೆಳೆಯದಿರಲು ಮಾಡಿದ ತಂತ್ರವೇ ಆಗಿತ್ತು... ದಬ್ಬಾಳಿಕೆಯೇ ಆಗಿತ್ತು.. ಅವನು ಬಹುದೈವಾರಾಧಕರ ಎಲ್ಲಾ ಪ್ರಾರ್ಥನಾ ಸ್ಛಳಗಳನ್ನು ಮತ್ತು, ಅವರ ಶಿಕ್ಷಣ ಕ್ರಮವನ್ನು ನಾಶಪಡಿಸಲು ಹಸನ್ ಅಲಿ ಖಾನ್‌ಗೆ ನಿರ್ದೇಶಿಸಿದ್ದನು.. ಅಲ್ಲಾ‌ನ ನಿರ್ದೇಶನಗಳು ಸಮಾನತೆಯ ಹೆಸರಿನಲ್ಲಿ ಹೆಣ್ಣನ್ನು ಬಂಧನಕೊಳಪಡಿಸುವುದು, ಬೇರೊಬ್ಬರ ಪ್ರಾರ್ಥಾನಾಗೃಹದ ಮೇಲೆ ದಾಳಿ ಮಾಡಿ ತಮ್ಮ ಅಧಿಕಾರ ಸ್ಥಾಪಿಸುವುದು ಆಗಿದ್ದರೆ ಬೇರೆಯವರ ಪೂಜಾಗೃಹ, ವಿಗ್ರಹಗಳನ್ನು ಅಪಮಾನಕೊಳಪಡಿಸುವ ದೃಷ್ಟಿಯಲ್ಲಿರಿಸಿ ಭಗ್ನಗೊಳಿಸುವುದು ಆದರೆ ಅಂತಹ ಅಲ್ಲಾಹನ್ನು ದೈವವಾದನೇ? ಅವನನ್ನು ಪಾಲಿಸಿ ಔರಂಗಜೇಬ್ ಐಡಿಯಲ್  ಆದಾನೇ??

22-09-10 (03:46 PM)[-]  crusade
ಜೆಜಿಯಾದ ಬಗ್ಗೆ ಮತ್ತೊಮ್ಮೆ ತಿಳಿಬಯುಸುತ್ತೇನೆ, ಸ್ಥಿತಿವಂತ ಮುಸ್ಲಿಮರೆಲ್ಲರೂ ಝಕಾತ್  ನೀಡುವುದು ಕಡ್ಢಾಯವಾಗಿದೆ. ಮಹಿಳೆಯಾರು, ಮಕ್ಕಳು, ರೋಗಿಗಳು, ವೃದ್ಧರು ಮುಂತಾದ ಯಾರೂ ಅದರಿಂದ ಮುಕ್ತರಲ್ಲ. ಅದರೆ, ಅದಕ್ಕೆ ಹೋಲಿಸಿದಾಗ ಜಿಝಿಯಾದಲ್ಲಿ ಅನೇಕ ವಿನಾಯತಿ ಮತ್ತು ಸೌಲಭ್ಯಗಳಿವೆ. ಮಹಿಳೆಯರು, ಮಕ್ಕಳು, ಕುರುಡರು, ಮುದುಕರು, ಮಾರಕ ರೋಗಿಗಳು, ಹುಚ್ಚರು, ಮಠದ ಸನ್ಯಾಸಿಯರು, ಪುರೋಹಿತರು ಮುಂತಾದವರಿಂದ ಜಿಝಿಯಾ ವಸೂಲು ಮಾಡುವುದಿಲ್ಲ. ಆದ್ದರಿಂದ ಜಿಝಿಯಾ ಮುಸ್ಲಿಮೇತರರೋಂದಿಗಿನ ಪಕ್ಷಪಾತವಲ್ಲ. ಬದಲಾಗಿ ಅವರಿಗೆ ಆರ್ಥಿಕವಾಗಿ ವಿನಾಯತಿ ದೊರೆಯುವ ಉಪಾಧಿಯಾಗಿದೆ. ಒಮ್ಮೆ ಪ್ರವಾದಿಯವರ ದ್ವಿತೀಯ ಉತ್ತರಾಧಿಕಾರಿ ಉಮರ್ (ರ) ಬೀದಿಯಲ್ಲಿ ಹೋಗುತಿದ್ದರು. ಆಗ ಓರ್ವ ಕುರುಡ ಮತ್ತು ದುರ್ಬಲರಾಗಿದ್ದ ಓರ್ವ ಮುದುಕನನ್ನು ಭೇಟಿಯಾದರು, ಉಮರ್ರವರು ಅವರ ಭುಜದ ಮೇಲೆ ಕೈಯಿರಿಸಿ ನೀವು ಯಾರು ? ಎಂದು ವಿಚಾರಿಸಿದರು. ನಾನೋರ್ವ ಯಹೂದಿ ಎಂದು ಹೇಳಿದಾಗ ಅವರು ಪುನಃ ನಿಮ್ಮ ಈ ಸ್ಥಿತಿಗೆ ಕಾರಣವೇನು ? ಎಂದು ಪ್ರಶ್ನಿಸಿದರು. ವೃದ್ಧ ಮತ್ತು ದುರ್ಬಲನಾದ ನಾನು ಜಿಝಿಯಾ ನೀಡಬೇಕಾಗಿದೆ ಎಂದು ಯಹೂದಿ ಹೇಳಿದರು, ಕೂಡಲೇ ಉಮರ್ರವರು ತಮ್ಮ ವಾಸಸ್ಥಳಕ್ಕೆ ಕರೆದೊಯ್ದು ಸ್ವಲ್ಪ ಹಣ ನೀಡಿದರು ಅನಂತರ ಆ ಕೂಡಲೇ ಕೋಶಾಧಿಕಾರಿಗಳಿಗೆ ಆ ವೃದ್ಧರ ಮೂಲಕ ಒಂದು ಸಂದೇಶ ಕಳುಹಿಸಿದರು. ಅದರಲ್ಲಿ ಹೀಗೆ ಆದೇಶಲಾಗಿತ್ತು "ಇವರನ್ನು ಇವರಂಥ ಇತರರನ್ನೂ ಗುರುತಿಸಿರಿ, ಅಲ್ಲಾಹನಾಣೆ! ಅವರ ಯೌವ್ವನವನ್ನು ನಾವು ಬಳಸಿ ವಾರ್ಧಕ್ಯದಲ್ಲಿ ‌ಅವರನ್ನು ಬೀದಿಪಾಲುಗೊಳಿಸುವುದು ಸರ್ವಾಥಾ ನ್ಯಾಯವಲ್ಲ. ಝಕಾತಿನ ಆದಾಯವು ಬಡವರು ಮತ್ತು ದರಿದ್ರರ ಹಕ್ಕಾಗಿದೆ ಎಂದು ಆಜ್ಞೆ ಹೊರಡಿಸಿದರು.

22-09-10 (05:02 PM)[-]  pkbys
ನಾನು ತೆರಿಗೆ ತೆಗೆದುಕೊಳ್ಳುವ ಮತ್ತು ಅದರಿಂದ ಕೆಲವು ವಿಶೇಷ ವರ್ಗಕ್ಕೆ ವಿನಾಯಿತಿ ನೀಡುವ ವಿರುದ್ದವಾಗಿಲ್ಲ.. ಖಂಡಿತವಾಗೂ ವೃದ್ದರು, ದುರ್ಬಲರು, ಅಂಗವಿಕಲರು ಮೊದಲಾದವರಿಗೆ ವಿನಾಯಿತಿ ನೀಡಬೇಕು.... ತೆರಿಗೆಯನ್ನು ತೆರಿಗೆಯಾಗಿ ಮಾಡದೇ ಮತ ಪಂಗಡಗಳ ಮೇಲೆ ವಿಭಾಗಿಸಿದ್ದು ಮಾತ್ರ ತಪ್ಪು ಎಂದು ನನ್ನ ವಾದ.... ಉಮರ್ ಮಾನವೀಯ ಗುಣವುಳ್ಳವನಿರಬಹುದು. ಅದು ಪ್ರತಿ ಆಡಳಿತಾಧಿಕಾರಿಯ ಹೊಣೆ..
