Sunday, 29 May 2011

ಕಟು ಸತ್ಯದೆಡೆಗೊಂದು ವಿಡಂಬನೆಯ ನೋಟ!!

ಅಂತರಜಾಲದ ಸುದ್ದಿಯೆಳೆಯಲ್ಲಿ (News Thread) ನಾನೂ ನನ್ನ proxy ಹೆಸರಿನಿಂದ ಭಾಗವಹಿಸಿದ್ದ ಸಂವಾದವೊಂದರ ನಿರೂಪಣೆ. ಪುಟ್ಟ ವಿಷಯದಿಂದ ಮೊದಲ್ಗೊಂಡ ಸಂವಾದ, bhgteರವರ (ಅವರ ನಿಜ ನಾಮಧೇಯ ನಾನರಿಯೆ, ತಿಳಿಯುವ ಆಸೆ ಖಂಡಿತಾ ಇದೆ) ಸೌದಿಯ ಬಗೆಗಿನ ಕಟುಸತ್ಯಗಳ ವಿಡಂಬನೆಯ ನಿರೂಪಣೆಯೊಂದಿಗೆ ಅಂತ್ಯವಾಗುತ್ತದೆ.
 
(ಅನವಶ್ಯಕ ಭಾಗಗಳನ್ನು ತೆಗೆದು ಪ್ರೂಫ್ ರೀಡೀಂಗ್‌ ಮಾಡಿರುವುದರಿಂದ ಅಲ್ಪ ಸ್ವಲ್ಪ ಬದಲಾವಣೆಗೊಳಪಟ್ಟಿದ್ದರೂ ಸಂವಾದದ ಓಘ ಮತ್ತು ಭಾಗವಹಿಸಿದವರ ನೈಸರ್ಗಿಕ ನ್ಯಾಯಕ್ಕೆ ಧಕ್ಕೆಯಾಗದ ರೀತಿ ಇಲ್ಲಿ ನಿರೂಪಿಸಲಾಗಿದೆ.)

11-09-10 (06:11 PM) [-]  pkbys
ಅಕ್ಕ ತಂಗಿಯರ ಮೇಲೆ ದೌರ್ಜನ್ಯ ನಡೆಸಿದ---ಕೊಲೆ ಪಾತಕ---ಮತಾಂಧರನ್ನೂ, ಮತ್ತು ಬೇರೆ ಧರ್ಮಗಳು ಬದುಕಬೇಕು---ಬೇರೆಯವರಿಗೂ ನಮ್ಮಷ್ಟೇ ಬದುಕುವ ಹಕ್ಕಿದೆ; ಎಂಬ ಧಾರ್ಮಿಕ ಸ್ವಾತಂತ್ರ್ಯ ನೀಡುವ---ಗೌರವಿಸುವ---ದೇವರನ್ನು ನಂಬುವ---ನಂಬದಿರುವ ಎಲ್ಲರನ್ನೂ ಅವರವರ ಇಚ್ಚೆಗೆ ಬಿಟ್ಟು ಏನನ್ನೂ ಬಲವಂತವಾಗಿ ಹೇರದ ಜೀವನ ವಿಧಾನವನ್ನು ಆಚರಿಸುವ ಜನರನ್ನೂ ಒಂದೇ ತಕ್ಕಡಿಗೆ ಹಾಕುವ ಮೂರ್ಖ ಕೆಲಸ ಮಾಡಬಾರದು... Of-course, ಹೋರಾಟ ಇಸ್ಲಾಂ ವಿರುದ್ದ ಆಗಿರಬೇಕಿಲ್ಲ... ಹಾಗಿರಲಿ ಎಂದು ಯಾವ ಬುದ್ದಿ ಇರುವ ಮನುಷ್ಯ ಬಯಸುವುದೂ ಇಲ್ಲ.... ಹೋರಾಟ ಇಸ್ಲಾಂ ಹೆಸರಿನಲ್ಲಿ. ಮಸೀದಿಗಳನ್ನ ಭಯೋತ್ಪಾದನಾ ಚಟುವಟಿಕೆ, ಪಿತೂರಿ ಗೃಹ, ಮೊದಲಾಗಿ ಬಳಸಿಕೊಳ್ಳುವ ಜನರ ವಿರುದ್ದ...

11-09-10 (09:28 PM) [-]  sub
ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು
ದೂಷಿಸುವುದು ಯಾವ ನ್ಯಾಯ ? ಮುಸಲ್ಮಾನರ ಹೆಸರನ್ನು ಕೆಡಿಸಲು ಯಾರೂ ಬೇಕಾಗಿಲ್ಲ. ಮುಸಲ್ಮಾನನೆ ಆದ ಒಬ್ಬ ವ್ಯಕ್ತಿ ಸಾಕು. ಖುರಾನ್ ಓದಿಲ್ಲದ ಧರ್ಮದ ಗಂಧ ಗಾಳಿಯರಿಯದ ಇವರಿಂ, ಮಂಗ ವನವನ್ನು ಕೆಡಿಸಿದಂತೆ. ಆದ್ದರಿಂದ ಖುರಾನ್‌ ಓದಿರಿ, ಸತ್ಯ ಅರಿಯಿರಿ.
 
11-09-10 (11:30 PM) [-] pkbys
ಖುರಾನ್‌ನ ಯಾವ ಸತ್ಯ ಅರಿಯಬೇಕು subರವರೆ, ಮಕ್ಕಾ ಜಗತ್ತಿನ ಕೇಂದ್ರ ಎಂಬ ಸತ್ಯವನ್ನೇ? (ನನಗೆ ತಿಳಿದಂತೆ ಅದು ಸತ್ಯವಲ್ಲ ಭೂಮಿ ಗೋಳಾಕಾರದಿಂದ ತಟ್ಟೆಯಾಕಾರಕ್ಕೆ ಬಂದರೆ ಸಾಧ್ಯವೇನೊ), ಹೆಸರಿನಿಂದ ಮೊದಲ್ಗೊಂಡು ಎಲ್ಲವೂ ಅರೇಬಿಕ್‌ನಲ್ಲಿರಬೇಕು ಎಂಬುದೇ? (ಎಲ್ಲವೂ ಸಮಾನ ಎಂದು ಭೋದಿಸಿದೆ ಎಂದು ಹೇಳಲಾದ ಧರ್ಮದ ಅರೇಬಿಕ್ ಹೇರಿಕೆ.. ಅರೇಬಿಕ್ ಹೆಚ್ಚು ಸಮಾನ?!)... ಇರಲಿ ಬರೀ ತೆಗಳುವುದೇ ನನ್ನ ಉದ್ದೇಶವಾದರೆ ನಾನು ಖುರಾನ್ ಮತ್ತು ಸತ್ಯದ ಮೇಲೆ ಅಪಚಾರ ಎಸಗಿದಂತೆ.... ಖುರಾನ್ ಅಂತಿಮ ಎಂಬ ಖುರಾನ್‌ನ ಸ್ವಘೋಷಿತತೆಯನ್ನು ಬಿಟ್ಟರೆ ಅದರಲ್ಲಿರುವ ಮಾನವೀಯ ಅಂಶಗಳು, ಅಲ್ಲಿರುವ Maturity, ಅಲ್ಲಿರುವ ಐಕ್ಯತೆಯೆಡೆಗಿನ ಒತ್ತು, ಅದು ರೂಪಿಸಲು ಬಯಸುವ ಸಮಾಜ, ಪ್ರತಿಪಾದಿಸುವ ನೈತಿಕ ಮೌಲ್ಯಗಳು ಅಂದಿನ ಅನಾಗರಿಕ, ಬರ್ಬರ ಅರಬೀ ಜನಾಂಗಕ್ಕೆ ವರದಾನವೇ ಸರಿ.. ಪ್ರವಾದಿ(ಸ.ಅ.)ರವರು ಆ ಮಟ್ಟಿಗೆ ಜನರಿಗೆ ಉತ್ತಮ ದಾರಿಯನ್ನೇ ತೋರಿದರು.. ಕಾಲಮಾನಗಳು ಬದಲಾದಂತೆ ಇಸ್ಲಾಂ ಹೆಚ್ಚು ಮಾನವತೆಯೆಡೆಗೆ ಬರಬೇಕಾದ ಚಲನಶೀಲತೆಯನ್ನೇ ಕಳೆದುಕೊಂಡು, ಮತಾಂಧತೆಯೆಡೆಗೆ ಜಾರಿದ ಧರ್ಮವಾಗಿ ಬದಲಾಗಿದ್ದೂ ಕೂಡ ಖುರಾನ್‌ನ ಹಿನ್ನಡೆಯಲ್ಲವೇ.. ಮುಲ್ಲಾ ಮೌಲ್ವಿಗಳ ಹಿಡಿತವೆಂದು ನೀವು ಅದನ್ನ ಮುಲ್ಲಾಗಳ ಮೇಲೆ ಹೇರಿದರೂ ಖುರಾನ್ ಜನರಿಗೆ ಯೋಚಿಸುವ, ಚಿಂತಿಸುವ ಸ್ವಾತಂತ್ರ್ಯ ಕೊಡಲಿಲ್ಲ ಎನ್ನುವುದೂ ಸತ್ಯವಲ್ಲವೇ...
 
12-09-10 (10:36 AM) [-] sub
ಖುರಾನ್ ದೇವನ ಅಂತಿಮ ವಾಣಿ. ಅದರಲ್ಲಿರುವ ಮಾನವೀಯ ಅಂಶಗಳು, ಅಲ್ಲಿರುವ Maturity, ಅಲ್ಲಿರುವ ಐಕ್ಯತೆಯೆಡೆಗಿನ ಒತ್ತು, ಅದು ರೂಪಿಸಲು ಬಯಸುವ ಸಮಾಜ, ಪ್ರತಿಪಾದಿಸುವ ನೈತಿಕ ಮೌಲ್ಯಗಳು ಅಂದಿನ ಅನಾಗರಿಕ, ಬರ್ಬರ ಅರಬೀ ಜನಾಂಗಕ್ಕೆ ವರದಾನವೇ ಸರಿ.. ಪ್ರವಾದಿ(ಸ.ಅ.)ರವರು ಆ ಮಟ್ಟಿಗೆ ಜನರಿಗೆ ಉತ್ತಮ ದಾರಿಯನ್ನೇ ತೋರಿದರು.. ಖುರಾನ್ ಪ್ರಪಂಚ ದ ಎಲ್ಲಾ ಭಾಷೆಗಳಿಗೆ ಅನುವಾದವಾಗಿದೆ. ದಯವಿಟ್ಟು ಅದರ ನಿಷ್ಪಕ್ಷಪಾತವಾದ ಅದ್ಯಯನ ಮಾಡಿ. ಇಸ್ಲಾಮಿಗೂ ಮುಸ್ಲಿಮ್ ನಾಮಧಾರಿಗಳಿಗೂ ಇರುವ ವ್ಯತ್ಯಾಸ ತಿಳಿಯುತ್ತದೆ.

12-09-10 (10:44 AM) [-] pkbys
ನಾನೇ ಬರೆದ ಅರ್ಧ ಕಾಮೆಂಟ್ ಅನ್ನು ಕಾಪಿ ಪೇಸ್ಟ್ ಮಾಡುವುದರ ಮೂಲಕ ಒಪ್ಪಿದಕ್ಕೆ ಧನ್ಯವಾದಗಳು subರವರೆ, ಅದು ದೇವನ ಅಂತಿಮ ವಾಣಿ ಎಂಬುದಕ್ಕೆ ನನ್ನ ವಿರೋಧವಿದೆ.. ಹಾಗೆಯೇ... ನನ್ನ ಪೂರ್ಣ ಕಾಮೆಂಟ್ಗೆ ತಾವು ಉತ್ತರಿಸಿದರೆ ಚೆನ್ನಾಗಿತ್ತು...

12-09-10 (10:45 AM)  [-] das
ಭಾಷೆಗಳಿಗೆ ಅನುವಾದವಾಗಿದೆ-----------ಯಾರ subsidyಯಲ್ಲಿ ಮಾಡಿದಿರೊ?

12-09-10 (11:26 AM)[-] pkbys
ಇಲ್ಲಾ ದಾಸ್‌‌ರವರೆ, ಸಬ್ಸಿಡಿ ಯಾವುದೂ ಇಲ್ಲ.. ಮಹಮದೀಯರನ್ನ ಕ್ರೈಸ್ತರನ್ನ ಕೆಲವು ವಿಷಯಗಳಲ್ಲಿ ಮೆಚ್ಚಲೇಬೇಕು. ಅದರಲ್ಲಿ ಒಂದು ಅವರ Organization ಮತ್ತು ಧರ್ಮನಿಷ್ಠೆ.. ಗುಣಕೆ ಮತ್ಸರವೇಕೆ.. ಈ ವಿಷಯದಲ್ಲಿ ನಾವು ಅವರಿಂದ ಕಲಿಯಬೇಕಾದದ್ದು ಇದೆ... ಸಾಕಷ್ಟು ವಿದೇಶಿ ಹಣ ಈ ಅನುವಾದ, ಧರ್ಮಪ್ರಚಾರ ಮುಂತಾದ ಚಟುವಟಿಕೆಗಳಿಗೆ ಹರಿಯುತ್ತದೆ.. ಸಬ್ಸಿಡಿಯ ಅಗತ್ಯವಿಲ್ಲ...

12-09-10 (11:28 AM) [-] das
ಹಜ್‌ ಯಾತ್ರೆ ಸಬ್ಸಿಡಿ ಗಮನಿಸಿ

12-09-10 (11:56 AM) [-] pkbys
ಹಜ್ ಯಾತ್ರೆಗೆ ಸಬ್ಸಿಡಿ ಸಿಗುತ್ತದೆ.. ಆದರೆ ನನ್ನ ಅರಿವಿನ ಪರಿಧಿಯಲ್ಲಿ ಹೇಳಬೇಕೆಂದರೆ. ಸಾಲ ಮಾಡದೆ, ವಂತಿಗೆ ಪಡೆಯದೆ, ಸ್ವಯಾರ್ಜಿತ ಹಣದಲ್ಲಿ ಹಜ್ ಮಾಡಬೇಕೆಂದು ಖುರಾನ್ ವಿಧಿಸುತ್ತದೆ.. ಸಬ್ಸಿಡಿ ಪಡೆದು ಹಜ್ ಮಾಡುವುದು ಧರ್ಮಭ್ರಷ್ಟತೆ.. ಸರಕಾರಗಳು ಮಹಮದೀಯರನ್ನ ಧರ್ಮಭ್ರಷ್ಟರನ್ನಾಗಿ ಮಾಡುತ್ತಿದೆ... ಆದರೆ ಸಬ್ಸಿಡಿ ಹಣದಲ್ಲಿ ಧರ್ಮಭ್ರಷ್ಟತೆಯೋ ಅಲ್ಲವೋ ಯಾರಾದರೂ ಮಹಮದೀಯರೇ ತಿಳಿಸುವುದು ಉತ್ತಮ..

12-09-10 (10:52 AM) [-] sub
pkbysರವರೆ ಪ್ರವಾದಿ ಜೀವನ ಮತ್ತು ಸಂದೇಶವನ್ನು ಅರಿತರೆ ನಿಮ್ಮ ಸಂಶಯ ನಿವಾರಣೆಯಾಗುತ್ತದೆ. ಸತ್ಯವನ್ನು ಅರಿಯುವ ಮನಸ್ಸಿದ್ದರೆ, ಇನ್ನೊಬ್ಬರ ಸಹಾಯವಿಲ್ಲದೇ, ನಿಮ್ಮ ಸ್ನೇಹಿತರ ಮೂಲಕ ಪ್ರಯತ್ನಿಸಿ.

