
ಚಿತ್ರ: ಹಮ್ ದೋನೋ
ಸಾಹಿತ್ಯ: ಸಾಹಿರ್ ಲುಧಿಯಾನ್ವಿ
ಸಂಗೀತ: ಜೈದೇವ್
ಗಾಯಕರು: ಮಹಮದ್ ರಫಿ಼, ಆಶಾ ಭೋಂಸ್ಲೆ
ಚಿತ್ರಿಕೆಯಲ್ಲಿ: ದೇವ್ ಆನಂದ್, ಸಾಧನಾ
ಮೂಲಗೀತೆಯ ಇಳಿಕೊಂಡಿ (Download Link)
ಕನ್ನಡ ಭಾವಾನುವಾದ | ಹಿಂದಿ ಮೂಲ | |
ಹೋಗದಿರು ನೀನೀಗಲೇ, | ಅಭೀ ನ ಜಾಓ ಛೋಡ಼್ ಕರ್ | |
ಮನವು ತಣಿವ ಮುನ್ನವೇ, | ಕೇ ದಿಲ್ ಅಭೀ ಭರಾ ನಹೀಂ | |
ಹೋಗದಿರು ನೀನೀಗಲೇ, | ಅಭೀ ನ ಜಾಓ ಛೋಡ಼್ ಕರ್ | |
ಮನವು ತಣಿವ ಮುನ್ನವೇ. | ಕೇ ದಿಲ್ ಅಭೀ ಭರಾ ನಹೀಂ | |
ಈಗ ತಾನೆ ಬಂದಿರುವೆ, | ಅಭೀ ಅಭೀ ತೋ ಆಈ ಹೋ, | |
ಈಗ ತಾನೆ...... | ಅಭೀ ಅಭೀ ತೋ...... | |
ಈಗ ತಾನೆ ಬಂದಿರುವೆ, | ಅಭೀ ಅಭೀ ತೋ ಆಈ ಹೋ, | |
ವಸಂತದಂತೆ ಅರಳಿರುವೆ, | ಬಹಾರ್ ಬನ್‌ಕೇ ಛಾಈ ಹೋ | |
ನರುಗಂಪು ಸ್ವಲ್ಪ ಹರಡಲಿ, | ಹವಾ ಜ಼ರಾ ಮಹಕ್ ತೋ ಲೇ, | |
ನೋಟ ಮನವ ಮರೆಯಲಿ, | ನಜರ್ ಜ಼ರಾ ಬಹಕ್ ತೋ ಲೇ | |
ಈ ಸಂಜೆ ದಾಟಿ ಹೋಗಲಿ, | ಯೇ ಶಾಮ್ ಢಲ್ ತೋ ಲೇ ಜ಼ರಾ, | |
ಈ ಸಂಜೆ ದಾಟಿ ಹೋಗಲಿ, | ಯೇ ಶಾಮ್ ಢಲ್ ತೋ ಲೇ ಜ಼ರಾ, | |
ಈ ಹೃದಯ ಮಿಡಿಯತೊಡಗಲಿ, | ಯೇ ದಿಲ್ ಸಮ್ಭಲ್ ತೋ ಲೇ ಜ಼ರಾ | |
ಈ ಮಿಲನಕೆ ನಾ ತಣಿಯುವೆ, | ಮೈಂ ಥೋಡೀ಼ ದೇರ್ ಜೀ ತೋ ಲೂಂ, | |
ಮಧುರಸದ ಹನಿಯ ಹೀರುವೆ, | ನಶೇ ಕೇ ಘೂಂಟ್ ಪೀ ತೋ ಲೂಂ | |
ಮಧುರಸದ ಹನಿಯ ಹೀರುವೆ, | ನಶೇ ಕೇ ಘೂಂಟ್ ಪೀ ತೋ ಲೂಂ | |
ಅನುನಯದ ಮಾತನಾಡುವಾ, | ಅಭೀ ತೋ ಕುಛ್ ಕಹಾಂ ನಹೀಂ, | |
ಅನುರಾಗ ಶೃಂಗವೇರುವಾ, | ಅಭೀ ತೋ ಕುಛ್ ಸುನಾ ನಹೀಂ | |
ಹೋಗದಿರು ನೀನೀಗಲೇ, | ಅಭೀ ನ ಜಾಓ ಛೋಡ಼್ ಕರ್ | |
ಮನವು ತಣಿವ ಮುನ್ನವೇ. | ಕೇ ದಿಲ್ ಅಭೀ ಭರಾ ನಹೀಂ | |
ತಾರೆ ಮಿನುಗ ತೊಡಗಿವೆ, | ಸಿತಾರೇ ಝಿಲ್‌ಮಿಲಾ ಉಠೇ, | |
ತಾರೆ ಮಿನುಗ ತೊಡಗಿವೆ | ಸಿತಾರೇ ಝಿಲ್‌ಮಿಲಾ ಉಠೇ, | |
ದೀಪ ಉರಿಯ ತೊಡಗಿವೆ | ಚರಾಗ಼್ ಜಗ್‌ಮಗಾ ಉಠೇ, | |
ಇನ್ನು ನನ್ನ ತಡೆಯದಿರು | ಬಸ್ ಅಬ್ ನ ಮುಝಕೋ ಟೋಕನಾ, | |
