Sunday, 11 June 2017

ಚಿತ್ರಾಂಗದೆಯ ಸ್ವಗತ.(ಗಂಭೀರ ದನಿಯಲ್ಲಿ)

ಬರುತ್ತಿದ್ದಾನಂತೆ ಅರ್ಜುನ....!
ನನ್ನನ್ನು ಸರಿಗಟ್ಟಿದ ಒಬ್ಬನೇ ಗಂಡು... ಅಶ್ವಮೇಧದ ಕುದುರೆಯ ಹಿಂದೆ ಬರುತ್ತಿದ್ದಾನಂತೆ... ಬರಲಿ... ನನ್ನ ವರ್ಷಗಳ ಕಾಯುವಿಕೆಗೆ ತಣಿವ ಕಾಲ ಬಂತು.

ನಾನು.. ಮಣಿಪುರದ ರಾಜಕುವರಿ... ಚಿತ್ರಾಂಗದೆ.. ನನ್ನಪ್ಪ ನನ್ನಲ್ಲಿ ವೀರನನ್ನು ಕಾಣಲಿಚ್ಚಿಸಿದರು.. ನಾನೆಂದೂ ಅವರಿಗೆ ನಿರಾಸೆ ಮಾಡಲಿಲ್ಲ. ಹೆಣ್ಣಾಗಿ ಹುಟ್ಟಿದರೂ ರಾಜಕುಮಾರನಂತೆ ಬೆಳೆದೆ. ಭೂಮಂಡಲದಲ್ಲೇ ನನ್ನ ಶೌರ್ಯವನ್ನು ಮೀರಿಸುವವರು ಯಾರೂ ಇರಲಿಲ್ಲ.... ಸುಕೋಮಲ ರಾಜಕುಮಾರಿಯರಂತೆ ಪಲ್ಲಕ್ಕಿಯಲ್ಲಿ ನಾ ಕೂತಿದ್ದೇ ಇಲ್ಲ.. ಗಂಡುಭೀರಿಯಂತೆ ಒಬ್ಬಳೇ ಕುದುರೆ ಹತ್ತಿ ಹೊರಡುತ್ತಿದ್ದೆ.

ಸಶಸ್ತ್ರ ಹೋರಾಟದಲ್ಲಿ ಎಂದಿಗೂ ಅಜೇಯಳು ನಾನು...


( ಕ್ಷಣಮೌನ... ಮೆಲುವಾದ ದನಿಯಲ್ಲಿ... ನೆನಪುಗಳಲ್ಲಿ ಜಾರುತ್ತಾ.....)

ಈ ಅಜೇಯ ರಾಜಕುವರಿಯ ಮನವನ್ನು ಜಯಿಸಿಬಿಟ್ಟ ಅವನು..... ಅರ್ಜುನ.
ಹೀಗೇ ಊರೂರು ಅಲೆಯುತ್ತಾ ಮಣಿಪುರಕ್ಕೆ ಬಂದ ಕುರುಕುಲದ ರಾಜಪುತ್ರ.. ಏನು ಮೋಹಕ ಮಾತು... ಎಂಥಹಾ ಮೋಡಿಯ ಮಾಟಗಾರ... ಸಾಮು ಮಾಡಿದ ದೇಹ... ಅಪ್ಪ ಸುರೇಂದ್ರನದೇ ನಿಲುಮೆ.

ನಾ ಮೃದುವಾದೆ... ಕೋಮಲವಾದೆ. ಅವನಿಗಾಗಿ.... ಎಂದೂ ಕಾಣದ ಸ್ತ್ರೀತ್ವದ ಸೋಪಾನವೇರಿದೆ...
ನನ್ನನ್ನೇ ನಾ ಅವನಿಗೆ ಕೊಟ್ಟುಕೊಂಡೆ... ಗಾಂಧರ್ವ ವಿವಾಹ ನಮ್ಮದು.  ನನ್ನನ್ನು ತನ್ನ ಪ್ರೇಮದಿಂದ ಗೆದ್ದುಬಿಟ್ಟ ಅವನು... ಸವ್ಯಸಾಚಿ ಅರ್ಜುನ.


( ಕ್ಷಣ ಮೌನ... ಆಮೇಲೊಂದು ನಿಟ್ಟುಸಿರು... ನೋವಿನ ದನಿಯಲ್ಲಿ ಮುಂದುವರಿಸುತ್ತಾಳೆ..)

ಹೇಗೆ ಬಂದನೋ ಹಾಗೇ ಕಣ್ಮರೆಯಾಗಿ ಹೋದ. ಮತ್ತೆಂದೂ ಬಾರದ ಹಾಗೆ... 
ನನ್ನ ಮೇಲೆ ಆರೋಪಗಳನ್ನು ಹೊರಿಸಿದನಂತೆ... 
ನನ್ನ ಮಗುವಿನ ತಂದೆ ಅವನಲ್ಲವಂತೆ...
ಎಂಥಾ ನೀಚ ಆರೋಪ ನನ್ನ ಮೇಲೆ.... ಮಣಿಪುರದ ಈ ಅರಸು ಕುಮಾರಿ ಪರಿತ್ಯಕ್ತಳಾಗಿ ಹೋದಳು..

ಅಮ್ಮನಿಗೆ ಕೊಡುವಷ್ಟೇ ಗೌರವವನ್ನು ಹೆಂಡತಿಗೂ ನೀಡಬೇಕು...  
ಹೆಂಡತಿಗೆ "ಜಾಯಾ" ಅಂದರೆ ಜನ್ಮದಾತೆ ಎಂದೂ ಹೆಸರು... 
ಹೆಂಡತಿ ಗಂಡನನ್ನು ಗಂಡ ಮತ್ತು ಮಗು ಎಂದು ಎರಡಾಗಿ ಸೀಳುವವಳು... ಗಂಡನಿಗೆ ಮಕ್ಕಳ ಮೂಲಕ ಮರುಹುಟ್ಟು ನೀಡುವ ತಾಯಿ...  ಆ ಗೌರವ ಅವನು ಕೊಡಲಿಲ್ಲ... ಈಗ ನನ್ನ ಮಗ ಬಭ್ರುವಾಹನ ನನಗೆ ಆ ಗೌರವವನ್ನು ತಂದುಕೊಡಬೇಕು.


(ಕ್ಷಣಮೌನ.. ಗಂಭೀರವಾದ ಧೃಢ ಸಂಕಲ್ಪದ ದನಿಯಲ್ಲಿ ಮುಂದುವರಿಯುತ್ತಾಳೆ...)

ಅಂದೇ ನಿರ್ಧರಿಸಿದೆ...  ಅರ್ಜುನನನ್ನು ಅರ್ಜುನನಲ್ಲದೇ ಇನ್ನಾರು ಸೋಲಿಸುವರು? ಅವನ ಮಗ.. ನನ್ನ ಬಭ್ರುವಾಹನ... ಅರ್ಜುನನದೇ ಪ್ರತಿರೂಪ. ಅವನದೇ ಶೌರ್ಯ... ಅವನಮ್ಮದೇ ಕೆಚ್ಚು,

ಅವನು ಬಭ್ರುವಾಹನನಿಗೆ ಸೋತ ದಿನ ಅವನು ಒಪ್ಪುತ್ತಾನೆ... ಅವನು ಒಪ್ಪಿದ ದಿನ ನನಗೆ ಅಪಮಾನದಿಂದ ಮುಕ್ತಿ.  ನನ್ನ ಮೇಲಿನ ಕಳಂಕ ಅಂದು ತೊಲಗುತ್ತದೆ... ತಯಾರು ಮಾಡಿದ್ದೇನೆ ಮಗನನ್ನು...

ಬರಲಿ...

ಬಭ್ರುವಾಹನನ ತಾಯಿಯಷ್ಟೇ ಅಲ್ಲ... ನಾ ಅವನ ಗುರುವೂ ಹೌದು... ಅವನಿಂದ ನಾ ಗುರುದಕ್ಷಿಣೆಯಲ್ಲಿ ಕೇಳಿದ್ದು ಅರ್ಜುನನ ಸೋಲು...

ಅರ್ಜುನನನ್ನು ಸಶಸ್ತ್ರ ಸಮರದಲ್ಲಿ ಹೆಡೆಮುರಿ ಕಟ್ಟಿ ತಂದೊಪ್ಪಿಸಬೇಕೆಂದು...

ತನ್ನ ತಂದೆ ಯಾರೆಂದು ಕೇಳುತ್ತಲೇ ಇದ್ದಾನೆ ಮಗ.... ಎಂದು ನನಗೆ ಅರ್ಜುನನ್ನು ಸೋಲಿಸಿ ತಂದೊಪ್ಪಿಸುವೆಯೋ ಅಂದೇ ನಿನ್ನ ತಂದೆಯ ಬಗ್ಗೆ ಹೇಳುವೆ ಎಂದು ಮಾತು ಕೊಟ್ಟಿದ್ದೇನೆ...

ಬಭ್ರುವಾಹನನಿಗೆ ಅವನ ತಂದೆಯ ಬಗ್ಗೆ ಕುತೂಹಲ... ಅರ್ಜುನನನ್ನು ತಂದೊಪ್ಪಿಸಿ ತಂದೆಯ ವಿವರ ತಿಳಿಯಲು ಅವನಿಗೂ ಕಾತರ...(ಆತ್ಮವಿಶ್ವಾಸದ ದನಿಯಲ್ಲಿ....)

ರಹಸ್ಯೋಧ್ಘಾಟನೆಯ ಸಮಯ ಹತ್ತಿರ ಬರುತ್ತಿದೆ. ನನಗೆ ಅನುಮಾನವೇ ಇಲ್ಲ.... ಅರ್ಜುನನ ಮಗ, ಅರ್ಜುನನ ಮಗನೆಂಬುದನ್ನು ಶ್ರುತಪಡಿಸುತ್ತಾನೆ... ನನ್ನ ಕಾಲಡಿ ಅರ್ಜುನನನ್ನು ತಂದು ಕೆಡವುತ್ತಾನೆ...
ಅವನನ್ನು ಎತ್ತಿ ಉಪಚರಿಸಲು ಸಿದ್ದಳಾಗಬೇಕಷ್ಟೇ....
ಹೇಳುತ್ತೇನೆ ಅವನಿಗೆ... "ಮಣಿಪುರಕ್ಕೆ ಸಪ್ರೇಮ ಸ್ವಾಗತ ಅರ್ಜುನ..., ಕುಶಲವೇ...! ಕ್ಷೇಮವೇ....!"
ಕೇಳುತ್ತೇನೆ...... "ನಿನ್ನ ಮಗನ ಬಗ್ಗೆ ಹೆಮ್ಮೆಯಿಲ್ಲವೇ...!"

Wednesday, 2 November 2016

ಸ್ವಾನುಕಂಪದ ರೊಚ್ಚು!