12-09-10 (11:47 AM) [-] pkbys
sub ರವರೆ. ನಿಜಕ್ಕೂ ನಿಮ್ಮ ಸಂಸ್ಕಾರಯುತ ಬರವಣಿಗೆಗೆ ಮಾರುಹೋಗಿದ್ದೇನೆ.. ನೀವು ನಿಜವಾದ ಧಾರ್ಮಿಕ ಮುಸ್ಲಿಂ, ಪೂರ್ಣವಾಗಲ್ಲದಿದ್ದರೂ ಖುರಾನ್‌ನ ಬಗ್ಗೆ ನಾನು ಬಲ್ಲೆ... ನಿಜಕ್ಕೂ ಅದು ಅಂದಿನ ದಿನಕ್ಕೆ ಅಂದಿನ ದಿಕ್ಕೆಟ್ಟು ತಮ್ಮ ತಮ್ಮಲ್ಲೇ ಬಡಿದಾಡುತ್ತಿದ್ದ, ಮದ್ಯ, ಮದಿರೆಯ ದಾಸರಾಗಿದ್ದ, ಅಂದಿನ ಇಸ್ರೇಲ್ನಲ್ಲಿದ್ದ ಇವರಿಗಿಂತ ಆಧುನಿಕತೆಯಲ್ಲಿ ಮುಂದುವರಿದ ಜನರ ದಬ್ಬಾಳಿಕೆಗೆ ತುತ್ತಾಗಿದ್ದ, ಹೆಣ್ಣನ್ನು ಭೋಗವಸ್ತುವೆಂದು ಕಾಣುತ್ತಿದ್ದ, ಆ ಕಾರಣಕ್ಕಾಗಿಯೇ ಹೆಣ್ಣು ಮಕ್ಕಳು ಹುಟ್ಟುತ್ತಿದ್ದಂತೆ ರಕ್ಷಿಸಬೇಕಾಗುತ್ತದೆ ಎಂಬ ಜವಾಬ್ದಾರಿಯಿಂದ ನುಣುಚಿಕೊಳ್ಳಲ್ಲು ಮರಳಿನಲ್ಲಿ ಹೂಳುತ್ತಿದ್ದ, ಅನಾಗರಿಕ ಅಲೆಮಾರಿ ಅರಬೀ ಜನಾಂಗಕ್ಕೆ, ಸುರವಾಣಿಯೇ ಹೌದು.. ಪ್ರವಾದಿಗಳು ಅರಬರನ್ನು ಬರ್ಬರತೆಯಿಂದ ನಾಗರಿಕತೆಯ ದಾರಿಯೆಡೆಗೆ ಹೊರಳಿಸಿದರು ಎಂಬ ಬಗ್ಗೆ ಅವರ ಬಗ್ಗೆ ಎಂದೆಂದಿಗೂ ನನ್ನ ಹೃತ್ಪೂರ್ವಕ ನಮನಗಳಿವೆ. ಪ್ರವಾದಿ ಮಹಮ್ಮದ್(ಸ..)ರ ಮಾನವೀಯತೆಯ ಬಗ್ಗೆಯೂ ಸಾಕಷ್ಟು ಕೇಳಿರುವೆ. ಓದಿರುವೆ. ಅವರು ಚೇಳಿನಿಂದ ಕುಟುಕಿಸಿಕೊಂಡೂ ಅದನ್ನ ಬದುಕಿಸಿದ ಕಥೆ (ಸತ್ಯವೋ ಸುಳ್ಳೋ ಏನಾದರೂ ಆಗಿರಲಿ) ನಗೆ ಮಾನವೀಯತೆಯ ಪಾಠ ಕಲಿಸಿದೆ.. ನಾನಾಗಲೇ ಹೇಳಿದಂತೆ ಗುಣಕೆ ಮತ್ಸರವೇಕೆ. ಅವರು ನಿಜಕ್ಕೂ ಯೋಗ ಪುರುಷರು. ಮಾನವತೆಗೆ ದೇವನಿತ್ತ ವರ. ಆದರೆ, ಖುರಾನ್ ಅಂತಿಮ ಸುರವಾಣಿಯೆಂಬ claim ಪ್ರವಾದಿಗಳು ದೈವ ಮಾತಾನಾಡಿದ ಅಂತಿಮ ವ್ಯಕ್ತಿ ಎಂಬ ಆಲೋಚನೆ. ಮಕ್ಕಾ ಜಗತ್ತಿನ ಕೇಂದ್ರವೆಂಬ ಮಾತು, ಮೊದಲಾದ ನುಡಿಗಳನ್ನು ನಾನು ಒಬ್ಬ ವಿಚಾರವಂತನಾಗಿ ಒಪ್ಪಲಾರೆ. ತಾನೇ ಬಹಳಷ್ಟು (ಬಹುಶ: 14) ಮದುವೆಯಾಗಿ, 4 ಹೆಂಡತಿಯರವರೆಗೆ ಮದುವೆಯಾಗಲು ಮಾತ್ರ ಅನುಮತಿ ನೀಡಿದ ಪ್ರವಾದಿಯವರ ನಡೆಯನ್ನು ಒಪ್ಪಲಾರೆ.. (ನಾನೇನೂ ಬಹುಪತ್ನಿತ್ವವನ್ನ ಸಮರ್ಥಿಸುತ್ತಿಲ್ಲ. ಯಾವುದನ್ನ ತಾನು ಅನುಸರಿಸುತ್ತಿಲ್ಲವೋ ಅದನ್ನ ಹೇಳುವ ನೈತಿಕ ಅಧಿಕಾರ ಅವರಿಗಿಲ್ಲ ಎಂಬ ಕಾರಣಕ್ಕೆ) ಜಗತ್ತಿನ ಯಾವುದೇ ಮೂಲೆಯಿಂದ ಒಳ್ಳೆಯದು ಬಂದರೂ ತೆಗೆದುಕೊ ಎಂಬ ಋಗ್ವೇದದ ನುಡಿಯನ್ನು ಪಾಲಿಸುವವ ನಾನು, ಖುರಾನ್ ನಾನು ತಿಳಿಯದ ಆದರೆ ಅತ್ಯುತ್ತಮ ವಿಚಾರಗಳನ್ನು ತಿಳಿಸುವುದಿದ್ದರೆ. ಖಂಡಿತ ತೆಗೆದುಕೊಳ್ಳಲು ಅಡ್ಡಿಯೇನಿಲ್ಲ.. ಹಿಂದುಗಳು ಮೊದಲಿನಿಂದಲೂ ಮುಕ್ತ ಮನಸ್ಸಿನ ಜನ. ಅದು ನಮಗೆ ಜನ್ಮತಃ ಬಂದ ಸಂಸ್ಕಾರ.. ನಾನು ಕೇಳುತ್ತಿರುವುದು, ಅಂತಹ ಮುಕ್ತ ಮನಸ್ಸು ಮುಸ್ಲಿಂರಲ್ಲಿದೆಯೇ ಎಂದು..

12-09-10 (10:54 AM) [-]  sub
pkbys ರವರೆ ಪ್ರವಾದಿ ಮಹಮ್ಮದ್‌ (ಸ.ಅ.) ಜೀವನ ಮತ್ತು ಸಂದೇಶವನ್ನು ಅರಿತರೆ ನಿಮ್ಮ ಸಂಶಯ ನಿವಾರಣೆಯಾಗುತ್ತದೆ. ಸತ್ಯವನ್ನು ಅರಿಯುವ ಮನಸ್ಸಿದ್ದರೆ, ಇನ್ನೊಬ್ಬರ ಸಹಾಯವಿಲ್ಲದೇ, ನಿಮ್ಮ ಸ್ನೇಹಿತರ ಮೂಲಕ ಪ್ರಯತ್ನಿಸಿ. ಒಂದು ವಿಚಾರವನ್ನು ಅರಿತು ಪ್ರತಿಕ್ರಯಿಸಿ. ಧನ್ಯವಾದಗಳು.

12-09-10 (11:05 AM)[-] pakya
ಮಾನ್ಯ..subರವರೆ... ನಮ್ಮ ಸಂಶಯ ಹಾಗಿರಲಿ.. ಭಯೋತ್ಪಾದಕರು "ಪ್ರವಾದಿ ಮಹಮ್ಮದ್‌ (ಸ.ಅ.) ಜೀವನ ಮತ್ತು ಸಂದೇಶ" ವನ್ನ ಅರಿತಿಲ್ಲವೊ? ಮತ್ಯಾಕೆ ಅವರು ಧರ್ಮದ ಹೆಸರಿನಲ್ಲಿ ಹೋರಾಡುತ್ತಿದ್ದಾರೆ? ಅರಿವಿಲ್ಲವಾದರೆ ಅವರಿಗೆ ಯಾಕೆ ನಿಮ್ಮ ಸಮಾಜದ ಗೌರವಾನ್ವಿತರು ಹಾಗೂ ತಿಳಿದವರು ಅವರಿಗೆ ತಿಳಿಸಿ ಕೊಡುವ ಪ್ರಯತ್ನವನ್ನು ಮಾಡುತ್ತಿಲ್ಲ? ಅರಿವಿದ್ದರೆ ಅವರು ಪ್ರವಾದಿಯವರ ವಿರುದ್ದ ಹೋದಂತಾಗಲಿಲ್ಲವೊ? ಹಾಗಾದಲ್ಲಿ ಅವರು ಕಾಫಿರ್ ಅಲ್ಲವೆ? ಧನ್ಯವಾದಗಳು...

12-09-10 (12:47 PM) [-]  Basheer Bagalkot
ನನಗೆ ಹಿಂದೂಗಳನ್ನು ನೋಡಿದರೆ ಅಸೂಯೆ!! ಹಿಂದುಗಳ ಸ್ವಾತಂತ್ರ್ಯ ಮತ್ತು ಉದಾರತೆಗೆ ಸಮನಾಗಿರುವುದು ಬೇರೆಲ್ಲಿಯಾದರೂ ಇರುವುದೇ? ನಿಮ್ಮ ಆಚಾರ್ಯರು ಮತ್ತು ಗುರುಗಳನ್ನು ಯಾವುದೇ ಭಯ ಮತ್ತು ಅಂಜಿಕೆಯಿಲ್ಲದೆ ಪ್ರಶ್ನೆ ಮಾಡಲು ನೀವು ಸ್ವತಂತ್ರರು. ನೀವು ಯಾವುದೇ ಭಯವಿಲ್ಲದೆ ದೈವವನ್ನು ನಿರಾಕರಿಸಬಹುದು (ಬೇಕಾದರೆ ಬೈಗುಳದ ಮಳೆ ಸುರಿಸಬಹುದು). ಇಷ್ಟವಿದ್ದರೆ ಧರ್ಮಪಾಲನೆ ಮಾಡಬಹುದು ಇಲ್ಲದಿದ್ದರೆ ಇಲ್ಲ. ನೀವು ಯಾಕೆ ಧರ್ಮಪಾಲನೆ ಮಾಡಲಿಲ್ಲ ಎಂದು ಯಾರು ಕೇಳುವುದೂ ಇಲ್ಲ!! ಇಷ್ಟೆಲ್ಲಾ ಮಾಡಿದರೂ ಯಾರೂ ಸಾಮಾಜಿಕ ಬಹಿಷ್ಕಾರ ಹಾಕುವುದಿಲ್ಲ! ನಮ್ಮ ಸಮಾಜವನ್ನು ನೋಡಿದರೆ ಮನಸ್ಸು ರೋಸಿಹೋಗುತ್ತದೆ. ದೇವರಲ್ಲಿ ನನ್ನ ಬೇಡಿಕೆ ಇಷ್ಟೆ- ಮುಂದಿನ ಜನ್ಮದಲ್ಲಿ ನನ್ನನ್ನು ಹಿಂದು ತಾಯಿಯ ಹೊಟ್ಟೆಯಲ್ಲಿ ಹಾಕು - ಆ ತಾಯಿ ಅತ್ಯಂತ ಬಡತನದಿಂದ ಕೂಡಿದ ಹಿಂದುಳಿದ ಜನಾಂಗದವಳಾಗಿದ್ದರೂ ಪರವಾಗಿಲ್ಲ. ಓ ದೇವರೇ ನನ್ನ ಬೇಡಿಕೆಯನ್ನು ಈಡೇರಿಸು.
[ ಬೇರೊಂದು ಸುದ್ದಿಯೆಳೆಯಲ್ಲಿ ಈ ಸಂವಾದಕ್ಕೆ ಸುಮಾರು ಒಂದು ತಿಂಗಳು ಮೊದಲು ಬಷೀರ್ ಬರೆದಿದ್ದ ಕಾಮೆಂಟ್ ಅನ್ನು ಅವರ ಮೇಲಿನ ಮಾತುಗಳ ಹಿನ್ನೆಲೆಯಾಗಿ ಕೆಳಗೆ ಕೊಡಲಾಗಿದೆ.
10-08-10 (07:00 PM) [-] Basheer Bagalkot
ನಮ್ಮ ತಂದೆಯವರು ಹೇಳುತ್ತಿದ್ದರು, ಅವರ ಅಜ್ಜನವರು ಹಿಂದುಗಳಾಗಿದ್ದರಂತೆ, ಅವರ ಹೆಸರು ರುದ್ರೇಶ್ ಬಾಗಲಕೋಟೆ. ಒಬ್ಬ ಮುಸಲ್ಮಾನ ಅವರಿಗೆ ಗೊತ್ತಾಗದ ಹಾಗೆ ಗೋ ಮಾಂಸವನ್ನು ತಿನ್ನಿಸಿಬಿಟ್ಟನಂತೆ! ಆಗಿನ ‌ಅವರನ್ನು ಹಿಂದುಗಳು ‌ಸೇರಿಸಲಿಲ್ಲವಾದ್ದರಿಂದ ಅವರು ಬಲವಂತವಾಗಿ ಮುಸ್ಲಿಮರಾಗಬೇಕಾಯಿತಂತೆ!! ಇದು ನನ್ನ ಒಬ್ಬನ ಚರಿತ್ರೆ ಮಾತ್ರವಲ್ಲ, ಬಹುತೇಕ ಭಾರತೀಯ ಮುಸ್ಲಿಮರ ಚೆರಿತ್ರೆ. ಹಿಂದು ಧರ್ಮದಲ್ಲಿ, ನಮ್ಮ ಅಜ್ಜನವರನ್ನು ಶುದ್ಧಿಗೊಳಿಸಿ ಪುನಃ ಹಿಂದುವನ್ನಾಗಿ ಮಾಡುವ ಸ್ಥಿತಿ ಆಗ ಇರಲಿಲ್ಲ. ಆದ್ದರಿಂದ ನಾವೆಲ್ಲಾ ಮುಸ್ಲಿಮರಾಗಿಯೇ ಬಾಳಬೇಕಾಯಿತು!! ]

 12-09-10 (01:11 PM) [-] pkbys
ಮುಂದಿನ ಜನ್ಮವೇಕೆ ಬಷೀರ್ರೇ, ದೇವೇಗೌಡನ* ಮುಂದಿನ ಜನ್ಮದಲ್ಲಿ ಮುಸ್ಲಿಂ ಮಾಡು ಎಂಬ ಬೇಡಿಕೆಯಂತಾಯಿತಲ್ಲವೇ.. ನೀವೀಗಾಗಲೇ ಹಿಂದು... ಮುಂದಿನ ಜನ್ಮದ ಪ್ರಶ್ನೆ ಯಾವ ಮಹಮದೀಯನೂ ಮಾಡುವುದಿಲ್ಲ... ಅಲ್ಲಿ ಮುಂದಿನ ಜನ್ಮವಿಲ್ಲವೇ ಇಲ್ಲ.. ಆ concept ಅಲ್ಲಿ ನಿಷಿದ್ದ... ನೀವೀಗಾಗಲೇ ಒಬ್ಬ ಪರಿಶುದ್ದ ಹಿಂದೂ... ಬಾಕಿ ಇರುವುದು ಪೇಪರ್ ವರ್ಕ್ ಅಷ್ಟೇ.. ಅದು ಮಾಡಿದರೂ ಆಯ್ತು.. ಮಾಡದಿದ್ದರೂ ಆಯ್ತು.. ನೀವೇಕೆ ನಿಮ್ಮನ್ನು ಹಿಂದುವಲ್ಲ ಎಂದುಕೊಳ್ಳುವಿರಿ.. ನಿಮ್ಮ ಅರಾಬಿಕ್ ಹೆಸರಿನಿಂದಲೇ... ಅದನ್ನು ಬದಲಿಸಬಹುದು... ಅದಿಟ್ಟುಕೊಂಡು ನೀವು ಹಿಂದುವಾದರೂ ಯಾವ ಹಿಂದುವೂ ಹೆಸರೇಕೆ ಅರಾಬಿಕ್ ಎಂದು ಕೇಳುವುದಿಲ್ಲ.. ಮುಕ್ತ ಮನಸಿನ ಜನ ನಾವು.. ನಾವು ನಿಮಗೆ ಸ್ವಾಗತ ಕೋರುವುದಿಲ್ಲ... ಏಕೆಂದರೆ (ಮುಂದಿನ ಜನ್ಮದ ಬಗ್ಗೆ ಮಾತನಾಡಿ) ನೀವೀಗಾಗಲೇ ಹಿಂದುವಾಗಿದ್ದಿರಿ. ಹೊರಗಿನವರಿಗೆ ಸ್ವಾಗತ, ನೀವು ಈಗಾಗಲೇ ನಮ್ಮಲ್ಲೊಬ್ಬರು...

