Tuesday, 26 July 2011

ಮಹಾ ಮಂಥನ-7 (ತಪ್ಪಿಗೆ ಶಿಕ್ಷೆ ಮತ್ತದರ ಸ್ವರೂಪ)

ಈ ಕಂತಿನಲ್ಲಿ ನನ್ನ (pkbys) ಷರಿಯತ್ ಕಾನೂನಿನ ಕ್ರೌರ್ಯದ ಬಗೆಗಿನ ಮಾತುಗಳಿಗೆ crusade ಷರಿಯತ್ ಮತ್ತು ಅದರ ಜಾರಿಗೆ ಇರಬೇಕಾದ ಆಡಳಿತ ವ್ಯವಸ್ಥೆಯ ಬಗ್ಗೆ ಬರೆಯುತ್ತಾರೆ.. 


   

24-09-10 (11:03 PM)[-]  pkbys
ಪ್ರಿಯ crusade, ನಿಜವಾಗಿಯೂ ನಿಮ್ಮ ದೃಷ್ಟಿಕೋನ ಮತ್ತು ಸಹನೆ ಮತ್ತು ವಿಶ್ಲೇಷಣೆ ನಾನು ನಿಮ್ಮನ್ನು ಪ್ರಿಯ ಎಂದು ಕರೆಯುವಂತೆ ಮಾಡಿದೆ.. ಖಂಡಿತವಾಗಿಯೂ ಆಚಾರ, ವರ್ತನೆ, ವಸ್ತ್ರಧಾರಣೆ ಅಥವಾ ಭಾಷೆಯಲ್ಲಿರುವ ಸಹಜ ಭಿನ್ನತೆಗಳನ್ನು ವೈಭವಿಕರಿಸಿ ಬರೆಯುವವರಿಂದ, ಜನಕ್ಕೆ ಪ್ರಚೋದನಕಾರಿ ಮತ್ತು ಪ್ರಾಂತದ ಮೇಲೆ ದ್ವೇಷ ಭಾವನೆಯಿಂದ ಏರಿಹೋಗುವ ತಾವು ವಂಚನೆ, ದೌರ್ಜನ್ಯ, ತುಳಿತಕೊಳಗಾದವರು, ಅಪಮಾನಿತರು, ತಿರಸ್ಕೃತರು, ಅದರ ಸೇಡು ತೀರಿಸಿಕೊಳ್ಳಬೇಕು ಎಂಬ ಮನಸ್ಥಿತಿಯನ್ನ ತರುತ್ತದೆ... ಅದು ಎಂದಿಗೂ ಸಭ್ಯ ನಾಗರೀಕ ಸಮಾಜವನ್ನು ಸೃಷ್ಟಿಸುವುದಿಲ್ಲ.. ನಾವು ಇತಿಹಾಸ ನೋಡಬೇಕಾದದ್ದು ಅದರ ಕೆಟ್ಟ ಘಟನೆಗಳು ಮರುಕಳಿಸದಿರಲೆಂದು.. ಅಧ್ಯಾತ್ಮ ನೋಡಬೇಕಾದದ್ದು ನಮ್ಮ ಜೀವನ ಬೇರೊಬ್ಬರಿಗೆ ಕೆಡುಕು ಬಯಸದೇ ನಮ್ಮ ಜೀವನವನ್ನು ತೃಪ್ತಿಯೊಂದಿಗೆ ಕಳೆಯಲೆಂದು...

ಜೀವನ ಭಗವಂತನು ಇಟ್ಟ ಪರೀಕ್ಷೆ, ಇಲ್ಲಿನ ಅಂಕಗಳ ಮೇಲೆ ನಮ್ಮ ಫಲಿತಾಂಶ ನಿರ್ಧಾರವಾಗುತ್ತದೆ ಎಂಬ ಇಸ್ಲಾಂ ತತ್ವಕ್ಕೂ, ಜೀವನ ಕರ್ಮಸಿದ್ದಾಂತದ ಮೇಲೆ ನಡೆಯುತ್ತದೆ. ಒಳ್ಳೆಯ ಕರ್ಮಕ್ಕೆ, ಒಳ್ಳೆಯ ಫಲಗಳನ್ನೂ, ಕೆಟ್ಟದ್ದಕ್ಕೆ ಕೆಟ್ಟ ಫಲಗಳನ್ನೂ ಜನ್ಮಾಂತರಗಳವರೆಗೆ ಪಡೆಯುತ್ತೇವೆ. ನಿಷ್ಕಾಮ ಕರ್ಮ ಮಾತ್ರ ಮೋಕ್ಷಕೊಯ್ಯಬಲ್ಲುದು ಎಂಬ ಹಿಂದೂ ತತ್ವಕ್ಕೂ ವ್ಯತ್ಯಾಸವಿದ್ದರೂ, ಮಾನವ ಸುಖಿಯಾಗಿರಲಿ, ಯಾರನ್ನೂ ನೋಯಿಸದಿರಲಿ ಎಂಬುದೇ ಭಗವಂತನೋ, ಭಗವದ್ ಸ್ವರೂಪಿ ಅವತಾರಿಯೋ, ಭಗವಂತನ ವಾಣಿಯನ್ನು ಕೇಳಿಸಿಕೊಂಡೆ ಎಂದು ಹೇಳುವ ಯೋಗಪುರುಷ ಪ್ರವಾದಿಯದೋ ಉದ್ದೇಶವಾಗಿತ್ತು. ಪುಣ್ಯಫಲದ ಆಸೆ, ಪಾಪಕರ್ಮಫಲದ ಹೆದರಿಕೆಯೋ ಹಿಂದೂಗಳನ್ನ ಸರಿದಾರಿಯಲ್ಲಿ ನಡೆಸಿದರೆ, ಜೀವನ ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿ ಭಗವಂತನ ಕರುಣೆಯಿಂದ ವಂಚಿತರಾಗುವ ಭಯ ಮತ್ತು ಸ್ವರ್ಗದ ಆಸೆ ಮಹಮದೀಯರನ್ನು ಸರಿದಾರಿಯಲ್ಲಿ ನಡೆಸುತ್ತದೆ