ಕರ್ಣ ಕೃಷ್ಣರ ಸಂಭಾಷಣೆಯೊಂದು ಹೀಗಿದೆ.

ಕರ್ಣ ಮತ್ತು ಕೃಷ್ಣ 
ಚಿತ್ರಕೃಪೆ: ರಾಮಾನಂದ ಸಾಗರರ ಶ್ರೀಕೃಷ್ಣ ಧಾರವಾಹಿಯಿಂದ
 ಕರ್ಣ ಹೇಳುತ್ತಾನೆ.
"ನನಗೆ ಬಹಳ ಅನ್ಯಾಯವಾಗಿದೆ.
ನಾನು ಕಾನೀನನಾದದ್ದು  ನನ್ನ ತಪ್ಪೇ? 
(ಕಾನೀನ-ಮದುವೆಯಾಗದ ಕನ್ಯೆಗೆ ಹುಟ್ಟಿದವ)
ಹುಟ್ಟುತ್ತಲೇ ತಾಯಿ ತ್ಯಜಿಸಿದಳು.
ರಾಜಪರಿವಾರದಲ್ಲಿ ಬೆಳೆಯಬೇಕಾದವನು ಸೂತನ ಮನೆಯಲ್ಲಿ ಬೆಳೆದೆ.

ಸೂತಪುತ್ರನಾದ ಕಾರಣ ದ್ರೋಣರ ಬಳಿ ಪೂರ್ಣವಿದ್ಯೆ ದೊರೆಯಲಿಲ್ಲ.

ಪರಶುರಾಮರು ವಿದ್ಯೆಯೇನೋ ಕೊಟ್ಟರು. ಆದರೆ ಕೊನೆಯಲ್ಲಿ ನಾನು ಕ್ಷತ್ರಿಯನೆಂಬ ಕಾರಣಕ್ಕೆ ಕಲಿತ ವಿದ್ಯೆ ಸರಿಯಾದ ಸಮಯದಲ್ಲಿ ಮರೆತುಹೋಗಲಿ ಎಂದು ಶಾಪ ಕೊಟ್ಟುಬಿಟ್ಟರು. ಅದರಲ್ಲಿ ನನ್ನ ತಪ್ಪೇನು? ನಾನು ಕ್ಷತ್ರಿಯ ಎಂದು ನನಗೇ ಗೊತ್ತಿರಲಿಲ್ಲವಲ್ಲ.

ಅಲ್ಲೆಲ್ಲೋ ಹುಡುಗನೊಬ್ಬ ಓಡಿ ಬಂದು ನನ್ನ ರಥಕ್ಕೆ ಸಿಲುಕಿದ. ನನ್ನ ತಪ್ಪೇನೂ ಇಲ್ಲ. ಅದು ಅಪಘಾತವಷ್ಟೇ. ಆದರೆ ಅವರಪ್ಪ ನನಗೆ ಶಾಪಕೊಟ್ಟ.

ದ್ರೌಪದಿ ಸ್ವಯಂವರದಲ್ಲೂ ಸೂರ್ಯಪುತ್ರನಾದರೂ ನನಗೆ ಸೂತಪುತ್ರನೆಂಬ ಅಪಮಾನವಾಯಿತು. 

ಕುಂತಿಗೂ ಇತರ ಮಕ್ಕಳ ಬಗ್ಗೆಯೇ ಒಲವು.
ಅವರಿಗೆ ಸತ್ಯ ಹೇಳುವುದರ ಬದಲು ನನ್ನ ಬಳಿ ಬಂದು ವರ ಕೇಳಿದಳು.
ಆಯುಧಗಳ ಮರುಬಳಕೆಯನ್ನು ನಿಷೇಧಿಸಿಬಿಟ್ಟಳು.
ಎಂದೂ ತಾಯಿಯಂತೆ ನಡೆಯದವಳಿಗೂ ನಾನು ಕೇಳಿದ್ದು ಕೊಟ್ಟೆ.

ಕುರುಕುಲ ಸಿಂಹಾಸನವೇರಬೇಕಾದವನು ದುರ್ಯೋಧನನ ಔದಾರ್ಯದ ರಾಜ್ಯ ಆಳುತ್ತಿದ್ದೇನೆ.

ಭೀಷ್ಮರೆಂದಿಗೂ ನನ್ನನ್ನು ನನ್ನ ಯೋಗ್ಯತೆಗೆ ತಕ್ಕಂತೆ ನಡೆಸಿಕೊಳ್ಳಲಿಲ್ಲ.
ಯುದ್ದದ ಸಿದ್ದತೆಯಲ್ಲಿದಾಗಲೇ ನನಗೆ ಅಪಮಾನ ಮಾಡಿ ಅವರ ಸೇನಾಪತ್ಯದಲ್ಲಿ ಯುದ್ದ ಮಾಡಲು ಮನಸ್ಸಿಲ್ಲದಂತೆ ಮಾಡಿ ಹಿಂದೆ ಸರಿಸಿಬಿಟ್ಟರು. 
ದುರ್ಯೋಧನನ ಸ್ನೇಹಕ್ಕೆ ಇದೆಲ್ಲಾ ಸಹಿಸಿಕೊಂಡಿದ್ದೇನೆ. ಜೀವನ ಪೂರ್ತಿ ನನಗಾಗಿದ್ದು ಅನ್ಯಾಯ.

ಈಗ ದುರ್ಯೋಧನ ಕೆಟ್ಟವನು ಎಂದರೆ ಅದು ನಿಮಗಿರಬಹುದು. ನನಗಂತೂ ಅವನು ಎಂದಿಗೂ ಒಳ್ಳೆಯದೇ ಮಾಡಿದ್ದಾನೆ. ದೇವರು ನನ್ನ ಪಾಲಿಗಿಲ್ಲ. ಆದರೆ ದುರ್ಯೋಧನ ನನ್ನನೆಂದಿಗೂ ಕೈಬಿಟ್ಟಿಲ್ಲ. ನಾನು ಅವನ ಪರವಾಗಿರುವುದರಲ್ಲಿ ತಪ್ಪೇನಿದೆ?!".


ಕೃಷ್ಣ ಹೇಳುತ್ತಾನೆ.
"ಅಯ್ಯಾ ಕರ್ಣ, ನಾನು ಹುಟ್ಟಿದ್ದೂ ಸೆರೆಮನೆಯಲ್ಲಿ,
ಹುಟ್ಟುವ ಮೊದಲಿನಿಂದಲೂ ನನ್ನ ಸಾವು ಕಾದುಕುಳಿತಿತ್ತು.
ಹುಟ್ಟಿದ ರಾತ್ರಿಯೇ ತಾಯಿಯಿಂದ ನಾನೂ ಬೇರಾದೆ.

ನಿನಗಾದರೂ ಸೂತನ ಮನೆಯಲ್ಲಿದ್ದೂ ಶಿಕ್ಷಣ ದೊರೆಯಿತು. ಬಾಲ್ಯದಿಂದಲೇ ಖಡ್ಗಗಳ ಕಿಂಕಿಣಿ, ರಥಚಕ್ರಗಳ ಕಟಕಟ ಶಬ್ಧ, ಕುದುರೆಗಳ ಕೆನೆಯುವಿಕೆ, ಧನುಷ್ಠೇಂಕಾರ, ಬಾಣ ಮಸೆಯುವ ಸದ್ದು  ಇವುಗಳನ್ನು ಕೇಳಿಯೇ ಬೆಳೆದೆ. 
ನನಗೆ ಸಿಕ್ಕಿದ್ದು ಗೊಲ್ಲರ ಹಟ್ಟಿ. ಖಡ್ಗವೂ ಇಲ್ಲ, ರಥವೂ ಇಲ್ಲ. ಸಿಕ್ಕಿದ್ದು ಸಗಣಿ, ಗಂಜಲ, ಹಸುಕರುಗಳು, ಗೊಲ್ಲ ಹುಡುಗಿಯರು, ಬೆನ್ನತ್ತಿ ಬರುತ್ತಿದ್ದ ಕಂಸನ ಕೊಲೆ ಪ್ರಯತ್ನಗಳು. ಸೈನ್ಯವೂ ಕಾಣೆ. ಶಿಕ್ಷಣವೂ ಇಲ್ಲ. 

ಹದಿವಯಸ್ಸಿನಲ್ಲೇ ಮಾವನನ್ನೇ ಕೊಂದ ಕೊಲೆಗಾರ ಎನಿಸಿಕೊಂಡೆ.
ಜರಾಸಂಧನ ಆಕ್ರಮಣಕ್ಕೆ ಹೆದರಿ ಫಲವತ್ತಾದ ಯಮುನಾ ತೀರ ಬಿಟ್ಟು ಊರು ಬಿಟ್ಟು ಕಂಡರಿಯದ ಸಮುದ್ರತೀರ ತಲುಪಬೇಕಾಯ್ತು. ಎಲ್ಲದಕ್ಕೂ ನಾನೇ ಕಾರಣ ಎಂದು ಊರಿನವರೆಲ್ಲಾ ಗೊಣಗಿಕೊಂಡದ್ದೂ ನನಗೆ ಗೊತ್ತು. ರಣಹೇಡಿಯೆಂಬ ಅಪವಾದವೂ ನನ್ನ ಮೇಲೆ. 

ನೀವೆಲ್ಲಾ ನಿಮ್ಮ ಗುರುಗಳಿಂದ ಸ್ನಾತಕರೆಂದು ಗುರುತಿಸಿಕೊಳ್ಳುವಾಗ ನಾನಿನ್ನೂ ಗುರುಕುಲಕ್ಕೂ ಸೇರಿರಲಿಲ್ಲ. ನಾನು ಸಾಂದೀಪನಿಗಳ ಗುರುಕುಲ ಸೇರಿದ್ದೇ ಹದಿನೆಂಟನೇ ವಯಸ್ಸಿಗೆ.

ನಿನಗೆ ರಾಜ್ಯವಾದರೂ ಇದೆ. 
ರಾಜ ನೀನು. 
ನಾನೇನು? ಯಾವೂರ ಸಿಂಹಾಸನಾಧೀಶ? 

ರುಕ್ಮಿಣಿ, ಮಿತ್ರವಿಂದೆ, ಹೀಗೇ ಪರಿಚಯವೇ ಇಲ್ಲದ ಹುಡುಗಿಯರು ನನ್ನನ್ನು ರಕ್ಷಿಸು, ನೀನೇ ಮದುವೆಯಾಗು ಎಂದರೆ ಮಾಡುವ ಕೆಲಸ ಬಿಟ್ಟು ಅಲ್ಲಿಗೆ ಓಡಬೇಕಾಯ್ತು. 
ಎಲ್ಲವೂ ಅಯೋಜಿತ.
ನಾನು ಪ್ರೇಮಿಸಿದವಳು ದಕ್ಕಲಿಲ್ಲ. ಅದರೆ ನಾನು ಮಾತ್ರ ಬಯಸಿದವರಿಗೆಲ್ಲಾ ಸಿಕ್ಕೆ. 

