Monday, 26 December 2011

ಮಹಾ ಮಂಥನ-9 (ಹಿಂದೂ ಮತವೋ, ಧರ್ಮವೋ, ಜೀವನ ವಿಧಾನವೋ...!? ವಿಶ್ಲೇಷಣೆ)

ಈ ಕಂತಿನಲ್ಲಿ alif ಮತ್ತು ನನ್ನ (pkbys ಹೆಸರಿನಿಂದ) ಚರ್ಚೆ ಇದೆ, crusade  ಮತ್ತು Manju ಕಾಮೆಂಟ್ಸ್ ಸಹ ಇದೆ.
ಆರನೇ ಕಂತು ==> ಮಹಾ ಮಂಥನ-6 (crusade ರ ನಿಷ್ಪಕ್ಷಪಾತತೆ ಮತ್ತು ಸೌಹಾರ್ದ ನೀತಿ) 
ಏಳನೇ ಕಂತು ==> ಮಹಾ ಮಂಥನ-7 (ತಪ್ಪಿಗೆ ಶಿಕ್ಷೆ ಮತ್ತದರ ಸ್ವರೂಪ)
ಎಂಟನೇ ಕಂತು ==> ಮಹಾ ಮಂಥನ-8 (ವಿಗ್ರಹಾರಾಧನೆ, ದುಷ್ಟಶಕ್ತಿ ವಿಚಾರ-ವಿಮರ್ಶೆ)
                                                                                                                                                                    


29-09-10 (06:51 AM)alif
ನಾನು ಮೊದಲೇ ಹೇಳಿದೆ ವಿಷಯ ಹೇಬೇಕಾದರೆ ಅದರ ಪೂರ್ವಾಪರ ತಿಳಿಯಿರಿ ಎಂದು. ಮತ್ತೆ ಕೇಳುತಿದ್ದಿರಾ. ನನಗೆ ಇದರ ಬಗ್ಗೆ ಇರುವ ಅರಿವು ಹೇಳುತ್ತೇನೆ (ಇದು ಅಂತಿಮ ಅಲ್ಲ): ಮಕ್ಕ ಭೂಮಿಯ ಧ್ಯ ಬಿಂದು ಎಂದು ಎಲ್ಲೂ ಹೇಳಿರುವದಾಗಿ ನನಗೆ ತಿಳಿದಿಲ್ಲ, ಆದರೆ ಅದು ಮುಸ್ಲಿಮರ ಪ್ರಾರ್ಥನಾ ಕೇಂದ್ರ ಬಿಂದು. ಭೂಮಿಯ ಯಾವ ಮೂಲೆಯಲ್ಲಿರಲಿ, ಅವನು ಇದರತ್ತ ತಿರುಗಿ ಪ್ರಾರ್ಥಿಸುವನು. ಇದನ್ನು ಸಮಾನತೆಯ ಸಂಕೇತ ಅನ್ನಬಹುದು. ಪ್ರಾರ್ಥನೆಯಲ್ಲಿ ಎಲ್ಲರೂ (ಬಡವ ಬಲ್ಲಿದನಿಲ್ಲ, ಮೇಲು ಕೀಳಿಲ್ಲ, ಕಪ್ಪು ಬಿಳುಪಿಲ್ಲ. ರಾಜ ಅಂತಿಮವಾಗಿ ಅಲ್ಲಿಗೆ ಬಂದರೂ ಅವನು ಅಂತಿಮ ಸಾಲಿನಲ್ಲಿ!) ಭುಜಕ್ಕೆ ಭುಜ ಸೇರಿಸಿ ಒಂದೇ ಕಡೆಗೆ ತಿರುಗಿ ಪ್ರಾರ್ಥಿಸುವುದು ಸುಂದರ. ಕೆಲವರು ಇದರ ಬಗ್ಗೆ ಅಧ್ಯಯನ ಮಾಡುತ್ತಾ ಭೂಮಿಯ ನೆಲಬಾಗದ ಮಧ್ಯ ಅದಾಗಿದೆ ಅನ್ನುತ್ತಾರೆ, ಅದನ್ನು ನೀವು ಅವರೊಂದಿಗೆ ಚರ್ಚಿಸಬೇಕು. ಕುರಾನ್ ಎಲ್ಲೂ ಸಾಕ್ಷಿಗಳಿಲ್ಲದೇ ನು ಹೇಳಲಿಲ್ಲ (ಕೆಲವೊಂದು ಮಾನವನ ತರ್ಕಕ್ಕೆ ನಿಲುಕದ್ದು, ಉದಾಹರಣೆ ಆತ್ಮ ಇದರ ಇರುವಿಕೆ ಮನಸ್ಸಿನಲ್ಲಿ ಕಲ್ಪಿಸಬಹುದು ಅಷ್ಟೆ, ಇದಕ್ಕೆ ಪೂರಕ ಸಾಕ್ಷಿ ಇದೆ ಆದರೆ ನೇರ ಸಾಕ್ಷಿ ಸಾಧ್ಯವಿಲ್ಲ).

ನಿಮ್ಮ ಇನ್ನೊಂದು ಕೊಂಕು “#ಎಷ್ಟೇ ಆದರೂ ಬಲದಿಂದ ಎಡಕ್ಕೆ ಬರೆಯುವ ಸಂಸ್ಕೃತಿ" ನಾನು ತಿಳಿದಂತೆ ಎಲ್ಲರೂ ಬಲಕ್ಕೆ ಪ್ರಾಧಾನ್ಯ ನೀಡುತ್ತಾರೆ. ಬಲಗಾಲಿಟ್ಟು ಮನೆ ಪ್ರವೇಶ.... ಅದೇ ರೀತಿ ಇಲ್ಲಿ ಬಲ ಭಾಗದಿಂದ ಆರಂಭಿಸಿ ಎಡಕ್ಕೆ ಅಷ್ಟೆ.

#ಹಾರ್ಡ್‌ ಕೊಡೆಡ್ ನಿಯಮಗಳೆ ಧರ್ಮ, ಅದು ಬಿಟ್ಟು ಆಚರಣೆಗಳನ್ನು ಧರ್ಮ ಅನ್ನುವುದು ಮೂಢತನ. ವರ್ಷ ವರ್ಷಕ್ಕೆ ಬದಲಾಗುವ ನಿಯಮಗಳಾದರೆ ಅದಕ್ಕಾಗಿ ರಾಮನು ಬೇಕೇ? ಅದಕೊಂದು ಹೆಸರು ಬೇಕೇ (ಧರ್ಮ ಎಂದು)?

ನೀವು ನಿಮ್ಮ ಧರ್ಮದ ಬಗ್ಗೆಯೇ ಸರಿಯಾಗಿ ವಿಶ್ವಾಸ ಹೊಂದಿಲ್ಲ
(#ಆದರೆ, ಆ ಕಾಲವನ್ನು ನಾವು ಬಿಟ್ಟು ಬಂದಾಗಿದೆ.. ನಾಗರಿಕತೆಯ ಒಂದು ಮಜಲು ಮನುಸ್ಮೃತಿಯೇ ಹೊರತು ಅಂತಿಮವಲ್ಲ). ನಿಮ್ಮ ಪ್ರಕಾರವೇ ಅದು ಅನಾಗರಿಕತೆಯ ಗೂಡು!

#ಧರ್ಮ ಮನುಷ್ಯನನ್ನು ಸರಿ ದಾರಿಯಲ್ಲಿಡಲು, ಒಂದೇ ವೀಕ್ಷಣೆ ಇರುವವರು ಒಂದು ಧರ್ಮ ಸ್ವೀಕರಿಸಿ ಅದರ ನಿಯಮಾನುಸಾರ ಬದುಕಬೇಕು, ತಪ್ಪಿನಿಂದ ದೂರ ಉಳಿಯಲು ತೀರ್ಮಾನಿಸಿದವನಿಗೆ ಅದರ ಶಿಕ್ಷೆಯ ಬಗ್ಗೆ ಚಿಂತೆ ಯಾಕೆ? (ಇಲ್ಲಿ ಭೇದ ಭಾವ ಇರಬಾರದು ಎಲ್ಲರಿಗೂ ಒಂದೇ ನಿಯಮ, ತಿರುಚುವ ಅಧಿಕಾರ ಯಾರಿಗೂ ಇಲ್ಲ). ಆದರೆ ಒಂದು ದೇಶದಲ್ಲಿ ಹಲವು ಧರ್ಮವಿದ್ದಾಗ ಅಲ್ಲಿ ಎಲ್ಲರು ಚರ್ಚಿಸಿ ತೀರ್ಮಾನಿಸಬೆಕು ನಿಯಮಗಳನ್ನು (ಭಾರತದ ಹಾಗೆ, ಆದರೆ ಕೆಲವರು ಇದು ಹಿಂದು ರಾಷ್ಟ್ರ ಅನ್ನುತ್ತಾರೆ ಅದು ಸಂವಿಧಾನದ ಮೇಲಿನಾ ಅಗೌರವ ಮತ್ತು ಈ ವಾದ ಹೇಗೆ ಅಂದರೆ "ಡಾರ್ವಿನ್ ಸಿದ್ದಾಂತ ಹಿಡಿದು ಕೋತಿಗಳು ಇದು ನಮ್ಮ ರಾಷ್ಟ್ರ ನಮ್ಮ ಭೂಮಿ ಅಂದ ಹಾಗೆ").
ಯ್ಯೋ ನಿಮ್ಮ ಮಾತು "#ನನ್ನಂತೆಯೇ ನಡೆಯಬೇಕೆಂದು ಹೇಳಲು ನಾನೇನು ಸ್ವಘೋಷಿತ ಅಂತಿಮ ಪ್ರವಾದಿಯಲ್ಲ, ಹಾಗಾಗುವ ಆಸೆಯೂ ನನಗಿಲ್ಲ"
ಇದು ಹೇಗಿದೆ ಅಂದರೆ ಹುಲಿಯ ಚಿತ್ರ ನೋಡಿದ ಬೆಕ್ಕಿನ ಮರಿ "ನಾನು ಹುಲಿಯ ಹಾಗೆ ಇದ್ದರು ಹುಲಿ ಎಂದು ಹೇಳಿ ಕೊಳ್ಳಲಾರೆ, ಅದರ ಆಸೆಯೂ ನನಗಿಲ್ಲ" ಎಂದು ಹೇಳಿತಂತೆ. ಇದಕ್ಕೆ ನು ಮಾಡಲು ಸಾದ್ಯ? ಬೆಕ್ಕಿನ ಮರಿಗೆ ಹುಲಿ ಎಂದರೆ ಏನು ಎಂದು ತಿಳಿದಿದ್ದರೆ ತಾನೆ!

ನಿಮ್ಮ ಕೊಂಕಿಗೆ ಒಂದು ಪ್ರತಿವಾದ: ನನ್ನ ಗೆಳೆಯ ಬಹಳ ಒಳ್ಳೆಯವ ಅವನ ನಡೆ ನುಡಿ ಸುಂದರ ಹಾಗಾದರೆ ಅವನಿಗೂ ರಾಮನಿಗೂ ಏನು ವ್ಯತ್ಯಾಸ? (ಹುಚ್ಚಾಗಬೇಡಿ ಪ್ರತಿಯಾಗಿ ಕೇಳಿದೆ ಅಷ್ಟೇ, ರಾಮನನ್ನು ಗೌರವಿಸುತ್ತೆನೆ, ಇತರ ರಾಮ ಭಕ್ತರ ಕ್ಷಮೆ ಇರಲಿ). ಇಲ್ಲಿ ನನ್ನ ವಾದ ಧರ್ಮದ ವಿರುದ್ದ ಅಲ್ಲ ಧರ್ಮವನ್ನು ಅಧರ್ಮ ಎಂದು ಹೇಳಿ, ಮಹಾತ್ಮರನ್ನು ಹೀಯ್ಯಾಳಿಸುವ ನೀಚ ಸಂಸ್ಕೃತಿ ವಿರುದ್ದ ಅಷ್ಟೇ. ಇಲ್ಲಿ ನೀವು ಎಲ್ಲದಕ್ಕೂ ಆ ಮುಸ್ಲಿಂ ಈ ಮುಸ್ಲಿಂ ಎಂದು ಉದಾಹರಣೆ ಕೊಟ್ಟರಷ್ಟೇ ಹೊರತು ನಿಮ್ಮ ವಾದಕ್ಕು ಧರ್ಮಕ್ಕು ಇರುವ ಸಂಬಂಧ ತಿಳಿಯಲು ಪ್ರಯತ್ನಿಸಲಿಲ್ಲ!

ದೇವರು ಎಲ್ಲಲ್ಲಿಯು!!! ನಮ್ಮ ಮನಸ್ಸು/ಆತ್ಮ ನಮ್ಮನ್ನು ನಿಯಂತ್ರಿಸುತ್ತದೆ. ಹಾಗಾದರೆ ನಮ್ಮ ದೇಹ ಪೂರ್ತಿ ಮನಸಿದೆಯೆ? ಅದು ಎಲ್ಲಿದೆ? ಇದಕ್ಕೆ ಉತ್ತರ ಮನಸ್ಸು ಎಂಬುದು ಒನ್ದು ಶಕ್ತಿ ಅದು ಪೂರ್ಣ ದೇಹ ನಿಯಂತ್ರಿಸುತ್ತದೆ ಅದಕ್ಕೆ ಜಾಗ ಬೇಕಿಲ್ಲ ಆದರೆ ಎಲ್ಲವೂ ಅದರ ನಿಯಂತ್ರಣದಲ್ಲಿದೆ. ಅದಕ್ಕೆ ರೂಪವಿಲ್ಲ ಕಾರವಿಲ್ಲ! ಕಣ್ಣಿನಲ್ಲಿ ಅದಿಲ್ಲ ಆದರೆ ಕಣ್ಣು ಅದರ ಶಕ್ತಿಯ ಅಧೀನ. ಇದು ಚಿಕ್ಕದಾಗಿ ಹೇಳಬಹುದಾದ ಉದಾಹರಣೆ.