(*ದೇವೇಗೌಡ ಮುಂದಿನ ಜನ್ಮದಲ್ಲೇಕೆ ಮುಸ್ಲಿಂ ಆಗಬೇಕು, ಈಗಲೇ ಮತಾಂತರವಾದರೆ ಯಾರು ತಡೆಯುತ್ತಾರೆ... ಇಸ್ಲಾಂನಲ್ಲಿ ಮುಂದಿನ ಜನ್ಮ ಎಂಬ concept ನಿಷಿದ್ಧ ಎಂಬ ಅರಿವಿಲ್ಲವೇ?! ಈ ಮಾತುಗಳೆಲ್ಲಾ ವೋಟ್‌ಬ್ಯಾಂಕ್ ರಾಜಕಾರಣ ಎಂದು ಅಲ್ಪಸಂಖ್ಯಾತ ಜನಾಂಗಕ್ಕೆ ಗೊತ್ತಾಗದೋ ಹೇಗೆ?!) 

12-09-10 (01:52 PM) [-]  Basheer Bagalkot
pkbys, ಖುರಾನ್‌‌ನಲ್ಲೂ ಅಲ್ಲಲ್ಲಿ ಕೆಲವು ಒಳ್ಳೆಯ ಅಂಶಗಳಿರುವುದು ನಿಜ. ಇಸ್ಲಾಮಿಗೆ ಎರಡು ಆಧಾರಗಳಿವೆ, ಒಂದು ಖುರಾನ್‌ ಮತ್ತೊಂದು ಹದಿಸ್. ಖುರಾನ್‌ ನೇರವಾಗಿ ಮೊಹಮ್ಮದ್ದರಿಗೆ ದೇವರಿಂದ ದೊರೆತ ಸಂದೇಶವೆಂದೂ ಮತ್ತು ಹದಿಸ್ ಮೊಹಮ್ಮದ್ದರು ತಮ್ಮ ಜೀವಿತಾವಧಿಯಲ್ಲಿ ವಿವಿಧ ಸಂದರ್ಭಗಳಲ್ಲಿ ನಡೆದುಕೊಂಡ ರೀತಿ ನೀತಿಗಳೆಂದೂ ಹೇಳುತ್ತಾರೆ. ಖುರಾನ್‌‌ನಲ್ಲಿ ಇರುವ ಕೆಲವು ಒಳ್ಳೆಯ ಅಂಶಗಳು ಮೊಹಮ್ಮದ್ದರು ಮಕ್ಕಾದಿಂದ ಯಾತ್ರಿಬ್ (ಮದೀನ) ನತ್ತ ಹೋಗುವುದಕ್ಕೆ ಮುಂಚೆ ಅವರಿಗೆ ದೊರೆತ ಸಂದೇಶಗಳು ಎಂದು ಹೇಳುತ್ತಾರೆ. ಇದು ಕೇವಲ ಮಕ್ಕಾದ ಯಹೂದಿಗಳನ್ನೂ ಮತ್ತು ಕ್ರೈಸ್ತರನ್ನು ಇಸ್ಲಾಮಿನತ್ತ ಸೆಳೆಯಲು ಹೂಡಿದ ತಂತ್ರ. ಅತೀ ಕ್ರೂರವಾದ ಖುರಾನ್‌‌ನ ಸಂದೇಶವೆಲ್ಲವೂ ಮೊಹಮ್ಮದ್ದರಿಗೆ ಯಾತ್ರಿಬ್‌ನಲ್ಲಿ ಅಲ್ಲಾ ನಿಂದ ಉಪದೇಷಿಸಲ್ಪಟ್ಟಿತು ಎಂದು ಹೇಳುತ್ತಾರೆ. ಇದು ಯೆಹೂದಿಗಳನ್ನು ಮತ್ತು ಕ್ರೈಸ್ತರನ್ನು ಕೊಲ್ಲಲು ಮೊಹಮ್ಮದ್ದರು ತಮ್ಮ ಅನುಯಾಯಿಗಳಿಗೆ ನೀಡಿದ ಆದೇಶ ಎಂದೇ ಪರಿಗಣಿಸುತ್ತಾರೆ. ಖುರಾನ್‌ ಮತ್ತು ಹದಿಸ್ಗಳು ಮುಸಲ್ಮಾನರನ್ನು ಸದಾಚಾರ ಸಂಪನ್ನರಾಗಿರಲು ಬಿಡುವುದಿಲ್ಲ!! ಖುರಾನ್‌ ಮತ್ತು ಹದಿಸ್ನಿಂದ ಬಿಡುಗಡೆ ಯಾದಾಗ ಮುಸ್ಲಿಮರಿಗೆ ಹಿಂಸೆ ಮತ್ತು ಕ್ರೌರ್ಯದಿಂದ ಬಿಡುಗಡೆ. ಕಾಲವೇ ಇದನ್ನು ಮಾಡುತ್ತದೆ.

 
12-09-10 (02:20
PM) [-] pkbys
ಡಾ. ಜಾಕಿರ್ ನಾಯಕ್
ಮತಗಳ ತುಲನಾತ್ಮಕ ಅಧ್ಯಯನದ ವಿದ್ವಾಂಸ
(Scholar of Comparative Study of Religion)

ನಾನು ಈ ವಿಚಾರವಾಗಿ ಜಾಕಿರ್ ನಾಯಕ್‌ ತನ್ನ ಕಾರ್ಯಕ್ರಮವೊಂದರಲ್ಲಿ ಕೇಳಿದ ಮಹನೀಯರಿಗೆ ಉತ್ತರಿಸಿದ್ದನ್ನು ಕೇಳಿದ್ದೆ.... ಖುರಾನ್‌ನ ಕ್ರೂರ (ಮುಸ್ಲಿಂಮೇತರರನ್ನು ಕೊಲ್ಲುವ, ದಾಳಿ ಮಾಡುವ) ವಿಚಾರಗಳು ಕೇವಲ ಆ ಕಾಲಕ್ಕೆ ಮಾತ್ರ ಸಂಬಂಧಪಟ್ಟ ಈಗ ಬೇಕಿಲ್ಲದ ವಿಷಯವೆಂದೇ ಹಾರಿಕೆಯ ಉತ್ತರ ಕೊಟ್ಟಿದ್ದರು ಜಾಕಿರ್... ಉತ್ತಮ ವಿಚಾರಗಳು ಎಲ್ಲೆಡೆಯೂ ಸಿಗುತ್ತವೆ... ಪ್ರಕೃತಿಗಿಂತ ದೊಡ್ಡ ಪಾಠಶಾಲೆ ಬೇಕೆ... ಮಾನವೀಯತೆ, ಕ್ರೌರ್ಯ, ಎರಡನ್ನೂ ಪ್ರಕೃತಿ ನಮಗೆ ಧಾರಾಳವಾಗಿ ಕಲಿಸುತ್ತದೆ.... ಐಕ್ಯತೆ(brotherhood), ಒಬ್ಬನ ಕೊಲೆ ಮಾನವತೆಯ ಕೊಲೆ, ಮೊದಲಾದ ವಿಷಯಗಳನ್ನು ಖುರಾನ್‌ನಿಂದ filter ಮಾಡಿ ಎತ್ತಿಕೊಳ್ಳಬಹುದು.. ಆದರೆ ನಮ್ಮಲ್ಲೇ ಅವು ಬೇಕಾದಷ್ಟು ಸಲ ಬಂದು ಹೋಗಿರುವ ಪ್ರಾಚೀನ ವಿಚಾರ.. ಅರಬರಿಗೆ ಅದು ಅಂದಿಗೆ ಹೊಸದಿತ್ತು... ಅವರಿಗದು ಬೇಕಿತ್ತು... ಆದರೆ ಅದರಿಂದ ಅವರು ಮುಂದೆ ಮಾಡಿದ ಅನಾಹುತ ಮಾನವತೆಯ ಮೇಲಿನ ಅಪಚಾರ.. 12-09-10 (04:55 PM) [-]  sub

ಯುದ್ಧ ಕಾಲದಲ್ಲಿ ಎಲ್ಲಾ ಧಾರ್ಮಿಕ ಗ್ರಂಥಗಳಲ್ಲಿಯೂ ಶತ್ರುಗಳನ್ನು ಮಣಿಸುವ ವಿಚಾರಗಳು ಇರುತ್ತದೆ. ಇದರ ಅರ್ಥ ಉಗ್ರವಾದವಲ್ಲ. ನ್ಯಾಯಕ್ಕಾಗಿ ಕೆಲವೊಮ್ಮೆ ವಧಿಸಿ,ಧಿಸಲ್ಪಡಬೇಕಾಗುತ್ತದೆ. ಮಹಾಭಾರತ, ರಾಮಾಯಣ ಮತ್ತು ಇನ್ನಿತರ ಧಾರ್ಮಿಕ ಗ್ರಂಥಗಳು ಇದೇ ಪ್ರ್ರತಿಪಾದನೆ ಮಾಡುತ್ತದೆ. ಖುರಾನ್ ಹೇಳುತ್ತದೆ 'ಒಬ್ಬ ಮನುಷ್ಯನನ್ನು ಕೊಂದರೆ ಇಡಿ ಮಾನವ ಕುಲವನ್ನು ವಧಿಸಿದ ಹಾಗೆ ಮತ್ತು ಧರ್ಮದಲ್ಲಿ ಯಾವುದೆ ಒತ್ತಡ ಬಲಾತ್ಕಾರವಿಲ್ಲ’ ರಾಜಕೀಯ ಕಾರಣಗಳಿಗೆ ಆಗುವ ಕಲಹ ಕೊಲೆಗಳಿಗೊ ಧರ್ಮಕ್ಕೂ ಸಂಬಂವಿಲ್ಲ


12-09-10 (05:26 PM) [-] pkbys
ರಾಮಾಯಣ ಮಹಾಭಾರತದಲ್ಲಿ ಯುದ್ಧದ ಉಲ್ಲೇಖವಿದೆ... ಶತ್ರುಗಳನ್ನು ಮಣಿಸುವ ವಿಚಾರವು ಇದೆ.. ಒಪ್ಪಿದೆ sub ರವರೆ. ಆದರೆ ರಾಮಾಯಣ ಮಹಾಭಾರತಗಳ ಯುದ್ದ ಉಲ್ಲೇಖಗಳಿಗೂ, ಕುರ್ಆನ್ ನ ಯುದ್ಧೋಲೇಖಗಳಿಗೂ ಸಾಮ್ಯತೆ ಇಲ್ಲ... ಕಾರಣವೆಂದರೆ, ಈ ಗ್ರಂಥಗಳಲ್ಲಿ ಬರುವ ಯುದ್ದೋಲೇಖಗಳು, ಧರ್ಮ ಅಧರ್ಮಗಳ (War for Righteousness) ಕುರಿತಾಗಿತೇ ಹೊರತು ಸ್ವಮತ, ಅನ್ಯಮತಗಳ (War for Religion) ಕುರಿತಾಗಿರಲಿಲ್ಲ... ಮಹಾಭಾರತ, ಭಾಗವತಗಳಲ್ಲಿ.. ಇಂದು ಅರೇಬಿಯಾ-ಇರಾನ್-ಗ್ರೀಸ್ ಒಳಗೊಂಡ ಮಹಾ ಚಕ್ರಾಧಿಪತ್ಯದ ಚಕ್ರವರ್ತಿ 'ಕಾಲಯವನ' ನ ಉಲ್ಲೇಖ ಬರುತ್ತದೆ... 

ಆತ ಮಹಾಭಾರತ, ಭಾಗವತದಲ್ಲಿ ಕಂಡು ಬರುವ ಅರಸರ ಸಂಸ್ಕೃತಿಗಿಂತ ಭಿನ್ನ ಸಂಸ್ಕೃತಿಯವನು... ಖಂಡಿತಾ ಆ ಜೀಸಸ್, ಮೋಸೆಸ್, ಅಬ್ರಾಹಂ ಮೊದಲಾದವರು ಬರುವ ಮೊದಲಿನ ಅರಬ್ ಸಂಸ್ಕೃತಿಯ ಅರಸ ಆ... ಅವನ ಮತ್ತು ಕೃಷ್ಣನ ಯುದ್ದ ನಡೆಯುತ್ತದೆ... ಆದರೆ ಅಲ್ಲೆಲ್ಲೂ ಗೆದ್ದಮೇಲೆ ಮತಾಂತರ ಮಾಡುವ ಹುನ್ನಾರವಿರಲಿಲ್ಲ... 
ಮುಚುಕುಂದ ಗುಹೆಯಲ್ಲಿ ಸುಟ್ಟು ಸತ್ತ ಯವನ ಕುಲದ ಚಕ್ರವರ್ತಿ "ಕಾಲಯವನ"
ಚಿತ್ರಕೃಪೆ:http://www.harekrsna.com


ರಾಮ ತನ್ನ ಅಯೋಧ್ಯೆಯ ಸಂಸ್ಕೃತಿಯನ್ನ ಆಚರಣೆ, ಸಂಪ್ರದಾಯಗಳನ್ನು ಲಂಕೆಯ ಮೇಲೆ ಹೇರಲಿಲ್ಲ... they were not the wars of religion but righteousness... ಕರ್ಮ ಸಿದ್ದಾಂತವನ್ನು ಅನುಸರಿಸುವ ಜೀವನ ವಿಧಾನವಾದ ಹಿಂದು ಧರ್ಮದ ಗ್ರಂಥಗಳೊಡನೆ ನೀವು ಮತಾಧಾರಿತ ಯುದ್ದಗಳನ್ನು ಪ್ರೋತ್ಸಾಹಿಸಿದ ಕುರಾನ್‌ನ ಸಾಮ್ಯತೆ ಮಾಡುವುದು ಸರಿ ಎನಿಸುವುದೇ... ಹಜ್ ಸಬ್ಸಿಡಿಯ ಬಗ್ಗೆಯೂ ಅಭಿಪ್ರಾಯ ಕೇಳಿದ್ದೆ.. ದಯಮಾಡಿ ನನ್ನ ಶಂಕೆ ದೂರ ಮಾಡುವಿರಾ........12-09-10 (05:44 PM) [-]  bhgte
pkbys ರವರೇ, ಹಜ್‌ಗೆ ಹೋದವರಿಗೆ ಸೌದಿ ಅರೇಬಿಯಾವನ್ನು ನೋಡಲು ಅವಕಾಶವಿಲ್ಲ. ಬರೀ ಅಲ್ಲಿನ ಏರ್ಪೋರ್ಟ್ಗಳನ್ನು ನೋಡಬಹುದು.ರಿಯಾದ್, ಜೆಡ್ಡಾ,ದ ನ ಮಕ್ಕಾ. ಬೇರೆಲ್ಲೂ ಹೋಗುವಂತಿಲ್ಲ. ಊರೊಳಗೆ ಹೋಗುವಂತಿಲ್ಲ. ಕಾರಣ, ಹಜ್ ಹೋದವರು ಈ 50 ವರ್ಷಗಳಲ್ಲಿ ಸಾವಿರಾರು ಜನ ವಾಪಸ್ ನಮ್ಮ ದೇಶಕ್ಕೆ ಬರಲಿಲ್ಲ. ಅಲ್ಲೇ ಉಳಿದುಕೊಂಡು ಬಿಟ್ಟರು. ಹೀಗಾಗಿ ಇಷ್ಟಬಂದ ಕಡೆ ಹೋಗುವ ಅವಕಾಶವಿಲ್ಲ. (ನಮ್ಮಲ್ಲಿ ಬಾಂಗ್ಲಾ ದೇಶಿಗಳು ತಪ್ಪಿಸಿಕೊಂಡಹಾಗೆ). ನಂತರ ‌ಅವರನ್ನು ಹಿಡಿದು ಗಡಿ ಪಾರು ಮಾಡಲು ಹತ್ತು ವರ್ಷ ತೆಗೆದುಕೊಂಡಿದ್ದೂ ಇದೆ.


12-09-10 (06:12 PM) [-] pkbys

ಅಯ್ಯೋ, ಭಾರತ ಇಷ್ಟು ದೊಡ್ಡ ನೈಸರ್ಗಿಕ ಸಂಪನ್ಮೂಲ ಭರಿತ ರಾಷ್ಟ್ರವಾಗಿ ಬರೀ ಬಾಂಗ್ಲಾದೇಶಿ ನುಸುಳುಕೋರರಿಂದಲೇ ಅನುಭವಿಸುತ್ತಿದ್ದೇವೆ.. ಪಾಪ ಸೌದಿಗಳು ದುಡ್ಡಿನಲ್ಲಿ ಕುಬೇರರಾದರೂ ನೈಸರ್ಗಿಕ ಸಂಪನ್ಮೂಲದಲ್ಲಿ ಕಲ್ಲೆಣ್ಣೆ ಬಿಟ್ಟರೆ ಉಳಿದಂತೆ ಬಡಪಾಯಿಗಳು... ಜಗತ್ತಿನೆಲ್ಲೆಡೆಯ ನುಸುಳುಕೋರರನ್ನು ಹೇಗೆ ತಡೆದುಕೊಂಡಾರು...