ಅಪಹೃತನಾಗಿದ್ದ ಗುರು ಸಾಂದೀಪನಿಯ ಮಗನನ್ನು ಹುಡುಕಿ ತಂದೆ. 
ಆದರೆ ನನ್ನದೇ ಮಗ ಪ್ರದ್ಯುಮ್ನ ಅಪಹರಣಕ್ಕೊಳಗಾದಾಗ ನನಗೇನೂ ಮಾಡಲಾಗಲಿಲ್ಲ.  
ಮೊಮ್ಮಗ ಅನಿರುದ್ಧನನ್ನು ಚಿತ್ರಲೇಖೆ ನಮ್ಮ ಮೂಗಿನಡಿಯಲ್ಲೇ ಅಪಹರಿಸಿದಾಗ ಗೊತ್ತಾಗಲೇ ಇಲ್ಲ. 

ಈಗ ದುರ್ಯೋಧನ ಗೆದ್ದರೆ ಅದರ ಸಂಭ್ರಮಕ್ಕೆ ನಿನಗಿನ್ನೂ ದೊಡ್ಡ ರಾಜ್ಯ ಕೊಡಬಹುದು. 
ನಿನ್ನ ಕೀರ್ತಿ ಇನ್ನೂ ಉತ್ತಂಗಕ್ಕೇರಬಹುದು. 

ನಾನು ಕೇವಲ ಸಾರಥಿ, 
ಯುದ್ದದಲ್ಲಿ ಶಸ್ತ್ರ ಎತ್ತುವವನಲ್ಲ. ಕೀರ್ತಿಯೂ ಇಲ್ಲ, ಮತ್ತೊಂದೂ ಇಲ್ಲ. 
ಧರ್ಮರಾಜನ ಗೆಲುವಲ್ಲಿ ನನಗ್ಯಾವ ಲಾಭವಿದೆ ಹೇಳು. 
ಈಗಾಗಲೇ ಇದೆಲ್ಲಾ ಯುದ್ದಕ್ಕೂ ರಾದ್ಧಾಂತಕ್ಕೂ ನಾನೇ ಕಾರಣ ಎಂಬ ಅಪವಾದ ನನ್ನ ತಲೆ ಮೇಲಿದೆ. 
ಧರ್ಮಜ ಗೆದ್ದರೂ ಸೋತರೂ ಇದು ಹೋಗದು. 

ಆದರೆ ಒಂದು ಮಾತು ನೆನಪಿನಲ್ಲಿಡು ಕರ್ಣ.
ಎಲ್ಲರಿಗೂ ಜೀವನ ಸವಾಲೆಸೆಯುತ್ತದೆ.
ಅನ್ಯಾಯ ಮಾಡುತ್ತದೆ. Life is not fair on anybody. 
ದುರ್ಯೋಧನನ ಬಾಳಿನಲ್ಲಿ ಅನ್ಯಾಯಗಳು ಸಾಲು ಸಾಲು ಜರುಗಿವೆ. 
ಯುದಿಷ್ಠಿರನ ಬಾಳಿನಲ್ಲೂ ಸಹ.

ಆದರೆ ಧರ್ಮ ಯಾವುದೆಂದು ನಿನ್ನ ಮನಸ್ಸಿಗೆ ಗೊತ್ತಿರುತ್ತೆ. ವಿವೇಚನೆ ಹೇಳುತ್ತೆ. 
ನಾವೇನೇನು ಎದುರಿಸಿದಿವಿ. ಎಷ್ಟು ಅಪಮಾನಗಳನ್ನ ಸಹಿಸಿದಿವಿ. 
ಎಷ್ಟು ಅನ್ಯಾಯಗಳು ನಮ್ಮ ಮೇಲಾಯ್ತು ಎಂಬುದಲ್ಲ ಮುಖ್ಯ. 
ಆ ಸಮಯದಲ್ಲಿ ನಾವೇನು ಮಾಡಿದೆವು ಎಂಬುದಷ್ಟೇ ನಮ್ಮ ವ್ಯಕ್ತಿತ್ವದ ಅಳತೆಗೋಲು. 
ಗೋಳಾಡುವುದನ್ನು ನಿಲ್ಲಿಸು. 
ಸ್ವಾನುಕಂಪದ ರೊಚ್ಚಿನಲ್ಲಿ ಮಾಡಿದ್ದೆಲ್ಲವನ್ನೂ, ಮಾಡುವುದೆಲ್ಲವನ್ನೂ ಸಮರ್ಥಿಸಿಕೊಳ್ಳಬೇಡ . 
ವಿವೇಕ ತೋರಿದ ದಾರಿಯಲ್ಲಿ ನಡೆವುದನ್ನ ಕಲಿ. 

ಜೀವನದಲ್ಲಿ ಅನ್ಯಾಯವಾಗಿದೆಯೆಂಬುದು ಧರ್ಮದ ಹಾದಿ ಬಿಟ್ಟು ನಡೆವುದಕ್ಕೆ ಸಿಕ್ಕ ಅನುಮತಿಯೆನ್ನಬೇಡ."


(ಇದು ವ್ಯಾಸ ಭಾರತದಲ್ಲಿ ಕಂಡಿಲ್ಲ. ನೆನಪಿನಾಳದಿಂದ ತೆಗೆದದ್ದು, ಯಾರೋ ಬರೆದಿದ್ದ, ಎಂದೋ ಓದಿದ್ದ ಸಂಭಾಷಣೆಯ ಮರುಸೃಷ್ಠಿ. ಮೂಲ ಬರಹಕ್ಕಿಂತ ಭಿನ್ನವಾಗಿರಬಹುದು. ಮೂಲ ಬರಹ ಬರೆದವರಿಗೆ ನನ್ನ ನಮನಗಳು. ಈ ಕೃಷ್ಣನ ನುಡಿಗಳು ನಮ್ಮ ದಾರಿದೀಪವಾಗಲಿ.)

Sunday, 20 September 2015

ಪರಿಣಯದಾಣೆಗಳ ನಾವು ನಡೆಸುವ ಜತೆಯಾಗಿ (ಭಾವಾನುವಾದ)

ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.

ಚಿತ್ರ:  ಜುರ್ಮ್ (1990)
ಸಾಹಿತ್ಯ: ಇಂದಿವರ್
ಸಂಗೀತ: ರಾಜೇಶ್ ರೋಷನ್ (500 Miles ಪ್ರೇರಿತ)
ಗಾಯನ: ಕುಮಾರ್ ಸಾನು, ಸಾಧನಾ ಸರಗಮ್
ಚಿತ್ರಿಕೆಯಲ್ಲಿ: ವಿನೋದ್ ಖನ್ನಾ, ಮೀನಾಕ್ಷೀ ಶೇಷಾದ್ರಿ, 
ಶಫಿ಼ ಇನಾಂದಾರ್, ಗೋಪಿ ದೇಸಾಯಿ, ಬೇಬಿ ಗುಡ್ಡು (ಶಾಹಿಂದಾ ಬೇಗ್)


ಮೂಲಗೀತೆಯ ಇಳಿಕೊಂಡಿ (Download Link)