ಪಥ ಭ್ರಷ್ಟರಾಗಬೇಡಿ!
ನೀವು ಹಿಂದು ಅಲ್ಲವೆ? ಅಥವಾ ಹಿಂದು ಧರ್ಮವಲ್ಲವೆ?
ನಿಮ್ಮ ಗ್ರಂಥಗಳು ಯಾವುದಕ್ಕಗಿ ಇದೆ?
ಅವುಗಳಲ್ಲಿ ಇರುವುದು ನಿಮಗೆ ಬಾದಕ ಅಲ್ಲವೆ?
ದುಷ್ಟ ಶಿಷ್ಟ ಶಕ್ತಿ ಎಂದಿಲ್ಲವೆ?
ಮಾನವೀಯತೆ ಸ್ವಾಮಿಗಳಿಗೆ ಅನ್ವಯಿಸುವುದಿಲ್ಲವೆ? ಅವರಿಗೆ ಮಾನವ ಸಹಜ ಕ್ರಿಯೆಗೆ ನಿರ್ಬಂಧ ಕೆ?
(ನಿಮ್ಮ ಮಾನವೀಯತೆ ವಾದಕ್ಕೆ ಹೇಳಿದೆ ನೋವಾದರೆ ಕ್ಷಮೆ ಇರಲಿ).

ನಿಮ್ಮ ಮಾತು ಆ ಸರಳ ಸತ್ಯವನ್ನ ಭಾರತೀಯರು ವೇದಗಳ ಕಾಲದಲ್ಲಿಯೇ ಕಂಡುಕೊಂಡಿದ್ದೆವು.. ಕುರಾನ್ ನ ವರೆಗೆ ಕಾಯಬೇಕಾದ ದುರ್ಬರ ಅರಬರ ಸ್ಥಿತಿಯಲ್ಲಿ ಭಾರತೀಯರಿರಲ್ಲಿಲ್ಲ”, ಆದರೆ ಮೊದಲೇ ತಿಳಿದ ಸತ್ಯ ಇನ್ನು ಪೂರ್ಣವಾಗಲಿಲ್ಲ ಅನ್ನುವುದೇ ಬೇಜಾರು!
 
29-09-10 (06:46 AM)[-] Manju
ಧರ್ಮೋ ರಕ್ಷತಿ ರಕ್ಷತಃ ಎನ್ನುತ್ತೇವೆ. ನಾವು ಧರ್ಮವನ್ನು ರಕ್ಷಿಸಿದಲ್ಲಿ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ಮಾನವಧರ್ಮ ಎಲ್ಲ ಧರ್ಮಗಳಿಗೂ ಮಿಗಿಲು. ಅದನ್ನು ಗೌರವಿಸದ ಅಧರ್ಮೀಯರಿಗೆ ಯಾವ ಮಾತೂ ರುಚಿಸುವುದಿಲ್ಲ. ನಾವು ಸನಾತನ ಧರ್ಮ ಉಚ್ಚ, ಉಳಿದ ಧರ್ಮಗಳು ನೀಚ ಎಂಬ ಮೊಂಡುವಾದಕ್ಕಿಳಿದಿಲ್ಲ. ಧರ್ಮಬಹುಸಂಖ್ಯಾತರು ಇರುವ ರಾಷ್ಟ್ರಗಳಲ್ಲಿ ಬಹುಸಂಖ್ಯಾತರ ಇಚ್ಛೆಯಂತೆಯೇ ಎಲ್ಲವೂ ನಡೆಯುವುದೇ ಹೊರತು ಅಲ್ಲಿನ ಅಲ್ಪಸಂಖ್ಯಾತರಂತೆ ಅಲ್ಲ. ನಿಮ್ಮದು ಧರ್ಮಢಾಂಭಿಕ ಮನಸ್ತತ್ತ್ವ Alif.. ಆ ಸಂಕುಚಿತ ಭಾವನೆಗಳನ್ನು ಒತ್ತಟ್ಟಿಗಿಡಿ. ಎಲ್ಲವನ್ನೂ ಮಾನವಧರ್ಮದ ಔನ್ನತ್ಯದ ಓರೆಗಲ್ಲಿಗೆ ಹಚ್ಚಿ. ಉಳಿದವು ಗೌಣವಾಗುತ್ತವೆ. ಪೂರ್ವಾಗ್ರಹಪೀಡಿತ ವಾದಕ್ಕೆ ಮೌಲ್ಯ ದಕ್ಕಲಾರದು. Ignore ಮಾಡುವ, Accept ಮಾಡುವ ಸ್ವಾತಂತ್ರ್ಯವಿಲ್ಲದ ಮೇಲೆ ಧರ್ಮವೆಂಬುದು ಒಂದು ಸೆರೆವಾಸ.

29-09-10 (07:28 AM)alif
ನಿಮ್ಮ ಪ್ರಕಾರ ಮಾನವ ಧರ್ಮ ಎಂದರೇನು ಎಂದು ಹೇಳುವಿರ? ನಿಮ್ಮ ಹೇಳಿಕೆ "ಧರ್ಮಬಹುಸಂಖ್ಯಾತರು ಇರುವ ರಾಷ್ಟ್ರಗಳಲ್ಲಿ ಬಹುಸಂಖ್ಯಾತರ ಇಚ್ಛೆಯಂತೆಯೇ ಎಲ್ಲವೂ ನಡೆಯುವುದೇ ಹೊರತು ಅಲ್ಲಿನ ಅಲ್ಪಸಂಖ್ಯಾತರಂತೆ ಅಲ್ಲ" ಏನನ್ನು ಸೂಚಿಸುತ್ತದೆ? ಯೋಚಿಸಿ ನೀವು ಹೇಳುವ ಮಾನವ ಧರ್ಮವೊ? ರಾಕ್ಷಸ ಧರ್ಮವೊ? ನೀವು ಇತರ ದೇಶದ ಬಗ್ಗೆ ತೋರಿಸಿ ಏನೆಲ್ಲಾ ಹೇಳಬಹುದು, ಆದರೆ ನಾವು ಆ ರಾಷ್ಟ್ರ ದ್ದಾರಕ್ಕೆ ತರ್ಕಿಸುತ್ತಿಲ್ಲ ಬದಲಾಗಿ ನಮ್ಮ ಭಾರತದ ಅಭಿವೃದ್ದಿಗೆ ಚರ್ಚಿಸುತ್ತಿದ್ದೇವೆ. ಪೂರ್ಣ ಇಸ್ಲಾಮಿ ಕಾನೂನು ಬೇಕೆಂದು ಹ ಹಿಡಿಯುವವರು ಬೇರೆ ದೇಶಕ್ಕೆ ಹೋಗಲಿ ಅದೇ ರೀತಿ ಪೂರ್ಣ ಧರ್ಮದ ಕಾನೂನು ಬೇಕೆಂದರೆ ಅದಕ್ಕನುಗುಣವಾದ ರಾಷ್ಟ್ರಕ್ಕೆ ಹೋಗಬಹುದು. ಅದು ಬಿಟ್ಟು ಭಾರತ ಒಂದು ಧರ್ಮಕ್ಕೆ ಸೆರಬೆಕೆನ್ನುವ ಜನ ದೇದ್ರೋಹಿಗಳು, ಇದರಲ್ಲಿ ಯಾವುದೆ ಸಂಶಯ ಇಲ್ಲ.

29-09-10 (12:45 PM)[-]  pkbys
alifರವರೆ, ನಿಮ್ಮ ಭಾಷೆ ಈಗ ಬಹಳ ಸುಂದರವಾಗಿ ಮೂಡಿಬರುತ್ತಿದೆ.. ಅಭಿನಂದನೆಗಳು..
ಮಕ್ಕಾ ಕೇಂದ್ರ ವಿಷಯದ ಬಗ್ಗೆ ನಿಮ್ಮ ಅರಿವಿರುವ ಪರಿಧಿಯವರೆಗೆ ನನಗೆ ತಿಳಿಸಿದ್ದಕ್ಕೆ ಧನ್ಯವಾದಗಳು.. ನೀವು ಹೇಳಿದಂತೆ ಅದು ಮುಸ್ಲಿಂರ ಪ್ರಾರ್ಥನೆಯ ಕೇಂದ್ರ ಎಂದು ನಾನು ಬಲ್ಲೆ,ಅದಕ್ಕೆ ಕಾರಣ ಅದು ಭೂಮಿಯ ಕೇಂದ್ರ ಎಂದು ಕುರಾನ್ನಲ್ಲಿ ಅಲ್ಲಾಹನು ಹೇಳಿದ್ದಾನೆ ಎಂದು ಜಾಕಿರ್ ನಾಯಕ್ ಹೇಳಿದ್ದನ್ನು ಕೇಳಿದೆ... ನನ್ನ ಗೆಳೆಯ ಕಲೀಂನದೂ ಅದೇ ವಿಚಾರವಾಗಿತ್ತು.. ಅವನಿಂದಲೂ ಮನವರಿಕೆ ಮಾಡಲಾಗದಿದ್ದುದರಿಂದ ಈ ಮುಕ್ತ ವೇದಿಕೆಗೆ ಪ್ರಶ್ನೆ ತಂದೆ.. ನಿಮ್ಮ ಅರಿವಿನ ಪರಿಧಿಯಲ್ಲಿ ಹೇಳಿದ್ದೀರಿ.. ನಿಮ್ಮ ಬಳಿ ಈ ಪ್ರಶ್ನೆ ಕೇಳುವುದಿಲ್ಲ.. ಇನ್ಯಾರಾದರೂ ಉತ್ತರಿಸಿದರೆ ಉತ್ತರಿಸಲಿ.. ಕುರಾನ್ ಅನ್ನು ಒಬ್ಬ ಧಾರ್ಮಿಕ ಮಹಮದೀಯರಲ್ಲದೇ ಇನ್ಯಾರಿಂದ ಅವುಗಳನ್ನು ಕೇಳಲಿ. ನಾನು ಕೇಳಿದೆನೆಂದು ಕೋಪಗೊಳ್ಳದಿರಿ... ನಿಜಕ್ಕೂ ರಾಜ ರಂಕನ ಭೇದವಿಲ್ಲದ, ಭುಜಕ್ಕೆ ಭುಜ ಒತ್ತಿ ಆ ಪರದೈವಕ್ಕೆ ನಮಸ್ಕರಿಸುವ, 3 ದಿನಕ್ಕಿಂತ ಹೆಚ್ಚಿನ ದ್ವೇಷ ಕೋಪವನ್ನು ಇಟ್ಟುಕೊಳ್ಳಬಾರದೆನುವ ಹಲವಾರು ಇಸ್ಲಾಂನ ಸಂಗತಿಗಳು ನನ್ನ ಮನಸೂರೆಗೊಂಡಿದೆ..... ನಾನು ಉತ್ತಮ ಗುಣಗಳನ್ನು ಅಭಿನಂದಿಸಿಯೂ ಬಲ್ಲೆ. ಅದರೆ ನನಗೆ ಅಲ್ಲಿ ಅಭಿಮಾನವಿದೆಯೇ ಹೊರತು ಪ್ರಶ್ನೆಯಿಲ್ಲ, ಆದ್ದರಿಂದ ಅವುಗಳನ್ನು ನಾನು ವಿಚಾರ ವಿಮರ್ಶೆಗೆ ಎಳೆಯುವುದಿಲ್ಲ. ನನ್ನ ವಾಸ್ತವಿಕ ಮಾತುಗಳಲ್ಲಿ ನಿಮಗೆ ಕೊಂಕು ಕಾಣಿಸುತ್ತಿದ್ದರೆ ಅದಕ್ಕೆ ವಿಷಾದಿಸುವೆ... ಅದು ಉದ್ದೇಶಪೂರ್ವಕವಾಗಿ ಆಡುತ್ತಿರುವುದಲ್ಲ ಎಂದಷ್ಟೆ ಹೇಳಬಲ್ಲೆ.. ನನಗೆ ನಿಮ್ಮ ಮಾತುಗಳಲ್ಲಿ ಕೋಪ ಮತ್ತು ಆಕ್ರೋಶ ಕಾಣುತ್ತದೆ. ನೀವು ಆ ಬಗೆಯ ಉದ್ದೇಶ ಹೊಂದಿಲ್ಲ ಎಂದೂ ನಾನು ಬಲ್ಲೆನಾದುದರಿಂದ ನಾನು ಆಕ್ಷೇಪಿಸುವುದಿಲ್ಲ.... ನಾನು ಬಲದಿಂದ ಎಡಕ್ಕೆ ಬರೆಯುವ ಸಂಸ್ಕೃತಿ ಎಂದು ಹೇಳಿದ್ದು ಕೊಂಕಾಗಿ ಅಲ್ಲ.. ಆ ನಕ್ಷೆ ತಲೆಕೆಳಕು ಎಂದು ನಮಗೆ ಏಕೆ ಅನ್ನಿಸುತ್ತದೆ ಎಂಬ ಕಾರಣವಾಗಿ.. ಅಲ್ಲಿದ್ದದ್ದು ವಸ್ತುನಿಷ್ಠತೆ, ನಿಮಗೆ ಕೊಂಕಾಗಿ ಕಂಡರೆ ಕ್ಷಮಿಸಿ.. ಚೈನಿಯರದು ಚಿತ್ರಲಿಪಿ, ಅವರು ಚಿತ್ರಲಿಪಿ ಬರೆಯುತ್ತಾರೆಂದರೆ ಕೊಂಕೇ.. ಅದು ಸತ್ಯವಷ್ಟೇ.. ಬ್ರಾಹ್ಮಣ ಎಡಭುಜದಿಂದ ಬಲ ಪಕ್ಕೆಯವರೆಗೆ ಎಳೆಗಳ್ಳುಳ್ಳ ದಾರ ಕಟ್ಟಿಕೊಳ್ಳುತ್ತಾನೆ ಎಂದರೆ ಕೊಂಕೇ, ಅದು ವಾಸ್ತವ.. ಬರವಣಿಗೆಯ ದಿಕ್ಕು, ಚಿತ್ರಲಿಪಿ, ಜನಿವಾರ ಇವೆಲ್ಲಾ ಆಚರಣೆಯಲ್ಲಿರುವ ಸಂಪ್ರದಾಯಗಳು, ಆಯಾ ಸಂಸ್ಕೃತಿಯ ಮುಖ್ಯ featuers. ಬಲ ಶ್ರೇಷ್ಠ, ಎಡ ಕನಿಷ್ಠ ಎಂಬ ಭಾವನೆ ಹಿಂದೂಗಳಲ್ಲಿಲ್ಲ.. ಅವು ಕೇವಲ ವಿಷಯವೊಂದರ ಭಾಗವಷ್ಟೇ.. ಶ್ರೇಷ್ಠ ಕನಿಷ್ಠಗಳು ವಿಷಯಗಳ ಮೇಲೆ ಅವಲಂಬಿಸಿರುತ್ತದೆ.. ನಾವು ನಮ್ಮ ದೈನಂದಿನ ಕೆಲಸಕ್ಕೆ ಎಡ ಮೆದುಳನ್ನು ಬಳಸುತ್ತೇವೆ.. ಅದು ದೇಹದ ಬಲಭಾಗವನ್ನು ನಿಯಂತಿಸುತ್ತದೆ ಎಂದು ಮಾನವ ಜೀವಶಾಸ್ತ್ರ ಬಲ್ಲವರು ನಿಮಗೆ ತಿಳಿಸಬಲ್ಲರು..