12-09-10 (06:14 PM) [-] bhgte

ಸೌದಿಯಲ್ಲಿ ಫಜ್ರ್, ಧುಹ್ರ್, ಅಸ್ರ್, ಮಗ್ರಿಬ್ ಮತ್ತು ಇಶಾ ಎಂಬ 5 ಪ್ರೇಯರ್ (ನಮಾಜ್) ಗಳಿರುತ್ತವೆ. ಪ್ರತಿದಿನ 5 ಬಾರಿ ಮಸೀದಿಯಿಂದ ಮೈಕ್‌‌ನಲ್ಲಿ ಕರೆಬಂದಾಗ ಮುಸ್ಲಿಮರೆಲ್ಲರೂ ಮಸೀದಿಯ ಕಡೆ ಧಾವಿಸುತ್ತಾರೆ. ಧಾವಿಸಲೇಬೇಕು. (ನಾನ್ ಮುಸ್ಲಿಮ್ಸ್ ಎಲ್ಲರೂ ಮನೆ ಕಡೆ ಧಾವಿಸುತ್ತಾರೆ!!. ಇಲ್ಲವೇ ಎಲ್ಲಾದರೂ ಬಚ್ಚಿಟ್ಟುಕೊಳ್ಳಬೇಕು. ಬೀದಿಯಲ್ಲಿ, ಪಬ್ಲಿಕ್ ಪ್ಲೇಸ್‌ನಲ್ಲಿ ಇರುವಂತಿಲ್ಲಾ.) ಎಲ್ಲಾ ಅಂಗಡಿ ಹೋಟೆಲು, ಸೂಪರ್ ಮಾರ್ಕೆಟ್‌‌ಗಳು ಗ್ಯಾರಾಜುಗಳು ಮತ್ತು ಸಕಲವೂ ತಕ್ಷಣ ಮುಚ್ಚಲ್ಪಡುತ್ತವೆ. ಇಡೀ ದೇಶ ದಿನಕ್ಕೆ 5 ಬಾರಿ ಪ್ರತಿ ಬಾರಿ 45 ನಿಮಿಷ ಸ್ಥಬ್ಧ ವಾಗುತ್ತದೆ. ನಾನ್ ಮುಸ್ಲಿಮ್ಸ್ ರಸ್ತೆಯಲ್ಲಿ ಸಿಕ್ಕಿಬಿದ್ದರೆ ಮುತಾವಾ ಇಕಾಮಾ ತೆಗೆದುಕೊಂಡು ‌ಅವರನ್ನು ಪೋಲೀಸಿಗೆ ಒಪ್ಪಿಸುತ್ತಾನೆ. ನಮಾಜ್ ಟೈಮಿನಲ್ಲಿ ಈ ಕಾಫಿರ ಹೊರಗೆ ಮಜಾ ಮಾಡುತ್ತಿದ್ದ ಎಂಬ ಅಪರಾಧ. ಮಸೀದಿಯ ಮುತಾವಾ ಎಂಬ ಅನೇಕ (ರಿಲಿಜಿಯಸ್ ಪೊಲೀಸ್) ಭಾರಿ ಗಡ್ಡಧಾರಿ ಮುಲ್ಲಾಗಳು ಮಸೀದಿಯ ಸುತ್ತ ಮುತ್ತ ಪ್ರೇಯರಿಗೆ ತಪ್ಪಿಸಿಕೊಳ್ಳುವವರನ್ನು ಹಿಡಿಯಲು ಮತ್ತು ಕಾಫಿರರನ್ನು ಶಿಕ್ಷಿಸಲು ಬಿರುಸಿನಿಂದ ಓಡಾಡುತ್ತಿರುತ್ತಾರೆ. ಪ್ರತಿ ಅರ್ಧ ಕಿ.ಮೀ.ಗೂ ಒಂದು ಮಸೀದಿ ಇರುತ್ತದೆ. ಪ್ರತಿ ಕಂಪೆನಿ ಯಾ ಕೈಗಾರಿಕೆಯ ಒಳಗೂ ಪ್ರೇಯರ್ ಹಾಲ್‌ (ಮಸೀದಿ) ಇರುತ್ತದೆ. ಇದು ಕಂಪಲ್ಸರಿ.


ದಿನಕ್ಕೆ 5 ಬಾರಿ ಟೀನೇಜರ್ಸ್‌ಗಳು ಶಪಿಸುತ್ತಾ ಬೈಯುತ್ತಾ ಮಸೀದಿಯ ಕಡೆ ಧಾವಿಸುತ್ತಾರೆ. ಕಂಪೆನಿಯಲ್ಲಿ ಅಥವಾ ಹೊರಗಡೆ ಪರಿಚಯದ ಅರಬೀ ಯುವಕರು ನಮ್ಮ ಮುಂದೆಯೂ ಸಹ ಬಹಳ ರಹಸ್ಯವಾಗಿ ಈ 5 ಸಾರಿ ನಮಾಜು ಬಗ್ಗೆ ಬಾಯಿಗೆ ಬಂದ ಹಾಗೆ ಬಯ್ದು ಕೊಳ್ಳುತ್ತಾರೆ. ಹಿಂದಿ ಇಂಗ್ಲಿಷ್ ಗೊತ್ತಿರುವ ನವ ಯುವಕರು "ಏ ಪಾಗಲ್ ಲೋಗ್ ಹೈ, ಏಕ್ ದಮ್ ಪಾಗಲ್, ಕ್ರೇಜಿ ಫೆಲ್ಲೋಸ್ ಯು ಸೀ" ಎಂದು ನಾವು ಆಫೀಸ್ನಲ್ಲಿ ಒಬ್ಬರೇ ಇರುವಾಗ ಸಿಟ್ಟಿನಿಂದ ಗುಟ್ಟಾಗಿ ಹೇಳುತ್ತಾರೆ.12-09-10 (06:40 PM) [-] pkbys

ನನಗನಿಸುತಿರುವುದು ಹೇಳುತ್ತಿರುವೆ bhgteರವರೆ. ನಾವು ಪಾಪ ಕರ್ಮ ಮಾಡಿದಲ್ಲಿ, ನಾವು ಸೌದಿಯಲ್ಲೇ ಹುಟ್ಟುತ್ತೇವೆ... ದೇವರು ಬಲವಂತವಾಗಿ ನಮ್ಮಿಂದ ತನ್ನನ್ನು ನೆನೆಯುವಂತೆ ಮಾಡುವ ಕರ್ಮಫಲವನ್ನ ಪಾಪಿಗಳಿಗಲ್ಲದೇ ಇನ್ಯಾರಿಗೆ ಕೊಡುವ...12-09-10 (06:44 PM) [-]  bhgte

ಸೌದಿಯಲ್ಲಿ 2010 ನೇ ಇಸವಿಯಲ್ಲೂ ಸಹ ಹಿಂದೂ ಕ್ರಿಶ್ಚಿಯನ್ ಮತ್ತು ಎಲ್ಲಾ ಧರ್ಮದ ಹೆಂಗಸರು ಫುಲ್ ಬುರ್ಖಾ ಹಾಕಲೇ ಬೇಕು. ಮುಖವನ್ನು ಪೂರ್ತಿ ಮುಚ್ಚಿಕೊಂಡಿರಬೇಕು. ಎರಡು ಕಣ್ಣುಗಳು ಮಾತ್ರ ಹೊರಗೆ ಕಾಣಿಸಬೇಕು. ಇಂಡಿಯಾದಿಂದಾಲೇ ಬುರ್ಖಾ ಪರ್ಚೇಸ್ ಮಾಡಿಕೊಂಡು ಹೋಗಬೇಕು. ವಿಮಾನದಿಂದ ಇಳಿಯುವ ಮೊದಲೇ ಬುರ್ಖಾ ಹಾಕಿಕೊಂಡು ಇಳಿಯಬೇಕು. ವಿಮಾನ ಸೌದಿ ಆಕಾಶ ವನ್ನು ತಲುಪುತ್ತಿದ್ದ ಹಾಗೇ ಎಲ್ಲಾ ಹೆಂಗಸರೂ ಬುರ್ಖಾ ಹಾಕಿಕೊಳ್ಳಿ ಎಂದು ಅನೌನ್ಸ್ ಮೆಂಟ್ ಬರುತ್ತದೆ. ತಕ್ಷಣ ಎಲ್ಲರೂ ಬುರ್ಖಾ ಹಾಕಿಕೊಳ್ಳಬೇಕು. ಯಾವುದೇ ಚಿಕ್ಕ ವಿಗ್ರಹವನ್ನು ಇಟ್ಟುಕೊಂಡಿರಬಾರದು. ಸಿಕ್ಕಿಬಿದ್ದರೆ ಲಾಕಪ್, ನಂತರ ಜೈಲು. ಉಂಗುರದಲ್ಲಿ ಹನುಮ, ರಾಘವೇಂದ್ರ, ಲಕ್ಷ್ಮೀ ಇತ್ಯಾದಿ ಚಿತ್ರಾ ಇದ್ದರೆ ಏರ್ ಪೋರ್ಟ್ನಲ್ಲೇ ನಿಮ್ಮ ಉಂಗುರ ಹೋಯಿತು. ವಾಪಸ್ ಸಿಗುವುದಿಲ್ಲ. ಬೇರೆ ಧರ್ಮದ ಲಿಟರೇಚರ್, ಭಜನೆ ಪುಸ್ತಕ ಇತ್ಯಾದಿ ನಿಮ್ಮ ಜೊತೆ ಇರಬಾರದು. ಇವೆಲ್ಲವೂ ಗುರುತರ ಅಪರಾಧ. ಸೌದಿ ಅರೇಬಿಯಾದವರಿಗೆ ಎಲ್ಲಾ ಮುಸ್ಲಿಮ್ ದೇಶಗಳಲ್ಲೂ ಈ ಎಲ್ಲಾ ಕಾನೂನುಗಳನ್ನು ಜಾರಿಗೆ ತರುವ ಮಹತ್ತರವಾದ ಆಕಾಂಕ್ಷೆ ಇದೆ!!!


12-09-10 (06:49 PM) [-] pkbys
ಉನ್ ಕಾ ನರಕ್ ಉನ್ಹೀಕೋ ಮುಬಾರಕ್...12-09-10 (06:48 PM) [-]  bhgte

ಸೌದಿಯಲ್ಲಿ 2010 ನೇ ಇಸವಿಯಲ್ಲೂ ಹೆಂಗಸರು ಗಂಡಸರ ರಿಟನ್ ಪರ್ಮಿಶನ್ ಇಲ್ಲದೇ ಒಬ್ಬರೇ ಮನೆಯಿಂದ ಹೊರಗೆ ಹಗಲು ಹೊತ್ತಿನಲ್ಲೂ. ಓಡಾಡುವಂತಿಲ್ಲ. ತರಕಾರಿ ತರಲು ಸಹ ಹೋಗುವಂತಿಲ್ಲ. ಗಂಡನಿಂದ ಪ್ರತಿ ದಿನ "ತರಕಾರಿ ಕೊಳ್ಳಲು ಹೊರಗೆ ಹೋಗಲು ಬಿಟ್ಟಿದ್ದೇನೆ" ಎಂದು ಪರ್ಮಿಶನ್ ಲೆಟರ್ ಬರೆಸಿ ಇಟ್ಟುಕೊಂಡಿರಬೇಕು. ಇಲ್ಲದಿದ್ದರೆ ಪೊಲೀಸ್ ಜೀಪು ಹಾಜರು. ಒಂಟಿ ಹೆಣ್ಣನ್ನು ಪೋಲಿಸರು 100% ಚೆಕ್ ಮಾಡಿಯೇ ಮಾಡುತ್ತಾರೆ. ಅರೆಸ್ಟ್.. ಜೈಲು. ಮದುವೆಯಾಗದ ಹೆಣ್ಣುಮಕ್ಕಳು ತಂದೆಯಿಂದ ಪರ್ಮಿಶನ್ ಲೆಟರ್ ಇಟ್ಟುಕೊಂಡಿರಬೇಕು. ಬೀದಿಯಲ್ಲಿ ರಕ್ತ ಸಂಬಂಧಿಗಳಲ್ಲದ ಯಾವುದೇ ಇತರ ಗಂಡು ಹೆಣ್ಣು ಸಂಭಾಷಿದರೆ ಅರೆಸ್ಟ್ ಮಾಡುತ್ತಾರೆ. ರಕ್ತ ಸಂಬಂಧಿಗಳಲ್ಲದ ಯಾವುದೇ ಗಂಡು ಹೆಣ್ಣು ಒಟ್ಟಿಗೆ ಹೋಗುತ್ತಿದ್ದರೆ ಸಾಕು, (ಕಾರಿನಲ್ಲಿ ಹೋಗುತ್ತಿದ್ದರು ಸಹ ನಿಲ್ಲಿಸಿ) ಚೆಕ್ ಮಾಡಿ ಅರೆಸ್ಟ್ ಮಾಡುತ್ತಾರೆ. ಆ ಇಬ್ಬರಲ್ಲಿ ಹೆಣ್ಣು ಅರಬಿ ಮುಸ್ಲಿಮ್ ಆಗಿದ್ದು ಗಂಡು ವಿದೇಶಿ ಮುಸ್ಲಿಮನಾಗಿದ್ದರಂತೂ ಭಯಂಕರ ಶಿಕ್ಷೆ ಇದೆ. ಇಂಡಿಯನ್ ಆಗಿದ್ದರಂತೂ ಆತನ ಕಥೆ ಮುಗಿಯಿತು. ಶಿರಛ್ಛೇದನ. ಇದು ಸೌದಿ ಅರೇಬಿಯಾ.12-09-10 (06:53 PM) [-] pkbys

ನಮ್ಮ ಜನ ಅದಕ್ಕೆ ದುಬೈ, ಕುವೈತ್‌, ಇಲ್ಲೇ ಸಂಪಾದನೆಗೆ ಹೊರಡೊದು ಅನ್ಸತ್ತೆ.. ಸೌದಿ ಬಹುಶಃ ಮುಸಲ್ಮಾನರಿಗೂ ಬೇಡದ ನರಕ... ಹಾಜಿಯಾಗಲು ಹೋಗಬೇಕಷ್ಟೆ...12-09-10 (09:45 PM) [-] bhgte
ಹೌದು, ನೀವು ಹೇಳುವುದು ನಿಜ. ಅಲ್ಲಿ ದೈವ ಭಕ್ತಿ ತುಂಬಾ Compulsory. ದೇವರಿಗೆ ಶರಣಾಗುವುದು Compulsory. ದೇವರಲ್ಲಿ ನಂಬಿಕೆಯಿಲ್ಲ ಎಂದು ಹೇಳುವ ಮುಸ್ಲಿಮನು ಸತ್ತಂತೆಯೇ ಲೆಕ್ಕ.. ದಿನಕ್ಕೆ 5 ಸಾರಿ ಪ್ರಾರ್ಥನೆ ಮಾಡುವುದು ಸಹ ತೀರ ಕಂಪಲ್ಸರಿ.. ನೀವು ಬೇರೆ ದೇವರನ್ನು ನಂಬಿದರೆ ಪ್ರಯೋಜನವಿಲ್ಲ. ಅಲ್ಲಾನನ್ನೇ ನಂಬಬೇಕು. ಅಲ್ಲಾ ಹೊರತಾಗಿ ಬೇರೆ ದೇವರಿದ್ದಾರೆ ಎನ್ನುವುದು ಮಹಾಪರಾಧ. ಅಲ್ಲಾನನ್ನು ಬೇರೆ ದೇವರಿಗೆ ಈಕ್ವಲ್ ಎಂದು ಹೇಳುವುದು ಮಹಾಪರಾಧ. ಈಶ್ವರ್ ಅಲ್ಲಾಹ್ ತೆರೆ ನಾಮ್ ಎಂದು ಸೌದಿಯಲ್ಲಿ ಹೇಳೀರಿ ಜೋಕೆ. ಈಶ್ವರ್ ಅಥವಾ ಶಿವ ಅಥವಾ GOD ಎಂಬ ಇನ್ನೊಂದು ಹೆಸರು ಅಲ್ಲಾಹ್ಗೆ ಇದೆ ಎಂದು ಹೇಳುವುದು ಮಹಾಪರಾಧ. ದೇವರಿಗೆ ಅಲ್ಲಾಹ್ ಎಂದು ಮಾತ್ರ ಹೆಸರಿರುವುದು. ಹೊಸಬ ಅರಬಿಯ ಪರಿಚಯವಾದಾಗ ಆತನ ಮೊದಲನೇ ಪ್ರಶ್ನೆ "ನೀವು ಮುಸ್ಲಿಮರೇಎಂದು. ಈ ತರ ಕೇಳಲು ನಾವು ಇಲ್ಲಿ ತೀವ್ರ ಸಂಕೋಚ ಪಡುತ್ತೇವೆ. ಅಲ್ಲಿ ಹಾಗಿಲ್ಲ. ಮುಸ್ಲಿಮನಲ್ಲ ಎಂದ ಕೂಡಲೇ ಅವರ ಮುಖ ಚಿಕ್ಕದಾಗುತ್ತದೆ. ನಂತರ ಹೆಚ್ಚಿನ ಆತ್ಮೀಯತೆಗೆ ಅವಕಾಶ ಕಡಿಮೆ!! Why you are not muslim? ಎಂಬ ಪ್ರಶ್ನೆ ಕೇಳುವವರೂ ಇದ್ದಾರೆ !!!