ಕನ್ನಡ ಭಾವಾನುವಾದ ಹಿಂದಿ ಮೂಲ
ನಾ ಸೋತು ನಿಂತಾಗ, ಜಬ್ ಕೋಯೀ ಬಾತ್ ಬಿಗಡ್ ಜಾಯೇ,
ಕೈ ಚೆಲ್ಲಿ ಕೂತಾಗ, ಜಬ್ ಕೋಯೀ ಮುಶ್‌ಕಿಲ್ ಪಡ್ ಜಾಯೇ
ನೀನಾಗು ಜೀವಸೆಲೆ ತುಮ್ ದೇನಾ ಸಾಥ್ ಮೇರಾ,
ನನ್ನೊಲವೇ ಓ ಹಮ್‌ನವಾ
ನಾ ಸೋತು ನಿಂತಾಗ ಜಬ್ ಕೋಯೀ ಬಾತ್ ಬಿಗಡ್ ಜಾಯೇ,
ಕೈ ಚೆಲ್ಲಿ ಕೂತಾಗ ಜಬ್ ಕೋಯೀ ಮುಶ್‌ಕಿಲ್ ಪಡ್ ಜಾಯೇ
ನೀನಾಗು ಜೀವಸೆಲೆ ತುಮ್ ದೇನಾ ಸಾಥ್ ಮೇರಾ,
ನನ್ನೊಲವೇ ಓ ಹಮ್‌ನವಾ
ಯಾರಿಹರು ಕೊನೆವರೆಗೂ ನ ಕೋಯೀ ಹೈ, ನಾ ಕೋಯೀ ಥಾ,
ಏಳು ಬೀಳಿನ ಪಯಣದಲಿ ಜಿ಼ಂದಗೀ ಮೇಂ ತುಮ್ಹಾರೇ ಸಿವಾ
ನೀನಾಗು ಜೀವಸೆಲೆ ತುಮ್ ದೇನಾ ಸಾಥ್ ಮೇರಾ,
ನನ್ನೊಲವೇ ಓ ಹಮ್‌ನವಾ
ನೀನಾಗು ಜೀವಸೆಲೆ ತುಮ್ ದೇನಾ ಸಾಥ್ ಮೇರಾ,
ನನ್ನೊಲವೇ ಓ ಹಮ್‌ನವಾ
ನಲುಮೆಯ ಸಮಯದಲಿ ಹೋ ಚಾಂದನಿ ಜಬ್ ತಕ್ ರಾತ್,
ಇರುವರೆಲ್ಲಾ ನಮ್ಮವರೇ ದೇತಾ ಹೈ ಹರ್ ಕೋಯೀ ಸಾಥ್
ನೀ ಕತ್ತಲ ದಾರಿಯಲೂ ತುಮ್ ಮಗರ್ ಅಂಧೇರೋ ಮೇಂ
ಕೈ ಹಿಡಿದಿರು ನನ್ನೊಲವೇ ನಾ ಛೋಡನಾ ಮೇರಾ ಹಾಥ್
ನಲುಮೆಯ ಸಮಯದಲಿ ಹೋ ಚಾಂದನಿ ಜಬ್ ತಕ್ ರಾತ್,
ಇರುವರೆಲ್ಲಾ ನಮ್ಮವರೇ ದೇತಾ ಹೈ ಹರ್ ಕೋಯೀ ಸಾಥ್
ನೀ ಕತ್ತಲ ದಾರಿಯಲೂ ತುಮ್ ಮಗರ್ ಅಂಧೇರೋ ಮೇಂ
ಕೈ ಹಿಡಿದಿರು ನನ್ನೊಲವೇ ನಾ ಛೋಡನಾ ಮೇರಾ ಹಾಥ್
ನಾ ಸೋತು ನಿಂತಾಗ ಜಬ್ ಕೋಯೀ ಬಾತ್ ಬಿಗಡ್ ಜಾಯೇ,
ಕೈ ಚೆಲ್ಲಿ ಕೂತಾಗ ಜಬ್ ಕೋಯೀ ಮುಶ್‌ಕಿಲ್ ಪಡ್ ಜಾಯೇ
ನೀನಾಗು ಜೀವಸೆಲೆ ತುಮ್ ದೇನಾ ಸಾಥ್ ಮೇರಾ,
ನನ್ನೊಲವೇ ಓ ಹಮ್‌ನವಾ
ಯಾರಿಹರು ಕೊನೆವರೆಗೂ ನ ಕೋಯೀ ಹೈ, ನಾ ಕೋಯೀ ಥಾ,
ಏಳು ಬೀಳಿನ ಪಯಣದಲಿ ಜಿ಼ಂದಗೀ ಮೇಂ ತುಮ್ಹಾರೇ ಸಿವಾ
ನೀನಾಗು ಜೀವಸೆಲೆ ತುಮ್ ದೇನಾ ಸಾಥ್ ಮೇರಾ,
ನನ್ನೊಲವೇ ಓ ಹಮ್‌ನವಾ
ಪರಿಣಯದಾಣೆಗಳ, ವಫ಼ಾದಾರೀ ಕೀ ವೋ ರಸಮೇ,
ನಾವು ನಡೆಸುವ ಜತೆಯಾಗಿ ನಿಭಾಯೇಂಗೇ ಹಮ್ ತುಮ್ ಕಸಮೇ
ಜಂಜಾಟದೀಬದುಕಿನಲಿ ಏಕ್ ಭೀ ಸಾಂಸ್ ಜಿ಼ಂದಗೀ ಕೀ,
ನಾವು ಉಸಿರಿಗೆ ಉಸಿರಾಗಿ ಜಬ್ ತಕ್ ಹೋ ಅಪನೇ ಬಸ್ ಮೇ
ಪರಿಣಯದಾಣೆಗಳ  ವಫ಼ಾದಾರೀ ಕೀ ವೋ ರಸಮೇ,
ನಾವು ನಡೆಸುವ ಜತೆಯಾಗಿ ನಿಭಾಯೇಂಗೇ ಹಮ್ ತುಮ್ ಕಸಮೇ
ಜಂಜಾಟದೀಬದುಕಿನಲಿ ಏಕ್ ಭೀ ಸಾಂಸ್ ಜಿ಼ಂದಗೀ ಕೀ,
ನಾವು ಉಸಿರಿಗೆ ಉಸಿರಾಗಿ ಜಬ್ ತಕ್ ಹೋ ಅಪನೇ ಬಸ್ ಮೇ
ನಾ ಸೋತು ನಿಂತಾಗ ಜಬ್ ಕೋಯೀ ಬಾತ್ ಬಿಗಡ್ ಜಾಯೇ,
ಕೈ ಚೆಲ್ಲಿ ಕೂತಾಗ ಜಬ್ ಕೋಯೀ ಮುಶ್‌ಕಿಲ್ ಪಡ್ ಜಾಯೇ
ನೀನಾಗು ಜೀವಸೆಲೆ ತುಮ್ ದೇನಾ ಸಾಥ್ ಮೇರಾ,
ನನ್ನೊಲವೇ ಓ ಹಮ್‌ನವಾ
ಯಾರಿಹರು ಕೊನೆವರೆಗೂ ನ ಕೋಯೀ ಹೈ, ನಾ ಕೋಯೀ ಥಾ,
ಏಳು ಬೀಳಿನ ಪಯಣದಲಿ ಜಿ಼ಂದಗೀ ಮೇಂ ತುಮ್ಹಾರೇ ಸಿವಾ
ನೀನಾಗು ಜೀವಸೆಲೆ ತುಮ್ ದೇನಾ ಸಾಥ್ ಮೇರಾ,
ನನ್ನೊಲವೇ ಓ ಹಮ್‌ನವಾ
ಋಜುವಾಗಿದೆ ನನಗೀಗ ದಿಲ್ ಕೋ ಮೇರೆ ಹುವಾ ಯಕೀನ್,
ನಮ್ಮ ನಂಟಿದು ಹೊಸದಲ್ಲ ಹಮ್ ಪಹಲೇ ಭೀ ಮಿಲೇ ಕಹೀ
ಜನುಮಾಂತರ ಬಂಧವಿದು ಸಿಲ್‌ಸಿಲಾ ಯೇ ಸದಿಯೋಂ ಕಾ
ಇಂದು ನಿನ್ನೆಯ ಮಾತಲ್ಲ ಕೋಯೀ ಆಜ್ ಕೀ ಬಾತ್ ನಹೀ
ಋಜುವಾಗಿದೆ ನನಗೀಗ ದಿಲ್ ಕೋ ಮೇರೆ ಹುವಾ ಯಕೀನ್,
ನಮ್ಮ ನಂಟಿದು ಹೊಸದಲ್ಲ ಹಮ್ ಪಹಲೇ ಭೀ ಮಿಲೇ ಕಹೀ
ಜನುಮಾಂತರ ಬಂಧವಿದು ಸಿಲ್‌ಸಿಲಾ ಯೇ ಸದಿಯೋಂ ಕಾ
ಇಂದು ನಿನ್ನೆಯ ಮಾತಲ್ಲ ಕೋಯೀ ಆಜ್ ಕೀ ಬಾತ್ ನಹೀ
ನಾ ಸೋತು ನಿಂತಾಗ ಜಬ್ ಕೋಯೀ ಬಾತ್ ಬಿಗಡ್ ಜಾಯೇ,
ಕೈ ಚೆಲ್ಲಿ ಕೂತಾಗ ಜಬ್ ಕೋಯೀ ಮುಶ್‌ಕಿಲ್ ಪಡ್ ಜಾಯೇ
ನೀನಾಗು ಜೀವಸೆಲೆ ತುಮ್ ದೇನಾ ಸಾಥ್ ಮೇರಾ,
ನನ್ನೊಲವೇ ಓ ಹಮ್‌ನವಾ
ನಾ ಸೋತು ನಿಂತಾಗ ಜಬ್ ಕೋಯೀ ಬಾತ್ ಬಿಗಡ್ ಜಾಯೇ,
ಕೈ ಚೆಲ್ಲಿ ಕೂತಾಗ ಜಬ್ ಕೋಯೀ ಮುಶ್‌ಕಿಲ್ ಪಡ್ ಜಾಯೇ
ನೀನಾಗು ಜೀವಸೆಲೆ ತುಮ್ ದೇನಾ ಸಾಥ್ ಮೇರಾ,
ನನ್ನೊಲವೇ ಓ ಹಮ್‌ನವಾ
ಯಾರಿಹರು ಕೊನೆವರೆಗೂ ನ ಕೋಯೀ ಹೈ, ನಾ ಕೋಯೀ ಥಾ,
ಏಳು ಬೀಳಿನ ಪಯಣದಲಿ ಜಿ಼ಂದಗೀ ಮೇಂ ತುಮ್ಹಾರೇ ಸಿವಾ
ನೀನಾಗು ಜೀವಸೆಲೆ ತುಮ್ ದೇನಾ ಸಾಥ್ ಮೇರಾ,
ನನ್ನೊಲವೇ ಓ ಹಮ್‌ನವಾ
ನೀನಾಗು ಜೀವಸೆಲೆ ತುಮ್ ದೇನಾ ಸಾಥ್ ಮೇರಾ,
ನನ್ನೊಲವೇ ಓ ಹಮ್‌ನವಾಹಿಂದಿ ಗೀತಚಿತ್ರ500 Miles - ಪೀಟರ್, ಪೌಲ್ ಮತ್ತು ಮೇರಿ (ಮೂಲ ಧ್ವನಿಯೊಂದಿಗೆ)


Audio Download Link


Peter, Paul & Mary – 500 Miles Lyrics

If you miss the train I'm on, you will know that I am gone
You can hear the whistle blow a hundred miles,
A hundred miles, a hundred miles, a hundred miles, a hundred miles,
You can hear the whistle blow a hundred miles.

Lord I'm one, Lord I'm two, Lord I'm three, Lord I'm four,
Lord I'm 500 miles from my home.
500 miles, 500 miles, 500 miles, 500 miles
Lord I'm five hundred miles from my home.

Not a shirt on my back, not a penny to my name
Lord I can't go a-home this a-way
This a-way, this a-way, this a-way, this a-way,
Lord I can't go a-home this a-way.

If you miss the train I'm on you will know that I am gone
You can hear the whistle blow a hundred miles.

Saturday, 12 September 2015

ಅಮ್ಮಾ ನಿನ್ನ ಅಚ್ಯುತನಿವನು, ಎಲ್ಲಕೂ ಅತೀತ..! (ಭಾವಾನುವಾದ)

ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.

ಚಿತ್ರ:  ಸತ್ಯಂ ಶಿವಂ ಸುಂದರಂ (1978)
ಸಾಹಿತ್ಯ: ವಿಠಲ್ ಭಾಯ್ ಪಟೇಲ್
ಸಂಗೀತ: ಲಕ್ಷ್ಮೀಕಾಂತ್ - ಪ್ಯಾರೇಲಾಲ್
ಗಾಯನ: ಮನ್ನಾ ಡೇ, ಲತಾ ಮಂಗೇಶ್ಕರ್
ಚಿತ್ರಿಕೆಯಲ್ಲಿ: ಕನ್ಹಯ್ಯಾ ಲಾಲ್ ಚತುರ್ವೇದಿ, 
ಬೇಬಿ ಪದ್ಮಿನಿ ಕೊಲ್ಹಾಪುರೆ, ಜೀ಼ನತ್ ಅಮ್ಮಾನ್, ಶಶಿ ಕಪೂರ್


ಮೂಲಗೀತೆಯ ಇಳಿಕೊಂಡಿ (Download Link)