ಅದಕ್ಕೆ ಕೆಲವು ಮೂಢರು ಪಾವಿತ್ರ್ಯವನ್ನು ಆರೋಪಿಸುತ್ತಾರೆ.. ಬಲಭಾಗವನ್ನೇ ಹೆಚ್ಚು ಬಳಸುವವರಿಗೆ ಎಡಭಾಗ ವಿಕೃತಿಯೆಂದು ಅನಿಸುತ್ತದೆ ಎಂಬುದು ನಿಜ. ಆದರೆ ಸತ್ಯವೆಂದರೆ ಹಾಗೆ ಭೇಧಭಾವ ಮಾಡುವುದು ತಪ್ಪು, ಪ್ರಾಚೀನ ಧರ್ಮಗ್ರಂಥಗಳು ಹಾಗೆಲ್ಲ ಉಚ್ಚ ನೀಚತೆಯನ್ನು ತೋರುವುದಿಲ್ಲ.. ಕೇವಲ ಅವುಗಳ ವಿವರ ನೀಡುತ್ತವಷ್ಟೇ, ಬಲ ಹೊಳ್ಳೆಯನ್ನು ಸೂರ್ಯನಾಡಿ ಎಂದೂ, ಎಡ ಮೂಗಿನ ಹೊಳ್ಳೆಯನ್ನು ಚಂದ್ರನಾಡಿ ಎಂದೂ ಕರೆಯುತ್ತೇವೆ.. ಪ್ರಾಣಾಯಾಮದಲ್ಲಿ ಎರಡಕ್ಕೂ ಅದರದೇ ಆದ ಪ್ರಾಮುಖ್ಯವಿದೆ.. ದೂರ ಪ್ರಯಾಣ ಹೊರಟಾಗ ಸೂರ್ಯನಾಡಿಯಲ್ಲಿ ಉಸಿರಾಡುತ್ತಿದ್ದರೆ ಒಳ್ಳೆಯದಾಗುತ್ತದೆ, ಹತ್ತಿರ ಪ್ರಯಾಣಕ್ಕೆ ಚಂದ್ರನಾಡಿಯಲ್ಲಿ ಉಸಿರಾಡುತ್ತಿದ್ದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ.. ಕೃಷ್ಣ ಸಂಧಾನಕ್ಕೆ ಹೊರಟಾಗ ಸೂರ್ಯನಾಡಿಯ ಉಸಿರುಬಂದಾಗಲೇ ಹೊರಟನಂತೆ.. ಆದರೂ ಅವನ ಸಂಧಾನ ವಿಫಲವಾಯಿತು. ಆದರೂ ಆ ಆಚರಣೆ ತಿಳಿದವರು ಮಾಡುತ್ತಾರೆ. ನಮ್ಮ ಕೈಲಿ ಸಾಧ್ಯವಾದಷ್ಟು ಒಳ್ಳೆಯ ಶಕುನದೊಂದಿಗೆ ಆರಂಭಿಸುವ ಕಾರಣಕ್ಕಾಗಿ ಅಷ್ಟೇ.. ಹೆಂಡತಿಯನ್ನು ವಾಮೇ (ಎಡಭಾಗದವಳು) ಎಂದು ಕರೆಯುತ್ತಾರೆ. ಗಂಡಿನ ತೊಡೆಗಳಲ್ಲಿ, ಎಡಗಡೆಯ ತೊಡೆ ಹೆಂಡತಿಯ ಸ್ಥಾನ, (ಎಡಭಾಗದಲ್ಲಿ ಕೂತವಳಿಗೆ ಮುತ್ತು ಕೊಡುವುದು ಸುಲಭ ಎಂಬ ಕಾರಣಕ್ಕಿರಬಹುದು.. ಅದು ನನ್ನ ಊಹೆ ಅಷ್ಟೇ..) ಬಲಭಾಗದ ತೊಡೆ ಮಗಳು ಮತ್ತು ಮಗಳ ಸಮಾನಳಾದ ಸೊಸೆಗೆ ಸೇರಿದ್ದು ಎನ್ನುತ್ತಾರೆ.. (ಮಕ್ಕಳು ಬಿಡಿ ಪೂರ್ಣ ಮಡಿಲೇ ಅವರದು)... ಆ ಕಾರಣದಿಂದಲೇ ಕನ್ಯಾದಾನದ ಸಂಧರ್ಭದಲ್ಲಿ ಬಲತೊಡೆಗೆ ಹೆಚ್ಚಿನ ಮಾನ್ಯತೆ.. ಎಡಬಲಗಳ ಬಗ್ಗೆ ಜಾಸ್ತಿ ಬರೆದೆ. ಸಾಕು. ಆಚರಣೆಗಳು ಧರ್ಮವಲ್ಲ ಎಂದು ನೀವೂ ಬರೆದಿರುವದರಿಂದ ಚರ್ಚೆ ಅನಗತ್ಯ.. ಅವು ಧರ್ಮದೊಡನೆ ಬೆಸೆದುಕೊಂಡಿವೆ ಅಷ್ಟೇ.. ಅವು ಸಂಪ್ರದಾಯಗಳಷ್ಟೇ. . ನಮ್ಮ ಪೂರ್ವ ಅನುಭವದಿಂದ ನಮ್ಮ ಅನುಕೂಲಕ್ಕೆ ಮಾಡಿಕೊಂಡವು.

ಇನ್ನು ನನ್ನ ಗೆಳೆಯ ಸುಂದರ ಒಳ್ಳೆಯವನು, ರಾಮನಂತೆ ಒಳ್ಳೆಯವನು ಅವನಿಗೂ ರಾಮನಿಗೂ ಏನು ವ್ಯತ್ಯಾಸ ಎಂದು ಕೇಳಿದಿರಿ.. ಒಬ್ಬ ಅದ್ವೈತಿ ಹಿಂದುವಾಗಿ ಹೇಳುತ್ತಿದ್ದೇನೆ.. ಏನೂ ವ್ಯತ್ಯಾಸವಿಲ್ಲ.. ಇರಲಿ.. ಏನೀಗ.. ನಾವೂ ಎಷ್ಟೋ ಬಾರಿ ಹೇಳುತ್ತೇವೆ.. ನನ್ನ ಮಗ ಶ್ರೀರಾಮಚಂದ್ರ ಎಂದು.. ಅದು ಅವರ ಗುಣವನ್ನ ತೋರಿಸಿದರೆ ತಪ್ಪೇನು, ಆಗಲಿ ಬಿಡಿ.. ಒಬ್ಬ ಗೆಳೆಯನೇನು ನಿಮ್ಮ ಗೆಳೆಯರೆಲ್ಲ ಶ್ರೀರಾಮಚಂದ್ರನ ಹಾಗೆ ಆಗಲಿ ಎಂದು ಯಾವ ಕೊಂಕಿಲ್ಲದೇ ಹೇಳುವೆ.. ಆದರೆ ಒಬ್ಬ ಮಹಮದೀಯನಾಗಿ ನಿಮಗೆ ಪರಮಾತ್ಮನನ್ನು ಮಾನವನಿಗೆ ಸಮೀಕರಿಸುವುದು ಸಾಧ್ಯವಿಲ್ಲ ಎಂದು ನಾ ಬಲ್ಲೆ.. ಆ ಬಗ್ಗೆ ಯೋಚನೆಯನ್ನೂ ನೀವು ಮಾಡಲಾರಿರಿ... ಅದಕ್ಕಾಗಿ ನಾನೇನೂ ಹೀಯಾಳಿಸುತ್ತಿಲ ನಿಮ್ಮ ಯೋಚನೆಗಳಿಗಿರುವ ನಿರ್ಭಂಧವನ್ನಷ್ಟೇ ಹೇಳುತ್ತಿರುವೆ.. ಹಾರ್ಡ್ ಕೋಡೆಡ್ ನಿಯಮಗಳೇ ಧರ್ಮ ಎಂದು ನೀವೆನ್ನುವಿರಿ. ಹಾಗೆನ್ನಲ್ಲು ನಿಮ್ಮ ಹಾರ್ಡ್ ಕೋಡ್ ಧರ್ಮದಲ್ಲಿ ಬೆಳೆದ ಮನಸ್ಥಿತಿ ನಿಮಗೆ ವಿಧಿಸುತ್ತದೆ... ನಿಮಗೆ ಸರಿ ಕಂಡದ್ದು, ನಿಮಗೆ ಮನವರಿಕೆಯಾದದ್ದದ್ದು ಧರ್ಮವೆಂದು ನಾನು ಮತ್ತು ಹಿಂದೂಗಳು ಹೇಳಬಲ್ಲರು.. ನಿಮಗೆ ಒಂದು ದಿಕ್ಕಿಗೆ ನಿಂತು ಮಂಡಿಯೂರಿ ಭಗವಂತನನ್ನು ಪ್ರಾರ್ಥಿಸುವ ಆಚರಣೆ ನಿಮಗೆ ಸರಿಕಂಡರೆ ಅದು ನಿಮ್ಮನ್ನು ಯಾವ ಹಿಂದೂವೂ ಆಕ್ಷೇಪಿಸುವುದಿಲ್ಲ.. ನಿಮಗೆ ಮನವರಿಕೆಯಾದರೆ ಸಾಕು.. ಹಾಗೆ ಹೇಳಲು ಸ್ವತಂತ್ರ ಮನಸ್ಥಿತಿಯ ಹಿನ್ನಲೆಯಿಂದ ಬಂದ ಮನಸ್ಥಿತಿ ಕಾರಣ.. ನೀವು ಸೆಮೆಟಿಕ್ ಧರ್ಮದ ಸ್ಥಿತಿಯಲ್ಲಿ ನಿಂತು ಓರಿಯಂಟಲ್ ಧರ್ಮಗಳನ್ನು ನೋಡುತ್ತಿರುವುದೇ ನಿಮಗೆ ಹಾಗೆ ಮಾತಡಲು ಪ್ರೇರಣೆ.. ಒಮ್ಮೆ ಹೊರಗೆ ಬಂದು ನೋಡಿ..

ಪ್ರವಾದಿಗಳನ್ನು ನಾನು ಹೀಯಾಳಿಸಿದೆ ಎಂದು ನಿಮಗನಿಸಿದೆ.. ಆ ಭಾವನೆಯಲ್ಲಿ ನಾನು ಬರೆದಿಲ್ಲವಾದರೂ ನಿಮಗೆ ಆ ಭಾವನೆ ಬಂದಿರುವುದಕ್ಕೆ ವಿಷಾದಿಸುವೆ.. ಅವರು ಯೋಗಪುರುಷರೇ ಸರಿ.. ಅಂದಿನ ಅನಾಗರಿಕ ಬರ್ಬರ ಜನಾಂಗಕ್ಕೆ ದೇವನಿತ್ತ ವರ ಅವರು.. ಆದರೆ ಅವರ ಎಲ್ಲ ವಿಷಯಗಳನ್ನೂ ಒಪ್ಪಲ್ಲು ಸಾಧ್ಯವಿಲ್ಲ..ಆದರೆ ಒಬ್ಬ ಮಹಮದೀಯನಾಗಿ ಅದನ್ನು ಒಪ್ಪಲು ನೀವು ಭಾಧ್ಯರು..

ಬಹುಸಂಖ್ಯಾತ ಅಲ್ಪಸಂಖ್ಯಾತರ ಇಚ್ಚೆಗಳ ಬಗ್ಗೆ ಬರೆದಿರುವಿರಿ.. ಒಂದು ಜನಾಂಗಕ್ಕೆ ದೇಶ ಬೇಕೆನ್ನುವ ವಾದ ಮಂಡಿಸಿ ದೊಡ್ಡದೊಂದು ಭೂಭಾಗವನ್ನು ಪಾಲು ತೆಗೆದುಕೊಂಡು ಹೋಗಿ ಇಂದಿಗೂ ಮಗ್ಗಲು ಮುಳ್ಳಿನಂತೆ ಚುಚ್ಚುತ್ತಿರುವ ಜನಾಂಗದ ಭಾಗವಲ್ಲ ನಾನು.. ಆ ಪಾಲು ಕೊಟ್ಟ ನಂತರವೂ ಹೋಗದೇ ಇಲ್ಲೇ ಉಳಿದ ಆ ಜನಾಂಗದವರನ್ನು ಸಲಹಿದ ದೇಶದ ಬಹುಸಂಖ್ಯಾತ ವರ್ಗಕ್ಕೆ ಸೇರಿದ, ಆದ್ದರಿಂದ ಈ ದೇಶಕ್ಕೊಂದು ಮತ್ತು ಒಂದೇ ಧರ್ಮ ಬೇಕೆನ್ನುವ ಮತಾಂಧ ಜನಾಂಗದ ಭಾಗವಲ್ಲವಾದ್ದರಿಂದ ನಾನು ನಿಸ್ಸಂಶಯವಾಗಿಯೂ ದೇಶದ್ರೋಹಿ ಅಲ್ಲ.. (ಇಲ್ಲಿ ನನ್ನ ಮಾತು ಕಹಿಯೆನಿಸಬಹುದು. ಆದರೆ ಇತಿಹಾಸ ನನ್ನ ಪರವಾಗಿ ಸಾಕ್ಷಿ ಹೇಳುತ್ತಿದೆ..)