ಆದರೆ ಧರ್ಮಗ್ರಂಥಗಳು ಬೇರೆ ಬೇರೆಯಾಗಿ ಶ್ರೇಷ್ಟತೆಯ ಪ್ರಶ್ನೆ ಬಂದಾಗ ಲಟಾಪಟೀ ಶುರುವಾಗುತ್ತದೆ.. ಜಗತ್ತಿನ ಪ್ರಾಣಿ ಪಕ್ಷಿಗಳೆಲ್ಲವೂ ಭಗವಂತನ ಸೃಷ್ಟಿ ಕೊಂದು ತಿನ್ನಬಾರದು (ಆದರೂ ಬಾಯಿಚಪಲ ಬಿಡಲಾಗುತ್ತದೆಯೇ, ತಿನ್ನುವುದು, ತಿಂದ ಪಾಪಪ್ರಜ್ಞೆಗೆ ಅಪವಿತ್ರರೆಂದು ಭಾವಿಸಿಕೊಳ್ಳುವುದು,) ಇಂದು ದೇವರ ವಾರ ತಿನ್ನುವುದಿಲ್ಲ ಎನ್ನುವ ಮೂಲಕ ದೇವರಿಗೆ ನಿಷ್ಟೆ ತೋರುವುದು.. ಮಾಡುವ ಜನ, ತಾವು ಪವಿತ್ರವೆನ್ನು ಪ್ರಾಣಿಯನ್ನು ಇನ್ನೊಂದು ಸಂಸ್ಕೃತಿಯ ಜನ ಕೊಂದು ತಿನ್ನುವುದನ್ನು ಸಹಿಸುವುದು ಕಷ್ಟವಾಗುತ್ತದೆ.. ಬುರ್ಖಾ ಶೋಷಣೆಯ ಕುರುಹು ಹೇಗೆ ಎಂಬ ತರ್ಕ ಮುಂದಿಡುತ್ತದೆ. (ನನ್ನ ತರ್ಕವೇ ತೆಗೆದುಕೊಳ್ಳಿ, ನಿಮ್ಮದೇ uno ಅಂಕಿ ಅಂಶಗಳಿಂದ ಲೆಕ್ಕ ಹಾಕಿ ತೆಗೆ ಲೆಕ್ಕಾಚಾರದಂತೆ 1%ಗಿಂತ ಕಡಿಮೆ ಪ್ರಮಾಣದ ಹೆಣ್ಣುಮಕ್ಕಳ ಮೇಲೆ ನಡೆವ ದೌರ್ಜನ್ಯವನ್ನು ಬೇರೆ ದಾರಿಗಳ ಮೂಲಕ ಹತ್ತಿಕ್ಕದೆ 99%ಗಿಂತ ಹೆಚ್ಚಿನ ಹೆಣ್ಣುಮಕ್ಕಳ ಮೇಲೆ ಶಿಕ್ಷೆ ವಿಧಿಸುವುದು ಇಸ್ಲಾಂ ಎಂಬ ತರ್ಕ)... ನೀವು ಧಾರ್ಮಿಕ ಸ್ವಾತಂತ್ರದ ಕಾರಣ ಝಕಾತ್ ಇಂದ ವಿನಾಯಿತಿ ಪಡೆದ ಮುಸ್ಲಿಂಮೇತರಿಂದ ತೆರಿಗೆ ಪಡೆದು ಆರ್ಥಿಕ ಸಂತುಲನೆಮಾಡಲು ಜೆಝಿಯಾ ಎಂದಿರಿ.. ಆರ್ಥಿಕ ಸಂತುಲನೆ ಮಾತ್ರವಾದರೆ, ಅದು ಝಕಾತ್ಗಿಂತ ಕಡಿಮೆಯೂ ಇರಬಾರದು, ಹೆಚ್ಚೂ ಇರಬಾರದು, ಆಗಷ್ಟೇ ಅದು ನ್ಯಾಯ, ಆದರೆ, ಆ ನ್ಯಾಯಕ್ಕಾಗಿ ಧಾರ್ಮಿಕ ಸ್ವಾತಂತ್ರ್ಯ ಎಂಬ ಕಾರಣಕ್ಕೆ, ಬೇರೆ ಬೇರೆ ಹೆಸರಿನಲ್ಲಿ ತೆರಿಗೆ ಪಡೆಯುವುದು ಬಾಲಿಶ ಎಂಬ ತರ್ಕಕ್ಕೆ ಪ್ರತಿವಾದ ಸಿಗದು, ಜೆಝಿಯಾ ಸಮಾನವೆಂದರೆ ಬೇರೆ ಹೆಸರೇಕೆ ಪ್ರಶ್ನೆಗೆ ಉತ್ತರವಿಲ್ಲ, ಸಮಾನವಿಲ್ಲ ಎಂದರೆ ಆರ್ಥಿಕ ಸಂತುಲನೆ ಎಂಬ ವಾದಕ್ಕೆ ಅರ್ಥವಿಲ್ಲ... ಅದು ಹೆಚ್ಚಾಗಿತ್ತೋ ಕಡಿಮೆಯಾಗಿತ್ತೋ ತಿಳಿಯಲು ಸಾಕಷ್ಟು ಪುರಾವೆಗಳು ನಮ್ಮಲ್ಲಿಲ್ಲ... ಪಾಶ್ಚಿಮಾತ್ಯ ವಿದ್ವಾಂಸರು ನಮ್ಮನ್ನು ಒಡೆದು ಅಳಲು ಪ್ರಯತ್ನಿಸಿದರು, ಅವರು ಬಯಸಿದ ಮನಸ್ಥಿತಿಯನ್ನು ಹೊಂದಿದ ನಾವು ಬಡಿದಾಡುತ್ತಿದ್ದೇವೇ ಎಂದಿರಿ, ಅದನ್ನು ನಾನು ಸಂಪೂರ್ಣವಾಗಿ ಒಪ್ಪುವೆ.. ಅವರು ಆತಿರಂಜಕ, ಉತ್ಪ್ರೇಕ್ಷಿತ ಸತ್ಯವನ್ನು ಕೊಟ್ಟರು ಎಂದೂ ನಾನು ಒಪ್ಪುವೆ.. ಆದರೆ ಅವು ಸಂಪೂರ್ಣ ಸುಳ್ಳುಗಳೂ ಆಗಿರಲಿಲ್ಲ. ನಾನು ಕೊಟ್ಟ ಉದಾಹರಣೆಗಳು ಕಣ್ಣ ಮುಂದೆ ಶ್ರೀರಂಗಪಟ್ಟಣದಲ್ಲಿ ಇರುವ ಕಟ್ಟಡ, ಯಾವುದೇ ಪಾಶ್ಚಿಮಾತ್ಯ ಪುಸ್ತಕದ ರೆಫರೆನ್ಸ್ ನಾನು ಕೊಡಲಿಲ್ಲ... ನಾನು ಹೆಸರಿಸಿದ್ದು ಭಾರತೀಯ ವಿದ್ವಾಂಸ, ನಿಷ್ಪಕ್ಷಪಾತ ಮಾತಿಗೆ ಹೆಸರಾದ ಶಿವರಾಮ ಕಾರಂತರನ್ನ, ಅವರಾವ ಚಡ್ಡಿ ಗುಂಪಿನ ಸದಸ್ಯರಾಗಿರಲಿಲ್ಲ

ಭಯವಿರುವುದು ಇಸ್ಲಾಂ ಬಗೆಗಲ್ಲ.. ನಿಮ್ಮ ಇಸ್ಲಾಂ ಬಗೆಗಂತೂ ಗೌರವವೇ ಇದೆ. ನನ್ನ ಗೆಳೆಯ ಹೇಳಿದ worst ಜನರ ಬಗ್ಗೆ, ಅವರೇ ಅಲ್ಲಿ ತುಂಬಿದ್ದಾರೆ ಎಂಬ ಬಗ್ಗೆ... ನಿಮ್ಮ ಬಗ್ಗೆ ನನಗೆ ಗೌರವವಿದೆ, ಆದರೆ, ಪ್ರಾಮಾಣಿಕವಾಗಿ ನಿಜವಾದ ಇಸ್ಲಾಂ ಅನುಸರಿಸುತ್ತಿರುವ ಮುಸ್ಲಿಂರೆಷ್ಟು ಜನ ಎಂದು ಯೋಚಿಸಿ ನೋಡಿ,, ನನಗೆ ಹೇಳಬೇಕಾಗಿಲ್ಲ, ನಿಮ್ಮ ಅವಗಾಹನೆಗಾಗಿ, ಮುಸ್ಲಿಂರು ಏಕೆ ನಿಷ್ಠೆಯ ಬಗ್ಗೆ ಪ್ರಶ್ನಾರ್ಹರಾಗಿ ನಿಲ್ಲಬೇಕಿದೆ ಎಂದು ಯೋಚಿಸಿ, ನೀವು ಹೇಳಿದ ನಾಮಧಾರಿಗಳೇ ನಿಮಗೆ ಹೆಚ್ಚಾಗಿ ಕಂಡುಬರುತ್ತಾರೆ.. ನಿಮ್ಮ ಆಹಾರ ಪದ್ದತಿ, ಬುರ್ಖಾದ ಶೋಷಣೆ, ಅಂದು ಮಾಡಿದ ಜೆಝಿಯಾ ವಸೂಲಿ, ದೇವಾಲಯಗಳ ಮೇಲೆ ಲೂಟಿಗಿಂತ ಹೆಚ್ಚಾಗಿ ಅಪಮಾನಗೊಳಿಸುವ ಉದ್ದೇಶದ ದಾಳಿಗಳು, (ಘಸ್ನಿ, ಘೋರಿ, ನಾದಿರ್ ಶಾ ದಾಳಿಗಳಲ್ಲ, ಮೀರ್ ಬಾಕಿ, ಮಲ್ಲಿಕಾಫರ್, ಟಿಪ್ಪು ಔರಂಗಜೇಬ್ರ ದುರಾಕ್ರಮಣಗಳು) ಇವೆಲ್ಲಾ ಕ್ಷುಲ್ಲಕ ಕಾರಣಗಳಲ್ಲ..