ಉಮರ್ಗಿಂತ ಮೊದಲು ಬಹಳ ರಾಜ ಮಹಾರಾಜರು ಭಾರತದಲ್ಲಿ ಆಗಿ ಹೋಗಿದ್ದಾರೆ.. ಅರಬ್ ಜನಾಂಗಕ್ಕೆ ಅವರು ಮಹಾಮಾನವರಂತೆ ಕಂಡಿರಬಹುದು.. ಆದರೆ ಭಾರತೀಯರಿಗೆ ಹೊಸದೇನೂ ಅಲ್ಲ... ನಾವು ತೆರಿಗೆ ಕಟ್ಟುತ್ತೇವೆ.. ನೀವೂ ಕಟ್ಟುತ್ತೀರ... ನಾವೆಲ್ಲ ಪ್ರಜೆಗಳಾಗಿ ಕಟ್ಟುತ್ತೇವೆ. ಹಿಂದು ಅಥವಾ ಮುಸ್ಲಿಂ ಆಗಿ ಅಲ್ಲ.... ಝಕಾತ್ ಮಹಮದೀಯರು ನನಗೆ ತಿಳಿಸಿರುವಂತೆ ರಂಜಾನ್‌ನಲ್ಲಿ ಬಡವರಿಗೆ ನೀಡುವ ದಾನವಾಗಿದೆ. ದಾನಕ್ಕೂ ತೆರಿಗೆಗೂ ಸಂಬಂಧವೇನು...??

22-09-10 (07:06 PM) crusade
ಪೂಜಾಗೃಹ, ವಿಗ್ರಹಗಳನ್ನು ಅಪಮಾನಕೊಳಪಡಿಸುವ ದೃಷ್ಟಿಯಲ್ಲಿರಿಸಿ ಭಗ್ನಗೊಳಿಸುವುದು ಆದರೆ ಅಂತಹ ಅಲ್ಲಾಹನ್ನು ದೈವವಾದನೇ? ಎಂದು ಬರೆದಿದ್ದೀರಿ, ಖಂಡಿತಾವಾಗಿಯು ಇದು ನಿಮ್ಮ ತಪ್ಪು ಕಲ್ಪನೆ ಯಾಕೆಂದರೆ, ಕುರಾನ್ ಹೇಳುತ್ತದೆ, ಧರ್ಮದಲ್ಲಿ ಯಾವುದೇ ಒತ್ತಾಯ, ಬಲಾತ್ಕಾರವಿಲ್ಲ (2:256) ಮತ್ತು ಹೇಳಿರಿ,ನಿಮಗೆ ನಿಮ್ಮ ಧರ್ಮ ಮತ್ತು ನನಗೆ ನನ್ನ ಧರ್ಮ (ಕುರಾನ್ 109: 6) ವಿಚಾರ ಸ್ವಾತಂತ್ರ್ಯವೂ ಮನುಷ್ಯನ ಜನ್ಮ ಸಿದ್ಧ ಹಕ್ಕು, ಅದನ್ನು ಕಸಿಯುವ ಅಧಿಕಾರವನ್ನು ಇಸ್ಲಾಮ್ ಯಾರಿಗೂ ನೀಡುವುದಿಲ್ಲ. ಒತ್ತಾಯ ಬಲಾತ್ಕಾರಗಳಿಂದ, ಮತ್ತು ಖಡ್ಗ-ಬಂದೂಕುಗಳಿಂದ ಜನರ ಶಿರಬಾಗಿಸಬಹುದೇ  ಹೊರತು ಅವರ ಮನಗಳನ್ನು ಜಯಿಸಲು ಸಾಧ್ಯವಿಲ್ಲ. ಇಸ್ಲಾಮ್ ಮನುಷ್ಯರ ಮನವನ್ನು ಜಯಿಸಬಯಸುತ್ತದೆ. ಅದು ಮಾನವನ ಮನಸ್ಸಿನಲ್ಲಿ ಕೆಲವು ವಿಶ್ವಾಸ-ಶ್ರದ್ಧೆಗಳನ್ನು ಬಿತ್ತ ಬಯಸುತ್ತದೆ. ಮನುಷ್ಯನಲ್ಲಿ ವೈಚಾರಿಕ ಕ್ರಾಂತಿಯನ್ನು ತರಬಯಸುತ್ತದೆ. ಈ ಕಾರ್ಯ ಖಡ್ಗದಿಂದ ಸಾಧ್ಯವಲ್ಲವೆಂದು ಶತಃಸಿದ್ಧ. ಇಸ್ಲಾಮಿನ ಸಂಪೂರ್ಣ ಧರ್ಮಸಂಹಿತೆಯು ಈ ವೈಚಾರಿಕ ಕ್ರಾಂತಿಯನ್ನು ಅವಲಂಬಿಸಿರುವಾಗ ಅದನ್ನು ಖಡ್ಗದ ಮೂಲಕ ಸಾಧಿಸಬಹುದೆನ್ನುವುದು ಮಹಾ ಮೂರ್ಖತನ.... ಮತ್ತು ನಾನು ಪಲಾಯನ ಮಾಡುವ ಪ್ರಶ್ನೆಯೇ ಇಲ್ಲ. ಎಲ್ಲದಕ್ಕೂ ಸಮರ್ಪಕ ಉತ್ತರ ನೀಡಬೇಕು ಎಂದು, ಸ್ವಲ್ಪ ತಡವಾಗುತ್ತಿದೆ..

ಝಕಾತಿನ ಬಗ್ಗೆ ನೀವು ಸ್ವಲ್ಪ ತಪ್ಪು ತಿಳಿದಿದ್ದೀರ, ಝಕಾತ್ ಇಸ್ಲಾಂ ಧರ್ಮದ ಮೂರನೇ ಕಡ್ಡಾಯ ಕಾರ್ಯವಾಗಿದೆ. ವರ್ಷಾಂತ್ಯದಲ್ಲಿ ಒಬ್ಬ ಸ್ಥಿತಿವಂತ ಮುಸ್ಲಿಮನಲ್ಲಿರುವ ತನ್ನ ಕೃಷಿಯಿಂದ ಬರುವ ಆದಾಯದಿಂದ 10% ಮತ್ತು ಕೃಷಿಯೇತರ ವ್ಯವಹಾರದಿಂದ ಬರುವ ಆದಾಯದಲ್ಲಿ 2.5% ಕೊಲೇ ಬೇಕಾದ ತೆರಿಗೆಯಾಗಿದೆ. ಝಕಾತ್ ಒಂದು ದಾನವಾಗಲೀ ಭಿಕ್ಷೆಯಾಗಲೀ ಅಲ್ಲ.