ಇನ್ನು ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತರ ಇಚ್ಚೆಯ ಬಗ್ಗೆ-- ದಯವಿಟ್ಟು ಗಮನಿಸಿ, ಅಲ್ಪಸಂಖ್ಯಾತರು ಬಹುಸಂಖ್ಯಾತರ ಭಾವನೆಗಳನ್ನು ಗೌರವಿಸಬೇಕಾಗುತ್ತದೆ.. ಇಲ್ಲವೆನ್ನುವಿರಾ...
 
#ಪಥ ಬ್ರಷ್ತರಾಗ ಬೇಡಿ! ನೀವು ಹಿಂದು ಅಲ್ಲವೆ?
ನಾವು ಹಿಂದೂ, ನಮಗೆ ಗುರಿ ಮಾತ್ರ ನಿರ್ಧಾರಿತ, ಪಥ ನಮ್ಮಿಚ್ಚೆ.. ಅದು ನಿರ್ಧಾರಿತವಲ್ಲ.. ಪಥ ನಾವೇ ಮಾಡಬೇಕು.. ನಮ್ಮ ಮತ್ತು ನಮ್ಮ ಹಿರಿಯರ ಅನುಭವಗಳ ಮೇಲೆ ನಾವು ಅದನ್ನು ಮಾಡುತ್ತೇವೆ..

#ಹಿಂದು ಧರ್ಮವಲ್ಲವೆ?
ಹಿಂದೂ ಸೆಮೆಟಿಕ್ ಧರ್ಮವಲ್ಲ.. ಅದು ಒಂದು ಜೀವನ ವಿಧಾನ. ನಿಮಗೆ ಅದರ ಕಲ್ಪನೆ ಕಷ್ಟ. ನಾನು ಹೇಳುತ್ತಿರುವುದು ನಾನ್ಸೆನ್ಸ್ ಎಂದು ನಿಮಗನಿಸುವುದು ಎಂದು ಬಲ್ಲೆ.. ಆದರೆ ಪ್ರತಿ ಹಿಂದೂವೂ ಅದನ್ನು ಒಪ್ಪುವನು.. ಈ ಜೀವನ ವಿಧಾನದಲ್ಲಿ ಯಾರನ್ನೂ ನೋಯಿಸದೆ, ನಮ್ಮ ವಿಚಾರಗಳನ್ನು ಹೇರದೇ ಬದುಕುವುದನ್ನು ಧರ್ಮ ಎನ್ನುತ್ತೇವೆ..

#ನಿಮ್ಮ ಗ್ರಂಥಗಳು ಯಾವುದಕ್ಕಗಿ ಇದೆ? ಅವುಗಳಲ್ಲಿ ಇರುವುದು ನಿಮಗೆ ಬಾದಕ ಅಲ್ಲವೆ?
ನಮ್ಮ ಗ್ರಂಥಗಳು ನಮ್ಮ ಹಿರಿಯರು ಗುರಿಯೆಡೆಗೆ ನಡೆಸಿದ ಸತ್ಯಾನ್ವೇಷಣೆಯ ಗೈಡ್ ಬುಕ್ ಗಳು.. ಅದನ್ನು
ನೀವು ಬಳಸಬಹುದು, ಬಳಸದಿರಬಹುದು. ನಮಗೆ ಭಾಧಕವೂ ಇಲ್ಲ, ಅದನ್ನ ಬಳಸಲು ಭಾಧ್ಯರೂ ನಾವಲ್ಲ..

#ದುಷ್ಟ ಶಕ್ತಿ, ಶಿಷ್ಟ ಶಕ್ತಿ ಎಂದಿಲ್ಲವೆ?
ಸೈತಾನ್ ಸೆಮೆಟಿಕ್ ಧರ್ಮಗಳಾದ ಯಹೂದಿ, ಕ್ರೈಸ್ತ, ಇಸ್ಲಾಂ ಧರ್ಮಗಳ ಆವಿಷ್ಕಾರ, ನಮ್ಮಲ್ಲಿ ಅವನಿಲ್ಲ.. ನಮ್ಮಲ್ಲಿ ಅರಿಷಡ್ವರ್ಗಗಳಿವೆ.. ಅದನ್ನು ದೂರ ಇಡು ಎಂದಿಲ್ಲ.. ಅದನ್ನು ಗೆಲ್ಲು (ಅವುಗಳ ದಾಸನಾಗದೇ ನಿಯಂತ್ರಣದಲ್ಲಿಡು) ಎಂದು ಹೇಳುತ್ತದೆ..

#ಮಾನವೀಯತೆ ಸ್ವಾಮಿಗಳಿಗೆ ಅನ್ವಯಿಸುವುದಿಲ್ಲವೆ? ಅವರಿಗೆ ಮಾನವ ಸಹಜ ಕ್ರಿಯೆಗೆ ನಿಯಂತ್ರಣ ಏಕೆ?
ಖಂಡಿತಾ ಅನ್ವಯಿಸುತ್ತದೆ.. ಅಮಾನವೀಯ ಸ್ವಾಮಿಯನ್ನ ಸ್ವಾಮಿ ಇರಲಿ ಮಾನವನೆಂದೇ ಪರಿಗಣಿಸುವುದಿಲ್ಲ.. ಮಾನವ ಸಹಜ ಕ್ರಿಯೆಗೆ ನಿರ್ಬಂಧ ಏಕೆ ಎಂದಿರುವಿರಿ.. ಸ್ವಾಮಿ ಎಂದರೆ ನಿಷ್ಕಾಮ ಕರ್ಮ ಮಾಡುವವನು ಎಂದು.. ಮೋಕ್ಷಕ್ಕೆ ಹೋಗಲು ತೀರ್ಮಾನಿಸಿರುವವನು.. ನಾವು ಕಾಮವೇ ಮೊದಲಾದ ಅರಿಷಡ್ವರ್ಗಗಳನ್ನು ನಾವು ಮಾಡುವುದು ಆಸೆಗಾಗಿ, ಅದು ನೀಡುವ ಸಂತೋಷಕ್ಕಾಗಿ, ಅವುಗಳ ಮೋಹದಿಂದ ಈ ಲೋಕದಲ್ಲೇ ಉಳಿಯಲು, ಆದರೆ ಸ್ವಾಮಿಗಳು ಹಾಗಿಲ್ಲವಾದ್ದರಿಂದ ಅವರಿಗೆ ನಿರ್ಬಂಧ..

#(ಆ ಸರಳ ಸತ್ಯವನ್ನ ಭಾರತೀಯರು ವೇದಗಳ ಕಾಲದಲ್ಲಿಯೇ ಕಂಡುಕೊಂಡಿದ್ದೆವು.. ಕುರಾನ್ ನ ವರೆಗೆ
ಕಾಯಬೇಕಾದ ದುರ್ಬರ ಅರಬರ ಸ್ಥಿತಿಯಲ್ಲಿ ಭಾರತೀಯರಿರಲ್ಲಿಲ್ಲ), ಆದರೆ ಮೊದಲೆ ತಿಳಿದ ಸತ್ಯ ಇನ್ನು
ಪೂರ್ಣವಾಗಲಿಲ್ಲ ಅನ್ನುವುದೇ ಬೇಜಾರು!
ಬೇಸರ ಬೇಡ alifರವರೆ ಆ ಸರಳ ಸತ್ಯ ನಮಗೆ ಗೊತ್ತು, ಆದರೆ ಅದಕ್ಕೆ ತೃಪ್ತರು ನಾವಲ್ಲ... ನಾವು ಆ ಸತ್ಯದ ಭಾಗವೆಂದುಕೊಳ್ಳುವ ಜನ. ಆ ಸತ್ಯ ನಮಗೇನೋ (ಸ್ವರ್ಗ) ಕೊಡಲಿ ಎಂಬುವವರೂ ನಮ್ಮಲ್ಲಿದ್ದಾರೆ, ಆ ಸತ್ಯವನ್ನೇ ಸೇರೋಣ (ಮೋಕ್ಷ) ಎನ್ನುವವರೂ ಇದ್ದಾರೆ..ಹಾಗೆಯೇ ಇದುವರೆಗೆ ಕಂಡುಕೊಂಡ ಸತ್ಯ ಇದಲ್ಲ.. ಬೇರೆಯದೆ ಇರಬಹುದು, ಇಲ್ಲದೆಯೂ ಇರಬಹುದು ಎನ್ನುವವರೂ (ನಾಸ್ತಿಕ) ಇದ್ದಾರೆ.. ಪ್ರತಿಯೊಬ್ಬರ ಬಳಿಯೂ ಅವರದೇ ತರ್ಕವಿದೆ.. ನಾವು ಎಲ್ಲರ ತರ್ಕವನ್ನೂ ಗೌರವಿಸುತ್ತೇವೆ..

#ವರ್ಷ ವರ್ಷ ಬದಲಾಗುವ ಧರ್ಮವಾದರೆ ಅದಕ್ಕೆ ರಾಮನು ಬೇಕೇ? ಧರ್ಮವೆಂಬ ಹೆಸರು ಬೇಕೇ? -----
ರಾಮ ಕೃಷ್ಣ ಯಾರಿಲ್ಲದೆಯೂ ಹಿಂದು ಧರ್ಮ ಇತ್ತು, ಮತ್ತು ಇರುತ್ತದೆ.. ರಾಮ ಧರ್ಮದ ಭಾಗವೇ ಹೊರತು ಪೂರ್ಣ
ಧರ್ಮವಲ್ಲ..

# ನಿಮ್ಮ ಪ್ರಕಾರವೆ ಅದು (ಮನುಧರ್ಮ ಸ್ಮೃತಿ) ಅನಾಗರೀಕತೆಯ ಗೂಡು.. ---------
ಹೌದು, ಅಂದಿಗಲ್ಲ. ಇಂದಿಗೆ.. ಇಂದಿನ ದಿನಮಾನಕ್ಕೆ ಅಲ್ಲಿಂದ ಏನಾದರೂ ಒಳ್ಳೆಯದು ಸಿಗುವುದಿದ್ದರೆ ಅಡ್ಡಿಯೇನಿಲ್ಲ... ಹಿಂದು ಧರ್ಮ ನೀವು ಧರ್ಮವಂದು ತಿಳಿದಿರುವ ಧರ್ಮವಲ್ಲ ...ಅದು ಜೀವನ ವಿಧಾನ.. ಧರ್ಮವೆಂದರೆ ಸರಿಯಾದುದು ಎಂದರ್ಥ.. ಅದನ್ನು ನಾವು ಬೆಳೆದುಬಂದ ನಾಗರೀಕತೆ ನಿರ್ಧರಿಸುತ್ತದೆ.. ಮಾನವೀಯತೆ ನಿರ್ಧರಿಸುತ್ತದೆ.. ಕಾಲ ದೇಶ ಮಾನಗಳು ನಿರ್ಧರಿಸುತ್ತದೆ.. ಯಾರೋ ಎಂದೋ ಬರೆದ ಗ್ರಂಥವಲ್ಲ.


29-09-10 (05:07 PM)alif
ಈಗ ತಿಳಿಯಿತು ನಿಮ್ಮೊಂದಿಗೆ ಚರ್ಚೆ ನಿರರ್ಥಕ ಎಂದು. ನೀವು ನಾಳೆ ನಿಮ್ಮ ನೀತಿ ಬದಲಿಸಿದರೆ!  ಇಲ್ಲಿ ಅದು ಎದ್ದು ಕಾಣುತ್ತಿವೆ! ಸುರ ಅಸುರ ಎಂಬುದನ್ನು ಕೇಳಿದ್ದೆ ಅದೆನಾಯಿತು? ರಾಮನ ಬಗ್ಗೆ ಮಾತನಾಡಲು ಇದು ಸಮಯವಲ್ಲ, (ಅದು ಅನೇಕ ಪ್ರಶ್ನೆ ಹುಟ್ಟಿಸುತ್ತದೆ), "ಭೂಮಿಯ ಕೇಂದ್ರ ಎಂದು ಕುರಾನ್ ನಲ್ಲಿ ಅಲ್ಲಾಹನು ಹೇಳಿದ್ದಾನೆ ಎಂದು ಜಾಕಿರ್ ನಾಯಕ್ ಹೇಳಿದ್ದನ್ನು ಕೇಳಿದೆ" ಇದರ ಬಗ್ಗೆ ವಿವರವಾಗಿ ಹೇಳಿ. ಈ ವಾದದ ಸತ್ಯಾ ಸತ್ಯತೆ ತಿಳಿಯ ಬಯಸುತ್ತೇನೆ. ಆಗಲೆ ಹೇಳಿದಂತೆ ಇದು ಕುರಾನಿನ ಹೇಳಿಕೆ ಅಲ್ಲ, ಇದು ಸಂಶೋಧನೆಯ ಬಾಗ ಅಷ್ಟೆ, ಅಲ್ಲಿ ನೀವು ಪಾಲ್ಗೊಳ್ಳಬಹುದು. ನಾನು ಕೇಳಿದ ಅನೇಕ ಪ್ರಶ್ನೆಗಳು ಇಲ್ಲಿ ಉಳಿದುಕೊಂಡಿವೆ!!! ಉತ್ತರ ಕೊಡುವಿರ?