ಘಸ್ನಿ ಘೋರಿ, ನಾದಿರ್ ಶಾ ಗಳನ್ನ ಲೂಟಿಕೋರರೆಂದು ಕ್ಷಮಿಸಬಹುದು.. ಮೀರ್ ಬಾಕಿ, ಮಲ್ಲಿಕಾಫರರು ತಮ್ಮ ರಾಜನ ಆದೇಶ ಪಾಲಿಸಿದರಷ್ಟೇ ಎಂಬ ಮಾರ್ಜಿನ್ ಕೊಡಬಹುದು, ಟಿಪ್ಪು, ಔರಂಗಜೇಬರನ್ನು ಕ್ಷಮಿಸುವುದೆಂತು.. ಅವರ ಕ್ರಿಯೆಗಳು ಇಸ್ಲಾಂನ ಹೆಸರಿನಲ್ಲೇ ನಡೆದಿತ್ತು.. ನಂಬಿಕೆ ಬಹಳ ಮುಖ್ಯವಲ್ಲವೇ,, ಆನಂತರವಷ್ಟೇ ಐಕ್ಯಮತ್ಯ.. ಭಾರತಕ್ಕೆ ಬಡಿದಾಟವಿಲ್ಲದ ಇಸ್ಲಾಂ (ಶಾಂತಿ) ಇಸ್ಲಾಂನಿಂದ, ದುರ್ವಖ್ಯಾನಗಳಿಂದ ಪ್ರಚೋದಿತ ಹಿಂದು ಮತಾಂಧರಿಂದ ದೊರೆತೀತೆ??? ನಾನು ಹಿಂದೂ, ಹೆಮ್ಮೆಯ ಹಿಂದೂ, ಆದರೆ ಮತಾಂಧ ಹಿಂದೂಗಳನ್ನ ಸಮರ್ಥಿಸುವುದೂ ಇಲ್ಲ.. ಆದರೆ ಅಂಥಹ ಎಷ್ಟು ಮುಸಲ್ಮಾನರನ್ನ ಕಾಣಬಲ್ಲಿರಿ, ಇಸ್ಲಾಂನ ಜಾಗತಿಕ ಸಹೋದರತೆಯನ್ನ ಅಪವ್ಯಾಖ್ಯಾನಿಸಿ ತಪ್ಪು ಮಾಡಿದವನ್ನನೂ ಇಸ್ಲಾಂನ ಹೆಸರಿನಲ್ಲಿ ಜಾಗತಿಕ ಸಹೋದರತೆಯ (universal brotherhood) ಹೆಸರಿನಲ್ಲಿ ಸಮರ್ಥಿಸುವುದು ಸರಿಯೇ...


25-09-10 (02:39 PM)[-]  crusade
pkbys ರವರೇ, ನನ್ನಂಥ ಸಾಮಾನ್ಯ ಮನುಷ್ಯನನ್ನು, ಅದುವೇ ನಿಮ್ಮ ಜ್ಞಾನದ ಮುಂದೆ ನಾನು ಒಬ್ಬ ತೃಣಕ್ಕೆ ಸಮಾನನಾಗಿರುವವನನ್ನು ಪ್ರಿಯವೆಂದು ಸಂಭೊದಿಸಿದಕ್ಕೆ ಧನ್ಯವಾದಗಳು, ಮನುಷ್ಯನ ಒಂದು ಸ್ಥಿತಿಯು ಇತರ ಸೃಷ್ಟಿಗಳಂತೆ ನಿಸರ್ಗ ನಿಯಮದ ಬಲಿಷ್ಠ ಕಾನೂನಿನಲಿ ಬಂಧಿತನಾಗಿರುವ ಸ್ಥಿತಿಯಾಗಿದೆ. ಅವನು ಆ ಕಾನೂನುಗಳನ್ನು ಪಾಲಿಸಲು ನಿರ್ಬಂಧಿತವಾಗಿರುವನು. ಅವನ ಇನ್ನೊಂದು ಸ್ಥಿತಿಯೇನೆಂದರೆ ಅವನು ಬುದ್ಧಿಯನ್ನು ಪಡೆದಿದ್ದಾನೆ. ಯೋಚಿಸುವ, ತಿಳಿಯುವ ಮತ್ತು ಅಭಿಪ್ರಾಯ ತಾಳುವ ಶಕ್ತಿಯನ್ನು ಪಡೆದಿದ್ದಾನೆ. ಅವನು ತನ್ನ ಆಯ್ಕೆಯಂತೆ ಒಂದು ವಿಷಯವನ್ನು ಒಪ್ಪುತ್ತಾನೆ, ಇನ್ನೊಂದನ್ನು ನಿರಾಕರಿಸುತ್ತಾನೆ. ಮನುಷ್ಯನ ತನ್ನ ಜೀವನದಲ್ಲಿ ಈ ಎರಡು ನೆಲೆಗಳಲ್ಲಿ ಕಾಣಸಿಗುತ್ತಾನೆ. ಒಬ್ಬನು ತನ್ನ ಸೃಷ್ಟಿಕರ್ತನನ್ನು ಗುರುತಿಸುತ್ತಾನೆ. ಅವನನ್ನು ತನ್ನ ಒಡೆಯನೆಂದೂ ಪ್ರಭುವೆಂದೂ ಅಂಗೀಕರಿಸುತ್ತಾನೆ. ತನ್ನ ಜೀವನದ ಚ್ಚಿಕ ಕಾರ್ಯಗಳಲ್ಲಿಯೂ ಅವನ ಮೆಚ್ಚುಗೆಯ ಕಾನೂನಿನ ಅನುಸರಣೆ ಮಾಡುತ್ತಾನೆ. ಇವನು ಪೂರ್ಣ ಮುಸ್ಲಿಮನು. ಏಕೆಂದರೆ ಯಾರು ಅವನಿಗೆ ಯೋಚನೆಯ ಮತ್ತು ವಿವೇಚನೆಯ ಶಕ್ತಿಯನ್ನು ದಯಪಾಲಿಸಿರುವಾನೊ ಆ ದೇವನ ಅನುಸರಣೆ ಮಾಡುತ್ತೇನೆಂದು ಅವನು ಚೆನ್ನಾಗಿ ಯೋಚಿಸಿ ತೀರ್ಮಾನಿಸಿರುವನು. ಯಾರು ಅದಕ್ಕೆ ಮಾತಾಡುವ ಶಕ್ತಿ ದಯಪಾಲಿಸಿರುವನೋ ಅದು ಆ ದೇವನ ಅಸ್ತಿತ್ವವನ್ನು ದೃಢೀಕರಿಸುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ ಇನ್ನೊಬ್ಬನು ಮುಸ್ಲಿಮನಾಗಿ ಜನಿಸಿ, ತನ್ನ ಜೀವನದುದ್ದಕ್ಕೂ ಅನೈಚ್ಛಿಕವಾಗಿ ಮುಸ್ಲಿಮನಾಗಿಯೇ ಇದ್ದನು. ಅದರೆ ತನ್ನ ಜ್ಞಾನ ಮತ್ತು ವಿವೇಕದ ಸಾಮರ್ಥ್ಯವನ್ನು ಬಳಸಿ ದೇವನನ್ನು ಗುರುತಿಸಲಿಲ್ಲ ಹಾಗೂ ತನ್ನ ಚ್ಛಿಕ ಮೇರೆಯಲ್ಲಿ ಆ ದೇವನಿಗೆ ವಿಧೇಯನಾಗಲು ನಿರಾಕರಿಸಿದನು. ಇವನೇ ಕಾಫಿರ್, ಇಂತಹ ಮನುಷ್ಯನನ್ನು ಕಾಫಿರ್ ಎನ್ನುವುದೇಕೆಂದರೆ ಅವನು ತನ್ನ ಪ್ರಕೃತಿಯ ಮೇಲೆ ಅಜ್ಞಾನದ ಪರದೆ ಹಾಕಿರುತ್ತಾನೆ, ಅವನು ಇಸ್ಲಾಮಿನ ಪ್ರಕೃತಿಯಲ್ಲಿ ಜನಿಸಿದನು. ಅವನ ಸಂಪೂರ್ಣ ಶರೀರ ಮತ್ತು ಅದರ ಪ್ರತಿಯೊಂದು ಅಂಗ ಇಸ್ಲಾಮಿನ ಪ್ರಕೃತಿಯಂತೆ ಕಾರ್ಯವೆಸಗುತ್ತಿದೆ. ಅವನ ಸುತ್ತಮುತ್ತಲಿನ ಇಡೀ ಲೋಕವು ಇಸ್ಲಾಮಿನಂತೆ ನಡೆಯುತ್ತಿದೆ. ಅದರೆ ಅವನ ಬುದ್ಧಿಯ ಮೇಲೆ ಪರದೆ ಬಿದ್ದಿದೆ. ಸಂಪೂರ್ಣ ವಿಶ್ವದ ಮತ್ತು ಸ್ವಂತ ಪ್ರಕೃತಿಯ ವಾಸ್ತವಿಕತೆಯು ಅವನಿಂದ ಮರೆಯಾಗಿದೆ (ನೀವು ಹೇಳಿದ ನಿಮ್ಮ ಮುಸ್ಲಿಮ್ ಗೆಳೆಯ ತಿಳಿಸುವ ನಾವು ನೋಡುವ worst people). ಅವನು ಅದರ ವಿರುದ್ಧ ಯೋಚಿಸುತ್ತಾನೆ ಮತ್ತು ಅದರ ವಿರುದ್ಧವೇ ಕಾರ್ಯವೆಸಗುತ್ತಾನೆ..      