ಕನ್ನಡ ಭಾವಾನುವಾದ ಹಿಂದಿ ಮೂಲ
ಅಮ್ಮ ಯಶೋಧೆಯನು ಕೇಳಿದಾ ಮುಕುಂದ ಯಶೋಮತೀ ಮೈಯಾ ಸೇ ಬೋಲೇ ನಂದಲಾಲಾ
ಅಮ್ಮ ಯಶೋಧೆಯನು ಕೇಳಿದಾ ಮುಕುಂದ ಯಶೋಮತೀ ಮೈಯಾ ಸೇ ಬೋಲೇ ನಂದಲಾಲಾ
ರಾಧೆಗೇಕೆ ಚಂದ್ರಕಾಂತಿ, ನಾನೇಕೆ ಕಡುಗಪ್ಪು ರಾಧಾ ಕ್ಯೂಂ ಗೋರೀ ಮೈ ಕ್ಯೂಂ ಕಾಲಾ
ರಾಧೆಗೇಕೆ ಚಂದ್ರಕಾಂತಿ……….. ರಾಧಾ ಕ್ಯೂಂ ಗೋರೀ …………………
ಅಮ್ಮ ಯಶೋಧೆಯನು ಕೇಳಿದಾ ಮುಕುಂದ ಯಶೋಮತೀ ಮೈಯಾ ಸೇ ಬೋಲೇ ನಂದಲಾಲಾ
ರಾಧೆಗೇಕೆ ಚಂದ್ರಕಾಂತಿ, ನಾನೇಕೆ ಕಡುಗಪ್ಪು ರಾಧಾ ಕ್ಯೂಂ ಗೋರೀ ಮೈ ಕ್ಯೂಂ ಕಾಲಾ
ರಾಧೆಗೇಕೆ ಚಂದ್ರಕಾಂತಿ, ನಾನೇಕೆ ಕಡುಗಪ್ಪು ರಾಧಾ ಕ್ಯೂಂ ಗೋರೀ ಮೈ ಕ್ಯೂಂ ಕಾಲಾ
ನಸುನಗುತಾ ಹೇಳಿದಳಾಕೆ, ಪೋರನನು ರಮಿಸುತಲಿ ಬೋಲೀ ಮುಸ್ಕಾತೀ ಮೈಯಾ, ಲಲನ್ ಕೋ ಬತಾಯಾ
ನಸುನಗುತಾ ಹೇಳಿದಳಾಕೆ, ಪೋರನನು ರಮಿಸುತಲಿ ಬೋಲೀ ಮುಸ್ಕಾತೀ ಮೈಯಾ, ಲಲನ್ ಕೋ ಬತಾಯಾ
ಕಾರಿರುಳ ಕತ್ತಲೆಯಲ್ಲೇ, ಕಂದ ನೀನು ಬಂದೆ ಕಾರೀ ಅಂಧಿಯಾರೀ ಆಧೀ ರಾತ್ ಮೇಂ ತು ಆಯಾ
ಮುದ್ದಂಗಿ ಮುರಳಿಲೋಲ ಹೋ…., ಲಾಡಲಾ ಕನ್ಹೈಯಾ ಮೇರಾ ಹೋ…
ಮುದ್ದಂಗಿ ಮುರಳಿಲೋಲ, ಕನ್ನೆಯರ ಕೇಶವಾ, ಲಾಡಲಾ ಕನ್ಹೈಯಾ ಮೇರಾ, ಕಾಲೀ ಕಮಲೀ ವಾಲಾ
ಅದಕೇ ನೀ ಶ್ಯಾಮ ಇಸೀಲಿಯೇ ಕಾಲಾ
ಅಮ್ಮ ಯಶೋಧೆಯನು ಕೇಳಿದಾ ಮುಕುಂದ ಯಶೋಮತೀ ಮೈಯಾ ಸೇ ಬೋಲೇ ನಂದಲಾಲಾ
ರಾಧೆಗೇಕೆ ಚಂದ್ರಕಾಂತಿ, ನಾನೇಕೆ ಕಡುಗಪ್ಪು ರಾಧಾ ಕ್ಯೂಂ ಗೋರೀ ಮೈ ಕ್ಯೂಂ ಕಾಲಾ
ರಾಧೆಗೇಕೆ ಚಂದ್ರಕಾಂತಿ, ನಾನೇಕೆ ಕಡುಗಪ್ಪು ರಾಧಾ ಕ್ಯೂಂ ಗೋರೀ ಮೈ ಕ್ಯೂಂ ಕಾಲಾ
ನಸುನಗುತಾ ಹೇಳಿದಳಾಕೆ, ಕೇಳು ಮುದ್ದುಕಂದ ಬೋಲೀ ಮುಸ್ಕಾತಿ ಮೈಯಾ, ಸುನ್ ಮೇರೇ ಪ್ಯಾರೇ
ನಸುನಗುತಾ ಹೇಳಿದಳಾಕೆ, ಕೇಳು ಮುದ್ದುಕಂದ ಬೋಲೀ ಮುಸ್ಕಾತಿ ಮೈಯಾ, ಸುನ್ ಮೇರೇ ಪ್ಯಾರೇ
ಮಾಯಗಾತಿ ರಾಧಿಕೆಯ ಕಣ್ಣು ಕಪ್ಪು ತಾನೇ ಗೋರೀ ಗೋರೀ ರಾಧಿಕಾ ಕೇ ನೈನ್ ಕಜರಾರೇ
ಕಪ್ಪುಕಣ್ಣ ಹೆಣ್ಣ ಕಣ್ಣಿಗೆ ಹೋ… ಕಾಲೇ ನೈನೋಂ ವಾಲೀ ನೇ ಹೋ…
ಕಪ್ಪುಕಣ್ಣ ಹೆಣ್ಣ ಕಣ್ಣಿಗೆ ಕಣ್ಣಾ ನೀನು ಬಿದ್ದೆ ಕಾಲೇ ನೈನೋಂ ವಾಲೀ ನೇ, ಐಸಾ ಜಾದೂ ಡಾಲಾ
ಅದಕೇ ನೀ ಶ್ಯಾಮ ಇಸೀಲಿಯೇ ಕಾಲಾ
ಅಮ್ಮ ಯಶೋಧೆಯನು ಕೇಳಿದಾ ಮುಕುಂದ ಯಶೋಮತೀ ಮೈಯಾ ಸೇ ಬೋಲೇ ನಂದಲಾಲಾ
ರಾಧೆಗೇಕೆ ಚಂದ್ರಕಾಂತಿ, ನಾನೇಕೆ ಕಡುಗಪ್ಪು ರಾಧಾ ಕ್ಯೂಂ ಗೋರೀ ಮೈ ಕ್ಯೂಂ ಕಾಲಾ
ರಾಧೆಗೇಕೆ ಚಂದ್ರಕಾಂತಿ, ನಾನೇಕೆ ಕಡುಗಪ್ಪು ರಾಧಾ ಕ್ಯೂಂ ಗೋರೀ ಮೈ ಕ್ಯೂಂ ಕಾಲಾ
ಅಷ್ಟರಲ್ಲೆ ಪ್ರೀತಿಯ ರಾಧೆ, ಬಂದಳಲ್ಲಿ ಬಿಂಕದಲಿ ಇತನೇ ಮೇಂ ರಾಧಾ ಪ್ಯಾರೀ, ಆಯೀ ಇಠಲಾತೀ
ಅಷ್ಟರಲ್ಲೆ ಪ್ರೀತಿಯ ರಾಧೆ, ಬಂದಳಲ್ಲಿ ಬಿಂಕದಲಿ ಇತನೇ ಮೇಂ ರಾಧಾ ಪ್ಯಾರೀ, ಆಯೀ ಇಠಲಾತೀ
ನುಲಿಯುತಲಿ ಉಲಿದಳು ಅವಳು, ನನ್ನದೆಂಥ ಮಾಯೆ, ಮೈಂನೇ ನ ಜಾದೂ ಡಾಲಾ, ಬೋಲೀ ಬಲಖಾತೀ
ಅಮ್ಮಾ ನಿನ್ನ ಅಚ್ಯುತನಿವನು... ಹೋ… ಮೈಯ್ಯಾ ಕನ್ಹೈಯಾ ತೇರಾ ಹೋ…
ಅಮ್ಮಾ ನಿನ್ನ ಅಚ್ಯುತನಿವನು, ಎಲ್ಲಕೂ ಅತೀತ..! ಮೈಯ್ಯಾ ಕನ್ಹೈಯಾ ತೇರಾ, ಜಗ್ ಸೇ ನಿರಾಲಾ
ಅದಕೇ ಇವ ಶ್ಯಾಮ ಇಸೀಲಿಯೇ ಕಾಲಾ
ಅಮ್ಮ ಯಶೋಧೆಯನು ಕೇಳಿದಾ ಮುಕುಂದ ಯಶೋಮತೀ ಮೈಯಾ ಸೇ ಬೋಲೇ ನಂದಲಾಲಾ
ರಾಧೆಗೇಕೆ ಚಂದ್ರಕಾಂತಿ, ನಾನೇಕೆ ಕಡುಗಪ್ಪು ರಾಧಾ ಕ್ಯೂಂ ಗೋರೀ ಮೈ ಕ್ಯೂಂ ಕಾಲಾ
ರಾಧೆಗೇಕೆ ಚಂದ್ರಕಾಂತಿ, ನಾನೇಕೆ ಕಡುಗಪ್ಪು ರಾಧಾ ಕ್ಯೂಂ ಗೋರೀ ಮೈ ಕ್ಯೂಂ ಕಾಲಾ

Sunday, 23 August 2015

ವಿಂಡೋಸ್‌ನಲ್ಲಿ ಕನ್ನಡ ಇನ್‌ಸ್ಕ್ರಿಪ್ಟ್ ಕೀಲಿಮಣೆ ಸಕ್ರಿಯಗೊಳಿಸುವ ವಿಧಾನ

InScript ಕೀಲಿಮಣೆ Indian Script ಎಂಬುದರ ಹ್ರಸ್ವ ರೂಪ. ಕನ್ನಡವೂ ಸೇರಿದಂತೆ, ಭಾರತೀಯ ಭಾಷೆಗಳ ಮಾಹಿತಿಯನ್ನು ಗಣಕಕ್ಕೆ ಊಡಿಸಲು C-DACರವರಿಂದ ರೂಪಿಸಲ್ಪಟ್ಟು, ಭಾರತ ಸರ್ಕಾರದ ಮಾನ್ಯತೆ ಪಡೆದ ಕೀಲಿಮಣೆ.

InScript ಇಂಗ್ಲೀಷ್ ಕೀಲಿಮಣೆಯ ಫೊನೆಟಿಕ್ ಆಧರಿಸಿ ಇಲ್ಲದಿರುವುದು ಕೊರತೆ ಎನಿಸಿದರೂ ಯಾವ ಕನ್ನಡ ಕೀಲಿಮಣೆಯ ಬಳಕೆಯನ್ನೂ ಮಾಡದೇ, ಇಂಗ್ಲೀಷ್ ಕೀಲಿಮಣೆ ಮತ್ತು ಕನ್ನಡ ಕೀಲಿಮಣೆಯೊಂದಿಗೆ ಸಮಾನ ದೂರ ಹೊಂದಿರುವ ಬಳಕೆದಾರರಿಗೆ (ಹೇಗಿದ್ದರೂ ಅವರು ಕಲಿಯಲೇ ಬೇಕಾದ್ದರಿಂದ) ಇದು ಅನುಕೂಲಕರ. ವೇಗಕ್ಕೆ ಮಹತ್ವವಿರುವ ಡೇಟಾ ಎಂಟ್ರಿಯಂಥಾ ಕೆಲಸಗಳಲ್ಲಿ ಇದು ಬಹಳ ಉಪಯೋಗಕಾರಿ. ಯಾವುದೇ ಹೊರಗಿನ ಕೀಲಿಮಣೆ ತಂತ್ರಾಶಗಳ ಅವಶ್ಯಕತೆ ಇಲ್ಲದೇ, ವರ್ಶನ್‌ಗಳ, ಅಪ್‌ಡೇಟ್‌ಗಳ ತಲೆಬಿಸಿ ಇಲ್ಲದೇ ಬಳಸಬಹುದಾದ ಕೀಲಿಮಣೆ. 