29-09-10 (07:51 PM)[-]  crusade
pkbys, manju, ಮತ್ತು alifರವರ ಕಾಮೆಂಟ್ಸನ್ನು ಕೇವಲ ಓದಲು ಅವಕಾಶ ಸಿಗುತಿತ್ತು, ಮನದಲ್ಲಿ ನಾನು ಬರೆಯಬೇಕು ಎಂಬ ತುಡಿತ ಹೆಚ್ಚಾಗಿತ್ತು, ಸದೈವವಶಾತ್ ನಮಗೆ 4 ದಿನ ರಜಾ ಸಿಕ್ಕಿದೆ.. ಖಂಡಿತವಾಗಿಯು ಹಿಂದು ಎಂಬ ಪದ ಒಂದು ಜೀವನ ವಿಧಾನವನು(civiliazation) ಸೂಚಿಸುತ್ತದೆ, ಈ ಜೀವನ ವಿಧಾನದಲ್ಲಿ ಯಾರಾದರು ಜೀವಿಸಲೀ ಅವರು ಹಿಂದು ಅಗಿಯೇ ಪರಿಗಣಿಸಲ್ಪಡುತ್ತಾರೆ, ಆದರೆ.ಇನ್ನೂ ಧರ್ಮದ ಬಗ್ಗೆ ಮಾತಾಡ ಬೇಕಾದರೆ, ಅದು ಹಾರ್ಡ್ ಕೋಡೆಡ್ ನಿಯಮಗಳೇ ಧರ್ಮವಾಗ ಬೇಕು, ಏಕೆಂದರೆ ಯಾವ ಧರ್ಮದಲ್ಲಿ ಹಾರ್ಡ್ ಕೋಡ್ ಇರುವುದಿಲ್ಲವೋ ಅದು ಧರ್ಮವೆನ್ನಲು ಸಾಧ್ಯವೇ ? ಉದಾ: ನಮ್ಮ ದೇಶದ ಸಂವಿಧಾನವೇ ಒಂದು ಉದಾಹರಣೆಯಾಗಿದೆ. ಹಾರ್ಡ್ ಕೋಡಾಗಿ ಇರುತ್ತಿರಲ್ಲಿಲ್ಲವೆಂದರೆ ಇಲ್ಲಿ ಅನಾಚಾರವೇ ಹೆಚ್ಚಾಗುತಿತ್ತು. ಯಾವ ದೇಶದಲ್ಲಿ ಲಂಗು ಲಗಾಮು ಇರುವುದಿಲ್ಲವೋ ಆ ದೇಶದಲ್ಲಿ ಅಧಃಪತನ ರಾರಾಜಿಸುತ್ತದೆ. ಅದೇ ರೀತಿ ಧರ್ಮದಲ್ಲಿಯೂ ಕೂಡ, ಇನ್ನು ಮುಸ್ಲಿಮರ ವಿಷಯದ ಬಗ್ಗೆ ಹೇಳ ಬೇಕಾದರೆ, ಕೇವಲ ಕುರಾನ್ ಮಾತ್ರ ದೇವರ ವತಿಯಿಂದ ಅವತೀರ್ಣಗೊಂಡ ಗ್ರಂಥವಲ್ಲ. ಕುರಾನಿಗಿಂತ ಮುಂಚೆಯೂ ಹಲವಾರು ಗ್ರಂಥಗಳು (ವೇದಗಳು) ದೇವನವತಿಯಿಂದ ಮಾನವರಿಗೆ ಸನ್ಮಾರ್ಗದರ್ಶನ ನೀಡಲು ಅವತೀರ್ಣಗೊಂಡಿದೆ.".. ಅದು(ಕುರಾನ್) ಹಿಂದೆ ಬಂದಿದ್ದ ಗ್ರಂಥಗಳನ್ನು ದೃಢೀಕರಿಸುತ್ತದೆ ಮತ್ತು ಅನುಮೋದಿಸುತ್ತದೆ..."(ಕುರಾನ್ 2:97). ಒಬ್ಬ ಮುಸ್ಲಿಮನಾಗಬೇಕಾದರೆ ಅವನು ಕುರಾನಿಗಿಂತ ಹಿಂದಿನ ಗ್ರಂಥಗಳು ಯಾರಿಗೆಲ್ಲ ಅವತೀರ್ಣಗೊಳಸಲ್ಪಟ್ಟಿತೊ ಅವರೆಲ್ಲರ ಮೇಲು ಆ ಗ್ರಂಥದ ಮೇಲು ಮುಸ್ಲಿಮರು ನಂಬಿಕೆಯಿಡಬೇಕಾದುದು ಸಹ ಕಡ್ಡಾಯವಾಗಿದೆ. ಅದರೆ ಮುಸ್ಲಿಮರು ಯಾಕೆ ಕೇವಲ ಕುರಾನನ್ನು ನಂಬಿ ಇತರ ಗ್ರಂಥಗಳು ಮತ್ತು ವೇದಗಳನ್ನು ನಂಬುವುದಿಲ್ಲ ವೆಂಬ ಘೋರ ಸತ್ಯ ನಮ್ಮ ಮುಂದೆ ಬರುತ್ತದೆ.

pkbysರವರೇ, ಖಂಡಿತವಾಗಿಯು 5000 ವರ್ಷಗಳ ಹಿಂದಿನ ವೇದಗಳು ದೇವನಿಂದ ಅವತೀರ್ಣಗೊಂಡಿದೆ ಎಂದು ನಾನು ನಂಬುವೆ. ಅದರೆ ಅದು ಕಾಲ ಕ್ರಮೇಣ ಬದಲಾವಣೆಗೊಂಡಿದೆ. ಏಕೆಂದರೆ ಜಗತ್ತಿನಲ್ಲಿರುವ ಪ್ರತಿಯೊಂದು ಧರ್ಮವು ಅಯಾಯ ಧರ್ಮದ ಧರ್ಮಗ್ರಂಥಗಳ ಆಧಾರದ ಮೇಲೆ ನೆಲೆ ನಿಂತಿದೆ. ನಾವು ಧರ್ಮಗ್ರಂಥಗಳ ಬಗ್ಗೆ ಅಧ್ಯಾಯ ಮಾಡಬೇಕಾಗಿದೆ, ಏಕೆಂದರೆ ಆ ಗ್ರಂಥಗಳು ಯಾತಕ್ಕಾಗಿ ಬಂತು ? ಅದು ಎಲ್ಲಾ ಮಾನವರನ್ನು ಒಂದೇ ದೃಷ್ಟಿಯಲ್ಲಿ ಕಾಣುತ್ತದೆಯೇ ? ಅದರ ಭೋದನೆ ಮನುಷ್ಯರ ಪ್ರಕೃತಿಗೆ ತಕ್ಕುದಾದ ಮತ್ತು ಬುದ್ಧಿಗೆ ನಿಲುಕುವಂತಹದೇ?

ಆ ಗ್ರಂಥಗಳಲ್ಲಿ ಮಾನವರ ಮಾತೆಷ್ಟಿದೆ ? ದೇವರ ಮಾತೆಷ್ಟಿದೆ ? ಕಾಲ ಕ್ರಮೇಣ ಅದು ಸ್ಥಾಪಿತ ಹಿತಾಸಕ್ತಿಗಳ ಕೈಗೆ ಸಿಕ್ಕಿ ಮಾರ್ಪಾಟು, ಬದಲಾವಣೆ ಹೊಂದಿತೆ ? ಅಥವ ಅದಕ್ಕೆ ಇತರೆ ವಿಷಯಗಳು ಸೇರಿಸಲ್ಪಟ್ಟಿವೆಯೇ ? ಇತ್ಯಾದಿ, ಪ್ರಶ್ನೆಗಳ ಮೂಲಕ ಗ್ರಂಥಗಳನ್ನು ಪರೀಕ್ಷೆಗೆ ಒಡ್ಡಬೇಕಾಗಿದೆ.

"ಜನರು ಪರಸ್ಪರ ಅತಿರೇಕವೆಸಾಗಲು, ಇನ್ನೂಬ್ಬರಿಗಿಂತ ನಾವು ಶ್ರೇಷ್ಠರು ಎಂದು ತೋರಿಸಲು ನೈಜ ಸಿದ್ಧಾಂತ, ಧರ್ಮಗಳನ್ನು ತೊರೆದು ತಮಗೆ ಬೇಕಾದ ಹಾಗೆ ಸಿದ್ಧಾಂತಗಳನ್ನು ರಚಿಸಿ ಅದನ್ನು ಧಾರ್ಮಿಕ ಗ್ರಂಥಗಳಲ್ಲಿ ಸೇರಿಸಿ ವಿವಿಧ ಹಾದಿಗಳನ್ನು ಸೃಷ್ಟಿಸಿಕೊಂಡರು. ಶೈ, ವೈಷ್ಣವ, ಶಾಕ್ತರು ತಮ್ಮ ಹಿರಿಮೆ-ಗರಿಮೆಗಳನ್ನು ಹೆಚ್ಚಿಸಲಿಕ್ಕಾಗಿ ಧಾರ್ಮಿಕ ಗ್ರಂಥಗಳಲ್ಲಿ ತಮಗೆ ಬೇಕಾದ ಹಾಗೆ ವಿಷಯಗಳನ್ನು ಸೇರಿಸಿಕೊಂಡಿದ್ದಾರೆಂದು ಸ್ವಾಮಿ ಹರ್ಷನಂದರು ಹೇಳುತ್ತಾರೆ."( ಹಿಂದೂಧರ್ಮ ಪು:14) ಸತ್ಯ ದಾರಿ ತೋರಿಸಿದ ನಂತರವೂ ಜನರು ತಮ್ಮ ಇಚ್ಚಾಭಿಲಾಷೆಗಳನ್ನು ಅನುಸರಿಸಿ, ಸತ್ಯಪಥದಿಂದ ವ್ಯಥಿಚಲಿಸಿ ತಮ್ಮ ಸ್ವಂತ ಅಭಿಪ್ರಾಯಗಳನ್ನೆ ಧರ್ಮಗಳಲ್ಲಿ ಸೇರಿಸಿ ಅದರ ಪ್ರಕಾರ ಜೀವಿಸಲಾರಂಭಿಸಿದರು. ಇದರಿಂದ ಮೂಲ ಸಂದೆಶ ದೂರ ಸರಿದು ನಂತರ ಸೇರಿಸಿದ ವಿಷಯಗಳೇ ಪ್ರಾಮುಖ್ಯತೆಯನ್ನು ಪಡೆಯಿತು.

ಸೃಷ್ಟಿಕರ್ತನ ನೈಜ ಸಂದೇಶವನ್ನು ನಾವು ಅವುಸರಿಸುವಂತಾಗಬೇಕಾದರೆ ನಾವೆಲ್ಲರೂ ಆತ ನನ್ನೇ ಅವಲಂಬಿಸಬೇಕು. ಆಗ ಮಾತ್ರ ನಮಗೆ ನೇರ ಮಾರ್ಗ ತೋರಿಸಬಲ್ಲ. ಕುರಾನ್ ಹೇಳುತ್ತದೆ, "ಅಡ್ಡ ಮಾರ್ಗಗಳು ಇರುವಾಗ ನೇರ ಮಾರ್ಗವನ್ನು ತೋರಿಸುವ ಹೊಣೆ ಅಲ್ಲಾಹನ ಮೇಲೆಯೇ ಇದೆ...."(ಕುರಾನ್ 16:9)

29-09-10 (11:26 PM)[-]  pkbys
ಎಲ್ಲಕ್ಕಿಂತ ಮೊದಲು crusadeರ ಕಾಮೆಂಟ್ ನೋಡಿ ಬಹಳ ಖುಷಿಪಟ್ಟೆ... ಅವರು ಮತ್ತೆ ಬಂದಿರುವುದು ಸಂತಸ ನೀಡಿತು..
ಕುರಾನ್ ದೈವವಾಣಿಯೋ ಅಲ್ಲವೋ No Dispute. ಹಾಗೆಂದು ನಂಬುವವರು ನಂಬಲು ಸ್ವತಂತ್ರರು..ಆ ಭಾವನೆಯನ್ನು ಗೌರವಿಸಬೇಕು...ಅದನ್ನು ಹಿಂದು ಜೀವನ ವಿಧಾನ ನಮಗೆ ಕಲಿಸುತ್ತದೆ... ಅದನ್ನು ನಾವು ನಂಬಬೇಕೋ ಬೇಡವೋ ಎಂಬುದನ್ನ ವ್ಯಕ್ತಿಯ ಮೇಲೆ ವಿವೇಕದ ಮೇಲೆ ಬಿಡುತ್ತದೆ.. ಕುರಾನ್ ಅಷ್ಟೇ ಅಲ್ಲ, ಯಾವುದನ್ನೂ ಹೇರುವುದಿಲ್ಲ.. ಎಲ್ಲವೂ ವ್ಯಕ್ತಿಯ ವಿವೇಕದ ಮೇಲೆ ನಿಲ್ಲುತ್ತದೆ.. crusade ಹೇಳಿದಂತೆ ವೇದಗಳು ಕುರಾನ್‌ಗಿಂತ ಮೊದಲು ಅವತೀರ್ಣವಾದ ದೇವವಾಣಿ ಎಂದು ಪರಿಗಣಿಸಲ್ಪಡುತ್ತದೆ.. ವೇದಗಳನ್ನು ಅಪೌರುಷೇಯ (ಮನುಷ್ಯನಿಂದ ಸೃಷ್ಠಿಗೊಳ್ಳದ, ಅಂದರೆ ದೈವಿಕ ಮೂಲವನ್ನು ಹೊಂದಿದ) ಎಂದು ಕರೆಲಾಗುತ್ತದೆ.,, ವೇದಮಂತ್ರಗಳನ್ನು ದಾರ್ಶನಿಕ ಮುನಿಗಳು ದರ್ಶಿಸಿ ತಮ್ಮ ಶಿಷ್ಯಂದಿರಿಗೆ ಹೇಳಿದರು.. ಬರವಣಿಗೆ ಬರುವ ಮೊದಲಿನಿಂದಲೂ ಇದ್ದ ಈ ವೇದಮಂತ್ರಗಳು ಮೌಖಿಕವಾಗಿ ಹಲವಾರು ಪೀಳಿಗೆಗಳನ್ನು ದಾಟಿ ಈಗ ಸುಮಾರು 60 ವರ್ಷಗಳ ಹಿಂದೆ ಬರವಣಿಗೆಗೆ ಬಂತು..

ಆದರೆ ಹೀಗೆ ಮೌಖಿಕವಾಗಿ ಪೀಳಿಗೆಗಳನ್ನು ದಾಟುವಾಗ ಸಾಕಷ್ಟು ಮಟ್ಟಿಗೆ ಅಪಭ್ರಂಶಗೊಂಡಿತು ಆದ್ದರಿಂದ ಅದು ಮೂಲದಲ್ಲಿ ದೈವವಾಣಿಯಾದರೂ ಈಗ ಹಾಗೆ ಉಳಿದಿಲ್ಲ ಎನ್ನುವ ವಾದವಿದೆ.. ಅಂತೆಯೇ ವೇದಮಂತ್ರಗಳ ಛಂದಸ್ಸಿನ ಅಳತೆಗೋಲು ಅದು ಅಪಭ್ರಂಶವಾಗಲು ಬಿಟ್ಟಿಲ್ಲ ಎನ್ನುವ ಸಮರ್ಥನೆ ಕೂಡಾ ವೇದಗಳ ಪರವಾಗಿದೆ... ಕುರಾನ್ ಕೂಡ ಹಿಂದಿನ ದೇವವಾಣಿಗಳನ್ನು ಅನುಮೋದಿಸುತ್ತದೆ ಎಂದು ಬಲ್ಲೆ. ನನ್ನ ವಾದವಿಷ್ಟೇ.. ದಾರ್ಶನಿಕರು ಹೇಳುವ ವೇದಮಂತ್ರಗಳ ದರ್ಶನವು ದೈವಿಕವೇ ಸರಿ.. ಆದರೆ ಅದು ಗಗನ ಬರವಣಿ(sky writing)ಗೆಗಳಾಗಿರಲಿಲ್ಲ. ನಮ್ಮ ಕನ್ನಡದ ಕುಮಾರವ್ಯಾಸ ಕರ್ನಾಟಭಾರತ ಕಥಾಮಂಜರಿ ಬರೆದು, ಕೊನೆಯಲ್ಲಿ ವೀರನಾರಯಣನೇ ಕವಿ, ನಾನು ಕೇವಲ ಲಿಪಿಕಾರ ಎಂದ..ನಮಗೆ ಆವಿನಮ್ರನೆನಿಸಬಹುದು.. ಆದರೆ ಒಬ್ಬ ಅಸಾಧ್ಯವೆನಿಸುವ ಕೆಲಸ ಮಾಡಿ ಮುಗಿಸಿದಾಗ ಸಿಗುವ ಧನ್ಯತಾ ಭಾವ ಅದು ದೈವವೇ ಮಾಡಿಸಿದ್ದು ನಾನು ಕೇವಲ ಉಪಕರಣ ಎಂದುಕೊಳ್ಳುವಂತೆ ಮಾಡುತ್ತದೆ.. ನನ್ನ ಕೆಲಸದಲ್ಲಿ ಆ ಧನ್ಯತೆಯನ್ನು, ನಾನು ಕೇವಲ ಉಪಕರಣ ಎಂದುಕೊಂಡದ್ದನ್ನು ನಾನು ಬಹಳ ಸಲ ಅನುಭವಿಸಿದ್ದೇನೆ.. ಅಲ್ಯಾವ ಉತ್ಪ್ರೇಕ್ಷೆಯಾಗಲಿ, ಹೆಚ್ಚುವರಿ ವಿನಮ್ರತೆಯಾಗಲ್ಲಿ ಇರುವುದಿಲ್ಲ. ಅದು ದೇವರೇ ಮಾಡಿಸಿದ್ದು ಎಂಬ ಭಾವವೇ ಇರುತ್ತದೆ.. ವೇದಗಳ ಮುಂದೆ ಒಂದು ಸಾಮಾನ್ಯ ಎನಿಸುವ ಕೆಲಸ ಒಬ್ಬ ಮಾನವಮಾತ್ರನಿಗೆ ಅಸಾಧ್ಯವೆನಿಸಬಹುದಾದ ಕೆಲಸ ಸಾಧ್ಯವಾದರೆ, ಅದು ದೈವಿಕ ಎಂಬ ಭಾವನೆ ಬರಿಸಬಹುದಾದರೆ, ವೇದಮಂತ್ರಗಳನ್ನು (formulaಗಳಂತೆ) ಯೋಚಿಸಿದ ಋಷಿ ಮುನಿಗಳಿಗೆ ಹಾಗನಿಸದಿರಲು ಸಾಧ್ಯವಿಲ್ಲ.. ಆದ್ದರಿಂದಲ್ಲೇ ಅದು ಅಪೌರುಷೇಯ ಅನಿಸಿಕೊಂಡವು..

ನೀವು ನಗಬಹುದು.. ನನ್ನನ್ನು ಸೈಕಿಕ್ ಎಂದೂ ಕರೆಯಬಹುದು, ಆದರೆ ನಿಮ್ಮೊಡ್ಡನೆ ಈ ವಿಷಯ ಹಂಚಿಕೊಳ್ಳಬಯಸುವೆ.. ಬಹಳ ದುಃಖದ್ದಲ್ಲಿದ್ದಾಗ, ಜೀವನ ಬೇಸರವಾದಾಗ, ಅನಿರೀಕ್ಷಿತ ತೊಂದರೆಗಳೋ ಬಂದಾಗ, ನಿರಿಕ್ಷಿತ ಕಾರ್ಯಗಳು ನಡೆಯದಿದ್ದಾಗ, ಆಸೆ ಪಟ್ಟದ್ದು ದಕ್ಕದಿದ್ದಾಗ, ಮನಸ್ಸು ದ್ವಂದ್ವದಲ್ಲಿ ಸಿಕ್ಕಾಗ, ನನ್ನ ಬುದ್ದಿಶಕ್ತಿ, ತರ್ಕ, ವಿವೇಕ, ಯಾವುದೂ ನನ್ನ ಸಹಾಯಕ್ಕೆ ಬರದಿರುವಾಗ, ನಾನು ಆ ಭಗವಂತನ ಸಹಾಯ ಕೇಳುತ್ತೇನೆ.. ನೀವು ನಂಬಿ ಅಥವಾ ನಂಬದಿರಿ.. ಆ ಶಕ್ತಿ ನನ್ನೊಡನೆ ಮಾತಾಡುತ್ತದೆ.. ನನ್ನ ಮನದ ಎಲ್ಲ ಪ್ರಶ್ನೆಗಳಿಗೆ, ತೃಪ್ತಿದಾಯಕ ವಿವರಣೆ ಕೊಟ್ಟು, ಬಲು ಅಕ್ಕರೆಯಲಿ ಸಂತೈಸಿ ಹೋಗುತ್ತದೆ.. ನನ್ನ ಕಣ್ಣಿಗಾರೂ ಕಾಣುವುದಿಲ್ಲ.. ಎಲ್ಲಾ ಮನದೊಳಗಿನ ಪ್ರಶ್ನೋತ್ತರ session, ಕೆಲವೇ ಕ್ಷಣಗಳಲ್ಲಿ, ದಿನಗಟ್ಟಲೇ ಹುಡುಕಾಡಿದ ಪ್ರಶ್ನೆಗಳ ಉತ್ತರ ನನ್ನೊಳಗೇ ಇಟ್ಟು ಹೋಗುತ್ತದೆ ಆ ಶಕ್ತಿ..

ಸೈಕಾಲಜಿಯಲ್ಲಿ ಅದಕ್ಕೆ ಹಾಲೊಸಿನೈಶನ್ ಎನ್ನುತ್ತಾರೆ.. ನನ್ನ ಮನದೊಳಗೆ ನಾನೇ ಆಡುವ ಆದರೆ ಬೇರಾರೊ ನಮ್ಮೊಡನೆ ಮಾತಾಡಿದರು ಎಂದು ನಂಬುವ ಭ್ರಮೆ.. ಅದಕ್ಕೆ ಅದು ಕೊಡುವ ಪುರಾವೆ, ಹಾಗೆ ನಾವು ಪಡೆಯುವ ಮಾತುಗಳು ನಮ್ಮದೇ ಪೂರ್ವ ಜ್ಞಾನದಿಂದ ಮಾತ್ರ ನಮಗೆ ಉತ್ತರಗಳು ಪ್ರಾಪ್ತವಾಗುತ್ತದೆ ಎಂದು.. (ಲಗೇ ರಹೋ ಮುನ್ನಾಭಾಯ್ ಚಿತ್ರದಲ್ಲಿ ಅವನು ಗಾಂಧಿಯ ಬಗ್ಗೆ ಓದಿದ್ದು ಮಾತ್ರ ಅವನಿಗೆ ಗಾಂಧಿ ಹೇಳುವಂತೆ)

ಸೈಕಾಲಜಿ ಏನೇ ಹೇಳಿಕೊಳ್ಳಲಿ.. ನನಗದು ದೈವವಾಣಿಯೇ.. ನನ್ನ ಸಾಮಾನ್ಯ ಮನಸ್ಸು ಚಿಂತಿಸಲಾರದ್ದನ್ನು ಚಿಂತಿಸಬಲ್ಲ.. ನಾನು ನನ್ನ ಪ್ರೀತಿ ಪಾತ್ರರೊಡನೆ ಮಾತನಾಡುವಾಗ ಎಷ್ಟು ಪ್ರೀತಿಯಿಂದ ಮಾತನಾಡುವೆನೋ ಅದರ ಹಲವು ಪಟ್ಟು ಪ್ರೀತಿಯಿಂದ ಸಾಂತ್ವನಗೊಳಿಸಬಲ್ಲ ಶಕ್ತಿ ನನ್ನ ಮನಸ್ಸೇ ಎಂದು ಒಪ್ಪಲ್ಲು ನನಗೆ ಸಾಧ್ಯವೇ ಇಲ್ಲ.. ಅದು ದೈವವಾಣಿಯೇ ಆಗಿರಲು ಸಾಧ್ಯ.. ನನ್ನ ಜ್ಞಾನದ ಪರಿಧಿಯೊಳಗೇ ಅದು ಉತ್ತರಗಳನ್ನು ಕೊಡಲು ಕಾರಣ ನನಗದು ಅರ್ಥವಾಗಲಿ ಎಂದು.. ಆ ತರ್ಕ, ಆ ಕಾರಣಗಳನ್ನು ಕೊಡುವ ಬುದ್ದಿವಂತಿಕೆ, ಅದನ್ನು ನನ್ನ ಜ್ಞಾನದ ಪರಿಧಿಯಲ್ಲೇ ಹುಡುಕುವ ಜಾಣತನ, ಎಲ್ಲಕ್ಕಿಂತ ಮಿಗಿಲಾಗಿ ಆ ಅಸೀಮ ಪ್ರೀತಿ ನನ್ನ ಮನದ ಫಲವಾಗಲು ಸಾಧ್ಯವಿಲ್ಲ.. ಕೆಲವೇ ಕ್ಷಣಗಳ ಆ ಪ್ರಶ್ನೋತ್ತರ sessionಗಳು ನನಗೊಬ್ಬನಿಗೇ ಅಲ್ಲ, ಬಹಳ ಜನರ ಜೀವನದಲ್ಲಿ ನಡೆಯುತ್ತವೆ ಎಂದು ನಾನು ಕೆಲವರ ಅನುಭವವನ್ನು ಕೇಳಿ ಬಲ್ಲೆ..

700+ ಶ್ಲೋಕಗಳ ಭಗವದ್ಗೀತೆ ಪೂರ್ಣವಾಗಿ ಓದಲು ಸುಮಾರು 3 ಗಂಟೆ ಬೇಕು.. ಎರಡೂ ಸೈನ್ಯಗಳು ಅಲ್ಲಿಯವರೆಗೆ ಎದಿರುಬದಿರು ನಿಂತು ಸುಮ್ಮನಿದ್ದವೆ. ಈ ತರ್ಕಕ್ಕೆ ಉತ್ತರವಾಗಿ ಒಬ್ಬರು ಹೇಳಿದ್ದರು, ಶಂಖ ಊದದೇ ಯುದ್ದ ಶುರುವಾಗುತ್ತಿರಲ್ಲಿಲ್ಲ.. ಅರ್ಜುನ ಶಸ್ತ್ರಗಳನ್ನು ಬಿಸಾಡಿದ್ದರಿಂದ ಅಂದಿನ ಧರ್ಮಯುದ್ದ ಶಸ್ತ್ರಹೀನನನ್ನು ಯುದ್ದಕ್ಕೆ ಎಳೆಯಬಾರದಾದ್ದರಿಂದ ಶರಣಾಗತಿಯನ್ನು ಅವರೆಲ್ಲಾ ನಿರೀಕ್ಷಿಸಿದ್ದರು..ಆದ್ದರಿಂದ ಶಂಖ ಊದದೇ ಯುದ್ದ ಶುರುವಾಗಲಿಲ್ಲ. ಅರ್ಜುನನನ್ನು ಬಿಡಿ, ಇನ್ನೇಷ್ಟೋ ಶಸ್ತ್ರಧಾರಿಗಳಿದ್ದರು. ಅವನ್ನನ್ನು ಬಿಟ್ಟು ಯುದ್ದ ಮುಂದುವರಿಸಬಹುದಿತ್ತು.. ಶಂಖ ಊದಲು ಯಾರ ಆಕ್ಷೇಪಣೆಯೂ ಇರಲಿಲ್ಲ. ಆದ್ದರಿಂದ ಆ ಉತ್ತರ ನನಗೆ ಒಪ್ಪಿಗೆಯಾಗಲಿಲ್ಲ.. ಇನ್ನು ಓಂದು ಉತ್ತರವನ್ನು ಮತ್ತೊಬ್ಬರು ಕೊಟ್ಟರು.. ಭಗವಂತ ಗೀತಾಜ್ಞಾನವನ್ನು ಹರಿಸುತ್ತಿದ್ದಾಗ ಕಾಲನೂ ಕೇಳುತ್ತಾ ನಿಂತುಬಿಟ್ಟ.. ಕಾಲ ಸರಿಯದಿದುರಿಂದ ಯುದ್ದ ನಡೆಯಲ್ಲಿಲ್ಲ.. ಇದು ಸರ್ವಥಾ ಮೂರ್ಖ ವಾದ ಎಂದುಬಿಟ್ಟೆ.. ಆದರೆ ನನ್ನ ಸಮಸ್ಯೆಗಳಿಗೆ ದೈವವಾಣಿಯ ಸಹಾಯ ದೊರಕತೊಡಗಿದಾಗ ಗೊತ್ತಾಗಿದ್ದು, ಆ ದೈವವಾಣಿಯ ಪ್ರಶ್ನೋತ್ತರವನ್ನು ನಾನು ಅಕ್ಷರ ರೂಪದಲ್ಲಿ ದಾಖಲು ಮಾಡಿ ಓದುವ ಸಮಯವನ್ನು ತೆಗೆದುಕೊಂಡರೆ ಅದು ಘಂಟೆಗಳಾಗುತ್ತದೆ..(ಆ ಪ್ರಯೋಗವನ್ನೂ ಮಾಡಿದ್ದೇನೆ) ಆದರೆ ಆ ಪ್ರಶ್ನೋತ್ತರಗಳು ಕೆಲವೇ ಕ್ಷಣಗಳಲ್ಲಿ ನಡೆದವಾಗಿತ್ತು.. ಹಾಗೇಯೇ ಭಗವದ್ಗೀತೆಯಲ್ಲಿ ಕೂಡ ನಡೆದಿರಬೇಕು ಎಂಬ ತರ್ಕಬದ್ದ ಅಂತ್ಯಕ್ಕೆ ನಾನು ಬಂದೆ.... . benzineನ ಆಣುರೂಪವನ್ನು ಚಿತ್ರಿಸಿದ ವಿಜ್ಞಾನಿ (Friedrich August Kekulé) ಹೇಳಿದ್ದು ಅದು ನನ್ನ ಕನಸಿನಲ್ಲಿ ಬಂತು, ದೇವರೇ ಅದನ್ನು ನನಗೆ ತೋರಿಸಿರಬೇಕು.. ಇದೆಲ್ಲಾ ನಾನು ವಿವರಿಸಿದ್ದು, ವೇದಗಳು ಹೇಗೆ ದೇವವಾಣಿಯಾಗಿರಬಹುದೆಂಬ ತರ್ಕಕ್ಕೆ.. ಖಂಡಿತವಾಗಿಯೂ ಅವು ದೈವವಾಣಿಯಾದರೂ, ಮಾನವ ಕಲ್ಯಾಣಕ್ಕಾಗಿ ಬಂದರೂ, ಅಪಭ್ರಂಶವಾಗಿರುವ ಸಾಧ್ಯತೆ ಇದ್ದರೂ ಅವೆಲ್ಲಾ ಅಂದಿನ ಋಷಿಮುನಿಗಳ ಕಾಲಕ್ಕೆ ಅವರಿಗೆ ಇದ್ದ ಜ್ಞಾನವನ್ನು ಆಧರಿಸಿತ್ತು.. ಆ ಕಾರಣಕ್ಕಾಗಿಯೇ ಸತ್ಯಾನ್ವೇಷಣೆಯ ದಾರಿಯನ್ನು ಯಾರು ಬೇಕಾದರೂ ಹಿಡಿಯಬಹುದು, ದೈವದ ಜೊತೆ ಮಾತಾಡಬಹುದು ಎನ್ನುವುದು.. ಪ್ರವಾದಿಗಳ ಅಂದಿನ ದಿನಮಾನದ ಕಾಲಘಟ್ಟದಲ್ಲಿನ ಜ್ಞಾನಕ್ಕೆ ಅವರು ಪಡೆದ ದೈವವಾಣಿ ಸರಿಯೇ ಇರಬಹುದು.. ಕುರಾನ್ನ ಅವಶ್ಯಕತೆ ಅಂದಿನ ಅರಬೀ ಜನಾಂಗಕ್ಕೆ ಬೇಕಿತ್ತು.. ಅದೇ ಅಂತಿಮವೆಂಬ ಮಾತು ಒಪ್ಪಲಾರದ್ದು.. ಪ್ರವಾದಿಗಳು ದೈವ ಮಾತಾಡಿದ ಕೊನೆಯ ಮಾನವ ಎಂಬುದನ್ನಂತೂ ನನ್ನ ಸ್ವಂತ ಅನುಭವಗಳಿಂದ ನಾನಂತೂ ಒಪ್ಪಲಾರೆ..