25-09-10 (07:40 PM)[-]  pkbys
ಪ್ರಿಯ crusade, ನನ್ನ ಜ್ಞಾನಕ್ಕೆ ನಿಮ್ಮನ್ನು ತೃಣವೆನ್ನುವುದು ಸರಿಯೇ... ನಿಜವಾಗಿಯೂ ನೀವು ನನಗಿಂತ ಹಲವು ಪಟ್ಟು ಜ್ಞಾನವಂತರು.. ತುಂಬಿದ ಕೊಡ ತುಳುಕದು ಎಂಬ ಹಿರಿಯರ ಮಾತಿಗೆ ನಿಮ್ಮ ಉದಾಹರಣೆ ಕೊಡಬಹುದು. ನಿಮ್ಮಷ್ಟು ನಾನು ಓದಿಕೊಂಡಿಲ್ಲ.. ನಿಮ್ಮಂತೆ ನಾನು ಯಾವ ಗ್ರಂಥದ ಯಾವ ಉಲ್ಲೇಖವನ್ನೂ ಕೊಟ್ಟಿಲ್ಲ, ಕೊಡಲಾರೆ. ಪ್ರತಿ ಕಾಮೆಂಟ್ ಬರೆಯುವಾಗಲು ಬಹಳ ವಿಚಾರಗಳನ್ನು ಮಾಡಿ ಮಾಹಿತಿಯನ್ನ ಸಂಸ್ಕರಿಸಿ, ವಿಶ್ಲೇಷಿಸಿ, ಶುದ್ದ ಮತ್ತು ಉತ್ತಮ ಪದಭಂಢಾರದ ಭಾಷೆಯಲ್ಲಿ ಬರೆಯುತ್ತೀರಿ.. ನನ್ನ ಕಾಮೆಂಟ್ಗಳು ತರ್ಕ ಬಿಟ್ಟರೆ ನಿಮ್ಮ ಕಾಮೆಂಟ್ಗಳ ಮುಂದೆ ಕಚ್ಚಾ ಮಾಲು (raw) ಎಂದು ನನಗೇ ಅನಿಸುತ್ತದೆ.. ನಾ ಕಾಮೆಂಟ್ ಮಾಡುವ ಮೊದಲು ಮಾಹಿತಿಯನ್ನು ಸಂಸ್ಕರಿಸುವುದೂ ಇಲ್ಲ.. ನಿಮ್ಮಂತೆ sub ಎಂಬ ಸಂಸ್ಕಾರವಂತ, ವಿದ್ಯಾವಂತ ಮುಸಲ್ಮಾನರು ಬೇರೊಂದು ಸುದ್ದಿಯೆಳೆಯಲ್ಲಿ ಒಂದು Matured ಸಂವಾದದಲ್ಲಿ ತೊಡಗುವ ಹಾದಿಯಲ್ಲಿದ್ದರು, ಆದರೆ ಏಕೋ ಬಿಟ್ಟುಬಿಟ್ಟರು.. 
(ಆ ಸುದ್ದಿಯೆಳೆಯ ಸಂವಾದ ಇಲ್ಲಿದೆ, ಅದಕ್ಕಿರುವ ಕಾಮೆಂಟ್‌ಗಳನ್ನೂ ಒಮ್ಮೆ ಗಮನಿಸಿ)
ಆ ಸುದ್ದಿಯೆಳೆಯ ಸಂವಾದ bhgteರವರ ಮಾತುಗಳ ವಿಡಂಬನೆಯ ಸಿಹಿ ಹೂರಣದಲ್ಲಿ ಕಲಸಿದ ಕಹಿ ಸತ್ಯಗಳ ನೈವೇದ್ಯವಾಯಿತು. ಆದರೆ ಈ ಬಾರಿ ನೀವು subರಂತೆಯೇ ಸಹನಶೀಲರಾಗಿ ಸಂವಾದದಲ್ಲಿ ತೊಡಗಿದ್ದೀರಿ.. ನಿಮ್ಮೊಡನೆ ಸಂವಾದ ನನ್ನ ಸಾಕಷ್ಟು ಅರಿವನ್ನು ಹೆಚ್ಚಿಸಿದೆ.. ಎಲ್ಲಕ್ಕಿಂತ ಹೆಚ್ಚಾಗಿ ಗೆಳೆಯ  ಮುಯೀನ್ ಹೇಳಿದ worst people ಮಾತ್ರ ಇಸ್ಲಾಂನಲ್ಲಿಲ್ಲ. ನಿಮ್ಮಂತೆ ಪರಮತ ಸಹಿಷ್ಣುವೂ, ಸಹನಶೀಲರೂ, ವಿಚಾರವಂತ-ವಿದ್ಯಾವಂತರೂ ಇದ್ದಾರೆ ಎಂಬ ಸತ್ಯ ದರ್ಶನ ಮಾಡಿಸುತ್ತಿದ್ದೀರಿ..

