Friday 17 April 2020

ಒಡತಿ (ಭಾವಾನುವಾದ)

ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. 

ಗೀತಚಿತ್ರ: ಏಕ್ ಜಿ಼ಂದಗಿ ಖುದ್ ಕೇ ನಾಮ್ (2019)
ಸಾಹಿತ್ಯ: ಸಂಜನಾ ಸಿಂಗ್
ಸಂಗೀತ: ಅರ್ಜುನ್ ಅಯ್ಯರ್
ದನಿ: ವಿಜಯ್ ವಿಕ್ರಮ್ ಸಿಂಗ್
ಚಿತ್ರಿಕೆಯಲ್ಲಿ: ದೇವಾಂಶಿ ದವೆ, ಲವೀನಾ ಕ್ಷತ್ರಾನಿ, ಗರಿಮಾ ಚೌಹಾನ್, ಇತರರು

ಮೂಲಗೀತೆಯ ಇಳಿಕೊಂಡಿ (Download Link)

ಕನ್ನಡ ಭಾವಾನುವಾದ

ಹಿಂದಿ ಮೂಲ

ಭಾವಾಂತರಾಳದಿ ಮೂಡುವುದೀ ಜಿಜ್ಞಾಸೆ ಕಭೀ ಕಭೀ ಮೇರೇ ದಿಲ್ ಮೇಂ ಖ್ಯಾಲ್ ಆತಾ ಹೈಂ
ಒಲವಿನೊಡನಾಡಿಯಾಗುವೆ ನೀ ಕಿ ಜೈಸೇ ತುಝಕೋ ಬನಾಯಾ ಗಯಾ ಹೈ
ಯಾರಿಗೆಂದು?! ಕಿಸ್ ಕೇ ಲಿಯೇ?!
ಭುವಿಗಿಳಿದುಬಂದಿಹೆ ನೀ ಜ಼ಮೀಂ ಪೇ ಬುಲಾಯಾ ಗಯಾ ಹೈ
ಯಾರಿಗೆಂದು?! ಕಿಸ್ ಕೇ ಲಿಯೇ?!
ಕನಸಹೊಸೆಯುವೀ ನಿನ್ನ ಕಂಗಳು ಕಿ ಯೇ ಆಂಖೇ ಜೋ ಸಪನೇ ಬುನ್ ರಹೀ ಹೈಂ
ಅದಾರ ಚಿತ್ರ ಬಿಡಿಸುತಿವೆ?! ಕಿಸ್ ಕೀ ತಸ್ವೀರ್ ಬನಾ ರಹೀ ಹೈಂ?!
ನಿನ್ನ ಈ ಕೈರುಚಿ ಕಿ ಯೇ ಹಾಥೋಂ ಕಾ ಜಾದೂ
ಅದಾರ ಮನ ಗೆಲ್ಲುವುದೋ?! ಕಿಸ್ ಕೀ ದಿಲ್ ಕೀ ರಾಸ್ತೇ ಖೋಲೇಗಾ?!
ಕುಣಿಕುಣಿದರೂ ದಣಿಯದೀ ಪಾದಗಳು ಯೇ ಜೋ ಕದಮ್ ಥಿರಕನೇ ಸೇ ಥಕತೇ ನಹೀಂ
ಯಾರೊಡಗೂಡಿ ನಡೆಯುವವೋ?! ಕಭೀ ತೋ ಕಿಸೀ ಕೇ ಸಾಥ ಚಲೇಂಗೇ
ಯಾರಿಗೆ ಕಾದು ನಿಲ್ಲುವವೋ?! ಕಿಸೀ ಕೇ ಲಿಯೇ ತೋ ರುಕೇಂಗೇ
ಅನುರಾಗ ಪಲ್ಲವಿಯೊಂದ ನೀ ಬರೆದಾಗ ತೂ ಅಬ್ ಸೇ ಪಹಲೇ ಜೋ ಧುನ್ ಲಿಖ್ ರಹೀ ಥೀ ಕಹೀ
ಅದಾರ ಮನದೇ ಜಪಿಸಿದೆಯೋ?! ಕಿಸ್ ಕೀ ಖ಼ಯಾಲೋಂಮೇ ಖೋಯೀ ರಹೀ ಹೋಗೀ?!
ಈ ಪಾಗಾರ ದಾರಂದಗಳನಾರೋ ಕಿ ಯೇ ಜೋ ದೀವಾರ್ ಔರ್ ದರವಾಜ಼ೇ ಹೈಂ
ಸಾಂಗತ್ಯದಲೇ ಸೂರಾಗಿಸುವರಲ್ಲ ಕೋಯೀ ತೋ ಆ ಕರ್ ಇನ್ಹೇ ಘರ್ ಬನಾಯೇಗಾ
ಭಾವಾಂತರಾಳದಿ ಮೂಡುವುದೀ ಜಿಜ್ಞಾಸೆ ಕಭೀ ಕಭೀ ಮೇರೇ ದಿಲ್ ಮೇಂ ಖ್ಯಾಲ್ ಆತಾ ಹೈಂ
ನೀನಾರಿಗಾಗಿಯೋ ಕಾಯಲದೇಕೆ? ಕಿ ತುಜೇ ಕಿಸೀ ಕಾ ಇಂತಜ಼ಾರ ಕ್ಯೋಂ ಹೋ?
ನಿನ್ನೀಪ್ಸೆಗಳೊಡತಿ ನೀನೇಕಲ್ಲ? ಕ್ಯೋಂ ತೇರೀ ಸಪನೇ ತೇರೇ ಹೀ ನ ಹೋ?
ಭಾವಾಂತರಾಳದಿ ಮೂಡುವುದೀ ಜಿಜ್ಞಾಸೆ ಕಭೀ ಕಭೀ ಮೇರೇ ದಿಲ್ ಮೇಂ ಖ್ಯಾಲ್ ಆತಾ ಹೈಂ
ನಿನ್ನಯ ಅವತಾರವಾಗಿಹುದು ಜೈಸೇ ತುಜಕೋ ಬನಾಯಾ ಗಯಾ ಹೈಂ 
ನಿನಗಾಗಿಯೇ ಎಂದು ಸಿರ್ಫ಼್ ಔರ್ ಸಿರ್ಫ಼್ ತೇರೇ ಲಿಯೇ