ವೇದಗಳ ಬಗ್ಗೆ ಸೆಮೆಟಿಕ್ ಧರ್ಮಗಳ ದೄಷ್ಠಿಕೋನದಿಂದ ನೋಡುವ ಕೆಲವರು ಹಿಂದೂಗಳಲ್ಲೇ ಇದ್ದಾರೆ.. ಅವುಗಳನ್ನು ಸೆಮೆಟಿಕ್ ದೃಷ್ಟ್ಜಿಕೋನದಿಂದ ನೋಡುವುದೇ ತಪ್ಪು ಎನ್ನುವುದು ನನ್ನ ವಾದ.. ಧರ್ಮದ ಹಾರ್ಡ್ ಕೋಡ್ ಗಳ ಬಗ್ಗೆ ಮಾತನಾಡಿದ್ದೀರಿ.. ಧರ್ಮವೆಂದರೆ ನಿಭಾಯಿಸಬೇಕಾದ ಕರ್ತವ್ಯ ಎಂದು ಅರ್ಥ.. ಧರ್ಮವೆಂದರೆ ಯಾವುದು, ನಿರ್ಧರಿಸುವುದು ಯಾರು ಎಂದು ಅರ್ಜುನ ಕೇಳಿದಾಗ ರಾಮಾನಂದ ಸಾಗರರ ಶ್ರೀಕೃಷ್ಣಾದ ಭಗವದ್ಗೀತೆಯ ಭಾಗದಲ್ಲಿ ಒಂದು ಕಥೆಯನ್ನು ಕೊಟ್ಟು ಕೃಷ್ಣಾ ನಿರೂಪಿಸುತ್ತಾನೆ....

ಒಬ್ಬ ಕ್ಷತ್ರಿಯ ತನ್ನ ಗ್ರಾಮಕ್ಕೆ ಹಿಂದಿರುಗುವಾಗ ಊರ ಬಾಗಿಲನ್ನು ಪ್ರವೇಶಿಸುವಾಗ ಲೂಟಿಕೋರರ ತಂಡವೊಂದು ಗ್ರಾಮವದವರನ್ನು ಕೊಂದು, ಹೊಡೆದು, ಲೂಟಿ ಮಾಡಿ ಹೋಗುತ್ತಿರುವುದನ್ನು ಕಂಡ, ಒಬ್ಬ ಹುಡುಗಿಯನ್ನು ಅವರು ಅಪಹರಿಸುತ್ತಿದ್ದರು.. ಆ ಹುಡುಗಿ ಸಹಾಯಕ್ಕಾಗಿ ಕಿರುಚುತ್ತಿದ್ದಳು.. ಆ ಕ್ಷತ್ರಿಯನ ಕರ್ತವ್ಯ ಆ ಹುಡುಗಿಯನ್ನು ರಕ್ಷಿಸುವುದು.. ಆಷ್ಟರಲ್ಲೇ ಅಲ್ಲೇ ಒಬ್ಬ ಲೂಟಿಕೊರರ ದೌರ್ಜನ್ಯಕ್ಕೆ ತುತ್ತಾಗಿ ಸಾಯುತ್ತಿರುವ, ತನ್ನ ಕೊನೆಗಾಲದಲ್ಲಿ ನೀರು ಬೇಡುತ್ತಿರುವ ವ್ಯಕ್ತಿ ಕಾಣುತ್ತಾನೆ.. ಅವನಿಗೆ ನೀರು ಕೊಡಲು ಕೂತು ತಡಮಾಡಿದರೆ ಲೂಟಿಕೋರರ ಬೆನ್ನಟ್ಟಿ ಹುಡುಗಿಯನ್ನು ಉಳಿಸುವುದು ಕಷ್ಟವಾಗಬಹುದು.. ನೀರು ಕೊಡದೆ ಈ ವ್ಯಕ್ತಿ ಸತ್ತರೆ ಓಂದು ಕ್ರೂರ ಸಾವನ್ನು ನೋಡಿಯೂ ಬೆನ್ನು ತಿರುಗಿಸಿದವನಾಗಬಹುದು. ಅದು ಅಮಾನವೀಯ..

ಆ ಸಮಯದಲ್ಲಿ ಆ ಕ್ಷತ್ರಿಯ ಏನು ಮಾಡಬೇಕು? ಯಾವುದು ಧರ್ಮ? ಆಗ ಕೃಷ್ಣ ಹೇಳುತ್ತಾನೆ, ಅದನ್ನು ನಿರ್ಧರಿಸುವುದು ಬೇರಾರೂ ಅಲ್ಲ.. ಆ ಕ್ಷತ್ರಿಯನ ಮನಸ್ಸು ಹೇಳುವುದೇ ಧರ್ಮ.. ಅವನು ನಂಬಿದ ಧರ್ಮದ ಮೇಲೆ ಅವನು ಮಾಡುವ ಕರ್ಮಕ್ಕೆ ಅವನು ಫಲವುಣ್ಣುತ್ತಾನೆ.. (ಇಂಗ್ಲೀಶ್ ನಲ್ಲಿ ದ್ವಂದ್ವದ ಸಮಯದಲ್ಲಿ Listen to your heart ಎನ್ನುತ್ತಾರೆ.) ಯಾವುದು ಸರಿ ಎಂದು ನಮ್ಮ ಮನಸ್ಸಿಗೆ ತೋರುವುದೋ, ಅದು ಧರ್ಮ, ಅದಕ್ಕೆ ಹಾರ್ಡ್ ಕೋಡ್ ಬೇಕಾಗಿಲ್ಲ.. ನಮ್ಮ ಮನಸ್ಸು ನಮಗೆ ಮೋಸ ಮಾಡುವುದೂ ಇಲ್ಲ.. ನಮ್ಮ ಬುದ್ದಿ ಸ್ವಾರ್ಥಿ ಇರಬಹುದು..ಆದರೆ ಮನಸ್ಸು ಮಾನವೀಯತೆಯನ್ನು, ನಮ್ಮಂತೆ ಇತರರು ಎಂಬ ಭಾವನೆಯನ್ನು ಹೊಂದಿರುತ್ತದೆ.. ಮನಸ್ಸು ಇರುವವನೇ ಮನುಷ್ಯ.. ಇಲ್ಲದವನು ಮೃಗ.. ಅವನಿಗೆ ಕಾನೂನು ಇದೆ.. ಅವನನ್ನು ತಿದ್ದುವುದು ಧರ್ಮದ
ಕೆಲಸವಲ್ಲ..

alifರವರೇ ಸುರ-ಅಸುರರ ಬಗ್ಗೆ ಕೇಳಿದ್ದೀರಿ.. ಅವರು ಹಿಂದೂ ಪುರಾಣಗಳಲ್ಲಿ ಬರುವ ಎರಡು ವರ್ಗದ ಜನರು.. ದಿತಿ-ಅದಿತಿ ಎಂಬ ಸವತಿಯರ ಮಕ್ಕಳು ಮತ್ತವರ ಮುಂದಿನ ಪೀಳಿಗೆಗಳು.. ಅಲ್ಲಿ ಕ್ರೂರ ಸ್ವಭಾವದ ದಿತಿಯ ಮಕ್ಕಳನ್ನು ಅಸುರರೆಂದೂ, ಸೌಮ್ಯ ಸ್ವಭಾವದ ಅದಿತಿಯ ಮಕ್ಕಳನ್ನು ಸುರರೆಂದೂ ಕರೆಯುತ್ತಾರೆ.. ಅವರ ನಡುವೆ ಕಿತ್ತಾಟ ಬಡಿದಾಟಗಳು ಪುರಾಣಗಳಲ್ಲಿ ಸಾಮಾನ್ಯ.. ಆದರೆ ಆ ಅಸುರರು ನಿಮ್ಮ ಧರ್ಮದ ಶೈತಾನನ ಸಂವಾದಿಗಳಲ್ಲ.. ಶೈತಾನ ಕೇವಲ ಸೆಮೆಟಿಕ್ ಧರ್ಮಗಳ ಖಳನಾಯಕ.. ನಮ್ಮಲ್ಲಿ ಅವನಿಲ್ಲ...

ಜಾಕಿರ್ ನಾಯಕ್ನ ಮಾತುಗಳ ವಿವರ ಕೇಳಿದ್ದೀರಿ.. ಅವನು ಹೇಳಿದ್ದು ಹೀಗೆ, "ಕುರಾನ್ ಹೇಳುತ್ತದೆ. ಮಕ್ಕಾ ಜಗತ್ತಿನ ಕೇಂದ್ರವೆಂದು. ಅದನ್ನು ಪ್ರಾರ್ಥನೆಯ ಕೇಂದ್ರಬಿಂದು ಮಾಡಿಕೊಳ್ಳಿರೆಂದು.. ಆದ್ದರಿಂದ ಯಾವ ಮುಸ್ಲಿಂನಿಗೂ ದಿಕ್ಕಿನ ಕಡೆಗೆ ಸಂಶಯವೇ ಇಲ್ಲ... ಯಾವ ದಿಕ್ಕಿನೆಡೆಗೆ ನಮಸ್ಕರಿಸಬೇಕೆಂಬ ವಿವಾದವಿಲ್ಲದೇ ಎಲ್ಲರೂ ಮೆಕ್ಕಾದೆಡೆಗೆ ಮುಖಮಾಡಿ ನಮಸ್ಕರಿಸಬೇಕು. ಅರಬ್ನ ಜನ ಬಹಳ ಬುದ್ದಿವಂತರಾಗಿದ್ದರು ಅವರು ಜಾಗತಿಕ ನಕ್ಷೆಯನ್ನೂ ಬರೆದಿದ್ದರು.. ಅಲ್ಲಿ ಮಕ್ಕಾ ನಕ್ಷೆಯ ಕೇಂದ್ರದಲ್ಲಿಯೇ ಇತ್ತು.. ಆದರೆ ಪಾಶ್ಚಿಮಾತ್ಯ ಜನ ನಕ್ಷೆಯನ್ನು ತಲೆಕೆಳಕು ಮಾಡಿದರು.. ಆದರೂ ಪರವಾಗಿಲ್ಲ.. ಅಲ್ ಹಮ್ ದುಲಿಲ್ಲಾ yet meccaa is at the cetner" ಹಿನ್ನೆಲೆಯಲ್ಲಿ ಗಡಚಿಕ್ಕುವ ಚಪ್ಪಾಳೆ ಶಬ್ದ..

ಈ ಮಾತನ್ನು ನನ್ನ ಗೆಳೆಯ ಕಲಿಂ ಕೂಡ ಹೇಳಿದ ಆದರೆ ನಾನು ತರ್ಕ ಮಂಡಿಸಿದಾಗ ಅವನು ವಾದದಿಂದ ಹಿಂದೆ ಸರಿದು ಬಿಟ್ಟ ಎಂದು ನಾನಗಲೇ ಹೇಳಿದೆ.. ಈಗ ಅದು ಅಲ್ಲಿಲ್ಲ ಅದು ಸಂಶೋಧನೆ ಎಂದು ನೀವು ಹೇಳುತ್ತಿರುವಿರಿ.. ಜಾಕಿರ್ ಮತ್ತು ಕಲೀಂ ಏನಾದರೂ ಹೇಳಿಕೊಳ್ಳಲ್ಲಿ, alif ಅದು ಕುರಾನಿನ ಹೇಳಿಕೆ ಅಲ್ಲವೆಂದು ಹೇಳುತ್ತಿರುವುದನ್ನೇ ನಾನು ತೆಗೆದುಕೊಳ್ಳತೇನೆ.. (ಅದು ಕುರಾನ್ನಲ್ಲಿ ಇಲ್ಲ ಎನ್ನುವಾಗ ನಿಮಗಿರುವ ಆತ್ಮವಿಶ್ವಾಸ ಕಲೀಂನಲ್ಲಿರಲಿಲ್ಲ, ಜಾಕಿರ್ನನ್ನು ಹುಡುಕಿಕೊಂಡು ಹೋಗಿ ನಾನು ಪ್ರಶ್ನೆ ಕೇಳಲಾರೆ..)