ಇನ್ನು ನನ್ನ ತಡೆಯದಿರು | ಬಸ್ ಅಬ್ ನ ಮುಝಕೋ ಟೋಕನಾ, | |
ನನ್ನ ಹಾದಿಗಡ್ಡ ಬರದಿರು | ನ ಬಢ಼ಕೇ ರಾಹ್ ರೋಕನಾ, | |
ಇನ್ನೂ ಉಳಿದರೆ ನಾನಿಲ್ಲೀ… | ಅಗರ್ ಮೈಂ ರುಕ್ ಗಈ ಅಭೀ, | |
ಹೋಗಲಾರೆನು ಇನ್ನಲ್ಲೀ | ತೋ ಜಾ ನ ಪಾಊಂಗೀ ಕಭೀ, | |
ಹೀಗೇ ಹೇಳುವೆ ನೀ ನಲ್ಲ | ಯಹೀ ಕಹೋಗೇ ತುಮ್ ಸದಾ, | |
ಮನಸಿಗಿನ್ನೂ ತಣಿವಿಲ್ಲಾ | ಕೇ ದಿಲ್ ಅಭೀ ನಹೀಂ ಭರಾ, | |
ಎಲ್ಲಿಯಾದರೂ ಮುಗಿವಾ | ಜೋ ಖತ್ಮ್ ಹೋ ಕಿಸೀ ಜಗಹ್ | |
ಕಥನವಂತೂ ಇದಲ್ಲಾ… | ಯೇ ಐಸಾ ಸಿಲ್‌ಸಿಲಾ ನಹೀಂ… | |
ಈಗ ಬೇಡ, ಈಗ ಬೇಡ. | ಅಭೀ ನಹೀಂ, ಅಭೀ ನಹೀಂ. | |
ಬಿಡು.. ಬೇಡ. ಬಿಡು.. ಬೇಡ. | ನಹೀಂ, ನಹೀಂ, ನಹೀಂ, ನಹೀಂ. | |
ಹೋಗದಿರು ನೀನೀಗಲೇ, | ಅಭೀ ನ ಜಾಓ ಛೋಡ಼್ ಕರ್, | |
ಮನವು ತಣಿವ ಮುನ್ನವೇ. | ಕೇ ದಿಲ್ ಅಭೀ ಭರಾ ನಹೀಂ. | |
ಅಪೂರ್ಣ ಆಸೆ, | ಅಧೂರೀ ಆಸ್, | |
ಅಪೂರ್ಣ ಆಸೆಯಲ್ಲೇ ತೊರೆದು, | ಅಧೂರೀ ಆಸ್ ಛೋಡ಼ಕೇ, | |
ಪ್ರೇಮ ದಾಹದಲ್ಲೇ ತೊರೆದು, | ಅಧೂರೀ ಪ್ಯಾಸ್ ಛೋಡ಼ಕೇ, | |
ದಿನವೂ ಹೀಗೇ ಹೋಗುವೆ, | ಜೋ ರೋಜ಼್ ಯೂಂಹೀ ಜಾಓಗೀ, | |
ನೀ ಪ್ರೀತಿ ಹೇಗೆ ಮಾಡುವೆ, | ತೋ ಕಿಸ್ ತರಹ ನಿಭಾಓಗೀ, | |
ಜೀವನದೀ ಹಾದಿಯಲ್ಲಿ, | ಕಿ ಜ಼ಿಂದಗೀ ಕೀ ರಾಹ್ ಮೇಂ, | |
ಯುವ ಹೃದಯಗಳನುರಾಗದಲ್ಲಿ, | ಜವಾಂ ದಿಲೋಂ ಕೀ ಚಾಹ್ ಮೇಂ, | |
ಮಜಲುಗಳೆನಿತೋ ಬರುವವು, | ಕಈ ಮುಕ಼ಾಮ ಆಏಂಗೇ, | |
ನಮ್ಮನೊರೆಗೆ ಹಚ್ಚುವುವು, | ಜೋ ಹಮ್ ಕೋ ಆಜ಼ಮಾಏಂಗೇ, | |
ಮುನಿಯದಿರು ನೀ ನಲ್ಲೆ, | ಬುರಾ ನ ಮಾನೋ ಬಾತ್ ಕಾ, | |
ಪ್ರೀತಿ ಇದುವೇ, ದೂರಲ್ಲ. | ಯೇ ಪ್ಯಾರ್ ಹೈ ಗಿಲಾ ನಹೀಂ. | |
ಹಾಂ! ಹೀಗೇ ಹೇಳುವೆ ನೀ ನಲ್ಲ, | ಹಾಂ, ಯಹೀ ಕಹೋಗೇ ತುಮ್ ಸದಾ, | |
ಮನಸಿಗಿನ್ನೂ ತಣಿವಿಲ್ಲಾ. | ಕೇ ದಿಲ್ ಅಭೀ ಭರಾ ನಹೀಂ. | |
ಹಾಂ! ಮನವಿನ್ನೂ ತಣಿದಿಲ್ಲ. | ಹಾಂ, ದಿಲ್ ಅಭೀ ಭರಾ ನಹೀಂ. | |
ಇಲ್ಲ. ಇಲ್ಲ. ಇಲ್ಲ. ಇಲ್ಲ. | ನಹೀಂ. ನಹೀಂ. ನಹೀಂ. ನಹೀಂ. |