ನೀವು ಆರ್ಥಿಕ ಸಂತುಲನೆಗಾಗಿ ತಂದ ತೆರಿಗೆ ಎಂದು ಹೇಳಿದ ಜೆಝಿಯಾಕ್ಕೆ ಧರ್ಮನಿರಪೇಕ್ಷತೆಯ ಕಾರಣಕ್ಕಾಗಿ ಬೇರೆ ಹೆಸರು ನೀಡುವುದು ಬಾಲಿಶ ಎಂಬ ತರ್ಕಕ್ಕೆ, 1% ಗಿಂತ ಕಡಿಮೆ ಶೋಷಿಸಲ್ಪಡುವ ಹೆಣ್ಣಿನ ರಕ್ಷಣೆಗೆ ಬೇರೆ ರಚನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಬದಲು 99% ಹೆಣ್ಣುಮಕ್ಕಳಿಗೆ ಬುರ್ಖಾದ ಶಿಕ್ಷೆ ವಿಧಿಸುವುದು ಅನ್ಯಾಯ ಎಂಬ ತರ್ಕಕ್ಕಾಗಲಿ, ಲೂಟಿಕೋರ ಮಹಮದೀಯರನ್ನು (ಘೋರಿ, ಘಸ್ನಿ, ನಾದಿರ್ ಶಾ) ದೇವಸ್ಥಾನದ ಮೇಲಿನ ದಾಳಿಗಳಿಗೆ ಅವರ ಧರ್ಮದ ಕಾರಣಕ್ಕೆ ಬಯ್ಯಬಾರದು ಅವರು ಮುಸ್ಲಿಂ ನಾಮಧಾರಿಗಳು ಅಷ್ಟೆ ಎಂಬ ತರ್ಕವನ್ನ ನಾನು ಒಪ್ಪಿದರೂ ಹಿಂದೂಗಳಿಗೆ ಅಪಮಾನ ಮಾಡಲೆಂದೇ ದೇವಾಲಯಗಳ ಮೇಲೆ ದಾಳಿಮಾಡಿದ, ಅತಿಕ್ರಮಿಸಿದ (ಬಾಬರ್, ಶಹಜಹಾನ್, ಮಲ್ಲಿಕಾಫರ್, ಔರಂಗಜೇಬ್, ಟಿಪ್ಪು) ಆಡಳಿತಕಾರರಲ್ಲಿ ಕೆಲವರನ್ನಾದರೂ ಮಹಾನ್ ವ್ಯಕ್ತಿಗಳು ಎಂದು ಬಿಂಬಿಸಿರುವುದು, ಐಡಿಯಲ್, ಹಜರತ್ ಎಂದು ಹೆಸರುಕೊಟ್ಟು ಗೌರವಿಸುವುದು ತಪ್ಪಲ್ಲವೇ ಎಂಬ ಪ್ರಶ್ನೆಗೆ ಅದು ಪಾಶ್ಚಾತ್ಯ ವಿದ್ವಾಂಸರ ದುರ್ವ್ಯಾಖ್ಯಾನ ಎಂದಿರಿ.. ಆದರೆ ಪುರಾವೆಯಾಗಿ ನಿಂತ ಕಟ್ಟಡಗಳಿಗೇನೆನ್ನೋಣ. ಅವು ಪಾಶ್ಚಾತ್ಯ ವಿದ್ವಾಂಸರ ಕೃತಿಗಳಲ್ಲವಲ್ಲ.. mklp ಇದೇ ಸುದ್ದಿಯೆಳೆಯಲ್ಲಿ ಹೇಳಿದಂತೆ ರಾವಣನಂಥ ಮಹಾಬ್ರಾಹ್ಮಣನನ್ನ ನಾದಬ್ರಹ್ಮನನ್ನ, ಪಂಡಿತೊತ್ತಮನನ್ನ, ಎಲ್ಲ ಬ್ರಾಹ್ಮಣರೂ ಒಪ್ಪಿದರೂ, ಯಾವ ಬ್ರಾಹ್ಮಣನೂ ಅವನ ಪರಸ್ತ್ರೀ ಅಪಹರಣವನ್ನ ಸಮರ್ಥಿಸುವುದಿಲ್ಲ... ಆತನ ಭಕ್ತಿ, ನಾದ, ಎಲ್ಲಕ್ಕೂ ಗೌರವವಿದ್ದರೂ, ಆತನ ಪಾಪಕ್ಕೆ ಸಮರ್ಥನೆಯೇ ಇಲ್ಲ. ಯಾವ ಬ್ರಾಹ್ಮಣನೂ ನಮ್ಮವನೆಂಬ ಅಂಧತೆಯಿಂದ ಅವನನ್ನ ಸಮರ್ಥಿಸುವುದಿಲ್ಲ...

ಆದರೆ ಕಸಬ್ನನ್ನು ಅವನ ಹಳ್ಳಿಯವರು ಅವನು ಒಬ್ಬ ಮುಸ್ಲಿಂ ಆದ್ದರಿಂದ ಅವನು ನಮ್ಮ ಸಹೋದರ, ಅವನು ಭಾರತದ ವಿರುದ್ದ ಹೋರಾಡಿದ ಧರ್ಮಯೋಧ, ಅವನನ್ನ ಬಿಟ್ಟುಬಿಡಬೇಕು, ಎಂಬ ನಿಲುವನ್ನು ಹೊಂದಿದರಂತೆ. ತಮ್ಮ ತಮ್ಮಲ್ಲೇ ಬಡಿದಾಡುತ್ತಿದ್ದ ಅರಬ್ ಪಂಗಡಗಳು ಒಂದಾಗಲಿ, ಐಕ್ಯಮತ್ಯ ಹಾಳಾಗದಿರಲಿ ಎಂಬ ಕಾರಣಕ್ಕೆ ಪ್ರವಾದಿಗಳು ಕೊಟ್ಟ ಇಸ್ಲಾಮಿಕ್ ಬ್ರದರ್ ಹುಡ್ concept ಅನ್ನು ಕೆಟ್ಟದ್ದು ನಡೆದಾಗಲೂ ಸಮರ್ಥಿಸುವ ಮಟ್ಟಕ್ಕೆ ಆ ಹಳ್ಳಿಯ ಜನ ತೆಗೆದುಕೊಂಡು ಹೋದದ್ದು ತಪ್ಪಲ್ಲವೇ.. ಹಾಗೇ ಬಹಳ ಜನ ಮಹಮದೀಯರು ಮಾಡುವುದನ್ನ ನಾನು ಕಣ್ಣಾರೆ ನೋಡಿದ್ದೇನೆ, ನನ್ನ ಕಚೇರಿಯಲ್ಲೇ ಕೆಲಸ ಮಾಡುವ ಒಬ್ಬ ಮಹಮದೀಯ ಹುಡುಗಿ ಕಸಬ್ನನ್ನು ವಹಿಸಿಕೊಂಡು ಮಾತಾಡಿದ್ದು ನೋಡಿ ಬೆರಗಾಗಿದ್ದೇನೆ. ಇದೆಲ್ಲಾ ಮಹಮದೀಯರ ಬಗ್ಗೆ ಯಾವ ಇಮೇಜ್ ಕಟ್ಟಿಕೊಡುತ್ತದೆ... ಇಂತಹ ಅನುಭವಗಳ ನಡುವೆ ನೀವು ಪಾರ್ಸಿಗಳನ್ನು ದೇಶಭ್ರಷ್ಟರಾಗಿಸಿದವರನ್ನು ಸಮರ್ಥಿಸಲಿಲ್ಲವಲ್ಲ, ನಿಮ್ಮ ಬಗ್ಗೆ ಬಹಳ ಗೌರವ ಮೂಡುತ್ತದೆ..