ನಿಮ್ಮ ಜಾಗದಿಂದ ನಿಮ್ಮ ವಾದಗಳು ಬಹಳ matured ಆಗಿ ತರ್ಕಬದ್ದವಾಗಿ ಇದೆ.. ಆದರೆ ನೀವು ನಿಮಗೆ ವಿಧಿಸಲ್ಪಟ್ಟ Frameworkನಲ್ಲೇ ಮಾತನಾಡುತ್ತಿದ್ದೀರಾ.ಹೊರಗೆ ಬಂದು ಮಾತನಾಡಲಾಗುತ್ತಿಲ್ಲ.. ನಾವುಗಳು ಸ್ವತಂತ್ರರಾದ್ದರಿಂದ ನಿಮ್ಮ ದೃಷ್ಠಿಕೋನವನ್ನೂ ನೋಡಬಲ್ಲೆವು... ನಿಮ್ಮನ್ನು ತಪ್ಪೆಂದು ಹೇಳುತ್ತಿಲ್ಲ.. ಅದರೆ ಅದಷ್ಟು ಮಾತ್ರವೇ ಸರಿಯಲ್ಲ ಎಂಬುದೇ ನಮ್ಮ ವಾದ..

30-09-10 (12:20 PM)[-]  crusade
pkbysರವರೇ ನಿಮ್ಮ ಜೋತೆ ಚರ್ಚಿಸಲು ತುಂಬ ಸಂತೋಷವಾಗುತ್ತೆ ನಿಮ್ಮಲ್ಲಿರು ಜ್ಞಾನದ ಭಂಡಾರವನ್ನು ಇನ್ನಷ್ಟು ಕೆದಕಿ ನೋಡುವ ಆಸೆ.. ಈ ಜಗತ್ತಿನಲ್ಲಿ ಮೂರು ವಸ್ತುಗಳಿವೆ.
ಮೊದಲನೆಯದಾಗಿ ಹೆಸರಿಸಬಹುದಾದ ಜೀವ.
ಈ ಜೀವ ವಿಹರಿಸುವ, ಸಂಚರಿಸುವ ಮೈದಾನವಾದ ಜಗತ್ತೇ ಎರಡನೆಯ ವಸ್ತು,
ಈ ಎರಡು ವಸ್ತುಗಳನ್ನು ಅಂದರೆ ಜೀವ ಮತ್ತು ಜಗತ್ತು ತನಗಿಷ್ಟ ಬಂದಂತೆ ಆಟ ಆಡಿಸಬಲ್ಲ, ಅವೆರಡನ್ನೂ ತನ್ನ ಅಂಕಿತದಲ್ಲಿಟ್ಟು ಕೊಂಡಿರುವ ಮಹಾಶಕ್ತಿಯೊಂದಿದೆ, ಅದೇ ಮೂರನೆಯ ವಸ್ತು, ಅದೇ ದೇವರು.

ಈ ಜಗತ್ತುಗಳನ್ನು ನಾವೇನೋ ಕಣ್ಣಾರೆ ನೋಡುತ್ತೇವೆ. ನಮ್ಮ ಪಂಚೇಂದ್ರಿಯಗಳ ಅನುಭವಕ್ಕೆ ಬರುವಂತಹವು ಇವು. ಆದರೆ ಇವೆರಡಕ್ಕಿಂತ ಬಹು ಮುಖ್ಯವಾದ ಮೂರನೆಯ ವಸ್ತುವಾದ ದೇವರು ಎಂಬುದರ ಅಸ್ತಿತ್ವವನ್ನು ಅದರ ಪ್ರಾಮುಖ್ಯವನ್ನೂ ಸರ್ವರೂ ಅಂಗಿಕರಿಸಿದ್ದರೂ ಅದರ ಒಂದು ಸ್ಪಷ್ಟ ಕಲ್ಪನೆಯ ಅರಿವಿರುವ ವ್ಯಕ್ತಿಗಳ ಸಂಖ್ಯೆ ಬಹಳ ಕಡಿಮೆ. ಉಳಿದವರಿಗೆ ಅದೊಂದು ಕೇವಲ ಶ್ರದ್ಧೆಯ ಅಂಶ, ಇನ್ನೆಷ್ಟೋ ಜನರಿಗೆ ಇದೊಂದು ವಾದದ ವಿಷಯ, ಊಹೆ ಕಲ್ಪನೆಗಳ ಕಸರತ್ತಿಗೆ ಒಂದು ವಸ್ತು. ಪ್ರವಾದಿಗಳ ಅಂದಿನ ದಿನಮಾನದ ಕಾಲಘಟ್ಟದಲ್ಲಿನ ಜ್ಞಾನಕ್ಕೆ ಅವರು ಪಡೆದ ದೈವವಾಣಿ ಸರಿಯೇ ಇರಬಹುದು.. ಕುರಾನ್ನ ಅವಶ್ಯಕತೆ ಅಂದಿನ ಅರಬೀ ಜನಾಂಗಕ್ಕೆ ಬೇಕಿತ್ತು.. ಅದೇ ಅಂತಿಮವೆಂಬ ಮಾತು ಒಪ್ಪಲಾರದ್ದು.. ಪ್ರವಾದಿಗಳು ದೈವ ಮಾತಾಡಿದ ಕೊನೆಯ ಮಾನವ ಎಂಬುದನ್ನಂತೂ ನನ್ನ ಸ್ವಂತ ಅನುಭವಗಳಿಂದ ನಾನಂತೂ ಒಪ್ಪಲಾರೆ.. ಎಂಬ ನಿಮ್ಮ ತರ್ಕಕ್ಕೆ ಸಮಸ್ತ ಭೂಮಿ ಸೃಷ್ಟಿಕರ್ತನದಿರುವಾಗ ಅದರಲ್ಲಿ ಭೇದ ಭಾವಕ್ಕೆ ಸ್ಥಾನವಿಲ್ಲ. ವಿದೇಶ‌ಗಳಲ್ಲಿ ಪ್ರವಾದಿಗಳು ಬರುವರು, ಅದರೆ ಭಾರತದಲ್ಲಿ ಕೇವಲ ಅವತಾರರು, ಇದು ಅಸಂಭಾವವೂ. ಪ್ರವಾದಿಗಳು ಕೇವಲ ಅರಬರಲ್ಲೇ ಬಂದರು ಅದು ಆ ಜನಾಂಗಕ್ಕೆ ಬೇಕಿತ್ತು ಎಂಬ ವಾದ ಬಾಲಿಶತನದ್ದು.

ಕುರಾನ್ ಹೇಳುತ್ತದೆ, "ನಾವು ಇದನ್ನು ಒರ್ವ ಅರಬೇತರನ ಮೇಲೆ ಅವತೀರ್ಣಗೊಳಿಸಿ ಬಿಡುತ್ತಿದ್ದರೆ, ಹಾಗೂ ಅವನು ಇದನ್ನು ಓದಿ ಹೇಳುತ್ತಿದ್ದರೆ ಆಗಲು ಇವರು ನಂಬುತ್ತಿರಲಿಲ್ಲ." (ಕುರಾನ್ 26:198-199), ಆದರೆ ಮನಸ್ಸು ಮಾನವೀಯತೆಯನ್ನು, ನಮ್ಮಂತೆ ಇತರರು ಎಂಬ ಭಾವನೆಯನ್ನು ಹೊಂದಿರುತ್ತದೆ.. ಮನಸ್ಸು ಇರುವವನೇ ಮನುಷ್ಯ.. ಇಲ್ಲದವನು ಮೃಗ.. ಅವನಿಗೆ ಕಾನೂನು ಇದೆ.. ಅವನನ್ನು ತಿದ್ದುವುದು ಧರ್ಮದ ಕೆಲಸವಲ್ಲ.. ಇದಕ್ಕೆ ಒಂದು ಉದಾಹಣೆ ಮಾದಕ ವಸ್ತುಗಳ ಸೇವನೆ ನಿಷೇಧಕ್ಕೆ ಹಲವಾರು ದೇಶದ ಕಾನೂನಿನಲ್ಲಿ ಹಲವಾರು ಕಠಿಣ ಶಿಕ್ಷೆಗಳಿವೆ, ಆದರೂ ಈ ಮೃಗೀಯ ಸಮುದಾಯ ಇದನ್ನು ಬಿಡಲಿಲ್ಲ ಆದೇ ಆ ಮೃಗಿ ಮನುಷ್ಯನಿಗೆ ಧರ್ಮದ ತಿಳುವಳಿಕೆ ನೀಡಿತ್ತಿದ್ದರೆ ಅವನು ಆ ಸೃಷ್ಟಿಕರ್ತನ ಭಯದಲ್ಲಿ ಆ ಸ್ವಭಾವದಿಂದ ದೂರವಿರುವ ಸಾಹಸ ಮಾಡುತ್ತಾನೆ.

#ಶೈತಾನ ಕೇವಲ ಸೆಮೆಟಿಕ್ ಧರ್ಮಗಳ ಖಳನಾಯಕ.. ನಮ್ಮಲ್ಲಿ ಅವನಿಲ್ಲ...
"ದೇವರು ಸೈತಾನನಿಗೂ ಇರುವ ವ್ಯತ್ಯಾಸವೇ ನಿಃಸ್ವಾರ್ಥತೆ ಮತ್ತು ಸ್ವಾರ್ಥತೆಪರತೆ ಯಲ್ಲಿದೆ. ಸೈತಾನನಿಗೂ ದೇವರಷ್ಟೇ ಜ್ಞಾನವಿದೆ, ಅದರೆ ಪಾವಿತ್ರ್ಯತೆ ಇಲ್ಲ. ಅದಕ್ಕೆ ಅವನು ಸೈತಾನನಾಗಿರುವುದು. ಅಧುನಿಕ ಪ್ರಪಂಚಕ್ಕೂ ಇದನ್ನೇ ಅನ್ವಯಿಸಿ. ಪವಿತ್ರತೆಯೇ ಇಲ್ಲದ ವಿಪರೀತ ಜ್ಞಾನ ಮತ್ತು ಶಕ್ತಿ ಮನುಷ್ಯರನ್ನು ಸೈತಾನರನ್ನಾಗಿ ಮಾಡುವುವು" (ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ 6:343).

#ಆದರೆ ನೀವು ನಿಮಗೆ ವಿಧಿಸಲ್ಪಟ್ಟ Frameworkನಲ್ಲೇ ಮಾತನಾಡುತ್ತಿದ್ದೀರಾ. ಹೊರಗೆ ಬಂದು ಮಾತನಾಡಲಾಗುತ್ತಿಲ್ಲ.. ನಾವುಗಳು ಸ್ವತಂತ್ರರಾದ್ದರಿಂದ ನಿಮ್ಮ ದೃಷ್ಠಿಕೋನವನ್ನೂ ನೋಡಬಲ್ಲೆವು... ನಿಮ್ಮನ್ನು ತಪ್ಪೆಂದು ಹೇಳುತ್ತಿಲ್ಲ..
ಆ ಪರಮಾತ್ಮನ ಕಟ್ಟಪ್ಪಣೆಯ Frameworkನಲ್ಲೇ ಮಾತನಾಡಿದರೆ ನಾವು ಆ ದೇವನ ಸಂಪ್ರೀತಿಗೆ ಪಾತ್ರರಾಗುತ್ತೀವಿ ಎಂಬ ತರ್ಕ

01-10-10 (03:38 PM)[-]  alif
ನಿಮ್ಮೆಲ್ಲರ ಮಾತು ಕೇಳಿ ನ್ಯನಾದ ಅನುವ. ಇಂತಹ ಒಂದು ಚರ್ಚೆಯಲ್ಲಿ ಇದೆ ಮೊದಲ ಸಲ ಭಾಗಿಯಗಿದ್ದೆನೆ.ಅದು ಮಾನವೀಯ ಮೌಲ್ಯಗಳ ಚಿಂತಕರ ಜೊತೆ. ಇನ್ನೊಂದು ಮಾತು ನನ್ನನ್ನೇ ದಂಗಾಗಿಸಿತು. ಅದು ನನ್ನ ಬರಹ ಹರಿತವಾಗಿದೆ ಎಂದು ಕೇಳಿ! ಮಾತಿನಿಂದ ಕೂಲ್ ಆಗಿರುವ ನಾನು ಬರಹದಲ್ಲಿ ಹರಿತವೆ!!! ನಾನು ರ್ಮಗಳ ಬಗ್ಗೆ ಆಪಾದನೆ ಮಾಡುವುದನ್ನ ಸಹಿಸಲಾರೆ (ನನ್ನ ಧರ್ಮ ಮಾತ್ರ ಅಲ್ಲ). ಆಪಾದಿಸುವ ಮೊದಲು ಅದರ ಬಗ್ಗೆ ಪೂರ್ಣ ಮಾಹಿತಿ ಕಲೆ ಹಾಕಿ, ತಿಳಿದವರಿಮ್ದ ವಿವರಣೆ ಕೇಳಿ ಪಡೆಯುವುದು ಒಳಿತು. ಇದೆ ನನ್ನ ಕಿವಿ ಮಾತು. ನಾನು ಕಿವಿಮಾತು ಹೇಳುವಷ್ಟು ಜ್ಞಾನಿ ಅಲ್ಲ, ಆದರೂ ಇದನ್ನ ಹೇಳಬೇಕೆಂದು ತೋಚಿತು. ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಾ...... ಗಾಂಧೀಜಿಯನ್ನು ಇಲ್ಲಿ ಸ್ಮರಿಸುತ್ತೆನೆ...