ಹಿಂದಿಯ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.
ಚಿತ್ರ: ಲವ್ ಇನ್ ಟೋಕಿಯೋ (1966)
ಸಾಹಿತ್ಯ: ಹಸ್ರತ್’
ಸಂಗೀತ: ಶಂಕರ್ - ಜಯ್ ಕಿಶನ್ (ಅಲ್ಬರ್ಟ್ ಡಬ್ಲ್ಯು ಕೆಟೆಲ್ಬೆರ ‘ಇನ್ ಎ ಪರ್ಷಿಯನ್ ಮಾರ್ಕೆಟ್’ ಪ್ರೇರಿತ)
ಗಾಯಕಿ: ಲತಾ ಮಂಗೇಶ್ಕರ್
ಚಿತ್ರಿಕೆ: ಆಶಾ ಪಾರೇಖ್, ಜಯ್ ಮುಖರ್ಜಿ
ಹಿಂದಿ ಪದಗಳನ್ನು ಮಾತ್ರ ಅನುವಾದಿಸಲಾಗಿದೆ.
ಜಪಾನಿ ಪದ "ಸಾಯೋನಾರಾ" (ಶುಭ ವಿದಾಯ)ವನ್ನು ಅನುವಾದಿಸದೇ ಹಾಗೇ ಉಳಿಸಿಕೊಳ್ಳಲಾಗಿದೆ
ಮೂಲಗೀತೆಯ ಇಳಿಕೊಂಡಿ (Download Link)
![]() |
ಸಾಯೋನಾರಾ ಗೀತೆಯಲ್ಲಿ, ಜಪಾನಿ ಸಾಂಪ್ರದಾಯಿಕ ಉಡುಗೆ ಕಿಮೋನೋ ತೊಟ್ಟು ಕುಣಿದ ಆಶಾ ಪಾರೇಖ್ |
ಚಿತ್ರ: ಲವ್ ಇನ್ ಟೋಕಿಯೋ (1966)
ಸಾಹಿತ್ಯ: ಹಸ್ರತ್’
ಸಂಗೀತ: ಶಂಕರ್ - ಜಯ್ ಕಿಶನ್ (ಅಲ್ಬರ್ಟ್ ಡಬ್ಲ್ಯು ಕೆಟೆಲ್ಬೆರ ‘ಇನ್ ಎ ಪರ್ಷಿಯನ್ ಮಾರ್ಕೆಟ್’ ಪ್ರೇರಿತ)
ಗಾಯಕಿ: ಲತಾ ಮಂಗೇಶ್ಕರ್
ಚಿತ್ರಿಕೆ: ಆಶಾ ಪಾರೇಖ್, ಜಯ್ ಮುಖರ್ಜಿ
ಹಿಂದಿ ಪದಗಳನ್ನು ಮಾತ್ರ ಅನುವಾದಿಸಲಾಗಿದೆ.
ಜಪಾನಿ ಪದ "ಸಾಯೋನಾರಾ" (ಶುಭ ವಿದಾಯ)ವನ್ನು ಅನುವಾದಿಸದೇ ಹಾಗೇ ಉಳಿಸಿಕೊಳ್ಳಲಾಗಿದೆ
ಮೂಲಗೀತೆಯ ಇಳಿಕೊಂಡಿ (Download Link)
ಕನ್ನಡ ಭಾವಾನುವಾದ | ಹಿಂದಿ ಮೂಲ | |
ಸಾಯೋನಾರಾ ಸಾಯೋನಾರಾ | ಸಾಯೋನಾರಾ ಸಾಯೋನಾರಾ | |
ಮಾತಿದು ಕೊಡುವೆನು ಸಾಯೋನಾರಾ | ವಾದಾ ನಿಭಾವೂಂಗೀ ಸಾಯೋನಾರಾ | |
ತುಳುಕುತ ಬಳುಕುತಾ ಬಿಂಕದಲಿ, | ಇಠಲಾತೀ ಔರ ಬಲಖಾತೀ, | |
ನಾಳೆ ನಾ ಬರುವೆನು ಸಾಯೋನಾರಾ | ಕಲ್ ಫಿ಼ರ್ ಆವೂಂಗೀ, ಸಾಯೋನಾರಾ | |

ಸಾಯೋನಾರಾ | ಸಾಯೋನಾರಾ | |
ಸಾಯೋನಾರಾ | ಸಾಯೋನಾರಾ | |
ಬಿಡು ನೀ ನನ್ನಯ ತೋಳುಗಳ, | ಛೋಡ಼್ ದೇ ಮೇರೀ ಬಾಂಹೋಂ ಕೋ, | |
ತೊಡಕುವೆಯೇತಕೆ ಕಾಲುಗಳ | ರೋಕ್ ನಾ ಮೇರೀ ರಾಹೋಂ ಕೋ, | |