26-09-10 (06:13 PM)[-]  crusade
pkbys ರವರೇ, ಇಸ್ಲಾಂ ನ ಹೆಸರಿನಲ್ಲಿ ಜಾಗತಿಕ ಸಹೋದರತೆಯ (universal brotherhood)ನ ಹೆಸರಿನಲ್ಲಿ ಸಮರ್ಥಿಸುವುದು ಸರಿಯೇ... ಮತ್ತು ನಿಮ್ಮ ಕಚೇರಿಯಲ್ಲೇ ಕೆಲಸ ಮಾಡುವ ಒಬ್ಬ ಮಹಮದೀಯ ಹುಡುಗಿ ಕಸಬ್ ನನ್ನು ವಹಿಸಿಕೊಂಡು ಮಾತಾಡಿದ್ದು ನೋಡಿ ಬೆರಗಾಗಿದ್ದೇನೆ. ಇದೆಲ್ಲಾ ಮಹಮದೀಯರ ಬಗ್ಗೆ ಯಾವ ಇಮೇಜ್ ಕಟ್ಟಿಕೊಡುತ್ತದೆ..., ತನ್ನವರು, ಪರರು, ಸ್ವಧರ್ಮಿಯರು, ಪರಧರ್ಮಿಯರು ಎಂಬ ಭೇದವಿಲ್ಲದೆ ಎಲ್ಲರೊಂದಿಗೂ ನ್ಯಾಯ ಪರಿಪಲಿಸುವಂತೆ ಪವಿತ್ರ ಕುರಾನ್ ಮುಸ್ಲಿಮರಿಗೆ ಆಜ್ಞೆ ನೀಡಿದೆ. ಮಾತ್ರವಲ್ಲ ನಿಮ್ಮ ಶತ್ರುಗಳೊಂದಿಗೂ ನ್ಯಾಯ ಪಾಲಿಸಿರಿ ಎಂದು ಆಜ್ಞಾಪಿಸುತ್ತದೆ,
"ಸತ್ಯವಿಶ್ವಾಸಿಗಳೇ , ನೀವು ಅಲ್ಲಾಹನಿಗಾಗಿ ಸತ್ಯದದಲ್ಲೇ ನೆಲೆ ನಿಲ್ಲುವವರು ನ್ಯಾಯದ ಸಾಕ್ಷ್ಯವಹಿಸುವವರೂ ಆಗಿರಿ. ಒಂದು ವಿಭಾಗದ ಮೇಲಿನ ದ್ವೇಷವು ನಿಮ್ಮನ್ನು ನ್ಯಾಯದಿಂದ ವಿಮುಖರಾಗುವಷ್ಟು ರೇಗಿಸದಿರಲಿ. ನ್ಯಾಯ ಪಾಲಿಸಿರಿ. ಇದು ದೇವಭಯಕ್ಕೆ ಹೆಚ್ಚು ಅನುಗುಣವಾಗಿದೆ. ಅಲ್ಲಾಹನನ್ನು ಭಯಪಟ್ಟು ವರ್ತಿಸಿರಿ ನೀವು ಮಾಡುತ್ತಿರುವುದೆನ್ನೆಲ್ಲಾ ಅಲ್ಲಾಹ್ ಚಿನ್ನಾಗಿ ಬಲ್ಲವನಾಗಿದ್ದಾನೆ." (ಕುರಾನ್ 5:8),

ಅಪರಾಧವು ದಿನದ ಬೆಳಕಿನಂತೆ ಸ್ಪಷ್ಟವಾಗಿ ಸಾಬೀತಾದರೆ ಅಪರಾಧಿಯ ಬಗ್ಗೆ ಕನಿಕರ ತೋರುವುದರಿಂದಲೂ ಇಸ್ಲಾಮ್ ತಡೆಯುತ್ತದೆ. ಇದಕ್ಕೆ ಪ್ರವಾದಿಗಳ ಕಾಲದಲ್ಲಿ ನಡೆದ ಒಂದು ಘಟನೆ "ಬನೀಮಕ್ ಜೂಮ್ ಎಂಬ ಪ್ರಸಿದ್ದ ಕುರೈಶ್ ಗೋತ್ರದ ಫಾತಿಮಾ ಎಂಬ ಮಹಿಳೆಗೆ ಪ್ರವಾದಿವರ್ಯರು(ಸ) ಕೈ ಕಡಿಯುವ ಶಿಕ್ಷೆ ವಿಧಿಸಿದ ಘಟನೆ ಇಲ್ಲ ಸ್ಮರಣಾರ್ಹ. ಆಕೆಯನ್ನು ಕ್ಷಮಿಸಿ ಬಿಡಬೇಕೆಂಬ ಕೆಲವು ಪ್ರಮುಖರು ವಿನಂತಿಸಿದಾಗ, ಶಿಫಾರಸನ್ನು ತಿರಸ್ಕರಿಸುತ್ತಾ ಅವರು ಈ ರೀತಿ ಹೇಳಿದರು : ಸಾಕ್ಷತ್ ಮುಹ್ಮದ್ (ಸ) ರ ಪುತ್ರಿ ಫಾತಿಮಾ ಈ ಅಪರಾಧವೆಸಗಿದ್ದರೆ ಅವಳಿಗೂ ತಪ್ಪದೆ ಇದೇ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ಈ ರೀತಿಯ ಶಿಕ್ಷಣ ಇಸ್ಲಾಮಿನರುವಾಗ ನಿಮ್ಮ ಕಛೇರಿಯಲ್ಲಿರುವ ಮುಸ್ಲಿಮ್ ಹುಡುಗಿಯು ಕಸಬ್ನನ್ನು, ಮತ್ತು ಕಸಬ್ನನ್ನು ಅವನ ಹಳ್ಳಿಯವರು ಅವನು ಒಬ್ಬ ಮುಸ್ಲಿಂ ಆದ್ದರಿಂದ ಅವನು ನಮ್ಮ ಸಹೋದರ, ಎಂದು ವಾದಿಸುವರು ಇಸ್ಲಾಮಿನ ಶಿಕ್ಷಣದ ಕೊರತೆಯಿಂದ ಅಜ್ಞಾನದ ಮಾತುಗಳನ್ನಾಡಿದ್ದಾರೆ.