ಇಡೀ ಸೌದಿಯಲ್ಲಿ (ಸೌದಿ ದೇಶದ ಏರಿಯಾ ಭಾರತದ ಮುಕ್ಕಾಲರಷ್ಟಿದೆ. ಇಡೀ ಗಲ್ಫ್ ನಲ್ಲಿ ಸೌದಿ ಒಂದು ಆನೆ, ಬಾಕಿ ಎಲ್ಲಾ ಇರುವೆ ದೇಶಗಳು!!!) ಒಂದೇ ಒಂದು ಹಂದಿಯಾಗಲೀ ಅದರ ಚಿತ್ರ ವಾಗಲೀ ಸಿಗುವುದಿಲ್ಲ. ಇಡೀ ದೇಶದಲ್ಲಿ ನಾಯಿಗಳು ಇಲ್ಲವೇ ಇಲ್ಲ.. ನಾಯಿಯ ಮೇಲೂ ಅಪಾರ ದ್ವೇಷವಿದೆ. ಅರೇಬಿಯಾ ಮಕ್ಕಳು ನಾಯಿಯನ್ನು ಚಿತ್ರದಲ್ಲಿ ಮಾತ್ರ ನೋಡುತ್ತಾರೆ. ನಮ್ಮ ದೇಶದಲ್ಲಿ ಯಾವುದೇ ಪ್ರಾಣಿಯನ್ನು ಅದು EXTINCT ಆಗುವ ಮಟ್ಟಕ್ಕೆ ದ್ವೇಷಿಸಿ ಗೊತ್ತಿಲ್ಲ. ಗಿಡುಗ ಅಥವಾ ರಣಹದ್ದು ಅತ್ಯಂತ ಪ್ರೀತಿಯ ಪಕ್ಷಿ. ಅದೇ ಸೌದಿ, ಬಹರೀನ್, ಯು ಏ ಇ ಇತ್ಯಾದಿ ದೇಶಗಳ ರಾಷ್ಟ್ರೀಯ ಪಕ್ಷಿ. ರಾಷ್ಟ್ರ ಲಾಂಛನ!!!. GULF AIR ನ ಲಾಂಛನವೂ ಸಹ ರಣಹದ್ದು!!! ರಣಹದ್ದುಗಳನ್ನು ಮನೆಯಲ್ಲಿ ಸಾಕುತ್ತಾರೆ. ಅವನ್ನು ಟ್ಯುನೀಶಿಯಾಗೆ ತಮ್ಮ ಜೊತೆಗೆ ಬೇಟೆಗೆ ಕೊಂಡೊಯ್ಯುತ್ತಾರೆ. ನವಿಲು ನಮ್ಮ ರಾಷ್ಟ್ರ ಪಕ್ಷಿ. ಆದರೆ ಅಲ್ಲಿ ರಣಹದ್ದು!!! ಭೀಕರತೆಗೆ ಕ್ರೌರ್ಯಕ್ಕೆ ಭೀಭತ್ಸಕ್ಕೆ ತುಂಬಾ ಮಹತ್ವ!!! ಎಷ್ಟಾದರೂ ಶಾಂತಿಪ್ರಿಯ ಧರ್ಮವಲ್ಲವೇ??? ಸೌದಿಯ ಲಾಂಛನದಲ್ಲಿ ಪ್ರಮುಖವಾಗಿರುವುದು ಹಿರಿದು ಕ್ರಾಸ್ ಆಗಿರುವ ಎರಡು ಖಡ್ಗಗಳು. ಇಸ್ಲಾಮ್ ಎಂದರೆ PEACE (ಶಾಂತಿ) ಎಂದು ಅರ್ಥವಂತೆ. ಅದರ ಪ್ರತೀಕವಾಗಿ ಎರಡು ಹಿರಿದ ಖಡ್ಗಗಳು!!!
 

 ಎಲ್ಲಾ ಗಲ್ಫ್ ದೇಶಗಳಲ್ಲಿ ಗಂಡಸರು ಡ್ಯಾನ್ಸ್ ಮಾಡುವುದು ನಿಷಿದ್ಧ. ಆದರೆ ಖಡ್ಗ (ಬಿಚ್ಚುಗತ್ತಿ) ಅಥವಾ ಕಠಾರಿ ಹಿಡಿದುಕೊಂಡು ಡ್ಯಾನ್ಸ್‌ ಮಾಡಬಹುದು. ಗಂಡಸರು ಡ್ಯಾನ್ಸ್‌ ಮಾಡಿದರೆ ಕೈಯಲ್ಲಿ ಖಡ್ಗ ಕಂಪಲ್ಸರಿಯಾಗಿ ಇರಲೇ ಬೇಕು. ಅಲ್ಲಿನ ಟಿವಿಯಲ್ಲಿ ವಿವಿಧ ಗ್ರಾಮಗಳ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸಾರವಾಗುತ್ತದೆ. ಅವರದು ಒಂದೇ ಕಾರ್ಯಕ್ರಮ. 30 - 40 ಗಂಡಸರ ಗುಂಪು ಕತ್ತಿ ಝಳಪಿಸುತ್ತಾ ಕುಣಿಯುವುದು. Free style sword dance!! ಸಲಾಮ್ ಅಲೈಕುಮ್ ಅಂದರೆ ನಿಮಗೆ ಶಾಂತಿ ಇರಲಿ ಎಂದು ಅರ್ಥ. ಎಲ್ಲರೂ ಒಬ್ಬರಿಗೊಬ್ಬರು ಸಲಾಮ್ ಅಲೈಕುಮ್ ಎಂದು ಪರಸ್ಪರ ಶಾಂತಿಯನ್ನು ಕೋರಿದ ನಂತರ ಖಡ್ಗ ಝಳಪಿಸುವ ಗ್ರೂಪ್ ಡ್ಯಾನ್ಸ್‌ ಪ್ರಾರಂಭ!!!!!! ಅದಕ್ಕೆ ಸರಿಯಾಗಿ ಸೌದಿ ಮತ್ತು ಕೆಲ ದೇಶಗಳ ಬಾವುಟದಲ್ಲಿ ಎರಡು ಬಿಚ್ಚುಗತ್ತಿಗಳು!!!!!!
ಚಿತ್ರಕೃಪೆ: flicker
12-09-10 (11:15 PM)[-]  pkbys
dear bhgte, ನನಗೇನು ಹೇಳಬೇಕೆಂದೇ ಗೊತ್ತಾಗುತ್ತಿಲ್ಲ, ನಿಮ್ಮದು ಕಟುಸತ್ಯವೊಂದನ್ನು ನಗೆಯ ಹೂರಣದಲ್ಲಿ ಬೆರೆಸಿ ನೀಡಿದ ಅನುಭವ...ಬೇರೊಂದು ಧರ್ಮದ ಬಗೆಗೆ ಇದ್ದದ್ದಾದರಿಂದ ಬಹುಶ: ನಾನು ಮತ್ತು ನನ್ನಂತೆ ಯಾವ ಕಾಮೆಂಟ್ ಮಾಡದೇ ಇದ್ದರೂ ಮೌನವಾಗಿ ಚರ್ಚೆಯನ್ನ ನೋಡುತ್ತಿರುವ ಅಸಂಖ್ಯ ಓದುಗರಿಗೂ ರಸದೌತಣವನ್ನೇ ನೀಡಿತು.. ಒಂದು ಅಸಂಬದ್ದ, ಅಶ್ಲೀಲ, ನಿಂದನಾರ್ಹ, ಮಾನಹಾನಿಕರ ಪದಗಳಿಲ್ಲದ, ಸಂಸ್ಕಾರಯುತ, ವಿಡಂಬನಾತ್ಮಕ ಆದರೆ ಸತ್ಯದ ಸತ್ವಯುತ ಬರವಣಿಗೆ ನಿಮ್ಮದು... ನಿಮ್ಮ ಅದೆಷ್ಟು ಅಮೂಲ್ಯ ಸಮಯವನ್ನು ನನಗಾಗಿ ಕೊಟ್ಟಿರೋ, ಖಂಡಿತವಾಗಿಯೂ ನಿಮ್ಮ ಬರವಣಿಗೆ ನೀವು ನನಗಿಂತ ಹಿರಿಯರು ಎಂದು ಸೂಚಿಸುತ್ತದೆ.. ಇಸ್ಲಾಂನ ಯಾವುದೇ ಪ್ರಭೃತಿ, ನಿಮ್ಮ ಕಮೆಂಟ್ಸ್ ಶುರುವಾದ ಮೇಲೆ ತಲೆ ಹಾಕದ್ದನ್ನು ನೋಡಿದರೆ, ಅವರಿಗೂ ಅರಿವಿರುವ, ಆದರೆ ಸಮರ್ಥಿಸಿಕೊಳ್ಳಲಾರದ ಕಟುಸತ್ಯಗಳು ಯೋಚಿಸುವಂತೆ ಮಾಡಿರುತ್ತವೆ.. (ofcourse ಅವರು ತೆರೆದ ಮನ ಬುದ್ದಿಯವರಾಗಿದ್ದರೆ ಮಾತ್ರ) ನಮ್ಮ ಧರ್ಮದ ಬಗ್ಗೆ ಇದೇ ರೀತಿ ಬೇರೆಯವರು ದಾಳಿ ಮಾಡಿದಾಗ ನಾವು ಸಮರ್ಥಿಸಿಕೊಳ್ಳಲಾರೆವು.. ಆದರೆ ನಮ್ಮಲ್ಲಿರುವ ತಪ್ಪನ್ನು ತಪ್ಪು ಎಂದು ಒಪ್ಪುವ ಗುಣವಾದರೂ ನಮ್ಮಲ್ಲಿದೆ.. ನಿಮಗೆಷ್ಟು ಅಭಿನಂದನೆ ಸಲ್ಲಿಸಲಿ.. ನನಗೆ ಪದಗಳ ಬರಬಂದಿದೆಯೇನೋ... ನನ್ನ ತಿಳಿವಿನ ಪರಿಧಿಯನ್ನ ವಿಸ್ತರಿಸಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು... 12-09-10 (11:22 PM) [-] pakya

ಪ್ರೀತಿಯ bhgte ರವರೆ... ನಿಮ್ಮಿಂದ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡೆ.. ಇದೇ ರೀತಿ ಬರೆದು ತಮ್ಮ ಜ್ಞಾನವನ್ನು ದಯವಿಟ್ಟು ಜನರಿಗೆ ಹಂಚಿ.. ಧನ್ಯವಾದಗಳು... ಪ್ರೀತಿಯ..pkbys, bhgte ಹಾಗೂ Basheer Bagalkot ಇವರಿಗೆಲ್ಲ ಹೃತ್ಪೂರ್ವಕ ಧನ್ಯವಾದಗಳು...

13-09-10 (12:12 AM) [-] pkbys
ನಿಜಕ್ಕೂ ಒಂದು valuable time spent with valuable learnt and emotionally attached people ಅನ್ನಿಸಿತು pakya.. ನಿಮಗೂ ಧನ್ಯವಾದಗಳು... 

-------------------------------------------------------------------------------------------------------------------
ಕೆಳಗಿನ ಚರ್ಚೆಯನ್ನೂ ನೋಡಿ... ಪ್ರತಿಕ್ರಿಯಿಸಿ

Monday, 16 May 2011

ಮೃತ್ಯುಸ್ಪರ್ಶ ಜೀವನ್ಮುಖಿ....

(ಇದು ಕನಸಲ್ಲ, ದಿನಾಂಕ 31-5-2005 ಮತ್ತು 1-6-2005ರ ನಡುವಿನ ರಾತ್ರಿ ನಡೆದ ಸತ್ಯ ಘಟನೆ)ಧಡ್... ಧಡ್....... ಧಡ್........

ರೈಲಿನ ಶಬ್ದ, ಯಾರೋ ಹೆಗಲು ಸವರಿದ ಅನುಭವ ..

ನಿದ್ದೆಯಿಂದ ಮೆಲ್ಲನೆ ಕಣ್ತೆರೆದು ನೋಡಿದೆ....

"
ಏಳು ಬಂಗಾರ... ಬೆಳಗಾಯ್ತು" ಅನ್ನೋ ಅಪ್ಪ ಅಲ್ಲ ಎಬ್ಬಿಸಿದ್ದು...

ರೈಲು

ಮೈಮೇಲೆ ಹರಿದು ಹೋಗ್ತಿರೋ ರೈಲು.............

ಅಯ್ಯೋ ದೇವರೆ, ಇದು ಹೇಗೆ ಸಾಧ್ಯ....

ನಾನ್ಯಾಕೆ ರೈಲ್ವೆ ಟ್ರ್ಯಾಕ್‍ನ ಒಳಗೆ ಬಿದ್ದಿದೀನಿ... ಸರಿ, ಏನಾದರೂ ಆಗಲಿ... ಇನ್ನೂ ಬದುಕಿದ್ದೀನಲ್ಲ...
ಬದುಕಬೇಕಲ್ಲ... ಬದುಕುವೆನಾ?!!


ಮೈಮೇಲೆ ಹರಿಯುವ ರೈಲಿನಡಿಯಲ್ಲಿ, ರೈಲಿನ ಬ್ಯಾಟರಿ ಬಾಕ್ಸ್, ಪೈಪ್ಸ್, ಬ್ರೇಕ್‍ಲೈನ್ಸ್ ಯಾವುದಕ್ಕೂ ಸಿಗದಂತೆ ಆಡಿಯ ಕಾಂಕ್ರೀಟ್ ಸ್ಲೀಪರ್ ಕಚ್ಚಿ ಮಲಗಿದೆ... ರೈಲು ಪೂರ್ಣ ನನ್ನ ದೇಹ ದಾಟುವವರೆಗೂ ಸಾವು ಬದುಕಿನ ನಡುವಿನ ಗೆರೆಯ ಮೇಲೆ, ಎತ್ತ ಬೀಳುವೆನೋ ನಾನರಿಯೆ.
ಮನದಲ್ಲೇ ದೈವವ ನೆನೆದೆ... ಬೇಡಿದೆ.... ದಯವಿಟ್ಟು ಕ್ರೂರ ಸಾವು ಕೊಡಬೇಡ... ರೈಲಿನ ಯಾವುದಾದರೂ ತಗಡೋ, ತಂತಿಯೋ, ಪೈಪೋ, ನನ್ನ ಬಟ್ಟೆಗೆ ಸಿಲುಕಿದರೆ ದರದರನೆ ಎಳೆದರೆ ಎಂಥಾ ಭೀಭತ್ಸ ಸಾವು, ಮುಗಿಸುವುದಾದರೆ ಒಂದೇ ಏಟಿಗೆ ನನ್ನ ಮುಗಿಸಬಾರದಿತ್ತೆ... ಪ್ರಭು ಇಲ್ಲಿಯವರೆಗೆ ಕಾಪಾಡಿದೆ. ಕೊನೆಯವರೆಗೂ ಕಾಪಾಡಿಬಿಡು. ಕಾಂಕ್ರೀಟ್ ಸ್ಲೀಪರ್‌ಗಳು ರೈಲಿನ ಚಲನೆಗೆ ತಕ್ಕಂತೆ ಏರಿಳಿಯುತ್ತಿದ್ದವು...  ಇದ್ದ ಭಯವೆಲ್ಲಾ ಕೊನೆಯ ಬೋಗಿಯ ಹಿಂದೆ ಬೋಗಿಗಳನ್ನು ಜಾಯಿಂಟ್ ಹಾಕಲು ಇರುವ ಕೊಕ್ಕೆಯ ಬಗ್ಗೆ...  ಅದು ನೇತಾಡುತ್ತಿರುತ್ತದೆ... ಬಹಳ ಕೆಳಮಟ್ಟದಲ್ಲಿ ನೇತಾಡುತ್ತಿರುತ್ತದೆ... ಅದಕ್ಕೆ ಮೈ, ಮೈಮೇಲಿರುವ ಬಟ್ಟೆ ಸಿಕ್ಕಿಕೊಂಡರೆ...........