InScript ಕೀಲಿಮಣೆ ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಯದೇ ಭಾಗವಾಗಿದ್ದು ಹೊರಗಿನಿಂದ ಅನುಸ್ಥಾಪಿಸಲ್ಪಡಬೇಕಾದ ತಂತ್ರಾಶವಾಗಿಲ್ಲ. ಅದನ್ನು ಕೇವಲ ಸಕ್ರಿಯಗೊಳಿಸಬೇಕಿರುತ್ತದೆ. ವಿಂಡೋಸ್ ಎಕ್ಸ್‌ಪಿಯಾದರೆ ಕಂಟ್ರೋಲ್ ಪ್ಯಾನಲ್‌ನಲ್ಲಿ Regional Settings ಮೂಲಕ ಇದನ್ನು ಸಕ್ರಿಯಗೊಳಿಸಬಹುದು. ಆದರೆ ಸಕ್ರಿಯಗೊಳಿಸುವಾಗ ವಿಂಡೋಸ್ ಎಕ್ಸ್‌ಪಿ CDಯನ್ನು ಕೇಳುತ್ತದೆ. ವಿಂಡೋಸ್ ವಿಸ್ತಾ ಮತ್ತು ನಂತರದ ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ CD ಅಗತ್ಯವಿಲ್ಲ.

ಈ ಲೇಖನ ವಿಂಡೋಸ್-7ರಲ್ಲಿ ಕನ್ನಡ ಇನ್‌ಸ್ಕ್ರಿಪ್ಟ್ ಸಕ್ರಿಯಗೊಳಿಸುವ ಬಗೆಗಿದ್ದರೂ ವಿಂಡೋಸ್‌ನ ಇತರ ಕಾರ್ಯಾಚರಣಾ ವ್ಯವಸ್ಥೆಗಳಲ್ಲೂ ಇಂತಹುದೇ ಹೆಜ್ಜೆಗಳ ಮೂಲಕ ಕನ್ನಡ ಇನ್‌ಸ್ಕ್ರಿಪ್ಟ್  (ಬೇರೆ ಭಾಷೆಯ ಕೀಲಿಮಣೆಗಳನ್ನು ಸಹ) ಸಕ್ರಿಯಗೊಳಿಸಬಹುದು. 

ಹೆಜ್ಜೆಗಳು
1. ವಿಂಡೋಸ್ -7 Start Button ಕ್ಲಿಕ್ ಮಾಡಿ, ನಂತರ Control Panel ಆಯ್ದುಕೊಳ್ಳಿ.

2. ಕಂಟ್ರೋಲ್ ಪ್ಯಾನಲ್ ತೆರೆದುಕೊಂಡಾಗ ನಿಮಗೆ ಕಂಡುಬರುವ ಆಯ್ಕೆಗಳಲ್ಲಿ
3. ನಿಮಗೆ ಮುಂದೆ ಸಿಗುವ ಆಯ್ಕೆ ಕೆಳಗಿನಂತಿದ್ದರೆ Change keyboards or other input methods ಮೇಲೆ ಕ್ಲಿಕ್ ಮಾಡಿ. ಇಲ್ಲದಿದ್ದರೆ ಮುಂದಿನ ಹೆಜ್ಜೆಗೆ ನೇರವಾಗಿ ಹೋಗಬಹುದು. 

4. ನಿಮಗೆ ಸಿಗುವ ಆಯ್ಕೆ Region and Language ಎಂಬ ಡೈಲಾಗ್ ಬಾಕ್ಸ್‌ನಲ್ಲಿ ಅದರ ಮೂರನೇ ಟ್ಯಾಬ್ ಆದ  Keyboard and Languages ಆಯ್ದುಕೊಳ್ಳಿ ಮತ್ತು ಅದರಲ್ಲಿ Change Keyboards ಗುಂಡಿಯ ಮೇಲೆ  ಕ್ಲಿಕ್ ಮಾಡಿ.

 5. ನಿಮಗೆ ಕೀಲಿಮಣೆಗಳನ್ನು ಆಯ್ದುಕೊಳ್ಳಲು ವಿಂಡೋಸ್ ಕೆಳಗಿನಂತೆ Text Services and Input Languages ಎಂಬ ಇನ್ನೊಂದು ಡೈಲಾಗ್ ಬಾಕ್ಸ್ ನೀಡುತ್ತದೆ. ಅದರಲ್ಲಿ Add ಗುಂಡಿಯ ಮೇಲೆ ಕ್ಲಿಕ್ ಮಾಡಿ.

6. ವಿಂಡೋಸ್ ನಿಮಗೆ ಅಯ್ಕೆಪಟ್ಟಿಯನ್ನು ಕೆಳಕಂಡಂತೆ ಮತ್ತೊಂದು Add Input Language ಡೈಲಾಗ್ ಬಾಕ್ಸ್ ಮೂಲಕ ನೀಡುತ್ತದೆ. 
ಅನುಕ್ರಮಣಿಕೆಯಲ್ಲಿ Kannada (India) ಹುಡುಕಿ ಚಿತ್ರದಲ್ಲಿ ತೋರಿಸಿರುವಂತೆ + ಮೇಲೆ ಕ್ಲಿಕ್ ಮಾಡಿ. ವಿಸ್ತೃತವಾಗುವ ಆಯ್ಕೆಯಲ್ಲಿ keyboard ಪಕ್ಕದಲ್ಲಿರುವ + ಮೇಲೆ ಮತ್ತೆ ಕ್ಲಿಕ್ ಮಾಡಿ. 
ಮತ್ತೆ ವಿಸ್ತೃತವಾಗುವ ಆಯ್ಕೆಯಲ್ಲಿ Kannada ಚೆಕ್‌ಬಾಕ್ಸ್ ಮೇಲೆ ಕ್ಲಿಕ್ ಮಾಡುವ ಮೂಲಕ ಚೆಕ್ ಮಾಡಿ ಮತ್ತು OK ಗುಂಡಿಯನ್ನು ಒತ್ತಿ.


7. ಅಯ್ಕೆ ಪಟ್ಟಿಯಿಂದ ಕನ್ನಡವನ್ನು ಆಯ್ದುಕೊಂಡ ನಂತರ ಡೈಲಾಗ್ ಬಾಕ್ಸ್‌ನಲ್ಲಿ ಕೆಳಗಿನ ಚಿತ್ರದಲ್ಲಿರುವಂತೆ ಕನ್ನಡದ ಆಯ್ಕೆ ಬಂದಿರುವುದನ್ನು ಗಮನಿಸಿ. Apply ಗುಂಡಿಯನ್ನು ಕ್ಲಿಕ್ ಮಾಡಿ. ನಂತರ ಡೈಲಾಗ್ ಬಾಕ್ಸ್ ಮರೆಯಾಗಿಸಲು OK ಗುಂಡಿಯನ್ನು ಕ್ಲಿಕ್ ಮಾಡಿ. (ಕನ್ನಡದ ಆಯ್ಕೆ ಇಲ್ಲದಿದ್ದರೆ Add ಗುಂಡಿಯನ್ನು ಕ್ಲಿಕ್ ಮಾಡುವುದರ ಮೂಲಕ ಹಿಂದಿನ ಸೂಚನೆಯನ್ನು ಪುನರಾವರ್ತಿಸಿ.) ನಿಮ್ಮ ಗಣಕದಲ್ಲಿ ಕನ್ನಡ ಇನ್‌ಸ್ಕ್ರಿಪ್ಟ್ ಕೀಲಿಮಣೆ ಸಕ್ರಿಯಗೊಳ್ಳುತ್ತದೆ.


8. ನಿಮ್ಮ ಟಾಸ್ಕ್‌‌ಬಾರ್‌ನ ಬಲತುದಿಯಲ್ಲಿ ನಿಮ್ಮ ಗಣಕದ ಸಮಯ ತೋರಿಸುವ ಪಕ್ಕ EN ಎಂಬ ಅಕ್ಷರಗಳನ್ನು ಗಮನಿಸಿ. ಅದೇ ನಿಮಗೆ ಭಾಷಾ ಕೀಲಿಮಣೆಗಳನ್ನು ಒದಗಿಸುವ ಆಯ್ಕೆ ಪಟ್ಟಿಯಾಗಿದ್ದು, ಅದರ ಮೇಲೆ ಕ್ಲಿಕ್ ಮಾಡಿ

EN ಎಂದು ತೋರಿಸುವಾಗ ಇಂಗ್ಲೀಷ್ ಮತ್ತು KD ಎಂದು ತೋರಿಸುವಾಗ ಕನ್ನಡ ಆಯ್ಕೆಯಾಗಿರುತ್ತದೆ, ಈ ಆಯ್ಕೆಪಟ್ಟಿಯಲ್ಲಿ ಕ್ಲಿಕ್ ಮಾಡುವ ಮೂಲಕ ನಿಮಗೆ ಬೇಕಾದ ಕೀಲಿಮಣೆಯನ್ನು ನೀವು ಆಯ್ದುಕೊಳ್ಳಬಹುದು. ಪ್ರತಿ ತಂತ್ರಾಶಕ್ಕೂ ಬೇರೆಯದೇ ಆಯ್ಕೆ ಇಟ್ಟುಕೊಳ್ಳಬಹುದು. 

ಇಂಗ್ಲೀಷ್ ಮತ್ತು ಕನ್ನಡ ಕೀಲಿಮಣೆಗಳನ್ನು ಪರಸ್ಪರ ಬದಲಾಯಿಸಲು (Toggle ಮಾಡಲು) ಪ್ರತಿ ಬಾರಿ ಕ್ಲಿಕ್ ಮಾಡಬೇಕೆಂದಿಲ್ಲ. Alt ಮತ್ತು Shift ಕೀಲಿಗಳನ್ನು ಒಮ್ಮೆಗೇ ಒತ್ತಿ ಕನ್ನಡದಿಂದ ಇಂಗ್ಲೀಷ್‌ಗೆ ಮತ್ತು ಇಂಗ್ಲೀಷ್‌ನಿಂದ ಕನ್ನಡಕ್ಕೆ ಪರಸ್ಪರ ಬದಲಾಯಿಸಬಹುದು (Toggle) (ನುಡಿ ಕೀಲಿಮಣೆಯಲ್ಲಿ Scroll Lock ಕೀಲಿಯಂತೆ)

ವಿಂಡೋಸ್ ಎಕ್ಸ್‌ಪಿ ಕನ್ನಡಕ್ಕೆ KN ಎಂದು ಆಯ್ಕೆಯಲ್ಲಿ ತೋರಿಸಿದರೆ, ನಂತರದ ವಿಂಡೋಸ್ ಕೀಲಿಮಣೆ ತಂತ್ರಾಶಗಳು KD ಎಂದು ತೋರಿಸುತ್ತದೆ.