26-09-10 (06:48 PM)[-] pkbys
crusade ನಿಮ್ಮ ಮಾತು‌ಗಳು ನನ್ನ ಗೆಳೆಯ ಮುಯೀನ್ ನಂತೆಯೇ ಇದೆ.. Islam is the Best Religion but Muslims are the Worst people because of lack in Education ಎಂದಾಗ, ಅವನೊಡನೆ ನಾನು ವಾದಕ್ಕೆ ಹೋಗಲ್ಲಿಲ್ಲ.. ಶಿಕ್ಷಣದ ಕೊರತೆ ಇದ್ದರೂ ಯಾವ ಬ್ರಾಹ್ಮಣನೂ ರಾವಣನ ಪರವಹಿಸುವುದಿಲ್ಲ.. ಮೇಲಾಗಿ ವಿದ್ಯಾವಂತ ಮುಸ್ಲಿಮರೇ (ನನ್ನ ಕಚೇರಿಯ ಹುಡುಗಿ ಉರ್ದು ಎಂ.ಎ. ವಿದ್ಯಾವಂತೆ) ಹಾಗೆ ಮಾಡುವುದು ನೋಡಿದಾಗ ಅವಿದ್ಯಾವಂತರೆಂದು ‌ಅವರಿಗೆ ಮಾರ್ಜಿನ್ ಕೊಡುವುದು ಸರಿಯೆನಿಸಲಿಲ್ಲ.. ಆದರೆ ಆ ಮಾತು ಅವನಿಗೆ ಹೇಳಿ ಸುಮಧುರ ಸಂಬಂಧ ಹಾಳು ಮಾಡಿಕೊಳ್ಳುವುದು ಬೇಕಿರಲಿಲ್ಲ.. ಸುಮ್ಮನಾಗಿದ್ದೆ.. ನೀವು ಹೇಳುತ್ತಿರುವ ಇಸ್ಲಾಂ ಸಾಕಷ್ಟು ನೈತಿಕ ಎಂದು ನನಗೆ ಅನ್ನಿಸುತ್ತಿದೆ.. ಆ ಮುಸ್ಲಿಂರಿಗೆ ಬೇಕಿರುವುದು ನೈತಿಕ (ನೀವು ಹೇಳುತ್ತಿರುವ ಇಸ್ಲಾಂನ) ಶಿಕ್ಷಣ.. ಆತ ಆ 'ನೈತಿಕ' ಅನ್ನುವ ಪದ ಬಿಟ್ಟು ಬಿಟ್ಟಿದ್ದ ಅನ್ನಿಸುತ್ತದೆ..

ಕೈ ಕತ್ತರಿಸುವ ಶಿಕ್ಷೆ ತುಂಬ ಬರ್ಬರವಾಯಿತು ಎಂದು ಅನಿಸುತ್ತಿದೆ,, ನಾನು ಈ ಶರಿಯತ್ ಬಗ್ಗೆಯೂ ಪ್ರಸ್ತಾಪ
ಮಾಡುವವನಿದ್ದೆ.. ಕ್ರೂರವೆನಿಸುವುದಿಲ್ಲವೇ... ಶಿಕ್ಷೆಗಳಿರಬೇಕು, ನಾನಂತೂ ಮರಣದಂಡನೆಯನ್ನು (Capital punishment) ಕೂಡ ವಹಿಸಿಕೊಂಡು ಮಾತನಾಡುತ್ತೇನೆ.. ಆದರೆ ಕ್ರೌರ್ಯ ಶಿಕ್ಷೆಗೆ ಬೇರೆಯದೇ ಆಯಾಮ ಕೊಡುತ್ತದೆ.. ನಾನು ಪ್ರವಾದಿಗಳನ್ನು ದೂಷಿಸುತ್ತಿಲ್ಲ.. ಆ ಕಾಲಕ್ಕೆ ಅವು ಸರಿಯೋ ತಪ್ಪೋ ನಾನು ವಿಚಾರಕ್ಕೆಳೆಯುವುದೂ ಇಲ್ಲ.. ಆದರೆ ಇಂದು ಕೂಡ ತಾಲಿಬಾನ್‌ ಮೂಲಕ ಮೂಗು ಕತ್ತರಿಸಿಕೊಂಡ ಹುಡುಗಿ, ಇರಾನ್ಲ್ಲಿ ಕಲ್ಲು ಹೊಡೆಸಿಕೊಂಡು ಸಾಯಬೇಕಾದ ಶಿಕ್ಷೆ ಪಡೆದ ಹುಡುಗಿಯರು ಕಣ್ಣ ಮುಂದೆ ಬರುತ್ತಾರೆ.. ಪ್ರವಾದಿಗಳಿಗಿಂತ ಮುಂಚೆ ಬರ್ಬರವಾಗಿದ್ದ ಅರಬ್ ಜನಾಂಗ ಸ್ವಲ್ಪ ನಾಗರೀಕತೆಯನ್ನ ಇಸ್ಲಾಂ ಮೂಲಕ ಪಡೆಯಿತು.. ಆದರೆ ಶರಿಯತ್ ನ ಹೆಸರಿನಲ್ಲಿ ಅದು ಅದೇ ಕಾಲಘಟ್ಟದ್ದಲ್ಲಿ ನಿಂತು ಬಿಟ್ಟಿತಲ್ಲ.. ನಾಗರಿಕತೆ ಬೆಳೆದಂತೆ ಮಾನವೀಯತೆ ಬೆಳೆಯಬೇಕಲ್ಲವೇ.. ಕ್ರೌರ್ಯ ಹಿಂದೆ ಹೋಗಬೇಕಿತ್ತು..

26-09-10 (11:51 PM)[-]  crusade
ಇಂದಿನ ಪ್ರಗತಿಪರ ಯುಗದಲ್ಲಿ ಇಸ್ಲಾಮಿನ "ಪಾಶವೀ" ಶಿಕ್ಷೆ ಪದ್ಧತಿಯನ್ನು ಜಾರಿಗೊಳಿಸುವುದು ಸಮಂಜಸವೇ? ಅದು ಕಾಲದ ಬೇಡಿಕೆಗೆ ಪೂರಕಾಗಿದೆಯೇ? ಕೆಲವು ಸಣ್ಣ ಕಳ್ಳತನಕ್ಕೆ ಕೈ ಕದಿಯುವ ಶಿಕ್ಷೆ, ಒಂದು ಕೆಟ್ಟ ಟೈಮಿನಲ್ಲಿ ನಡೆದ ವ್ಯಭಿಚಾರಕ್ಕೆ ಕಲ್ಲು ಹೊಡೆದು ಸಾಯಿಸುವುದು, ಇತ್ಯಾದಿಗಳು ವೈಚಾರಿಕ ಮತ್ತು ಮಾನವೀಯ ಮಾನದಂಡಕ್ಕೆ ನಿಲುಕುವ ಶಿಕ್ಷಾ ಪದ್ಧತಿಯೇ? ಎಂಬುದು.