ಸುಮಾರು ಮೂವತ್ತು ಸೆಕೆಂಡುಗಳು ಜೀವನ್ಮರಣದ ಮಧ್ಯದ ಸ್ಥಿತಿ, ರೈಲಿನ ಕೊನೆಯ ಬೋಗಿ ಕೂಡ ದಾಟಿ ಹೋಯಿತು... ನಾನು ಸುರಕ್ಷಿತವಾಗಿದ್ದೆ. ಅಲ್ಲಿಯವರೆಗೆ  ಬೆನ್ನು ಮೇಲಾಗಿ ಟ್ರ್ಯಾಕ್‍ನೊಳಗೆ ಮಲಗಿದ್ದ ನಾನು ಮೆಲ್ಲನೆ ಎದ್ದು ಕುಳಿತೆ... ಮಂಡಿಯ ತಬ್ಬಿ ಕುಳಿತೆ...ಮೇಲೆ ಹರಿದು ಹೋದ ಕೊನೆಯ ಬೋಗಿಯ "X" ಮಾರ್ಕು ಕಾಣುತ್ತಿತ್ತು.. ರೈಲು ನಿಧಾನವಾಗಿ ಹೋಗುತ್ತಿತ್ತು... ನಿಟ್ಟುಸಿರುಬಿಟ್ಟೆ... ಸಾವನ್ನ ಬಹಳ ಹತ್ತಿರದಿಂದ ಕಂಡಿದ್ದೆ... ಯೋಚಿಸತೊಡಗಿದೆ, ನಾ ಹೇಗೆ ಅಲ್ಲಿಗೆ ಬಂದೆ? ಯಾಕೆ ಬಂದೆ? ಎಲ್ಲಕ್ಕಿಂತ ಮೊದಲು "ನಾನು" ಯಾರು??? ನನ್ನ ನಾ ನೋಡಿಕೊಂಡೆ, ಹಾಕಿದ್ದ ಕೆನೆಬಣ್ಣದ ಕುರ್ತಾ ಟ್ರ್ಯಾಕ್ ಮೇಲೆ ಬೀಳುವ ಇಂಜಿನ್ ಎಣ್ಣೆ ಕುಡಿದಿದೆ... ರೈಲ್ವೆ ಟ್ರ್ಯಾಕ್ ಮೇಲಿನ ಜಲ್ಲಿ ಕಲ್ಲಿನ ಏಟಿಗೆ ಸ್ವಲ್ಪ ಹರಿದುಹೋಗಿದೆ,

ರೈಲು ಹರಿದು ಹೋಗುತ್ತಿರುವ ಕಡೆ ನೋಡಿದೆ.... ಸ್ವಲ್ಪ ದೂರದಲ್ಲಿ ರೈಲ್ವೆ ನಿಲ್ದಾಣವೊಂದರ ಫಲಕ ಕಂಡಿತ್ತು..

"ಹನಕೆರೆ". 

ಹೋ!!!! ನಾನು ಬಿದ್ದಿರುವುದು ಹನಕೆರೆ ಸ್ಟೇಷನ್ ಔಟರ್, ಮೈಸೂರಿನಿಂದ,
ಬೆಂಗಳೂರಿನೆಡೆಗೆ ಹೋಗುವ ಹಾದಿಯಲ್ಲಿ ಮಂಡ್ಯದ ನಂತರದ ಸ್ಟೇಷನ್,

ಹಾ! ನೆನಪಾಯ್ತು ನಾನು ಮೈಸೂರಿನಿಂದ ಹೊರಟದ್ದು, ಮಂಡ್ಯಕ್ಕೆ...

ರಾತ್ರಿ ಹೊರಡುವ ಕಾವೇರಿ ಎಕ್ಸ್‌ಪ್ರೆಸ್,

ಅರೆ, ನಿದ್ದೆ ಹೋದೆ ಅಲ್ಲವೇ...

ಮಂಡ್ಯ ಆಗತಾನೆ ದಾಟಿತ್ತು...

ಏನು ಮಾಡೋದು, ಹೋಗಲಿ ಮುಂದಿನ ಕ್ರಾಸಿಂಗ್‍ ಹನಕೆರೆಯಲ್ಲಿ ಆದರೆ ಕಾವೇರಿ ಇಂದ ಇಳಿದು ಪ್ಯಾಸೆಂಜರ್ ಹತ್ತಿ ವಾಪಸ್ ಮಂಡ್ಯಕ್ಕೆ ಬರೋದು...

ಪ್ಯಾಸೆಂಜರ್ ಟ್ರ್ರೈನೇ ಮೊದಲು ಹನಕೆರೆಗೆ ಬಂದಿದ್ದರೆ ಕಾವೇರಿ ನಿಲ್ಲುವುದಿಲ್ಲ...

ಮುಂದಿನ ಕಾವೇರಿ ನಿಲ್ಲುವ ಸ್ಟೇಷನ್ ಮದ್ದೂರಿನಲ್ಲಿಳಿದು, ಮಂಡ್ಯಕ್ಕೆ ಬಸ್ಸಿನಲ್ಲಿ ಬರುವುದು ಎಂದು ಕೊಂಡಿದ್ದೆ...

ಹನಕೆರೆ ಹತ್ತಿರ ಬಂದಾಗ ಲೂಪ್ ಲೈನ್ ಖಾಲಿ ನೋಡಿದೆ, ಅದರರ್ಥ ಪ್ಯಾಸಿಂಜರ್ ಬಂದಿಲ್ಲ, ಕಾವೇರಿಯೇ ಮೊದಲು, ಆದ್ದರಿಂದ ನಿಲ್ಲಿಸ್ತಾನೆ ಎಂದುಕೊಂಡು ಎದ್ದೆ... ಬಾಗಿಲ ಬಳಿ ಬಂದದ್ದಷ್ಟೆ ನೆನಪು.. ನಂತರದ ನೆನಪಿನ ಚಿತ್ರ ಅತಿವೇಗದ ರೈಲುಗಾಡಿ ನನ್ನ ಎಡಭಾಗದಲ್ಲಿ ಹೋಗುತ್ತಿದೆ, ನನ್ನ ದೇಹ ಗಾಳಿಯಲ್ಲಿ ತೇಲುತ್ತಿದೆ... (ಗಾಡಿಯ ಬಾಗಿಲು ಬಡಿದು ನನ್ನ ಆಚೆ ಬಿಸಾಕಿತ್ತೋ, ಅಥವಾ ಅತಿವೇಗದಲ್ಲಿದ್ದ ರೈಲಿನ  ತೂಗುಯ್ಯಾಲೆಯಲ್ಲಿ ಇನ್ನೂ ಆಧಾರಕ್ಕೆ ಏನೂ ಹಿಡಿಯುವ ಮೊದಲೇ ಸಮತೋಲನ ತಪ್ಪಿ ಆಚೆ ಬಿದ್ದಿದ್ದೆನೋ ನೆನಪಿಲ್ಲ. ಬಿದ್ದದ್ದು ಎಲ್ಲಿಗೆ, ಹೇಗೆ ಎಂಬುದೂ ನೆನಪಿಲ್ಲ, ರೈಲಿನಡಿ ಹೇಗೆ ತಲುಪಿದೆ ನೆನಪಿನಲ್ಲಿಲ್ಲ. ) ಮುಂದಿನ ನೆನಪು ರೈಲಿನಡಿಯ ಬ್ಯಾಟರಿ ಬಾಕ್ಸೋ ಏನೋ ಉಜ್ಜಿ ಎಚ್ಚರವಾಗಿದ್ದು.

ಅಬ್ಬಾ... ರೈಲಿನಿಂದ ಈಚೆ ಬಿದ್ದು ಅದೇ ರೈಲಿನಡಿ ಬಂದುಬಿಟ್ಟೆನಾ...!!!

ಹಾಗಾಗೂ ಬದುಕಿರುವೆನಾ..........??!!

ಹೇಗೆ ಸಾಧ್ಯ!?

ಚಕ್ರಗಳೇನು ನನ್ನ ದೇಹ ಟ್ರ್ಯಾಕಿನ ಒಳಗೆ ತೂರುವವರೆಗೂ ಸುಮ್ಮನಿದ್ದವಾ......??
ತಲೆ ಕೆಟ್ಟು ಹೋಯ್ತು... !!

ಏನಾದರೂ ಹಾಳಾಗಿ ಹೋಗಲಿ, ಆಗ ತಾನೇ ಅನುಭವಿಸಿದ ನನಗೇ ನಂಬಲಸಾಧ್ಯವಾದ ವಿಷಯಗಳು, ನೆನಪು ಮರುಕಳಿಸತೊಡಗಿತು, ನಾ ಯಾರು, ಏಕೆ ಬಂದೆ, ಹೇಗೆ ಬಿದ್ದೆ ಎಲ್ಲಾ, ಇನ್ನೂ ನಾನು ಸ್ಟೇಷನ್ ತಲುಪಿ, ಟಿಕೇಟ್ ತೆಗೆದು ಮಂಡ್ಯಕ್ಕೆ ಹೋಗಬೇಕು...

ಯಾಕೋ ಸುಸ್ತಾಗುತ್ತಿದೆ...

ಹೋದರಾಯ್ತು, ಇನ್ನೂ ಹಳಿಗಳ ಮಧ್ಯೆಯೇ ಕೂತಿದ್ದ ನನಗೆ ಎದ್ದು ಹೊರಡಲು ಶಕ್ತಿಯೇ ಸಾಲುತ್ತಿಲ್ಲಅಷ್ಟರಲ್ಲೇ ಲೂಪ್ ಲೈನಿನ ಟ್ರ್ಯಾಕ್‍ಶಿಫ್ಟರ್, ಚಲಿಸಿತು..

ಆ ಕ್ಷಣಕ್ಕೆ ಅನ್ನಿಸಿದ್ದು, ಅಂದರೆ ಇನ್ನೊಂದು ರೈಲು ವಿರುದ್ದ ದಿಕ್ಕಿನಿಂದ ಬರುತ್ತಿದೆಯೇ? ಅಯ್ಯೋ ಒಂದು ರೈಲಿನಿಂದ ತಪ್ಪಿಸಿಕೊಂಡೆ, ಮೊದಲು ಈ ಟ್ರ್ಯಾಕ್‍ನಿಂದ ಹೊರಗೆ ಹೋಗಿ ಕೂರಬೇಕು, ಅಲ್ಲಿಯೇ ಪಕ್ಕ ಬಿದ್ದಿದ್ದ ನನ್ನ ಬ್ಯಾಗ್ ತೆಗೆದುಕೊಂಡು ಓಡಿ ಹೋಗಿ ಪಕ್ಕದ ಗದ್ದೆ ಬದುವಿನ ಮೇಲೆ ಕೂತೆ.. ರೈಲೇನೂ ಬರಲಿಲ್ಲ... ಸಮಯ ಹತ್ತು ನಿಮಿಷ ಕಳೆದಿರಬೇಕುಇಬ್ಬರು ವ್ಯಕ್ತಿಗಳು ಸ್ಟೇಷನ್ ಮಾಸ್ಟರ್, ಮತ್ತು ಸ್ಟೇಷನ್‍ನ ರೈಲ್ವೆ ಪೋಲಿಸ್ ಕಾನ್ಸ್‌ಟೇಬಲ್ ರೈಲ್ವೇ ಹಳಿಗಳ ಮೇಲೆ ಏನೋ ಹುಡುಕುತ್ತಾ ಬಂದರುನನ್ನನ್ನೇ ಇರಬೇಕು ಅನಿಸಿತು... ಬಹುಶಃ ಕಾವೇರಿಯ ಗಾರ್ಡ್ ನಾನು ಬಿದ್ದಿದ್ದು ನೋಡಿರಬಹುದು, ಸುದ್ದಿ ಮುಟ್ಟಿಸಿರಬೇಕು. ನಾನವರನ್ನ ಕೂಗಿದೆ. ನನ್ನೆಡೆಗೆ ನೋಡಿದ ಅವರು ಬಂದರು, ಸ್ಟೇಷನ್ ಮಾಸ್ಟರ್ ಏನೂ ಮಾತಾಡಲೇ ಇಲ್ಲ, ಸುಮ್ಮನೆ ತಮ್ಮ ಕೈಗೆ ನನ್ನ ಬ್ಯಾಗ್ ತೆಗೆದುಕೊಂಡರು

ಪೋಲೀಸ್: ನಡೆಯಲಾಗುತ್ತದೆಯೇ?

ನಾನು: ಆಗುತ್ತದೆ.... I am OK. (ಆದರೂ ಅವರು ನನ್ನನ್ನು ಹಿಡಿದುಕೊಂಡರು ಅವರ ಜೊತೆ ಸ್ಟೇಷನ್ ಕಡೆ ಹೆಜ್ಜೆ ಹಾಕಿದೆ)

ಅವರೇನೂ ಕೇಳಲಿಲ್ಲ.... ನಾನೇ ಕೇಳಿದೆ, ನನಗರ್ಥವಾಗದ ವಿಷಯ, ನನಗೆ ತಲೆಕೆಡಿಸಿರುವ ವಿಷಯ,

ನಾನು: ಸರ್, ನಾನು ರೈಲಿನಿಂದ ಬಿದ್ದೆ, ಅದೇ ರೈಲಿನಡಿಗೆ ಬಂದೆ, ಹಾಗಾದರೆ ಹೇಗೆ ಬದುಕಿದ್ದೇನೆ ಅರ್ಥವಾಗುತ್ತಿಲ್ಲ, ಇದು ಹೇಗೆ ಸಾಧ್ಯ....?!

ಪೋಲೀಸ್: (ಅವರ ಧ್ವನಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಪಟ್ಟು ವಿಫಲನಾದವರೊಡನೆ ಮಾತನಾಡುತ್ತಿರುವಂತಿತ್ತು.) ಇಲ್ಲಿಗೆ ಹೇಗೆ ಬಂದಿರಿ...

ನಾನು: ಕಾವೇರಿ ಎಕ್ಸ್‌ಪ್ರೆಸ್, ಮಂಡ್ಯದಲ್ಲಿ ಇಳಿಯಬೇಕಿತ್ತು. ನಿದ್ದೆ ಮಾಡಿಬಿಟ್ಟಿದ್ದೆ, ಕಣ್ಣು ಬಿಟ್ಟಾಗ ಮಂಡ್ಯ ದಾಟಿಬಿಟ್ಟಿತ್ತು ಗಾಡಿ, ಇಲ್ಲಿನ ಕ್ರಾಸಿಂಗ್ ಕೊಡುವ ಪ್ಯಾಸಿಂಜರ್‌ನಲ್ಲಿ ವಾಪಸ್ ಹೋಗೋಣ ಅಂದುಕೊಂಡೆ, ಹನಕೆರೆ ಲೂಪ್ ಲೈನ್ ಖಾಲಿ ಕಾಣಿಸಿತು, ಗಾಡಿ ಇನ್ನೇನು ಸ್ಟೇಷನ್‍ನಲ್ಲಿ ನಿಲ್ಲುತ್ತೆ ಎಂದು ಬ್ಯಾಗ್ ತೆಗೆದುಕೊಂಡು ಬಾಗಿಲಿನತ್ತ ಹೊರಟೆ,

ಪೋಲೀಸ್: ಬಾಗಿಲು ಹೊಡೆದು ಆಚೆ ಬಿದ್ದಿರಾ?