On-Screen Keyboard ಸಹಾಯ ಪಡೆಯಲು Start--> All Programs --> Accessories --> Easy of Access --> On-Screen Keyboard ಆಯ್ದುಕೊಳ್ಳಿ.

ಸಕ್ರಿಯ ವಿಂಡೋಸ್ ಕನ್ನಡ ಇನ್‌ಸ್ಕ್ರಿಪ್ಟ್ ಕೀಲಿಮಣೆ ವಿನ್ಯಾಸ
ಸಾಮಾನ್ಯ ಬೆರಳಚ್ಚು ಶಿಫ್ಟ್ ಕೀಲಿಯನ್ನು ಒತ್ತಿ ಹಿಡಿದೇ ಇದ್ದಾಗ (Without Shift)

ಶಿಫ್ಟ್ ಕೀಲಿಗಳನ್ನು ಒತ್ತಿ ಹಿಡಿದು ಬಳಸುವ ಕೀಲಿಗಳಿಗೆ ಅಕ್ಷರಗಳ ಹಂಚಿಕೆ (With Shift)

Ctrl ಕೀಲಿ ಒತ್ತಿ ಹಿಡಿದು ಬೆರಳಚ್ಚು ಮಾಡಿದಾಗ 
Alt+Ctrl+Shift ಮೂರೂ ಕೀಲಿಗಳನ್ನು ಒತ್ತಿ ಹಿಡಿದು ಬೆರಳಚ್ಚು ಮಾಡಲು ಕೀಲಿಗಳಿಗೆ ಹಂಚಿಕೆ
(ಬಹಳ ವಿರಳವಾಗಿ ಬಳಸುವ ಅಕ್ಷರಗಳೆಂಬುದನ್ನು ಗಮನಿಸಿ)
(Shift + Ctrl+ 2) ಅನ್ನು Zero Width Non-Joiner ಮತ್ತು (Shift + Ctrl + 1) ಅನ್ನು Zero Width Joinerಗಾಗಿ ಬಳಸಬಹುದು.

Monday, 16 February 2015

ಸರಿಗಮ ಪಮಗರಿ ಸಗ ಸಗ (ಭಾವಾನುವಾದ)

ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.

ಚಿತ್ರ:  ಮನ್ ಪಸಂದ್ (1980)
ಸಾಹಿತ್ಯ: ಅಮಿತ್ ಖನ್ನಾ
ಸಂಗೀತ: ರಾಜೇಶ್ ರೋಷನ್
ಗಾಯನ: ಕಿಶೋರ್ ಕುಮಾರ್, ಲತಾ ಮಂಗೇಶ್ಕರ್
ಚಿತ್ರಿಕೆಯಲ್ಲಿ: ದೇವ್ ಆನಂದ್, ಟೀನಾ ಮುನೀಮ್, ಗಿರೀಶ್ ಕಾರ್ನಾಡ್


ಮೂಲಗೀತೆಯ ಇಳಿಕೊಂಡಿ (Download Link) 

ಕನ್ನಡ ಭಾವಾನುವಾದ ಹಿಂದಿ ಮೂಲ
ಸರಿಗಮ ಪಮಗರಿ ಸಗ ಸಗ ಸರಿಗಮ ಪಮಗರಿ ಸಗ ಸಗ
ರಿಗಮಪ ಮಗರಿಸ ರಿಪ ರಿಪ ರಿಗಮಪ ಮಗರಿಸ ರಿಪ ರಿಪ
ಪದನಿಸ ನಿದಪಮ ಮ..ದ ಗದಪ.. ನಿಸ..  ಪದನಿಸ ನಿದಪಮ ಮ..ದ ಗದಪ.. ನಿಸ.. 
ಸರಿಗಮ ಪಮಗರಿ ಸಗ ಸಗ ಸರಿಗಮ ಪಮಗರಿ ಸಗ ಸಗ
ರಿಗಮಪ ಮಗರಿಸ ರಿಪ ರಿಪ ರಿಗಮಪ ಮಗರಿಸ ರಿಪ ರಿಪ
ಪದನಿಸ ನಿದಪಮ ಮ..ದ ಗದಪ.. ನಿಸ..  ಪದನಿಸ ನಿದಪಮ ಮ..ದ ಗದಪ.. ನಿಸ.. 
ಇನಿದನಿ ಗಾಯನವೇ, ಆವಾಜ್ ಸುರಿಲಿ ಕಾ, 
ಸಮ್ಮೋಹಕ ಮಾಯೆಯದು. ಜಾದೂ ಹಿ ನಿರಾಲಾ ಹೈ
ಆಹಾಹಾಹಾಹಾ...... ಓಹೋಹೋಹೋ.... ಆಹಾಹಾಹಾಹಾ...... ಓಹೋಹೋಹೋ....
ಸಂಗೀತವ ಸವಿವವರೇ, ಸಂಗೀತ ಕಾ ಜೋ ಪ್ರೇಮಿ,
ಸುಯೋಗವ ತಂದವರು. ವೋ ಕಿಸ್ಮತ್‌ವಾಲಾ ಹೈ.
ಆಹಾಹಾಹಾಹಾ...... ಓಹೋಹೋಹೋ.... ಆಹಾಹಾಹಾಹಾ...... ಓಹೋಹೋಹೋ....
ನಿನ್ನ ನನ್ನ ನನ್ನ ನಿನ್ನ ಕನಸು ಕನಸು  ತೇರೆ ಮೇರೆ ಮೇರೆ ತೇರೆ ಸಪನೇ ಸಪನೇ
ನನಸಾಯ್ತು ನೋಡು ನಮ್ಮ ಎಲ್ಲಾ ಕನಸು ಸಚ್ ಹುವೆ ದೇಖೋ ಸಾರೆ ಅಪನೇ ಸಪನೇ
ನನ್ನಯ ಮನವಿದು ಹೇಳೇ, ಹೇಳೇ, ಹೇಳೇ… ಫಿ಼ರ್ ಮೇರಾ ಮನ್ ಯೇ ಬೋಲಾ ಬೋಲಾ ಬೋಲಾ
ಏನು…? ಕ್ಯಾ… ?
ಸರಿಗಮ ಪಮಗರಿ ಸಗ ಸಗ ಸರಿಗಮ ಪಮಗರಿ ಸಗ ಸಗ
ರಿಗಮಪ ಮಗರಿಸ ರಿಪ ರಿಪ ರಿಗಮಪ ಮಗರಿಸ ರಿಪ ರಿಪ
ಪದನಿಸ ನಿದಪಮ ಮ..ದ ಗದಪ.. ನಿಸ..  ಪದನಿಸ ನಿದಪಮ ಮ..ದ ಗದಪ.. ನಿಸ.. 
ಹೇ! ಚಂದ ಚಂದ್ರಮನ ಚಂಚಲ ನೋಟ ಹೇ! ಚಾರು ಚಂದ್ರಕಿ ಚಂಚಲ ಚಿತವನ್
ಕಾಮನಬಿಲ್ಲಡಿ ಸುರಿವ ಮಳೆ ಬಿನ್ ಬದರಾ ಬರಸೇ ಸಾವನ್
ಮೇಘವ ಪ್ರೇಮದಿ ಚುಂಬಿಸೋ ಗಾಳಿಯ ಮೇಘ ಮಲ್ಹಾರ ಮಧುರ ಮನ ಭಾವನ್
ಮಲ್ಹಾರದಂತೆಯೆ ಮನವ ಸೆಳೆ ಪವನ್ ಪಿಯಾ ಪ್ರೇಮಿ ಪಾವನ್
ಹೋ.....! ನಡೆ ಚುಕ್ಕೆ ಚಂದ್ರಮಗೆ… ಹೋ.....!  ಚಲ್ ಚಾಂದ್ ಸಿತಾರೋ ಕೋ…
ಈ ಹಾಡನು ಹಾಡೋಣ...! ಯೇ ಗೀತ್ ಸುನಾತೇ ಹೈ…!
ಆಹಾಹಾಹಾಹಾ...... ಓಹೋಹೋಹೋ.... ಆಹಾಹಾಹಾಹಾ...... ಓಹೋಹೋಹೋ....
ಹುಯಿಲಿಡಿದು ಕೂಗುತಲೀ… ಹಮ್ ಧುಮ್ ಮಚಾಕರ್ ಆಆ….
ಸವಿನಿದ್ದೆಯ ಕೆಡಿಸೋಣ. ಸೋಯಾ ಜಹ್ಞಾ ಜಗಾತೇ ಹೈ
ಆಹಾಹಾಹಾಹಾ...... ಓಹೋಹೋಹೋ.... ಆಹಾಹಾಹಾಹಾ...... ಓಹೋಹೋಹೋ....
ನಾನು ನೀನು ನೀನು ನಾನು ಮೆಲ್ಲನೆ ಮೆಲ್ಲನೆ ಹಮ್ ತುಮ್ ತುಮ್ ಹಮ್ ಗುಮ್‌ಸುಂ ಗುಮ್‌ಸುಂ 
ಅಣು ಅಣುವಾಗಿಯೇ ಸೇರುವ ಸೇರುವ ಜಿಲ್ ಮಿಲ್ ಜಿಲ್ ಮಿಲ್ ಹಿಲ್‌ಮಿಲ್ ಹಿಲ್‌ಮಿಲ್
ನೀ ಹೂವೇ ನಾ ಹಾರ ಹಾರ ಬಾರಾ… ತೂ ಮೋತಿ, ಮೈ ಮಾಲಾ ಮಾಲಾ ಲಾಲಾ…
ತುಂಬಿದ ಹೃದಯದಲಿ, ಅರ್ಮಾನ್ ಭರೇ ದಿಲ್ ಕೇ,
ಪ್ರತಿಮಿಡಿತವೂ ಹಾರೈಸಲಿ. ಧಢಕನ್ ಭೀ ಬಧಾಯೀ ದೇ.
ನನ್ನ ಜೀವನದಾ ದನಿಯೂ, ಅಬ್ ಧುನ್ ಮೇರೆ ಜೀವನ್ ಕೀ,
ಲಯದಲ್ಲೇ ಕೇಳಿಸಲಿ. ಕುಚ್ ಸುರ್ ಮೇ ಸುನಾಯೀ ದೇ.
ಆಹಾಹಾಹಾಹಾ...... ಓಹೋಹೋಹೋ.... ಆಹಾಹಾಹಾಹಾ...... ಓಹೋಹೋಹೋ....
ಹರಸಲಿ ದೈವ ನಿನ್ನಯ ಪ್ರಾರ್ಥನೆ ರಿಮ್‌ಜಿಮ್ ರಿಮ್‌ಜಿಮ್ ಚಮ್‌ಚಮ್ ಗುನ್‌ಗುನ್
ಹಾಡುವೆ ನೀನೂ ತಂಪಿನ ಇಂಪಲೇ ತಿಲ್ ತಿಲ್ ಪಲ್ ಪಲ್ ರುನ್‌ಜುನ್ ರುನ್‍ಜುನ್
ಮನಮಂದಿರದಲೆ ಪೂಜೆ ಪೂಜೆ ಪೂಜೆ… ಮನ್ ಮಂದಿರ್ ಮೇ ಪೂಜಾ ಪೂಜಾ ಆಹಾ….
ಸರಿಗಮ ಪಮಗರಿ ಸಗ ಸಗ ಸರಿಗಮ ಪಮಗರಿ ಸಗ ಸಗ
ರಿಗಮಪ ಮಗರಿಸ ರಿಪ ರಿಪ ರಿಗಮಪ ಮಗರಿಸ ರಿಪ ರಿಪ
ಪದನಿಸ ನಿದಪಮ ಮ..ದ ಗದಪ.. ನಿಸ..  ಪದನಿಸ ನಿದಪಮ ಮ..ದ ಗದಪ.. ನಿಸ.. 