ಈ ಪರಿ ಕಾತರ ಬೇಡ ಸಖ | ಇತನೀ ಭೀ ಬೇತಾಬೀ ಕ್ಯಾ, | |
ಅಂಕೆಯಲಿಡು ನಿನ್ನ ಕಣ್ಣುಗಳ | ಸಮಝಾ ಅಪನೀ ನಿಗಾಹೋಂ ಕೋ | |
ಸಾಯೋನಾರಾ ಸಾಯೋನಾರಾ | ಸಾಯೋನಾರಾ ಸಾಯೋನಾರಾ | |
ಮಾತಿದು ಕೊಡುವೆನು ಸಾಯೋನಾರಾ | ವಾದಾ ನಿಭಾವೂಂಗೀ ಸಾಯೋನಾರಾ | |
ತುಳುಕುತ ಬಳುಕುತಾ ಬಿಂಕದಲಿ, | ಇಠಲಾತೀ ಔರ ಬಲಖಾತೀ, | |
ನಾಳೆ ನಾ ಬರುವೆನು ಸಾಯೋನಾರಾ | ಕಲ್ ಫಿ಼ರ್ ಆವೂಂಗೀ, ಸಾಯೋನಾರಾ | |
ಸಾಯೋನಾರಾ | ಸಾಯೋನಾರಾ | |
ಸಾಯೋನಾರಾ | ಸಾಯೋನಾರಾ | |
ಮುಗುಳರಳುವ ಈ ಕಾಲದಲಿ, | ಚಂಚಲ ಶೋಖ಼್ ಬಹಾರೋಂ ಮೇ, | |
ಸೊಬಗಿನ ನೋಟದ ಸೀಮೆಯಲಿ, | ರಸ ಬರಸಾತೇ ನಜ಼ಾರೋಂ ಮೇ, | |

ನಿನ್ನನು ನಾನು ಮರೆಯುವೆನೆ, | ತುಝಕೋ ಭೂಲ ನಾ ಪಾವೂಂಗೀ, | |
ಸೇರುವ ನಾವ್ ಹೂದೋಟದಲಿ | ಹೋಗಾ ಮಿಲನ ಗುಲಜ಼ಾರೋಂ ಮೇ | |
ಸಾಯೋನಾರಾ ಸಾಯೋನಾರಾ | ಸಾಯೋನಾರಾ ಸಾಯೋನಾರಾ | |
ಮಾತಿದು ಕೊಡುವೆನು ಸಾಯೋನಾರಾ | ವಾದಾ ನಿಭಾವೂಂಗೀ ಸಾಯೋನಾರಾ | |
ತುಳುಕುತ ಬಳುಕುತಾ ಬಿಂಕದಲಿ, | ಇಠಲಾತೀ ಔರ ಬಲಖಾತೀ, | |
ನಾಳೆ ನಾ ಬರುವೆನು ಸಾಯೋನಾರಾ | ಕಲ್ ಫಿ಼ರ್ ಆವೂಂಗೀ, ಸಾಯೋನಾರಾ | |
ಸಾಯೋನಾರಾ | ಸಾಯೋನಾರಾ | |
ಸಾಯೋನಾರಾ | ಸಾಯೋನಾರಾ | |
ದಿನವೂ ಸಿಗುವೆವು ಮುಂದೆಂದೂ, | ಹೋಂಗೀ ರೋಜ಼್ ಮುಲಾಕ಼ಾತೇ, | |
ನಮ್ಮದೇ ರಾತ್ರಿ ಹಗಲುಗಳು | ಅಪನೇ ದಿನ್ ಅಪನೀ ರಾತೇ, | |

ತಡೆವವರ‍್ಯಾರು ನಮ್ಮನ್ನು, | ಕೌನ್ ಹಮೇ ಫಿ಼ರ್ ರೋಕೇಗಾ, | |
ಮನದುಂಬಿ ಆಡುವ ಮಾತುಗಳ | ಜೀ ಭರ್ ಕರ್ ಕರನಾ ಬಾತೇ | |
ಸಾಯೋನಾರಾ ಸಾಯೋನಾರಾ | ಸಾಯೋನಾರಾ ಸಾಯೋನಾರಾ | |
ಮಾತಿದು ಕೊಡುವೆನು ಸಾಯೋನಾರಾ | ವಾದಾ ನಿಭಾವೂಂಗೀ ಸಾಯೋನಾರಾ | |
ತುಳುಕುತ ಬಳುಕುತಾ ಬಿಂಕದಲಿ, | ಇಠಲಾತೀ ಔರ ಬಲಖಾತೀ, | |
ನಾಳೆ ನಾ ಬರುವೆನು ಸಾಯೋನಾರಾ | ಕಲ್ ಫಿ಼ರ್ ಆವೂಂಗೀ, ಸಾಯೋನಾರಾ | |
ಸಾಯೋನಾರಾ | ಸಾಯೋನಾರಾ | |
ಸಾಯೋನಾರಾ ಸಾಯೋನಾರಾ ಸಾಯೋನಾರಾ | ಸಾಯೋನಾರಾ ಸಾಯೋನಾರಾ ಸಾಯೋನಾರಾ |
ಹಿಂದಿ ಗೀತ ಚಿತ್ರ
ಅಲ್ಬರ್ಟ್ ಡಬ್ಲ್ಯು ಕೆಟೆಲ್ಬೆರ ‘ಇನ್ ಎ ಪರ್ಷಿಯನ್ ಮಾರ್ಕೆಟ್’