ನಾನು: ಹೌದು! (ಹಾಗೆ ಇರಬಹುದು, ಮತ್ತೇನೂ ಅವರು ಕೇಳಲಿಲ್ಲ.. ನಾನೇ ಮುಂದುವರಿಸಿ ಕೇಳಿದೆ) ಆದರೆ ನಾನು ಹೇಗೆ ಬದುಕಿದ್ದೇನೇ ಸರ್. ನನಗರ್ಥವಾಗುತ್ತಿಲ್ಲ... ರೈಲಿನಿಂದ ಬಿದ್ದು, ಅದೇ ರೈಲಿನಡಿ ಹೋಗಿ, ಬದುಕಲು ಹೇಗೆ ಸಾಧ್ಯ...

ಪೋಲೀಸ್: ಇಲ್ಲ, ಅದು ಹಾಗಾಗಿಲ್ಲ... ನೀವು ಬಿದ್ದ ರೈಲಲ್ಲ ನಿಮ್ಮ ಮೇಲೆ ಹೋಗಿದ್ದು. ಕಾವೇರಿ ಹೋಗಿ ೩ ಗಂಟೆಗಳ ಮೇಲಾಗಿದೆ, ಇದು ಮೈಸೂರು-ಬೆಂಗಳೂರು ಮಿಡ್‍ನೈಟ್ ಪ್ಯಾಸೆಂಜರ್, ಕಾವೇರಿ ರಾತ್ರಿ ೯.೪೫ರಲ್ಲಿ ಮೆಯಿನ್‍ಲೈನ್‍ನಲ್ಲಿ ಹೋಯಿತು. ನೀವದರಿಂದ ಬಿದ್ದಾಗ ಪಕ್ಕದ ಲೂಪ್‍ಲೈನ್ ಒಳಗೆ ಬಿದ್ದಿದ್ದೀರಿ. ಈಗ ರಾತ್ರಿ ೧ ಗಂಟೆ..

ನನಗೆ ಸ್ವಲ್ಪ ಅರ್ಥವಾಯಿತು. ನಾನು ೩ ಗಂಟೆಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿ ಲೂಪ್‌ಲೈನೊಳಗೆ ಬಿದ್ದಿದ್ದೆ. ನನ್ನ ಮೇಲೆ ಬೇರೊಂದು ರೈಲು ಹೋದಾಗ ಅದರ ಕೌಕ್ಯಾಚರೋ, ಬ್ಯಾಟರಿ ಬಾಕ್ಸೋ ಏನೋ ಉಜ್ಜಿದಾಗ ನನಗೆ ಪ್ರಜ್ಞೆ ಮರುಕಳಿಸಿದೆ. ಆ ೩೦ ಸೆಕೆಂಡ್ ಜೀವನ್ಮರಣದ ಮಧ್ಯೆ ಇದ್ದು ಜೀವಂತವಾಗಿ ಎದ್ದು ಬಂದಿದ್ದೇನೆ.. ಅದೂ ಸಿಂಗಲ್ ಪೀಸ್‍ನಲ್ಲಿ. ಆದರೂ ನನಗೇನೂ ಅನ್ನಿಸುತ್ತಿಲ್ಲ.  ಏನೋ ಆದದ್ದು ಆಯ್ತು, ಈಗ ಮನೆ ಸೇರಿ ಮಲಗಬೇಕು, ಮನೆಯಲ್ಲಿ ಎಷ್ಟು ಕಾದಿದ್ದಾರೋ ಏನೋ.

ಸ್ಟೇಷನ್ ತಲುಪಿದ ನಂತರ ಕೇಳಿದೆ,  "ಮಂಡ್ಯಕ್ಕೆ ಮುಂದಿನ ರೈಲು ಬೆಳಿಗ್ಗೆ ೭ ಗಂಟೆಗಲ್ಲವೇ? ಒಂದು ಟಿಕೇಟ್ ಕೊಟ್ಟುಬಿಡಿ, ಸ್ಟೇಷನ್‍ನಲ್ಲೇ ಇದ್ದು ಬೆಳ್ಳಿಗ್ಗೆ ಹೊರಡುತ್ತೇನೆ..."

ಪೋಲೀಸ್: ಆ ಚಿಂತೆ ಬೇಡ, ನಾವು ನಿಮ್ಮ ನ್ನ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ.

ನಾನು ಬೆಚ್ಚಿಬಿದ್ದೆ. ಆಟೋ ತಂದಿರಬೇಕು? ಯಾವಾಗ? ಅಷ್ಟುದೂರ ಆಟೋದಲ್ಲಿ ಹೋದರೆ ಖರ್ಚು ಎಷ್ಟುಗುತ್ತೆಬೇಡಪ್ಪಾ! ಈಗೆನಾಯ್ತು, ರೈಲಿನಿಂದ ಬಿದ್ದು, ಮೃತ್ಯುಸ್ಪರ್ಶ ದಾಟಿ ಬಂದಿರುವೆ, ಹಾಗಂತ ಹಿಗ್ಗಾಮುಗ್ಗಾ ಖರ್ಚು ಮಾಡಲು ಸಾಧ್ಯವೇ. ಅವರು ನನ್ನ ವಿಳಾಸ ಕೇಳಿದರು, ಕೊಟ್ಟೆ,
ಫೋನ್ ನಂಬರ್?

ಮನೆಯಲ್ಲಿ ಫೋನ್ ಇರಲಿಲ್ಲ. ಚಿಕ್ಕಪ್ಪನ ಮನೆಯ ನಂಬರ್ ಕೊಟ್ಟೆ..
 
ಅಲ್ಲಿ ಆಗಲೇ ಮತ್ತಿಬ್ಬರು ಪೋಲಿಸ್ ಕೂತಿದ್ದರು.. ನನ್ನ ಕರೆದುಕೊಂಡು ಹೋಗಲು ಆ ಪೋಲಿಸರಿಗೆ ಸ್ಟೇಷನ್ ಮಾಸ್ಟರ್ ಹೇಳಿದರು. ಹೊರಗೆ ನಿಂತಿದ್ದ ಜೀಪ್ ಹತ್ತಲು ಹೇಳಿದರು.. ಸ್ವಲ್ಪ ಸಮಾಧಾನ ಆಯ್ತು... ಆಟೋ ಅಲ್ವಲ್ಲ.. ಪೋಲೀಸ್ ಜೀಪ್ ತಾನೆ, ಖರ್ಚಿಲ್ಲ..  ಆದರೂ ಪೋಲಿಸರ ಸಹವಾಸ, ತಕ್ಷಣ ನನ್ನ ಅಣ್ಣ (ದೊಡ್ಡಪ್ಪನ ಮಗ) ಪೋಲೀಸ್‍ನಲ್ಲಿರುವುದು ನೆನಪಾಯ್ತು. ಧೈರ್ಯವಾಯ್ತು, ಅವರಿಗೂ ಹೇಳಿದೆ. ತಕ್ಷಣ ಕೈಲಿದ್ದ ವೈರ್‌ಲೆಸ್‍ನಿಂದ ಕಂಟ್ರೋಲ್ ರೂಮ್‍ಗೆ  ಹೇಳಿ ನನ್ನಣ್ಣ ಎಲ್ಲಿದ್ದರೂ ಲೊಕೇಟ್ ಮಾಡಿ ವಿಷಯ ತಿಳಿಸುವಂತೆ ಹೇಳಿದರು. ಮಂಡ್ಯಕ್ಕೆ ಜೀಪ್ ಬರುತ್ತಿದ್ದಂತೆ, ಮಂಡ್ಯ ಜಿಲ್ಲಾ ಆಸ್ಪತ್ರೆಯೊಳಗೆ ಜೀಪ್ ನುಗ್ಗಿತು. ಅಯ್ಯೋ ಏನೂ ಬೇಡ, ದಯವಿಟ್ಟು ನನ್ನ ಮನೆ ತಲುಪಿಸಿ ಬಿಡಿ ಎಂದೆ, ಅವರು ಏನಿಲ್ಲ ಬರಿ ಪ್ರಥಮ ಚಿಕಿತ್ಸೆ ಅಷ್ಟೇ, ಯೋಚಿಸಬೇಡ ಅಂದರು, ನನಗೆ ಪ್ರಜ್ಞೆ ತಪ್ಪಿತ್ತು, (ಬಿದ್ದಾಗ ನನ್ನ ಮುಖ ಜಲ್ಲಿಕಲ್ಲು ಸ್ಲೀಪರ್‌ಗೆ ಬಡಿದು, ಹರಿದು ಹೋಗಿ, ರಕ್ತಸಿಕ್ತವಾಗಿ, ವಿಕಾರವಾಗಿತ್ತು, ನನಗೆ ಗೊತ್ತಿರಲಿಲ್ಲ ಆಷ್ಟೇ. , ಸಾಕಷ್ಟು ರಕ್ತ ಕಳೆದುಕೊಂಡಿದ್ದೆ.) ಮತ್ತೆ ಒಂದೆರಡು ಕ್ಷಣದ ನೆನಪೆಂದರೆ ಆ ರಾತ್ರಿ ನನ್ನ ಹರಿದು ಹೋದ ಮುಖಕ್ಕೆ ಅಲ್ಲಿನ ಸರ್ಜನ್ ಹೊಲಿಗೆ ಹಾಕುತ್ತಿದ್ದರು, ಮತ್ತೆ ನಾನು ಎಚ್ಚರವಾದಾಗ ಬೆಳಿಗ್ಗೆ ೧೧ ದಾಟಿತ್ತು. ನನ್ನನ್ನು ವಾರ್ಡ್‍ಗೆ ಹಾಕಿದ್ದರು. ಅಮ್ಮ, ತಮ್ಮ, ಬಂಧು ಮಿತ್ರರು ಬಂದಿದ್ದರು. ಹೊಲಿಗೆ ಹಾಕಿದ ತುಟಿ, ಗದ್ದ, ಹುಬ್ಬು, ೩ ಕೈಬೆರಳುಗಳ ಮೂಳೆ ಮುರಿದಿತ್ತು. ೯ ದಿನ ಆಸ್ಪತ್ರೆಯಲ್ಲಿದ್ದು ಮನೆಗೆ ಮರಳಿದೆ..

ನಾನು ನಡೆದ ಘಟನೆಯನ್ನ ಹೇಳಿದರೆ ಆಸ್ಪತ್ರೆಯಲ್ಲಿ ಯಾರೂ ನಂಬುತ್ತಿರಲಿಲ್ಲ. ಪೋಲೀಸ್ ನನ್ನ ಹೇಳಿಕೆ ತೆಗೆದುಕೊಳ್ಳಲು ಬಂದಾಗ ನಾನವರನ್ನ ಕೇಳಿದೆ,
"ಸರ್, ನನಗೆ ಫೈನ್ ಹಾಕ್ತೀರಾ!"
"ಎಂತಹಾ ಫೈನ್?!"
"ನನಗೆ ಪಾಸ್ ಇದ್ದದ್ದು, ಮೈಸೂರು, ಮಂಡ್ಯ ನಡುವೆ, ನಾನು ಬಿದ್ದಿದ್ದು, ಮಂಡ್ಯ ದಾಟಿದ ನಂತರ, ಟಿಕೇಟು ರಹಿತ ಪ್ರಯಾಣ ಅಂತಾ ಫೈನ್ ಹಾಕ್ತೀರಾ!"
"ಆಯ್ಯೋ, ಮೃತ್ಯುವೇ ಬಿಟ್ಟು ಕಳಿಸಿರುವಾಗ ನಾವು ಹಾಕೋ ಫೈನ್ ಏನ್ ಬಂತು. ಫೈನ್ ಹಾಕೋಕೆ ಬರಲಿಲ್ಲ  ನಾವು ಬಂದಿದ್ದು ಸ್ಟೇಟ್‍ಮೆಂಟ್ ತಗೋಳೋಕೆ, ಇದೊಂದು ನಾವು ಪಾಲಿಸಬೇಕಾದ ಪ್ರೊಸಿಜರ್ನನ್ನ ೨೮ ವರ್ಷ ಸರ್ವೀಸ್ನಲ್ಲಿ ಬಹಳಷ್ಟು ಬಾಗಿಲಿನಿಂದ ಬಿದ್ದ ಕೇಸ್ ನೋಡಿದಿನಿ, ಯಾರೂ ಬದುಕಿಲ್ಲ, ಅಂತಹದರಲ್ಲಿ ರೈಲಿನಿಂದ ಬಿದ್ದು ಉಳಿದದ್ದಲ್ಲದೆ, ಇನ್ನೊಂದು ರೈಲಿನಡಿ ಬಂದೂ ಯಾವ ಅಂಗವೈಕಲ್ಯವೂ ಆಗದೆ ಉಳಿದಿರೊದು ಅಂದ್ರೆ ಬಹಳ ಗಟ್ಟಿಜೀವ".

ನನ್ನ ಮಾತು ನಂಬದಿದ್ದ ಜನ ರೈಲ್ವೇ ಪೋಲೀಸ್‍ನವರು ಹೇಳಿದ ವಿವರ ಕೇಳಿದ ಮೇಲೆ ನಂಬಿದರು, ನನಗೂ ಗೊತ್ತಿರದಿದ್ದ ರೈಲ್ವೇ ಪೋಲಿಸ್ ವರ್ಶನ್ ಹೀಗಿತ್ತು;
ಮಿಡ್‍ನೈಟ್ ಪ್ಯಾಸೆಂಜರ್ ಟ್ರೈನ್ ಲೂಪ್‍ಲೈನಿಗೆ ಶೆಡ್ಯೂಲ್ ಆದಾಗ ಅದರ ಚಾಲಕ ಹೆಡ್‍ಲೈಟ್ ಬೆಳಕಿನಲ್ಲಿ ನನ್ನ ದೇಹ ನೋಡಿ, ವೈರ್‌‍ಲೆಸ್‍ (ವಾಕಿಟಾಕಿ) ಮುಖಾಂತರ "ಟ್ರ್ಯಾಕ್‍ನಲ್ಲಿ ಯಾವುದೋ ಬಾಡಿ ಬಿದ್ದಿದ್ದೆ, ಯಾರೋ ಆತ್ಮಹತ್ಯೆ ಮಾಡಿಕೊಂಡಿರಬೇಕು, ಈಗ ಗಾಡಿ ಅದರ ಮೇಲೆ ಹರಿಯುತ್ತದೆ, ತೆಗೆಸಿಬಿಡಿ" ಎಂದು ಸಂದೇಶ ಕೊಟ್ಟಿದ್ದ... ಹನಕೆರೆ ರೈಲ್ವೇ ಸ್ಟೇಷನ್‍ನವರು ಮಂಡ್ಯ ಗ್ರಾಮಾಂತರ ಪೋಲೀಸ್‍ಗೆ 'ಬಾಡಿ' ಎಂದೇ ಮಾಹಿತಿ ಕೊಟ್ಟು ಕರೆಸಿದರು, ಮಂಡ್ಯ ಪೋಲೀಸ್ ಜೀಪ್ ಬರುವುದರೊಳಗೆ 'ಬಾಡಿ ಹುಡುಕೋಣ' ಎಂದು ಹೊರಟವರಿಗೆ ಜೀವಂತವಾಗೇ ನಾನು ಸಿಕ್ಕಿದ್ದೆ.

ಅಲ್ಲಿಯವರೆಗೂ ಲವ್ ಫೆಲ್ಯೂರ್ ಅಂತೆ, ಅದಕ್ಕೆ ಆತ್ಮಹತ್ಯೆ ಪ್ರಯತ್ನ ಮಾಡಿದ್ದಂತೆ, ಎಂಬ ಅಂತೆ ಕಂತೆಗಳನ್ನು ಮಾತಾಡುತ್ತಿದವರ ಬಾಯಿಗೆ ಬೀಗ ಬಿತ್ತು.. (ಒಮ್ಮೊಮ್ಮೆ ಅನಿಸುತ್ತದೆ, ಒಂದು ವೇಳೆ ನಾನು ಸತ್ತಿದ್ದರೆ ನಿಜವಾಗಿ ನಡೆದ್ದದ್ದು ಹೇಳಲು ಯಾರೂ ಇಲ್ಲ.. ಕಥೆಗಳೇ ನಿಜವಾಗುತ್ತಿತ್ತು. ನನ್ನ ತಂದೆ ತಾಯಿ ಏನೆಂದು ಕೊಳ್ಳುತ್ತಿದ್ದರೋ.)