ಒಂದು ಇಸ್ಲಾಮಿ ಸರಕಾರವಿರುವ ಕಡೆ ಧನಿಕರಿಂದ ಸಂಗ್ರಹಿಸುವ ಮತ್ತು ಬಡವರಲ್ಲಿ ಅದನ್ನು ವಿತರಿಸುವ ಕಾರ್ಯವನ್ನು ಸರಕಾರವೇ ಮಾಡಬೇಕು. ಇಸ್ಲಾಮಿ ಸರಕಾರವಿಲ್ಲದಿರುವಲ್ಲಿ ಮುಸ್ಲಿಮರು ಝಕಾತನ್ನು ಸಾಧ್ಯವಿರುವಲ್ಲಿ ಸಾಮೂಹಿಕವಾಗಿ ಸಂಗ್ರಹಿಸುವ ಮತ್ತು ವಿತರಿಸುವ ವ್ಯವಸ್ತೆ ಮಾಡುತ್ತಾರೆ. ಉಳಿದೆಡೆ ಧನಿಕರು ಸ್ವಯಂ ಅದರ ವಿತರಣೆಯ ವ್ಯವಸ್ಥೆ ಮಾಡಿಕೊಳ್ಳತ್ತಾರೆ. ರಂಜಾನಿನಲ್ಲಿ ಕೊಡುವ ದಾನಕ್ಕೆ ಫಿತ್ರವೆನ್ನುತ್ತಾರೆ ಮತ್ತು ಸದಖ ದಾನ ಮಾಡುತ್ತಾರೆ. ಆದರೆ ಎಲ್ಲಾ ಧನಿಕ ಮುಸ್ಲಿಮರು ರಂಜಾನಿನಲ್ಲಿ ಝಕಾತನ್ನು(ತೆರಿಗೆ) ತೆಗೆಯುತ್ತಾರೆ, ಅದರಿಂದ ನಿಮಗೆ ಸ್ವಲ್ಪ ತಪ್ಪು ಕಲ್ಪನೆಯಾಗಿದೆ.

22-09-10 (11:07 PM)[-]  pkbys
ಝಕಾತ್ ಬಗ್ಗೆ ನನ್ನ ತಿಳುವಳಿಕೆ ಹೆಚ್ಚಿಸಿದಿರಿ, ಧನ್ಯವಾದಗಳು... ಆದರೆ ಪ್ರಶ್ನೆ ಉಳಿದೆ ಉಳಿಯಿತು... ಕುರಾನ್ನ ನಿಯಮವೋ ಹದೀಸ್ನ ತಿಳುವಳಿಕೆಯೋ, ಪ್ರವಾದಿಗಳ ನಿರ್ದೇಶನವೋ, ಯಾವುದಾದರು ಆಗಿರಲಿ.. ಝಕಾತ್ ಎಂಬುದು ತೆರಿಗೆಯಾದರೆ, ಅಲ್ಲಿಗೆ ಮುಗಿಯಿತು.. ತೆರಿಗೆ ಎಂಬುದು ಸರ್ಕಾರ ನಿರ್ಧರಿಸುವ ಒಂದು ವಿಷಯ.. ಅದು ಆಡಳಿತಾತ್ಮಕ ವಿಷಯ... ತೆಗೆದುಕೊಂಡ ತೆರಿಗೆಯನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬುದೂ ಅಷ್ಟೇ.. ಸಂಸ್ಕೃತದ ತೆರಿಗೆ ಶಬ್ದಕ್ಕೆ ಪ್ರತಿಯಾಗಿ ಅರಬಿಯಲ್ಲಿ ಝಕಾತ್ ಎಂದು ಹೆಸರಿದ್ದರೆ ಬದಲಾಗುವುದೇನೂ ಇಲ್ಲ. ಶುಕ್ರಾಚಾರ್ಯನು ಬಲಿ ಚರ್ಕವರ್ತಿಗೆ ನೀಡಿದ ಉಪದೇಶವೊಂದರಲ್ಲಿ ಆದಾಯದ 5 ನೇ ಒಂದು ಭಾಗ ಅಂದರೆ 20% ಸಮಾಜಕ್ಕೆ (ಅಂದರೆ ಸರಕಾರಕ್ಕೆ) ಎಂದು ಹೇಳುತ್ತಾನೆ.. 