ಇಸ್ಲಾಮಿ ಶಿಕ್ಷಾ ಪದ್ಧತಿ ಜಾರಿಗೊಳಿಸಬೇಕಾದರೆ ಇಸ್ಲಾಮಿ ಆಡಳಿತ ವ್ಯವಸ್ಥೆ ಅತ್ಯಗತ್ಯ. ಇಸ್ಲಾಮ್ ಬಯಸುವ ರೀತಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಯೂ ಜಾರಿಯಲ್ಲಿರಬೇಕು. ಅದರ ತತ್ವಗಳು ಮತ್ತು ಕಾನೂನುಗಳು ಅದರ ವ್ಯವಸ್ಥೆಯ ಅವಿಭಾಜ್ಯ ಅಂಗಗಳಾಗಿವೆ. ಆ ಪೈಕಿ ಕೆಲವು ತತ್ವಗಳನ್ನೂ ಕಾನೂನುಗಳನ್ನೂ ಬಿಟ್ಟು ಇನ್ನು ಕೆಲವನ್ನು ಮಾತ್ರ ಜಾರಿಗೊಳಿಸುವುದು ಸಾಧ್ಯವಿಲ್ಲ. ವ್ಯಭಿಚಾರ ಮತ್ತು ವ್ಯಭಿಚಾರದ ಮಿಥ್ಯ ಅಪವಾದ ಹೊರಿಸುವ ವಿಷಯವನ್ನೇ ತೆಗೆದುಕೊಳ್ಳೋಣ. ಈ ಅಪರಾಧಗಳಿಗೆ ನೀಡಬೇಕಾದ ಶಿಕ್ಷೆಯು ವಿವಾಹ, ವಿವಾಹ ವಿಚ್ಚೇದನ, ಪರ್ದಾ ಹಾಗೂ ಲೈಂಗಿಕ ಶಿಷ್ಟಾಚಾರಗಳ ಕುರಿತು ಇಸ್ಲಾಮಿನ ಶಿಕ್ಷಣಗಳೊಂದಿಗೆ ಅತ್ಯಂತ ಗಾಢ ಮತ್ತು ಅಭೇದ್ಯ ಸಂಬಂಧ ಹೊಂದಿದೆ. ಯಾವ ಸಮಾಜದಲ್ಲಿ ಮಹಿಳೆಯರು ಪೂರ್ಣ ಶೄಂಗಾರಗಳೊಂದಿಗೆ ಪರ್ದಾರಹಿತರಾಗಿ ಪೇಟೆಗಳಲ್ಲಿ ವಿಹರಿಸುವುದಿಲ್ಲವೋ ಯಾವ ಸಮಾಜದಲ್ಲಿ ನಗ್ನ ಮತ್ತು ಅರೆ ನಗ್ನ ಭಿತ್ತಿಪತ್ರಗಳು ಗೋಡೆಗಳಲ್ಲಿ ರಾರಾಜಿಸುವುದಿಲ್ಲವೋ ಯಾವ ಸಮಾಜದಲ್ಲಿ ವಿಷಯಾಸಕ್ತಿಯನ್ನು ಕೆರಳಿಸುತ್ತಿರುವಂತಹ ಪತ್ರಿಕೆಗಳು, ಸಾಹಿತ್ಯಗಳು, ಸಿನಿಮಾಗಳು, ರೇಡಿಯೋ ಮತ್ತು ಟಿ.ವಿ ಕಾರ್ಯಕ್ರಮಗಳು ವ್ಯಾಪಕವಾಗಿಲ್ಲವೋ ಯಾವ ಸಮಾಜದಲ್ಲಿ ವಿವಾಹಾವು ಅತ್ಯಂತ ಸರಳವೂ ಸುಲಭವೂ ಆಗಿದೆಯೋ ಅಂತಹ ಸಮಾಜದಲ್ಲಿ ಮಾತ್ರ ಇಸ್ಲಾಮಿನ ಈ ಶಿಕ್ಷಾ ಪದ್ಧತಿಯನ್ನು ಜಾರಿಗೊಳಿಸಬಹುದಾಗಿದೆ. ಅದು ಆ ಸಮಾಜದ ಸಹಜ ಬೇಡಿಕೆಯು ಆಗಿದೆ. ಇಸ್ಲಾಮ್ ಸ್ಥಾಪಿಸಿದ ಈ ಸಂತುಲಿತ ಸಾಮಾಜಿಕ ವ್ಯವಸ್ಥೆಯನ್ನು ಸಂರಕ್ಷಿಸುವ ಸಲುವಾಗಿ ಇಂತಹ ಕಠಿಣ ಶಿಕ್ಷೆಗಳನ್ನು ಜಾರಿಗೊಳಿಸಲೇಬೇಕು. ಧರ್ಮ ಸಮ್ಮತ ವಿಧಾನಗಳಿಂದ ವ್ಯಕ್ತಿಗೆ ತನ್ನ ವಿಷಯಾಸಕ್ತಿಯನ್ನು ಪೂರ್ತಿಗೊಳಿಸುವ ಸುಲಭ ವ್ಯವಸ್ಥೆಯು ಜಾರಿಯಲ್ಲಿರುವಾಗ, ಲೈಂಗಿಕ ವಿಚಾರಗಳನ್ನು ಕೆರಳಿಸುವ ಅಸಾಮಾನ್ಯ ವಾತಾವರಣವು ಇಲ್ಲದಿರುವಾಗ ಹಾಗೂ ವ್ಯಭಿಚಾರವೆಸಗುವುದು ಅತ್ಯಂತ ಕಷ್ಟ ಸಾಧ್ಯವಾಗುವಂತಹ ವಾತಾವರಣವು ನಿರ್ಮಿಸಲ್ಪಟ್ಟಾಗ ಲೈಂಗಿಕ ಅಪರಾಧಗಳಿಗೆ ಉಗ್ರ ಶಿಕ್ಷೆಯನ್ನು ವಿಧಿಸುವುದು ಖಂಡಿತ ನ್ಯಾಯ-ನೀತಿಯ ಅನಿವಾರ್ಯ ಬೇಡಿಕೆಯಾಗಿದೆ. ಅಂತಹ ವಾತಾವರಣದಲ್ಲಿ ಅತ್ಯಂತ ನೀಚ ಮನೋವೃತ್ತಿಯ ಜನರು ಮಾತ್ರ ಈ ಅಪರಾಧಗಳನ್ನು ಎಸಗಬಲ್ಲರು. ಅಂತಹವರಿಗೆ ಅತ್ಯುಗ್ರ ಶಿಕ್ಷೆಯನ್ನು ವಿಧಿಸಿ ಸಮಾಜವನ್ನು ಅವರ ಕೇಡಿನಿಂದ ರಕ್ಷಿಸುವುದು ಅನಿವಾರ್ಯವಾಗಿದೆ.

ಮುಂದುವರಿದಿದೆ........  ಮಹಾ ಮಂಥನ-8 (ವಿಗ್ರಹಾರಾಧನೆ, ದುಷ್ಟಶಕ್ತಿ ವಿಚಾರ-ವಿಮರ್ಶೆ)ಹಿಂದಿನ ಕಂತುಗಳು:
ಮೊದಲ ಕಂತು  ==> ಮಹಾ ಮಂಥನ-1 (bhgte ರವರ ರಂಗ ಪ್ರವೇಶ)
ಎರಡನೇ ಕಂತು  ==> ಮಹಾ ಮಂಥನ-2 (crusade ಮತ್ತು Manju ತರ್ಕಗಳು)
ಮೂರನೇ ಕಂತು ==> ಮಹಾ ಮಂಥನ-3 (ಭಾರತದ ಮೇಲೆ ಮಹಮದೀಯರ ವಿಜಯ, ಬುರ್ಖಾ, ಜೆಸಿಯಾ; crusade ವಿಚಾರಗಳು)
ನಾಲ್ಕನೇ ಕಂತು  ==> ಮಹಾ ಮಂಥನ-4 (bhgte ರವರಿಂದ ಮತ್ತಷ್ಟು ಕಟುಸತ್ಯಗಳ ಅನಾವರಣ)

ಐದನೇ ಕಂತು ==> ಮಹಾ ಮಂಥನ-5 (ಔರಂಗಜೇಬ್, ಝಕಾತ್ - crusade ಸ್ಪಷ್ಟೀಕರಣಗಳು)
ಆರನೇ ಕಂತು ==>ಮಹಾ ಮಂಥನ-6 (crusade ರ ನಿಷ್ಪಕ್ಷಪಾತತೆ ಮತ್ತು ಸೌಹಾರ್ದ ನೀತಿ) 

No comments:

Post a Comment