ಈ ಘಟನೆ ನನ್ನ ಜೀವನದ ದೃಷ್ಠಿಕೋನವನ್ನೆ ಬದಲಾಯಿಸಿಬಿಟ್ಟಿತು, ಚೆಲ್ಲು ಚೆಲ್ಲು ತುಂಟಾಟದ ನಾನು ವಿರಾಗಿಯಂತೆ ಮಾತಾಡುತ್ತಿದ್ದೆ. ಯಾವುದಕ್ಕೂ ಹೆದರಿಕೆ ಎಂಬುದೇ ಇರಲಿಲ್ಲ. ಸಾವೆಂಬುದು ಭಯ ಪಡುವ ವಿಷಯವೆಂದು ಅನಿಸಲೇ ಇಲ್ಲ. ಈಗಲೂ ಅನಿಸುವುದಿಲ್ಲ. ಮೃತ್ಯುಸ್ಪರ್ಶದ ನಂತರ ಪ್ರತಿಯೊಂದು ವಿಷಯ, ವಸ್ತು, ಘಟನೆಯನ್ನ ನಾನು ಸತ್ತುಹೋಗಿದ್ದರೆ ಹೇಗೆ ನಡೆದಿರುತ್ತಿತ್ತು ಎಂದು ಕಲ್ಪಿಸೇ ನೋಡುತ್ತಿದ್ದೆ. ಅದು ಸುಮ್ಮನೆ ಕಲ್ಪಿಸಿಕೊಳ್ಳಲಾರದ ಸಂಗತಿ. ನನ್ನ ಬೆಲೆ ನನಗೆ ತಿಳಿಯಿತು, ಹೆತ್ತು ಬೆಳೆಸಿದವರನ್ನ ಬಿಟ್ಟರೆ ಮಿಕ್ಕೆಲ್ಲರಿಗೂ ನಾನೊಂದು ಕಥೆ ಅಷ್ಟೆ. ನನ್ನ ಬಂಧು ಭಾಂಧವರಿಗೆ ನನ್ನ ಬದುಕು ಎಷ್ಟು ಮುಖ್ಯ(ವಲ್ಲ) ಎಂದು ಪ್ರತ್ಯಕ್ಷ ನೋಡಿಬಿಟ್ಟೆ, ತುಟಿ ಅನುಕಂಪಕ್ಕೆ, ಶಿಷ್ಟಾಚಾರಕ್ಕೆ, ದಾಕ್ಷಿಣ್ಯಕ್ಕೆ, ಆಸ್ಪತ್ರೆಗೆ ಬಂದು ಹೋಗುತ್ತಿದ್ದವರನ್ನ ನೋಡಿದೆ, ಆಸ್ಪತ್ರೆಗೆಂದೂ ಬಾರದೆ, ಘಟನೆಯ ಎಷ್ಟೋ ದಿನದ ಮೇಲೆ ಸಿಕ್ಕ, ಆದರೆ ಹೃದಯದಲ್ಲಿ ಅಷ್ಟೇ ಪ್ರೀತಿಯಿದ್ದ ಆತ್ಮೀಯರನ್ನ ಕಂಡೆ. ನನ್ನನ್ನ ನಾನು ಬಹಳ ಅತಿ-ಅಂದಾಜು (Over Estimate)  ಮಾಡಿಕೊಂಡಿದ್ದೆ ಎಂಬ ಅರಿವು ಬಹಳ ಬೇಗ ನನಗಾಯ್ತು.

ಆ ದಿನಗಳಲ್ಲಿ ನಾನೇನು ಸಂಪಾದಿಸುತ್ತಿರಲಿಲ್ಲ. ಯಾರ ಬದುಕೂ ನನ್ನ ಬದುಕಿನ ಮೇಲೆ ಅವಲಂಬಿಸಿರಲಿಲ್ಲ. ಹೀಗಿದ್ದೂ ತಂದೆ ತಾಯಿಗೆ ಮಕ್ಕಳ ಮೇಲಿನ ಭಾವನಾತ್ಮಕ ಸಂಬಂಧದ ಆಳದ ಪರಿಚಯ ನನಗಾಯ್ತು. ಆರ್ಥಿಕ ಅವಲಂಬನೆಯೇ ಬದುಕಿನ ಗುಣಮಟ್ಟವನ್ನ ನಿರ್ಧರಿಸುವುದಿಲ್ಲ ಭಾವನಾತ್ಮಕ ಅವಲಂಬನೆ (Emotional Dependency) ಕೂಡ ಬದುಕಿನಲ್ಲಿ ಅದರದೇ ಆದ ಬಹುಮುಖ್ಯ ಆಯಾಮವನ್ನ ಹೊಂದಿದೆ ಎಂದರ್ಥವಾಯ್ತು. ಹರಕೆ ಹೊತ್ತು, ದೈವವ ಕಾಡಿ ಬೇಡಿ, ಮದುವೆಯಾದ ೧೨ ವರ್ಷಗಳ ಮೇಲೆ, ಪಡೆದ ಮಗು ನಾನು. ಅಮ್ಮ ಅಂದಿನಿಂದ ಸೋಮವಾರ ಉಪವಾಸ ಮಾಡುವೆನೆಂದು ನಿರ್ಧರಿಸಿದರು. ದೈವಕ್ಕೆ ನಮಿಸಿದರು,

ಘಟನೆ ನಡೆದು ಬಹಳ ದಿನಗಳವರೆಗೂ ಅಪ್ಪ ಬೀರುವಿನಲ್ಲಿ ಏನಾದರೂ ಹುಡುಕಲು ಹೊರಟರೆ, ನನ್ನ ಅಂಕಪಟ್ಟಿಗಳು, ಪ್ರಮಾಣಪತ್ರಗಳು, ನನ್ನ ಭಾವಚಿತ್ರಗಳು, ನನ್ನ ಚಿಕ್ಕವಯಸ್ಸಿನ ಚಂದದ ಬಟ್ಟೆಗಳು ಏನಾದರೂ ಕೈಗೆ ಸಿಗುತ್ತಿದ್ದವು. ನಾನಾಗ ಪಕ್ಕದಲ್ಲೇ ಇದ್ದರೆ ನನಗೆ ಅನಿಸುತ್ತಿತ್ತು, ಒಂದು ವೇಳೆ ನಾನು ಈಗ ಬದುಕಿರದಿದ್ದರೆ, ಹೀಗೆ ಇವು ಕೈಗೆ ಸಿಕ್ಕಾಗ ಆ ಮನ ಎಷ್ಟು ನೋಯಬಹುದು ಎಂದು, ನನ್ನ ನಾನು ಅಪ್ಪನ ಜಾಗದಲ್ಲಿ ಕಲ್ಪಿಸಿಕೊಂಡು ನಡುಗಿ ಹೋಗುತ್ತಿದ್ದೆ. ಒಮ್ಮೆ ಅಪ್ಪನಿಗೆ ಹೇಳಿಯೂ ಬಿಟ್ಟೆ,
ಅಪ್ಪ ಹೇಳಿದರು, ಅಂತಹ ದೃಶ್ಯಾವಳಿಗಳನ್ನೆಲ್ಲ ಯೋಚಿಸಬೇಡ, ಏಕೆಂದರೆ ನಾನೂ ಉಳಿದಿರುತ್ತಿರಲ್ಲಿಲ್ಲ.. ನನ್ನ ಹಿಂದೆ ನಿನ್ನಮ್ಮನೂ ಉಳಿದಿರುತ್ತಿರಲ್ಲಿಲ್ಲ..

ಅದು ಸತ್ಯ...ನಿಷ್ಠುರ ಸತ್ಯ ಹೇಳುವಾಗಿನ ನಿರ್ಲಿಪ್ತ, ವಿರಾಗಿ ಕಣ್ಣ ನೋಟ ಅವರಲ್ಲಿತ್ತು. ನನ್ನ ಮೇಲಿದ್ದ ಅವರ ಭಾವನಾತ್ಮಕ ಅವಲಂಬನೆಗೆ ಹೇಗೆ ಪ್ರತಿಕ್ರಿಯಿಸಬೇಕೊ ಗೊತ್ತಾಗಲೇ ಇಲ್ಲ. ಸಾವಿನ ದವಡೆಯಿಂದ ನನ್ನನ್ನವರು ನಂಬಲಸದಳ ರೀತಿಯಲ್ಲಿ ಪಡೆದಿದ್ದರು.

ಬಹುಶಃ ನನ್ನ ಅಪ್ಪ ಅಮ್ಮ ಉಳಿಯುತ್ತಿರಲಿಲ್ಲ. ತಮ್ಮ ಪರದೇಶಿಯಾಗುತ್ತಿದ್ದ..

ಮೊದಲೆಲ್ಲಾ ಸಾವಿನ ಬಗ್ಗೆ ಹಗುರವಾಗಿ ಮಾತಾಡುತ್ತಿದ್ದೆ, ಅದೊಂದು ಜೀವನದ ಘಟ್ಟ ಅಷ್ಟೇ (ಅಂತಿಮ ಘಟ್ಟ) ಎಂದು ಉಡಾಫೆ ಮಾಡುತ್ತಿದ್ದೆ.  ನಾನು ಅಲ್ಪಾಯು ಎಂದು ಹೇಳಿಕೊಳ್ಳುತ್ತಿದ್ದೆ, ನಾನು ಬದುಕೋದು ಕೇವಲ ಇಷ್ಟೇ ವರ್ಷ ಎಂದು ಹೇಳಿಕೊಳ್ಳುತ್ತಿದ್ದೆ  ನನ್ನ ಸಾವಿನ ದಿನವನ್ನೂ ಹೇಳುತ್ತಿದ್ದೆ.  (ನನಗೇಕೆ ಹಾಗನಿಸಿತೋ ಗೊತ್ತಿಲ್ಲ, ನಾನು ಬಹಳ ವರ್ಷ ಹಾಗೇ ಅಂದುಕೊಂಡಿದ್ದೆ, ಈಗ ನೆನೆಸಿಕೊಂಡರೆ ನನಗೆ ನಾನೆಷ್ಟು ಬಾಲಿಶ ಎನಿಸುತ್ತದೆ.) ಮೃತ್ಯುಸ್ಪರ್ಶದ ನಂತರ ಸಾವು ಹಗುರವಲ್ಲ, ಕ್ರೂರವೂ ಅಲ್ಲ, ಜೀವನದ ಮೇಲೆ ಪ್ರೀತಿ ತಂದು ಕೊಟ್ಟ, ಜೀವನವನ್ನ ನೋಡೋ ವಿಧಾನ ಕಲಿಸಿದ ಗುರು ಎನಿಸುತ್ತೆ.  ಕೋಟಿ ಕೊಟ್ಟರೂ ಸಿಗದ ಅನುಭೂತಿ ಮೃತ್ಯುಸ್ಪರ್ಶ, ಅದನ್ನ ಪ್ಲಾನ್ ಮಾಡಿ ಪಡೆಯಲಾಗುವುದಿಲ್ಲ, ನಮ್ಮ ನಿಜದ ಬೆಲೆಯನ್ನ ಅದು ತಿಳಿಸುತ್ತೆ. ನಮ್ಮವರು ಮತ್ತು ಪರರ ನಡುವಿನ ಅಂತರ ತೋರಿಸುತ್ತೆ..  ನಮ್ಮ ನಿಜವಾದ ಬೆಲೆ ತಿಳಿಯುವುದು ಜೀವನದ ದುರ್ಲಭ ಆದರೆ ಅಷ್ಟೇ ಸುಂದರ ಅನುಭವ (ಈ ಮಾತು ನಂಬುವುದು ಕಷ್ಟ ಎಂದು ಬಲ್ಲೆ, ಅದರೆ Its a fact that I felt). ಮೃತ್ಯುಸ್ಪರ್ಶಿಗೆ ಸಾವಿನ ಭಯವೆಂದೂ ಇರುವುದಿಲ್ಲ. (ಜೀವನದ ಭಯಗಳದ್ದು ಬೇರೆ ವಿಷಯ ಬಿಡಿ), ಅದು ಜೀವನದ ಆಸೆ ತುಂಬಿ ವೈರಾಗ್ಯವನ್ನೂ ತುಂಬುತ್ತದೆ.. ನಮ್ಮ ಸಾಧನೆಗಳೆಲ್ಲಾ ಶೂನ್ಯ ಎನ್ನುವ ಭಾವ ತುಂಬುತ್ತದೆ.. ಮುಂದಿನ ಬದುಕನ್ನ ಚಂದದಲ್ಲಿ, ಜನ ನೆನೆಯುವಂತೆ ಕಳೆಯಬೇಕು ಎನಿಸಿಬಿಡುತ್ತದೆ... ಸಾಧನೆಗಳ ಮೇಲೆಂದೂ ಅಹಂಭಾವ ಬರುವುದೇ ಇಲ್ಲ...  ನಮಗೇ ತಿಳಿಯದೇ ನಮ್ಮಲ್ಲಿ ಇದ್ದಿರಬಹುದಾದ ಕೊಬ್ಬೆಲ್ಲಾ ಇಳಿದು ಹೋಗುತ್ತದೆ.. ಬಹಳಷ್ಟನ್ನ ಪದಗಳಲ್ಲಿ ಹೇಳಲಾರೆವು, ಮೃತ್ಯುಸ್ಪರ್ಶದನುಭವವೂ  (ಸ್ಪರ್ಶವಲ್ಲ. ಅದರ ಅನುಭವ.) ಪದಗಳಲ್ಲಿ ಸಂಪೂರ್ಣವಾಗಿ ಹೇಳಲಾರದ ಬದುಕಿನ ಬೆಲೆ ತಿಳಿಸುವ ಅನುಭವ.

ಇದರ ನಂತರ ಜೀವನದ ದಿಕ್ಕು ಬದಲಾಯ್ತು. ಅಂಕಪಟ್ಟಿಗಳ ಅನುಸಾರ ನಾನು ಅಕಾಡಮಿಕ್ ಸ್ಕೋರರ್ ಅಲ್ಲ. ಸ್ನಾತಕೋತ್ತರ ಪದವಿಯ ಪ್ರವೇಶಕ್ಕೆ ಕನಸು ಕಾಣಲಿಕ್ಕೂ ಅಯೋಗ್ಯವಾದ ಅಂಕಪಟ್ಟಿಗಳನ್ನ ಇಟ್ಟುಕೊಂಡಿದ್ದ ನನಗೆ ಆ ಪದವಿ ಪ್ರಥಮ ದರ್ಜೆಯಲ್ಲಿ ಒಲಿದು ಬಂತು.  ಬಯಸಿದ ಸ್ಥಳದಲ್ಲೇ, ಬಯಸಿದ ಸಂಬಳದ ಎರಡರಷ್ಟು ಸಂಬಳದ ಕೆಲಸ. ದೈವವಾಣಿಯೆಂದು ನಾನು ನಂಬುವ (ಅಂತರ್ವಾಣಿಯೆಂದು ಕೆಲವರು ಹೇಳುವ) ಸಂಭಾಷಣೆಗಳು, ಪ್ರೀತಿಸುವ ಜನ. ಜೀವನದಲ್ಲಿ ಹೆಜ್ಜೆಗುರುತು ಮೂಡಿಸಲು ಬೇಕಾದಷ್ಟು ಅವಕಾಶ ಎಲ್ಲವೂ ಸಿಕ್ಕಿತು...


ಆದರೆ  "ಜೀವನ ಇನ್ನು ನಿನ್ನದಲ್ಲ, ನನ್ನದು, ನನ್ನ ಉದ್ದೇಶ ಸಾಧನೆಗಾಗಿ ನೀನಲ್ಲಿರುವೆ, ಯಾವ ಆಸೆಗಳನ್ನಿಟ್ಟುಕೊಳ್ಳುವ ಹಕ್ಕೂ ನಿನಗಿಲ್ಲ. ನಿನಗೇನು ಬೇಕೋ ಅದನ್ನು ಕಾಲಕಾಲಕ್ಕೆ ಪೂರೈಸುವ ಹೊಣೆ ನನ್ನದು. ನಿನ್ನ ಸುಖದ ಜವಾಬ್ದಾರಿ ನನ್ನದು" ಎಂದು ಪ್ರೀತಿ ತುಂಬಿದ ದನಿಯಲ್ಲಿ ಎಚ್ಚರಿಸುವ ದೈವವಾಣಿ ಈಗಲೂ ಕಿವಿಯಲಿ ಅನುರಣಿಸುತಿದೆ.
 
ಅದೇನು ಅವನುದ್ದೇಶವೋ ನೋಡಬೇಕು.


 
(19-8-2013
ರಿಂದ ಮಂಡ್ಯ ಮತ್ತು ಮದ್ದೂರಿನ ನಡುವೆ ಜೋಡಿ ರೈಲು ಮಾರ್ಗ ಕಾರ್ಯಾಚರಿಸುತ್ತಿದೆ, ರೈಲುಗಳು ಹನಕೆರೆಯಲ್ಲಿ ಕ್ರಾಸಿಂಗ್‌ಗಾಗಿ ನಿಲ್ಲುವುದಿಲ್ಲ.)