video


Sunday, 12 October 2014

ಸುಡಲೀ ನಿನ್ನ ಮನವೂ ಒಲುಮೆಯ ಮಿಲನಕೆ (ಭಾವಾನುವಾದ)

ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.

ಚಿತ್ರ: ಅನಾಮಿಕಾ (1973)
ಸಾಹಿತ್ಯ: ಮಜರೂಹ್ ಸುಲ್ತಾನ್‌ಪುರಿ
ಸಂಗೀತ: ರಾಹುಲ್ ದೇವ್ ಬರ್ಮನ್
ಗಾಯಕ: ಕಿಶೋರ್ ಕುಮಾರ್ 
ಚಿತ್ರಿಕೆಯಲ್ಲಿ: ಸಂಜೀವ್ ಕುಮಾರ್, ಜಯಾ ಭಾದುರಿ


ಮೂಲಗೀತೆಯ ಇಳಿಕೊಂಡಿ (Download Link)

ಕನ್ನಡ ಭಾವಾನುವಾದ ಹಿಂದಿ ಮೂಲ

ಒದ್ದೆ ರೆಪ್ಪೆಗಳಲೇ ಮೇರೀ ಭೀಗೀ-ಭೀಗೀ ಸೀ
ಚೂರಾಗಿ ಉಳಿದಿಹ ಪಲಕೋಂ ಪೇ ರಹ್ ಗಯೇ
ಒಡೆದೆನ್ನ ಕನಸುಗಳಂತೆ ಜೈಸೇ ಮೇರೇ ಸಪನೇ ಬಿಖರ್ ಕೇ
ಸುಡಲೀ ನಿನ್ನ ಮನವೂ ಜಲೇ ಮನ್ ತೇರಾ ಭೀ
ಒಲುಮೆಯ ಮಿಲನಕೆ ಕಿಸೀ ಕೇ ಮಿಲನ ಕೋ
ಅನಾಮಿಕಾ ನೀನೂ ನರಳು ಅನಾಮಿಕಾ ತೂ ಭೀ ತರಸೇ
ಒದ್ದೆ ರೆಪ್ಪೆಗಳಲೇ… ಮೇರೀ ಭೀಗೀ-ಭೀಗೀ ಸೀ…
ಒದ್ದೆ ರೆಪ್ಪೆಗಳಲೇ ಮೇರೀ ಭೀಗೀ-ಭೀಗೀ ಸೀ
ಚೂರಾಗಿ ಉಳಿದಿಹ ಪಲಕೋಂ ಪೇ ರಹ್ ಗಯೇ
ಒಡೆದೆನ್ನ ಕನಸುಗಳಂತೆ ಜೈಸೇ ಮೇರೇ ಸಪನೇ ಬಿಖರ್ ಕೇ
ಸುಡಲೀ ನಿನ್ನ ಮನವೂ ಜಲೇ ಮನ್ ತೇರಾ ಭೀ
ಒಲುಮೆಯ ಮಿಲನಕೆ ಕಿಸೀ ಕೇ ಮಿಲನ ಕೋ
ಅನಾಮಿಕಾ ನೀನೂ ನರಳು ಅನಾಮಿಕಾ ತೂ ಭೀ ತರಸೇ
ಒದ್ದೆ ರೆಪ್ಪೆಗಳಲೇ… ಮೇರೀ ಭೀಗೀ-ಭೀಗೀ ಸೀ…
ಅರಿಯದೆ ನಿನ್ನ, ತುಝೇ ಬಿನ ಜಾನೇ,
ತಿಳಿಯದೆ ಮನವ ಬಿನ ಪಹಚಾನೇ
ಹೃದಯದೆ ಆರಾಧಿಸಿದೆ ಮೈಂನೇ ಹೃದಯ್ ಸೇ ಲಗಾಯಾ
ಅರಿಯದೆ ನಿನ್ನ, ತುಝೇ ಬಿನ ಜಾನೇ,
ತಿಳಿಯದೆ ಮನವ ಬಿನ ಪಹಚಾನೇ
ಹೃದಯದೆ ಆರಾಧಿಸಿದೆ ಮೈಂನೇ ಹೃದಯ ಸೇ ಲಗಾಯಾ
ನನ್ನಾ ಪ್ರೀತಿಯಾ ಪರ್ ಮೇರೇ ಪ್ಯಾರ್ ಕೇ
ಬದಲಿಗೆ ನೀನು ಬದಲೇ ಮೇಂ ತೂನೇ
ನನಗೆ ಈ ದಿನ ತೋರಿದೆ ಮುಝಕೋ ಯೇ ದಿನ್ ದಿಖಲಾಯಾ
ವಿರಹದ ಕಾಲ ಜೈಸೇ ಬಿರಹಾ ಕೀ 
ತಪಿಸಿದೆನೆಂತೋ ರುತ ಮೈಂನೇ ಕಾಟೀ
ಕಂಗೆಟ್ಟು ಕಣ್ಣಾಲಿ ತುಂಬೀ ತಡ಼ಪ ಕೇ ಆಹೇಂ ಭರ-ಭರ ಕೇ
ಸುಡಲೀ ನಿನ್ನ ಮನವೂ ಜಲೇ ಮನ್ ತೇರಾ ಭೀ...
ಒಲುಮೆಯ ಮಿಲನಕೆ ಕಿಸೀ ಕೇ ಮಿಲನ ಕೋ
ಅನಾಮಿಕಾ ನೀನೂ ನರಳು ಅನಾಮಿಕಾ ತೂ ಭೀ ತರಸೇ
ಒದ್ದೆ ರೆಪ್ಪೆಗಳಲೇ… ಮೇರೀ ಭೀಗೀ-ಭೀಗೀ ಸೀ…
ಬೆಂಕಿಯ ಸರಸ, ಆಗ್ ಸೇ ನಾತಾ,
ನಾರಿಯ ಪ್ರಣಯ ನಾರೀ ಸೇ ರಿಶ್ತಾ
ಏಕೆ ಮನ ಅರಿಯಲೇ ಇಲ್ಲ ಕಾಹೇ ಮನ್ ಸಮಝ ನ ಪಾಯಾ
ಬೆಂಕಿಯ ಸರಸ, ಆಗ್ ಸೇ ನಾತಾ,
ನಾರಿಯ ಪ್ರಣಯ ನಾರೀ ಸೇ ರಿಶ್ತಾ
ಏಕೆ ಮನ ಅರಿಯಲೇ ಇಲ್ಲ ಕಾಹೇ ಮನ ಸಮಝ ನ ಪಾಯಾ
ನನಗೇನು ಗರವೋ ಮುಝೇ ಕ್ಯಾ ಹುವಾ ಥಾ 
ವಂಚಕಿ ಮೇಲೆ ಏಕ್ ಬೇವಫಾ ಪೇ
ನನಗೀ ಪ್ರೇಮವೇಕಾಯ್ತೋ ಹಾಯ್ ಮುಝೇ ಕ್ಯೋಂ ಪ್ಯಾರ್ ಆಯಾ
ನಿನ್ನಾ ಸೋಗಿಗೆ ತೇರೀ ಬೇವಾಫಾಹೀ ಪೇ
ಎಡವಿ ನಾ ಬೀಳೇ ಹಂಸೇ ಜಗ ಸಾರಾ
ನಗುವರು ಜನರೆಲ್ಲೆಲ್ಲೂ ಗಲೀ-ಗಲೀ ಗುಜ಼ರೇ ಜಿಧರ್ ಸೇ
ಸುಡಲೀ ನಿನ್ನ ಮನವೂ ಜಲೇ ಮನ್ ತೇರಾ ಭೀ...
ಒಲುಮೆಯ ಮಿಲನಕೆ ಕಿಸೀ ಕೇ ಮಿಲನ ಕೋ
ಅನಾಮಿಕಾ ನೀನೂ ನರಳು ಅನಾಮಿಕಾ ತೂ ಭೀ ತರಸೇ
ಒದ್ದೆ ರೆಪ್ಪೆಗಳಲೇ… ಮೇರೀ ಭೀಗೀ-ಭೀಗೀ ಸೀ…
ಒದ್ದೆ ರೆಪ್ಪೆಗಳಲೇ ಮೇರೀ ಭೀಗೀ-ಭೀಗೀ ಸೀ
ಚೂರಾಗಿ ಉಳಿದಿಹ ಪಲಕೋಂ ಪೇ ರಹ್ ಗಯೇ
ಒಡೆದೆನ್ನ ಕನಸುಗಳಂತೆ ಜೈಸೇ ಮೇರೇ ಸಪನೇ ಬಿಖರ್ ಕೇ
ಸುಡಲೀ ನಿನ್ನ ಮನವೂ ಜಲೇ ಮನ್ ತೇರಾ ಭೀ
ಒಲುಮೆಯ ಮಿಲನಕೆ ಕಿಸೀ ಕೇ ಮಿಲನ ಕೋ
ಅನಾಮಿಕಾ ನೀನೂ ನರಳು ಅನಾಮಿಕಾ ತೂ ಭೀ ತರಸೇ
ಒದ್ದೆ ರೆಪ್ಪೆಗಳಲೇ… ಮೇರೀ ಭೀಗೀ-ಭೀಗೀ ಸೀ…