12.5% ಗಿಂತ ಇದು ಹೆಚ್ಚಾಯಿತು.. ಇರಲಿ, ಕೃತಯುಗದ ಮಾತು ಈಗ ಬೇಡ.. ಸರಕಾರ ಜನರ ಮತಗಳನ್ನ ಅನುಸರಿಸಿ ತೆರಿಗೆಗೆ ಬೇರೆ ಬೇರೆ ಹೆಸರಿಡಬೇಕಿಲ್ಲವಲ್ಲ. ಸಂಸ್ಕೃತ ಪದವೋ ಅರಬೀ ಪದವೋ, ತೆರಿಗೆ ತೆರಿಗೆಯೇ, ಅದನ್ನು ಸಮಾನವಾಗಿ ತೆಗೆದುಕೊಳ್ಳಬೇಕು.. ಝಕಾತ್, ಜೆಝಿಯಾ ಎಂಬ ಹೆಸರೇಕೆ? ನೀವು ಹಿಂದುಗಳ ಮೇಲೆ ಝಕಾತ್ ಹೇರುವುದು ಧಾರ್ಮಿಕ ಸ್ವತಂತ್ರ ಹರಣವಾದ್ದರಿಂದ ಆರ್ಥಿಕ ಸಂತುಲನೆಗಾಗಿ ಜೆಝಿಯಾ ಹೇರಲಾಯಿತು ಎಂಬ ಸಮರ್ಥನೆ ನೀಡಿದ್ದಿರಿ... ಜೆಝಿಯಾ ಹೇರುವುದು ಆ ಕಾರಣಕ್ಕಾಗೆ ಆದರೆ ಅದು ಝಕಾತ್‌ನಂತೆ ಆದಾಯ ತೆರಿಗೆಯಾಗಿ ಇರಬೇಕೇ ಹೊರತು, ತಲೆಗಂದಾಯವಾಗಬಾರದು,  ಮತ್ತು ಅದು ಆರ್ಥಿಕ ಸಂತುಲನೆಗಾದದ್ದರಿಂದ ಝಕಾತ್ಗಿಂತ ಹೆಚ್ಚಿರಬಾರದು... ಆಗ ಅದು ನ್ಯಾಯ.. ಈ ನ್ಯಾಯವನ್ನು ಒಪ್ಪುವಿರಾದರೆ. ಜಝಿಯಾ ಮತ್ತು ಝಕಾತ್ ನಡುವೆ ಹೆಸರಿನ ಹೊರತು ಮತ್ತೇನೂ ಬೇರಿರುವುದಿಲ್ಲ ಅಲ್ಲವೇ.. ಹಾಗಾದರೆ ಹೆಸರು ತಾನೇ ಏಕೆ ಬದಲಿರಬೇಕು? ಒಂದೇ ಇಡಬಹುದಲ್ಲ. ಒಂದೇ ಹೆಸರಿಟ್ಟರೆ ಧಾರ್ಮಿಕ ಸ್ವತಂತ್ರ ಇಲ್ಲದಂತಾಗುತ್ತದೆ ಎಂಬ ಕಾರಣ ಕೊಡಬೇಡಿ ಅದು ಬಾಲಿಶವಾಗುತ್ತದೆ.

 ----> ಮುಂದುವರಿದಿದೆ,  ಮಹಾ ಮಂಥನ-6 (crusade ರ ನಿಷ್ಪಕ್ಷಪಾತತೆ ಮತ್ತು ಸೌಹಾರ್ದ ನೀತಿ)ಹಿಂದಿನ ಕಂತುಗಳು:
ಮೊದಲ ಕಂತಿಗೆ ಮುಂದೆ ಕ್ಲಿಕ್ ಮಾಡಿ ==> ಮಹಾ ಮಂಥನ - 1 (bhgte ರವರ ರಂಗ ಪ್ರವೇಶ)
ಎರಡನೆ ಕಂತಿಗೆ ಮುಂದೆ ಕ್ಲಿಕ್ ಮಾಡಿ ==> ಮಹಾ ಮಂಥನ - 2 (crusade ಮತ್ತು Manju ತರ್ಕಗಳು)

(bhgte ರವರ ಮೊದಲ ಬರವಣಿಗೆಗೆ, ಅಲ್ಲಿನ ಚರ್ಚೆಗೆ ಕ್ಲಿಕ್ ಮಾಡಿ ಕಟು ಸತ್ಯದೆಡೆಗೊಂದು ವಿಡಂಬನೆಯ ನೋಟ!!)

No comments:

Post a Comment